ಮೂರಿಯೂ ಮಾರಿಯೂ ಒಂದೆಯಾ? (Maa != Moo)

ಅಂದು ಬೊಳುಂಬು ಮಾವ ಕೊಟ್ಟ ಒಪ್ಪ ನೋಡುವಾಗ ಈ ಸುದ್ದಿ ಬರೆಯಕ್ಕು ಹೇಳಿ ಅನ್ನಿಸಿತ್ತು.

ನಿಂಗಳ ಕಂಪ್ಯೂಟರಿಲಿ ವಿಂಡೋಸ್ ಎಕ್ಸ್‌ಪೀ (Windows XP) ಇಪ್ಪದ್ದಾ?
ಅಲ್ಲದ್ದರೆ ಬಿಡಿ!
ಅಪ್ಪಾದರೆ, ನಿಂಗಳ ಕಂಪ್ಯೂಟರಿಲ್ಲಿ ಕನ್ನಡ ಬತ್ತಾ? ಎಲ್ಲಾ ಅಕ್ಷರಂಗೊ ಸರೀ ಕಾಣ್ತಾ?
ಬತ್ತರೆ ಸರಿ.

ಬರೀ ಒಪ್ಪಣ್ಣ.ಕಾಂ ಮಾತ್ರ ಅಲ್ಲ, ನಿಂಗೊಳ ಕಂಪ್ಯೂಟರಿಲ್ಲಿ ಎಲ್ಲಾ ದಿಕೆಯೂ ಕನ್ನಡ ಬಪ್ಪ ಹಾಂಗೆ ಮಾಡ್ಲೆ ಎಡಿತ್ತು. ಒಂದೆರಡು ಉದಾಹರಣೆ ನೋಡಿ:

ಫ಼ೈಲು, ಫ಼ೋಳ್ಡರಿನ ಹೆಸರೂ ಕನ್ನಡಲ್ಲಿಪ್ಪಲಕ್ಕು!

ಫೈಲು, ಫೋಳ್ಡರಿನ ಹೆಸರೂ ಕನ್ನಡಲ್ಲಿಪ್ಪಲಕ್ಕು!

ನೋಟುಪಾಡಿಲ್ಲೂ ಕನ್ನಡ

ನೋಟುಪಾಡಿಲ್ಲೂ ಕನ್ನಡ

ಗೊಂತಾತಲ್ಲದ?  ನಿಂಗಳ ಕಂಪ್ಯೂಟರಿಲ್ಲೂ ಹೀಂಗೆ ಕನ್ನಡ ಬರವಲೆ ಎಡಿತ್ತ ನೋಡಿ. ಕನ್ನಡ ಬರೆವಲೆ ಬರಹ /ನುಡಿ ಹಾಂಗಿಪ್ಪ ಯಾವದಾದರೂ ತಂತ್ರಾಶ ಬೇಕು ಹೇಳಿ ನಿಂಗೊಗೆ ಗೊಂತಿಕ್ಕು. ಗೊಂತಿಲ್ಲದ್ದರೆ ಧರ್ಮಕ್ಕೆ ಸಿಕ್ಕುತ್ತಲ್ಲದ, ಇಳಿಸಿ ಪ್ರತಿಷ್ಠೆ ಮಾಡಿಕೊಳ್ಳಿ.

ನೋಟುಪಾಡಿಲ್ಲಿ ಬರೆವಾಗ ಕೆಳಾಣ ಚಿತ್ರಲ್ಲಿಪ್ಪ ಹಾಂಗೆಂತಾರು ಬಂತು ಹೇಳಿರೆ ಕಂಪ್ಯೂಟರಿಲಿ ಕನ್ನಡ ಬಪ್ಪ ಹಾಂಗೆ ಆಯ್ದಿಲ್ಲೆ ಹೇಳಿ ಲೆಕ್ಕ.

ಇಲ್ಲದ್ದರೆ ಕನ್ನಡ ಬಪ್ಪ ಹಾಂಗೆ ಮಾಡಿಗೊಳಿ. ಅದು ಹೇಂಗೆ – ಹೇಳಿ ಇಲ್ಲಿ ಬರಕ್ಕೊಂಡಿದ್ದು.
ಒಂದು ವೇಳೆ ಅದರ ಮಾಡ್ಳೆ ಕಷ್ಟ ಆವುತ್ತರೆ “Mozilla 3.0” ಅತವಾ ಅದರಿಂದ ಹೊಸ Browser ಬಳಸಿಗೊಳಿ.

ಅದಾದ ಮತ್ತೆಯೂ ನಿಂಗೊಗೆ ಕೆಲವು ಅಕ್ಷರ ಸರಿ ಕಾಣ್ತಿಲ್ಲೆಯಾ..?

ಉದಾ:
ಮೂ, ಯೂ – ಇತ್ಯಾದಿ ಎರಡನೇ ಕೊಂಬು ಬೇಕಾದ ಅಕ್ಷರಂಗೊ.
ಮೂ (moo) ಇಪ್ಪದು ಮಾ(maa) ದ ಹಾಂಗೆ ಕಾಣುತ್ತು.
ಯೂ(yoo) ಇಪ್ಪದು ಯಾ(yaa)ದ ಹಾಂಗೆ ಕಾಣುತ್ತು..
ಇತ್ಯಾದಿ.

ಹಾಂಗೆ ಆದರೆ ಈ ಶುದ್ದಿ ಉಪಕಾರ ಮಾಡುಗು.
ವಿಂಡೋಸ್ ( Microsoft Windows XP) ಯ ಒಟ್ಟಿಂಗೆ ತುಂಗಾ ಅಕ್ಷರಗುಚ್ಛ (Tunga Font) ಕೊಡ್ತವು.
ಸುರುವಿಂಗೆ ಕೊಟ್ಟ ಅಕ್ಷರಗುಚ್ಛವ ತೋರುಸುವಗ ಎಂತದೋ ತೊಂದರೆ ಉಂಟಾಗಿ, ಕೆಲವು ಅಕ್ಷರಂಗೊ ಸರಿ ಬಂದುಕೋಂಡು ಇತ್ತಿಲ್ಲೆ.

ವಿಂಡೋಸ್ ಮಾಡಿದ ಮೈಕ್ರೋಸಾಫ್ಟ್ ಕಂಪೆನಿಗೆ ಈ ಅಕ್ಷರದೋಷ ಗೊಂತಾಗಿ ಅದರ ಸರಿಮಾಡ್ಳೆ ಒಂದು ಸಣ್ಣ ತುಂಡು ಸೋಫ್ಟ್‌ವೇರ್ ಮಾಡಿ ಇಂಟರ್ನೆಟ್ಟಿಲಿ ಮಡುಗಿದ್ದವು.

ತೊಂದರೆ ಇಪ್ಪ ಆಸಕ್ತರು ಇದರ ಪಡಕ್ಕೊಂಬಲಕ್ಕು.
1. ಇಲ್ಲಿಂದ (http://download.microsoft.com/download/4/4/8/4485c536-fc6c-4002-9a20-ffaa4059aacf/WindowsXP-KB897338-v3-x86-ENU.exe) ನಿಂಗಳ ಕಂಪ್ಯೂಟರಿಂಗೆ ಇಳುಸಿಗೊಳ್ಳಿ (Download)
2. ನಿಂಗಳ ಕಂಪ್ಯೂಟರ್ ಲಿ ಅನುಸ್ಥಾಪಿಸಿಗೊಳ್ಳಿ(Install).
3. ನಿಂಗಳ ಕಂಪ್ಯೂಟರ್ ನ ಒಂದರಿ ಒರಗುಸಿ, ಪುನಾ ಏಳುಸಿ (Restart.)

ಈಗ ಇದೇ ಶುದ್ದಿಯ ತಲೆಬರಹವ ಪುನಾ ಓದಿ.
ಸಂತೋಷವಾಗಿರಿ.
~
ನಿಂಗಳ,
ಪೆರ್ಲದಣ್ಣ

ಪೆರ್ಲದಣ್ಣ

   

You may also like...

4 Responses

  1. raamajja says:

    adaa perlada puLLi baNdeyO. khushi aatu. computer kalivale innu sulabha akku.

  2. ಓನ್ ಲೈನ್ ಅಪ್ ಡೇಟ್ ಇದ್ದರೆ ಇದು ಅಗತ್ಯ ಇಲ್ಲೆ,ಎನ್ನದು ಆಲ್ರೆಡಿ ಡನ್ ಹೇಳಿ ಹೇಳುತ್ತು

  3. ಆನು ಮೇಲೆ ಹೇಳಿದ್ದರ ಮಾಡಿ ನೋಡಿದೆ.. ಈಗ ಸರಿ ಬತ್ತು.. ಮಾಹಿತಿಗೆ ದನ್ಯವಾದಂಗ..

  4. ಚೆನ್ನೈ ಭಾವ. says:

    ಇದಾ.. ಅಣ್ಣಾ, ನಿಂಗೊ ಹೇದಾಂಗೆ http://oppanna.com/lekhana/maa-moo-kannada-font ಇದರಸರಿಮಾಡ್ಲೆ (http://download.microsoft.com/download/4/4/8/4485c536-fc6c-4002-9a20-ffaa4059aacf/WindowsXP-KB897338-v3-x86-ENU.exe) ಇದರ ಹಾಕಲೆ ಹೆರಟೆ.

    ಎನ್ನತ್ರೆ ವಿಂಡೋಸ್ ಎಕ್ಷ ಪಿ ಸರ್ವಿಸ್ ಪಾಕ್ ೩ ಇಪ್ಪದು. ಇದರ ಡೌನ್ಲೋಡ್ ಮಾಡಿ ಪ್ರತಿಷ್ಠೆ ಮಾಡಲೆ ಹೇರಟಪ್ಪಗ ನಿಂಗಳ ಎಕ್ಷ ಪಿ ಲೇಟೆಸ್ಟ್ ವೆರ್ಶನ್ , ಇದು ಅಗತ್ಯ ಇಲ್ಲೆ ಹೇಳುತ್ತನ್ನೇ !!

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *