ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
2009 ನೆ ಇಸವಿಯ ಅಗೋಸ್ತು ತಿಂಗಳು…
ಎನಗೆ ಮತ್ತೆ ಎನ್ನ ಹೆಂಡತಿ ವೀಣಂಗೆ ‘ಎನ್ನ ಅಬ್ಬೆ ಅಪ್ಪನ ಒಂದರಿ ಕಾಶಿಗೆ ಕರಕ್ಕೊಂಡು ಹೋದರೆ ಎಂತ’ ಹೇಳುವ ಆಲೋಚನೆ ಬಂತು.
ಎನ್ನ ಅಪ್ಪಂಗೆ ಅಂಬಗ 80 ವರ್ಷ ಮತ್ತೆ ಅಬ್ಬಗೆ 75 ವರ್ಷ. `ಬತ್ತೀರಾ?’ ಹೇಳಿ ಕೇಳಿಯಪ್ಪಗ ತುಂಬಾ ಖುಷಿಲಿ ಒಪ್ಪಗೊಂಡವು.
ಹೇಳುಲೆ ಬಿಟ್ಟು ಹೋತು, ಎನ್ನ ಅಪ್ಪ ಸುಮಾರು 50 ವರ್ಷ ಮೊದಲು – ಹಬ್ಬದ ಪಾಡ್ಯದ ದಿನ (ಎನ್ನ ಅಬ್ಬೆ ಯಾವಾಗಲುದೆ ಹೇಳುವದು ಹಾಂಗೆ) – ಮರುವಳಂದ ಕೆದೂರಿಂಗೆ ಬಂದು ಅಲ್ಲಿಯಾಣ ದೇವಸ್ಥಾನಲ್ಲಿ ಅರ್ಚಕರಾಗಿ ಕೆಲಸ ಮಾಡಿಗೊಂಡು ಇತ್ತಿದ್ದವು.
ಅಬ್ಬೆ ಪೈವಳಿಕೆಯ ಅಂಬಿಕಾನದ್ದು. ಬಹಳ ಬಂಙಲ್ಲಿ ಎಂಗೊ 6 ಜೆನ ಮಕ್ಕಳ ದೊಡ್ಡ ಮಾಡಿದ್ದವು.
ಆನು ಈಗ ಕೊಡೆಯಾಲಲ್ಲಿ ಎಲೋಶಿಯಸ್ ಕೋಲೇಜಿಲಿ ಭೌತಶಾಸ್ತ್ರ ವಿಭಾಗಲ್ಲಿ ಎಸೋಸಿಯೇಟ್ ಪ್ರೊಫೆಸರ್, ಎನ್ನ ಹೆಂಡತಿ ವಿನ್ಯಾಸ ಪ್ರಕಾಶನ ಸಂಸ್ಥೆಯ ಮಾಲಕೆ.
ಎಂಗೊ ಈ ಹಂತಕ್ಕೆ ಬಪ್ಪಲೆ ಅಬ್ಬೆ, ಅಪ್ಪನ ಆಶೀರ್ವಾದವೇ ಕಾರಣ.
ಹಾಂಗೆ, ಅವರ ಕಾಶಿಗೆ ಕರಕ್ಕೊಂಡು ಹೋಪದು ಎಂಗೊಗೆ ಒಂದು ಪುಣ್ಯ ಹೇಳಿ ಜಾನ್ಸಿದೆಯ.
ಹಾಂಗೆ ಹೋಪದು ಹೇಳಿ ತೀರ್ಮಾನ ಮಾಡಿದ ಮೇಲೆ ಅಬ್ಬೆ, ಅಪ್ಪ, ಎಂಗೊ ಇಬ್ರು, ಎಂಗಳ ಇಬ್ರು ಮಕ್ಕೊ ಸೇರಿ ಹೋಪದು ಹೇಳಿ ತೀರ್ಮಾನ ಮಾಡಿ ಟಿಕೇಟು ಬುಕ್ ಮಾಡಿದ ಮೇಲೆ ಮತ್ತೊಂದು ಆಲೋಚನೆ ಬಂತು.
ನಾವಲ್ಲದ್ದೆ, ಬೇರೆ ಆರಾದರುದೆ ಹೋಪವು ಇದ್ದರೆ ಅವರನ್ನೂ ಒಟ್ಟಿಂಗೆ ಕರಕ್ಕೊಂಡು ಹೋದರೆ ಎಂತಾ ಹೇಳಿ.
ನಮ್ಮ ಗುರುಗೊ ನಮ್ಮವರ ಎಲ್ಲರನ್ನುದೆ ಒಟ್ಟು ಮಾಡುವ ಸುಮಾರು ಕಾರ್ಯಕ್ರಮ ಮಾಡಿದ ಕಾರಣ ಕೆಲವೊಂದು ಜೆನಂಗಳ ಹತ್ತರೆ ಹೇಳಿದೆಯ.
ಹೇಳಿದ ಹಾಂಗೆ ಆನು ಬತ್ತೆ, ಆನು ಬತ್ತೆ ಹೇಳಿ ಕೆಲಾವು ಜೆನ ಹೇಳಿದವು.
ಎಲ್ಲರ ಸೇರಿಸಿ ನೋಡಿದರೆ ೩೫ ಜನ ಆದವು. ಅದರಲ್ಲಿ ನಿಟ್ಟೆ ಡೆಂಟಲ್ ಕಾಲೇಜಿನ ಪ್ರಿನ್ಸಿಪಾಲ್ ಬಳ್ಳಮಜಲು ಡಾ. ರಾಜೇಂದ್ರ ಪ್ರಸಾದ್ ಅವರ ಕುಟುಂಬ , ಅಂಬಗಾಣ ಮಂಗಳೂರು ಸೀಮಾ ಗುರಿಕ್ಕಾರ ಕೆ. ಪಿ. ಭಟ್ಟ ಕುಟುಂಬ, ಪಳ್ಳ ಪದ್ಮನಾಭ ಭಟ್ರ ಕುಟುಂಬ, ಮರಕ್ಕಿಣಿಯ ಡಾ. ರವಿ ಅವರ ಕುಟುಂಬ, ಸುಬ್ರಹ್ಮಣ್ಯ ಶಾಸ್ತ್ರಿಗಳ ಕುಟುಂಬ, ಬೈಲುಕುರಿಯ ಗೋಪಾಲಣ್ಣ ಮೊದಲಾದವು ಇತ್ತಿದ್ದವು.
ತುಂಬಾ ಜೆನ ಇಪ್ಪ ಕಾರಣ ವ್ಯವಸ್ಥೆಗೊ ಚೂರು ಬೇರೆ ಆಯೆಕ್ಕಾವುತ್ತು ಹೇಳಿ ನಿರ್ಮಲ ಟ್ರಾವೆಲ್ಸ್ ಅವರ ಹತ್ತರೆ ಮಾತಾನಾಡಿದೆಯ.
ಹೇಂಗಾದರುದೆ ಕಾಶಿಗೆ ವರೆಗೆ ಹೋಪ ಕಾರಣ ಅಲ್ಲಿಂದ ಗಯಾಕ್ಕೆ ಹೋಗಿ ಬಪ್ಪದು ಒಳ್ಳೆಯದು ಹೇಳಿ ಅಭಿಪ್ರಾಯ ಬಂತು.
ಬೈಲುಕುರಿಯ ಗೋಪಾಲಣ್ಣ, ತಾನು ಹೇಂಗಾದರುದೆ ಗಯಾಕ್ಕೆ ಹೋಗಿಯೇ ಬಪ್ಪದು ಹೇಳಿ ಹೇಳಿದ.
ಕಾಶಿಗೆ ಹೋವುತ್ತು ಹೇಳಿ ಯೋಚನೆ ಮಾಡಿದರೆ, ಪಿತೃಗೊ ಗಯಾಲ್ಲಿ ಬಂದು ಕಾದು ಕೂರುತ್ತವು ಹೇಳುವ ನಂಬಿಕೆ. ಹಾಂಗಾಗಿ ಗಯಾಕ್ಕುದೆ ಹೋಗಿಯೇ ಬಪ್ಪದು ಹೇಳಿ ತೀರ್ಮಾನ ಆತು.
ಹೇಂಗಾದರುದೆ ಹೋಪ ದಾರಿಲಿ ಪ್ರಯಾಗ ಸಿಕ್ಕುತ್ತ್ತು. ಅಲ್ಲಿ ತ್ರಿವೇಣಿ ಸಂಗಮ ಇದ್ದು. ಅಲ್ಲಿ ಮಿಂದಿಕ್ಕಿ ಹೋದರೆ ಒಳ್ಳೆದಲ್ಲದೋ ಹೇಳಿ ಕಂಡತ್ತು. ಹಾಂಗೆ ಪ್ರಯಾಗ, ಕಾಶಿ, ಗಯಾ ಟೂರ್ ಹೇಳಿ ಆತು.
ಖರ್ಚು ಕಡಮ್ಮೆ ಅಪ್ಪಲೆ ಬೇಕಾಗಿ, ಅಲಹಬಾದ್ ವರೆಗೆ ರೈಲಿಲಿ ಪ್ರಯಾಣ, ಅಲ್ಲಿ ರೈಲು ಇಳಿದ ಕೂಡಲೇ ನಿರ್ಮಲದವರ ಬಸ್ಸು, ಅವು ಇಲ್ಲಿಂದಲೇ ಅಡುಗೆಯವರ ಕರಕ್ಕೊಂಡು ಬಂದು ಇಲ್ಲಿಯಾಣ ಕ್ರಮದ ಊಟ ತಿಂಡಿಯ ವ್ಯವಸ್ಥೆ ಮಾಡಿತ್ತವು.
ಹಾಂಗೆ ಅಲಹಾಬಾದಿಂದ ಪ್ರಯಾಗ, ಕಾಶಿ, ಗಯಾಕ್ಕೆ ಹೋಗಿ ವಾಪಾಸು ವಾರಣಾಸಿ ರೈಲಿಂಗೆ ಬಿಡುವಲ್ಲಿ ವರೆಗೆ ಪ್ರಯಾಣ, ವಸತಿ ಮತ್ತೆ ಊಟ, ತಿಂಡಿಯ ವ್ಯವಸ್ಥೆ ನಿರ್ಮಲದವರದ್ದು ಹೇಳಿ ತೀರ್ಮಾನ ಮಾಡಿ ಅದಕ್ಕೆ ಸರಿಯಾಗಿ ರೈಲಿಂಗೆ ಬುಕ್ಕು ಮಾಡಿದೆಯ.
ಬುಕ್ಕು ಮಾಡಿದ ಮೇಲುದೇ ಮತ್ತೆ ಕೆಲವೊಂದು ಜೆನಂಗೊಕ್ಕೆ ಗೊಂತಾಗಿ ಅವುದೆ ಸೇರಿಗೊಂಡವು.
6 ಜೆನಗಳಿಂದ ಪ್ರಾರಂಭವಾದ ತಂಡ ಕೊನೆಗೆ ೩೫ ಜೆನರ ತಂಡ ಆತು.
ಡಿಸೆಂಬರ್ ೨೫ರಂದು ಉದಿಯಪ್ಪಗ ನಂತೂರಿಲಿ ಇಪ್ಪ ಶ್ರೀಧರ ಸನ್ನಿದಿಲಿ ಪ್ರಾರ್ಥನೆ ಮಾಡಿ ಮಂಗಳೂರು ಹವ್ಯಕರ ಕಾಶೀ ಯಾತ್ರೆ ಹೊರಟತ್ತು.
ಆ ಯಾತ್ರೆ ಎಷ್ತು ಕೊಶಿ ಆಗಿತ್ತು ಹೇಳಿ ಗೊಂತಾಯೆಕ್ಕಾರೆ ಎನ್ನ ಅಬ್ಬೆಯ ಹತ್ತರೆ ಮಾತನಾಡೆಕ್ಕು.
ಚೂರು ಪುರುಸೊತ್ತು ಮಾಡಿಗೊಂಡು ಕೆದೂರಿಂಗೆ ಬಂದರೆ ಸಂಪೂರ್ಣ ವಿವರಣೆ ಅಬ್ಬೆಯ ಬಾಯಿಂದಲೇ ಕೇಳುಲೆ ಅಕ್ಕು.
ಆನು ಹೇಳೆಕ್ಕಾದರೆ ಚೂರು ಸಮಯ ಬೇಕು.
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಮರುವಳ ನಾರಾಯಣ ಭಟ್ಟ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಬಹು ಸಂತೋಷ ಮಾವ. ಒಳ್ಳೇ ಶುದ್ದಿ. ಒಳ್ಳೇ ಕಾರ್ಯ. ಶ್ರೀ ಗುರುದೇವತಾ ಅನುಗ್ರಹ ಸದಾ ಇರಲಿ. ನಿಂಗಳ ಸರಳ ಮತ್ತು ನೇರ ಮಾತು ಬಹು ಒಪ್ಪ.
[ಉತ್ತರುಸಿ]
Tumba santoshada suddi mava.. Ide tara ee varshade madugi oppannana bayalili suddi tilishire ondu rail poora namage bekappadalli samshaya ille…
[ಉತ್ತರುಸಿ]
ಕಾಶಿಗೆ ಹೋದ ಮೇಲೆ ಎಂಗೊ ಅದಕ್ಕಿಂತ ದೊಡ್ಡ ಗ್ರೂಪ್ ರಾಮೇಶ್ವರ, ನವಗ್ರಹ ದೇವಸ್ಥಾನ, ಶ್ರೀರಂಗ, ಪಳನಿ, ಚಿದಂಬರ ಮೊದಲಾದ ಅನೇಕ ದೇವಸ್ಥಾನಂಗೊಕ್ಕೆ ಹೋಯಿದೆಯ. ಬಪ್ಪ ವಷ೯ ಕೇದಾರನಾಥ, ಬದರೀನಾಥ, ಗಂಗೋತ್ರಿ ಮತ್ತೆ ಯಮುನೋತ್ರಿಗೆ ಎಂಗಳ/ನಮ್ಮ ಯಾತ್ರೆ. ನಿಂಗಳುದೆ ಬನ್ನಿ
[ಉತ್ತರುಸಿ]
ಹೊತ್ತುವೇಳೆ: 25 August,2011ರ 3:06 PM ಗೆ. (ಒಪ್ಪಸಂಕೊಲೆ)
Yava timili mava, 2-3 tingalu modale tilishire planu maadl;e olledavtu…
[ಉತ್ತರುಸಿ]
ಹೊತ್ತುವೇಳೆ: 26 August,2011ರ 10:27 PM ಗೆ. (ಒಪ್ಪಸಂಕೊಲೆ)
ಕೇದಾರ ಬದರಿ ಪ್ರವಾಸ ಯಾವಾಗ ಮಡುಗುತ್ತಿ ಹೇಳಿ ಮೊದಲೇ ಎ೦ಗೊಗೆ ತಿಳಿಸುವಿರಾ?
[ಉತ್ತರುಸಿ]
ಹೊತ್ತುವೇಳೆ: 27 August,2011ರ 1:22 PM ಗೆ. (ಒಪ್ಪಸಂಕೊಲೆ)
ಕೇದಾರನಾಥದ ಬಾಗಿಲು ತೆಗವದು ಅಕ್ಷಯ ತದಿಗೆಯ ದಿನ. ಶಂಕರಾಚಾಯ೯ರು ಸಮಾಧಿಯಾದ ಜಾಗ ಆದ ಕಾರಣ ನಮಗೆಲ್ಲ ಪರಮ ಪವಿತ್ರ ಅದು. ಅಕ್ಷಯ ತದಿಗೆ ದಿನ ಬಾಗಿಲು ತೆಗದರೆ ಮತ್ತೆ ಆರು ತಿಂಗಳು ಮಾತ್ರ ಪ್ಫ್ರವಾಸಿಗರಿಂಗೆ ಅವಕಾಶ ಹೇಳಿ ಎನ್ನ ತಿಳುವಳಿಕೆ. ಸುಮಾರು ೧೪ ಕಿಲೋಮೀಟರ್ ನಡಕ್ಕೊಂಡು ಹೋಯೆಕ್ಕು ಅಥವಾ ಹೊತ್ತುಗೊಂಡು ಹೋಪಲೆ ವ್ಯವಸ್ಥೆ ಇದ್ದಡ. ಕೇದಾರನಾಥಲ್ಲಿ ಚಳಿ ಜಾಸ್ತಿ ಇರುತ್ತಡ.
ಎಂಗೊ ಹೋಪದು 2012 ಇಸವಿ ಮೇ10 ನಂತರ ನಂತರ. ಮಂಗಳೂರಿಂದ ಹರಿದ್ವಾರಕ್ಕೆ ನೇರ ರೈಲು. ಅಲ್ಲಿಂದ ಮುಂದೆ ೨೦ ಜನರ ಮಿನಿ ಬಸ್ಸಿಲಿ ಪ್ರಯಾಣ. ಈ ಪ್ರಯಾಣದ ವ್ಯವಸ್ಥೆ, ಊಟ ತಿಂಡಿ, ವಸತಿಯ ವ್ಯವಸ್ಥೆ ನಿರ್ಮಲಾ ಅಥವಾ ವಿಕ್ರಂ ಟ್ರಾವೆಲ್ಸ್
[ಉತ್ತರುಸಿ]
ನಾರಾಯಣಣ್ಣಾ,
ನಿಂಗೊ ಕಥೆ ಹೇಳುಲೆ ಹೆರಟದೇ ಬೈಲಿನೋರ ಭಾಗ್ಯ, ಆದರೆ ಅರ್ಧಕ್ಕೆ ನಿಲ್ಲುಸದ್ದೇ ಚೂರು ಸಮಯ ಒಟ್ತು ಸೇರುಸಿ ಸಂಕ್ಷಿಪ್ತವಾಗಿ ಆದರೂ ಕಾಶೀ ಯಾತ್ರೆಯ ಪೂರಾ ಹೇಳಿ.
ಆನುದೇ ಎನ್ನ ಅಮ್ಮನುದೇ 2003 ಎಪ್ರಿಲಿಲ್ಲಿ ಮುಂಬೈ ದಾರಿಯಾಗಿ ಪ್ರಯಾಗ, ಕಾಶಿ ಡೆಲ್ಲಿಗೆ ಹೋಗಿ ಬಯಿಂದಿಯೊಂ. ಪ್ರಯಾಣ ಮಾಡಿದ್ದು ರೈಲಿಲ್ಲೇ. ಖರ್ಚಿಗೆ ತಕ್ಕ ಹಿಂದಿಯುದೇ, ಲಗ್ಗೇಜು ಹೊರುವ ಸಾಮರ್ಥ್ಯವುದೇ ಇದ್ದರೆ ಭಾರತದ ಉದ್ದ ಅಗಲಕ್ಕೆ ಹೋಪಲೆ ಸಮಸ್ಯೆ ಇಲ್ಲೆ. ನಿಂಗಳ ಕೇದಾರ, ಬದರೀನಾಥ ತೀರ್ಥ ಯಾತ್ರಗೆ ಹೃತ್ಪೂರ್ವಕ ಶುಭಾಶಯಂಗೊ.
[ಉತ್ತರುಸಿ]
ಅಕ್ಕು ಮುರಳಿಯಣ್ಣ. ಎನ್ನ ಅಬ್ಬೆ ಹೇಳಿದಷ್ಟು ಚೆಂದಕ್ಕೆ ಹೇಳುಲೆ ಅರಡಿಯ. ಆದರುದೆ ಹೇಳುತ್ತೆ.
[ಉತ್ತರುಸಿ]
ಅಣ್ಣಾ,
ಪುಣ್ಯ ಕ್ಷೇತ್ರ೦ಗೊಕ್ಕೆ ಮಾಡಿದ ಪ್ರಯಾಣದ ಶುದ್ದಿ ಓದಿ ಸ೦ತೋಷ ಆತು.ಎನ್ನ ಬಾಲ್ಯಸ್ನೇಹಿತ ಮರಕ್ಕಿಣಿ ರವಿಯೂ ಇತ್ತಿದ್ದನೋ ಹಾ೦ಗಾರೆ?
[ಉತ್ತರುಸಿ]
ಹೊತ್ತುವೇಳೆ: 25 August,2011ರ 12:33 PM ಗೆ. (ಒಪ್ಪಸಂಕೊಲೆ)
ಮರಕ್ಕ್ಫಿಣಿ ರವಿ ಎಂಗಳ ಒಟ್ಟಿಂಗೆ ರಾಮೇಶ್ವರದ , ನವಗ್ರಹ ದೇವಸ್ಥಾನದ ಟೂರಿಂಗುದೆ ಬಯಿಂದವು. ಕೇದಾರನಾಥಕ್ಕುದೆ ಬತ್ತೆಯ ಹೇಳಿದ್ದವು. ಅವು ಮಾತ್ರ ಅಲ್ಲ ಅವರ ಅಮ್ಮ, ಅಪ್ಪ, ಹೆಂಡತಿ, ಮಕ್ಕೊ, ಅತ್ತೆಗಳು, ಅಕ್ಕ ಎಲ್ಲರುದೆ ಬಂದಿತ್ತವು. ಹೇಳಿದ ಹಾಂಗೆ ನಿಂಗೊಗೆ ಎಲ್ಲಿ ಆತು?
[ಉತ್ತರುಸಿ]
ಹೊತ್ತುವೇಳೆ: 25 August,2011ರ 1:37 PM ಗೆ. (ಒಪ್ಪಸಂಕೊಲೆ)
ಎ೦ಗೊ ರವಿಯ ನೆರೆಕರೆ,ಕೊ೦ಚಾಡಿಲಿ.ಆನು ಮಾ೦ತ್ರ ಬೆ೦ಗಳೂರಿಲಿ ವಾಸ.
[ಉತ್ತರುಸಿ]
ಕಾಶೀ ಯಾತ್ರೆಯ ಪೂರ್ವ ತಯಾರಿ ಬಗ್ಗೆ ವಿವರಣೆ ಲಾಯಕಾಯಿದು. ಕಾಶೀಯಾತ್ರೆ ಸುರು ಅಪ್ಪಲಪ್ಪಗ ಪಕ್ಕನೆ ಬಸ್ಸು ನಿಂದ ಹಾಂಗೆ ಆತದ. ನಾರಾಯಣಣ್ಣ, ಬರಳಿ ಬೈಲಿಂಗೆ ನಿಂಗಳ ಪ್ರಯಾಣದ ಅನುಭವದ ಕಥನವುದೆ. ಲಾಯಕು ಬರೆತ್ತಿ ನಿಂಗೊ.
[ಉತ್ತರುಸಿ]
nange nanna atthe mava jothege ebbarnu ella above sixty. kashi hagu uttara bharath yatrege kalsavu antha eddu.dayavittu swalpa guide madi.
[ಉತ್ತರುಸಿ]