ಬರದೋರು :   ಶೇಡಿಗುಮ್ಮೆ ಪುಳ್ಳಿ    on   07/02/2012    27 ಒಪ್ಪಂಗೊ

ಮೆಣಸು ಕಾರವೇ ಅಕ್ಕಾ
ಹುಳಿ ಉಪ್ಪು ಹಾಕಲಾಗದಾ

ಕರಿಕೇನೆ ಗೆಂಡೆಯನ್ನೇ ನೀ ಬೇಶಿದೇ
ತಾಳು, ಕೊದಿಲು ಮಾಡಿ ಅದರ ಎನಗೆ ತಿನುಸಿದೇ
ಮಜ್ಜಿಗೆಯ ಕುಡುದೂ ಕುಡುದೂ ಸಾಕಾಯಿದೂ
ತೊರುಸದ್ದರೆ ಸಾಕಿನ್ನು ನಿಜವಾಗಿಯೂ

ಎಷ್ಟೊಂದು ಮೆಣಸು ಹಾಕಿ ನೀ ಬೇಶಿದೇ
ಹುಳಿ ಉಪ್ಪು ಹಾಕುವದರಾ ನೀ ಮರತ್ತಿದೇ
ತಿಂಬಲೆ ಎಡಿಯದ್ದೆ ಅದರಾ ನಾ ಸೋತಿದೇ
ಹೀಂಗೆಂತಕೇ ಮಾಡಿದೇ ನೀ ಅಡಿಗೆಯಾ

ಹೊಸರುಚಿಯ ಓದಿ ನೋಡಿ ನೀ ಕಲ್ತಿದೇ
ನಿನ್ನಡಿಗೆ ಉಂಡಾ ಆನು ಕಾರಿದೇ
ಒಂದಾರು ನೇರ್ಪಕ್ಕೆ ನೀ ಮಾಡ್ಲಾಗದಾ
ನಿನ್ನ ಬಾಯಿಗೇ ಇದು ಖಾರ ಆಗದಾ 

27 thoughts on “ಖಾರದ ಬಾಯಿ

  1. ಏವದೋ ಬಾಯಮ್ಮನ ಬಗ್ಗೆ ಹೇಳಿದ್ದೊ ಪುಳ್ಳಿ ? ನಮ್ಮ ಅಕ್ಕ ತಂಗೆಕ್ಕೊ ಎಲ್ಲ ಚೆಂದಕೆ ಮಾಡ್ತವಪ್ಪ . ಏವ ತಕರಾರೂ ಇಲ್ಲೆ.

    1. ಏವದೋ ಬಾಯಮ್ಮನ ಬಗ್ಗೆ ಹೇಳಿದ್ದೊ ಪುಳ್ಳಿ ? – ಅಲ್ಲಪ್ಪಾ
      ನಮ್ಮ ಅಕ್ಕ ತಂಗೆಕ್ಕೊ ಎಲ್ಲ ಚೆಂದಕೆ ಮಾಡ್ತವಪ್ಪ – ಅಪ್ಪಪ್ಪು – ಊಟ

  2. ಹೋಯಿ ಮೆಣಸು ಖಾರ ಇಪ್ಪೊದೂಳಿ ಗೊ೦ತಿದ್ಸು ;)…
    ಆನು ಅಣ್ಣನ ಹತ್ರೆ ಗುಟ್ಟು ಹೇಳುವಗ ಹಾ೦ಗೆ ಹೇಳಿದ್ಸಪ್ಪ {ಹಾಲುಬಾಯಿ ಮಾಂತ್ರ..}
    ನಿ೦ಗೊ ಎನ್ನ ಹೀ೦ಗೆಲ್ಲ ಬಡಿದೆಲ್ಲ ಹಾಕುತ್ಸೀ ಹೇಳಿ ಕನಸು ಬಿದ್ದಿತ್ತು [;)] ಆಪ್ಪೊ ಅಲ್ಲದೋ ಹೇಳಿ ನೋಡಿದ್ದಾನು. ಅಪ್ಪದ!

  3. ಅ೦ತೂ ಇ೦ತೂ ಅಣ್ಣನ ಹೊಸರುಚಿಯ ಊಟ ಗೌಜಿ ಆತಲ್ದ! ಹಾಲು ಬಾಯಿ ತಿ೦ದಿಕ್ಕಿ ಆತ, ಇನ್ನೂ ಗೌಜಿ ಅಕ್ಕು, ಆತ [;)] ಎನಗೆ ಹಾಲು ಬಾಯಿ ಮಾ೦ತ್ರ- ಎನ್ನಜ್ಜಿಗೆ ಭಯ೦ಕರ ಖುಶಿ ಆಯ್ದದು [:D]

    1. {ಎನ್ನಜ್ಜಿಗೆ ಭಯ೦ಕರ ಖುಶಿ ಆಯ್ದದು } .. ಹಲ್ಲಿಲ್ಲದ್ದವಕ್ಕೆ ಅದು ಖುಶಿ ಅಪ್ಪದು ಸರಿ.
      {ಎನಗೆ ಹಾಲು ಬಾಯಿ ಮಾ೦ತ್ರ } … ನಿನಗೆಂತ್ಸಕೆ ಹಾಲುಬಾಯಿ ಮಾಂತ್ರ..?

  4. ಬೀಟುರೂಟು ಹಲ್ವ ಆತು, ಕ್ಯಾರೆಟ್ ಹಲ್ವ ಆತು….
    ಇನ್ನು ಕೇನೆಗೆ೦ಡೆ ಹಲ್ವ ಮಾಡಿದರೆ ಹೇ೦ಗೆ?? 😉
    ಶೇಡಿಗುಮ್ಮೆ ಅಣ್ಣ ಹೊಸರುಚಿಯ ಮಾಡುಲೆ ರಜ್ಜ ಸಲಹೆ ಕೊಡಿ…..

    1. ಅಕ್ಕೋ ನಾವು ಕೇನೆ ಗೆಂಡೆ ಹಲುವ ಮಾಡುಲೆ ಹೇಳಿ ಕೊಟ್ರೆ ಮತ್ತೆ ವೇಣಿ ಅಕ್ಕ ಹೇಳಿ ಕೊಡುದರ ಆರುದೇ ನೋಡವು ಹಾಂಗಾಗಿ ಇದಾ ನಾವು ಗುಟ್ಟಿಲಿ ಹೇಳುದು. ನಿಂಗೊ ಹಲುವ ಮಾಡಿ ಕೇನೆ ಗೆಂಡೆ ಹತ್ತರೆ ಮಡುಗಿ ಆತೋ ಕೇಳಿದವಕ್ಕೆ ಕೇನೆ ಗೆಂಡೆಯೂ ಇಕ್ಕು ಹಲುವವೂ ಸಿಕ್ಕುಗಿದಾ…. ಇದರ ಯಾರಿಂಗೂ ಹೇಳಿಕ್ಕೆಡಿ ಆತೋ ಮತ್ತೆ ನವಗೆ ಕಷ್ಟ ಅಕ್ಕು ಹ್ಮ್ಮ್.

  5. ರೈಸಿದ್ದು ಭಾವ.. ಹೊಸರುಚಿಯ ಹೆಚ್ಚು ಪ್ರಯೋಗ ಮಾಡೆಡಿ.. 😉
    ನಮ್ಮ ವೇಣಿಯಕ್ಕ ಮತ್ತೆ ಚೂರಿಬೈಲು ದೀಪಕ್ಕ ಹೇಳಿಕೊಟಷ್ಟೇ ಮಾಡಿರೆ ಸಾಕು.. ಆತೋ??

    1. ಚುಬ್ಬಣ್ಣೋ ನಮ್ಮದು ದಿನ ದಿನವೂ ಹೊಸರುಚಿಯೇ….;)
      ಒಪ್ಪಕ್ಕೆ ಧನ್ಯವಾದಂಗೊ….

  6. ಹಾಲುಬಾಯಿ ತಿಂದ ಮೇಲೆ ಖಾರ ಬಾಯಿ!
    ಸೀವು ತಿಂದ ಕೂಡ್ಲೆ ಕೆಲವರಿಂಗೆ ಕಾರ ತಿನ್ನೆಕ್ಕು ಹೇಳಿ ಆವುತ್ತು-ಕೆಲವರು ಊಟ ಆದ ಕೂಡಲೇ ಎಲೆ ತಿಂಬದು ಅದಕ್ಕೇ!
    ಉತ್ತಮ ಪದ್ಯ -ಆಶು ಕವಿತ್ವವ ಹೀಂಗೆ ಬೆಳೆಸಿಕೊಂಡು ಹೋಯೆಕ್ಕು-ಹೇಳಿ ಹಾರೈಕೆಗೊ.

    1. ಗೋಪಾಲಣ್ಣನ ಪ್ರೋತ್ಸಾಹಕ್ಕೆ ಧನ್ಯವಾದಂಗೊ….

  7. ಹೊಸದಾಗಿ ಮದುವೆಯಾದ ಹೆಂಡತಿಯ ನೆನಪಿಸಿಗೊಂಡು ಉಂಡರೆ
    ಅಮ್ಮ,ಅಕ್ಕ ಮಾಡಿದ ಅಡಿಗೆ ರುಚಿಯಾಗ ಬಾಯಿಗೆ
    ಅಮ್ಮ,ಅಕ್ಕ ನ ಅಡಿಗೆಯ ಮಾಧುರ್ಯವ ಸವಿವಲೆ
    ತಮ್ಮ ನೀ ಭಾವಿಸಿಗೊಲ್ಲೆಕ್ಕು ಆ ಅಮರ ವಾತ್ಸಲ್ಯವ…

    1. ಜಯಕ್ಕನ ಒಪ್ಪಕ್ಕೆ ನಮ್ಮದೂ ಒಂದೊಪ್ಪ.

  8. ಕೇನೆ ತೊರ್ಸುತ್ತರೆ ಹುಳಿ ಮಜ್ಜಿಗೆ ಕುಡುದರಾತು
    ಬಾಯಿ ಖಾರ ಆವುತ್ತರೆ ಹಾಲುಬಾಯಿ ತಿಂದರಾತು…ಅಪ್ಪೋ !

    1. ಮಾವಾ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದಂಗೊ …
      ತೊರುಸುತ್ತಕ್ಕೆ ತೆಂಗಿನೆಣ್ಣೆ ಬಾಯಿಲಿ ಹಾಕಿಯೊಂಡರೂ ಆವುತ್ತಡಾ ಅಪ್ಪೋ…

    1. ಕೇವಳದಣ್ಣಾ,
      ಒಪ್ಪ ಕೊಟ್ಟದ್ದಕ್ಕೆ ಧನ್ಯವಾದಂಗೊ …

    1. ಸೀವು ತಲಗೆ ಹಿಡಿವದು ಬೇಡ ಹೇಳಿ ಅಲ್ಲ ಆತೋ 😉

      1. ಸೀವು ತಿಂದ ಕೂಡ್ಲೆ ಕೆಲವು ಜೆನಂಗೊಕ್ಕೆ ಖಾರ ಬೇಕಾವುತ್ತು.. ಹಾಂಗೋ ಗ್ರೇಶಿದೆ. 😉

        1. ನವಗೆ ಕಾರ ಬೇಡಪ್ಪಾ, ಕಾರವೋ ಹು!

  9. [ಹುಳಿ ಉಪ್ಪು ಹಾಕುವದರಾ ನೀ ಮರತ್ತಿದೇ] – ಇಲ್ಲೆಪ್ಪಾ… ಅಷ್ಟು ಹುಳಿ ಉಪ್ಪು ಹಾಕಿದ್ದಡಾ! ಹೆಚ್ಹಿಗಾದಾರೆ ಖಾರ ನಾಟ ಇದಾ ನಿಂಗೊಗೆ !!

    [ತೊರುಸದ್ದರೆ ಸಾಕಿನ್ನು ನಿಜವಾಗಿಯೂ] – ಹೇಂಗೆ ಭಾವ.. ರಜಾ ಹುಳಿ ಉಪ್ಪು ಅಂತೇ ಬಾಯಿಗೆ ಹಾಕಿಯೊಂಬದು ಒಳ್ಳೆದೋ ಮತ್ತೆ ತೊರುಸದ್ದಿಪ್ಪಲೆ!

    ಹೊಸರುಚಿಯ ಓದಿ ನೋಡಿ ಅಕ್ಕ ತಮ್ಮಂಗೆ ಮಾಡಿದ ಪ್ರಥಮ ಪ್ರಯೋಗ ಒಳ್ಳೆದಾಯ್ದು ಭಾವ! ಹೇಳಿತ್ತು -‘ಚೆನ್ನೈವಾಣಿ’

    1. ಏ ಅಪ್ಪಚ್ಚಿ, 😀
      ಇದಾ, ನಿ೦ಗೊ ಹೀ೦ಗೆಲ್ಲ ಪ್ರಯೋಗ ಮಾಡಿಕ್ಕೆಡಿ.. 😛
      ಹಾ.. ಹೇಳಿದ್ದಿಲ್ಲೆ ಬೇಡ.. 😉

      1. ಏ ಭಾವಾ ನೀನು ತಪಸ್ಸು ಮಾಡುವಲ್ಲಿಂದ ಏವಗ ಎದ್ದದ್ದು. ಇನ್ನು ಸಂಶೋದನೆ ಎಂತಾರು ಮಾಡ್ತ ಅಂದಾಜಿ ಇದ್ದೋ ಹೇಂಗೆ?

      2. ಅಣ್ಣ ಅದು ತಪಸ್ಸು ಮಾಡ್ವಾಗಲೆ “ಸಂ”ಶೋಧನೆ ಮಾಡುವ ಕ್ರಮವೋ ಎ೦ತದೋ.. ಬೋಸ ಬಾವ ಹಾ೦ಗೆಲ್ಲ ಪ್ರಯೋಗ ಮಾಡಿ ಪರಿಣತಿ ಇಪ್ಪೋರು, ಪ್ರಯೋಗ ಮಾಡ್ಲೆ ಯೋಗ ಇರೆಕ್ಕಡ!

    2. ಬಾವಾ ನವಗೆ ಕಾರ ಅಪ್ಪಲೆ ಮೆಣಸಿನ ಡಬ್ಬಿಯ ಅಂತೇ ಆಡುಸಿರೂ ಸಾವಾವುತ್ತು ಮೆಣಸು ಹಾಕಿಯೇ ಆಯೆಕ್ಕೂಳಿ ಇಲ್ಲೆ ಆತೋ ….
      ಸುರೂವಾಣ ಒಪ್ಪಕ್ಕೆ ಒಂದೊಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×