ಮತ್ತದೇ ಕಥೆ, ಸಮಾಜವ್ಯಥೆ..

July 6, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೀಂಗೇ ಮುಂದ್‌ವರ್ದ್ರೆ ಮುಂದೊಂದ್ ದಿನ…..
ಹವ್ಯಕರ ಲಗ್ನ ಪತ್ರ ಹೀಂಗ್ ಇರ್ತು….
ಸ್ವಸ್ತಿಶ್ರೀ…..ಇತ್ಯಾದಿ ಔಪಚಾರಿಕ ಪದಗಳೊಂದಿಗ ಮುಂದುವರ್ದು, ಶಿರಸಿ ತಾಲ್ಲೂಕು ಸಂಪಖಂಡ ಹಳೆಮನೆ ನಿವಾಸಿ ದೇವರು ಹೆಗಡೆಯವರ ಸುಪುತ್ರ ’ಸಂಜಯ್’ ಮತ್ತು ಕೆರೆಹೊಂಡದ ಸುಬ್ರಾಯ ಭಟ್ಟರ ದ್ವಿತೀಯ ಪುತ್ರ ’ಚೇತನ್’ ಇವರಿಬ್ಬರ ವಿವಾಹವನ್ನು ಹೊನ್ನಾವರ ತಾಲ್ಲೂಕು ಚಾಂದ್ರಾಣಿ ವಿಷ್ಣು ನಾರಾಯಣ ಹೆಗೆಡೆಯವರ ಸುಪುತ್ರಿ ’ಸುಬ್ಬಿ’ ಯೊಂದಿಗೆ ನೆರವೇರಿಸಲು ಗುರುಹಿರಿಯರ ಹಾಗೂ ವಿದ್ವಜ್ಜನರ ಅನುಮತಿಯಿಂದ ನಿಶ್ಚಯಿಸಲಾಗಿದೆ.
ತಾವು ಸಕುಟುಂಬ ಬಂದು ವರರನ್ನು ವಧುವನ್ನು ಆಶಿರ್ವದಿಸಿ ಯಥೋಚಿತ ಆತಿಥ್ಯ ಸ್ವೀಕರಿಸಬೇಕೆಂದು ಬಯಸುವ ತಮ್ಮ ಆಗಮಾಭಿಲಾಷಿಗಳು……..
ಹೀಂಗೆ ಹೇಳಿ ಮೊನ್ನೆ ಯನ್ ಗೆಣೆಯ ತಲ್ಕಾಲ್ಕೊಪ್ಪದ ನೂತನ್ ಒಂದ್ ಎಸ್ಸೆಮ್ಮೆಸ್ ಕಳ್ಸಿದ್ನಾಗಿತ್ತು.
ಮೇಲಿಂದ ನೋಡುಲೆ ಕುಶಾಲಿಗೆ ಹೇಳ್ದಾಂಗಿದ್ದು. ಓದಿ ನೆಗೆನೂ ಬಂತು. ಆದ್ರೆ ವಿಚಾರಮಾಡಿರೆ ಎಷ್ಟ್ ವಾಸ್ತವ ಗಂಭೀರ ಸಂಗ್ತಿ ಅಲ್ದಾ ?!
ಊರಲ್ಲಿ ಯಮ್ಮನೆಗೆ ಮದ್ವೆ ಮುಂಜಿ ಕರೆಯ ಬಂದ್ ಮಂಗಳಪತ್ರ ಎಲ್ಲಾ ಆಯಿ ಜಗಲಿಮೆಲನ್ ಮಾಡ್ಗುಳಿಲಿ ಸರ್ದು ಇಡ್ತು.
ಮಞ್ಞಳಗ ಮೇ ರಜೆಲಿ ಊರಿಗೆ ಹೋದಾಗ ನೋಡ್ವ ಊರಮನೆಬದಿಗೆ ಎಷ್ಟ್ ಮದ್ವೆ ಮುಂಜಿ ಆತು, ಯನಗೆ ಪಾಯ್ಸ ಸುರುಲೆ ಎಷ್ಟ್ ಸಿಕ್ತು ಕಾಂಬ ಹೇಳಿ ಎಲ್ಲಾ ಮಂಗ್ಲಪತ್ರ ಸಂಯ್ಸ್ದೆ ಹೇಳಾತು.
ಕೋಣಕೆರೆ ಗಣೇಶ್ನ ಮಾಣಿ ಮುಂಜಿಯಾದದ್ದು, ಹುಳ್ಸೆಮಕ್ಕಿ ಮಾಸ್ತರ್ ಮಗಳ ಮದ್ವೆದು, ಮೇಲ್ನತೋಟದ ಸುಬ್ರಾಯಪ್ಪಚ್ಚಿ ಮೊಮ್ಮಗಳ ಲಗ್ನ ಮಾಡದ್ದು, ಗುಡೇಅಂಗ್ಡಿ ಮಾಬ್ಲನ ಮಾಣಿ ಚೋಳಂಗಿ ಆಗದ್ದು ಎಲ್ಲಾ ಗುತ್ತಾತು.
ಕಡೆಗೆ ಯೆರಡ್ ಮದ್ವೆಮಂಗಲ ಪತ್ರ ನೋಡ್ಕಂಡು ಬಗೆಲ ಚುರಕ್ ಆತು. ಸ್ವಲ್ಪಕಿವಿಗೆಂಡೆಬದಿ ಬೆಚ್ಗ್ ಆದಾಂಗಾತು.
ಯಮ್ನನೆಯ ಆತ್ಮೀಯರ ಪೈಕಿ ಯೆರ್ಡಜೆನ್ರ ಮನೆಯ ಕೂಸ್ಗಳ ಮದ್ವೆ ಆತು ಹೇಳಿ  ಆ ಕರೆಯೋಲೆ ಹೇಳ್ತು. ಆದ್ರೆ ಒಬ್ಬ ಅಳಿಯನೂ ಹವ್ಯಕರ ಮಾಣಿಯೇ ಅಲ್ಲ !
ಒಬ್ಬ ಶ್ರಂಗೇರಿ ಕಡೆ ಶಿವಳ್ಳಿಸ್ಮಾರ್ತ, ಮತ್ತೊಬ್ಬರ ಮನೆ ಅಳಿಯ ಇತ್ಲಗನ್ ರಾಮನಗರದ ಕುರುಬರ ಪೋರ ! ಹೆಣ್ಮಕ್ಳ ಬೈಯವ, ಅಪ್ಪಅಬ್ಬೆನ ದೂರವ, ಸಮಾಜದ ಭಾಗ್ಯ ಹಳಿಯವ ಹೇಳೆ ತೆಳಿತಿಲ್ಲೆ.
ಯಂಗಳ ಸಮಾಜದಲ್ಲಿ ಆಷಾಢದಲ್ಲಿ ಅಧಿಕಮಾಸ ಬಂದ್ಹಾಂಗೆ ಆಗ್ತೇ  ಇದ್ರೋ. ಮೊದಲೇ ಕೂಸ್ಗಳ ಸಂಖ್ಯೆ ಬಗೆಲಿ ಕಡ್ಮೆ ಇದ್ದು ಅಂಬ. ಅದರ ಸಂತಿಗೆ, ಓದದ್ದು ಜಾಸ್ತಿ ಆಗಿ ವೋಡ್ ಹೋಪವು ಬೇರೆ, ಪುರೋಹಿತರ‍್ನ, ರೈತಾಪಿಯೋರ‍್ನ, ಮಾಸ್ತರ‍್ನ ಮದ್ವೆ ಆಪ್ಲ ಆಗ್ತಿಲ್ಲೆ ಹೇಳ್ವವು ಬೇರೆ, ಇದ್ರ ಮಧ್ಯ ಅಪ್ಪೈನೆ ನಿಂತು ಬೇರೆ ವರ್ಗದ ಗಂಡಿಗೆ ಧಾರೆ ಎರದ್ ಕೊಡುದೂ ಸುರುವಾದ್ರೆ ’ಗಂಡ್ ಸತ್ ನೋವ್ ಬೇರೆ ಬೊಡ್ ಕೂಪ್ನ ಉರಿ ಬೇರೆ’ ಅಂದ್ಹಾಂಗೆ ಆಜಿಲ್ಯ ?
ಇದು ಸುಖಕ್ಕೆ ಬಂದ್ ಶಿವರಾತ್ರಿ ಅಲ್ಲ ಬಿಲ್ಯ ! ಅಲ್ದ್ರ ಈ ಮಳ್ ಹೆಣ್ಮಕ್ಕ ಏನೋ ಪ್ರಾಯ್ದ ಝೋಮ್ನಲ್ಲಿ ಎಂತೆಂಥದೋ ತೀರ್ಮಾನ ಮಾಡ್ತ್ವಪ. ಅವ್ಕೆ ಅಪ್ಪ ಅಬ್ಬೆ ಬುದ್ಧಿ ಹೇಳವಪ. ಶಾಪಾದಪಿ ಶರಾದಪಿ ಸರಿಮಾಡವಪ.
ಅದ್ನ ಬಿಟ್ಯ್ಗಂಡು ’ ಅಪ್ಪಯ್ಯ ನಾನು ಅವ್ನ ಬಿಟ್ ಬೇರೆ ಯಾರ‍್ನೂ ಮದ್ವೆ ಮಾಡ್ಕತ್ನಿಲ್ಲೆ, ನಾ ತೀರ ಮುಂದ್‌ವರ‍್ದಿಕಿದೆ. ಈಗ ಹಿಂತಿರ‍್ಗಿ ಬಪ್ಲೆ ಆಗ್ತಿಲ್ಲೆ, ಹಾಂಗೇನರು ವತ್ತಾಯ ಮಾಡಿರೆ ಜೀಂವ ತೆಕ್ಕತ್ತೆ ಅಂಬಲ್ರ ಕೂಸು, ಹೇಳಿ ಅಪ್ಪ ಹೇಳಂವ ನಿಸ್ಸಾಹಕನಾಗಿ ಕೈ ಚೆಲ್ಲಿರೆ ನಾಳೆ ಸಮಾಜ ಉಳಿತಾ?
ಕನ್ನಡಶಾಲೆಲಿ ಹರಪ್ಪ ಮೊಹೇಂಜೋದಾರೋ ಹೇಳಿ ಓದಿದ್ ಹಾಂಗೆಯ ಹವ್ಯಕರು ಹೇಳಿ ಒಂದ್ ಜನಾಂಗ ಇದ್ದಿದ್ವಡ, ಅವು ದಿನಾಗೂ ಬೆಳ್ಗಪ್ಪಗ ದೋಸೆನೇ ತಿಂತಿದ್ವಡ, ಅವು ತಮ್ಮ ತಲೆಮೇಲೆ ತಾಂವೇ ಕಲ್ಹೊತ್ತಕ್ಕಂಡ್ವಡ.
ಹೇಳಿ ಇತಿಹಾಸ ಆಗೋಗ್ತನಾವು.  ಬರೇ ಮಲ್ನಾಡ್ಗಿಡ್ಡ, ಕಾಸರಗೋಡ್ಕುಳ್ಳಿ, ವೆಚೂರು ಆಕಳು, ಹೊಳೆ ಮರ  ಗಿಡ ರಕ್ಷಣೆ ಆದ್ರೆ ಆಜಿಲ್ಲೆ.  ಹವ್ಯಕರು ಒಳ್ಳೇ ಜಾತಿಜೆನ. ಮನ್ಷರಲ್ಲೇ ಇದು ಭಾರಿ ಚೆಲೋ ತಳಿ. ಈ ತಳಿ ಸಂರಕ್ಷಣೆನೂ ಆಗವು. ವರ್ಣಸಂಕರ ಮಾಡುಲಿಲ್ಲೆ.
ನಂ ಹೆಣ್ಮಕ್ಕ ಹೆಚ್ಚೆಚ್ಚು ಕಲುದು, ಅದ್ರಸಲುವಾಗಿ ಮನೆಯಿಂದ ದೂರ ಇಪ್ಪುದು ಸರಿ.  ಅದ್ರೆ ಅವು, ದನದಕರನ ಗೆದ್ದೆಬೈಲಲ್ಲಿ ಅಲೆ ಹಗ್ಗ ಹಾಕಿ ಮೇಯುಲೆ ಬಿಟ್ಹಾಂಗೆಯ, ಹಗ್ಗ ಹಿಡಿದೆಳ್ದ್ರೆ ಕಂಜಿ ಗೂಟದ ಹತ್ರ ಬರಲೇ ಬೇಕು. ಹಾಂಗೇಯ ಅವು ಎಲ್ಲೇ ಇದ್ರೂ ಪಾಲಕರ ನಜರಲ್ಲಿ ಇರವು.
ಕಲುಲೆ ದುಡ್ಡು ಧೂಪ ಕೊಟ್ರ ಆಜಿಲ್ಲೆ ಸಂಸ್ಕಾರನೂ ಕೊಡವು  ಹೇಳಿ ಯಂಗಳ ಸಮಾಜದ ಕಣ್ಣಾಂಗೆ ಇಪ್ಪ ಎರಡೂ ಜೆನ ಗುರುಗಳು ಹೇಳ್ತಾನೆ ಇದ್ವಲ್ದಾ? ಅವು ಹೇಳ್ದ ಜಪ ಮಾಡ್ರೆ ಆಜಿಲ್ಲೆ ಇಂಥದ್ನೂ ಕೆಮಿಲಿ ಹಾಕ್ಯಳವು.
ಈಗಿತ್ಲಾಗಿ ಕಾಸರಗೋಡಿನ ಒಬ್ಬರು ಮಾವ, ಒಂದ್‌ಪತ್ರ ಬರೆಜ್ರು.
ಅದರಲ್ಲಿ….  ನಾ ಅಂವ್ನ ಲವ್ ಮಾಡ್ಕಂಯ್ದೆ ಬೇರೆ ಆರ‍್ನೂ ಮದ್ವೆ ಅಪ್ಲೆ ಎಡಿತ್ತಿಲ್ಲೆ. ಇಪ್ಪತ್ತೊಂದ್ನೆ ಶತಮಾನ್ದಲ್ಲಿ ಜಾತಿಗೀಗಿ ಎಂಥ ಇಲ್ಲೆ ಹೇಳಿ ಹೀಂಗೆಯ ಹಟ ಮಾಡ್ತಿಪ್ಪ ಕೂಸಿಗೆ ಒಂದ್ ಅಬ್ಬೆ ಬುದ್ಧಿ ಕಲಿಸಿ ಸರಿದಾರಿಗೆ ತಂದ್‌ರೀತಿಯ ವಿವರಣೆ ಮಾಡಿ ಬರ್ದು, ಕೊನೆಲಿ ಯಂಗಳ ಸಮಾಜದಲ್ಲಿ ಇಂಥ ಪರಿಸ್ಥಿತಿ ಜಾಸ್ತಿ ಅವುತ್ತಾ ಇದ್ದು, ಬೇರೆ ತಾಯಂದಿರಿಗೂ ಇದು ಉಪಕಾರ ಅಕ್ಕು ಹೇಳಿ ಬರದ್ರು.
ಅವಕಾಶ ಬಂದಾಗ ಪತ್ರಿಕೆಲಿ ಹಾಕ್ತೆ ನೋಡ್ಳಕ್ಕಿ. ಅಂದ್ರೆ ಈ ಪ್ರೀತಿ ಪ್ರೇಮ ಹೇಳೋ ಭ್ರಾಂತಿಯಲ್ಲಿ ಬಿದ್ದಿಪ್ಪ ಹುಡುಗಿರ ದಾರಿಗೆ ತರ್ಲಕ್ಕು ಹೇಳಿ ಕಾಣ್ತಪ ನಂಗೆ. ಈ ಪಾಲಕರು ಯುದ್ಧಶುರವಪ್ಪು ಮುಂಚೆನೇ ಸೋಲ್ ಒಪ್ಗಂಡ್ಬುಡ್ತ ಕಾಣ್ತು.
ರೋಗ ಬಂದ್ಮೇಲೆ ಔಷಧಿ ಹುಡುಕಿಂತ ಮೊದ್ಲೆಯ ರೋಗನಿಯಂತ್ರಣ ಮಾಡುದೇ ಲೇಸು ಹೇಳ ಇಂಗ್ಲಿಶ್ ಗಾದೆ ಹಾಂಗೆಯ ಪಾಲಕರ ಜಾಗ್ರತಿ ಮುಖ್ಯ.
ಕೂಸ್ಗಳ ಶಿಕ್ಷಣ ನೌಕರಿ ಗೌಜಿಲಿ ಸಂಸ್ಕಾರ ಮರುಲಿಲ್ಲೆ. ಹೊತ್ತು ಹೆತ್ತು ಸಲಹಿ ಕಾಲದ ನೆಲೆಯ ತಾಪತ್ರಯಗಳನ್ನು ಸೆರಗಲ್ಲೇ ಕಟ್ಗಂಡು, ತನ್‌ಹಳಗನ್ನೇ ಶೈಕ್ಷಣಿಕ ಶುಲ್ಕವಾಗಿಸಿದ ಪಾಲಕರ ಭಾವನೆಗಳಿಗೆ ಧಿಕ್ಕಾರ ಹಾಕುವ ಮನಸ್ನ ನಮ್ಮ ಹೆಣ್ಮಕ್ಕಗೆ ಕೊಟ್ಟದ್ದು ಅದ್ಯಾವ ಶಿಕ್ಷಣ ?
ಹೇಳಿ ನಂಗೆ ಅರ್ಥ ಆಗ್ತಾ ಇಲ್ಲೆ ನಿಂಗಕ್ಕೇನಾರು ಗುತ್ತಾದ್ರೆ ಯಂಗೊಂದ್ ಕೋಲ್ಮಿಂಚಂಚೆ ಹಾಗಿ ಅಕ್ಕನ್ರೋ ?
ಸೂ:ಇಲ್ಲಿಪ್ಪ ಯಾವ್ದಾದ್ರೂ ಹೆಸ್ರು ಯಂದೆಯೇ ಹೇಳ್‌ಕಾಣ್ತು ಹೇಳಿ ಯಾರೂ ಅಂದ್ಕಂಬುಲಿಲ್ಯೆ ಮತ್ತೆ ಹ್ಞಾಂ!
ಮತ್ತದೇ ಕಥೆ, ಸಮಾಜವ್ಯಥೆ.., 5.0 out of 10 based on 2 ratings
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ‘ನಾವು ಕಟ್ಟಿದ ಸ್ವರ್ಗ’ ಅಲ್ಲದೋ?
  ನಮ್ಮ ಸಮಾಜದ ಮಾಣಿಯ೦ಗೊ ಇ೦ಜಿನಿಯರಿ೦ಗ್ ಅಥವಾ ಇನ್ನಿತರ ಪದವಿ ಸಿಕ್ಕಿಯಪ್ಪಗ ಉದ್ಯೋಗಕ್ಕೆ ಸೇರಿಗೊಳ್ಳುತ್ತವು,ಕೂಸುಗೊ ಇನ್ನೂ ಹೆಚ್ಚಿನ ವ್ಯಾಸ೦ಗ ಮಾಡುತ್ತವು. ವರಾನ್ವೇಷಣೆ ಮಾಡೊಗ ಈ ಪದವಿಗಳ ಮಧ್ಯದ ಅ೦ತರವೂ ದೊಡ್ಡ ತಡೆ ಆವುತ್ತು.
  ಸಮಸ್ಯೆಗೆ ಪರಿಹಾರ ? ಚರ್ಚೆ ಮಾಡುಲೆ ಎಡಿಗು ಆದರೆ ನಮ್ಮ ಮನಸ್ಸು ಬದಲಕ್ಕೊ?ಅಲ್ಲ, ಕಾಲವೇ ನಿರ್ಧರಿಸುಗೋ?

  [Reply]

  VA:F [1.9.22_1171]
  Rating: 0 (from 0 votes)
 2. ಒಪ್ಪಣ್ಣ

  ಹವ್ಯಕ ಕುಲಾಚಾರವಿಚಾರಂಗಳ ಬಗ್ಗೆ ಹವ್ಯಕದ ಸಂಪಾದಕೀಯ ಮೂಲಕ ಬೈಲಿಲಿ ಶುದ್ದಿ ಹೇಳಿದ ಕಾಂತಣ್ಣನ ಕಾಳಜಿಗೆ ನಮೋನಮಃ.
  ಬೈಲಿಲಿ ಉತ್ತಮ ಚಿಂತನೆ ಬೆಳೆಶುವ ನಿಂಗಳ ಶ್ರಮ ಕಂಡು ಕುಶೀ ಆತು.

  ನಮ್ಮ ಒಳವೇ ಇಪ್ಪ ನಮ್ಮತನ ಒಳಿಯೇಕಾರೆ ನಮ್ಮೋರೇ ಆಯೆಕ್ಕಷ್ಟೆ. ಅಲ್ಲದಾ?
  ಹರೇರಾಮ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ವಸಂತರಾಜ್ ಹಳೆಮನೆಶೀಲಾಲಕ್ಷ್ಮೀ ಕಾಸರಗೋಡುಪಟಿಕಲ್ಲಪ್ಪಚ್ಚಿಗಣೇಶ ಮಾವ°ಅಕ್ಷರ°ಚೆನ್ನಬೆಟ್ಟಣ್ಣಅನುಶ್ರೀ ಬಂಡಾಡಿಸರ್ಪಮಲೆ ಮಾವ°ಪವನಜಮಾವಜಯಗೌರಿ ಅಕ್ಕ°ಮಾಷ್ಟ್ರುಮಾವ°ವೇಣೂರಣ್ಣಡೈಮಂಡು ಭಾವಶ್ರೀಅಕ್ಕ°ವಿಜಯತ್ತೆಡಾಗುಟ್ರಕ್ಕ°ಕೆದೂರು ಡಾಕ್ಟ್ರುಬಾವ°ಸಂಪಾದಕ°ಜಯಶ್ರೀ ನೀರಮೂಲೆಶೇಡಿಗುಮ್ಮೆ ಪುಳ್ಳಿಬಂಡಾಡಿ ಅಜ್ಜಿಕಜೆವಸಂತ°ದೀಪಿಕಾವಾಣಿ ಚಿಕ್ಕಮ್ಮಬೊಳುಂಬು ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ