ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಪೆರ್ಲದಣ್ಣಪೆಂಗಣ್ಣ°ಪುಟ್ಟಬಾವ°ಬೊಳುಂಬು ಮಾವ°ಅಜ್ಜಕಾನ ಭಾವಕೊಳಚ್ಚಿಪ್ಪು ಬಾವವಸಂತರಾಜ್ ಹಳೆಮನೆಮುಳಿಯ ಭಾವಶುದ್ದಿಕ್ಕಾರ°ಸಂಪಾದಕ°ಬಟ್ಟಮಾವ°ಸುಭಗಜಯಗೌರಿ ಅಕ್ಕ°ಅಕ್ಷರ°ಸರ್ಪಮಲೆ ಮಾವ°ಶಾಂತತ್ತೆಡಾಗುಟ್ರಕ್ಕ°ಶರ್ಮಪ್ಪಚ್ಚಿಬೋಸ ಬಾವಅನಿತಾ ನರೇಶ್, ಮಂಚಿಶೇಡಿಗುಮ್ಮೆ ಪುಳ್ಳಿ


ಬೈಲಿನ ಮೋರೆಪುಟ:

ಇದು ಒಂದು ‘ಅಜ್ಜಿ ಕಥೆ’; ಅಲ್ಲ, ಒಂದು ‘ಅಜ್ಜಿಯ’ ಕಥೆ..

August 25, 2011 ರ 10:31 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮದಲಿಂಗೆ, ಒಂದಾನೊಂದು ಊರಿಲ್ಲಿ ಶ್ರೀ ಪರ್ವತಾ ಶಿಖರ ಪ್ರದೇಶ ಸಮೀಪ ಚಿತ್ರಪುರ ಹೇಳಿ ಒಂದು ಊರು ಇತ್ತಡಾ. ಆ ಶಿಖರಲ್ಲಿ ಘಂಟಾಕರ್ಣ ಹೇಳುವ ರಾಕ್ಷಸ ಇದ್ದು ಹೇಳಿ ಜನ ಪ್ರತೀತಿ. ಹೀಂಗಿಪ್ಪಗ ಒಂದಿನ ಕೆಲವು ಕಾಡು ಕಳ್ಳಂಗೊ ಊರಿಂಗೆ ನುಗ್ಗಿ ಆ ಊರಿನ ದೇವಸ್ಥಾನದ ಒಂದು ದೊಡ್ಡ ಘಂಟೆಯ ಕದ್ದೊಂಡು ಹೋದವಡ ಆ ಗುಡ್ಡೆ ಹೊಡೇಂಗೆ.

ಅಲ್ಲಿ ರಜಾ ಬೇಟೆಯಾಡಿ ಆಯಾಸ ಅಪ್ಪಗ, ಒಂದಿಕ್ಕೆ ಕೂದು ಆಯಾಸ ಪರಿಹರಿಸಿ, ಮತ್ತೆ ಎದ್ದಿಕ್ಕಿ ಅವರ ತಾಣದತ್ತ ಹೋದವಡ. (ಇದು ಆರಿಂಗೆ ಕಂಡದು ಇತ್ಯಾದಿ ಲಾಜಿಕ್ ಎನ್ನತ್ರ ಕೇಳ್ಳಾಗ).
ಹೋಪ ಗಡಿಬಿಡಿಲಿ, ಆ ಘಂಟೆಯ ಅಲ್ಲೇ ಮರದಿಕ್ಕಿ ಹೋದವಡಾ!. ಆ ಘಂಟೆ ಅಲ್ಲಿಪ್ಪ ಕೆಲವು ದೊಡ್ಡ ಮಂಗಂಗಳ ಕಣ್ಣಿಂಗೆ ಬಿದ್ದತ್ತು.
ಇದು ಎಂತರಪ್ಪಾ ಹೇಳಿ ಕೈಲಿ ನೆಗ್ಗಿ ನೋಡಿದವು , ಅತ್ತಿತ್ತೆ ಆಡಿಸಿದವು . ಮಣಿ ಹೆಟ್ಟಿ ಘಂಟೆ ಶಬ್ದ ಆತು. ಕೊಶೀ ಆತು ಮಂಗಂಗೊಕ್ಕೆ. ಎತ್ತಿಯೊಂಡು ಓಡಿದವಡ ಕುಶಾಲು ಮಾಡ್ಳೆ ಆತು ಹೇಳಿ.
ಈ ಘಂಟೆ ಹಿಡ್ಕೊಂಡು ಈ ಮಂಗಂಗೋ ಅಂಬಗಂಬಗ ಆಟ ಆಡಿಯೊಂಡು ಕುಶಾಲು ಮಾಡಿಯೊಂಡು ಆ ಘಂಟೆಯ ಮೋಜು ಮಾಡಿಯೊಂಡಿತ್ತವಡಾ.

ಈ ಘಂಟೆಯ ಶಬ್ದ ಕೇಳಿ ಆ ಊರ ಜನಂಗೊ ಹೆದರಿದವಡ. ಜನವಾಸ ಇಲ್ಲದ ಆ ಕಾಡಿಲ್ಲಿ ಒಬ್ಬ ರಾಕ್ಷಸ ಇದ್ದತ್ತು. ಅದು ಮನುಷ್ಯರನ್ನೂ ಸಿಕ್ಕಿರೆ ಹಿಡುದು ತಿಂತು.
ಅದಕ್ಕೆ ಉಲ್ಲಾಸ ಅಪ್ಪಲೆ ಮಣಿ ಆಡುಸುತ್ತು ಇತ್ಯಾದಿ ಕತೆ ಜೋರು ಹಬ್ಬಿತ್ತು. ಮನುಷ್ಯರು ಆ ಕಾಡಿಂಗೆ ಹೋಪಲೆ ಹೆದರಿದವು.
ಕೆಲವು ಜೆನ ಜೀವ ಭಯಂದ ಆ ಊರು ಬಿಟ್ಟಿಕ್ಕಿ ಹೋಪಲೆ ಸುರುಮಾಡಿದವಡ. ಆ ಊರಿನ ರಾಜಂಗೆ ತಲೆ ಬೆಷಿ ಸುರುವಾತು.

ಈ ರಾಕ್ಷಸ ಭಯಂದ ಹೇಂಗೆ ಮುಕ್ತಿ ಅಪ್ಪೋದು ಹೇಳಿ. ತನ್ನ ಮಂತ್ರಿ ಹತ್ತರೆ ಚರ್ಚಿಸಿ ಒಂದು ಘೋಷಣೆ ಮಾಡಿತ್ತು. ಆರು ಆ ಘಂಟಾಕರ್ಣ ರಾಕ್ಷಸನ ನಾಶ ಮಾಡುತ್ತನೋ ಅವಕ್ಕೆ ಲಕ್ಷ ಸುವರ್ಣ ಕೊಡುತ್ತೆ ಹೇಳಿ.
ಜೀವ ಭಯಲ್ಲಿ ಆ ಕಾಡಿಂಗೆ ಹೋಪಲೆ ಆರಿಂಗೂ ಬೆಟ್ರಿ ಇಲ್ಲೆ. ಹೀಂಗೆ ಇಪ್ಪಗ ಒಂದು ಅಜ್ಜಿ ಆ ಕಾಡಿಂಗೆ ಗುಟ್ಟಿಲ್ಲಿ ಹೋತಡ.
ಕಾಡಿಲ್ಲಿ ಒಂದಿಕ್ಕೆ ತಳೀಯದ್ದೆ ನಿಂದೊಂಡು ಎಂತ ನಡೆತ್ತಾ ಇದ್ದು ಹೇಳಿ ನೋಡಿಯೊಂಡಿತ್ತು.
ರಜಾ ಹೊತ್ತಪ್ಪಗ ಆ ಮಂಗಂಗೊ ಆ ಘಂಟೆಯ ಹಿಡ್ಕೊಂಡು ಆಟ ಆಡಿಗೊಂಡು ಮಣಿ ಶಬ್ದ ಮಾಡ್ಳೆ ಸುರುಮಾಡಿದ್ದು ಕಂಡತ್ತು ಈ ಅಜ್ಜಿಗೆ.

ಹತ್ರೆ ಇಪ್ಪ ಮರಂದ ರಜಾ ಹಣ್ಣುಗಳ ಕೊಯ್ದು ಅಜ್ಜಿ ಉಪಾಯಲ್ಲಿ ಆ ಮಂಗಗಳ ನಾಜೂಕಾಗಿ ಮಂಕಡಿಸಿ ಹಣ್ಣುಗಳ ಮಂಗಂಗಳ ಕೈಗೆ ಕೊಟ್ಟು , ಅವರ ಕೈಂದ ಘಂಟೆಯ ವಸೂಲು ಮಾಡಿಗೊಂಡು ಊರಿಂಗೆ ಬಂದು ರಾಜನತ್ರೆ ಘಂಟೆಯ ಕೊಟ್ಟಿಕ್ಕಿ , ಘಂಟಾಕರ್ಣ ರಾಕ್ಷಸನ ಆನು ಕೊಂದು ಮಣಿ ತೆಕ್ಕೊಂಡು ಬಂದೆ ಇದಾ ಹೇಳಿ ಹೇಳಿತ್ತಡಾ.
ರಾಜಂಗೂ ಖುಶೀ ಆತು. ಅಜ್ಜಿ ಕೈಲಿ ಲಕ್ಷ ಸುವರ್ಣ ಇನಾಮು ಕೊಟ್ಟು ಸನ್ಮಾನ ಮಾಡಿ ಕಳ್ಸಿತ್ತು. ಅದರಿಂದ ಮತ್ತೆ ಆ ಕಾಡಿಂದ ಘಂಟೆ ಶಬ್ದ ಕೇಳಿದ್ದಿಲ್ಲೇಡಾ.
ಊರು ಬಿಟ್ಟು ಹೋದ ಜನಂಗಳೂ ವಾಪಾಸು ತಮ್ಮ ತಮ್ಮ ಮನಗೆ ಬಂದು ಸೇರಿಗೊಂಡವಡಾ.

ಹೇಂಗೇ ನಮ್ಮಜ್ಜಿ ಕತೆ?!

~*~*~*~

ಒಪ್ಪ : ಉಪಾಯಲ್ಲಿ ಕೆಲವು ಸಂದರ್ಭಂಗಳ ಪಾರು ಮಾಡ್ಳೆ ಆವುತ್ತು.

ಓ.! ಹೇಳಿದಾಂಗೆ, ಈ ಕತೆ ಅಂತರ್ಜಾಲಂದ ಕದ್ದು ಇಲ್ಲಿ ಬರದದ್ದು ಆತೋ, ಸ್ವಂತ ಬರದದ್ದು ಅಲ್ಲ. ಹಾಂಗಾಗಿ ಎನಗೆ ಪ್ರೈಸು ಬೇಡ.
ನಿಂಗೊಗೆ ಕತೆ ಲಾಯಕ ಆಯ್ದು ಹೇಳಿ ತೋರಿರೆ ಲಾಯಕ ಆಯ್ದು ಹೇಳಿಕ್ಕಿ. ಇಲ್ಲದ್ರೆ ನಿನ್ನಜ್ಜಿ ಕತೆ ಹೇಳಿ ಬಿಟ್ಟಿಕ್ಕಿ. ಏ!?

ಇದು ಒಂದು 'ಅಜ್ಜಿ ಕಥೆ'; ಅಲ್ಲ, ಒಂದು 'ಅಜ್ಜಿಯ' ಕಥೆ.., 5.0 out of 5 based on 5 ratings
ಶುದ್ದಿಶಬ್ದಂಗೊ (tags): , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

  1. ರಘು ಮುಳಿಯ
    ಮುಳಿಯ ಭಾವ
    VA:F [1.9.22_1171]
    Rating: +1 (from 1 vote)

    ಅಜ್ಜಿಯ ‘ಬೆಟ್ರಿ’ ಸರೀ ಚಾರ್ಜ್ ಆಗಿತ್ತು ಹೇಳಿ ಆತು. ಲಾಯ್ಕ ಆಯಿದು ಭಾವ ಅಜ್ಜಿಯ ಈ ಕಥೆ.

    [ಉತ್ತರುಸಿ]

    ಬೋಸ ಬಾವ ಉತ್ತರ ಕೊಟ್ಟದು:
    ಬೋಸ ಬಾವ

    VN:F [1.9.22_1171]
    Rating: 0 (from 0 votes)

    ಅಲ್ಲ ಅಪ್ಪಚ್ಚಿ.. ;)
    ಅ೦ಬಗ ಈ ಕಾಡಿ೦ಗೆ ಹೋಪಗ ಟೋರ್ಚು ಮಣ್ಣೊ ಬೇಕೊ.. ಏ?? :)

    [ಉತ್ತರುಸಿ]

    ಚೆನ್ನೈ ಭಾವ ಉತ್ತರ ಕೊಟ್ಟದು:
    ಚೆನ್ನೈ ಭಾವ°

    VA:F [1.9.22_1171]
    Rating: 0 (from 0 votes)

    ಟೋರ್ಚು ಹಿಡ್ಕೊಂಡು ಹೋದರೆ ಕಳ್ಳರಿಂಗೆ ದೂರಂದ ಗೊಂತಾಗಿ ಅಜ್ಜಿಗೆ ಬೆಡಿ ಮಡುಗಿರೋ?!

    [ಉತ್ತರುಸಿ]

    ಬೋಸ ಬಾವ ಉತ್ತರ ಕೊಟ್ಟದು:
    ಬೋಸ ಬಾವ

    VN:F [1.9.22_1171]
    Rating: 0 (from 0 votes)

    ಎಲ್ಲಾ ಸರಿ ಬಾವ.. ;)
    ಮತ್ತೆ ಈ ಬೆಟ್ರಿ ಎಲ್ಲಿಗೆ ಸಿಕ್ಕುಸಲೆ?? :P
    ಟೋರ್ಚಿ೦ಗೆ ಅಲ್ಲದೊ?? ಏ? :D

    [ಉತ್ತರುಸಿ]

  2. ಹಳೆಮನೆ ಅಣ್ಣ
    VN:F [1.9.22_1171]
    Rating: 0 (from 0 votes)

    ಘಂಟಾಕರ್ಣನ ಕಥೆ ಮೊದಲೇ ಕೇಳಿ ಗೊಂತಿದ್ದು. ಇಲ್ಲಿ ನೋಡಿ ಮತ್ತೊಂದಾರಿ ಕೊಶಿ ಆತು.

    [ಉತ್ತರುಸಿ]

  3. Suvarnini Konale
    ಸುವರ್ಣಿನೀ ಕೊಣಲೆ
    VA:F [1.9.22_1171]
    Rating: 0 (from 0 votes)

    ಕಥೆ ಲಾಯ್ಕಾಯ್ದು :) ಅಂತರ್ಜಾಲಲ್ಲಿ ಸಿಕ್ಕಿರೂ ಕೂಡ ಅದರ ನಮ್ಮ ಭಾಷೆಲಿ ಲಾಯ್ಕಲ್ಲಿ ಬರದ್ದಿ :) ಕಥೆಯ ನೀತಿಯೂ ಲಾಯ್ಕಿದ್ದು

    [ಉತ್ತರುಸಿ]

  4. ತೆಕ್ಕುಂಜ ಕುಮಾರ ಮಾವ°
    ತೆಕ್ಕುಂಜ ಕುಮಾರ ಮಾವ°
    VN:F [1.9.22_1171]
    Rating: +3 (from 3 votes)

    ಭಾವಯ್ಯ,
    “ನಿನ್ನಜ್ಜಿ ಕತೆ ಹೇಳಿ ” ಬಿಟ್ಟಿಕ್ಕುಲೆ ಎಡಿಯ, ಕತೆ ಲಾಯಿಕ್ಕಿದ್ದು.
    ಈ ಅಜ್ಜಿಗೆ “ಬೆಟ್ರಿ” ಎಲ್ಲಿಂದ ಸಿಕ್ಕಿತ್ತಪ್ಪ, ಈ ಬೆಟ್ರಿ ಮನೆದೇವರ ಮಂಕಾಡ್ಸುಲೆ ಉಪಯೋಗ ಅಕ್ಕೊ ಹೇಳಿ ಕೆಲವು ಜೆನ ಯೋಚನೆಲಿ ಇದ್ದವು.

    [ಉತ್ತರುಸಿ]

  5. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ
    VA:F [1.9.22_1171]
    Rating: 0 (from 0 votes)

    ಕೇಳಿದ ಕತೆ ಆದ್ರೂ, ಮತ್ತೆ ಮತ್ತೆ ಕೇಳ್ಲೆ ಲಾಯಿಕ ಇದ್ದು. ನಿರೂಪಣೆ ಕೊಶೀ ಆತು ಹೇಳಿ ಒಂದೊಪ್ಪ

    [ಉತ್ತರುಸಿ]

    ಬೋಸ ಬಾವ ಉತ್ತರ ಕೊಟ್ಟದು:
    ಬೋಸ ಬಾವ

    VN:F [1.9.22_1171]
    Rating: +1 (from 1 vote)

    ಓ ಅಪ್ಪಚ್ಚಿ.. ;)
    ಮತ್ತೆ ಮತ್ತೆ ಕೇಳಿ, :P
    ಮತ್ತೆ ಮತ್ತೆ ಬೆಟ್ರಿ ಚಾರ್ಜಿ ಮಾಡಿಯೊ೦ಬಲಕ್ಕು ಹೇಳಿ ಯೋ.. :D
    ಇದಾ ಒ೦ದು ನಿಮಿಶ.. :)
    ನಮ್ಮ ಅಜ್ಜಕಾನ ಬಾವನ ಮೊಬೈಲಿನ ಬೆಟ್ರಿ ಚಾರ್ಜಿ ಮಾಡ್ಕುವೊ… ಆಗದೊ? ;)

    [ಉತ್ತರುಸಿ]

  6. ಓಣಿಯಡ್ಕ ಕಿಟ್ಟಣ್ಣ
    ಓಣಿಯಡ್ಕ ಕಿಟ್ಟಣ್ಣ
    VN:F [1.9.22_1171]
    Rating: 0 (from 0 votes)

    ಅಜ್ಜಿಯ ಬೆಟ್ರಿ ಚಾರ್ಜ್ ಮಾಡಿದ ಚಾರ್ಜರ್ ಎಲ್ಲಿ ಸಿಕ್ಕುತ್ತು ಗೊಂತಾದರೆ ಎನಗೆ ಹೇಳಿಕ್ಕಿ!
    ಕಥೆ ಲಾಯಿಕಾಯಿದು..

    [ಉತ್ತರುಸಿ]

  7. Sumana Bhat Sankahithlu
    VA:F [1.9.22_1171]
    Rating: 0 (from 0 votes)

    ಕತೆ ಲಾಯಿಕಾಯಿದು.
    ನಮ್ಮ ಭಾಷೆಲಿ ಓದುವಗ ಸಣ್ಣ ಇಪ್ಪಗ ಅಜ್ಜಂದ್ರು, ಅಜ್ಜಿಯಕ್ಕೊ, ಅಪ್ಪ ಹೇಳಿದ್ದರ ಕೇಳಿದ ಹಾಂಗೆ ಆತು.
    ಲಾಯಿಕಾಯಿದು,
    ಸುಮನ

    [ಉತ್ತರುಸಿ]

  8. ಗಣೇಶ
    ಗಣೇಶ ಪೆರ್ವ
    VA:F [1.9.22_1171]
    Rating: 0 (from 0 votes)

    ಹ್ಮ್… ತು೦ಬಾ ಸಣ್ಣಾಗಿಪ್ಪಗ ಕೇಳಿ ಪೂರ್ತಿಯಾಗಿ ಮರತ್ತು ಹೋದ ಕತೆ. ಪುನಃ ನೆ೦ಪು ಮಾಡಿಸಿದ್ದಕ್ಕೆ ಚೆನ್ನೈ ಭಾವ೦ಗೆ ಧನ್ಯವಾದ೦ಗೊ..

    [ಉತ್ತರುಸಿ]

  9. ಮಂಗ್ಳೂರ ಮಾಣಿ...
    ಮಂಗ್ಳೂರ ಮಾಣಿ
    VA:F [1.9.22_1171]
    Rating: 0 (from 0 votes)

    ಅಜ್ಜಿ ಕಥೆ ನಿಜವಾಗಲೂ ಲಾಯಕಿದ್ದು….

    [ಉತ್ತರುಸಿ]

  10. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.22_1171]
    Rating: 0 (from 0 votes)

    ಮದಲೇ ಗೊಂತಿದ್ದರುದೆ, ಚೆನ್ನೈ ಭಾವನ ಬಾಯಿಲಿ ಆ ಕತೆ ಕೇಳಿ ಕೊಶಿ ಆತದ. ಬೆಟ್ರಿ ಪ್ರಯೋಗ ಲಾಯಕಾಯಿದು. ಮಂಡೆ ಕರ್ಚು ಮಾಡಿದ ಅಜ್ಜಿಗೆ ಒಳ್ಳೆ ಇನಾಮು (ಲಕ್ಷ ಸುವರ್ಣ ಇನಾಮು) ಸಿಕ್ಕಿತ್ತು.

    [ಉತ್ತರುಸಿ]

  11. ಚೆನ್ನೈ ಭಾವ
    ಚೆನ್ನೈ ಭಾವ°
    VA:F [1.9.22_1171]
    Rating: 0 (from 0 votes)

    ಓದಿ ಇಷ್ಟ ಪಟ್ಟ ಎಲ್ಲೋರಿಂಗೂ ಧನ್ಯವಾದ.

    [ಉತ್ತರುಸಿ]

  12. ಬೊಳುಂಬು ಕೃಷ್ಣಭಾವ°
    ಕೊರೆಂಗು ಭಾವ°
    VN:F [1.9.22_1171]
    Rating: 0 (from 0 votes)

    ಸುಮಾರು ಸರ್ತಿ ಶಕ್ತಿಗಿಂತ ಯುಕ್ತಿಯೇ ಮೇಲು ಹೇಳ್ತದು ಅನುಭವಕ್ಕೆ ಬತ್ತು. ಕತೆ ‘ಹೇಳಿದ್ದು’ ಲಾಯಕಾಯಿದು.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಚಿತ್ರ ಕೃಪೆ:
ವೆಂಕಟ್ ಕೋಟೂರ್ಆಸ್ಪತ್ರೆಯ ಅಧಿಕೃತ ಮಾತುಗೊಇಂದಿರತ್ತೆಗೆ ಬಹುಮಾನ ಕೊಡ್ತಾ ಇಪ್ಪ ಪ್ರೊ. ಹರಿನಾರಾಯಣ ಮಾಡಾವುವಸ೦ತವೇದಪಾಠಶಾಲೆ – ಪೆರಡಾಲ

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME