ಕಾವಿನಮೂಲೆ ಮಾಣಿಯ ಶುದ್ದಿಗೊ

January 19, 2010 ರ 12:59 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕಭಾಷೆ ಹೆರಾಣೋರಿಂಗೆ ತಲೇಂದತಲಗೆ ಒಂದೇ ನಮುನೆ ಕೇಳಿರೂ, ಹತ್ತರಂದ ನೋಡಿರೆ ಸುಮಾರು ನಮುನೆ ಭಾಷಾ ವೈವಿಧ್ಯತೆಗೊ ಇಪ್ಪದು ಕಾಣ್ತು!
ಒಂದೊಂದು ಊರಿಲಿದೇ ಮಾತಾಡುವ ಭಾಷೆಲಿ ವಿತ್ಯಾಸ ಇದ್ದು.
ಉತ್ತರ ಕನ್ನಡಕ್ಕೆ ಹೋಲುಸಿರೆ ಕೊಡೆಯಾಲ ಹೋಬಳಿಲಿ ಬೇರೆಯೇ ನಮುನೆ.
ಅದು ಬಿಡಿ, ಕೊಡೆಯಾಲ ಹೋಬಳಿಲೇ ತರಾವಳಿ ಇದ್ದು – ಅದಾಗಲೇ ಈ ಬಗ್ಗೆ ಮಾತಾಡಿದ್ದು ನಾವು.
ಅನೇಕ ಪ್ರಭೇದಂಗೊ, ವೈವಿಧ್ಯತೆಗೊ ಇಪ್ಪ ಹವ್ಯಕಭಾಷೆ – ವೈವಿಧ್ಯೆತೆಲಿ ಏಕತೆಯ ಮೆರೆತ್ತಾ ಇದ್ದು!

ಪಂಜ ಸೀಮೆಲಿ ಮಾತಾಡ್ತ ಹವ್ಯಕ ಭಾಷೆ ರಜಾ ಬೇರೆ ಗೊಂತಿದ್ದನ್ನೆ?
ಅದಾ, ಪಂಜ ಚಿಕ್ಕಯ್ಯ ಮಾತಾಡುದು – “ಎನಿಗೆ ಹೋಪ್ಲೆ ಇದ್ದು” (ಎನಗೆ ಹೋಪಲೆ ಇದ್ದು) ಹೇಳಿಗೊಂಡು!
ತಾಜಾ ಕುಂಬ್ಳೆ ಭಾಷೆಯ ಹಾಂಗೆ ಮಲೆಯಾಳದ ಅನುನಾಸಿಕ ಒತ್ತಿದ್ದಲ್ಲ, ಕೋಳ್ಯೂರು ಭಾಷೆಯ ಹಾಂಗೆ ಗ್ರಾಮ್ಯ ಶಬ್ದಂಗೊ ಒತ್ತಿದ್ದಲ್ಲ, ಮಡಿಕೇರಿ ಹೊಡೇಣವರ ಹಾಂಗೆ ಶುದ್ಧ ಕನ್ನಡ ಅಲ್ಲಲೇ ಅಲ್ಲ!
ರಜಾ ಕನ್ನಡ ಒತ್ತಿದ, ಹವ್ಯಕ ಪ್ರತ್ಯಯಂಗೊಕ್ಕೆ ಕನ್ನಡದ ಚಾಪು ಕೊಟ್ಟ ಮಾರ್ಪಾಡುಗೊ.
ಆರಾರು ಪಚ್ಚಡಿ(Ph.D) ಕಡದು ಅಧ್ಯಯನ ಮಾಡ್ತರೆ ಒಳ್ಳೆಯ ವಿಷಯ!

ಪಂಜಸೀಮೆಯ ಒಂದು ಊರು ಚೊಕ್ಕಾಡಿ ಆದರೂ, ಅಲ್ಲಿಯ ಕೆಲವು ಮೂಲ ಮನೆತನದ ಹವ್ಯಕರು ಮಾತಾಡುದು ಈ ಪಂಜಭಾಷೆಂದಲೂ ವೈವಿಧ್ಯ.
ಅದರದ್ದೇ ಶಬ್ದಂಗೊ, ಅದರದ್ದೇ ಪ್ರತ್ಯಯಂಗೊ, ಅದರದ್ದೇ ವೇಗಂಗೊ – ಕೇಳುವಗಳೇ ಅದರ ಮಧುರತೆ ಎದ್ದು ಕಾಣ್ತು.
ನೆರೆಕರೆಯ ಗೌಡುಗಳ ಭಾಷೆಯ ಸಾಮ್ಯತೆ ಬಹುವಾಗಿ ಎದ್ದು ಕಾಣ್ತರುದೇ, ಪಂಜಭಾಷೆಯ ಹೆಚ್ಚಿನ ಶಬ್ದಂಗೊ ಏಕರೂಪತೆ ಇದ್ದು. ಪಂಜಲ್ಲಿ ’ಎನಿಗೆ ಹೋಪ್ಲೆ ಇದ್ದು’ (ಎನಗೆ ಹೋಪಲೆ ಇದ್ದು) – ಹೇಳುದರ
ನಂಗೆ ಹೋವೂಕೆ ಅದೆ!’ ಹೇಳುಗು. ಹೋಪಲೆ – ಬಪ್ಪಲೆ ಇಪ್ಪದರ ಹೋವುಕೆ-ಬರುಕೆ ಹೇಳುಗು.

ಹವ್ಯಕ ಭಾಷೆಯ ಅಪುರೂಪದ ಪ್ರಭೇದಂಗಳಲ್ಲಿ ಈ ಚೊಕ್ಕಾಡಿಭಾಷೆಯೂ ಒಂದು.
ದೇರಾಜೆ, ಬಾಳಿಲ, ಕಾಂಚೋಡಿ, ಚಾವಡಿಬಾಗಿಲು, ಕಾವಿನಮೂಲೆ – ಇಂತಾ ಕುಟುಂಬಂಗೊ ಈಗಳೂ ಇದೇ ಚೊಕ್ಕಾಡಿ ಭಾಷೆ ಮಾತಾಡಿಗೊಂಡು, ಅದರ ಒಳುಶಿಗೊಂಡು ಇದ್ದು.
ಬೇರೆ ಸೀಮೆಂದ ಸಂಬಂಧ ಆದ ಮನೆಗಳ ಮಕ್ಕೊಗೆ ಎರಡೂ ಭಾಷೆಯೂ ಬಕ್ಕು, ಕಾಂಚೋಡಿ ಮಾಣಿಯ ಹಾಂಗೆ!

ಆದರೆ ಒಂದು ಬೇಜಾರದ ಸಂಗತಿ ಎಂತರ ಹೇಳಿರೆ, ಕೆಲಾವುದಿಕ್ಕೆ – ಬೇರೆ ಭಾಷೆ ಮಾತಾಡುವ ಅಪ್ಪನ ಮನೆಂದ ಮದುವೆ ಆಗಿ ಬಂದ ಹೆಮ್ಮಕ್ಕೊ ಈ ಭಾಷೆಯ ಕಲಿಯದ್ದೆ, ಈ ಭಾಷೆಯ ಬಳಕೆ ಪ್ರಮಾಣ ಕ್ರಮೇಣ ಕಡಮ್ಮೆ ಆಗಿಯೋಂಡಿಪ್ಪದು!

ನಮ್ಮ ಕಾವಿನಮೂಲೆ ಮಾಣಿ, ಅದಾ ಬೆಂಗ್ಳೂರಿಲಿ ಎಂತದೋ ಕೋಲೇಜಿಂಗೆ ಹೋಪದು –
ಅವನತ್ರೆ ‘ಒಪ್ಪಣ್ಣನ ಬೈಲಿಗೆ ಬಂದು ಸುದ್ದಿ ಹೇಳೂಕೆ ಕೂಡೀತಾ?’ (ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳುಲೆ ಎಡಿಗೋ?) ಕೇಳಿದೆ!
ಹ್ಮ್, ಸುದ್ದಿ ಹೇಳುಕೆ ಅಡ್ಡಿಲ್ಲ. ಆದ್ರೆ ನಾನು ಇರೂದು ಬೆಂಗ್ಳೂರಲ್ಲಿ. ಈಗ ಕೆಲ್ಸ ಸೊಲ್ಪ ಜಾಸ್ತಿ ಅದೆ!” ಹೇಳಿದ° ಮಾಣಿ.
ತೊಂದರೆ ಇಲ್ಲೆ, ಪುರುಸೊತ್ತಪ್ಪಗ ಹೇಳು ಹೇಳಿದ್ದಕ್ಕೆ ಕುಶೀಲಿ ಒಪ್ಪಿದ°.
ಹಾಂಗೆ ಅವಂದೇ ಈಗ ‘ಒಪ್ಪಣ್ಣ’ ಆಯಿದ°!

ಇವಂದು, ದೊಡ್ಡಮಾವನ ಹಾಂಗೆ ಹಳೇ ಕುಂಬ್ಳೆ ಭಾಷೆ ಅಲ್ಲ, ಚೆಂಬರ್ಪು ಅಣ್ಣನ ಹಾಂಗೆ ವಿಟ್ಳ ಸೀಮೆ ಭಾಶೆ ಅಲ್ಲ, ಸುಣ್ಣಂಬಳ ಅಣ್ಣನ ಹಾಂಗೆ ಕೋಳ್ಯೂರು ಭಾಷೆ ಅಲ್ಲ, ಪಂಜ ಚಿಕ್ಕಯ್ಯನ ಹಾಂಗೆ ಪಂಜ ಭಾಷೆ ಅಲ್ಲ, ಪುಟ್ಟತ್ತೆಯ ಹಾಂಗೆ ಪುತ್ತೂರು ಭಾಷೆ ಅಲ್ಲ, ಶುಬತ್ತೆಯ ಹಾಂಗೆ ಇಂಗ್ಳೀಶು ಸೇರಿದ ಹಂಗ್ಳೀಶು ಅಲ್ಲ – ಇದು ಅಪುರೂಪದ “ಚೊಕ್ಕಾಡಿ ಭಾಷೆ“!
ಒಪ್ಪಣ್ಣನ ಬೈಲಿಲಿ ಅವುದೇ ಇದ್ದವಲ್ದಾ, ಹಾಂಗೆ ಅವರ ಭಾಶೆಯ ನಾವುದೇ ಕಲ್ತುಗೊಂಬ°. ಕಲಿವಲೆಡಿಯದ್ದ ಭಾಷೆ ಅಲ್ಲ ಇದು, ಅವರ ಸಂಸರ್ಗಂದಾಗಿ ನಮ್ಮ ಮಾಷ್ಟ್ರುಮನೆ ಅತ್ತೆಗೆ ಈ ಭಾಷೆ ಸಲೀಸಾಗಿ ಬತ್ತು. ಚೂರಿಬೈಲು ದೀಪಕ್ಕನತ್ರೆ ಇದೇ ಭಾಷೆ ಮಾತಾಡುಗು.

ನಿಂಗಳತ್ರುದೇ ಆರಾರು ಆ ಭಾಷೆ ಬತ್ತೋ ಕೇಳಿರೆ, “ಕೇಳಿಗೊಂತಿದ್ದು – ಒಪ್ಪಣ್ಣನ ಬೈಲಿಲಿ!!” ಹೇಳ್ತಷ್ಟಾದರೂ ಗೊಂತಿರ್ಲಿ ನಿಂಗೊಗೆ.

ಕಾವಿನಮೂಲೆಮಾಣಿ “ಅಕ್ಷಯ” ಹೇಳ್ತ ಅಂಕಣಲ್ಲಿ ಶುದ್ದಿ ಹೇಳ್ತ°- ಅವಂಗೆ ಪುರುಸೊತ್ತಪ್ಪಗ.
ಮನಸ್ಸು, ಭಾವನೆ, ಸಂಸ್ಕೃತಿ ಎಲ್ಲ ಒಟ್ಟಾಗಿ ಚೆಂದದ ಶುದ್ದಿಗೊ ಅದೆಲ್ಲ!
ಅಜ್ಜಕಾನ ಭಾವನ ಅಭಾವ ಇಪ್ಪದಕ್ಕೆ, ಕಾವಿನಮೂಲೆಮಾಣಿದು ಅಕ್ಷಯವೋ – ಹೇಳಿ ಆಚಕರೆ ಮಾಣಿ ನೆಗೆಮಾಡಿ ಕೇಳಿದ°.

ಅದೇನೇ ಇರಳಿ, ನಾವೆಲ್ಲರುದೇ ಶುದ್ದಿ ಕೇಳುವೊ°..

ಒಪ್ಪ ಕೊಡುವೊ° –ಎಡಿಗಾರೆ ಅವನ ಭಾಷೆಲೇ!.
~

ಒಪ್ಪಣ್ಣ

~~

ಶುದ್ದಿ ಸದ್ಯಲ್ಲೇ ಬತ್ತು…
ಕಾದೊಂಡಿರಿ, ಆತೋ?

ಏ°?

ಕಾವಿನಮೂಲೆ ಮಾಣಿಯ ಶುದ್ದಿಗೊ, 5.0 out of 10 based on 1 rating

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

  1. ಭೀಮಗುಳಿ ಶ್ಯಾಮ

    ನಾವು ಭೀಮಗುಳಿಯವು ಸಹ ಅದೇ ಭಾಶೆ ಮಾತಾಡುದು.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ನೀರ್ಕಜೆ ಮಹೇಶಮಾಲಕ್ಕ°ಅನು ಉಡುಪುಮೂಲೆದೊಡ್ಡಭಾವಪುತ್ತೂರುಬಾವಶೇಡಿಗುಮ್ಮೆ ಪುಳ್ಳಿರಾಜಣ್ಣಪಟಿಕಲ್ಲಪ್ಪಚ್ಚಿಗೋಪಾಲಣ್ಣಅನಿತಾ ನರೇಶ್, ಮಂಚಿದೀಪಿಕಾಅಜ್ಜಕಾನ ಭಾವಕಾವಿನಮೂಲೆ ಮಾಣಿಪವನಜಮಾವಮಂಗ್ಳೂರ ಮಾಣಿಬೋಸ ಬಾವಪುತ್ತೂರಿನ ಪುಟ್ಟಕ್ಕವಿಜಯತ್ತೆಜಯಶ್ರೀ ನೀರಮೂಲೆವೆಂಕಟ್ ಕೋಟೂರುಪುಣಚ ಡಾಕ್ಟ್ರುಸರ್ಪಮಲೆ ಮಾವ°ಸುಭಗಬಂಡಾಡಿ ಅಜ್ಜಿಪೆರ್ಲದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ