ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ನಮ್ಮ ನೆಡೂಕೆ ಎಷ್ಟೋ ಜೆನ ಇದ್ದವು – ನಿಜವಾಗಿ ಅವು ಎಂತ ಆಗಿರ್ತವಿಲ್ಲೆಯೋ – ಅದರ ಹೇಳಿಗೊಳ್ತವು.
ಎನಗೆಂತೂ ಗೊಂತಿಲ್ಲೆಪ್ಪ – ಹೇಳ್ತ ಘನವಿದ್ವಾಂಸರೂ ಇದ್ದವು, ಅವರ ಗೊಂತಿದ್ದು, ಹೀಂಗೆ ಮಾಡಿದ್ದೆ .. ಇತ್ಯಾದಿ ಅಂತೆಅಂತೆ ಹೇಳುವ
ಬಾಯಿಬಡ್ಕಂಗಳೂ ಇದ್ದವು.ಅಂತವರ ನೆಡುಕೆ ನವಗೆ ಕಾಂಬ ವಿಶೇಷ ವೆಗ್ತಿ ಈ ಕೆಪ್ಪಣ್ಣ.
ಕೆಪ್ಪಣ್ಣ ಹೇಳಿತ್ತುಕಂಡ್ರೆ, ನಮ್ಮದೇ ಬೈಲಿನ ಆಚ ಹೊಡೇಲಿ – ವಜ್ರಾಂಗಿಲಿ ಇರ್ತ ಬಾವಯ್ಯ°!
ಅವು ನಿಜವಾಗಿ ಕೆಪ್ಪಣ್ಣ ಅಲ್ಲದ್ರೂ, ಸಮಾಜಲ್ಲಿಪ್ಪ ಚಿಂತನೆಗಳ ಪ್ರತಿನಿಧಿಸುಲೆ ಬೇಕಾಗಿ ಅವು ಕೆಪ್ಪಣ್ಣ ಆದವು.ಬರವದು ಹೇಳಿರೆ ಅವಕ್ಕೆ ಕೊಶಿ. ಓದುದು ಹೇಳಿರೆ ಇನ್ನೂ ಕೊಶಿ. (ಅವನೇ ಬರದ್ದರ ಅವಂಗೆ ಓದುಲೆಡಿತ್ತಿಲ್ಲೆನ್ನೇ ಹೇಳುದು ಒಂದೇ ಅವರ ಬೇಜಾರು!)
ಮುಳಿಯಾಲಪ್ಪಚ್ಚಿಯ ಹಾಂಗೆ ಪೇಪರು ಓದುಗು, ಮೂರು ಹೊತ್ತುದೇ. ನಾಲ್ಕನೇ ಹೊತ್ತು ರಜ್ಜ ಉಂಡಿಕ್ಕಿ ಒರಗ್ಗು.
ಎಲ್ಯಾರು ಎಡೆ ಸಿಕ್ಕಿರೆ ಒಪ್ಪಣ್ಣನ ಬೈಲಿಂಗೆ ಬಂದು ಹೊಸ ಶುದ್ದಿಗಳ ತಿಳ್ಕೊಂಡು ಹೋಕು.ಈಗ ಹೊಸಾ ಶುದ್ದಿ ಎಂತರ ಹೇಳಿರೆ, ಕೆಪ್ಪಣ್ಣ ನಮ್ಮ ಬೈಲಿಂಗೆ ಶುದ್ದಿ ಹೇಳುಲೆ ಸುರು ಮಾಡಿದ°.
ಜೀವನಕ್ಕೆ, ಮನಸ್ಸಿಂಗೆ ಹತ್ತರಾಣ ಶುದ್ದಿಗಳ ಅವ ಹೇಳುಗು. ತುಂಬಾ ಲಾಯಿಕಲ್ಲಿ ವಿವರುಸುಗು.
ಇಂಟರುನೆಟ್ಟಿಲಿ ಎಂತದೋ ಬ್ಲೋಗು ಮಾಡಿದ್ದನಡ, (keppanna.blogspot.com), ಪುರುಸೊತ್ತಾದರೆ ಅದನ್ನೂ ಓದಿಕ್ಕಿ.
ಅಂತೂ ನಮ್ಮ ನೆರೆಕರೆಗೆ ಸೇರಿಗೊಂಡು, ನಮ್ಮ ಒಟ್ಟೊಟ್ಟಿಂಗೆ ಶುದ್ದಿಗಳ ಹೇಳಿಗೊಂಡು ನಮ್ಮ ಒಟ್ಟಿಂಗೆ ಕುಶಾಲು ಮಾತಾಡಿಗೊಂಡು ಕೆಪ್ಪಣ್ಣ ಆಗಿ ನಮ್ಮೊಟ್ಟಿಂಗೆ ಇಕ್ಕು.ನಿಜಜೀವನಲ್ಲಿ ದೊಡ್ಡ ಚಿಂತನೆಗೊ ಇಪ್ಪ ವೆಗ್ತಿ ಆದರೂ, ಈ ಜಾಗೆಲಿ ಕೆಪ್ಪಣ್ಣ ಆಗಿಕ್ಕು.
ಅವನ ಶುದ್ದಿಗೊಕ್ಕೂ ಒಪ್ಪ ಕೊಟ್ಟು, ಇನ್ನೂ ಹೆಚ್ಚು ಹೆಚ್ಚು ಶುದ್ದಿಗೊ ಬಪ್ಪಲೆ ಪ್ರೋತ್ಸಾಹಿಸೇಕು ಹೇಳಿ ಬೈಲಿನವರತ್ರೆ ಕೇಳಿಗೊಂಬದು.
~
ಒಪ್ಪಣ್ಣ
ಕೆಪ್ಪಣ್ಣನ ಶುದ್ದಿಗೊ ಒಪ್ಪಣ್ಣನ ಬೈಲಿಲಿ..
ಇದೇ ಅಂಕಣಲ್ಲಿಸದ್ಯಲ್ಲೇ ಶುರು..
ಕಾದೊಂಡಿರಿ, ಆತೋ? ಏ°?
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಗುರಿಕ್ಕಾರ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
Register:ರಿಜಿಸ್ತ್ರಿ
Facebook:ಮೋರೆಪುಟ