ಅಮೆರಿಕದ ಸಮುದ್ರಲ್ಲಿ ಎಣ್ಣೆ ಸೋರುತ್ತ ಸುದ್ದಿ…

July 11, 2010 ರ 4:25 pmಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೊಳಚಿಪ್ಪು ಬಾವ ಭೋಪಾಲ ಗೇಸು ದುರಂತದ ಬಗ್ಗೆ ಬರದ್ದು ನಿಂಗೆಲ್ಲಾ ಓದಿದ್ದಿ. ಒಂದೊಳ್ಳೆ ಅರ್ಥ ಪೂರ್ಣ, ಸಕಾಲಿಕ ಲೇಖನ ಅದಾಗಿತ್ತು.

ಭಾರತದಲ್ಲಿ ನಡೆದ ಅತ್ಯಂತ ಕೆಟ್ಟ ಆಪತ್ತು ಹೇಳ್ತ ಕುಖ್ಯಾತಿ ಅದಕ್ಕಿದ್ದು. ಇರಲಿ.
ಆನುದೆ ಬರವಲೆ ಹೆರಟದು ಹೀಂಗೆಯೇ ಪರಿಸರಕ್ಕೆ ಆದ ವಿಪತ್ತಿನ ಬಗ್ಗೆಯೇ ಆದರೆ ಅದು ಭಾರತದ್ದಲ್ಲ. ಅಮೆರಿಕದ ಸುದ್ದಿ.

ಕಳೆದ ಎರಡು ತಿಂಗಳಿಂದ ನಿಂಗೊ ಪೇಪರಿಲ್ಲಿಯೋ, ಟಿವಿಲೀ ಓದಿಪ್ಪಿ ಕೇಳಿಪ್ಪಿ.
ಅಮೆರಿಕದ ಸಮುದ್ರದ ಅಡಿಯಲ್ಲಿ ಎಣ್ಣೆ ಸೋರುತ್ತಾ ಇದ್ದು ಹೇಳ್ತ ಸುದ್ದಿಯ. ಆದರೆ ಬಹುಪಾಲು ಜೆನಕ್ಕೆ ಇದರ ವಿಷಯ ಎಂತರ ಹೇಳಿ ಗೊಂತಿಲ್ಲೆ (ಶರ್ಮಪ್ಪಚ್ಚಿಗೆ ಗೊಂತಿಕ್ಕು) ಅದರ ವಿವರಿಸುವ ಸಣ್ಣ ಪ್ರಯತ್ನ ಎನ್ನದು.

ವಿಜ್ಞಾನ ಪೇಪರಿನ ವಿಭಾಗಲ್ಲಿ (ವಿಜ್ಞಾನ ಪತ್ರಿಕೋದ್ಯಮ) ಭಾರಿ ಕೃಷಿ ಮಾಡಿದ ನಾಗೇಶ ಹೆಗಡೆ ಹೇಳ್ತ ಹಿರಿಯ ವೆಕ್ತಿ, ಪ್ರಜಾವಾಣಿ  ಪೇಪರಿಲ್ಲಿ  ’ವಿಜ್ಞಾನ ವಿಶೇಷ’ ಹೇಳ್ತ ಅಂಕಣ ಬರವದು ನಿಂಗೊಗೆ ಗೊಂತಿಕ್ಕು.
ಅಥವಾ ಅದರ ನಿಂಗಳುದೆ ಓದಿಪ್ಪಿ. ಅವು ಎಣ್ಣೆ ಸೋರುತ್ತದರ ಬಗ್ಗೆ ಅವರ ಲೇಖನಲ್ಲಿ ಪ್ರಸ್ತಾಪಿಸಿದ್ದವು. ಅವು ಕನ್ನಡಲ್ಲಿ ಬರದ್ದರ ಆನು ನಮ್ಮ ಭಾಷೆಲಿ ಬರತ್ತಾ ಇದ್ದೆ. ಅವರ ಲೇಖನ ಅಲ್ಲದ್ದೆ ಆನು ಓದಿಪ್ಪ ಇತರ ಪೂರಕ ಮಾಹಿತಿಗಳನ್ನು ಇಲ್ಲಿ ಬರದ್ದೆ…

ಸಾಮಾನ್ಯವಾಗಿ ನಾವು ನೀರಿಂಗೆ ಬೋರು ತೆಗೆತ್ತಾ ರೀತಿಲಿಯೇ ಎಣ್ಣೆ (ಕಚ್ಚಾ ತೈಲ ಹೇಳ್ತವು)ಗೂ ಬೋರು ತೋಡುದು ಪದ್ಧತಿ.

ನೀರಿಲ್ಲಿ ಹರಡುತ್ತಾ ಇಪ್ಪ ಎಣ್ಣೆ. -ಚಿತ್ರ ಕೃಪೆ ಎಪಿ
ನೀರಿಲ್ಲಿ ಹರಡುತ್ತಾ ಇಪ್ಪ ಎಣ್ಣೆ. -ಚಿತ್ರ ಕೃಪೆ ಎಪಿ

ಹೀಂಗೆ ನೆಲದ ಮೇಲೆ ಬೋರು ತೆಗೆತ್ತಾ ಇಪ್ಪಗ ಭೂಮಿ ಅಡಿಂದ ಎಣ್ಣೆ ಒಂದೇ ಸರ್ತಿಹೆರ ಬಂದು ತಿಂಗಳು ಗಟ್ಟಲೆ ಕಾರಂಜಿಯ ಹಾಂಗೆ ಎಣ್ಣೆ ರಟ್ಟುವ ಕ್ರಮ ಇದ್ದು.
ಒಂದರಿ ಅದು ಕಾರಂಜಿ ಹಾಂಗೆ ಚಿಮ್ಮಲೆ ಸುರುವಾದರೆ ಅದರ ನಿಲ್ಲುಸಲೆ ಎಡಿಗಾವುತ್ತಿಲ್ಲೆ. ಅದಕ್ಕಾಗಿ ಬೋರು ಕೊರವಲೆ ಸುರುಮಾಡುವಾಗಲೇ ಅತ್ಯಂತ ಗಟ್ಟಿ ಕವಾಟುಗ ಇಪ್ಪ ಗೋಪುರವ ಕಟ್ಟಿ ಅದರ ಮೂಲಕ ಡ್ರಿಲ್ಲಿಂಗ್ (ಬೋರು ಕೊರವ) ಮಿಷನ್ನಿನ ಇಳುಸುತ್ತವು.

ಭೂಮಿಯ ಮೇಲೆಯೇ ಇಷ್ಟು ಕಷ್ಟ ಇಪ್ಪಗ, ಸಮುದ್ರದಲ್ಲಿ ಪರಿಸ್ಥಿತಿ ಹೇಂಗಿಕ್ಕು ಹೇಳ್ತದು ನಿಂಗಳ ಮನಸ್ಸಿಲ್ಲಿ ಬಂದಿಕ್ಕು.
ನಿಂಗಳ ಊಹೆ ಸರಿ, ಸಮುದ್ರದ ಒಳದಿಕ್ಕೆ ಎಣ್ಣೆಯ ಬೋರು ಕೊರವದು ಇನ್ನೂ ಕಷ್ಟ. ಹಾಂಗಿಪ್ಪ ಗೋಪುರವ ಸಮುದ್ರದ ಅಡಿಂಗೆ ಇಳಿಸಿ, ಸಮುದ್ರದ ನೀರಿಲ್ಲಿ ತೆಪ್ಪ (ತೇಲುಕಟ್ಟೆ ಹೇಳ್ತವು) ನಿರ್ಮಿಸಿ ಅಲ್ಲಿಂದ ಈ ಗೋಪುರದ ಮೂಲಕ ಬೋರ್ ಕೊರೆಕು.
ಬೋರು ಕೊರತ್ತಾ ಇಪ್ಪಗ ಎಣ್ಣೆ (ಕಚ್ಚಾ ತೈಲ) ರಟ್ಟಿದ ಕೂಡ್ಲೆ, ಅದು ಗೋಪುರ ಕವಾಟಿಂದಾಗಿ ಬಂದು ಅದರ ಮೇಲಿಪ್ಪ ಒತ್ತಡವ ಕಡಮ್ಮೆ ಮಾಡಿಕೊಂಡು ಪೈಪ್ಪಿನ ಮೂಲಕ ಸಮುದ್ರದ ಮೇಲಿಪ್ಪ ತೆಪ್ಪಕ್ಕೆ ಬಂದು ಅಲ್ಲಿಂದ ಎಣ್ಣೆ ಸಮುದ್ರದ ದಂಡೆಗೆ ಬಪ್ಪದು ಕ್ರಮ.

ಅಮೆರಿಕದ ದಕ್ಷಿಣ ಕರಾವಳಿಂದ(ಮೆಕ್ಸಿಕೊ ಕೊಲ್ಲಿಲಿ) ೬೫ ಕಿ.ಮೀ ದೂರಲ್ಲಿ,  ಇಂಗ್ಲೆಂಡಿನ ಬಿಪಿ ಕಂಪೆನಿ ಹೀಂಗೆ ಸಮುದ್ರದ ಅಡಿಲಿಪ್ಪ ಎಣ್ಣೆ (ಕಚ್ಚಾ)ತೆಗೆತ್ತಾ ಇತ್ತು.
ಏಪ್ರಿಲ್ ತಿಂಗಳ ೨೦ರಂದು ಆರುದೆ ಊಹಿಸದ್ದ ಅನಾಹುತ ಒಂದು ಅಲ್ಲಿ ಆಗಿ ಹೋತು.
ಸಮುದ್ರದ ಮೇಲೆ ಇಪ್ಪ ತೆಪ್ಪಲ್ಲಿ ಸ್ಫೋಟ ಆಗಿ ಅಲ್ಲಿ ಕೆಲಸ ಮಾಡಿಗೊಂಡಿದ್ದ ಹನ್ನೊಂದು ಜೆನಂಗ ಸತ್ತವು. ಇಷ್ಟೇ ಆಗಿದ್ದರೆ ಸಮಸ್ಯೆ ಏನೂ ಇತ್ತಿಲ್ಲೆ. ಆ ಸ್ಪೋಟಂದಾಗಿ ಆದರೆ ಸಮುದ್ರ ಒಳ ಇದ್ದ ಕವಾಟಿನ ಗೋಪುರ ಒಡದು ಹೋತು.
ಅಷ್ಟೆ ಅಲ್ಲ ಎಣ್ಣೆ ಬಂದುಗೊಂಡಿದ್ದ ಪೈಪುದೆ ಒಡದತ್ತು.
ಅಂಬಗ ಸುರು ಆತದಾ ಎಣ್ಣೆ ಸೋರುಲೆ. ಅಂದು ಸುರುವಾದ ಸೋರಿಕೆ ಇಂದಿಂಗೂ ನಿಂದಿದಿಲ್ಲೆ. ನೀರಾಗಿದ್ದರೆ ತೊಂದರೆ ಇತ್ತಿಲ್ಲೆ. ಸಮುದ್ರದ ನೀರುದೆ, ಬೋರಿನ ನೀರುದೆ ಮಿಕ್ಸ್ ಆಗಿದ್ದರುದೆ ಯಾವುದೇ ಸಮಸ್ಯೆ ಇತ್ತಿಲ್ಲೆ.
ಇದು ಎಣ್ಣೆ ಇದಾ ಅದು ನೀರಿನೊಟ್ಟಿಂಗೆ ಮಿಕ್ಸ್ ಆವುತ್ತಿಲ್ಲನ್ನೆ, ಬಸ ಬಸ ಹೇಳಿ ಬೋರಿಂದ ಹೆರ ಬತ್ತಾ ಇಪ್ಪ ಕಚ್ಚಾ ಎಣ್ಣೆ ಸಮುದ್ರಲ್ಲೆಲ್ಲಾ ಹರಡುತ್ತಾ ಇದ್ದು.

ಎಣ್ಣೆ ಸಾಗುಸುವ ಹಡಗು ಮಣ್ಣ ಒಡೆದರೆ ಅದರಿಂದ ಅಪ್ಪ ನಷ್ಟವೋ ಯಾ ಅನಾಹುತ ಎಷ್ಟು ಹೇಳಿ ಹೇಳ್ಳಕ್ಕು. ಆದರೆ ಇಲ್ಲಿ ಹಾಂಗೆ ಹೇಳ್ಳೆ ಎಡಿಯ. ಭೂಗರ್ಭಲ್ಲಿ ಇಪ್ಪ ಎಣ್ಣೆಯ ನಿಕ್ಷೇಪ ಖಾಲಿ ಅಪ್ಪನ್ನಾರಕುದೆ ಎಣ್ಣೆ ಬತ್ತಾ ಇಕ್ಕು, ಒಂದು ವೇಳೆ ನಾವು ಅದರ ತಡೆಯದ್ದೇ ಇದ್ದರೆ.
ಕಳೆದ ಸುಮಾರು ಎರಡೂವರೆ ತಿಂಗಳಿಂದ ಎಣ್ಣೆ ನಿರಂತರವಾಗಿ ಸಮುದ್ರಕ್ಕೆ ಸೇರುತ್ತಾ ಇದ್ದು. ದಿನವೊಂದಕ್ಕೆ ೨೦,೦೦೦ ಬ್ಯಾರೆಲಿಂದ ೪೦,೦೦೦ ಬ್ಯಾರೆಲ್‌ವರೆಗೆ ಎಣ್ಣೆ ಸೋರುತ್ತಾ ಇದ್ದು ಹೇಳಿ ವಿಜ್ಞಾನಿಗೊ ಲೆಕ್ಕ ಹಾಕಿದ್ದವು.
ಎಣ್ಣೆಯ ಕೆಸರಿನಿಂದಾಗಿ ಅಮೆರಿಕದ ಲ್ಯೂಸಿಯಾನ, ಮಿಸ್ಸಿಸಿಪ್ಪಿ, ಅಲಬಾಮಾ, ಫ್ಲಾರಿಡಾ ಪ್ರದೇಶಂಗಳಲ್ಲಿ ಆತಂಕ ಸೃಷ್ಟಿಯಾಯಿದು.

ಎಣ್ಣೆಯ ಜಿಡ್ಡು ಹಿಡಿದು ಲೆಕ್ಕ ಇಲ್ಲದಷ್ಟು ಜೀವಚರಂಗ ಸತ್ತಿದು. ಅಪರೂಪವಾದ ಕಡಲಾಮೆ, ಪಕ್ಷಿಗೊ, ಡಾಲ್ಫಿನ್‌ಗ ಹೀಂಗೆ ಪಟ್ಟಿ ಬೆಳೆತ್ತಾ ಹೋವ್ತು. ಪ್ರವಾಸದ ಉದ್ಯಮಕ್ಕೆ (ಟೂರಿಸಂ) ಭಾರಿ ಪೆಟ್ಟು ಬಿದ್ದಿದು.
ಅಲ್ಯಾಣವಕ್ಕೆ ಪೈಸೆ ಅಪ್ಪದೇ ಅದರಿಂದಿದಾ.. ಹಾಂಗಾಗಿ ಇನ್ನೂ ರಜ್ಜ ಕಷ್ಟ. ಹೋಟ್ಳುಗವಕ್ಕೂ ಬಿಸುನೆಸ್ ಇಲ್ಲೆ. ಬಿಪಿ ಕಂಪೆನಿಯ ವಿರುದ್ಧ, ಅಮೆರಿಕದ ಸರ್ಕಾರದ ವಿರುದ್ಧ ಪರಿಸರವಾದಿಗ, ಜನಂಗ ಪ್ರತಿಭಟನೆ ಮಾಡ್ತಾ ಇದ್ದವು.

ಇದೆಲ್ಲದರ ನಡುವೆ ಎಣ್ಣೆ ಸೋರ್ತದರ ಬಂದು ಮಾಡುವ ಪ್ರಯತ್ನ ಸಾಗಿದ್ದು. ಇದರ ಒಟ್ಟೋಟ್ಟಿಂಗೆ ಇಷ್ಟರವರೆಗೆ ಸೋರಿದ ಎಣ್ಣೆಯಿಂದ ಅಪ್ಪ ಪರಿಣಾಮಗಳ ತಡವ ಯತ್ನವುದೇ ಸಾಗಿದ್ದು.
ಈ ಪ್ರದೇಶದ ಮೂವತ್ತು ಸಾವಿರ ಚದರ ಕಿಲೊಮೀಟರ್ ಸುತ್ತ ಹಡಗುಗಳ ಸಂಚಾರ ತಡದ್ದು, ಮೀನು ಹಿಡುವಲಾಗ ಹೇಳ್ತ ಓರ್ಡರುದೆ ಪಾಸಾಯಿದು.
ಅಲ್ಲಿ ಮನೆ ಮಾಡಿಗೊಂಡಿದ್ದವರ ಒಕ್ಕಲೆಬ್ಬಿಸಿದ್ದವು.

ಆಧುನಿಕ ಮನುಷ್ಯ ಮಾಡಿದ ಎಲ್ಲಾ ಯಂತ್ರಂಗೊ, ಸಾಧನೊಂಗ, ಎಣ್ಣೆ ಸೋರ‍್ತದರ ತಡವ ಪ್ರಯತ್ನ ಮಾಡ್ತಾ ಇದ್ದವು. ವಿಮಾನಂಗೊ, ಉಪಗ್ರಹಂಗೊ ಎಲ್ಲವುದೇ ಸಮುದ್ರಲ್ಲಿ ಎಣ್ಣೆಯ ಜಿಡ್ಡು ಹರಡುತ್ತ ಪ್ರಮಾಣವ ಅಳತ್ತಾ ಇದ್ದವು. ಹವಾಮಾನ ವಿಜ್ಞಾನಿಗೊ ಪ್ರತಿ ಕ್ಷಣದೆ ವರದಿ ಕೊಡುತ್ತಾ ಇದ್ದವು. ಜಿಡ್ಡು ಸಮುದ್ರದ ಕರೆಂಗೆ ಬಾರದ್ದ ಹಾಂಗೆ ತಿಳುದವರ ಟೀಮು ತಡೆಗಟ್ಟೆ ಕಟ್ಟುತ್ತಾ ಇದ್ದವು. ಎಣ್ಣೆ ಮೈಗೆ ಹಿಡಿದ ಪ್ರಾಣಿಗಳ ಪಕ್ಷಿಗಳ ಮೀಷುಲೆ ಪ್ರತ್ಯೇಕ ವ್ಯೆವಸ್ಥೆ ಮಾಡಿದ್ದವು. ಸಮುದ್ರದ ನೀರಿನ ಕ್ಲೀನು ಮಾಡ್ಲೆ ಹೆಲಿಕಾಪ್ಟರ್‌ಗ, ವಿಮಾನಂಗ ಆಕಾಶದಿಂದ ಮದ್ದು ಬಿಡ್ತಾ ಇದ್ದವು. (ರಬ್ಬರಿಂಗೆ ಹೆಲಿಕಾಪ್ಟರಿಲ್ಲಿ ಮದ್ದು ಬಿಡ್ತಾ ಹಾಂಗೆ).
ಇದು ನೀರಿನ ಮೇಲಾಣ ಕಥೆ ಆತು.

ಸಮುದ್ರದ ಅಡಿಲಿಪ್ಪ ಕಥೆ ಇನ್ನೂ ಜೋರಿನದ್ದು. ಸೋರುತ್ತ ಇಪ್ಪ ಎಣ್ಣೆಯ ಬೋರ್‌ವೆಲ್‌ನ ಬಾಯಿಗೆ ಮುಚ್ಚಲು ಹಾಯೆಕ್ಕನ್ನೆ.
(ಎರಡಿಂಚಿನ ಪೈಂಪಿಂಗೆ ಕ್ಯಾಪು ಹಾಕದರ ನೆಂಪುಮಾಡಿಗೊಳ್ಳಿ!) ನಾಗೇಶ ಹೆಗಡೆ ಬರತ್ತವು.. ಅಲ್ಲೊಂದು ಮಿನಿ ಯುದ್ಧಭೂಮಿಯೇ ನಿರ್ಮಾಣ ಆಯಿದು ಹೇಳಿಗೊಂಡು.
ಹತ್ತಾರು ವಿಶೇಷ ಹಡಗುಗೊ, ಸಬ್‌ಮೆರೀನ್‌ಗೊ (ಜಲಾಂತರ್ಗಾಮಿ-ಸಮುದ್ರದಡಿಲೇ ಈಜುವ ಹಡಗು. ಒಂದು ರೀತಿ ನೀರಾನೆಯ ಹಾಂಗೆ. ನೀರಿಂದ ಮೇಲೆ ಬಂದರೂ ತುಂಬ ಹೊತ್ತು ನಿಲ್ತಿಲ್ಲೆ!) ಯಂತ್ರ ಮನುಷ್ಯರು (ರೋಬೊಟ್). ಜನರೇಟರ್, ಅತ್ಯಾಧುನಿಕ ತೆಪ್ಪಂಗ ಹೀಂಗೆ ಹತ್ತು ಹಲವು ಯಂತ್ರಂಗ ಎಣ್ಣೆ ಬೋರ್‌ವೆಲ್‌ನ ಕೇಸಿಂಗ್ ಪೈಪಿಂಗೆ ಮುಚ್ಚಲು ಹಾಕಲೆ ಹೋಯ್ದು.
ಸಮುದ್ರಲ್ಲಿ ಒಂದೂವರೆ ಕಿ.ಲೋ ಮೀಟರ್ ಅಡಿಂಗೆ ಮನುಷ್ಯರಿಂಗೆ ಹೋಗಿ ಆ ಚಳಿಲಿ, ಒತ್ತಡಲ್ಲಿ, ಕಸ್ತಲೆಲಿ ಕೆಲಸ ಮಾಡ್ಲೆ ಎಡಿಗಾ? ಅದಕ್ಕಾಗಿ ಯಂತ್ರ ಮನುಷ್ಯರ ಕಳಿಸಿದ್ದು. ಆದರೂ ಬೋರ್‌ವೆಲ್ಲಿಂಗೆ ಮುಚ್ಚಲು ಹಾಕಲೆ ಎಡಿಗಾಯಿದಿಲ್ಲೆ.

ಬೋರ್‌ವೆಲ್‌ನ ಒಳದಿಕಂಗೆ ಅದರಿಂದ ಕಡಮ್ಮೆ ಅಳತೆಯ ಪೈಪಿನ ಇಳುಸುವ ಯತ್ನವೂ ನಡದತ್ತು.  (ಆರು ಇಂಚಿನ ಪೈಪಿನ ಒಳದಿಕೆ ನಾಲ್ಕು ಇಂಚಿನ ಪೈಪಿನ ಇಳಿಸಿದಾಂಗೆ).
ಅದರಲ್ಲಿ ರಜ್ಜ ಯಶಸ್ವಿಯಾದರೂ ಎಣ್ಣೆ ಬೋರ್‌ವೆಲ್ಲಿಂದ ಹೆರ ಬತ್ತಾನೇ ಇದ್ದು. ಆರು ಇಂಚಿನ ಪೈಪಿನ ಒಳಂಗೆ ನಾಲ್ಕಿಂಚಿನ ಪೈಪು ಹಾಕಿದರೆ ನಾಲ್ಕು ಇಂಚಿನಪ್ಪಷ್ಟು ನೀರು ಬಕ್ಕು. ಉಳುದೆರಡಿಂಚು ಹಾಂಗೆ ವೇಸ್ಟ್ ಆವುತ್ತಿದಾ!

ಅಕೇರಿಗೆ ಬೇರೆ ದಾರಿ ಕಾಣದ್ದೆ ತಜ್ಞರು ಒಂದು ಐಡಿಯಾ ಮಾಡಿದ್ದವು.
ಎರಡು ಕಿ.ಮೀ ಗುಂಡಿಲಿ ಎರಡೂ ದಿಕ್ಕಿಲ್ಲಿ ಅಡ್ಡವಾಗಿ ಬೋರು (ರಂಧ್ರ) ಕೊರವದು.
ಈ ಎರಡೂ ಬೋರುಗ ಸೋರುತ್ತಾ ಇಪ್ಪ ಬೋರಿಂಗೆ ತಾಗೆಕ್ಕು. ಅಷ್ಟಪ್ಪಗ ಈ ಬದಲಿ ಬೋರ್‌ವೆಲ್ಲಿಲಿ ಸೇಡಿ ಮಣ್ಣಿನ ತುಂಬುಸುವುದು.
ಎಣ್ಣೆಯ ಬೋರ್‌ವೆಲ್ಲಿಂಗೆ ಮಣ್ಣು ತುಂಬುವಗ ಸೋರ‍್ತದು ನಿಂಗು ಹೇಳ್ತದು ತಜ್ಞರಿಂಗೆ ಇಪ್ಪ ವಿಶ್ವಾಸ. ಆದರೆ ಹೀಂಗೆ ಮಾಡೆಕ್ಕಾರೆ ಇನ್ನೂ ಕೆಲವು ದಿನ ಬೇಕಕ್ಕು. ಕೆಲಸ ಸಾಗಿದ್ದು…

ಈ ಅವಘಡ ನಡೆದ ನಂತರ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಂಗೆ ಸರಿಯಾಗಿ ಒರಕ್ಕು ಬತ್ತಾ ಇಲ್ಲೆ.
ಇಷ್ಟ್ರವರೆಗೆ ಅವ° ನಾಲ್ಕು-ಐದು ಸರ್ತಿ ಆ ಜಾಗಕ್ಕೆ ಹೋಗಿ ಬೈಂದ°.
ವಿಶ್ವದ ದೊಡ್ಡಣ್ಣ ಹೇಳಿ ಎಲ್ಲರಿಂದಲೂ ದಿನೆಗೇಳಿಸಿಕೊಂಡು ಇಂಥ ದೊಡ್ಡ ಆಪತ್ತು ಸಂಭವಿಸಿ ಎರಡು ತಿಂಗಳು ಕಳೆದರೂ ಎಣ್ಣೆ ಸೋರುತ್ತದರ ತಡವಲೆ ಎಡಿಗಾಯಿದಿಲ್ಲನ್ನೇ ಹೇಳ್ತ ವೇದನೆ ಅವಂಗೆ.
ಬಿಪಿ ಕಂಪೆನಿ ಮೇಲೆ ಭಾರಿ ಒತ್ತಡ ಹಾಕುತ್ತಾ ಇದ್ದ°. ಆದರೆ ಎಂತ ಮಾಡುದು ಎಡಿಗಾವ್ತಾ ಇಲ್ಲೆ.
ಈ ಅವಘಡದಿಂದ ತೊಂದರೆ ಅನುಭವಿಸಿದ್ದ  ಅಲ್ಲಿನ ಜನಂಗೊಕ್ಕೆ ಕಂಪೆನಿ ಸೂಕ್ತ ಪರಿಹಾರವ (ಒಟ್ಟು ೧೪.೪ ಕೋಟಿ ಡಾಲರ್) ಕೊಟ್ಟಿದು.
(ಭಾರತಲ್ಲಿ ಇದು ಸಾಧ್ಯವಾ-ಉದಾಹರಣೆ ಭೋಪಾಲ ಗೇಸು ದುರಂತದ ಸಂತ್ರಸ್ತರಿಂಗೆ ಇನ್ನುದೆ ಸರಿ ಪರಿಹಾರ ಸಿಕ್ಕಿದ್ದಿಲ್ಲೆ.. ಸಿಕ್ಕಿದ್ದದೂ ಅರೆ ಕಾಸಿನ ಮಜ್ಜಿಗೆಗೆ ಸಾಲ…) ಎಣ್ಣೆ ಸೋರುತ್ತದರ ತಡವಲೆ ಕಂಪೆನಿ ಇಲ್ಲಿವರೆಗೆ ೩೧೨ ಕೋಟಿ ಡಾಲರ್ ಖರ್ಚು ಮಾಡಿದ್ದಡ.
ಕಂಪೆನಿ ಮೊನ್ನೆ ಮೊನ್ನೆ ಲಂಡನ್‌ನಿಲ್ಲಿ ಹೇಳಿದ್ದು.

ತೈಲ ಸೋರುತ್ತ ಅವಘಡವ ಅಮೆರಿಕ ಇಷ್ಟವರೆಗೆ ಕಂಡಿರದ್ದ ಅತ್ಯಂತ ಗಂಭೀರ ಪ್ರಕೃತಿ ವಿಕೋಪ ಹೇಳಿ ತಿಳಿದವು ಹೇಳ್ತಾ ಇದ್ದವು.
ಅಮೆರಿಕ್ಕಲ್ಲಿ ಪ್ರತೀ ವರ್ಷ ಕತ್ರೀನಾ (ಕೈಫ್ ಅಲ್ಲ!) ಹೇಳ್ತ ಚಂಡ ಮಾರುತ ಅಪ್ಪಳುಸುತ್ತು.
ಅದರಿಂದಾದ ನಷ್ಟದ ಇಪ್ಪತ್ತು ಪಟ್ಟು ಹೆಚ್ಚು ನಷ್ಟ ಈ ಎಣ್ಣೆಂದ ಆಯ್ದಡ.
ಇನ್ನು ಕೆಲವು ತಿಳಿದವರ ವಾದವೇ ಬೇರೆ. ಇಷ್ಟ್ರವರೆಗೆ ನೀರಿನೊಟ್ಟಿಂಗೆ ಮಿಕ್ಸ್ ಆದ ಎಣ್ಣೆ (ಇಂಧನ)ನಮ್ಮ ಉಪಯೋಗಕ್ಕೆ ಮಣ್ಣ ಸಿಕ್ಕಿದ್ದರೆ ಅಂದಾಜಿ ಒಂದು ಲಕ್ಷ ಕಾರುಗೊವಕ್ಕೆ, ಸಾವಿರ ಹಡಗುಗೊಕ್ಕೆ ಒಂದು ವರ್ಷಕ್ಕೆ ಸಾಕಾವುತ್ತಿತಡ.

ಎಂಥ ದುರಂತ, ಎಲ್ಲಾ ಅತ್ಯಾಧುನಿಕ ಪರಕರಂಗ ಸಾಮಗ್ರಿಗ ಅಲ್ಲದ್ದೆ ಶ್ರೀಮಂತ ದೇಶ, ವಿಶ್ವದ ದೊಡ್ಡಣ್ಣ ಹೇಳಿ ದಿನೆಗೆಳಿಸಿಕೊಳ್ಳುತ್ತ  ಅಮೆರಿಕಕ್ಕೆ ಈ ಆಪತ್ತಿನ ಸರಿಯಾಗಿ ನಿರ್ವಹಣೆ ಮಾಡ್ಲೆ ಎಡಿಗಾಯಿದಿಲ್ಲೆ.. ಹೇಳ್ರೆ ಅಲ್ಲಿನ ಪರಿಸ್ಥಿತಿಯ ನಿಂಗೊ ಲೆಕ್ಕಹಾಕಿ.

ಕಡೇ ಮಾತು: ದೊಡ್ಡವರಿಂಗೂ ದೇವರು ಒಳ್ಳೆ ಸಮಯಲ್ಲಿ ಬುದ್ಧಿ ಕಲುಸುತ್ತಾ ಹೇಳುದು ಇದಕ್ಕೇ ಆದಿಕ್ಕು ಅಲ್ಲದಾ…

ಅಮೆರಿಕದ ಸಮುದ್ರಲ್ಲಿ ಎಣ್ಣೆ ಸೋರುತ್ತ ಸುದ್ದಿ..., 4.3 out of 10 based on 3 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಬಲ್ನಾಡುಮಾಣಿ

  ಹತ್ತಿಪ್ಪತ್ತು-ನೂರು-ಸಾವಿರ ಜೆನಂಗ ಸತ್ತಪ್ಪಾಗ ಎಲ್ಲಾ ಪೇಪರುಗೋ, ಟೀವಿ ಚಾನಲುಗೋ ವಾರಗಟ್ಟಲೆ ಅದರ ಸುದ್ದಿ ಹೇಳುತ್ತವು.. ಆದರೆ ಲಕ್ಶಾಂತರ ಅಪರೂಪದ ಜೀವಿಗ ಎಣ್ಣೆಯ ಜಿಡ್ದಿಲಿ ವಾರಗಟ್ಟಲೆ ಒದ್ದಾಡಿ ಸಾವದು ಒಂದು ಸುದ್ದಿಯೆ ಅಯ್ದಿಲ್ಲೆ. ಅದು ಆದ್ದದು ಬ್ರಿಟಿಷ್ ಪೆಟ್ರೋಲಿಯಂ ನ ಬೇಜವಾಬ್ದಾರಿತನಂದಲೆ ಹೇಳುವ ವಿಷಯ ಗೊಂತಿಪ್ಪದೆ.. ಸಾಂಧರ್ಬಿಕ ಲೇಖನ.. ಈಗಾಗಲೆ ಮುಂದಾಣ ಹತ್ತು ವರ್ಷಲ್ಲಿಯುದೆ ಸರಿ ಮಾಡ್ಲೆಡಿಯದ್ದಷ್ಟು ಪೆಟ್ಟು ತಿಂದಿದು ಅಲ್ಲಿಯಾಣ ಪ್ರಕೃತಿ. ತಜ್ಞರ ಪ್ರಯತ್ನಕ್ಕೆ ಫಲ ಸಿಕ್ಕಿ ಅಲ್ಲಿಯಾಣ ಮುಗ್ಧ ಜೀವಿಗಳ ಜೀವ ಉಳಿಯಲ್ಲಿ ಹೇಳುವದೇ ಎನ್ನ ಹಾರೈಕೆ..

  [Reply]

  VA:F [1.9.22_1171]
  Rating: 0 (from 0 votes)
 2. ಹಳೆಮನೆ ಅಣ್ಣ

  ವಿದೇಶೀ ವಿಜ್ಞಾನಿಗೊ ಭೂಮಿ ಬೆಶಿ ಅಪ್ಪದಕ್ಕೆ ಭಾರತದ ಭತ್ತದ ಗೆದ್ದೆ ಕಾರಣ ಹೇಳಿ ಹೇಳಿದ್ದವಡ. ನಮ್ಮ ಭತ್ತದ ಗೆದ್ದೆಗಳುದೆ ದನಗಳುದೆ ಮೀಥೇನ್ ಗ್ಯಾಸ್ ಬಿಡುದಡ. ಅವರ ಕಾರ್ಖಾನೆಗೊ, ವಾಹನಂಗೊ ಬಿಡುದು ಎಂತರ? ನಿಜವಾಗಿಯೂ ವಾತಾವರಣ ಮಾಲಿನ್ಯ ಅಪ್ಪದು ಅವರಿಂದಾಗಿಯೇ. ದೂರು ಹಾಕುದು ಭಾರತದವಕ್ಕೆ. ಎಂತ ಆದರೂ ಬ್ರಾಹ್ಮಣರ ದೂರುತ್ತ ಹಾಂಗೆ… ಹಾಂಗಾದರೆ ಅಲ್ಲಿಪ್ಪ ಮನುಷ್ಯರು ಮೀಥೇನ್ ಗ್ಯಾಸ್ ಬಿಡ್ತವೇ ಇಲ್ಯಾ?

  [Reply]

  ಡೈಮಂಡು ಭಾವ

  keppanna Reply:

  oppa kottadkke danyavada harishanna..
  ningaLa aBiprayakke enna sahamat iddu…

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ. ಹಳೆಮನೆ

  ಒಂದು ವೈಜ್ನಾನಿಕ ಲೇಖನವ ನಮ್ಮ ಭಾಷೆಲಿ ಎಲ್ಲರಿಂಗೂ ಅರ್ಥ ಅಪ್ಪ ಹಾಂಗೆ, ಎಣ್ಣೆ ಸೋರಿದ್ದು ಹೇಂಗೆ, ಅದರ ತಡವಲೆ ಎಂತ ಮಾಡ್ತವು, ವಿವರಿಸಿದ್ದು ತುಂಬಾ ಲಾಯಿಕ್ ಆಯಿದು.
  ಬಹುಷಃ ಹೀಂಗಿಪ್ಪ ಅಫಘಡ ನಮ್ಮ ದೇಶದವರಿಂದ ಆಗಿದ್ದರೆ ಈಗ ಎಂತೆಲ್ಲ ಗೌಜಿ ಆವುತ್ತಿತ್ತು ಗೊಂತಿಲ್ಲೆ.

  [Reply]

  ಗುರಿಕ್ಕಾರ°

  ಗುರಿಕ್ಕಾರ° Reply:

  ಕೆಪ್ಪಣ್ಣೋ!! ತುಂಬಾ ಒಳ್ಳೆ ಸಕಾಲಿಕ ಶುದ್ದಿ,.
  ಇದೇ ಶುದ್ದಿಗೆ ಪೂರಕವಾಗಿ ಇನ್ನೂ ಕೆಲವು ಮನಸ್ಸುಕಲಂಕುವ ಪಟಂಗೊ ಇಪ್ಪ ಪಟದ ಪುಸ್ತಕವ ಶರ್ಮಪ್ಪಚ್ಚಿ ಕೊಟ್ಟುಕಳುಸಿದ್ದವು,
  ಬೇಕಾರೆ ಈ ಸಂಕೊಲೆಲಿ ನೇಲೆಕು!:
  (http://oppanna.com/wp-content/uploads/2010/07/Mexico-Oil-Spill.pdf

  ಶರ್ಮಪ್ಪಚ್ಚಿ, ತುಂಬಾ ಧನ್ಯವಾದಂಗೊ.
  ಬೈಲಿನವಕ್ಕೆ ನೋಡ್ಳೆ ಕೊಟ್ಟು ಕಳುಸಿದ್ದದು. ಎಲ್ಲೊರೂ ನೋಡಿ, ಅಭಿಪ್ರಾಯ ಹೇಳಿಕ್ಕಿ. ಆತೋ?

  [Reply]

  ಡೈಮಂಡು ಭಾವ

  keppanna Reply:

  sharmappachchi oppakke danyavada… barathalli manna agiddare ninga helidange kanditha dodda goujiye Avuttitu…

  helidange… ninga kalisida photo tuMba laika ittu.. ennattaru photo ittanne adara upload madle rajja banga atu.. akerige gurikkarne sahaya mAdida…

  [Reply]

  VA:F [1.9.22_1171]
  Rating: 0 (from 0 votes)
 4. ಶ್ರೀಶಣ್ಣ
  ಶ್ರೀಶ. ಹೊಸಬೆಟ್ಟು

  ಮನಸ್ಸು ಕಲಕುವ ದೃಶ್ಯಂಗೊ.
  ಶರ್ಮಪ್ಪಚ್ಚಿ ಹತ್ರ ಹೀಂಗಿಪ್ಪದು ಎಂತಾರು ಇಕ್ಕು ಹೇಳಿ ಜಾನ್ಸಿದೆ. ಕಳಿಸಿ ಕೊಟ್ಟ ಅವಂಗೂ ಪ್ರಕಟಿಸಿದ ಗುರಿಕ್ಕಾರ್ರಿಂಗೂ ಧನ್ಯವಾದಂಗೊ

  [Reply]

  VA:F [1.9.22_1171]
  Rating: 0 (from 0 votes)
 5. ಒಪ್ಪಣ್ಣ

  ನಮಸ್ಕಾರ ಭಾವ!
  ತುಂಬಾ ಲಾಯಿಕ ಬರದ್ದೆ, ಲೇಖನ ನೋಡಿ ಕೊಶಿ ಆತು, ವಿಚಾರ ನೋಡಿ ಬೇಜಾರಾತು! :-(

  ಆರಿಂಗೂ ಉಪಯೋಗ ಇಲ್ಲದ್ದ ಹಾಂಗೆ ಅಮೂಲ್ಯ ಸಂಪತ್ತುಗೊ ಹಾಳಪ್ಪದು ಕಂಡ್ರೆ ಭೂಮಿಗೆ ಅದೆಷ್ಟು ಬೇಜಾರಾವುತ್ತೋ ಏನೋ!
  ಅಲ್ಲದಾ?

  ಬೇಗ ಸೋರುದು ನಿಲ್ಲಲಿ, ನಮ್ಮಂದ ಮುಂದಾಣೋರಿಂಗೂ ರಜ ಒಳಿಯಲಿ.

  [Reply]

  VA:F [1.9.22_1171]
  Rating: 0 (from 0 votes)
 6. ಡಾಮಹೇಶಣ್ಣ
  ಮಹೇಶ, ಕೂಳಕ್ಕೋಡ್ಲು

  ವಿಷಯ ಅರ್ಥಮಾಡಿಸಿದ್ದದು ಲಾಯಿಕಾಯಿದು ಭಾವ,
  {ಚಿತ್ರಕೃಪೆ ಎಪಿ} ಈ `ಎಪಿ’ ಹೇಳಿರೆ ಆರು? `ಕೆಪಿ’ ಹೇಳಿರೆ ಎಡಪ್ಪಾಡಿ ಭಾವನ ನೆಂಪಾವುತ್ತು:)
  ಎಪಿ ಹೇಳಿರೆ ಆರಪ್ಪ? `ಬಿಪಿ’ ಹೇಳಿರೆ ಒಬಾಮನ ಬೀಪಿ ಹೆಚ್ಚು ಮಾಡಿದ ಬ್ರಿಟಿಶ್ ಪೆಟ್ರೋಲಿಯಂ ಹೇಳಿ ಅಂದಾಜಾತು. ಎಪಿ ಹೇಳಿರೆ, ಅಮೆರಿಕನ್ ಪೆಟ್ರೋಲಿಯಮ್ಮೋ ಅಲ್ಲದ್ರೆ ಅಮೇರಿಕನ್ ಪ್ರೆಸ್ಸೋ? ಗೊಂತಾವ್ತೆ ಇಲ್ಲೆ!!

  [Reply]

  ಡೈಮಂಡು ಭಾವ

  ಕೆಪ್ಪಣ್ಣ Reply:

  ನಿಂಗಳ ಒಪ್ಪಕ್ಕೆ ಧನ್ಯವಾದ…
  ಎಪಿ (ap) ಹೇಳಿದರೆ ಅಸೋಸಿಯೇಟೆಡ್‌ ಪ್ರೆಸ್‌ (associated press). ಇದು ಅಮೆರಿಕದ ನ್ಯೂಸ್‌ ಏಜೆನ್ಸಿ.
  ದಯವಿಟ್ಟು ಕ್ಷಮಿಸೆಕ್ಕು.. ಆನು ಇದರ ಮೊದಲೇ ಬರೆಕಿತ್ತು…

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಶುದ್ದಿಕ್ಕಾರ°ಎರುಂಬು ಅಪ್ಪಚ್ಚಿಉಡುಪುಮೂಲೆ ಅಪ್ಪಚ್ಚಿವೇಣೂರಣ್ಣಶಾಂತತ್ತೆರಾಜಣ್ಣವೇಣಿಯಕ್ಕ°ಶರ್ಮಪ್ಪಚ್ಚಿನೀರ್ಕಜೆ ಮಹೇಶಪುಟ್ಟಬಾವ°ಪಟಿಕಲ್ಲಪ್ಪಚ್ಚಿಪ್ರಕಾಶಪ್ಪಚ್ಚಿದೊಡ್ಡಭಾವಬಟ್ಟಮಾವ°ವಾಣಿ ಚಿಕ್ಕಮ್ಮಗೋಪಾಲಣ್ಣಪವನಜಮಾವಪುತ್ತೂರುಬಾವಒಪ್ಪಕ್ಕಕಳಾಯಿ ಗೀತತ್ತೆಕೇಜಿಮಾವ°ಸುಭಗಅಕ್ಷರ°ಶ್ರೀಅಕ್ಕ°ವಿಜಯತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ