ಕೊಡೆಯಾಲಂದ ಗೋಕರ್ಣಕ್ಕೆ

ಮೊನ್ನೆ ನಾವು ಕೊಡೆಯಾಲಂದ ಗೋಕರ್ಣಕ್ಕೆ ಹೋಗಿತ್ತು , ಆ ದಿನದ ಬಗ್ಗೆ ನಮ್ಮ ಸಾಲುಗೊ….
ರಾಗ, ತಾಳ ಗೊಂತಿಪ್ಪವು ಯಾರಾರು ಹೊಂದುಸಿಗೊಂಬಲಕ್ಕು ನವಗರಡಿಯ….

ಕಡಲ ತೀರದ ಮಾರ್ಗದುದ್ದಕ್ಕೆ
ನಮ್ಮ ವಾಹನ ಹೆರಟತ್ತು
ಗಂಟೆ ಎಂಟೂವರಗೆ ನಾವು
ಮುರುಡೇಶ್ವರಕ್ಕೆತ್ತಿತ್ತು

ಕಾಮತ್ ಹೋಟ್ಲಿಲಿ ಕಾಪಿ ಕುಡುದಿಕ್ಕಿ
ಮೆಟ್ಲು ಸುಮಾರು ಹತ್ತಿತ್ತು
ಮುರುಡೇಶ್ವರನ ಮೋರೆ ನೋಡಿಕ್ಕಿ
ವಾಪಾಸಲ್ಲಿಂದ ಹೆರಟತ್ತು

ಬೆಶಿಲು ಒಳ್ಳೆತ ಕಾವ ಮೊದಲೇ
ಕ್ಷೇತ್ರ ಗೋಕರ್ಣಕ್ಕೆತ್ತಿತು
ಮಹಾಬಲನ ರಥವ ನೋಡಿದ
ನಮ್ಮ ಬಾಯಿ ಅಲ್ಲಿ ಮುಚ್ಚಿತ್ತು

ಪೇಟೆ ಸುತ್ತಿತ್ತು, ಗುಡ್ಡೆ ತಿರುಗಿತ್ತು
ಓಂ ಬೀಚಿನ ನೋಡಿತ್ತು
ಕುಂಟಾಂಗಿಲದಾ ಎಲೆಯ ಪೀಪಿಲಿ
ಮಕ್ಕಳಾಟವ ಆಡಿತ್ತು

ಹಳೆಯ ಪೇಪರು ಹರುದು ಅದರಾ
ಗಾಳಿಪಟವಾಗಿ ಮಾಡಿತ್ತು
ಪಟವ ಹಾರ್ಸಿ, ಬೀಲ ಆಡ್ಸಿ
ಕೊಶಿಲಿ ನೆಗೆನೆಗೆ ಮಾಡಿತ್ತು

ಹೊತ್ತು ಮುಳುಗುವ ಹೊತ್ತಿಂಗಪ್ಪಗ
ಸಭಾಮಂಟಪಕ್ಕೆತ್ತಿತ್ತು
ಚಂದ್ರ ಶಿವನಾ ತಲೆಲಿ ಕೂದ್ದರ
ರಾಮ ಕಥೆಲಿ ನಾವು ಕೇಳಿತ್ತು

ಅಮೃತಾನ್ನವ ಉಂಡು ಅಲ್ಲಿಂದ
ನಮ್ಮ ಗೂಡಿನ ಸೇರಿತ್ತು
ನಮ್ಮ ಜೇವನದೊಂದುದಿನ
ಹೀಂಗೆ ಅಲ್ಲಿಗೆ ಮುಗುದತ್ತು……

ಒಂದೇ ದಿನ ಆದ್ದು ಆತೋ ಮರುದಿನದ್ದರ ಬಪ್ಪವಾರ ಹೇಳ್ತೆ ಆತೋ……

ಕೆಲವು ಪಟಂಗೊ:

You may also like...

7 Responses

 1. ಚೆನ್ನೈ ಭಾವ says:

  ಓಯಿ .., ಲಾಯ್ಕಾದೂಳಿ.

  [ಕಾಮತ್ ಹೋಟ್ಲಿಲಿ ಕಾಪಿ] – ಗೋಕರ್ಣಕ್ಕೆ ಹೋವ್ತ ಹೆಚ್ಚಿನೋರು ಕಾಮತ್ ಹೋಟ್ಲಿಂಗೆ ಹೊಕ್ಕದ್ದೇ ಹೋಪ ಕ್ರಮವೇ ಇಲ್ಲ್ಯೋದು!!

  [ಕುಂಟಾಂಗಿಲದೆಲೆ ಪೀಪಿ, ಗಾಳಿ ಪಟ..] – ಮದ್ಲೇ ಗುಡ್ಡೆ ಗುಡ್ಡೆ ಸೊಕ್ಕಿದ್ದು ನೆಂಪಾತಾಯ್ಕಪ್ಪೊ!

  ಪಟಂಗಳೂ ಲಾಯಕ ಬಯಿಂದಣ್ಣೋ.

  ಆ ಗುಡ್ಡೆಲಿ ಪೀಪೀ ಊದಿದ್ದು, ಗಾಳಿಪಟ ಹಾರ್ಸಿದ್ದು, ಬೀಚಿಲಿ (ಆರೊಟ್ಟಿಂಗೆ) ನಿಂದದು … ಪಟಲ್ಲಿ ಕಂಡತ್ತಿಲ್ಲೆ ಭಾವೋ. ಪ್ರೂಪ್ ಬೇಕು ಪ್ರೂಪ್ ಹೇಳುವವಿದ್ದವು ಹ್ಹ್ಮ್ಮ್ಮ್…

 2. ಚುಬ್ಬಣ್ಣ says:

  ಹೂ 28 ಟು ಸಾಲ್ಲಿ, ಪ್ರಾಸದೊಟ್ಟಿ೦ಗೆ ಬರದ್ದು ಲಾಯಕೆ ಆಯಿದು ಭಾವ.. 🙂

 3. ಬೊಳುಂಬು ಮಾವ says:

  ಹೇಂಗೆ, ದೋಣಿಸಾಗಲಿ ಪದ್ಯದ ರಾಗಲ್ಲಿ ಹಾಡುವನೋ ? ಹೇಂಗೆ ?
  ಪದ್ಯ ಲಾಯಕಾತು. ಚೆನ್ನೈ ಭಾವ ಹೇಳಿದ ಹಾಂಗೆ, ಫೊಟೊಂಗೊ ಇನ್ನಷ್ಟು ಬೇಕಾತು. ಓಂ ಬೀಚಿನ ಇನ್ನೊಂದು ಗುಡ್ಡೆಗೆ ಹತ್ತಿ ಫೊಟೊ ತೆಗದಿದ್ದರೆ, ಓಂ ಸರೀ ಆಗಿ ಕಾಣ್ತಿತು ಅಲ್ಲದೊ ? ಈಗ ಓಂ, ಉಲ್ಟಾ ಕಾಣ್ತಾ ಇದ್ದು. ಫೊಟೊ ತೆಗವಲೆ ಹೆರಟು ರಾಮಕಥೆಗೆ ಹೋಪಲೆ ತಡ ಅಪ್ಪಲಾಗಾನೆ, ಅಲ್ದೊ ಪುಳ್ಳೀ ?

 4. jayashree.neeramoole says:

  ಕೊಡೆಯಾಲಂದ ಗೋಕರ್ಣಕ್ಕೆ
  ಪುಳ್ಳಿಯ ಪದ್ಯವ ಓದಿತ್ತು
  ಪಟಂಗಳನ್ನೂ ಜೊತೆಗೆ ನೋಡಿ
  ಮನಸ್ಸು ಹರ್ಷಗೊಂಡತ್ತು

  ಮರುದಿನದ ಪದ್ಯಕ್ಕಾಗಿ
  ನಾವು ಇಲ್ಲಿ ಕಾಯಿತ್ತು
  ಈಪದ್ಯ ಲಾಯಕಾಯಿದು ಹೇಳಿ
  ಒಂದೊಪ್ಪ ಕೊಟ್ಟತ್ತು

 5. ಶರ್ಮಪ್ಪಚ್ಚಿ says:

  ಪದ್ಯ ಲಾಯಿಕ ಆಯಿದು.
  ಗಾಳಿ ಪಟ ಹಾರಿದ ಹಾಂಗೆ ಮುಂದಾಣ ಪದ್ಯಂಗಳೂ ಹಾರಿ ಹಾರಿ ಬರಲಿ

 6. ಅನುಶ್ರೀ ಬಂಡಾಡಿ says:

  ಪದ್ಯವೂ, ಪಟಂಗಳೂ ಲಾಯ್ಕಾಯ್ದು. ಮರುದಿನದ ಪದ್ಯದೊಟ್ಟಿಂಗೆ ಇನ್ನಷ್ತು ಪಟಂಗೊ ಬರಳಿ.

 7. ಫೊಟೊ೦ಗೊ ಲಾಯಕಿದ್ದು. ಪದ್ಯವೂ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *