Oppanna.com

ಲಕ್ಷ ರುದ್ರ ಸಮರ್ಪಣೆ-ಗೋಕರ್ಣ ಶ್ರೀ ಮಹಾಬಲೇಶ್ವರನ ಸನ್ನಿದಿಲಿ

ಬರದೋರು :   ಗೋಪಾಲಣ್ಣ    on   02/02/2014    1 ಒಪ್ಪಂಗೊ

ಗೋಪಾಲಣ್ಣ

ಗೋಕರ್ಣ ಶ್ರೀ ಮಹಾಬಲೇಶ್ವರನ ಸನ್ನಿದಿಲಿ ಲಕ್ಷ ರುದ್ರ ಸಮರ್ಪಣೆ

ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಒಂದು ಸಂಕಲ್ಪ-ಗೋಕರ್ಣ ಮಹಾಬಲೇಶ್ವರನ ಸನ್ನಿಧಿಲಿ ಕೋಟಿ ರುದ್ರ ಸಮರ್ಪಣೆ. ಈ ಸಂಕಲ್ಪ ಸಾಕಾರ ಆಯೆಕ್ಕಾದರೆ ಇನ್ನು ಕೆಲವು ಸಮಯ ಬೇಕಕ್ಕು. ಆದರೆ,ಈ ಕಾರ್ಯಕ್ರಮ ಹನಿಕಡಿಯದ್ದ ಮಳೆಯ ಹಾಂಗೆ ,ಅವಿಚ್ಛಿನ್ನವಾಗಿ ಕಳೆದ ಐದು ವರ್ಷಂದ ನಡೆತ್ತಾ ಇದ್ದು. ಶ್ರೀ ಮಠದ ಶಿಷ್ಯವರ್ಗದವರಾದ ನಾವು ರುದ್ರ ಕಲ್ತು ನಮ್ಮಷ್ಟಕ್ಕೆ ನಮ್ಮ ನಮ್ಮ ಮನೆಗಳಲ್ಲೊ,ಹತ್ತರಾಣ ದೇವಸ್ಥಾನಂಗಳಲ್ಲೋ ಪಾರಾಯಣ ಮಾಡುತ್ತಾ ಬೈಂದು.ಎಷ್ಟೋ ಜನ ಗೋಕರ್ಣಕ್ಕೂ ಹೋಗಿ ಸೇವೆ ಸಲ್ಲಿಸಿದ್ದವು.ಇತ್ತೀಚೆಗೆ ಜನವರಿ ೧೬ ಮತ್ತೆ ೧೭ಕ್ಕೆ ಶ್ರೀ ಗುರುಗೊ ಗೋಕರ್ಣಲ್ಲಿ ಇತ್ತಿದ್ದವು.ಅಲ್ಲಿ ಎರಡೇ ದಿನಲ್ಲಿ ಲಕ್ಷ ರುದ್ರ ಸಮರ್ಪಣೆಯ ಕಾರ್ಯಕ್ರಮ ನಡೆದತ್ತು.ನಾಡಿನ ವಿವಿಧ ಕಡೆಂದ ಸಾವಿರಾರು ಭಕ್ತರು ಭಾಗವಹಿಸಿ,ಕೃತಾರ್ಥರಾಯಿದವು.ಈ ಸಂದರ್ಭಲ್ಲಿ ತಾ.೧೭ರಂದು ಸಾಯಂಕಾಲ ಎಲ್ಲಾ ಶಿಷ್ಯರಿಂಗೂ ರುದ್ರಾಕ್ಷಿಸಹಿತ ಮಂತ್ರಾಕ್ಷತೆಯ ಗುರುಗೊ ಅನುಗ್ರಹಿಸಿದವು.

ನಮ್ಮ ಮಂಗಳೂರು ಉತ್ತರ ವಲಯಲ್ಲೂ ರುದ್ರದ ಅಭ್ಯಾಸ ಜರಗುತ್ತಾ ಇದ್ದು. ೨೦೦೯ರ ಜುಲೈಲಿ ಮೊದಲಾಣ ತಂಡ ಸುರು ಆತು.೨೦೧೧ ರಲ್ಲಿ ಎರಡನೇ ತಂಡ ಮತ್ತೆ ೨೦೧೩ರಲ್ಲಿ ಮೂರನೇ ತಂಡ ರುದ್ರ ಕಲಿವಲೆ ಸುರು ಮಾಡಿದ್ದವು. ವೇ|ಮೂ|ಶ್ರೀ ಪುತ್ತೂರು ಮುಕುಂದ ಭಟ್ರು ಎಲ್ಲಾ ವಯೋಮಾನದ ಶಿಷ್ಯರಿಂಗೂ ಅತಿ ತಾಳ್ಮೆಂದ ಹೇಳಿ ಕೊಡುತ್ತಾ ಇದ್ದವು.ಸ್ಪಷ್ಟ ಉಚ್ಚಾರಣೆ,ಸ್ವರಕ್ಕೆ ಅತಿ ಮಹತ್ವ ಕೊಡುವ ಅವರ ಪಾಠಕ್ರಮ  ಆಸಕ್ತಿದಾಯಕವೂ, ರಂಜನೀಯವೂ ಕೂಡ ಆಗಿರುತ್ತು.ಈ ಮೊದಲೇ ಒಂದೆರಡು ಬಾರಿ ನಮ್ಮ ವಲಯದವು ಗೋಕರ್ಣಲ್ಲಿ ರುದ್ರ ಸಮರ್ಪಣೆ ಮಾಡಿದ್ದವು.ಅದೇ ರೀತಿ, ಲಕ್ಷ ರುದ್ರ ಸಮರ್ಪಣೆಲೂ ನಮ್ಮ ವಲಯದ ಪ್ರಾತಿನಿಧ್ಯ ಇತ್ತು.
ತಾ.೧೭ ಶುಕ್ರವಾರ ಉದಯಕಾಲ  ೫ ಗಂಟೆಗೆ ಸುರತ್ಕಲಿಂದ ವಿಶೇಷ ಖಾಸಗಿ ಬಸ್ಸಿಲಿ ಹೆರಟೆಯೊ. ಸುಮಾರು ೧೦ ಗಂಟೆಗೆ ಗೋಕರ್ಣಕ್ಕೆ ಮುಟ್ಟಿದೆಯೊ.ಅಲ್ಲಿ ಮಹಾಬಲೇಶ್ವರನ ಸನ್ನಿಧಿಲಿ ,ನಿರಂತರವಾಗಿ ನಡೆತ್ತಾ ಇಪ್ಪ ರುದ್ರಲ್ಲಿ ಒಂದು ಏಕಾದಶದ ಆವರ್ತ ಅಷ್ಟಪ್ಪಾಗಳೇ ಮುಗಿದತ್ತು! ಎಂಗಳ ಸುಯೋಗ!ಹೊಸ ಆವರ್ತಕ್ಕೆ [ಆ ದಿನದ ಕಡೆಯಾಣದ್ದು] ಎಂಗೊ ಸೇರಿಕೊಂಡೆಯೊ. ಏಕಾದಶಾವರ್ತನ ರುದ್ರ ಜಪ ಆತು.ಪ್ರಸಾದ ಭೋಜನಾನಂತರ ಬಸ್ ನಿಲ್ದಾಣದ ಹತ್ತರೆ ನಿರ್ಮಿಸಲಾದ ಸಭಾಭವನಲ್ಲಿ ಸಭಾ ಕಾರ್ಯಕ್ರಮ. ಗುರುಗೊ ಬಪ್ಪಲ್ಲಿ ವರೆಗೆ ಮತ್ತೆ ರುದ್ರ ಪಾರಾಯಣ ನಡೆದತ್ತು. ಮತ್ತೆ ಗುರುಗಳ ಸಾನ್ನಿಧ್ಯಲ್ಲಿ ಅದರ ಪರಿಸಮಾಪ್ತಿ ಮಾಡಿ ಆತು.
“ಕೋಟಿ ರುದ್ರ ಹೇಳುವ ಸಂಕಲ್ಪ ಪೂರೈಸುದು ಯಾವಾಗ ಹೇಳುದು ಮುಖ್ಯ ಅಲ್ಲ.ಮಹಾಬಲೇಶ್ವರ ದೇವಳದ ಉಪಾಧಿವಂತ ಮಂಡಲದವು ಈ ಸಂಕಲ್ಪ ಪೂರ ಮಾಡುವ ಹೊಣೆ ಎಂಗೊಗೆ ಬಿಡಿ ಹೇಳಿ ಮುಂದೆ ಬೈಂದವು. ಅವರ ಧೈರ್ಯ,ವಿಶ್ವಾಸ ದೊಡ್ದದು. ಆದರೆ ಎಲ್ಲಾ ಶಿಷ್ಯರೂ ರುದ್ರ ಕಲ್ತು ಇಲ್ಲಿ ಅದರ ಸಮರ್ಪಿಸೆಕ್ಕು ಹೇಳಿ ನಮ್ಮ ಆಶಯ. ರುದ್ರ ಶಾಂತಿಯ ಪ್ರತೀಕ. ಅವನ ಆರಾಧನೆ ಎಲ್ಲರಿಂಗೂ ಕ್ಷೇಮಕರ.ರುದ್ರವ ಕಲ್ತರೆ ಗಣಪತಿ ಅಥರ್ವ ಶೀರ್ಷವನ್ನೋ ಬೇರೆ ಸೂಕ್ತಂಗಳನ್ನೋ ಕಲಿವದು ದೊಡ್ದದಲ್ಲ.ಇಷ್ಟೆಲ್ಲಾ ಮಾಡಿದವು ಸಂಧ್ಯಾವಂದನೆಯ ಮಾಡುದೂ ಸಾಧ್ಯ; ಸಂಧ್ಯಾವಂದನೆ ಒಂದು ನಿತ್ಯ ಕರ್ಮ .ಅದರ ಬಿಟ್ಟರೆ ಬೇರೆ ವ್ರತಾಚರಣೆಗೊ ಸಿದ್ಧಿಸವು. ಹಾಂಗಾಗಿ ಎಲ್ಲಾ ಶಿಷ್ಯರಲ್ಲೂ ಇಂತ ಧಾರ್ಮಿಕ ಜಾಗೃತಿ ಉಂಟಪ್ಪದೇ ಕೋಟಿ ರುದ್ರ ಯೋಜನೆಯ ಮುಖ್ಯ ಪ್ರಯೋಜನ” ಹೇಳಿ ಗುರುಗೊ ವಿವರಿಸುವಾಗ ಎಲ್ಲರಿಂಗೂ ಎಷ್ಟು ಸರಿಯಾದ ಮಾತು ಹೇಳಿ ಅನಿಸಿತ್ತು. ಈ ರುದ್ರ ಪಾಠದ ಆರಂಭದ ಮತ್ತೆ ನಮ್ಮ ಮಂಗಳೂರು ಉತ್ತರ ವಲಯಲ್ಲಿ ನಡೆದ ಚಟುವಟಿಕೆಗೊ-ಶಿವಪೂಜೆ, ರುದ್ರ ಹೋಮ, ಶ್ರೀಸೂಕ್ತಹೋಮ -ಎಲ್ಲಾ ನೆನಸುವಾಗ ಅದು ಸರಿ ಎನಿಸಿತ್ತು. ಈ ರೀತಿ ಎಲ್ಲಾ ಊರುಗಳಲ್ಲೂ ನಡೆದರೆ ,ಸಮಾಜಕ್ಕೆ ಒಳ್ಳೆ ಸಂದೇಶ,ಗುರಿ ಸಿಕ್ಕುಗು-ಧನಾತ್ಮಕ ಪರಿವರ್ತನೆ ಅಕ್ಕು ಹೇಳಿ ಅನುಮಾನ ಇಲ್ಲೆ. ರುದ್ರಾಕ್ಷಿಸಹಿತ ಮಂತ್ರಾಕ್ಷತೆ ಪಡೆದು ಎಲ್ಲರೂ ಧನ್ಯರಾದವು.
ಹೊತ್ತೋಪಗ ೬.೩೦ಕ್ಕೆ ಮತ್ತೆ ಬಸ್ಸೇರಿ,ಊರಿಂಗೆ ಬಂದೆಯೊ. ೧೧ ಗಂಟೆಯ ಮತ್ತೆ ಅವರವರ ಮನೆ ಸೇರಿದೆಯೊ.ಹೋಪಗಳೂ ಬಪ್ಪಾಗಳೂ ಕುಂದಾಪುರದ ಹಂಗಳೂರಿಲಿ ಉಪಾಹಾರ ಮತ್ತೆ ಊಟ ಏರ್ಪಾಡಾಗಿತ್ತು. ದಾರಿಲಿ ಭಕ್ತಿಗೀತೆಗಳ ಗಾಯನ, ಬಾಯಾಡಿ ಬಾಲಕೃಷ್ಣ ಭಟ್ಟರ ನೇತೃತ್ವಲ್ಲಿ ದೇಶಭಕ್ತಿಗೀತೆಗಳ ಗಾಯನ ಎಲ್ಲರನ್ನೂ ರಂಜಿಸಿತ್ತು.
ಪಟಃ- ಶರ್ಮಪ್ಪಚ್ಚಿ

 
 
ಅಶೀರ್ವಚನ ??????????????????????????????? ಸರ್ವೋ ವೈ ರುದ್ರ ಓಂ ಅಗ್ನಾ ವಿಷ್ಣೂ ಓಂ ನಮೋ ಭಗವತೇ ರುದ್ರಾಯ

One thought on “ಲಕ್ಷ ರುದ್ರ ಸಮರ್ಪಣೆ-ಗೋಕರ್ಣ ಶ್ರೀ ಮಹಾಬಲೇಶ್ವರನ ಸನ್ನಿದಿಲಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×