ನೆರೆಕರೆಯವರ ಶುದ್ದಿಗೊ : ಲೇಖನಂಗೊ…

ಅದೆಲ್ಲ ಸರಿ, ’ಶುದ್ದಿ ಹೇಳ್ತದು ಒಪ್ಪಣ್ಣ ಮಾಂತ್ರ’ ಹೇಳಿ ಗ್ರೇಶಿದಿರೋ?
ಹಾಂಗೆ ಗ್ರೇಶಿದ್ದರೆ ಅದು ತಪ್ಪು.

ಒಪ್ಪಣ್ಣನ ನೆರೆಕರೆಯವು ಎಲ್ಲೊರುದೇ ಶುದ್ದಿ ಹೇಳ್ತವು.

ಒಬ್ಬೊಬ್ಬ ಒಂದೊಂದು ವಿಶಯಲ್ಲಿ. ಅವರವರ ಧಾಟಿಲಿ. ಅದುವೇ ಒಂದು ಗೌಜಿ. ಅಲ್ದೋ?

ಮದಲಿಂಗೆ, ಶಂಬಜ್ಜನ ಕಾಲಲ್ಲಿ:
ನಮ್ಮ ಸಾರಡಿ ತೋಡಿಂಗೆ ನೆರೆಕರೆಯವೆಲ್ಲ ಹತ್ತು-ಹನ್ನೊಂದು ಗಂಟೆಗೆ ಮೀವಲೆ ಹೋಪದಡ.
ಎಲ್ಲೊರುದೇ ಸೇರುಗು. (ಸೇರ್ಲೇ ಬೇಕು, ತೀರಾ ಅನಿವಾರ್ಯವ ಹೊರತುಪಡುಸಿ. ಅದೊಂದು ಸಂವಿಧಾನ! )
ಆ ದಿನ ಪೇಟಗೆ – ಬದಿಯಡ್ಕಕ್ಕೋ, ಕಾಸ್ರೋಡಿಂಗೋ-ಕುಂಬ್ಳಗೋ- ಮತ್ತೊ° ಹೋದವು ಆರೋ, ಅವ° ಆ ದಿನದ ಶುದ್ದಿ ಹೇಳೆಕ್ಕು, ಒಳುದವು ಕೇಳೆಕ್ಕು.

ಆ ದಿನ ಪೇಟೆಲಿ ಅಡಕ್ಕೆ ಕ್ರಯ ಎಶ್ಟು; ಗೆಣಂಗೊ, ಬಚ್ಚಂಗಾಯಿಯೋ – ಎಂತಾರು ಹೊಸ ತರಕಾರಿ ಬಯಿಂದಾ; ಕಾಯಿಬ್ಯಾರಿ ಬಾಗಿಲು ತೆಗದ್ದೋ, ಇಲ್ಲೆಯೋ?; ಗೋವಿಂದಜ್ಜನ ಹೋಟ್ಳಿಂಗೆ ಎಂತ ಆತು?; ಇತ್ಯಾದಿ ವಿವರಂಗಳ ಅವರವರ ಶೈಲಿಲಿ ವಿವರುಸುಗು. – ಇದೊಂದು ಕ್ರಮ ನಮ್ಮ ಹಳಬ್ಬರದ್ದು.

ನಮ್ಮ ಅಜ್ಜಂದ್ರೇ ಅಷ್ಟು ಮುಂದುವರುದಿಪ್ಪಗ ನಾವೆಂತ ಕಮ್ಮಿ? ಅಲ್ದೋ?

ನಾವುದೇ ಹಾಂಗೇ ಮಾತಾಡುವೊ.

ನಮ್ಮ ನೆರೆಕರೆಯ ಒಬ್ಬೊಬ್ಬನೂ ಅವರವರ ಜ್ಞಾನದ ಸಂಗತಿಗಳ ಇಲ್ಲಿ ಬರದು, ಎಲ್ಲೊರಿಂಗೂ ಸಿಕ್ಕುವ ಹಾಂಗೆ ಮಾಡುವ°.
ಆಗದಾ?

ಈಗಾಗಲೇ ಕೆಲವೆಲ್ಲ ಶುದ್ದಿಗೊ ಸುರು ಆವುತ್ತು.
ಮಾಷ್ಟ್ರುಮಾವನ ಪಾಟಂಗೊ, ದೊಡ್ಡಮಾವನ ದೊಡ್ಡ ಮಾತುಗೊ, ಪೆರ್ಲದಣ್ಣನ ಬೆಂಗ್ಳೂರು ಶುದ್ದಿಗೊ, ಆಚಕರೆ ಮಾಣಿಯ ಬಿಂಗಿಗೊ – ಹೀಂಗೆಲ್ಲ.

ನಿಂಗಳೂ ಶುದ್ದಿ ಹೇಳಿ, ಇಲ್ಲಿಗೆ ಕೇಳ್ತ ಹಾಂಗೆ. ಈ ಪುಸ್ತಕಲ್ಲಿ ಹಾಕುವೊ°.
ಆಗದೋ?

ಹೇಳಿದಾಂಗೆ,
ಒಂದು ಶುದ್ದಿ ಬರದು ನಿಂಗಳೂ ಒಪ್ಪಣ್ಣನ ನೆರೆಕರೆಗೆ ಸೇರಿದ ಲೆಕ್ಕ..!
ಶುದ್ದಿ ನಮ್ಮ ಹವ್ಯಕ ಭಾಶೆಲೇ ಇರೆಕ್ಕು, ಗೊಂತಿದ್ದನ್ನೇ?

ಹ್ಮ್, ಇನ್ನೆಂತಕೆ ತಡವು, ಈಗಳೇ ಕಳುಸಿ:

Shuddi@Oppanna.com

ಅಥವಾ,
OppaOppanna@GMail.com

Admin | ಗುರಿಕ್ಕಾರ°

   

You may also like...

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *