ಕುಮಾರ ಪರ್ವತಕ್ಕೆ ಒಂದು ಸುತ್ತು…

May 13, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 35 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಚಾರಣಕ್ಕೆ ಹೋಪದು ಹೇಳಿರೆ ಮಾವನ ಮನೆಗೆ ಹೋಪದು ಹೇಳಿ ಗ್ರೇಶಿದ್ದವು” ಹೇಳಿದ° ತಮ್ಮ.

ಅಂದು ವೇದಪಾಠದ ಕೊನೇ ದಿನ. ಪ್ರತೀ ಸರ್ತಿಯಾಣ ಹಾಂಗೇ ಈ ವರ್ಷವೂ ಸುಬ್ರಮಣ್ಯದ ವೇದಪಾಠಿಗೊ ಎಲ್ಲ ಕುಮಾರ ಪರ್ವತ ಹತ್ತುದು ಹೇಳಿ ತೀರ್ಮಾನ ಆಗಿತ್ತು.
ಅದೇ ಪ್ರಕಾರ ಸುಮಾರು ೫೦ ಪೊಡಿ ಮಕ್ಕೊ ಹೆರಟು ನಿಂದಿತ್ತಿದ್ದವು. ಅದರಲ್ಲಿ ಆನೂ ಎನ್ನ ತಮ್ಮನೂ ಇತ್ತಿದ್ದೆಯೋ°. ಅವಂಗೆ ಮದಲೇ 2 ಸರ್ತಿ ಹೋಗಿ ಗೊಂತಿತ್ತಿದಾ ಹಾಂಗಾಗಿ ಸಾಧಾರಣ ಇರ್ತ ಹಾಂಗೇ ಹೆರಟಿತ್ತಿದ°.
ಎನಗೆ ಇದು ಸುರು, ಅವ ಮದಲೇ ಹೇಳಿದ ಕಾರಣ ರಜ್ಜ ಹುಶಾರಿ ಆದೆ ಆನುದೇ. ಇಲ್ಲದ್ದರೆ, ಈ ಸುರೂಆಣ ಸರ್ತಿ ಹೆರಡ್ತವರ ಚೆಂದ ನೋಡೆಕು!!
ಛೆ!! ಆರಿಂಗೂ ಕಮ್ಮಿ ಇಲ್ಲೆ ವೇಶ.
ಏವತ್ತೂ ಇದ್ದ ವಸ್ತ್ರ ಶಾಲು ಬದಲುಸಿ, ಪೇಂಟು – ಅಂಗಿ ಸುರುಕ್ಕೊಂಡು.
ಮೋರೆಲಿ ಇದ್ದ ಗೋಪಿ ಉದ್ದಿ ಪೌಡರು ಎಲ್ಲ ಹಾಕಿಯೊಂಡು ಚೆಂದ ಆದವು.
ಅದರ ನೋಡಿಯೇ ಅವ° ಹೇಳಿದ್ದದು, “ಚಾರಣಕ್ಕೆ ಹೂಪದು ಹೇಳಿರೆ ಮಾವನ ಮನೆಗೆ ಹೋಪದು ಹೇಳಿ ಗ್ರೇಶಿದ್ದವು” ಹೇಳಿ.

*

ಕರ್ನಾಟಕದ ಪಶ್ಚಿಮ ಘಟ್ಟದ ಉದ್ದಕುದೇ ಬೇಕಾದಷ್ಟು ಚಾರಣಮಾಡ್ತ ಜಾಗೆಗೊ ಇದ್ದು ,ಆದರೆ ಯಾವುದೂ ಕುಮಾರ ಪರ್ವತ ಕೊಡ್ತ ಅನುಭವ ಕೊಡ್ತಿಲ್ಲೆ ಹೇಳ್ತವು ಗೊಂತಿಪ್ಪೋರು.
ಕುಮಾರ ಪರ್ವತ ಕರ್ನಾಟಕದ ಅತ್ಯಂತ ಎತ್ತರದ ಬೆಟ್ಟ ಅಲ್ಲದ್ದರೂ ಭಯಂಕರ ಕಠಿಣ ಚಾರಣ ಮಾರ್ಗ ಹೇಳ್ತದು ಅಪ್ಪು. ಕುಮಾರ ಪರ್ವತ ಇಪ್ಪದು ದಕ್ಷಿಣ ಕನ್ನಡ ಜೆಲ್ಲೆಯ, ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯಲ್ಲಿ.
ಗೋಡೆ ಹಾಂಗೆ ಬೃಹದಾಕಾರವಾಗಿ ನಿಂದ ಪಶ್ಚಿಮ ಘಟ್ಟದ ಸಾಲು, ನಿಧಾನಕ್ಕೆ ಹರಿವ ಕುಮಾರ ಧಾರೆ ನದಿ, ಈ ಕ್ಷೇತ್ರದ ಚೆಂದವ ಇನ್ನೂ ಹೆಚ್ಚು ಮಾಡಿದ್ದು.

*

ಹಾಂ!! ಈಗ ಹೆರಟೆಲ್ಲ ಆತನ್ನೆ, ಆದರೆ ಮುಕ್ರಿ ಆರು ಈ ಪಟಾಲಮ್ಮಿಂಗೆ ಕೇಳಿರೆ, ಮತ್ತಾರು? ನಮ್ಮ ಬೈಲಿನ ಗಣೇಶ ಮಾವ°ನೇ.
ಅವ್ವೇ ಬಂದಿತ್ತಿದ್ದವು ಗುರಿಕಾರ್ತಿಗೆ ಮಾಡ್ಲೆ.
ಪ್ರತೀ ವರ್ಶ ಬೇಸಿಗೆ ರಜೆಲಿ ಆವ್ತ ವೇದಪಾಠಶಾಲೆಗೆ ಒಳುದೆಲ್ಲಾ ಕೆಲಸ ಬಿಟ್ಟು ಬಕ್ಕು ಮಂತ್ರ ಕಲಿಶಲೆ.
ಮಕ್ಕೊಗೆಲ್ಲ ಅವ್ವು ಹೇಳಿರೆ ಬಾರೀ ಪ್ರೀತಿ. ಅವು ಕಲಿಶದ್ದರೆ ಎಂತದೋ ಕಳಕ್ಕೊಂಡ ಹಾಂಗೆ ಅಕ್ಕು ಮಕ್ಕೊಗೆ. ಅಷ್ಟೂ ಚೆಂದಕೆ ಹೇಳಿ ಕೊಡುಗು.
ಅಂತೂ ಇಂತೂ ಉದಿಯಪ್ಪಗ ೪ ಗಂಟೆಗೇ ಎದ್ದು, ಮಿಂದು ಜೆಪ ಮಾಡಿ ಹೆರಡಾಣ ಎಲ್ಲ ಮುಗಿತ್ತ ಹೊತ್ತಿಂಗೆ ಗಂಟೆ ೯.೪೫-೧೦ ಆಯಿದು.
ಒಂದು ರಜ್ಜ ಮುಂದೆ ಹೋಗಿಯಪ್ಪಗ ವಿವರ ಹೇಳ್ತ ಒಂದು ದೊಡ್ಡ ಬೋರ್ಡ್ ಇದ್ದು.

Display board at Kumara Parvatha, Subrahmanya
ಬೋರ್ಡು

*

ಒಂದು ವಸ್ತು ಅದರ ಹಾಂಗೇ ಇಪ್ಪ ಇನ್ನೊಂದರ ಆಕರ್ಶಿಸಿ ಅದೆರಡು ಒಟ್ಟು ಸೇರ್ತಡ – ನಮ್ಮ ಗುರುಗೊ ಹೇಳಿದ ನೆಂಪು – ಈ ನಮ್ಮ ಜೆಂಬ್ರಂಗಳಲ್ಲಿ ಎಲ್ಲ, ಅತ್ತೆಕ್ಕಳದ್ದೊಂದು, ಸೊಸೆಯಕ್ಕಳದ್ದೊಂದು, ಪಿಡಿ ಹಾಕುತ್ತವರದ್ದೊಂದು, ಹೊಡಿ ಹಾರುಸುತ್ತವರದ್ದು ಇನ್ನೊಂದು ಹೀಂಗೆ ಸೇರ್ತಲ್ಲದೋ ಹಾಂಗೇ.
ಸಮಾನ ಮನಸ್ಕರದ್ದು – ಸಮ ಬಲರದ್ದು ಜೊತೆ ಅಪ್ಪಲೆ ಪುರುಸೊತ್ತು ಬೇಡ ಇದಾ.

ಇಲ್ಲಿ ಹಾಂಗೇ ಆದ್ದದು, ಈ ಚಾರಣ ಸುರು ಆದ್ದೇ ಆತು, ಎನ್ನ ತಮ್ಮನ ಹಾಂಗೆ ಗಟ್ಟಿ ಗಟ್ಟಿ ಇದ್ದೋರೆಲ್ಲಾ ಸೇರಿ ಗುಡ್ಡಗಾಡು ಓಟ ಸುರು ಮಾಡಿದವು – ಆರು ಬಲ ನೋಡಿಕ್ಕುವೋ° ಹೇಳಿ.
ಎಂಗೊಳೂ ಎಂತ ಕಮ್ಮಿ ಇಲ್ಲೆ ಹೇಳಿ ತೋರ್ಸಲೆ ಕೆಲವು ಜೆನ ಅವರ ಹಿಂದೆಯೇ ಹೆರಟವು. ಎಲ್ಲೋರ ಹಿಂದಂದ ನಮ್ಮ ಗುರಿಕ್ಕಾರ್ರೂ ಹೆರಟವು ಪಟಾಲಂ ಹಿಡುಕ್ಕೊಂಡು.

ಈಗ ನೋಡಿ, ಹೋವುತ್ತಾ ಇದ್ದ ಹಾಂಗೆ ಮುಂದೆ ಇದ್ದೋರಲ್ಲಿ ಕೆಲವು ಓಡಿ ಹೊಟ್ಟೆಬೇನೆ ಹೇಳಿ ನಿಂದರೆ, ಕೆಲಾವು ಹಿಂದೆ ಇರ್ತೋರು ಮುಂದೆ ಹೋದವು. ಒಂದರ್ಧ ಘಂಟೆಲಿ ಎಲ್ಲೋರೂ ಅವರವರ ಗುಂಪು ಕಟ್ಟಿಯೊಂಡವು.

*

ಎನಗೋ, ಪೇಟೆಲಿ ಕಂಕನಾಡಿ ಟು ಕಂಕನಾಡಿ ಬಸ್ಸಿಲಿ ಹೋಗಿ ಗೊಂತಿತ್ತಷ್ಟೆ.
ಈ ಕಾಡು ಹೊಸತ್ತು. ಮರದ ಬೇರುಗಳೇ ಒಂದಕ್ಕೊಂದು ಸಿಕ್ಕಿಗೊಂಡು ಮೆಟ್ಳುಗಳ ಹಾಂಗೆ ಆಗಿತ್ತಿದಾ, ಹತ್ತುಲೆ ಎಡಿಗೋ ಈಗ?
೪೫ ರಲ್ಲಿ ಹೋಗಿಯೊಂಡು ಇದ್ದ ಗಾಡಿ ೨೫ಕ್ಕೆ ಇಳುತ್ತು.
ಕಾಲು ಬಚ್ಚಲೆ ಸುರುಆತು ಮಾಣಿಗೆ. ಎನ್ನ ಹಾಂಗೇ ಇದ್ದ ಒಂದು ೫ ಜೆನ ಸೇರಿ – ಜತೆಗೂ ಆತು ಬಚ್ಚುದಕ್ಕೂ ಆತು ಹೇಳಿ – ಒಟ್ಟಿಂಗೇ ನೆಡವಲೆ ಸುರು ಮಾಡಿದೆಯ.
ಅವರಲ್ಲೊಬ್ಬನ ಹೆಸರು ಅಭ್ಯುದಯ° ಹೇಳಿ. ಮಂತ್ರದಷ್ಟೇ ಚೆಂದಕೆ ಪದ್ಯವೂ ಹೇಳುಗು. ಸರಿ, ದಾರಿಗೆ ಎಂತಾರು ಬೇಕನ್ನೆ, ನೀನು ಪದ್ಯ ಹೇಳುಭಾವ ಎಂಗ ಕೇಳ್ತೆಯ° ಹೇಳಿದ° ಸಿದ್ದು. ಅಪ್ಪಪ್ಪು ಹೇಳಿ ಮಾಣಿ ಗಾಳಿ ಹಾಕಿದ°.

ಅಮ್ಮಾ… ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು..
ಮಿಡುಕಾಡುತಿರುವೆ ನಾನೂ… ಹೇಳಿ ಸುರು ಮಾಡಿದ° ಅಭಿ.

ಹಾಂಗೇ ಹತ್ತಿಯೋಂಡು ಹೋಪಗ ಒಂದು ದೊಡ್ಡ ಪಾದೆ ಕಂಡತ್ತು.
ಅದರ ಭೀಮನ ಪಾದೆ ಹೇಳ್ತವಡ – ಪ್ರದೀಪ° ಹೇಳಿದ. ಅಕ್ಕಂಬಗ, ಹೇಂಗೂ ಬಚ್ಚಿದ್ದು ಒಂದು ರಜ್ಜ ನೀರು ಕುಡುದು ಸುಧಾರುಸಿಯೊಂಡು ಮುಂದೆ ಹೋಪೊ°, ಹೇಳಿ ನೋಡಿರೆ ನೀರೆಲ್ಲಿದ್ದು? ಪದ್ಯ ಹೇಳ್ತವ° ಎಡಕ್ಕಿಲ್ಲಿ ಪೂರಾ ಕುಡುದು ಮುಗಿಶಿದ್ದ°, ಕೇಳಿಗೋಂಡಿದ್ದವು ಕೇಳಿಗೊಂಡೇ ಬಾಕಿ.

ಇನ್ನೆಂತ ಮಾಡ್ತ್ಸು?
ಅಲ್ಲೇ ಬಲತ್ತಿಂಗೆ ರಜ್ಜ ಒಳ ಹೋದರೆ ಭೀಮನ ಸಾರು ಹೇಳ್ತ ತೊರೆ ಇದ್ದು ಹೇಳಿದ° ಸಿದ್ದು.
ಅಲ್ಲಿಗೆ ಹೋಗಿ ನೋಡ್ತರೆ, ಚೆಂದ ಜಾಗೆ ಟೆಂಟು ಹಾಕಲೆ. ಕುಮಾರ ಪರ್ವತ ಹತ್ತುತ್ತವೆಲ್ಲ ಇಲ್ಲೇ ಬೇಕಾದಷ್ಟು ನೀರು ತುಂಬುಸಿಯೊಳ್ತವು. ಮತ್ತೆ ನೀರು ಸಿಕ್ಕುದು ಕಷ್ಟ. ಒಂದು ರಜ್ಜ ಹೊತ್ತು ಕೂದು ಬಚ್ಚೇಲು ತಣಿಶಿ ಹೆರಟೆಯೊ°.

ಹೇ° ಇದೆಂತ ನೆತ್ತರು ಬತ್ತಾ ಇದ್ದು ಕಾಲಿಲ್ಲಿ ನೋಡಿರೆ ಉಂಬ್ಳು. ಮಾಣಿ ಹೆದರಿ ಕಿತಾಪತಿ.

ಪೇಟೆ ಮಾಣಿ ಅಲ್ಲದಾ?
ಮದಲನೇಸರ್ತಿ ನೋಡುದಿದಾ – ನೋಡಿ ಗೊಂತಿಲ್ಲೆ.
ಆದರೆ ನಮ್ಮ ಸಿದ್ದ° ಇದ್ದಾನ್ನೆ, ಅವ ಉಶಾರಿ ಹೀಂಗಿಪ್ಪದಲ್ಲಿ.
ಆ ಉಂಬ್ಳಿನ ಕಡ್ಡಿಲಿ ತೆಗದು ಇಡುಕ್ಕಿ ಧೈರ್ಯ ಹೇಳಿದ ಮಾಣಿಗೆ. ಅಲ್ಲಿಂದ ಮುಂದೆ ದೊಡಾ ಕಾಡು. ಇಲ್ಲಿ ಕಾಡು ಪ್ರಾಣಿಗೊ ಸುಮಾರು ಇದ್ದತ್ತಡ.
ಮನುಷ್ಯ ಹೇಳ್ತ ಪ್ರಾಣಿ ಬಂದ ಮೇಲೆ ಕಾಡು ಪ್ರಾಣಿಗೊ ಇಲ್ಲೆ ಹೇಳಿದವು ಗಣೇಶ ಮಾವ°. ಕಾಡಿನ ತುಂಬಾ ನಮ್ಮ ಗಲಾಟೆಯೇ ಕೇಳ್ತಾ ಇತ್ತು. ಸುಮಾರು 4 ಕಿ.ಮೀ ನೆಡದ ಮೇಲೆ ಕಾಡು ಮುಗುದು, ಬೋಳುಗುಡ್ಡ ನಮ್ಮ ಎದೆ ಮಟ್ಟಕ್ಕೆ ನಿಂದತ್ತು.

ವಾತಾವರಣ ಊಹಿಸಲಾಧ್ಯ ರೀತಿಲಿ ಹೇಳುವಾಂಗೆ ಬದಲಾಗಿತ್ತು. ಎಲ್ಲಿಯೂ ನಿಲ್ಲದ್ದೆ ಸರ್ತ ಹೋದ್ದು ಗಿರಿಗದ್ದೆಗೆ.
ಅಲ್ಲಿ ಎತ್ತುವಾಗಳೇ ಗಂಟೆ ೨ ಆದಿಕ್ಕು. ಶ್ರಮಜೀವಿ ಭಟ್ಟರ ಮನೆಲಿ ನವಗೇ ಹೇಳಿಯೇ ಊಟ ತಯಾರಾಗಿತ್ತು.

*

ಗಿರಿಗದ್ದೆಲಿ ಒಂದು ಸಣ್ಣಕೆ ಒರಗಿ ಎದ್ದು, ತೋಟಕ್ಕೆ ಹೋದೆಯ°.
ಅಲ್ಲಿ ಸುಮಾರು ಪೇರಳೆ – ಸೀತಾ ಫಲದ ಮರಂಗ ಇತ್ತಿದ್ದು, ಇಪ್ಪ ಮರಂಗಳ ಎಲ್ಲಾ ಹೊಡಿ ಹೊಡಿ ಮಾಡಿ ವಾಪಸ್ಸು ಬಂದು ಉಂಡು ಒರಗಿದೆಯ°.
ಜೋರು ಚಳಿ ಸುರು ಆತು. ಹೊತ್ತೊಂಡು ಬಂದ ಹೊದಕ್ಕೆ ಸಾಕಾಯಿದಿಲ್ಲೆ ಮಾಣಿಗೆ. ಮರದಿನ ಉದಿಯಪ್ಪಗ ಬೇಗ ಎದ್ದು ತಣ್ಣೀರಿಲ್ಲೇ ಮಿಂದುಗೊಂಡು ಹೆರಟೆಯೊ°.

ಅಲ್ಲೇ ಒ೦ದು ಕಾಡಿನ ಆಪೀಸು.
ಅಲ್ಲಿಯಾಣೋರತ್ರೆ ನಮ್ಮ ಗಣೇಶ ಮಾವ ಎಂತದೋ ಕುಣು ಕುಣು ಮಾತಾಡಿ ಸರಿಮಾಡಿದವು.
ಅದು ಕಳುದು ಮುಂದೆ ಹೋದೆಯ°, ಎಲ್ಲಿ ನೋಡಿರೂ ಚೆಂದ ಚೆಂದದ ಪರ್ವತಂಗೊ. ಅಲ್ಲೇ ಮುಂದೆ ಮಾರಿಗುಂಡಿ ಹೇಳಿ ಒಂದು ಜಾಗೆ.
ಹೆಸರಿಂಗೆ ತಕ್ಕ ಹಾಂಗೆ ಇದ್ದುದೇ, ಗುಡ್ಡೆ ಕೊಡೀಲಿ ನೆಡಕ್ಕೊಂಡು ಹೋಪದಿದಾ, ರಜ್ಜ ಮಾಲಿರುದೇ ಮತ್ತೆ ಹುಡ್ಕೆಕೂ ಹೇಳಿ ಇಲ್ಲೆ. ಒಳುದ ಎಲ್ಲೋರೂ ಮುಂದೆ ಹೋಗಿ ಆಗಿತ್ತು. ಮಾಣಿಯೂ ಮತ್ತೆ ೪-೫ ಮಕ್ಕಳು ಮಾತ್ರ ಬಾಕಿ ಈಗ.

ಪೋಕು ಮುಟ್ಟಿತ್ತು ಮಾಣಿಗೆ – ಇಲ್ಲಿವರೆಗೆ ಬಂದು ಹೆದರಿ ಹಿಂದೆ ಹೋಪಲಾರು ಎಡಿಗೋ? – ಬೀಳುಸಿಕ್ಕೆಡ ಚಾಮಿ ದೇವರೇ ಹೇಳಿ ಉಸುಲುಗಟ್ಟಿ ಹೆರಟವು ನೆಮ್ಮದಿಯ ಉಸುಲು ತೆಗದ್ದು ಕಲ್ಲ ಮಂಟಪಲ್ಲಿಯೇ.
ಅಲ್ಲಿ ಏಲ್ಲೋರೂ ಕಾದುಗೊಂಡು ಇತ್ತಿದ್ದವು. ಗಣೇಶ ಮಾವನ ಒಟ್ಟಿಂಗೆ ಗುರಿಕ್ಕಾರ್ತಿಗೆ ಮಾಡಿಯೋಂಡಿತ್ತಿದ್ದ ಇನ್ನೊಬ್ರು ಎಂಗೊ ಬಪ್ಪಲೆ ತಡ ಆದ್ದಕ್ಕೆ ಬೈದವು. ಅಲ್ಲಿಂದ ಎಲ್ಲೋರೂ ಒಟ್ಟಿಂಗೇ ಹೆರಟೆಯ°.

ಮತ್ತೆ ಒಂದೆರಡು ಗುಡ್ಡೆ ಹತ್ತಿ ಇಳುದು- ಕಲ್ಲಿನ ಪರ್ವತದ ಮೇಲೆ ಹೊಡಚ್ಚಿದ ಮೇಲೆ, ಕೊಡಿ ಮುಟ್ಟಿತ್ತು. ಅಯ್ಯೋ ದೇವರೇ ಎಂತ ಕೇಳ್ತಿ?
೨ ಪೀಟು ದೂರಲ್ಲಿ ಇದ್ದವ° ಕಣ್ಣಿಂಗೆ ಕಾಣ°, ಅಷ್ಟೂ ಹನಿ. ಅಂತೂ ಅಲ್ಲಿ ಕೂದು ಸುಧಾರುಸಿಯೊಂಡೆಯೊ°. ಕೆಳ ಸೆಖೆ, ಇಲ್ಲಿ ಛಳಿ. ಬೇಕಿತ್ತೋ ಈ ಚಾರಣದ ಮರ್ಲು ತೋರಿತ್ತು ಮಾಣಿಗೆ.

“ಇದಾ ಎಲ್ಲೋರೂ ಸರಿಯಾಗಿ ಕೂರಿ ನೋಡೊ°,

ಹಾಂ!! ಸುರುಮಾಡಿ, ಶ್ರೀ ಗುರುಭ್ಯೋ ನಮಃ ಹರಿಃ ಓಂ. ಹೇಳಿದವು ಗಣೇಶ ಮಾವ°

.

.

.

ಶಾಂತಿಃ  ಶಾಂತಿಃ  ಶಾಂತಿಃ  ಹರಿಃ  ಓಂ!
ಹೇಳಿ ಮುಗುಶಿ ಅಪ್ಪಗ ಇದ್ದಲ್ಲದೋ, ಆಗಿಯೋಂಡಿದ್ದ ಛಳಿ ಪೂರಾ ಬಿಟ್ಟು ಹೋತು. ಅಂಬಗ ಮಂತ್ರ ಹೇಳಿರೆ ದೇಹದ ಉಷ್ಣತೆ ಸರಿ ಆವುತ್ತು ಗ್ರೇಷಿದೆ.

*

ಈ ನಾವು ರುದ್ರ ಹೇಳ್ತನ್ನೆ? ಅವಗ ನಮ್ಮ ದೇಹ ಚೊಕ್ಕಕೆ ಬೆಗರೆಕಡ, ಪಳ್ಳಾದೆ ಡಾಕ್ತ್ರು ಹೇಳಿಂಡಿಕ್ಕು.

ಅವಗ ನಮ್ಮ ದೇಹದ ಕೊಲೆಸ್ತ್ರಾಲು ಸರಿ ಆವುತ್ತಡ.
ಓ ಮೊನ್ನೆ ಒಂದು ಮೆಸೇಜು ಬಂತು 11.09.10 ಕ್ಕೆ ಅಮೇರಿಕೆಲ್ಲಿ ಸುಮಾರು ಜೆನ ಸತ್ತವು ಮೊನ್ನೆ 10.03.11 ಕ್ಕೆ ಪಾಪ ನಮ್ಮ ಜೆಪಾನಿಲ್ಲಿ ಭೂಕಂಪವೂ ಸುನಾಮಿಯೂ ಆಗಿ ಸುಮಾರು ಜೆನ ಹೋದವಿದಾ, ಆ ೨ ದಿನಂಗಳ ಕೂಡುಸಿರೆ ೨೧.೧೨.೧೨ ಬತ್ತು. ನೋಡಿ ಬೇಕಾರೆ ಅದೇ ದಿನ ಅಲ್ಲದೋ ವಿಶ್ವದ ಕೊನೇದಿನ ಹೇಳಿ.
ಮಕ್ಕ ಹೀಂಗೆಲ್ಲ ಹೇಳಿ ಹೆದರ್ಸಲೆ ನೋಡುದು; ಮಾಣಿ ಹೆದರಿದ್ದಾ° ಇಲ್ಲೆ.
ಎಂತಕೆ ಗೊಂತಿದ್ದಾ?

ಎನ್ನ REIKI ಗುರುಗೊ ಹೇಳಿತ್ತಿದ್ದವು ಭೂಮಿ ತನ್ನ ಈಗಿಪ್ಪ energy levelಂದ ಮತ್ತೊಂದು energy levelಗೆ ಹೋವುತ್ತ ಇದ್ದಡ.
ಅಂಬಗ ರಜ್ಜ ಹೀಂಗಿಪ್ಪ ಅನಾಹುತಂಗೊ ಅಕ್ಕು. ಆದರೆ ಚಿಂತೆ ಮಾಡೆಕು ಹೇಳಿ ಇಲ್ಲೆ. ನಾವು ಹೊಸ energy levelಂಗೆ set ಆಗಿಯೊಂಡರೆ ಮುಗಾತು.
ನವಗೆಂತ ಆಗ ಹೇಳಿ. ಹಾಂಗೆ ಮಾಣಿಗೆ ಧೈರ್ಯ. ಎಂತಕೆ ಗೊಂತಿದ್ದಾ? ಈ ಮಾಣಿ ಶ್ರೀ ವಾಣಿಗೆ ತೆರಕ್ಕೊಂಡಿದ. ನಮ್ಮ ಗುರುಗೊ ಹೇಳಿದ್ದಲ್ಲದಾ, ಎಲ್ಲೋರೂ ರುದ್ರ ಕಲಿಯೆಕು, ಮನೆಲಿ ಪ್ರತಿದಿನ ಹೇಳೆಕು ಹೇಳಿ – ಸುಮ್ಮನೆ ಅಲ್ಲ.

ಮಂತ್ರಂಗಳ, ಅದರಲ್ಲೂ ಮಂತ್ರಂಗಳ ರಾಜ° ಹೇಳ್ತ ರುದ್ರವ ಹೇಳಿರೆ ನಾವು ಸ್ವಾಭಾವಿಕವಾಗಿಯೇ ಪ್ರಕೃತಿಯ ಚೈತನ್ಯವ ನಮ್ಮೊಳ ತೆಕ್ಕೊಳ್ತು.
ನಮ್ಮ ಮತ್ತು ಪ್ರಕೃತಿಯ ಚೈತನ್ಯ ಒಂದೇ ಆದಮತ್ತೆ ನವಗೆ ಚಳಿ ಎಂತ ಸೆಖೆ ಎಂತ?
ನಂಬಿಕೆ ಬೇಕಷ್ಟೆ.

ಹೇ°?

*

ಬೆಟ್ಟದ ಮೇಲೆ ಕಲ್ಲಿಂದಲೇ ನಿರ್ಮಿಸಿದ ಒಂದು ಪುಟ್ಟು ದೇವಸ್ಥಾನ ಇದ್ದು.

Temple at Kumara parvata hill top
ಗುಡ್ಡೆ ಕೊಡೀಲಿ ಕಲ್ಲಿನ ದೇವಸ್ಥಾನ

ಇಲ್ಲಿಯಾಣ ಸೂರ್ಯಾಸ್ತ ಮನಮೋಹಕವಾಗಿ ಇರ್ತಡ. ಸೂರ್ಯಾಸ್ತ ನೋಡೆಕು ಹೇಳಿ ಆದರೆ, ಹೊತ್ತೋಪಗ 5.30 ರಿಂದ ಮೊದಲೇ ಅಲ್ಲಿ ತಲುಪೆಕು.
ನಿಜವಾದ ಚಾರಣದ ಅನುಭವ ಅಪ್ಪದು camp fireಲಿ. ಟೆಂಟ್ ಒಳ ಮನುಗಿರೆ ಖುಷಿ ಆಗ. ಬೇಸಿಗೆ ಆದರೂ ಸಮುದ್ರ ಮಟ್ಟಂದ ಸುಮಾರು 1712 ಮೀ ಎತ್ತರದಲ್ಲಿ ಇಪ್ಪದರಿಂದ ತುಂಬಾ ಹೇಳಿ ಅಲ್ಲದ್ದರೂ ಸ್ವೆಟರ್ ಹಾಕಿಯೊಂಬಷ್ಟು ಚಳಿ ಇಕ್ಕು ಇರುಳು.
ಅಲ್ಲಿ ಕೊಡಿಲಿ ಕುಮಾರ ಲಿಂಗ ಹೇಳ್ತದು ಸಿಕ್ಕುತ್ತಡ. ಮಾಣಿಗೆ ಸಿಕ್ಕಿದ್ದಿಲ್ಲೆ :( ಅದು ಸಿಕ್ಕಿದೋರು, ಇದು ಕೊಡಿ – ಇದು ಕಡೆ ಹೇಳಿಗೊಂಡು ಇತ್ತಿದ್ದವು. ಮಾಣಿಗೆ ಅದರ ತಲೆ ಬುಡ ಅರ್ಥ ಆಯಿದಿಲ್ಲೆ.

ಹಾಂ°…! ಹಾಂ°…! ಹೇಳಿದ°.

*

ಅಲ್ಲಿ ಒಂದು ಸಣ್ಣ ಫೋಟೋ ಸೆಶನ್ ಮಾಡಿದೆಯ°.

ಹತ್ತಿದವೆಲ್ಲ ಇಳಿಯಲೇ ಬೇಕನ್ನೆ?
ಅಂತೂ ಮನಸ್ಸಿಲ್ಲದ್ದ ಮನಸ್ಸಿಲಿ ಕುಮಾರ ಪರ್ವತದ ಕೊಡೀಲಿಪ್ಪ ಶಿವ ದೇವರಿಂಗೆ ಅಡ್ಡ ಬಿದ್ದೆಯ°.
ಮಧ್ಯಾನ್ನ ಗಿರಿಗದ್ದೆಲಿ ಉಂಡು, ಲೋಕಾಭಿರಾಮ ಮಾತಾಡಿ – ಫಟ ಗಿಟ ಎಲ್ಲ ತೆಗಕ್ಕೊಂಡು ಇಳುದೆಯ°.

ನಾಗ ಚಾಮಿಗೆ ನಮಸ್ಕಾರ

ದಾರಿ ಮಧ್ಯೆ ಒಬ್ಬ ವಿಶೇಷ ಅತಿಥಿಯ ದರ್ಶನ ಆತು. ಹೆದರಿದೋರಿಂಗೆ ಭೂತ ಕಂಡತ್ತು ಹೇಳುವಾಂಗೆ, ಮಾಣಿ ಕೆಳ ಇಳಿತ್ತಾ ಇಪ್ಪಗ ಅಲ್ಲಿ ಕಂಡತ್ತದಾ ಸ್ನೇಕ್ ಚಾಮಿ. ಆದರೆ ಅದು ವಿಷಪೂರಿತ ಅಲ್ಲದ್ದ ನಿರುಪದ್ರವಿ.
ಒಂದರಿ ಮೇಲೆ ಹೋದವಂಗೆ ಕೆಳ ಬಪ್ಪದು ಕಷ್ಟ ಆವ್ತು. ಎಂಗೊಗೂ ಹಾಂಗೇ ಆತು. ತೊಡೆ ಎಲ್ಲ ಬೇನೆ ಆಗಿ ತಡೆಯ. ಅಂತೂ ಇರುಳು ಪಾಠಶಾಲೆಲಿ ಮೌನವೋ ಮೌನ.
ಸಾಮೂಹಿಕ ಸಂಧ್ಯಾವಂದನೆಗೂ ಮಾಣಿಯ ಸೇರ್ಸಿ ಆರೇ ಜೆನ.

ಚಾರಣ ಮಾಡ್ಲೆ ತೊಂದರೆ ಅಪ್ಪಲಾಗ ಹೇಳಿ ಪ್ರತಿದಿನ 100 ಬಸ್ಕಿ ಹೊಡಕ್ಕೊಂಡಿತ್ತಿದ್ದ ಸಿದ್ದು ಕಾಲುಬೇನೆ ಹೇಳಿ ೨ ದಿನ ಎದ್ದಿದಾ° ಇಲ್ಲೆ.
ಆದರೂ ಆ ಬೇನೆಲೂ ಒಂದು ಖುಷಿ, ತೃಪ್ತಿ ಇತ್ತು.

*

ಇರುಳು ನಿಂಬವಕ್ಕೆ:

 1. ನಿಂಗಳ ಲಗೇಜು ಆದಷ್ಟು ಕಮ್ಮಿ ಇರಲಿ. ಎಲ್ಲೆಲ್ಲಿ ಅವಕಾಶ ಇದ್ದೋ ಅಲ್ಲೆಲ್ಲಾ ನೀರು ತುಂಬಿಸಿಯೊಳ್ಳಿ. ನೀರು ಎಷ್ಟಿದ್ದರೂ ಸಾಲ. ಇರುಳಾಣ ಊಟಕ್ಕೆ ಎಂತಾರು ಕಟ್ಟಿಯೊಂಡೇ ಹೋಗಿ. ಅಲ್ಲಿ ಮಾಡ್ತ ಪಂಚಾತಿಗೆ ಆಗ.
 2. ಪೀಶಕತ್ತಿ, ಮೇಣದ ಬತ್ತಿ , ಬೇನೆ ಗೊಂತಾಗದ್ದ ಹಾಂಗೆ ಮಾಡುವ ಮಾತ್ರೆಗೊ(pain killer), ತಲೆಬೇನೆ/ಜ್ವರದ ಮಾತ್ರೆ, ಬ್ಯಾಂಡ್ ಏಡ್ , ಟಾರ್ಚು, ಬೆಂಕಿಪೆಟ್ಟಿಗೆ, ಸುಣ್ಣ (ಉಂಬ್ಳು ತೆಗವಲೆ ಬೇಕಪ್ಪಲೂ ಸಾಕು) ಮುಂತಾದ ಅವಶ್ಯಕ ವಸ್ತುಗಳ ನೆಂಪಿಲ್ಲಿ ತೆಕ್ಕೊಳ್ಳಿ. ಚಳಿ ತುಂಬ ಇಪ್ಪ ಕಾರಣ ಸ್ವೆಟರ್ ,ಬೆಡ್ ಶೀಟ್ ಮರೆಯಡಿ.
 3. ಎಲ್ಲಕ್ಕಿಂತ ಮುಖ್ಯವಾಗಿ ನಿಂಗಳೊಟ್ಟಿಂಗೆ ಕೂಸುಗಳ/ಹೆಮ್ಮಕ್ಕಳ ಕರಕ್ಕೊಂಡು ಹೋವುತ್ತರೆ ಅವರ ಇರುಳು ಗಿರಿಗದ್ದೆಲೇ ಒರಗುಲೆ ಹೇಳುದು ಸೂಕ್ತ.

ಮುಗಿಶುವ ಮದಲು:

ಕುಮಾರ ಪರ್ವತಕ್ಕೆ ಸೋಮವಾರಪೇಟೆಂದಲೂ (ಕೊಡಗು ಜಿಲ್ಲೆ ) ಇನ್ನೊದು ದಾರಿ ಇದ್ದು.
ಅದು ಬರೇ 7 ಕಿ ಮೀ ದಾರಿ ಮಾತ್ರ ಅಡ. ಎರಡು ದಾರಿಗಳುದೇ ಒಂದೇ ಕಡೆ ಸೇರ್ತಡ. ಅದರ ಬಗ್ಗೆ ಮಾಣಿಗೆ ಸರಿಯಾದ ಮಾಹಿತಿ ಇಲ್ಲೆ. ಈ 13 ಕಿ.ಮೀ ಜಾಸ್ತಿ ಆತು ಎಡಿತ್ತಿಲ್ಲೆ ಕಂಡ್ರೆ ಅತ್ಲಾಗಿಂದ ಹತ್ತಿ ಇತ್ಲಾಗಿ ಇಳಿವಲಕ್ಕು.

ನಿಂಗಳ
ಮಂಗ್ಳೂರ ಮಾಣಿ

ಕುಮಾರ ಪರ್ವತಕ್ಕೆ ಒಂದು ಸುತ್ತು…, 4.7 out of 10 based on 3 ratings
ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 35 ಒಪ್ಪಂಗೊ

 1. ಆಚಕರೆ ಮಾಣಿ

  ಇದಾ…. ಎನ್ನ ಸುರೂವಾಣ ಕುಮಾರ ಪರ್ವತ ಯಾತ್ರೆಯ ಕೆಲವು ಪಟಂಗೋ ಇದ್ದು… ನೇಲುಸಿದ್ದೆ ಇಲ್ಲಿಯೆ… ಮಾಣಿಯ ಗುರ್ತ ಸಿಕ್ಕುತ್ತಾ ಆರಿಂಗಾರೂ ನೋಡಿ ಹೇಳಿ.

  ಇದು ಗಿರಿಗೆದ್ದೆ ಮನೆಯ ಒಳ ತೆಗದ ಪಟ. ಹಿಂದೆ ಗೋಡೆಹತ್ತರೆ ನೇಲುಸಿಗೊಂಡಿಪ್ಪದು ಹೊಗೆಸೊಪ್ಪು. ಅಲ್ಲಿಯೇ ಬೆಳೆಶಿದ್ದು.
  ಗಿರಿಗೆದ್ದೆಲಿ ಆಚಕರೆ ಮಾಣಿ

  ಇದು ಎಂಗಳ ಯೋಗ ಗುರುಗೊ… ಶ್ರೀಕೃಷ್ಣ ಭಟ್ಟ್ರ ಒಟ್ಟಿಂಗೆ ತೆಗದ ಪಟ. ಆ ಗೆಡ್ಡದವು ವಿಘ್ನೇಶ್ವರ ಭಟ್ರು ಹೇಳಿ… ಋಗ್ವೇದ ಗುರುಗೋ. ಒಟ್ಟಿಂಗಿಪ್ಪ ಮಾಣಿಯ ಹೆಸರು ಮರತ್ತಿದೆ. ಗೊಂತಾದರೆ ಹೇಳಿ ಕೊಡಿ ಎನಗೆ.
  ಕುಮಾರಪರ್ವತ ಚಾರಣ
  ಮಂಗ್ಳೂರ ಮಾಣಿ ಹೇಳಿದ ವೇಷಲ್ಲೇ ಇದ್ದೆಯೋ ಕೆಲವು ಜೆನ. ಮತ್ತೆ ಕೆಲವು ಚಡ್ಡಿ, ಪ್ಯಾಂಟು….

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಭಾವಾ,
  ಫಟಂಗಳ ಅಂಟುಸಿದ್ದು ಲಾಯಕ ಆತು.
  :):)

  ಎನಗೆ ಗೊಂತಾತೂ…
  ಹೇಳೆಕಾ???
  ಆನು ಹೇಳೆ.

  [Reply]

  ಆಚಕರೆ ಮಾಣಿ

  ಆಚಕರೆ ಮಾಣಿ Reply:

  ಯೇ ಮಂಗ್ಳೂರ ಮಾಣೀ….. ಆ ಎರಡು ಮಕ್ಕೋ ಇಪ್ಪ ಪಟಲ್ಲಿ ನಿನ್ನ ಅಣ್ಣನ ಗೊಂತಾಯಿದಿಲ್ಲ್ಯಾ?

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಗೊಂತಾಯಿದು ಗೊಂತಾಯಿದು ಅದು ಎನ್ನ ಪುಟ್ಟಣ್ಣಾ…

  VA:F [1.9.22_1171]
  Rating: 0 (from 0 votes)
  ಪುಚ್ಚಪ್ಪಾಡಿ ಮಹೇಶ

  ಪುಚ್ಚಪ್ಪಾಡಿ ಮಹೇಶ Reply:

  ಅಯ್ಯೋ ಇದೆಂತ ಅವಸ್ಥೆ ಭಾವಯ್ಯ ? ಇನ್ನು ಚೂರು ದೊಡ್ಡ ಆದರೆ ಆ ಟವರ್ ಮುಟ್ಟುಗಲ್ಲಾ ? , ಇದು ಅಂದಾಣ ಫಟ ಅಲ್ಲದಾ ? ಈಗ ಟವರ್ ಮುಟ್ಟುಗಲ್ದಾ ?

  ಅದಿರ್ಲಿ ಈ ಕೃಷ್ಣ ಅಣ್ಣ ಎಲ್ಲಿ ಸಿಕ್ಕಿದ ?

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಭಾವಯ್ಯ ಅವ್ವು ವೇದ ಪಾಠ ಶಾಲೆಯ ಯೋಗ ಗುರುಗೊ:):):)

  [Reply]

  VA:F [1.9.22_1171]
  Rating: 0 (from 0 votes)
  ಆಚಕರೆ ಮಾಣಿ

  ಆಚಕರೆ ಮಾಣಿ Reply:

  ಆ ಕೃಷ್ಣಣ್ಣ ಎಂಗಳ ಗೈಡ್. ಅವು ಸುಮಾರು ಐವತ್ತು ಸರ್ತಿ ಎಲ್ಲಾ ಹೋಯಿದವಡ ಕುಮಾರ ಪರ್ವತಕ್ಕೆ.

  ಅವು ಸುಬ್ರಮಣ್ಯಲ್ಲಿ ಮಾಷ್ಟ್ರು. ಲೆಕ್ಕಕ್ಕೆ. :)

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°

  ಜನಿವಾರ ಎಂತ ಹಾಂಗೊಂದು ನೆಣಪ್ಪಿಯೊಂಡು ಇದ್ದು?! ಕಲ್ಲಿಂಗೆ ಹಾಕಿ ತಿಕ್ಕಿದ್ದೋ ಹೇಂಗೆ ಮೀವಾಗ ಬೆಳಿ ಆಯೇಕು ಹೇದು.?!!

  [Reply]

  ಆಚಕರೆ ಮಾಣಿ

  ಆಚಕರೆ ಮಾಣಿ Reply:

  ಅದು ಹಾಂಗಲ್ಲ ಭಾವಾ…. ”ಕೂದು” ಏಳುವಾಗ ಕಾಲಿಂಗೆ ಸಿಕ್ಕಿ ಕಡಿವಲಾಗ ಇದಾ… ಹಾಂಗಾಗಿ ಗುರುಗೋ ಹೇಳಿಕೊಟ್ಟ ಹಾಂಗೆ ಗೆಂಟು ಹಾಯಿಕ್ಕೊಂಡದು. ಅದೇ, ಆ ಹಿಂಡಿ ಗೋಣಿಗೆ ಹೊಲಿತ್ತವದಾ… ಪರ್ರನೆ ಒಂದು ಕೊಡಿ ಹಿಡುದು ಎಳದಪ್ಪಾಗ ಇಡೀ ಹೊಲಿಗೆ ಬಿಚ್ಚುವ ಹಾಂಗೆ…

  [Reply]

  VA:F [1.9.22_1171]
  Rating: 0 (from 0 votes)
 3. ಪುಚ್ಚಪ್ಪಾಡಿ ಮಹೇಶ

  ಮಂಗ್ಳೂರು ಮಾಣಿ ಬರ್ದು ಲಾಯ್ಕಿ ಆಯ್ದು. ಅದಲ್ಲ ಗಿರಿಗದ್ದೆಲಿ ನಿಂಗ ಮನುಗಿದ್ದಿಲ್ಲಿಲ್ಯಾ ? ರಾತ್ರಿಯ ಅನುಭವ ಹೇಂಗಿತ್ತು ?.
  ಎಂಗೋ ಹೋದ ಅನುಭವ ಹೇಳ್ತೆ. ಸುಬ್ರಹ್ಮಣ್ಯಂದ ಗಿರಿಗದ್ದೆಗೆ ಹೋಗಿಯಪ್ಪಗಳೆ ಬಚ್ಚುತ್ತು. ಅಲ್ಲಿ ರಾತ್ರಿ ಮನುಗಿ ಅಪ್ಪಗ ಒಬ್ಬೊಬ್ಬಂದ್ ಒಂದೊಂದು ನಮುನೆ ಗೊರಕೆ. ನಮ್ಗೆ ನಿದ್ದೆ ಹೇಂಗೆ ಬಕ್ಕು ? ಒಬ್ಬಂದು ಲಾರಿ ಚಡವು ಹತ್ತುವಾಗ ಬಪ್ಪ ಸೌಂಡಿನ ಹಾಂಗೆ ಇದ್ದರೆ , ಇನ್ನೊಬ್ಬಂದು ರಿಕ್ಷದ ಹಾರ್ನಿನ ಹಾಂಗೆ , ಇನ್ನೊಬ್ಬಂದು ಚಡವು ಇಳಿವ ಬಸ್ಸಿನ ಹಾಂಗೆ. ಅಂತೂ ಒಟ್ಟಾರೆ ಎಂಗೊಗೆ ನಿದ್ದೆಯೇ ಇತ್ತಿಲ್ಲೆ. ಹಾಂಗೆ ಆಯಿದು ಕತೆ.

  – ಅದಲ್ಲ ಸೋಮವಾರ ಪೇಟೆ ಕಡೆಂದ ಬಂದರೆ ಸೀನ್ ಲಾಯ್ಕಿ ಇರ್ತಿಲ್ಲೆ. ಇದೇ ಒಳ್ಲೆದು.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಧನ್ಯವಾದ ಭಾವಯ್ಯ…
  ಇರುಳಾಣ ಅನುಭವ ಎನ್ನದೂ ಅದೇ.. ರಜ ನುಸಿಯೂ ಇತ್ತಿದಾ, ಸುಮಾರು ಬಚ್ಚಿದ್ದಕಾರಣ ಒರಗದ್ದೆ ವಿಧಿ ಇತ್ತಿಲ್ಲೆ.. :):)

  [Reply]

  VA:F [1.9.22_1171]
  Rating: 0 (from 0 votes)
 4. ಮಂಗ್ಳೂರ ಮಾಣಿ

  ಧನ್ಯವಾದ ಭಾವಯ್ಯ…
  ಇರುಳಾಣ ಅನುಭವ ಎನ್ನದೂ ಅದೇ.. ರಜ ನುಸಿಯೂ ಇತ್ತಿದಾ, ಸುಮಾರು ಬಚ್ಚಿದ್ದಕಾರಣ ಒರಗದ್ದೆ ವಿಧಿ ಇತ್ತಿಲ್ಲೆ.. :):)

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆಕಳಾಯಿ ಗೀತತ್ತೆರಾಜಣ್ಣಶರ್ಮಪ್ಪಚ್ಚಿವೇಣೂರಣ್ಣಅಜ್ಜಕಾನ ಭಾವಪುತ್ತೂರುಬಾವಜಯಗೌರಿ ಅಕ್ಕ°ಪುಣಚ ಡಾಕ್ಟ್ರುವೇಣಿಯಕ್ಕ°ಕೊಳಚ್ಚಿಪ್ಪು ಬಾವಪ್ರಕಾಶಪ್ಪಚ್ಚಿಕಾವಿನಮೂಲೆ ಮಾಣಿಚೂರಿಬೈಲು ದೀಪಕ್ಕಗೋಪಾಲಣ್ಣಪವನಜಮಾವಶೇಡಿಗುಮ್ಮೆ ಪುಳ್ಳಿಅನುಶ್ರೀ ಬಂಡಾಡಿಬೋಸ ಬಾವವಿನಯ ಶಂಕರ, ಚೆಕ್ಕೆಮನೆಬಟ್ಟಮಾವ°ನೆಗೆಗಾರ°ಹಳೆಮನೆ ಅಣ್ಣಬಂಡಾಡಿ ಅಜ್ಜಿಉಡುಪುಮೂಲೆ ಅಪ್ಪಚ್ಚಿಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ