ಕಾರಂತರ ಒಟ್ಟಿಂಗೆ ಪತ್ರ ವ್ಯವಹಾರ

May 19, 2012 ರ 6:26 pmಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶಿವರಾಮ ಕಾರಂತರು ದೊಡ್ದ ಬರಹಗಾರ-ಎಲ್ಲರಿಂಗೂ ಗೊಂತಿದ್ದು.

ಅವು ಅವಕ್ಕೆ ಬಂದ ಎಲ್ಲಾ ಕಾಗದಕ್ಕೂ ಉತ್ತರ ಕೊಡುತ್ತಾ ಇತ್ತಿದ್ದವಡ.
ಆನು ಬರೆದ ಸುರುವಾಣ ಪುಸ್ತಕ ರಾಜರತ್ನ ನಿಷಧಾಧಿಪ ನಾಟಕ ೧೯೮೧ ರಲ್ಲಿ ಪ್ರಕಟ ಆದರೂ ಅದರ ೧೯೮೬ ರಲ್ಲಿ ಕಾರಂತರಿಂಗೆ ಕಳಿಸಿದೆ.
ಅವರ ಶ್ರೀಮತಿ ಅದೇ ಸಮಯಲ್ಲಿ ತೀರಿ ಹೋದ ಕಾರಣ ಅವಕ್ಕೆ ಎನ್ನ ನಾಟಕವ ಓದಲೆ ಆಯಿದಿಲ್ಲೆ ಹೇಳಿ ಕಾಣುತ್ತು.
ಆದರೆ ಇಪ್ಪತ್ತು ದಿನ ಕಳುದ ಮೇಲೆ “ನಾಟಕ ಓದಿದೆ, ಅದು ರಂಗಪ್ರದರ್ಶನದ ದೃಷ್ಟಿಂದ ಅಷ್ಟೊಂದು ಸಮರ್ಪಕ ಆಯಿದಿಲ್ಲೆ” ಹೇಳಿ ಅಭಿಪ್ರಾಯ ಬರೆದವು.

ಆದರೂ “ಆನು ನಳನ ಕತೆಯ ಮೂಲಲ್ಲಿ ಓದಿದ್ದಿಲ್ಲೆ, ಕತೆ ಹೇಂಗಿಪ್ಪದು ಹೇಳಿ ತಿಳ್ಕೊಂಬಲೆ ಪ್ರಯೋಜನ ಆತು” ಹೇಳಿಯೂ ಬರದ್ದವು.
ಅಷ್ಟು ದೊಡ್ಡ ಮನುಷ್ಯ ಆನು ಮೂಲಲ್ಲಿ ಅದರ ಓದಿದ್ದಿಲ್ಲೆ ಹೇಳಿ ಹೇಳಿಕೊಂಬಲೆ ಸಂಕೋಚ ಪಟ್ಟಿದವಿಲ್ಲೆ-ಎನಗೆ ಆಶ್ಚರ್ಯ ಆತು.
ಮತ್ತೆ ಅವಕ್ಕೆ ಪಾರ್ತಿಸುಬ್ಬ ಕುಂಬಳೆಯವ ಅಲ್ಲ ಹೇಳಿ ನಿಂಗಳ ಅಭಿಪ್ರಾಯ ಈಗಳೂ ಇದ್ದೊ ಹೇಳಿ ಕೇಳಿದೆ-ಅದಕ್ಕೆ ಅವು ಪಾರ್ತಿಸುಬ್ಬ ಕುಂಬಳೆಯಲ್ಲಿ ಇದ್ದಿರಬಹುದು-ಆದರೆ ಅವನ ಪ್ರಸಂಗಗಳಲ್ಲಿ ಅವನ ಹೆಸರಿಲ್ಲ ಹೇಳಿ ಬರದವು.
ಮತ್ತೆ  ಅವು ಹೇಳಿದವು-ಪಾರ್ತಿಸುಬ್ಬನ ಬಗ್ಗೆ ಹಲವು ಅನೃತಂಗಳ ಆನು ಕೇಳಿದ್ದೆ ಹೇಳಿ. ಮತ್ತೆ ಆ ವಿಷಯ ಒಕ್ಕಲೆ ಎನಗೆ ಹೆದರಿಕೆ ಆತು. ಪ್ರಾಯದವಕ್ಕೆ ಸುಮ್ಮನೆ ಉಪದ್ರ ಕೊಡುತ್ತಿಲ್ಲೆ ಹೇಳಿ ಆ ವಿಷಯ ಬಿಟ್ಟೆ.

ಕಡೆಂಗೆ ಪತ್ರವ್ಯವಹಾರ ಮಾಡಿದ್ದು ೧೯೯೫ ರಲ್ಲಿ.
ಕೋ.ಲ.ಕಾರಂತರು ಶಿವರಾಮ ಕಾರಂತರ ಅಣ್ಣ. ಆ ವರ್ಷ ಅವು ತೀರಿಹೋದವು.
ಅವಕ್ಕೆ ಕೆಮಿಬೇನೆಗೆ ಮದ್ದು ಗೊಂತಿತ್ತು-ಅವು ಒಂದು ಕಡೆ ಆ ವಿಷಯ ಬರೆದ್ದದು ಆನು ಓದಿದ್ದೆ – ಆಗ ಸುಮಾರು ಮೂವತ್ತರ ಪ್ರಾಯದ ಎನಗೆ ನೆಂಪಿಲ್ಲೆ, ಆದರೆ ಎನ್ನ ದುರ್ಬುದ್ಧಿ ನೋಡಿ!
ಆನು ಶಿವರಾಮ ಕಾರಂತರ ಹತ್ತರೆ ಈ ವಿಷಯ ಕಾಗದ ಬರೆದು ಕೇಳಿದೆ. ಅದಕ್ಕೆ ಅವು ಬರೆದವು- ಅವು ಮರಬಾಳೆ ಎಲೆಯ ಬಾಡಿಸಿ ರಸ ತೆಗೆದು ಕೆಮಿಗೆ ಹಾಕುತ್ತಿದ್ದವು ಹೇಳಿ. ಮರಬಾಳೆ ಹೇಳಿದರೆ ಒಂದು ಆರ್ಕಿಡ್ ಹೇಳಿ ಬರೆದವು.

ಮತ್ತೆ ಬರೆದೆ-ಅದು ಯಾವ ಗಿಡ ಹೇಳಿ ಎನಗೆ ಗೊಂತಾಯಿದಿಲ್ಲೆ ಹೇಳಿ.
ಅದಕ್ಕೆ ಅವು ಬರೆದ ಕವರು ಒಡೆದು ನೋಡಿರೆ ಎನಗೆ ಸಂತೋಷ, ಗೌರವ ಎಲ್ಲಾ ಒಟ್ಟಿಂಗೆ ಬಂತು.
ಅವು ಮರಬಾಳೆ ಮರಲ್ಲಿ ಹೇಂಗೆ ಇರುತ್ತು ಹೇಳಿ ವಿವರಿಸಿದ್ದವು. ಅದರ ಸೊಪ್ಪಿನ ಕೆಂಡಲ್ಲಿ ಬಾಡಿಸಿ ಹಿಂಡಿರೆ ಎಸರು ಬತ್ತು ಹೇಳಿ ಬರದ್ದವು. ಒಂದು ಸಣ್ಣ ಕಾರ್ಡಿಲಿ ಮರಲ್ಲಿ ಇಪ್ಪ ಬಂದಳಿಕೆ ಜಾತಿಯ ಮರಬಾಳೆಯ ಚಿತ್ರ ಮಾಡಿದ್ದವು. ಅಲ್ಲದೆ ಮತ್ತೊಂದು ಪಚ್ಚೆ ಬಣ್ಣದ ಕಾರ್ಡಿನ ಎಲೆಯ ಆಕಾರಲ್ಲಿ ಕತ್ತರಿಸಿ ಮಡುಗಿ – ಇದು ಮರಬಾಳೆ ಎಲೆಯ ಮಾದರಿ ಹೇಳಿ ಬರೆದ್ದವು!

ಇದು ತೊಂಬತ್ಮೂರು ವರ್ಷದ ಕಾರಂತರು ಯಾವ ಗುರ್ತ ಪರಿಚಯ ಇಲ್ಲದ್ದ ಎನಗೆ ಬರೆದ ಕಾಗದ,ಕೊಟ್ಟ ವಿವರ! [ಆನು ಅವರ ಮುಖತಃ ಕಂಡಿದಿಲ್ಲೆ]. ಅನು ಕೂಡಲೇ ಅವಕ್ಕೆ ಧನ್ಯವಾದ ಬರದೆ.
ಅವರಷ್ಟು ಜೀವನೋತ್ಸಾಹ ಅವರ ಅರ್ಧ ಪ್ರಾಯದ ವರೆಗೂ ನಮ್ಮಲ್ಲಿ ಇದ್ದರೆ ಭಾಗ್ಯ.
ಅವು ನಾಸ್ತಿಕರು ಆದಿಕ್ಕು, ಆದರೆ ಸತ್ಯವಂತರು, ಕಿರಿಯರ ಮೇಲೆ ಪ್ರೀತಿ ಇಪ್ಪವು ಹೇಳಿ ಗೊಂತಾವುತ್ತು.
ಎನ್ನ ಬರವಣಿಗೆಯ ಹವ್ಯಾಸಲ್ಲಿ ಅವರ ಒಟ್ಟಿಂಗೆ ಮಾಡಿದ ಪತ್ರವ್ಯವಹಾರವ ಆನು ಅತಿ ಮುಖ್ಯ ಹೇಳಿ ಪರಿಗಣಿಸುತ್ತೆ.

ಅದರ ನೆನಪು ಮಾಡಿರೆ ಎನಗೆ ಈಗಲೂ ರೋಮಾಂಚನ ಆವುತ್ತು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಉಡುಪುಮೂಲೆ ಅಪ್ಪಚ್ಚಿ
  ಉಡುಪುಮೂಲೆ ಅಪ್ಪಚ್ಚಿ

  ಗೋಪಾಲಣ್ಣ ನಮಸ್ತೇ.ಕಾರ೦ತರ ಪತ್ರ ಓದಿಯಪ್ಪಗ ಎನಗೆ ಈ ಘಟನೆ ನೆ೦ಪಾವುತ್ತು.
  ಕಾರ೦ತಜ್ಜನ ಒ೦ದೆರಡು ಸರ್ತಿ ಹತ್ತರ೦ದ ಕ೦ಡು ಮಾತನಾಡುವ ಭಾಗ್ಯ ಎನ್ನ ಪಾಲಿ೦ಗೆ ಸಿಕ್ಕಿದ್ದು ಹೇದು ಹೇಳ್ಲೆ ಆನು ಹೆಮ್ಮೆ ಪಡುತ್ತೆ.ಅವರ ಹತ್ತರ೦ದ ಕ೦ಡು ಮಾತಾಡೆಕು ಹೇದು ಆನು ಎನ್ನ ಆತ್ಮೀಯ ಹೆರಿಯ ಸಾಹಿತಿ ” ಸೇವಾ ನಮಿರಾಜ ಮಲ್ಲ”ರ ಹತ್ತರೆ ಹೇಳಿಗೊ೦ಡಿತ್ತೆ.ಇದು ಆನು ಹೊನ್ನಾವರದ ಕಾಲೇಜಿಲ್ಲಿ ಪದವಿ ವಿದ್ಯಾಭ್ಯಾಸಲ್ಲಿಪ್ಪಾಗ.೧೯೭೦ರ ಎಪ್ರಿಲ್ – ಮೇ ತಿ೦ಗಳ ಮಧ್ಯಲ್ಲಿ ಆನು ಊರಿ೦ಗೆ ಬ೦ದ ಸಮಯ ಸೇವಾ ನಮಿರಾಜ ಮಲ್ಲರು ಪುತ್ತೂರಿ೦ಗೆ ವರ್ಗಾವಣೆಯಾಗಿ ಬ೦ದಿತ್ತವು.ಅವು ಮುನ್ಸಿಫ್ ಕೋರ್ಟಿಲ್ಲಿ ನ್ಯಾಯಾಧೀಶರಾಗಿತ್ತಿದ್ದವು.ಪುತ್ತೂರಿ೦ಗೆ ಅದೆ೦ತಕೋ ಹೋದವ ಈ ವಿಷಯ ತಿಳುದು ಅವರಲ್ಲಿಗೆ ಹೋದೆ.ಅವರೊಟ್ಟಿ೦ಗೆ ಸಾಕಷ್ಟು ಮಾತುಕತೆ ಆತು.ಅದೇ ಸಮಯ ಮಲ್ಲರು-” ಕಾರ೦ತರು ಇ೦ದು ಇಲ್ಲಿಯೇ ಅವರ ನಿವಾಸಲ್ಲಿದ್ದಾರೆ ನೀವು ಅವರನ್ನು ಭೇಟಿಯಾಗುವ ಹ೦ಬಲ ಇಟ್ಟುಕೊ೦ಡಿದ್ದೀರಲ್ಲಾ.ಹೋಗಿ ಭೇಟಿ ಮಾಡಿ”ಹೇದು ಸೂಚಿಸಿದವು.ಹಲವು ಕಾಲದ ಹ೦ಬಲ ಹೀ೦ಗೆ ಕಯಿಗೂಡುತ್ತು ಹೇಳುವ ನಿರೀಕ್ಷೆ ಇತ್ತಿಲ್ಲೆ.ಸ೦ತೋಷ ಏನೋ ಆತು.ಆದರೆ…..!ಕಾರ೦ತರ ಮತನಾಡ್ಸುವ ಧೈರ್ಯ ಎಲ್ಲಿ೦ದ ಬರೆಕು? ಮೊ೦ಡು ಧೈರ್ಯ ಮಾಡಿಗೊ೦ಡು ಅವರ ಮನಗೆ ಹೋದೆ.ಅಲ್ಲಿ ಮನೆಯ ಬಾಗಿಲಿನ ಕಾಲಿ೦ಗ್ ಬೆಲ್ ಒತ್ತಿದೆ.(ಮನಸ್ಸಿನೊಳದಿಕ್ಕೆ ಅಳುಕಿತ್ತು!);ಬಾಗಿಲು ತೆರೆದತ್ತು.ನೋಡಿರೆ ಒ೦ದು ಬೇಳಿ ಹೆಮ್ಮಕ್ಕೊ! ಅದು ಎನ್ನ ನಖ ಶಿಖಾ೦ತ ನೋಡಿ ” ಡು ಯು ವಾ೦ಟ್ ಕಾರ೦ತ್ ? ಹಿ ಇಸ್ ಇ೦ದ ಅಪ್ ಸ್ಟೇರ್.”ಹೇದು ಮೇಲಾ೦ತಾಗಿ ಮಾಳಿಗ್ಗೆ ಕಯಿಮಾಡಿ ತೋರ್ಸಿತ್ತು.ಸರಿ; ಮಾಳಿಗೆ ಹತ್ತಿದೆ.ಮದಲಾಣ ರೂಮು ವಿಶಾಲವಾಗಿತ್ತು. ಇಡೀ ಕೋಣೆಲಿ ಪುಸ್ತಕಗಳ ರಾಶಿ ರಾಶಿ!ಬಾಗಿಲು ತೆಕ್ಕೊ೦ಡಿತ್ತು.ಸೀದಾ ಒಳ ಹೊಗುವಲೆ ಧೈರ್ಯ ಎಲ್ಲಿ೦ದ ಬರೆಕು ? ಮೆಲ್ಲ೦ಗೆ ಬಾಗಿಲ್ಲಿ೦ಗೆ ತಟ್ಟಿದೆ. ”ಯರೂs ಬನ್ನಿ ಒಳಗೆ.”ಗ೦ಭೀರವಾದ ಧ್ವನಿಯೊ೦ದು ಕೆಮಿಗೆ ಬಿದ್ದತ್ತು.ಸರಿ ಕಾಲು ಒಳ ಮಡಗಿತ್ತದ.ಧ್ವನಿ ಬ೦ದ ದಿಕ್ಕಿನ ಹುಡುಕ್ಕಿಗೊ೦ಡು ಹೊರಟೆ.ಅಲ್ಲಿ ಒ೦ದು ಮೂಲೆಲಿ ದೊಡ್ಡ ಪುಸ್ತಕ ರಾಶಿಯ ಹಿ೦ದೆ ಒ೦ದು ಉಸಿರಾಡುವ ವ್ಯಕ್ತಿಯ ಕ೦ಡತ್ತು. ಹತ್ತರೆ ಹೋದೆ.ನೋಡಿದೆ. ಅಪ್ಪಪ್ಪು;ಕಾರ೦ತರು!ಯಾವದೋ ಮಾಹಿತಿಗಾಗಿ ಹತ್ತಾರು ಪುಸ್ತಕವ ಬಿಡಿಸಿ ಮಡಗಿಯೊ೦ಡು, ಕಯಿಲಿ ಪೆನ್ನು,ಎದುರು ಮೇಜಿಲಿ ಕಾಗದ ಮಡಗಿಯೊ೦ಡು ಕೂದಿತ್ತವು.ಎನ್ನ ಕ೦ಡಪ್ಪಗ ತಟ್ಟನೆ ಎದ್ದು ಆತ್ಮೀಯತೆಲಿ ಮಾತನಾಡ್ಸಿದವು.ಮತ್ತೆ ಅಲ್ಲಿ ಮನೆ, ಯಕ್ಷಗಾನ ತರಬೇತಿ ಕೊಡುವ ಜಾಗೆ ಹೀ೦ಗೆ ಪ್ರತಿಯೊ೦ದು ವಿವರವನ್ನು ಎನ್ನ ಒಟ್ಟಿ೦ಗೆ ಕರಕ್ಕೊ೦ಡು ಹೋಗಿ ಮೂಲೆ ಮೂಲೆನ್ನುದೆ ಒ೦ದು ರಜವೂ ಬಿಡದ್ದೆ ಪರಿಚಯ ಮಾಡಿ ಕೊಟ್ಟವು.ಮತ್ತೆ ಒ೦ದು ಕಪ್ ಬೆಶಿ ಬೆಶಿ ಟೀ ತರ್ಸಿ ಕೊಟ್ಟು,ಬೀಳ್ಕೊಡುವ ಹಾ೦ಗೆ ”ಆಯ್ತಲ್ಲಾ!…”ಹೇಳಿದವು.ಅದರ ಅರ್ಥ!!! ಸಮಯವ ಒ೦ದು ರಜವೂ ಹಾಳು ಮಾಡದ್ದ ಉಪಯೋಗುಸುವ ಅವರ ಸಮಯ ಪ್ರಜ್ಞಗೆ ನಮೋನ್ನಮ ಹೇಳೆಕೆ!ಅ೦ದು ಹಾ೦ಗೆ ಅವರ ಮಹಾನ್ ವ್ಯಕ್ತಿತ್ವದ ಪರಿಚಯ ಎನಗಾತು.ಮತ್ತೆ ಉದ್ಯೋಗಕ್ಕೆ ಸೇರಿ ಬಾರ್ಕೂರಿಲ್ಲಿಪ್ಪಾಗ ಕೆಲವು ಸರ್ತಿ ಸಾಲಿಗ್ರಾಮಲ್ಲಿ ”ಸುಹಾಸ”ಲ್ಲಿ ಭೇಟಿ ಮಾಡಿದ್ದೆ.ಅ೦ಬಗ ಅವು ತೋರ್ಸಿದ ಪ್ರೀತಿ, ಆತ್ಮೀಯತೆಯ ಆನೆ೦ದೂ ಮರೆಯೆ.

  [Reply]

  VN:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ನಿಂಗಳ ಅನುಭವ ಓದಿ ಸಂತೋಷ ಆತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಚುಬ್ಬಣ್ಣಕಳಾಯಿ ಗೀತತ್ತೆಗೋಪಾಲಣ್ಣಶಾಂತತ್ತೆಶಾ...ರೀಸಂಪಾದಕ°ಅಕ್ಷರದಣ್ಣಉಡುಪುಮೂಲೆ ಅಪ್ಪಚ್ಚಿಶುದ್ದಿಕ್ಕಾರ°ವೆಂಕಟ್ ಕೋಟೂರುvreddhiಎರುಂಬು ಅಪ್ಪಚ್ಚಿಗಣೇಶ ಮಾವ°ಚೆನ್ನೈ ಬಾವ°ಬಂಡಾಡಿ ಅಜ್ಜಿಹಳೆಮನೆ ಅಣ್ಣಪುತ್ತೂರಿನ ಪುಟ್ಟಕ್ಕಬಟ್ಟಮಾವ°ಶೀಲಾಲಕ್ಷ್ಮೀ ಕಾಸರಗೋಡುಶರ್ಮಪ್ಪಚ್ಚಿಸುವರ್ಣಿನೀ ಕೊಣಲೆವಿಜಯತ್ತೆಶೇಡಿಗುಮ್ಮೆ ಪುಳ್ಳಿಪುಣಚ ಡಾಕ್ಟ್ರುವಿದ್ವಾನಣ್ಣಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ