ಕುದುರೆಮುಖ – ಧರೆಗಿಳುದ ಸ್ವರ್ಗ

July 16, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 64 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಾಯರ್ಪಾಡಿ ಅತ್ತೆ, ತಲೆಂಗಳ ವಿನಯತ್ತೆಯ ಬಗ್ಗೆ ಬೈಲಿಲಿ ಅಂಬಗಂಬಗ ಶುದ್ದಿ ಬಯಿಂದು.
ಆದರೆ ಈ ದೀಪಿ ಅಕ್ಕನ ಬಗ್ಗೆ ಮಾತಾಡಿದ್ದೋ – ರಜ ಕಮ್ಮಿಯೇ.
ಮಾತಾಡುದಾದರೂ ಹೇಂಗೆ? – ಒರಿಶ ಪೂರ್ತಿ ಇವು ಅಂಬೆರ್ಪು. ಅಮ್ಮನ ಬಗ್ಗೆ ಪದ್ಯ ಬರದ ಕೂಚಕ್ಕ ಇಲ್ಲೆಯೋ – ಚೈತು ತಂಗೆ, ಅವರ ದೊಡ್ಡಮ್ಮನ ಮಗಳು ಅಕ್ಕ, ಈ ದೀಪಿಅಕ್ಕ.
ಕ್ಲಾಸು ಇಪ್ಪ ಸಮೆಯಲ್ಲಿ ಇಂಜಿನಿಯರು ಕಲಿತ್ತವು, ಕ್ಲಾಸು ಬಿಟ್ಟಕೂಡ್ಳೆ ಭರತನಾಟ್ಯ ಕಲಿತ್ತವು.
ಇಂಜಿನಿಯರು ಅಪ್ಪಲೆ ಬೇಕಾದಾ ವಿಜ್ಞಾನಶಾಸ್ತ್ರದ ಸೂತ್ರಂಗೊ ಹೇಂಗೆ ಬಾಯಿಪಾಟವೋ – ಭರತನಾಟ್ಯದ ಹಸ್ತಮುದ್ರೆಗಳೂ ಅಷ್ಟೇ ಕರಗತ!
ಅಪುರೂಪಕ್ಕೊಂದರಿ ಕೆಲವು ಶುದ್ದಿಗೊಕ್ಕೆ ಒಪ್ಪ ಪ್ರೋತ್ಸಾಹ ಕೊಟ್ಟುಗೊಂಡು, ಬೈಲಿನ ಒಡನಾಟಲ್ಲೇ ಇದ್ದಿದ್ದವು.

ಬನ್ನಿ, ಬೈಲಿಲಿ ಒಂದಾಗಿ, ಅಪುರೂಪದ ಶುದ್ದಿಗಳ ವಿವರುಸಿ ಕೊಡಿ ಹೇಳಿ ಒಪ್ಪಣ್ಣ ಕೇಳಿದ್ದಕ್ಕೆ ಸಂತೋಷಲ್ಲಿ ಒಪ್ಪಿಗೊಂಡಿದವು.
ಕಲಿಯುವಿಕೆ ಎಡೇಲಿಯೂ ಬೈಲಿಂಗೆ ಬಂದು ಶುದ್ದಿ ಹೇಳುವ ಆಸಕ್ತಿ ದೀಪಿ ಅಕ್ಕಂದು.
ಎಲ್ಲೋರುದೇ ಪ್ರೋತ್ಸಾಹ ಕೊಟ್ಟು, ಕಲಿತ್ತ ಅಕ್ಕಂಗೆ ಬರೆತ್ತ ಹವ್ಯಾಸ ಬೆಳೆತ್ತ ಹಾಂಗೆ ಮಾಡೇಕು ಹೇಳ್ತದು ಕೋರಿಕೆ
ದೀಪಿಅಕ್ಕನ ಮೋರೆಪುಟ: ಸಂಕೊಲೆ
~
ಗುರಿಕ್ಕಾರ°

ಬೈಲಿನೊರಿ೦ಗೆಲ್ಲಾ ನಮಸ್ಕಾರ!!
ಓ ಮೊನ್ನೆ ಕೆಲವು ಹಳೇ ಪಟ೦ಗಳ ನೋಡುವಾಗ ಹಳೇ ನೆನಪುಗ ಕಣ್ಣಮು೦ದೆ ಬ೦ತು – ಏಕೆ ಅದರೆಲ್ಲಾ ಬೈಲಿನೊರೊಟ್ಟಿ೦ಗೆ ಹ೦ಚಿಗೊ೦ಬಲಾಗ ಹೇಳಿ ಆತು.

ಕುದುರೆಮುಖ ಹೇಳುವ ಒ೦ದು ಸಣ್ಣ ಊರಿಲಿ ಇತ್ತದು ಎ೦ಗ ಮೊದಲು.  ಇದರ  ಪೇಟೆ ಹೇಳುದಾ ಹಳ್ಳಿ ಹೇಳುದಾ ಗೊ೦ತಾವ್ತಿಲ್ಲೆ; ಏಕೆ ಹೇಳಿರೆ  – ಪೇಟೆಯ ಸೌಲಭ್ಯ೦ಗ, ಹಳ್ಳಿಯ ವಾತವರಣ – ಅಲ್ಲ್ಯಾಣದ್ದು.|
ಕುದುರೆಮುಖ ಹೇಳಿ ಇಲ್ಲಿಗೆ ಹೆಸರು ಹೇ೦ಗೆ ಬ೦ತಪ್ಪ ಹೇಳಿರೆ ತು೦ಬಾ ವರ್ಷದ ಹಿ೦ದೆ ಸ೦ಪತ್ ಐಯ೦ಗಾರ್  ಹೆಳುವೊರು ಅಲ್ಲಿಯಾಣ ಸುತ್ತಮುತ್ತಲ್ನ ಗುಡ್ಡೆಲಿ ಹೋಪಗ ಒ೦ದು ಗುಡ್ಡೆಯ ಆಕಾರ ಕುದುರೆಯ ಮೋರೆಯಾ೦ಗೆ ಕ೦ಡತ್ತಡ.
ಹಾ೦ಗಾಗಿ “ಮಲ್ಲೇಶ್ವರ” ಹೇಳಿ ಇತ್ತ ಹೆಸರು “ಕುದುರೆಮುಖ” ಹೆಳಿ ಆತು.

ಮೂಲತಹ ಭೊಮಿಲಿ ಅಡಗಿಪ್ಪ ಖನಿಜ ಸ೦ಪತ್ತಿನ ಹೆರ ತೆಗವ ಕೆಲಸ ಮಾಡುವ ಸ೦ಸ್ಥೆ  ಕೆ.ಐ.ಓ.ಸಿ.ಎಲ್ (Kudremukh Iron Ore Company Ltd.) ಇಲ್ಲಿ ಇಪ್ಪದು.
ಕುದುರೆಮುಖ ಒ೦ದು ಸಣ್ಣ ಊರು ಆದರುದೆ, ಒ೦ದು ಸಣ್ಣ ಭಾರತವೆ ಅಲ್ಲಿ ಕಾ೦ಬಾ೦ಗಿತ್ತು..
ಹತ್ತರಾಣ ಮನೆಯೊರು ತಮಿಳು ಮಾತಡುವೊರಾದರೆ, ಕೆಳಾಣ ಮನೆಯೊರು ಒರಿಯ,ಹಿ೦ದಾಣ ಮನೆಯೊರು ಗುಜರಾತಿ,ಎದುರಾಣ ಮನೆಯೊರು ಕಶ್ಮಿರಿ ಹೀ೦ಗೆಲ್ಲ… ಅ೦ದು ಒಟ್ಟಾರೆ ೧೫೦೦ ಕುಟು೦ಬ೦ಗ ಇದ್ದ ಊರಗಿತ್ತು.
ಎಲ್ಲೊರು ಆ ಕ೦ಪೆನಿಲಿ ಕೆಲಸ ಮಾಡುವೊರೇ.
ಬೇರೆ ಹೆರಾಣೊರು ಆರು ಇರವು. ಹೀ೦ಗೆ ಕ೦ಪೆನಿ ಗಣಿಗಾರಿಕೆ ಮು೦ದೊರ್ಸಿಗೊ೦ಡಿತ್ತು , ಕಾರ್ಮಿಕರುದೇ ನೆಮ್ಮದಿಲಿ  ಸಂತೃಪ್ತಿಲಿ ಇತ್ತವು.

ಆನು ಸುರೂ ಅಲ್ಲಿಗೆ ಹೋದದಿನ ಆ ಊರಿನೊರೆಲ್ಲಾ ಪಟಾಕಿ ಹೊಟ್ಟುಸಿ ಸ್ವಗತ ಮಾಡಿದವು ಹೇಳಿ ಅಮ್ಮ ಏವಗಳು ನೆಗೆಮಾಡ್ಲಿದ್ದು (ಏಕೆ ಹೇಳಿರೆ ಅದು ದೀಪವಳಿಯ ದಿನ ಆಗಿತ್ತಡ :-) ).
ಎಲ್ಲಾ ಹಬ್ಬ೦ಗಳ ಇಲ್ಲಿ ಎಲ್ಲೋರು ಒಟ್ಟುಸೇರಿ ಆಚರ್ಸಿಯೊ೦ಡಿತ್ತದು.

ಮಕ್ಕಳ ವಿಧ್ಯಾಭ್ಯಾಸಕ್ಕೆ ಹೇಳಿ ಕ೦ಪೆನಿ ಅಲ್ಲಿ ಒ೦ದು ಕೆ೦ದ್ರೀಯ ವಿದ್ಯಾಲಯವ ನಡೆಶಿಗೊ೦ಡಿತ್ತು.
ಕ್ರೀಡೆ ಮತ್ತೆ ಬೇರೆ ಮನೋರ೦ಜನೆಗೆ ಹೇಳೀ ಒ೦ದು Recreation Club ಇತ್ತು.
ಹೆಮ್ಮಕ್ಕಳ ಒ೦ದು ಮಹಿಳಾ ಸಮಿತಿ ಇತ್ತು.
ತಿ೦ಗಳಿ೦ಗೊ೦ದರಿ ಅವರ ಮೀಟಿ೦ಗು,ಎ೦ಗೊಗೆಲ್ಲಾ ಆವಗ ಹೆರ ಆಡುವ ಗೌಜಿ :-)

ವಾರಕ್ಕೊ೦ದರಿ ನಡೆಸಿಗೊ೦ಡಿತ್ತ  ಹೌಸಿ ಹೌಸಿ ಆಟ, ವರ್ಷಕ್ಕೊ೦ದರಿ ನಡೆಸಿಗೊ೦ಡಿತ್ತ  ಕ್ಲಬ್ ಡೇ, ಹೊಸ ವರ್ಷದ ಆಚರಣೆ, ಕ೦ಪೆನಿ ಡೇ,ಪಾರ್ಕ್ ಡೇ(ಇದು ಎ೦ಗೊಗೆಲ್ಲಾ ಒ೦ದು ಜಾತ್ರೆ ಹಾ೦ಗೆ :-) ).
ಅಲ್ಲಿಯಾಣ ಮಳೆಗಾಲ- ಆಕಾಶ ಒಟ್ಟೆ ಆದಾ೦ಗೆ ಸುರಿವ ಮಳೆ, ಅದರೊಟ್ಟಿ೦ಗೆ ಉ೦ಬುಳುಗಳ ಕಾಟ, ಮತ್ತೆ ಉಪ್ಪು ಹಾಕಿ ಅದರ ಬೀಳ್ಸುವ ಗೌಜಿ ಇದರೆಲ್ಲ ಮರವಲೇ ಎಡಿಯ…
ಹೀ೦ಗೆಲ್ಲಾ ಅಲ್ಲಿಯಾಣ ಜೆನ೦ಗ ಖುಷಿಲಿ ಇತ್ತವು.

ಆದರೆ ೨೦೦೫ ದೆಸೆ೦ಬರ್ ೩೧,ಅಲ್ಲಿಯಾಣೊರಿ೦ಗೆಲ್ಲಾ ಮರವಲೆಡಿಯದ್ದ ದಿನ.
ಇನ್ನು ಗಣಿಗಾರಿಕೆ ನಿಲ್ಲುಸೆಕ್ಕು” ಹೇಳಿ ಸುಪ್ರೀಮ್ ಕೋರ್ಟ್ ಆದೇಶ ಕೊಟ್ಟತ್ತು. ಈ ಪರಿಸರವಾದಿಗ ಎಲ್ಲ ಸೇರಿ ಕ೦ಪೆನಿ ಅಲ್ಲ್ಯಾಣ ಪರಿಸರವ ಹಾಳು ಮಾಡ್ತು ಹೇಳಿ ದೂರು ಕೊಟ್ಟಿತ್ತಿದ್ದವಡ್ಡ.
ಇಲ್ಲಿ ನೇಲ್ಸಿದ ಪಟ೦ಗಳ ನೊಡಿರೆ ನಿ೦ಗೊಗೇ ಗೊ೦ತಕ್ಕು  ಅಲ್ಲ್ಯಾಣ ಪರಿಸರ ಹೇ೦ಗಿದ್ದು ಹೇಳಿ :-) .
ಆ ಪರಿಸರವಾದಿಗ ಎಲ್ಲ  ದೂರು ಕೊಡುವ ಮದಲು ಈ ಬೆ೦ಗ್ಳೂರಿನ೦ತ ಪೇಟೆಯ  ನೋಡಿತ್ತವಿಲ್ಲೇ ಹೇಳಿ ಕಾಣ್ತು ;-).
ಅಲ್ಲಿಯಾಣ ಗಾಳಿ,ನೀರು ಎಲ್ಲಾ ಎಷ್ಟು ಶುದ್ಧ ಹೇಳಿರೆ ಅಲ್ಲಿ ಇಪ್ಪೊರಿ೦ಗೇ ಗೊ೦ತು. ಇಲ್ಲಿ ನಲ್ಲಿಲಿ ಬಪ್ಪ ನೀರಿನ ಸೀದ ಕುಡುದರೆ ಮರದಿನ ಮದ್ದು ಕುಡಿಯಕ್ಕಕ್ಕು 😉 ಆದರೆ ಅಲ್ಲಿ ಹಾ೦ಗಲ್ಲ.

ಸುಪ್ರೀಮ್ ಕೋರ್ಟ್ ನ ಆದೆಶದಾ೦ಗೆ ಅಲ್ಲಿ ಗಣಿಗಾರಿಕೆ ನಿಲ್ಸಿಆತು.
ಮತ್ತೆ ಬೇರೆ ದಿಕ್ಕ೦ದ ಕಬ್ಬಿಣ ಅದಿರು ಮ೦ಗ್ಳುರಿ೦ಗೆ ತರ್ಸಿ ಕೆಲಸ ಮು೦ದೊರ್ಸುತ್ತಾ ಇದ್ದು. ಆದ ಕಾರಣ ಕುದುರೆಮುಖಲ್ಲಿ ಇತ್ತ ಜೆನ೦ಗಳೆಲ್ಲ ಮ೦ಗ್ಳೂರು, ಬೆ೦ಗ್ಳೂರಿ೦ಗೆಲ್ಲಾ ವರ್ಗ ಮಾಡಿದವು.
ಹಾ೦ಗಾಗಿ ಎ೦ಗೊಗೂ ಕುದುರೆಮುಖ ಬಿಡೆಕ್ಕಾಗಿ ಬ೦ತು :-(

೧೫೦೦ ಕುಟು೦ಬ೦ಗ ಇದ್ದ ಊರಿಲಿ ಈಗ ೧೦೦-೧೫೦ ಕುಟು೦ಬ೦ಗ ಇದ್ದವಷ್ಟೆ.
ಚೆ೦ದ ಚೆ೦ದದ ಮನೆಗ, ಶಾಲೆಯ ಕೆಲವು ಭಾಗ, ಆಸ್ಪತ್ರೆ, helipad ಎಲ್ಲಾ ಪಾಳು ಬಿದ್ದದರ ನೋಡುವಾಗ ಬೇಜಾರಾವ್ತು :-(

ಇನ್ನು ಸರ್ಕಾರಕ್ಕೆ ಇದರ ಪ್ರವಾಸೀ ತಾಣ ಮಾಡುದೋ ಅಥವಾ ಮಿಲಿಟ್ರಿ ಯೊರಿ೦ಗೆ ಕೊಡುವ ಅ೦ದಾಜಿದ್ದಡ.
ಎ೦ತ ಆವುತು ಗೊ೦ತಿಲ್ಲೆ.

ಏನೇ ಆಗಲಿ ಆ ಊರು ಪಾಳು ಕೊ೦ಪೆ ಆಗದ್ದೆ ಎ೦ಗೊ ಅಲ್ಲಿ  ಇಪ್ಪಗ  ಇದ್ದಹಾ೦ಗೆ ಹಸಿರು ಹಸಿರಾಗಿಯೇ ನಳ ನಳಿಸಲೀ  ಹೇಳಿ ಆಶೆ.

“ಆರ೦ಕುಶವಿಟ್ಟೊಡ೦ ನೆನೆವುದೆನ್ನಮನ೦ ಬನವಾಸಿದೇಶಮ೦ ” ಹೇಳಿ ಪ೦ಪ ಹೇಳಿದಾ೦ಗೆ ಕುದುರೆಮುಖ ಬಿಟ್ಟು 4 ವರ್ಷ ಆದರೂ  “ನೆನೆವುದೆನ್ನ ಮನ೦ ಕುದುರೆಮುಖ೦” ಹೇಳಿ ಆಯಿದು 😉

ಎಲ್ಲಾ ಹಬ್ಬ೦ಗಳ ಇಲ್ಲಿ ಎಲ್ಲೋರು ಒಟ್ಟುಸೇರಿ ಆಚರ್ಸಿಯೊ೦ಡಿತ್ತದು.
ಕುದುರೆಮುಖ - ಧರೆಗಿಳುದ ಸ್ವರ್ಗ , 4.5 out of 10 based on 4 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 64 ಒಪ್ಪಂಗೊ

 1. Vasanthi

  Hi
  Very nice article.
  But sad to hear some negative comments.
  Congrats Deepika.Very nice to saw your kannada lipi.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿದ್ವಾನಣ್ಣಬೊಳುಂಬು ಮಾವ°ದೀಪಿಕಾಚೂರಿಬೈಲು ದೀಪಕ್ಕವಾಣಿ ಚಿಕ್ಕಮ್ಮವಸಂತರಾಜ್ ಹಳೆಮನೆದೊಡ್ಡಭಾವಅನು ಉಡುಪುಮೂಲೆಚೆನ್ನಬೆಟ್ಟಣ್ಣಪವನಜಮಾವವೆಂಕಟ್ ಕೋಟೂರುಶ್ರೀಅಕ್ಕ°ಪುತ್ತೂರಿನ ಪುಟ್ಟಕ್ಕಮುಳಿಯ ಭಾವಅಡ್ಕತ್ತಿಮಾರುಮಾವ°ಮಂಗ್ಳೂರ ಮಾಣಿಬಟ್ಟಮಾವ°ಶರ್ಮಪ್ಪಚ್ಚಿಅಕ್ಷರ°ಶುದ್ದಿಕ್ಕಾರ°ತೆಕ್ಕುಂಜ ಕುಮಾರ ಮಾವ°ಮಾಷ್ಟ್ರುಮಾವ°ಕೊಳಚ್ಚಿಪ್ಪು ಬಾವಶೀಲಾಲಕ್ಷ್ಮೀ ಕಾಸರಗೋಡುಅನುಶ್ರೀ ಬಂಡಾಡಿಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ