Oppanna.com

ಕಟೀಲು ಕ್ಷೇತ್ರ ದರ್ಶನ – ರುದ್ರ ಪಠಣ

ಬರದೋರು :   ಮಂಗ್ಳೂರ ಮಾಣಿ    on   06/02/2012    24 ಒಪ್ಪಂಗೊ

ಮಂಗ್ಳೂರ ಮಾಣಿ
ಬೈಲಿನ ಎಲ್ಲೋರಿಂಗೂ ನಮಸ್ಕಾರ. 🙂
ಪಂಜ ಜಾತ್ರೆ ಆಗಿಯೊಂಡಿದ್ದಿದಾ, ಬ್ರಹ್ಮ ಕಲಶೋತ್ಸವ ಎಲ್ಲ ಆಗಿ ದರ್ಶನ ಬಲಿ ನೆಡಕ್ಕೊಂಡಿತ್ತು.
ಸಾಲಿಲಿ ನಿಂದರೆ ಸಾಕು, ಬಟ್ಳು ಕಾಣಿಕೆ ಹಾಕಿಯಪ್ಪಗ ಪ್ರದಕ್ಷಿಣೆಯೂ ಅಕ್ಕು.  – ಅಷ್ಟು ಜೆನ. 🙂
ಅದರ ಎಡೆಲಿ ಡಾಕ್ಟ್ರ ಫೋನು “ನಾಳೆ ಕಟೀಲಿಂಗೆ ಹೋಗಿ ರುದ್ರ ಹೇಳುದು ಹೇಳಿ ತೀರ್ಮಾನ ಮಾಡಿದ್ದು, ಬತ್ತೆಯೋ?” ಹೇಳಿ.
ರುದ್ರ ಹೇಳುದೂ ಹೇಳಿರೇ ಹೇಂಗಾರು ಮಾಡಿ ಸಮಯ ಹೊಂದುಸುವ ಮಾಣಿ, ಕ್ಷೇತ್ರಲ್ಲಿ, ಅದೂ ಕಟೀಲಿಲ್ಲಿ ಹೇಳಿರೆ ಬಿಡುಗೋ?
“ಅಕ್ಕಕ್ಕು ಬತ್ತೆ ಬತ್ತೆ” ಹೇಳಿ ಹೇಳಿದೆ.
“ಅಂಬಗ ನಾಳೆ ಉದಿಯಪ್ಪಗ ೪.೧೫ ಕ್ಕೆ ಸಿಕ್ಕು ಒಟ್ಟಿಂಗೇ ಹೋಪೋ°” ಹೇಳಿದವು.
~~

ಕಟೀಲು ಶ್ರೀ ದುರ್ಗಾ ಪರಮೇಶ್ವರಿ


ಕಟೀಲು ಹೇಳಿರೆ ನವಗೆಲ್ಲ ಗೊಂತಿಪ್ಪದೇ ಅಲ್ಲದಾ?

ತೂಷ್ಣಿಲಿ ಹೇಳ್ತರೆ,
ದಕ್ಷಿಣ ಕನ್ನಡ ಜಿಲ್ಲೆಯ ಪುಣ್ಯಸ್ಥಳಂಗಳಲ್ಲಿ ಒಂದು.  ನಮ್ಮ ಜಿಲ್ಲೆಯ ಅನೇಕ ದೇವಸ್ಥಾನಗಳ ಹಾಂಗೇ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಂಗಳ ಮಾಡ್ತಾ ಸಮಾಜೋನ್ನತಿಗೆ ಕಾಣಿಕೆ ಸಲ್ಲಿಸುತ್ತಾ ಇದ್ದು.
ಈ ದೇವಸ್ಥಾನ ಇಪ್ಪದು ನಂದಿನಿ ಹೇಳುವ ಒಂದು ಸಣ್ಣ ನದಿಯ ಮಧ್ಯದಲ್ಲಿಪ್ಪ ಒಂದು ಸಣ್ಣ ದ್ವೀಪಲ್ಲಿ. ಪ್ರತಿ ದಿನ ನೂರಾರು ಜೆನಂಗೊ ಇಲ್ಲಿಗೆ ಅಬ್ಬೆ ದುರ್ಗಾ ಪರಮೇಶ್ವರಿಯ ದರ್ಶನಕ್ಕೆ ಹೇಳಿ ಭೇಟಿ ನೀಡುತ್ತವು.

ಅಂಬಗ ಹೋಗದ್ದಿಪ್ಪಲೆಡಿಯ
ಕೊಲಂಬಸ್ಸಿಲ್ಲಿ ಕೂದಾತು, ಸಂತೆ ತಿರುಗಿ ಆತು, ತಂಗೆಕ್ಕಳ ಆಡಿಸಿ ಕೊಣುಶಿ ಆತು, ಬಚ್ಚಂಕಾಯಿ ತಿಂದಾತು, ಇನ್ನೆಂತ ಬಾಕಿ?
ಹೊತ್ತೋಪಗಳೇ ಬಸ್ಸು ಹತ್ತಿತ್ತು ಮಂಗ್ಳೂರಿಂಗೆ.

ಇಂದು ಉದಿಯಪ್ಪಗ ಮೂರು ಗಂಟೆಗೇ ಎದ್ದು ಹೆರಟತ್ತು ಕಟೀಲಿಂಗೆ. ಡಾಕ್ಟ್ರ ಕಾರು ಇತ್ತಿದಾ, ಹೋಪಲೆ ವೆವಸ್ತೆ ಇಪ್ಪಗ ಹೋಗದ್ದೆ ಇಕ್ಕೋ?
ಮಂಗ್ಳೂರಿನೋರು ೪.೪೫ಕ್ಕೆ KPT ಹತ್ರೆ ಸಿಕ್ಕುದು, ಅಲ್ಲಿಂದ ಒಟ್ಟಿಂಗೇ ಅವರವರ ಕಾರುಗಳಲ್ಲಿ ಹೆರಡುದು ಹೇಳಿ ತೀರ್ಮಾನ ಆಗಿತ್ತು. ಸುರತ್ಕಲ್ಲಿಂದ ಬಪ್ಪೋರು ದೇವಸ್ಥಾನಲ್ಲಿ ಸೇರಿಗೊಂಬದು, ೫.೩೦ಕ್ಕೆ ಮಂತ್ರ ಸುರು ಮಾಡುದು ಹೇಳಿ ಲೆಕ್ಕ ಹಾಕಿದ್ದು.
ಹಾಂಗೇ ಒಂದು ೨೫-೩೦ ಜೆನ ಮಂಗ್ಳೂರಿಂದ ಹೆರಟೆಯ°. ಸರೀ ೫.೩೦ಕ್ಕೆ ಸುರತ್ಕಲ್ಲಿಂದ ಶರ್ಮಪ್ಪಚ್ಚಿಯೂ ೮-೧೦ ಜೆನವೂ ಬಂದವು.

ಶ್ರೀ ಗುರುಭ್ಯೋ ನಮಃ ಹರಿಃ ಓಂ ಹೇಳಿ ಸುರು ಮಾಡಿದ್ದೇ,

  • ಗಣಪತಿ ಅಥರ್ವಶೀರ್ಷ
  • ದುರ್ಗಾಸೂಕ್ತ
  • ರುದ್ರ ನಮಕ – ಚಮಕ
  • ಶ್ರೀ ಲಕ್ಷ್ಮೀ ಸೂಕ್ತ
  • ದೇವೀ ಸೂಕ್ತ
  • ದೇವೀ ಕ್ಷಮಾಪಣಾ ಸ್ತೋತ್ರಂಗಳ ಪಾರಾಯಣ ಮಾಡಿದೆಯೋ°

ಮಂತ್ರ ಪಠಣ ಆದಮೇಲೆ ಹತ್ತರಂದ ದೇವರ ದರ್ಶನವೂ ಆತು, ಪ್ರಸಾದವೂ ಸಿಕ್ಕಿತ್ತು 🙂
ದೇವಸ್ಥಾನದ ಅಸ್ರಣ್ಣರು ಕಾಪಿ ಕುಡುದಿಕ್ಕಿಯೇ ಹೋಯೆಕು ಹೇಳಿ ಒತ್ತಾಯ ಮಾಡಿದವು.
ದೇವಸ್ಥಾನಂದ ಹಶು ಹೊಟ್ಟೆಲಿ ಹೋಪಲಿದ್ದೋ? 😉

ಕ್ಷೀರವೂ ಇಡ್ಲಿಯೂ ಇತ್ತು. ಭಯಂಕರ ಖಾರದ ಪಚ್ಚೆಡಿಯುದೇ. 🙂

ಇಡ್ಲಿ ತಿಂಬಲೆ ಶರ್ಮಪ್ಪಚ್ಚಿಯ ಹತ್ತರೆಯೇ ಕೂದ್ದು, ಹಾಂಗೇ ಮಾತು ಸುರುವಾತು.
ಕ್ಷೇತ್ರಲ್ಲಿ ಕೂದೊಂಡು ಬೇರೆಂತ ಮಾತು? ಅದೇ…

~~~

ಈ ಅಧ್ಯಾತ್ಮಿಕ ಕ್ಷೇತ್ರದ ಹಿಂದೆ ಲಾಯಕದ ಒಂದು ಪೌರಾಣಿಕ ಕಥೆ ಇದ್ದಡ. ಹಿಂದೆ ಶುಂಭ ಮತ್ತು ನಿಶುಂಭ ಹೇಳುವ ರಾಕ್ಷಸರ ದುರ್ಗೆ ಸಂಹಾರ ಮಾಡಿದ ಕಾಲಲ್ಲಿ (ಕಥೆಯ ಗೋಪಾಲ ಮಾವ° ಹೇಳಿದ್ದವಿದಾ, ನೆಂಪಿದ್ದೋ?), ಅವರ ಮಂತ್ರಿಗಳಲ್ಲಿ ಒಂದು ಅರುಣಾಸುರ ಹೇಳಿ ಯುದ್ಧಭೂಮಿಂದ ಓಡಿಹೋಗಿ ಜೀವ ಒಳಿಶಿಯೊಂಡಿರ್ತು. ಕಾಲಕ್ರಮೇಣ ಅದು ರಾಕ್ಷಸರ ನಾಯಕ°ಆಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞಂಗೊಕ್ಕೆ ಉಪದ್ರ ಮಾಡ್ಲೆ ಸುರುಮಾಡಿತ್ತಡ. ಇದರಿಂದ ಋಷಿಮುನಿಗಳು ಯಾಗ ನಡೆಸದ್ದ ಹಾಂಗಪ್ಪಗ ಭೂಮಿಗೆ ಮಳೆ ಅಪ್ಪದೇ ಕಮ್ಮಿ ಆತಡ – ಭೀಕರ ಕ್ಷಾಮ ಬಂತಡ. ಎಲ್ಲಿ ನೋಡಿರೂ, ಆಹಾರದ ಅಭಾವ ಆತಡ. ಜೆನರ ಕಷ್ಟ ನೋಡ್ಲೆ ಎಡಿಯದ್ದೆ, ಜಾಬಾಲಿ ಹೇಳುವ ಮಹರ್ಷಿಗೊ, ದೇವತೆಗಳ ತೃಪ್ತಿಗೊಳಿಸಿ ಮಳೆ ಬರುಸುಲೆ ಒಂದು ಯಜ್ನ ಮಾಡೆಕು ಹೇಳಿ ಗ್ರೇಶಿದವಡ.
ಅದಕ್ಕೆ ಅವ್ವು ದೇವಲೋಕಕ್ಕೆ ಹೋಗಿ “ಯಜ್ಞದ ಸಕಾಯಕ್ಕೆ ಕಾಮಧೇನುವ ಎಂಗಳೊಟ್ಟಿಂಗೆ ಕಳುಸುತ್ತಿರೋ?” ಹೇಳಿ ಕೇಳಿದವಡ.
ಅಷ್ಟಪ್ಪಗ ಇಂದ್ರ°, “ಕಾಮಧೇನು ಈಗ ವರುಣ ಲೋಕಕ್ಕೆ ಹೋಯಿದು. ಆದರೆ ಅದರ ಮಗಳು ನಂದಿನಿ ಇಲ್ಲೇ ಇದ್ದು, ನಂದಿನಿ ಒಪ್ಪಿರೆ ಧಾರಾಳ ಅದರ ಕರಕ್ಕೊಂಡು ಹೋಗಿ” ಹೇಳಿದನಡ.
ಹಾಂಗೆ ಮಹರ್ಷಿಗೊ ನಂದಿನಿಯ ಕೇಳಿಯಪ್ಪಗ ಅದು “ಆನು ಬತ್ತಿಲ್ಲೆ” ಹೇಳಿತ್ತಡ, ಅಷ್ಟೇ ಅಲ್ಲ, ಭೂಮಿಯನ್ನೂ ಭೂಮಿಯ ಜೆನರನ್ನೂ ಸುಮಾರು ಬೈದತ್ತಡ.
ಮಹರ್ಷಿಗಳ ಮನಸ್ಸಿಂಗೆ ಬೇಜಾರಾಗಿ, “ನೀನು ನದಿಯಾಗಿ ಭೂಮಿಲಿ ಇರು” ಹೇಳಿ ಶಾಪ ಕೊಟ್ಟವಡ.
ಮತ್ತೆ ನಂದಿನಿ ಕ್ಷಮೆ ಕೇಳಿ ಅಪ್ಪಗ ಶಾಪದ ವಿಮೋಚನೆಗೆ ಆದಿಶಕ್ತಿಯ ಪ್ರಾರ್ಥಿಸುಲೆ ಸೂಚಿಸಿದವು.
ಅದರಂತೆ ನಂದಿನಿ ಪ್ರಾರ್ಥಿಸಿಯಪ್ಪಗ ಆದಿಶಕ್ತಿ ಪ್ರತ್ಯಕ್ಷ ಆಗಿ, “ಋಷಿವಾಕ್ಯವ ಲೊಟ್ಟೆ ಮಾಡ್ಲೆ ಎಡಿಯ, ನೀನು ನದಿಯಾಗದ್ದೆ ಬೇರೆ ದಾರಿ ಇಲ್ಲೆ. ಆದರೆ ಮುಂದೊಂದು ಕಾಲಲ್ಲಿ ಆನೇ ನಿನ್ನ ಮಗಳಾಗಿ ಹುಟ್ಟಿ ನಿನ್ನ ಶಾಪಂದ ವಿಮೋಚನೆ ಮಾಡ್ತೆ” ಹೇಳಿತ್ತಡ.
ಇದರಂದ ಸಮಾಧಾನ ಆದ ನಂದಿನಿ ಮಾಘ ಶುಧ್ಧ ಪೂರ್ಣಿಮೆಯ ದಿನ ಕನಕಗಿರಿಯಿಂದ ನದಿಯಾಗಿ ಹರಿತ್ತಾ ಇದ್ದಡ. ಇದರಿಂದ ಭೂಮಿಯು ಮತ್ತೆ ಹಸುರಿಂದ ಕಂಗೊಳಿಸಿತ್ತಡ.

~~~

ಇತ್ಲಾಗಿ ಅರುಣಾಸುರನೂ ಬ್ರಹ್ಮನ ಕುರಿತು ತಪಸ್ಸು ಮಾಡಿ ವರ ಕೇಳ್ತ°, “ಎನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಪ್ಪಲಾಗ” ಹೇಳಿ.
ಸರಸ್ವತೀ ದೇವಿಯೂ ಬಂದು ಗಾಯತ್ರೀ ಮಂತ್ರವ ಉಪದೇಶಿಸಿ ಅನುಗ್ರಹಿಸಿತ್ತಡ. ಈ ಎಲ್ಲ ಶಕ್ತಿ ಪಡಕ್ಕೊಂಡು, ಎಲ್ಲಾ ರಾಕ್ಷಸರು ಮಾಡುವ ಹಾಂಗೇ, ದೇವಲೋಕಕ್ಕೆ ಆಕ್ರಮಣ ಮಾಡಿ ಅದರ ವಶಪಡಿಸಿಕೊಳ್ಳುತ್ತು.
ನೆಲೆ ಕಳಕ್ಕೊಂಡ ದೇವತೆಗೊ ತ್ರಿಮೂರ್ತಿಗಳ ಒಟ್ಟಿಂಗೆ ಸೇರಿ ಸ್ವರ್ಗವ ಪುನಃ ವಶಪಡಿಸಿಕೊಡೆಕು ಹೇಳಿ ಆದಿಶಕ್ತಿಯತ್ರೆ ಕೇಳ್ತವು.
ಆಗ ದೇವಿ ಹೇಳ್ತು, “ಗಾಯತ್ರೀ ಮಂತ್ರಕ್ಕೆ ತುಂಬ ಶಕ್ತಿ ಇದ್ದು, ಅರುಣಾಸುರ ಗಾಯತ್ರೀ ಮಂತ್ರವ ಉಪಾಸಿಸುವಷ್ಟು ಸಮಯ ಎನಗೂ ಅವನ ಸೋಲುಸುಲೆ ಏಡಿಯ” ಹೇಳಿ. ದೇವಿಯೇ ಉಪಾಯವೂ ಹೇಳಿ ಕೊಡ್ತು.
ಅದರಂತೆ ಅರುಣಾಸುರನಲ್ಲಿಗೆ ಬೃಹಸ್ಪತಿಗೊ ಹೋಗಿ ಆ ರಾಕ್ಷಸ ಗಾಯತ್ರೀ ಮಂತ್ರಂದ ವಿಮುಖ ಅಪ್ಪ ಹಾಂಗೆ ಮಾಡ್ತವು. ಮನಸ್ಸಿಲ್ಲಿ ತುಂಬ ಹಾಂಕಾರ ತುಂಬಿಯೊಂಡು ಆ ರಾಕ್ಷಸ, ಆನು ದೇವರಿಂದಲೂ ದೊಡ್ಡ ಹೇಳಿ ಗ್ರೇಶುಲೆ ಸುರು ಮಾಡ್ತು.
ಋಷಿ ಮುನಿಗಳ ಯಜ್ಞವ ಹಾಳು ಮಾಡಿ, ಎಲ್ಲರೂ ಎನ್ನನ್ನೇ ಆರಾಧಿಸೆಕು ಹೇಳ್ತು. ಅದರ ಅಟ್ಟಹಾಸ ಮಿತಿಮೀರಿ ಅಪ್ಪಗ ದೇವಿ ಮೋಹಿನಿಯ ರೂಪ ಧರಿಸಿ ಅರುಣಾಸುರನ ಉದ್ಯಾನಲ್ಲಿ ಸುತ್ತಾಡುಲೆ ಸುರು ಮಾಡಿತ್ತು.
ಅರುಣಾಸುರನ ಮಂತ್ರಿಗಳಾದ ಚಂಡ ಮುಂಡರು ದೇವಿಯ ನೋಡಿ, ಅರುಣಾಸುರಂಗೆ ಮೋಹಿನಿಯ ಸೌಂದರ್ಯದ ಬಗ್ಗೆ ತಿಳಿಸಿದವು.
ಅರುಣಾಸುರ ಮೋಹಿನಿಯ ಮದುವೆ ಆಯೆಕು ಹೇಳಿ ಆಲೋಚನೆ ಮಾಡಿ ಅಲ್ಲಿಗೆ ಬಪ್ಪಗ, ಶುಂಭ ನಿಶುಂಭರ ಕೊಂದದು ಇದೇ ಹೇಳಿ ಅದಕ್ಕೆ ಗೊಂತಾಗಿ ಧಾಳಿ ಮಾಡುತ್ತು. ಆಗ ದೇವಿ ಅಲ್ಲಿಯೇ ಹತ್ತರಾಣ ಬಂಡೆಲಿ ಅಂತರ್ಧಾನ ಆತಡ.
ಅರುಣಾಸುರ ಕೋಪಂದ ಆ ಬಂಡೆಯ ಖಡ್ಗಂದ ಒಡದಪ್ಪಗ ಅದರಿಂದ ಸಾವಿರಾರು ಸಂಖ್ಯೆಲಿ ಹೆರಟ ದುಂಬಿಗೊ ಅವನ ಕಚ್ಚುಲೆ ಸುರುಮಾಡಿದವು. ದೇವಿ ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವ ತಾಳಿ ಅರುಣಾಸುರನ ಕಚ್ಚಿ ಕೊಂದತ್ತಡ.
ಭ್ರಮರದ ರೂಪವ ತಾಳಿದ ಕಾರಣ ಭ್ರಾಮರಿ ಹೇಳಿ ಪ್ರಖ್ಯಾತಿಯ ಪಡೆದತ್ತು ದೇವಿ. ದೇವತೆಗೊ, ಜಾಬಾಲಿ ಮಹರ್ಷಿಗೊ ದೇವಲೋಕದ ಕಲ್ಪವೃಕ್ಷಂದ ತಂದ ಎಳನೀರಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವ ಮಾಡಿ “ಶಾಂತರೂಪವ ಹೊಂದು” ಹೇಳಿ ಪ್ರಾರ್ಥಿಸಿದವು.
ಅದರಂತೆಯೇ ದೇವಿ ನಂದಿನಿ ನದಿಯ ಮಧ್ಯಲ್ಲಿದ್ದ ಒಂದು ಪುಟ್ಟ ದ್ವೀಪಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಹೇಳುವ ಹೆಸರಿಂದ ಉದ್ಭವಿಸಿತ್ತಡ. ಇದರಿಂದ ನಂದಿನಿಯ ಶಾಪ ವಿಮೋಚನೆಯೂ ಆತಡ.
ನಂದಿನಿಯ ಕಟಿ (ಸೊಂಟ/ನಡು) ಭಾಗಲ್ಲಿಪ್ಪ ಇಳೆ (ಭೂಮಿ) ಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಹೇಳುವ ಹೆಸರು ಬಂತಡ.

~~~

‘ಹೀಂಗೆಲ್ಲ ಕತೆ ಅಂಬಗ’ ಗ್ರೇಶಿದೆ. 😉

೭.೧೫ಕ್ಕೆ ಪ್ರಸಾದ ತಿಂದು ಹೆರಟದು. ೮.೧೫ಕ್ಕೆ ಪುನಃ ಮಂಗ್ಳೂರಿಂಗೆ ವಾಪಸ್. 🙂
ಸೋಮವಾರ ಅಲ್ಲದಾ? ಅಪೀಸು ಇರ್ತಿದಾ, ಹಾಂಗೆ ಮತ್ತೆ ಮನೆಗೆ ಬಂದು ಜೆಪ ಮಾಡಿ ಹೆರಟದು. 🙂

ವಾರದ ಆರಂಭ ಲಾಯಕಕೆ ಆಯಿದು.
ಶ್ರೀ ಗುರುಗಳ ಅನುಗ್ರಹಂದ ರುದ್ರ ಕಲ್ತ ೩೪ಜೆನ ಕಟೀಲಿಂಗೆ ಹೋಗಿ ರುದ್ರ ಹೇಳುವಾಂಗೆ ಆತಿದಾ..
ಈ ಯೋಚನೆಯ ಆರು ಮಾಡಿದ್ದೋ ಗೊಂತಿಲ್ಲೆ, ಆದರೆ ತುಂಬ ತುಂಬ ಖುಶಿ ಕೊಟ್ಟತ್ತು ಇಂದು.

ಈ ದೇವಾಲಯ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬತ್ತು. ದೇವಸ್ಥಾನವು ಸುಮಾರು ಬಗೆಯ ಕಲೆಗೊಕ್ಕೆ ಆಶ್ರಯವನ್ನೂ, ಪ್ರೋತ್ಸಾಹವನ್ನೂ ಕೊಡ್ತಾ ಇದ್ದು. ಅದರಲ್ಲಿ ಮುಖ್ಯವಾದ್ದು ಯಕ್ಷಗಾನ.
ನಿನ್ನೆ ಇರುಳೂ ಇತ್ತು, ಇಂದು ಉದೀಯಪ್ಪಗ ೬.೧೫-೬.೩೦ ಅಪ್ಪಗ ಮುಗುದ್ದು ಯಕ್ಷಗಾನ. ದೂರ ದೂರದ ಜೆನಂಗೊಕ್ಕೆ ಅವರ ಜಾಗೆಲಿ ಮಾಡುಸುಲೆ ಎಡಿಯದ್ದರೆ ‘ಕ್ಷೇತ್ರಲ್ಲಿ’ ಸೇವೆ ಮಾಡುಸುದಡ.
ಐದು ಯಕ್ಷಗಾನ ಮೇಳಂಗೊ ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿ ಕೊಡುತ್ತವು ಹೇಳಿ ಒಂದು ಸುದ್ದಿ ಸಿಕ್ಕಿತ್ತು. ನವರಾತ್ರಿ ಮೊದಲಾದ ವಿಶೇಷ ದಿನಂಗಳಲ್ಲಿ ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಂಗೊ ಇರ್ತು. ಇಂದುದೇ ಎಂತದೋ ತಯಾರಿ ಆಗಿಂಡು ಇತ್ತು. ‘ಚಂಡಿಕಾ ಹೋಮ’ ಹೇಳಿದವು ಡಾಕ್ತ್ರು.  🙂

~~~

ನಿಂಗಳ ಊರಿಲ್ಲೂ ರುದ್ರ ಪಾಠದ ತರಗತಿಗೊ ಆಯಿದಲ್ಲದಾ?
ಎಂತಾರು ಹೀಂಗಿಪ್ಪ ಪ್ರಯೋಗ ಮಾಡಿದ್ದಿರೋ?
ನವಗೂ ತಿಳಿಶುವಿರೋ?

ನಿಂಗಳ,

ಮಂಗ್ಳೂರ ಮಾಣಿ 🙂

24 thoughts on “ಕಟೀಲು ಕ್ಷೇತ್ರ ದರ್ಶನ – ರುದ್ರ ಪಠಣ

  1. ಕ್ಷೇತ್ರದ ಪೌರಾಣಿಕ ಹಿನ್ನೆಲೆಯೊಟ್ಟಿಂಗೆ, ಪಟವನ್ನೂ ಕೊಟ್ಟು ಒಳ್ಳೆ ಲೇಖನ.
    ಹೀಂಗಿಪ್ಪ ಸಂದರ್ಭಂಗೊ ಇನ್ನು ಮುಂದೆಯೂ ಎಲ್ಲರಿಂಗೂ ಸಿಕ್ಕುತ್ತಾ ಇರಳಿ ಹೇಳಿ ಹಾರೈಕೆಗೊ

  2. ಒಳ್ಳೇ ಶುದ್ದಿ.. ಮ೦ಗ್ಳೂರಣ್ಣಾ.. ಒಪ್ಪ೦ಗೊ.
    ಕಟೀಲಿನ ಐತಿಹ್ಯ ಓದಿಯಪ್ಪಗ ಸಣ್ಣಾಗಿಪ್ಪಗ ಕಟೀಲು ಮೇಳದ ‘ಕಟೀಲು ಕ್ಷೇತ್ರ ಮಹಾತ್ಮೆ’ ಆಟವುದೆ, ಅದರಲ್ಲಿ ಬಪ್ಪ ಭ್ರಮರಾ೦ಬಿಕೆ, ರಾಳದ ಹೊಡಿ ಹಾಕಿ ಗೌಜಿ ಮಾಡಿ೦ಡು ಬಪ್ಪ ರಾಕ್ಷಸ೦ಗೊ, ಎಲ್ಲ ಕಣ್ಣಮು೦ದೆ ಪುನಾ ಒ೦ದರಿ ಕ೦ಡ ಹಾ೦ಗಾತು.
    ಧನ್ಯವಾದ೦ಗೊ ಮ೦ಗ್ಳೂರಣ್ಣಾ..

  3. ಅಬ್ಬೆಯ ಸನ್ನಿಧಿಲಿ ಸಲ್ಲುಸಿದ ಸೇವೆಯ ಶುದ್ದಿ ಚೆ೦ದ ಆಯಿದು ಭಾವ.ಸಣ್ಣ ಐವತ್ತು ಜೆನ ಆಯಿದು ಹಾಂಗಾರೆ !!

    1. ಧನ್ಯವಾದ ಮಾವ°..
      ಅಪ್ಪನ್ನೇ…!!
      ಸಣ್ಣೈವತ್ತು ಜೆನ 🙂
      ಇನ್ನಾಣ ಸರ್ತಿ ದೊಡ್ಡ ಐವತ್ತು ಮಾಡೆಕು ಹೇಳಿಯೊಂಡಿತ್ತಿದ್ದವು ಡಾಕ್ಟ್ರು. ಸಂಖ್ಯೆ ಹೆಚ್ಚಿದ್ದು ಏಕ ಸ್ವರಲ್ಲಿ ಮಂತ್ರ ಬಂದರೆ ಕೇಳುಲೆ ಎಷ್ಟು ಚೆಂದ ಅಲ್ಲದಾ?

  4. ವಿವರಣೆ ಲಾಯಿಕಾಯಿದು ,ಮುಂದೆ ಪಂಜಜಾತ್ರೆ ಶುದ್ದಿಯೂ ಬಕ್ಕೋ ಹೇಂಗೆ……
    ಒಪ್ಪಂಗೊ.

  5. ಒಳ್ಳೆ ಶುದ್ದಿ.
    ಹರೇರಾಮ.

  6. ಹರೇ ರಾಮ.

    ಏ ! ಆನುದೇ ಹೋಯಕ್ಕಾಗಿತ್ತು….ಡಾಕ್ಟರ್ ಭಾವ ಮೊನ್ನೆ ಹೇಳಿತ್ತಿದ್ದವು.

    ಎನ್ನಂದೆಡಿಯ….!! ಮರತ್ತೇ ಹೋತದ…

    ಆಗಲಿ…
    ಸವಿವರ ವಾರ್ತೆ ಕೇಳಿ ಕುಶಿ ಆತು

    1. ಧನ್ಯವಾದ ಮಾವ°..
      ನಿಂಗೊ ಇದ್ದಿರೋ ಹೇಳಿ ಕೊರಳುದ್ದ ಮಾಡಿ ಹುಡ್ಕಿದೆ..
      ಕಸ್ತಲೆಲಿ ಕಂಡಿದಿಲ್ಲೆ. ನಿಂಗಳೂ ಇದ್ದಿದ್ದರೆ ಮತ್ತೂ ಖುಶಿ ಆವುತಿತ್ತು.. 🙂
      ಓದಿ ಒಪ್ಪಕೊಟ್ಟದು ಮತ್ತೂ ಕುಶಿ.. 🙂

    1. ಭಾವ,
      ಇದಾ ಇದಕ್ಕೆ ಇನ್ನೊಬ್ಬನ ಮನೆಗೆ ಕಲ್ಲು ಇಡುಕ್ಕುಲಾಗ ಹೇಳಿ… ಎಂತ ಮಾಡಿರೂ ತಿರುಗಿ ಪುನಃ ಬತ್ತು 😉 ಧನ್ಯವಾದ 🙂
      ನಿಂಗೊ ಒಪ್ಪಕೊಟ್ಟದು ಖುಶಿ ಆತು 🙂

      1. ಹೋ..! A1 ಹೇದರೆ ಕಲ್ಲು ಇಡುಕ್ಕುದೋ ಅಂಬಗ….. ಎಡಿಯಪ್ಪ ಈ ಕೋಡು ಭಾಶೆಲಿ..ಹು!

        1. {ಕೋಡು ಭಾಶೆ}
          ಯೇವದಿದು?ಮಹಿಷಾಸುರನ ಭಾಷೆಯೋ?

        2. A1 ಹೇಳಿರೆ ಭಾರೀ ಪಷ್ಟಾಯಿದು ಹೇಳಿ ಲೆಕ್ಕ..
          ಕಲ್ಲಿಡುಕ್ಕುದಲ್ಲ ಆತೋ?
          ಭಾವನ ಲೇಖನಂಗಳೂ A1 ಭಾವನ ಒಪ್ಪಂಗಳೂ A1 😉
          ಕಲ್ಲಿಡುಕ್ಕುದು ಹೇಳಿ ತಮಾಶೆಗೆ ಹೇಳಿದ್ದು..

          1. ಹಾಂಗಾರೆ ತಮಾಶೆಗೆ ಕಲ್ಲಿಡುಕ್ಕುದೋ…. ಆಗಪ್ಪಾ ತಲಗೋ ಮಣ್ಣಬಿದ್ದರೆ ಮಂಡೆ ಸರ್ಬತ್ತಕ್ಕು …;)

          2. ಇಲ್ಲೆಪ್ಪಾ..
            ‘ಭಾವನ’ ತಲೆಗೆ ಕಲ್ಲು ಇಡುಕ್ಕುಲಿದ್ದೋ?
            😉 🙂

            ಮತ್ತೆ ಇದಾ ಸರ್ಬತ್ತಿನ ಶುದ್ದಿ ತೆಗದರೆ ಬೋಸ ಭಾವ ಬಕ್ಕು…

  7. ತುಂಬಾ ಲಾಯ್ಕ ಆಯಿದು.

  8. ಒಳ್ಳೆ ಶುದ್ದಿಯ ಒಳ್ಳೆ ತರಲ್ಲಿ ಬೈಲಿಂಗೆ ಹೇಳಿದ್ದೆ… ಕಟೀಲಿನ ಪೌರಾಣಿಕ ಕಥೆಯನ್ನೂ ಓದಿ ತುಂಬಾ ಖುಷಿ ಆತು…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×