ಎಂಗಳ ಮಾಣಿಗೆ ಎಲ್ಲಿಯಾರೂ ಕೂಸಿದ್ದರೆ ಹೇಳಿ ಭಾವ ! !

March 17, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 29 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಂಗಳ ಮಾಣಿಗೆ ಎಲ್ಲಿಯಾರೂ ಕೂಸಿದ್ದರೆ ಹೇಳಿ ಭಾವ ! !
ಆಬ್ಬೆ   .,ಆಪ್ಪ°.. , ಎಲ್ಲಾ ಒಟ್ಟಿಂಗೆ ಇಪ್ಪದಡ . ನಮ್ಮ ಕೂಸಿಂಗೆ ಅವರ ಪಿರಿಪಿರಿಯೂ ಇದ್ದರೆ? ಹಾಂಗಾಗಿ  ಸಂಸಾರ ಸಣ್ಣ ಇದ್ದರೆ , ಮಾಣಿ ಪೇಟೆಲೆಲ್ಲಿಯಾರೂ ಕೆಲಸಲ್ಲಿದ್ದರೆ ಜಾತಕ ಕೊಡಿ ಹೇಳಿದ್ದೆ !
ಕೂಸು ಕಲ್ತಿದು, ಮಾಣಿಯಂಗೊ ಇಂಜಿನಿಯರೊ, ಡಾಕ್ಟ್ರೋ .. ಬೆಂಗ್ಳೂರಿಲ್ಲಿಪ್ಪವನೇ ಆಯೆಕಡ ! ಇದ್ದರೆ ಹೇಳಿ ..
ಜಾತಕ..ಬೇಕು , ಎಲ್ಲಿಯಾದರೂ ಪೊದು ಬೇಡ ಹೇಳೆಕಾದರೂ.. ಜಾತಕಲ್ಲಿ ಆವುತ್ತಿಲ್ಲೆ ಹೇಳ್ಲಕ್ಕನ್ನೆ !
ಅಯ್ಯೋ ಈ ಜಾತಕ , ಪಟ ಹಿಡ್ಕೊಂಡು ಬಪ್ಪವಕ್ಕೆ ಕಾಪಿ ಚಾಯ ಮಾಡ್ಲೇ ಆತು !
.
ಇದು ಸಾಮಾನ್ಯ ೭೫ ರಲ್ಲಿ ಅಲ್ಲಲ್ಲಿ. ಕಂಡುಕೊಂಡಿದ್ದ , ಕೇಳೆಂಡಿದ್ದ ಸಂಗತಿ
ಮದಲಾಣ ಕಾಲಲ್ಲಿ ಆಗಿದ್ದರೆ, ಕೂಸಿನ ಕಡೆಯವಕ್ಕೆ ನಮ್ಮ ಮನಗೆ ಜಾತಕ ಕಳುಸೊಲೇ ಧೈರ್ಯೆ ಇರ್ತಿತಿಲ್ಲೆ , ಒಂದು ೫ ಖಂಡಿಯೂ  ಅಡಕ್ಕೆ ಆಗ ಅವಕ್ಕೆ !  ಹಾಂ …ಕೂಸು ಕಲ್ತಿದಿದ, ಮಗ° ಪೇಟೆಲಿಪ್ಪದು, ಹೆಂಡತಿ ಕಲಿಯದ್ದರೆ ಪೇಟೆಲಿ ಬುದ್ದಿಮುಟ್ಟುಗದ , ಹಾಂಗಾಗಿ ಅಕ್ಕು ಹೇಳಿದ್ದು !
ಇದು ಅಂಬಗಳೇ ರಜ ರಜಾ ಇದ್ದತ್ತು..
ಇದಾ, ಈಗ  ” ಹವ್ಯಕರು ಅಲ್ಲದ್ದರೂ ..ಬ್ರಾಹ್ಮರು ಆದರೆ ಒಳ್ಳೆದು..”  – ಇದು  “ವಪಿ” {ನೆಂಪು ಮಾಡಿ ಹಳೇ “ಕಪಿ”( ಕನ್ಯಾ ಪಿತೃ)}ಗಳ ಇಂದ್ರಾಣ ತಲೆಬೆಶಿ ! ಅದೂ ಮಾಣಿ ಬೆಂಗ್ಳೂರಿಲ್ಲಿಯೋ , ಅಮೇರಿಕಾಲ್ಲಿಯೋ ಕೆಲಸಲ್ಲಿದ್ದರೆ. ಡಾಗುಟ್ರಾಗಿ  ಊರಿಲ್ಲಿದ್ದರೂ..ಪ್ರಾಶಸ್ತ್ಯ ಕಮ್ಮಿ ಹೇಳೊದು ಕೇಳಿದ್ದೆ.  ಅಪ್ಪೋ ?
ಇನ್ನು ಬಾಕಿ ಎಂತಾರೂ ಕಲ್ತು , ಮನೆ , ತೋಟ , ಸಣ್ಣ ಅಂಗಡಿ ಇತ್ಯಾದಿ ಆಗಿ ಇಪ್ಪ ಮಾಣಿಯಾದ್ರೆ ? ..
“ಕನ್ನಡ ಮಾತಾಡುವ, ವೆಜಿಟೇರಿಯನ್ ಜನಂಗೊ ಆದರೂ ಸಾಕು… ಎಲ್ಲಿಯಾರು ಇದ್ದರೆ ಹೇಳಿಕ್ಕಿ ಭಾವ, ಖರ್ಚು ಎರಡ ಕಡೆಯಾಣದ್ದೂ ಬೇಕಾರೆ ನಾವೇ ಹಾಕುವೊ°‍. ಬೇಕಾರೆ ಅವಕ್ಕೆ ( ಮಗಂಗೂ ಸೊಸೆಗೂ) ಇಲ್ಲೇ ಬೇರೆ ಇಪ್ಪ ಸೌಕರ್ಯ ಮಾಡ್ಲಕ್ಕು  !   ಟಿ ವಿ, ಫ್ರಿಜ್ಜು, ಡಿಶ್ಶು, ಓವೆನ್ನು . . ಎಲ್ಲಾ ಇದ್ದು ” . . ಇದು ಮೊನ್ನೆ ಒಬ್ಬ ಭಾವ ಊರಿಂದ ಫೋನಿಲ್ಲಿ ಹೇಳಿದ ಮಾತು ! !
.
ಇದರ ಕೇಳಿಯಪ್ಪಗ, ಒಂದರಿ ಸರೀ ನೆಗೆ ಬಂತಾದರೂ , ಮತ್ತೆ  ಛೇ ! ಹೇಳಿ ಬೇಜಾರೂ ಆತು . ಈಗ ನೋಡುವಗ ಇದು ಎಲ್ಲಾ ಬ್ರಾಹ್ಮಣರ ಕಥೆಯೂ ಹೀಂಗೇ . . ! ಮಹಾರಾಷ್ಟ್ರಲ್ಲಿಪ್ಪ , ಗುಜರಾತಿಲ್ಲಿಪ್ಪ , ದಕ್ಷಿಣ ಭಾರತದ ಎಲ್ಲಾ ಪ್ರಾ೦ತಂಗಳ ಬ್ರಾಹ್ಮಣರಲ್ಲಿಯೂ ಇದೇ ಕಥೆ . ರಾಜಸ್ಥಾನೀ, ಮಧ್ಯಪ್ರದೇಶದ, ಉತ್ತರಪ್ರದೇಶದ ಸಣ್ಣ ಪೇಟೆಗಳ , ಹಳ್ಳಿಗಳ ಕೃಷಿಕರಾದ ಬ್ರಾಹ್ಮಣರ ಕಥೆ ಮಾಂತ್ರ ರಜಾ ವ್ಯತ್ಯಾಸ ಇದ್ದ ಹಾಂಗೆ ಕಾಣ್ತು ! ಅದೂ ನಮ್ಮಲ್ಲಿಗೆ ಹೋಲಿಸಿರೆ ! ಸೆಕ್ಸ್ ರೇಶ್ಯು  ( ಕೂಸು-ಮಾಣಿಗಳ ಅನುಪಾತ) ಏನೂ ತುಂಬಾ ಬದಲಾದ ಹಾಂಗೆ ಕಾಣ್ತಿಲ್ಲೆ, ಆದರೂ ಈ ಸ್ಥಿತಿಗೆ ಕಾರಣ ಎಂತದಪ್ಪಾ !
.
ಕರಾಡಸ್ಥರು ಪೆರ್ಲ ಕೃಷ್ಣ ಭಟ್ಟರ ನೇತೃತ್ವಲ್ಲಿ ಕೆಲವು ವರ್ಷಂಗಳ ಹಿಂದೆ ಗೋತ್ರಂಗಳ ಸಣ್ಣಮಾಡಿಗೊಂಡಿದವಡ , ಸಗೋತ್ರ ವಿವಾಹ…ಇತ್ಯಾದಿಗಳಿಂದ ಬಚಾವಪ್ಪಲೆ. ನವಗೂ ಹಾಂಗೆ ಎಂತಾರೂ ಬೇಕೋ ?
ಅಥವಾ ನಾವೇ , { ಹವ್ಯಕರು. ಹಿಂದೆ  ಅಹಿಕ್ಷೇತ್ರ.., ಸರಸ್ವತೀ ನದೀ ತೀರ…, ಉತ್ತರ ಪ್ರದೇಶ-}೦ದ ಬಂದದೂ ಹೇಳುವ ಕಥೆಯ ಆಧಾರಂದಲೋ.. ಅಲ್ಲದ್ದೇ ಇದ್ದರೆ ಇನ್ನ್ಯಾವುದಾದರೂ ಉಪಕ್ರಮಂಗಳ ತೆಕ್ಕೊಳೆಕಕ್ಕೋ ! – ಪ್ರಜ್ಞಾಪೂರ್ವಕ ಹಿರಿಯರೂ , ವಿದ್ವಾಂಸರೂ, ಗುರಿಕ್ಕಾರಕ್ಕೋ ಸೇರ್ಯೊಂಡು ಗುರುಚರಣಕ್ಕೆ ಇದರ ನಿವೇದಿಸಿಯೊಂಡರೆ ಏನಾರು ಉತ್ತರ ಸಿಕ್ಕುಗಲ್ದೋ ?
ಊರಿಲ್ಲಿ ಮನೆಲಿ ಇಪ್ಪ ಕಳಿಯಲೆ ತಕ್ಕ ಉತ್ಪತ್ತಿ ಇದ್ದವಕ್ಕೂ ಇಂದು ಇದರ ದಾಂಟಲೆ ಸಂಕ ಸಿಕ್ಕಿದ್ದಿಲ್ಲೆ.ಮೊದಲಾಣ ಗುರುಗೊ ಇಪ್ಪಗಳೇ ತ್ರಿಮತಸ್ಥ ಬ್ರಾಹ್ಮಣರ ನಡುವೆ ಸಂಬಂಧ ಮಾಡ್ಲಕ್ಕು ಹೇಳಿದ್ದಿದ್ದವು. ಆದರೂ ಅಲ್ಲಲ್ಲಿ ಅದಕ್ಕೂ ಒಳಾಂದೊಳಾ ಪಿಸಿಪಿಸಿ ಮಾತಾಡೆಂಡಿದ್ದಿದ್ದವಡ. ಈಗ ಅದೂ- ಹಾಂಗಿಪ್ಪ ಸಂಬಂಧವೂ  ಸಿಕ್ಕುತ್ತಿಲ್ಲೆ !.
ಇಡಿಯ ಸಮಾಜವಾಗಿ ನಾವು, ಈಗ ೪೫-೫೦ ವರ್ಷ ಪ್ರಾಯಾದವು, ನಮ್ಮಂದಲೇ ದೊಡ್ಡವರ, ಹೇಳಿರೆ ನಮ್ಮ ಅಪ್ಪಂದಿರ, ಅಬ್ಬೆಯಕ್ಕಳ, ಮಾವಂದಿರ, ಆಪ್ಪಚ್ಚಿಯಕ್ಕಳ , ಅತ್ತೆಯಕ್ಕಳ …ಎಲ್ಲೋರತ್ರೂ ಮಾತಾಡ್ಲೆ ಸುರು ಮಾಡುವನೋ !?
.
ಇದೇ ಸಮಸ್ಯೆ ಕಾಶ್ಮೀರೀ ಬ್ರಾಹ್ಮಣರಲ್ಲು ಇದ್ದು. ಅವು ನಮ್ಮ ಹಾಂಗೇ .. ನಮ್ಮಂದಲೂ ತೊಂದರೆಲಿ ಇದ್ದವು. ಭಾರತಲ್ಲೇ ಇದ್ದು, ಭಾರತದವೇ ಆಗಿಯೂ ನಿರಾಶ್ರಿತರ ಹಾಂಗೆ – ಅವು ಈಗ ಇತರ ಬ್ರಾಹ್ಮರ ಜತೆ ವಿವಾಹ ಸಂಬಂಧಗಳ ಮಾಡಲೆ ಸುರು ಮಾಡಿದ್ದವು. ಒಂದು ಪಂಗಡವಾಗಿ, ಸಾಮೂಹಿಕವಾಗಿ ಎಲ್ಲೋರೂ ಒಪ್ಪಿ ಇದು ಅವರಲ್ಲಿ ನಡೆತ್ತಾ ಇದ್ದು ಹೇಳಿ ಎನ್ನ ಸ್ನೇಹಿತ ಕಾಶ್ಮೀರಿ ಪಂಡಿತ° ಹೇಳಿ ಗೊಂತು .
ಅಖಂಡ ಭಾರತದ ಹಾಂಗೇ .. ಬ್ರಾಹ್ಮಣರಲ್ಲೂ ….. >  >  >   ಎನ್ನ  ಆಲೋಚನೆ ತಪ್ಪಾದರೆ ಆರೂ ಬೇಜಾರ ಮಾಡೆಡಿ.. ಇದರಿಂದ ಬಚಾವಪ್ಪದು ಹೇಂಗೆ ಹೇಳಿ ಬರದು ತಿಳುಶಿ.! ಬೈಗಳುಗೊಕ್ಕೂ ಸ್ವಾಗತ!
( ಎನಗೆ ಒಂದು ಮಗಳು ಮಾಂತ್ರ.. ಹ್ಹಿ.. ಹ್ಹಿ … ಹ್ಹಿ.. ಹ್ಹಿ !   )

ಎಂಗಳ ಮಾಣಿಗೆ ಎಲ್ಲಿಯಾರೂ ಕೂಸಿದ್ದರೆ ಹೇಳಿ ಭಾವ ! !

ಎಂಗಳ ಮಾಣಿಗೆ ಎಲ್ಲಿಯಾರೂ ಕೂಸಿದ್ದರೆ ಹೇಳಿ ಭಾವ ! !, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 29 ಒಪ್ಪಂಗೊ

 1. ವಿವೇಕ ಮುಳಿಯ

  ಮಾವ,
  ಬ್ರಾಹ್ಮಣೇತರ “ಲವ್ ಮ್ಯಾರೇಜ್” ಬಿಡಿ ಮಾವ, ನಮ್ಮ ಒಳವೇ ಹಲವು ಒಪ್ಪಿ ಆದ ಮದುವೆಗಳೇ “ಡೈ”+”ವರ್ಸ್” ಆಯ್ದು. ಕೇಳಿದರೆ ಉಮ್ಮಪ್ಪ ಗೊ೦ತಿಲ್ಲೆ ಯೇಕೊ!
  ಅದು ಅವರವರ ನಡುವಿನ ಹೊ೦ದಾಣಿಕೆ, ಅಹ೦ ಇತ್ಯಾದಿ ಮೇಲೆ ಇದ್ದು! ಇದೆಲ್ಲ ಆಗಿ ಆಯ್ದು ಪೇಟೆಗಳಲ್ಲಿ!
  ನಮ್ಮ ಭಾರತೀಯ ಸಂಸ್ಕೃತಿ ಬಗ್ಗೆ ಪ್ರೀತಿ, ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿದ್ದರೆ, ಮತ್ತೆ ಅವರವರ ಗುಣ ನಡತೆ ಸರಿ ಇದ್ದರೆ ಎಲ್ಲ ಮದುವೆಗಳೂ ಸರಿ ಆವ್ತು ಹೇಳಿ ಆನು ನ೦ಬಿದ್ದೆ :)
  ಹಳ್ಳಿಯೇ ಪೇಟೆಂದ ಎಷ್ಟೋ ಮಿಗಿಲು.–೧೦೦% ನಿಜ.

  ————-
  ಪ್ರೀತಿ ಇರಳಿ,
  ವಿವೇಕ ಮುಳಿಯ

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ಅಪ್ಪಪ್ಪು. ಪೇಟೆಲಿಪ್ಪವಕ್ಕೆ ಆಚೀಚವನ ಬಗ್ಗೆ ಮಾತಾಡ್ಳೆ ಪುರುಸೊತ್ತೇ ಇರ್ತಿಲ್ಲೆ. ಹಳ್ಳಿಗಳಲ್ಲಿ ಧಾರಾಳ ನಡೆತ್ತು. ‘ ಅವ ಹಾಂಗೆ ಹೇಳಿದ, ಆನು ಹೀಂಗೇ ಮಾಡಿದೆ. ಎಂತಾರು ಅವ ಹಾಂಗೆ ಮಾಡ್ಲಾವ್ತಿತ್ತಿಲ್ಲೆ ಅಪ್ಪೋ. ಅವನ ಬಿಡೆ , ಇವನ ನೋಡ್ವ್ವೆ’ – ಎಂತಾ ಟೈಮ್ ಪಾಸ್ !!

  ” … ಒಪ್ಪಿ ಆದ ಮದುವೆಗಳೇ … ” – ೧೦೦% ಜಾತಕಲ್ಲಿ ಕೂಡಿ ಬಂದು ಮದ್ವೆ ಆದ್ದು. ಹುಮ್ಮ್ಮ್. ನಾವೂ ನಾಗರೀಕರು.

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಚೆನ್ನೈ ಭಾವ “ಅವಳಪ್ಪನ ಬಿಡೆ….ಇವಳ ನೋಡ್ವೆ” ಹೀ೦ಗೂ ಟೈಮ್ ಪಾಸ್ 😉

  [Reply]

  VN:F [1.9.22_1171]
  Rating: 0 (from 0 votes)
 2. ಒಪ್ಪಣ್ಣ

  ಬಾಲಣ್ಣಾ..
  ಸಕಾಲಿಕ ಪರಿಸ್ಥಿತಿಯ ಚೆಂದದ ಶುದ್ದಿ..
  ಲಾಯಿಕಾಯಿದು.

  ಅಲ್ಲದ್ದರೂ ಈಗ ನೆಡೆತ್ತದು ಹೀಂಗೇ ಅಲ್ಲದೋ?
  ಇದರೆಲ್ಲ ನೋಡುವಗ ಅವಕ್ಕೆ ಊರಿನ ಚೆಂದದ ಜೀವನಕ್ಕೆ ಒಗ್ಗಿಗೊಂಬ ಯೋಗ(ಗ್ಯತೆ) ಇಲ್ಲೆನ್ನೇ – ಹೇಳಿ ಕಾಣ್ತು ಒಂದೊಂದರಿ! :-(

  [Reply]

  VA:F [1.9.22_1171]
  Rating: 0 (from 0 votes)
 3. ಬಾಲಣ್ಣ

  ಓದಿ, ಬರೆದವಕ್ಕೆಲಾ ನಮಸ್ಕಾರಂಗೊ, ಕೃತಜ್ನತೆಗೊ. !ಎಡಿಗಾದರೆ ಇನ್ನೂ ತಉಂಬಾ ಜನಗಂಗೊಕ್ಕೆ ಹೇಳಿ ! ಬೈಲಿಲ್ಲಿ ಹೀಂಗೊಂದು ಗೌಜಿ ಸುರು ಆಯಿದು ಹೇಳಿ. ಪ್ರತಿಕ್ರಿಯೆಗೊ ಇನ್ನೂ ತೊಂಬ ಆದಪ್ಪಗ , ಅಲ್ಲಲ್ಲಿ ಗುಸುಗುಸು ಸುರು ಅಕ್ಕು, ಅದರಿಂದ ಏನಾದರೂ ಪ್ರಯೋಜನ ಅಕ್ಕು !

  ಯಾವುದೇ ಸಾಮಾಜಿಕ ಸಮಸ್ಯೆ, ಧಿಡೀರನೆ ಪರಿಹಾರ ಕಾಣುತ್ತಿಲ್ಲೆ, ಸಮಾಜದ ಒಳ ಕೆಲರೀತಿಯ ಪ್ರಯೋಗಂಗೊ ಅದರಷ್ಠ್ಹಕೇ..ಆವ್ಶ್ಯಕತೆಯೇ ಆವಿಸ್ಃಕಾರದ ತಾಯಿ – ಆಗಿ , ನ್ಂತರಾದರದ್ದೇ ಒಂದು ಹೊಸ ಸ್ಮೀಕರಣಾ ಹುತ್ತುಗಲ್ಲದೋ ?

  ನಾವು ಪ್ರಶ್ನೆಗಳ ಬೀಜ ಬಿತ್ತುವೋಂ … ಸಮಾಜ, ನಮ್ಮ್ಂದಲೇ ಅಲ್ಲದೋ..
  ನಾವು ಆಲೋಚನೆಮಾದುವೊ,ಯೋಚಿಸುವವು,ಯೋಚನೆಗೊ ಹೆಚ್ಚು ಹೆಚ್ಚು ಆದ ಹಾಂಗೇ ,ಅದು ಸಮಾಜ ಪುರುಷನ ಚಿಂತನೆಯ ಬದಲಾಯಿಸುತ್ತು. ಇದು ನಾವು ಕಂಡ ಸತ್ಯ .

  ಇನ್ನು ಲವ್ ಮಾಡಿ ಮದುವೆ..ಇತ್ಯಾದಿಗೊ – ಇದು ಕೂಡಾ ಕೆಲ ಮನಸ್ಸುಗಳ ಪ್ರತಿಕ್ರಿಯೆಗೊ. ಮನಸ್ಸು ಮತ್ತು ಅದರ ಪ್ರೇರೇಪಿಸುವ ಯೋಚನೆಗೊ, ಯಾವುದೋ ಹಂತಲ್ಲಿ ತೆಕ್ಕೊಂಬ “ಪೊಸಿಶನ್” ಗೊ ಅದು . ಎಂಗೊ ಮಾರ್ಕೆಟಿಂಗ್ ಕ್ಶೇತ್ರಲ್ಲಿಪ್ಪವು, ವಸ್ತುಗಳ ಮಾರಾಟಕ್ಕೆ ಪ್ರೇರೇಪಿಸುವಲೆ ಕೆಲ ಟ್ರಿಕ್ಕುಗಳ ಮಾಡುತ್ತ ಕ್ರಮ ಇದ್ದು ! ಕಡೆ ಕಡೆಂಗೆ, ಅದೇ ಸತ್ಯ ಹೇಳುವ ಭ್ರಾಮುಕ ತ್ಂಡಂಗೊ ಅಲ್ಲಲ್ಲಿ ಹುಟ್ಟುತ್ತು. ಸೇಮಗೆಂದ ನೂಡಲ್ಸೇ ರುಚಿ ಯಪ್ಪ ಜನಾಂಗ ಒಂದು ಬೆಳೆತ್ತಾ ಇಪ್ಪದು ಈ ಟ್ರಿಕ್ಕು – ಭ್ರಮೆ ಆದಪ್ಪಗ-

  ಇದೂ ಬೇಕಾವುತ್ತು, ಋಣಾತ್ಮಕತೆಯನ್ನೂ ತೋರಿಸಿಕ್ಕಿ, ಮತ್ತೆ ಸರಿಯಾದ್ದರ ತೋರುಸುವಗ ಅಪ್ಪ ಕನ್ವಿಕ್ಶನ್ ನ ಹಾಂಗೆ ! ಆಥವಾ ಇಂದು ಪೇಟೆಲಿ ಕೆಲೆವು ವರ್ಶ ಕಳದಿಕ್ಕಿ, ಮತ್ತೆ ಊರಿಂಗೆ ಬಂದಪ್ಪಗ, ವಾಪಾಸು ಹೋಯೆಕನ್ನೇ ಹೇಳಿ ಈಗಳೇ ಎನ್ನಹಾಂಗಿಪ್ಪವಕ್ಕೆ ತೋರುತ್ತ ಹಾಂಗೆ !

  ಇನ್ನೂ ಜನ ಪ್ರತಿಕ್ರಿಯೆ ಬಪ್ಪ ಹಾಂಗೆ ಎಲ್ಲೋರು ಬರೆಯಿ ! ನಾವೆಲ್ಲಾ ಸೇರಿ ಎಂತಾರೂ ಆವುತ್ತೋ ನೋಡುವೊ !

  [Reply]

  VA:F [1.9.22_1171]
  Rating: +1 (from 1 vote)
 4. ಮೋಹನಣ್ಣ

  ಇದು ನಿಜವಾಗಿ ಗ೦ಭೀರ ಪ್ರಶ್ನೆ ಹೇಲುವದರಲ್ಲಿ ಎರಡು ಮಾತಿಲ್ಲೆ ಆದರೆ ಪರಿಹಾರ ಬಹುಶಹಾ ತತ್ಕಾಲಕ್ಕೆ ಇಲ್ಲೆ.ಪ್ರಶ್ನೆ ಅನುಪಾತದ್ದು ಖ೦ಡಿತಾ ಅಲ್ಲ.ಹೊ೦ದಾಣಿಕೇದು ನಾವೇ ಅಯ್ಯೋ ಎನ್ನ ಮಗಳಿ೦ಗೆ ಹಾ೦ಗೆಲ್ಲ ಹತ್ತು ಜೆನ ಇದ್ದಲ್ಲೆಲ್ಲ ಸುದಾರ್ಸಲಿಡಿಯಪ್ಪ ಹೇಳುತ್ತುಎ೦ಗಳ ಪೈಕಿಯೇ ಒಬ್ಬ೦ ಸ೦ಬದ ಬಿಡ್ಲೆ ಹೇಳಿದ ಕಾರಣ ಕೇಳೀರೆ ರಜ ಬೇಜಾರ ಆವುತ್ತು.ಎ೦ತ ಹೇಳೀರೆ ಎರಡು ಅಣ್ಣತಮ್ಮ೦ದ್ರು ಬೆ೦ಗ್ಲೂರಿಲ್ಲಿ ಇಪ್ಪದು ಅಬ್ಬೆ ಅಪ್ಪ೦ ಊರಿಲ್ಲಿ ತಮ್ಮನೂ ಅಣ್ಣನೂ ಒ೦ದೇ ಮನೆಯ ಮಾಳಿಗೇಲಿಯೂ ಕೆಳವೂ ಆಗಿ ಇಪ್ಪದು ವ್ಯವಹಾರ ಸ೦ಪೂರ್ಣ ಬೇರೆ.ತೊದರೆ ಎ೦ತ ಹೇಳೀರೆ ಹತ್ತರೆ ಇರ್ತದೂ ಒ೦ದೇ ಮನೇಲಿಪ್ಪದೂ ಒ೦ದೇ ಹಾ೦ಗೆ ಹೇಳಿ.ಇನ್ನೊ೦ದು ಕಡೆ ಮಾಣಿ ಕೂಸು ನೋಡಿ ಒಪ್ಪಿದವು ಅಬ್ಬೆ ಅಪ್ಪ೦ದ್ರನ್ನು ಒಪ್ಪಿಗೆ ಆತು ಹಾ೦ಗೆ ಕೂಸಿನ ಮನೆಯವು ಸ೦ಪ್ರದಾಯದ೦ತೆ ಮಾಣಿ ಮನಗೆ ಹೋದವು ಈ ಮಾಣೀ ಅಪ್ಪ೦ ರಜ ಎನ್ನ ಹಾ೦ಗೆ ಬೋಸ ಹೇಳಿ ಕಾಣುತ್ತು ಅವನ ನೋಡೀರೆ ಒೞೆ ವಿದ್ಯಾವ೦ತನ ಲಕ್ಷಣ ಇವ೦ ಕೂಸಿನ ಮನೆಯವು ಹೆರಡ್ಲಪ್ಪಗ ಆನು ಇಷ್ಟೆಲ್ಲ ಕಾರ್ಬಾರು ಮಾಡ್ತರೂ ಕಲ್ತದು ಬರೀ ಎಳ್ನೇ ಕ್ಲಾಸು ಹೇಳಿದ೦.ಸರಿ ಮನಗೆ ಎತ್ತಿದ ಹಾ೦ಗೆ ಕೂಸಿನ ಕಡೆಯವರಿ೦ದ ಈ ಸ೦ಬ೦ದ ಆವುತ್ತಿಲ್ಲೆ ಎ೦ಗಳ ಮಗಳ ಏಳ್ನೇ ಕ್ಲಾಸು ಕಲ್ತವನ ಮಗ೦ಗೆ ಕೊಡ್ತಿಲ್ಲೇ ಹೇಳಿ ಕಾರಣ.ಇದು ಉತ್ಪ್ರೇಕ್ಷೆ ಖ೦ಡಿತಾ ಅಲ್ಲ ನೆಡದ್ದದು.ಇ೦ದು ಕೂಸುಗಳೂ ಸಾಕಷ್ಟು ಬಾಕಿ ಇದ್ದವು ಆದರೆ ಗ್ರೇಡುಸೇರ್ತಿಲ್ಲೆ ಅದ.ಇರಳಿ ಬನಿಯನು ಅ೦ಗೀ೦ದ ಉದ್ದ ಅಪ್ಪಲಾಗಾನೆ?ಒಪ್ಪ೦ಗಳೊಟ್ಟಿ೦ಗೆ

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಇದು ಕೆಲವು ಸರ್ತಿ ಆಯ್ದು, ನಿ೦ಗ ಹೇಳಿದ್ದು ತಪ್ಪಲ್ಲ ಮೋಹನಣ್ಣಾ, ಎನ್ನಪ್ಪ ೩ನೆ ಕ್ಲಾಸು. ಹಾ೦ಗಾಗಿ ೫ನೆ ಕ್ಲಾಸು ಕಲ್ತಿದ್ದ ಮಾಣಿ ಅಪ್ಪ …. :( ಮು೦ದೆ ಹೇಳ್ತಿಲ್ಲೆ :(

  [Reply]

  VN:F [1.9.22_1171]
  Rating: 0 (from 0 votes)
 5. ಶ್ಯಾಮಣ್ಣ
  ಶ್ಯಾಮಣ್ಣ

  ಆದಿರಳಿ… ಇಲ್ಲಿ ಯಾವುದೇ ಕೂಸಿಂದಾಗಲೀ ಹೆಮ್ಮಕ್ಕಳದ್ದಾಗಲೀ ಒಪ್ಪ ಏಕೆ ಬೈಂದಿಲ್ಲೆ? ಎಲ್ಲಾ ಒಪ್ಪಂಗಳೂ ಮಾಣಿಯಂಗಳದ್ದೇ ಇದ್ದಲ್ಲ?
  ಆರಾದ್ರು ಹೆಮ್ಮಕ್ಕಳೋ, ಕೂಸುಗಳೊ ಈ ವಿಚಾರಲ್ಲಿ ಪ್ರತಿಕ್ರಿಯೆ ತೋರ್ಸಿದರೆ ಒಳ್ಳೆದಿತ್ತು ಹೇಳಿ ಕಾಣ್ತು ಎನಗೆ…

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಸಾವಿತ್ರಿ ಅಕ್ಕ ಬಯಿ೦ದೊವು ಅವರ ವಿಚಾರ ಮ೦ಡನೆಗೆ ಶ್ಯಾಮಣ್ಣಾ!

  [Reply]

  VN:F [1.9.22_1171]
  Rating: 0 (from 0 votes)
 6. ವಿವೇಕ ಮುಳಿಯ

  ಎನ್ನದೂ ಅದೇ ಅಲೋಚನೆ ಆಗಿತ್ತು :) ಮಾವ.
  ಈ “ಎಂಗಳ ಮಾಣಿಗೆ ಎಲ್ಲಿಯಾರೂ ಕೂಸಿದ್ದರೆ ಹೇಳಿ ಭಾವ” ವಿಷಯಲ್ಲಿ “ಕೂಸುಗೊ” ನುಗ್ಗಿರೆ “ನಾವು” ಏವದಾರೂ ಹಳ್ಳಿಲಿ ಬಾಕಿ ಅಕ್ಕೋ ಹೇಳಿ ಅವಕ್ಕೆ ಹೆದರಿಕೆಯೊ?
  “ಅಕ್ಕ”೦ಗೊ ಹೆದರಿಕೆ ಇಲ್ಲದ್ದೆ ಮನ ಬಿಚ್ಚಿ ಪ್ರತಿಕ್ರಿಯೆ ಮಾಡಿ.

  —————–
  ಪ್ರೀತಿ ಇರಳಿ,
  ವಿವೇಕ್ ಮುಳಿಯ
  —————–

  [Reply]

  VN:F [1.9.22_1171]
  Rating: 0 (from 0 votes)
 7. ಸಾವಿತ್ರಿ ಮಳಿ

  ಇದಕ್ಕೆ ನಮ್ಮಲ್ಲಿಯೇ ಉತ್ತರ ಇದ್ದು.ನಾವು ರಜ ಹೃದಯ ಶ್ರೀಮಂತಿಕೆ ಬೆಳೆಶಿಗೊಳ್ಳೆಕ್ಕು ಮತ್ತೆ ನಮ್ಮ ಮನೋಭಾವ ಬದಲಾಯಿಸಿಗೊಳ್ಳಕ್ಕು.

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  “ಹೃದಯ ಶ್ರೀಮಂತಿಕೆ” ಹೇಳಿರೆ ಎ೦ತರ? ಮನೋಭಾವ ಏವ ರೀತಿಲಿ ಬದಲಾಯಿಸೆಕ್ಕು, ಚೂರು ವಿವರಿಸಿಕ್ಕಿ ಅಮ್ಮ! :)

  ಇ೦ತಿ ಗೆ೦ಟ

  [Reply]

  VN:F [1.9.22_1171]
  Rating: +1 (from 1 vote)
 8. ಸಾವಿತ್ರಿ ಮಳಿ

  ಮೊನ್ನೆ ವಿಶ್ವಣ್ಣ ಸಿಕ್ಕಿಪ್ಪಾಗ ಇದೇ ವಿಷಯ ಮಾತಾಡಿದೆಯೊ.ಕಾಕತಾಳೀಯ ಹೇಳಿದರೆ ಇದೇ ಅಲ್ಲದಾ?

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಕಾಕ”ತಾಳಿ”- ಯ ಯ…

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಕಳಾಯಿ ಗೀತತ್ತೆವಸಂತರಾಜ್ ಹಳೆಮನೆಅಜ್ಜಕಾನ ಭಾವಕಾವಿನಮೂಲೆ ಮಾಣಿಎರುಂಬು ಅಪ್ಪಚ್ಚಿಅಕ್ಷರದಣ್ಣಡಾಮಹೇಶಣ್ಣಪವನಜಮಾವಅಡ್ಕತ್ತಿಮಾರುಮಾವ°ಚೆನ್ನಬೆಟ್ಟಣ್ಣಶೀಲಾಲಕ್ಷ್ಮೀ ಕಾಸರಗೋಡುಪ್ರಕಾಶಪ್ಪಚ್ಚಿದೊಡ್ಡಮಾವ°ವಿದ್ವಾನಣ್ಣಯೇನಂಕೂಡ್ಳು ಅಣ್ಣವೇಣೂರಣ್ಣಶ್ಯಾಮಣ್ಣವೆಂಕಟ್ ಕೋಟೂರುರಾಜಣ್ಣಬೊಳುಂಬು ಮಾವ°ದೀಪಿಕಾಡೈಮಂಡು ಭಾವದೇವಸ್ಯ ಮಾಣಿಪೆರ್ಲದಣ್ಣಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ