ಮಾನವ ಪ್ರಯತ್ನಕ್ಕೆ ಸಹಕಾರಿ – ಮಾನವಂತ ಸೈಕಲ್

March 8, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆನು ಇತ್ತೀಚಿನ ದಿನಂಗಳಲ್ಲಿ ಓಡಾಡುಲೆ ಹೆಚ್ಚಾಗಿ ಮೂರು ಚಕ್ರದ ಸೈಕಲು ಉಪಯೋಗಿಸುತ್ತೆ.
ಎರಡು ಚಕ್ರದ ವಾಹನ ಉಪಯೋಗಿಸುಲೆ ಎನಗೆ ಮೈ ಮಾಲುವ ಕಾರಣ ಸಾದ್ಯವಾವುತ್ತಿಲ್ಲೆ. ಆದರೆ ಆನು ಇಲ್ಲಿ ಹೇಳುವ ಹಲವು ವಿಚಾರ, ಉದಾಹರಣೆಗೆ ಕರೆಂಟು ಸಹಾಯ ಇತ್ಯಾದಿ ಮಾಮೂಲಿ ಸೈಕಲಿಂಗೆ ಹೆಚ್ಚು ಅನ್ವಯಿಸುತ್ತು.
ಈ ಸೈಕಲುಗೊ ನಡದು ಬಂದ ಬಗೆಗೆ ಚೂರು ಹಿನ್ನೆಲೆ ಹೇಳುತ್ತೆ.

ಸೈಕಲ್ ಒಂದು ಪ್ರಾನ್ಸಿನ ಜನದ ಕಲ್ಪನೆ – ಮನೊರಂಜನೆ ಸಾಮಾನಾಗಿ ಹೊರತು ಪ್ರಯಾಣಕ್ಕಲ್ಲ.
ಅದೊಂದು ವಾಹನವಾಗಿ ಪರಿವರ್ತನೆ ಆದ್ದೂ ಅಕಸ್ಮಿಕ. ಆದರೂ ಅದು ಜನಕ್ಕೆ ನಡವದಂದ ಸುಲಭ ಅನ್ಸಿತ್ತು. ಹಾಂಗಾಗಿ ಕ್ರಮೇಣ ಹೆಚ್ಚು ಜನಪ್ರಿಯವಾತು ಹೇಳುಲಕ್ಕು.

ಹಲವು ಹೊಸತನ  ಆಮೇಲೆ   ಸೈಕಲಿಲಿ ಸೇರಿದರೂ ಒಂದು ನಿರ್ಣಾಯಕ ಹಂತ ಗೇರುಗಳದ್ದು. ಅದು ಇಲ್ಲದ್ದರೆ ಚಡಾವು ಹತ್ತುವಾಗ ಬಚ್ಚಿ ಇನ್ನು ಬೇಡ ಅನ್ಸುವ ಮಟ್ಟಿಗೆ ನಾವು ಮುಟ್ಟುತ್ತು.
ಗೇರು ನವಗೆ ಹೆಚ್ಚು ಬಚ್ಚದ್ದೆ ಎಂತಹ ಮಾರ್ಗಲ್ಲಿ ಸಹಾ ಹೋಪಲೆಡಿವ ಹಾಂಗೆ ಮಾಡ್ತು. ಹಂಗಾಗಿ ಇದರ ಎರಡನೇ ತಲೆಮಾರಿನ ಬೆಳವಣಿಗೆ ಹೇಳುಲಕ್ಕು.
ನಮಗೆ ಆರಾಮ ಅನ್ಸುವ ಶಕ್ತಿ ದಿನವಿಡೀ ಹಾಕಿ ಇಪ್ಪತ್ತಾರು ವರ್ಷ ಹಿಂದೆ ಆನು ಸುಮಾರು ಹದಿನೆಂಟು ದಿನದ ಪ್ರಯತ್ನಲ್ಲಿ ಎರಡು ಸಾವಿರದ ಎಂಟು ನೂರು ಕಿಮಿ ದೂರದ ದೆಹಲಿಗೆ ಹೋಗಿತ್ತಿದ್ದೆ.

ಈ ಸೈಕಲುಗಳಲ್ಲಿ ಇನ್ನೊಂದು ವಿನ್ಯಾಸ ಬಂದಿತ್ತು. ರಿಕಂಬಂಟ್ ಹೇಳಿದರೆ ಮಲಗಿ ಬಿಡುವ ರೀತಿಯದು. ಗಾಳಿಯ ತಡೆ ಕಮ್ಮಿಯಾದ ಕಾರಣ ಹೆಚ್ಚು ಜೋರಾಗಿ ಹೋಪಲಾವುತ್ತು.
ಅದರೆ 1930ರ ಅಂದಾಜು ಒಂದು ಸ್ಪರ್ದೆಲಿ ಎಲ್ಲ ಬಹುಮಾನ ಈ ರಿಕಂಬಂಟ್ ಸೈಕಲುಗೊ ಬಾಚಿದ ಕಾರಣ ಸ್ಪರ್ದೆ ಏರ್ಪಡುಸುವ ಸಂಸ್ಥೆ ಈ ವಿನ್ಯಾಸವ ನಂತರದ ವರ್ಷದ ಸ್ಪಧೆಂದ ಹೆರ ಮಡುಗಿದವು.
ಹಾಂಗಾಗಿ ಈಗ ನಾವು ಕಾಂಬ ಹೆಚ್ಚಿನ ಸೈಕಲುಗೊ ಮಾಮೂಲಿ ಸೈಕಲುಗೊ. ಈ ರಿಕಂಬಂಟ್ ಸೈಕಲು ಬಾರತ ಕಂಡಿದೇ ಇ ಲ್ಲೆ ಹೇಳಿದರೂ ಸರಿಯೇ.
ಎನ್ನ ಈ ಮೂರು ಚಕ್ರ ರಿಕಂಬಂಟ್ ಆಕಾರದ್ದು. ಹಾಂಗಾಗಿ ಕಮ್ಮಿ ಶಕ್ತಿಲಿ ಗಾಳಿಯ ಸುಲಭವಾಗಿ ಸೀಳಿಗೊಂಡು ಸಾಗುತ್ತು.

ನಿಜಕ್ಕೂ ಸೈಕಲಿನನ್ನುದೆ ಗಾಳಿ ಅಷ್ಟು ಅಡ್ಡ ಕಟ್ಟುತ್ತಾ ? ಅಪ್ಪು. ಗಾಳಿ ಅಡ್ಡಕಟ್ಟುವ ಪ್ರಮಾಣ ವೇಗ [ಗುಣಿಸು] ವೇಗ [ಗುಣಿಸು] ವೇಗ ಹೇಳಿದರೆ ವೇಗವ ಮೂರು ಸರ್ತಿ ಗುಣಿಸುವ ಲೆಕ್ಕಾಚಾರಲ್ಲಿ ಹೆಚ್ಚಪ್ಪ ಕಾರಣ ಜೋರು ಹೋಪಲೆ ತುಂಬಾ ತಡೆ ಉಂಟು ಮಾಡುತ್ತು.

ಇನ್ನೂ ಮುಂದಾಣ ಹಂತ ಅಥವಾ ಮೂರನೆಯ ತಲೆಮಾರಿನ ವಿನ್ಯಾಸ ಹೇಳಿದರೆ ವಿದ್ಯುತ್ ಸಹಾಯ. ಇದು ಎಂತಹ ನಿತ್ರಾಣಿಯನ್ನೂ ಸೈಕಲು ಉಪಯೋಗಿಸುಲೆ ಅವಕಾಶ ಮಾಡಿಕೊಡ್ತು.
ನಮಗೆ ತೊಳಿವಲೆ ಕಷ್ಟ ಅಪ್ಪಗ ಹೆಚ್ಚು ಸಹಾಯ ಪಡಕೊಂಬ ಅವಕಾಶ ಇದ್ದು. ಗೇರು ಮತ್ತು ಈ ಕರೆಂಟು ಸಹಾಯ ಎನ್ನ ದೇಹದ ದುರ್ಬಲತೆ ಮೀರಿ ನೂರ ಕಿಮಿ ಆರಾಮವಾಗಿ ಪ್ರಯಾಣ ಮಾಡುಲಾವುತ್ತು.
ಇಲ್ಲಿ ಇನ್ನೂ ಹೆಚ್ಚು ದೂರಕ್ಕೆ ಅಡ್ಡ ಬಪ್ಪದು – ಸಮಯಾವಕಾಶ ಮತ್ತು ಚಾರ್ಜಿನ ವ್ಯವಸ್ಥೆ. ಎನ್ನ ಹೆಚ್ಚಿನ ವಿಟ್ಲ, ಪುತ್ತೂರು ಮಂಗಳೂರು ತಿರುಗಾಟ ಈಗ ಈ ಸೈಕಲಿಲಿಯೇ.
ಘಂಟೆಗೆ ಸುಮಾರು ಇಪ್ಪತ್ತು ಕಿಮಿ ಆರಾಮವಾಗಿ ಹೋಪಲಾವುತ್ತು.

ಈ ಕರೆಂಟು + ಮನುಷ್ಯ ಪ್ರಯತ್ನ ಸಹಯೋಗ ಅರ್ಥ ಅಪ್ಪಲೆ ಕಷ್ಟ.
ಹೇಂಗೆ ವಿವರಿಸಲಿ ಹೇಳುವ ಗೊಂದಲ ಎನಗೂ ಆವುತ್ತು. ಕಾರಣ ಬೇರೆ ಈ ರೀತಿಯ ಪ್ರಯಾಣಿಕರ ಪ್ರಯತ್ನವ ಸ್ವೀಕರಿಸುವ ವಾಹನ ಇನ್ನೊಂದಿಲ್ಲೆ.
ರೈಲಿಂಗೆ ಸುಲಭವಾಗಲಿ ಹೇಳಿ ಅವನ ಹೊರೆಯ ಹೊತ್ತುಗೊಂಡೇ ಇದ್ದ ಮೂರ್ಖನ ಕಥೆಯ ಹಾಂಗಲ್ಲ. ನಿಜಕ್ಕೂ ತೊಳುದ್ದರಿಂದ ಇದು ಉಪಯೋಗಿಸುವ ಕರೆಂಟು ಬಳಕೆ ಕಮ್ಮಿ ಮಾಡುತ್ತು.

ಬಾರತದ ಮಟ್ಟಿಂಗೆ ಎನ್ನ ಈ ಮೂರು ಚಕ್ರದ ಸೈಕಲಿಲಿ ರಿಕಂಬಂಟ್ ಮತ್ತೆ ಸೈಕಲುಗೊಕ್ಕೆ ಕರೆಂಟು ಸಹಾಯ ಹೇಳಿ ಎರಡು ಹೊಸ ವಿಚಾರಂಗೊ ಇದ್ದು.
ಎರಡೂ ನಮ್ಮ ಸಮಾಜಕ್ಕೆ ತುಂಬಾ ಉಪಯೋಗ ಅಕ್ಕು ಹೇಳುವ ವಿಶ್ವಾಸ ಎನಗಿದ್ದು. ಸಾವಿರ ಕಿಲೊದ ಕಾರು ಒಬ್ಬನ ಸಾಗುಸುವ ಬದಲು ಇಪ್ಪತ್ತು ಕಿಲೊ ಸೈಕಲಿಲಿ ಆದರೆ ಉಪಯೋಗ ಅಪ್ಪ ಶಕ್ತಿ ಮತ್ತು ಖರ್ಚು ಎರಡೂ ಕಮ್ಮಿ.
ಆದರೆ ಪರಿಸರಕ್ಕೆ ಪೂರಕವಾದ ಈ ಪ್ರಯಾಣವ ನಮ್ಮ ಸಮಾಜ ಸಕಾರಾತ್ಮಕವಾಗಿ ಅರ್ಥ ಮಾಡಿಗೊಂಬ ಬದಲು ‘ಅವ ಸೈಕಲಿಲಿ ಹೋವುತ್ತ, ಛೀ’ ಹೇಳುದರ ಎನ್ನಂತಹವರು ಎದುರುಸೆಕ್ಕಾವುತ್ತು.

ಎಲ್ಲರ  ಕೈಎಟಕಿನೊಳ  ಇಪ್ಪ  ಸೈಕಲ್  ಮನುಷ್ಯ  ನಡವದರ  ಬದಲಿಂಗೆ  ಅಷ್ಟೇ   ಪ್ರಯತ್ನಲ್ಲಿ   ಮೂರು ಪಾಲು ದೂರ ಸಾಗುವ  ಅದ್ಬುತ   ವಾಹನ.
ಕಿಸೆಗುದೆ ಪರಿಸರಕ್ಕುದೆ ಹಗುರ ಅಲ್ಲದ್ದೆ ಆರೋಗ್ಯಕ್ಕೂ ತುಂಬಾ ಒಳ್ಳೆದು.
ಹಾಂಗೆ ಹೊಸ ಅವಿಶ್ಕಾರಂಗಳ ಅಳವಡಿಸಿ ಅದಕ್ಕೊಂದು ಮಾನ ಕಲ್ಪಿಸುವ ಪ್ರಯತ್ನ ಎನ್ನದು.

~*~*~*~

ಮಾನವ ಪ್ರಯತ್ನಕ್ಕೆ ಸಹಕಾರಿ - ಮಾನವಂತ ಸೈಕಲ್ , 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ವೆಂಕಟೇಶ

  ಸೈಕಲಿನ ಬಗ್ಗೆ ಹೆಚ್ಹಿನ ಮಾಹಿತಿ ಕೊಟ್ಟದಕ್ಕೆ ದನ್ಯವಾದ ಗೋವಿಂದಣ್ಣಂಗೆ, ನಿಂಗಳ ಬ್ಲೊಗಿಲಿ ಇಪ್ಪ ಲೇಖನಂಗಳೂ ಲಾಯಿಕಿದ್ದ್ಫು

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°

  ಸೈಕಲ್ಲು ಗೋವಿಂದಣ್ಣನ್ಗೆ ನಮಸ್ಕಾರ. ನಿಂಗಳ ಸೈಕಲ್ ಸ್ವಾರಸ್ಯ ಓದಿ ಖುಶೀ ಆತು. ಕಿಸೆಗೂ ಒಳ್ಳೇದು, ವ್ಯಾಯಾಮಕ್ಕೂ ಒಳ್ಳೇದು. ಪರಿಸರಕ್ಕೂ ಒಳ್ಳೆದು. ಟಿ.ವಿ. ವಿದೇಶಲ್ಲಿ ಹಲವು ಜೆನ ನಿತ್ಯ ಬಳಕೆಗೆ ಸೈಕಲ್ ಉಪಯೋಗುಸುತ್ತದು ಕಾಣುತ್ತು. ನವಗೆ ಮಾತ್ರ ದೊಡ್ಡಸ್ತಿಕೆ ಬಿಡ್ತಿಲ್ಲೆ . ಆದರೆ ಈಗಾಣ ಆರೋಗ್ಯಲ್ಲಿ ಸೈಕಲ್ ಅಡ್ಡ ಹಾಕಿ ತೋಳಿವಲೂ ಎಡಿತ್ತಿಲೆ ಗೋವಿಂದಣ್ಣ. ಇನ್ನಾಣದ್ದು ಚೊಟ್ಟೆ ರಾಟೆ ಬರದಿಕ್ಕಿ. ಹೊಸ ಪೀಳಿಗೆ ಕಂಡಿರ ಹೀಂಗಿಪ್ಪದರ. ನಿಂಗಳ ಹಾಂಗೆ ಅನುಭವಸ್ಥರು ಬರದದ್ದು ಓದುವಾಗ ಅಥೆಂಟಿಕ್ ಆಗಿರ್ತು.

  ಧನ್ಯವಾದನ್ಗಲೊಂದಿಂಗೆ ಒಂದು ಒಪ್ಪ.

  [Reply]

  VN:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಗೋವಿ೦ದಣ್ಣ೦ಗೆ ಸ್ವಾಗತ.
  ಕೇಜಿ ಮಾವ ಪರಿಚಯಿಸಿದ ಕೂಡಲೇ ನಿ೦ಗಳ ಬ್ಲಾಗ್ ಪುಟ ಒ೦ದರಿ ಓದಿತ್ತಿದ್ದೆ.ನಿ೦ಗೊ ಈ ಸೈಕಲಿನ ಸಹಾಯಲ್ಲಿ ದೈನ೦ದಿನ ಓಡಾಟ ಅಲ್ಲದ್ದೆ,ಸಮುದ್ರ ಕರೆಲಿಯೇ ಸುಮಾರು ದೂರ ಪ್ರಯಾಣ ಮಾಡಿದ್ದಿ ಹೇಳಿಯೂ ಓದಿದೆ.ವಿಷಯ ಪೂರ್ತಿ ಗೊ೦ತಾಯೆಕ್ಕಾರೆ ಒ೦ದರಿ ನೋಡೆಕ್ಕು,ಅಲ್ಲದೊ?ಬಪ್ಪ ತಿ೦ಗಳು (ದೊಡ್ಡ ರಜೆಲಿ) ಪ್ರಯತ್ನ ಮಾಡ್ತೆ.
  ಪರಿಸರದೊಟ್ಟಿ೦ಗೆ ಸ್ನೇಹ ಬೆಳೆಶುವ ಹೊಸ ಆವಿಶ್ಕಾರ೦ಗಳಲ್ಲಿ ನಿ೦ಗಳ ಪ್ರಯತ್ನ ಹೀ೦ಗೆಯೇ ಸಾಗಲಿ.ಬೈಲಿನ ಎಲ್ಲೋರಿ೦ಗೂ ನಿ೦ಗಳ ಮಾರ್ಗದರ್ಶನ ಸಿಕ್ಕಲಿ.ಶುಭಾಶಯ೦ಗೊ.

  [Reply]

  VA:F [1.9.22_1171]
  Rating: +3 (from 3 votes)
 4. ನಮಸ್ಕಾರ ಗೋವಿಂದಣ್ಣ,
  ನಿಂಗಳ ಲೇಖನ ನೋಡಿ ಖುಷಿ ಆತು. ನಿಂಗಳ “ಹಳ್ಳಿಯಿಂದ” ಬ್ಲಾಗ್ ಯಾವಾಗಳೂ ಓದಿಗೊಂಡು ಇರ್ತೆಯೊ.
  ಒಂದು ಖುಷಿಯ ಸಂಗತಿ ಹೇಳಿರೆ, ಈಗ ಬೆಂಗಳೂರಿನ ಹಾಂಗಿಪ್ಪ ಊರಿಲಿ ಕೆಲಸಕ್ಕೆ ಹೋಪವರಲ್ಲಿ ಸೈಕಲ್ ಬಳಕೆ ರಜ್ಜ ಜಾಸ್ತಿ ಆವುತ್ತಾ ಇದ್ದು. ಎನ್ನ ಆಫೀಸಿಲಿ ನಾಲ್ಕು ಜನ ದಿನಾಗಳು ಸ್ಯಕಲ್ಲಿಲೇ ಆಫೀಸಿಂಗೆ ಬತ್ತಾ ಇದ್ದವು. ಟ್ರಾಫಿಕ್ ಜಾಮ್ ಅಪ್ಪದಕ್ಕು ಒಳ್ಳೆದಾವುತ್ತು.

  ಮುರಳಿ.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ಪರಿಸರ ಸ್ನೇಹೀ ಸೈಕಲಿನ ಬಗ್ಗೆ ಮಾಹಿತಿಯುಕ್ತ, ಸ್ವಾರಸ್ಯಪೂರ್ಣ ಲೇಖನ. ಲಾಯಕಾಯಿದು. ಗೋವಿಂದಣ್ಣನ ಅನುಭವದ ಕತಗೊ ಬೈಲಿಂಗೂ ಸಿಕ್ಕಲಿ.

  [Reply]

  VA:F [1.9.22_1171]
  Rating: 0 (from 0 votes)
 6. ಶ್ರೀಅಕ್ಕ°

  ಗೋವಿಂದಣ್ಣ, ನಮ್ಮ ಬೈಲಿಂಗೆ ಸ್ವಾಗತ. ಅಕ್ಷರದ ಬೈಲಿಲಿ ನಿಂಗೋ ಹೊಸಬರಲ್ಲ. ನಿಂಗಳ ಪ್ರಯಾಣಂಗಳ ಬಗ್ಗೆ ಬರದ್ದರ ಓದಿದ್ದೆ. ತುಂಬಾ ಲಾಯ್ಕ ಬರೆತ್ತಿ. ಒಂದರಿ ಆನು ಬಸ್ಸಿಲಿ ಮಂಗಳೂರಿಂಗೆ ಹೋಪಗ ಮಾಣಿಯ ಹತ್ತರೆ ನಿಂಗಳ ಕಂಡಿದೆ. ನಿಂಗಳ ಕಂಡಪ್ಪಗ ಅಭಿಮಾನ ಆವುತ್ತು. ಪರಿಸ್ಥಿತಿ ಬಂದದರ ಎದುರಿಸಿ ಇನ್ನೊಬ್ಬಂಗೆ ಮಾದರಿ ಆಗಿ ದಾರಿ ತೋರ್ಸುತ್ತಾ ಇದ್ದಿ.

  ‘ಮಾನವಂತ ಸೈಕಲಿ’ನ ಬಗ್ಗೆ ಶುದ್ದಿ ಲಾಯ್ಕಾಯಿದು. ತುಂಬಾ ವಿವರಂಗ ಸಿಕ್ಕಿತ್ತು ಶುದ್ದಿಲಿ. ಧನ್ಯವಾದಂಗೋ.

  ಬೈಲಿಲಿ ನಿಂಗಳ ಆಗಮನ ಕೊಶಿ ಕೊಟ್ಟಿದು. ತುಂಬಾ ಅನುಭವದ, ವಿದ್ವತ್ತಿನ ಮಾತುಗೋ ಬತ್ತಾ ಇರಲಿ..

  [Reply]

  VN:F [1.9.22_1171]
  Rating: 0 (from 0 votes)
 7. ಕೇಜಿಮಾವ°
  ಕೆ ಜಿ ಭಟ್

  ಗೋವಿಂದಣ್ನನ ಆನು ಕಳುದ ಇಪ್ಪತ್ತೈದು ವರ್ಷಂದ ನೋಡ್ತಾ ಇದ್ದೆ.ಒಂದು ಸರ್ತಿ ಕೆಮಿಗೆ ಹುಳು ಹೊಕ್ಕರೆ ಸಉಮ್ಮನೆ ಕೂಪ ಜಾತಿ ಅಲ್ಲ.ಇನ್ನೊಬ್ಬನ ಅಭ್ಪ್ರಾಯ ಕೇಳಿರೂ ಅದರ ಕೇಳಿದ್ದ° ಹೇಳಿ ಅವನ ಅಭ್ಪ್ರಾಯ ಬದಲಾಗ.ಹಿಂದೆ ಸೈಕಲ್ಲಿಲ್ಲಿ ಜಗತ್ತೇ ನೋಡಿಯೊಂಡು ಬಂದ ಜೆನ ಇವ°.ನಾಲ್ಕು ಚಕ್ರದ ಮೋಂಟ್ರು ಸೈಕಲ್ ಆಗಲೀ,ಸೋಲಾರ್ ವಿದ್ಯುತ್ ಆಗಲೀ,ಕಳೆ ಕೊಚ್ಚುವ ಮಿಶನಾಗಲೀ ಎಲ್ಲಓರಿಂದ ಮದಲು ಇವನ ಹತ್ತರೆ ಇಕ್ಕು.ಯಾವದೇ ವಿಷಯದ ಬಗ್ಗೆ ಮಾತಾಡೆಕ್ಕಾರೆ ಅನುಭವ ಇಲ್ಲದ್ದೆ ಇವಂಗೆ ಆಗ.ಮಾಡಿದ್ದರ ಊರಿಡೀ ಹೇಳಿಯೊಂಡು ತಿರುಗುವ ಜಾತಿಯೂ ಅಲ್ಲ,ಒಂದರಿ ಕಂಡು ಮಾತಾಡೆಕ್ಕಾದ ಜೆನ ಇವ°.ಬಲಿಂಗೆ ಬಂದದು ಸಂತೋಷ.

  [Reply]

  VA:F [1.9.22_1171]
  Rating: +3 (from 3 votes)
 8. ಸುಭಗ
  ಸುಭಗ

  ಗೋವಿಂದಣ್ಣನ ಪರಿಚಯ ಬೈಲಿಲ್ಲಿ ಆದ್ದದು ತುಂಬಾ ಸಂತೋಷ. ಬೈಲಿಂಗೆ ಸ್ವಾಗತ.

  ನಿಂಗಳ ಆಸಕ್ತಿಗಳ ಬಗ್ಗೆ ಸಾಧನೆಗಳ ಬಗ್ಗೆ ಅಂಕಣಕಾರ ಶ್ರೀವತ್ಸ ಜೋಶಿ ಸುಮಾರು ಮೂರು ವರ್ಷ ಮದಲೇ ಎನ್ನತ್ರೆ ಹೇಳಿತ್ತಿದ್ದವು. ಈಗ ನೇರ ಸಂಪರ್ಕಕ್ಕೆ ಸಿಕ್ಕಿದಿ. ಕೊಶಿ ಆತು.

  ಲೇಖನ ಚೊಕ್ಕ ಆಯಿದು. ಅಭಿನಂದನೆಗೊ. ಬರೆತ್ತಾ ಇರಿ.

  [Reply]

  VN:F [1.9.22_1171]
  Rating: 0 (from 0 votes)
 9. ಗೋಪಾಲಣ್ಣ
  Gopalakrishna BHAT S.K.

  ಲಾಯ್ಕ ಆಯಿದು ಬರೆತ್ತಾ ಇರಿ.

  [Reply]

  VA:F [1.9.22_1171]
  Rating: 0 (from 0 votes)
 10. ನೆಲ್ಯಾರು ಗೋವಿಂದಣ್ಣ

  ತಾಳ್ಮೆಲಿ ಓದಿದೋರಿಂಗೆ ಮತ್ತೆ ಇಲ್ಲಿ ಪ್ರತಿಕ್ರಿಯೆ ಬರದೋರಿಂಗೆ ಎಲ್ಲೋರಿಂಗೂ ಎನ್ನ ಮನಪೂರ್ವಕ ಕೃತಜ್ನತೆಗೊ.

  ಎನಗೆ ಒಂದೊಂದು ವಾಕ್ಯಕ್ಕೂ ಸಾಕಷ್ಟು ಶ್ರಮ ಅಪ್ಪ ಕಾರಣ ಆನು ಎನ್ನ ಬ್ಲೋಗ್ ಬರಹಕ್ಕೆ ಬಂದ ಪ್ರತಿಕ್ರಿಯೆ ಅಥವಾ ಸೂಚನೆಗಳ ಬಗೆಗೆ ಎನ್ನ ಅಬಿಪ್ರಾಯ ಬರೆತ್ತಿಲ್ಲೆ. ದೈಹಿಕ ಸಮಸ್ಯೆ ಇದ್ದರೆ ಮನಸ್ಸೂ ಚುರುಕು ಕಮ್ಮಿಯಾವುತ್ತು. ಉತ್ತರ ಕೊಡದ್ದಿಪ್ಪದು ನಿರ್ಲಕ್ಷದ ಲಕ್ಷಣ ಹೇಳುವ ತಪ್ಪು ಅರ್ಥಕ್ಕೆ ಅವಕಾಶ ಕೊಡುವ ಕಾರಣ ಆನು ಬರವಲೇ ಆಸಕ್ತಿ ತೋರುಸುತ್ತಿಲ್ಲೆ ಇಲ್ಲೂ ಬರವಲೆ ನಿದಾನ ಆದ್ದು ಸಂವಾದಕ್ಕೆ ಪ್ರತಿಕ್ರಿಯೆ ಕಷ್ಟ ಅಪ್ಪದೇ ಕಾರಣ. ಕೊನೆಗೆ ನಾಲ್ಕು ಪಾರ ಬರದ್ದು ಕುಟುಂಬ ವೈದ್ಯರಾದ ಕೆ.ಜಿ. ಡಾಕ್ಟ್ರು ಮಾವನ ಕೋರಿಕೆ ಹಾಗೂ ಒತ್ತಡದ ಮೇಲೆಯೇ.

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಲಕ್ಕ°ವಿದ್ವಾನಣ್ಣಪ್ರಕಾಶಪ್ಪಚ್ಚಿತೆಕ್ಕುಂಜ ಕುಮಾರ ಮಾವ°ಒಪ್ಪಕ್ಕಅನು ಉಡುಪುಮೂಲೆಪುಣಚ ಡಾಕ್ಟ್ರುವೇಣಿಯಕ್ಕ°ಶಾಂತತ್ತೆಸುವರ್ಣಿನೀ ಕೊಣಲೆನೆಗೆಗಾರ°ಹಳೆಮನೆ ಅಣ್ಣಸುಭಗಸಂಪಾದಕ°ದೊಡ್ಡಮಾವ°ವೆಂಕಟ್ ಕೋಟೂರುಎರುಂಬು ಅಪ್ಪಚ್ಚಿಗೋಪಾಲಣ್ಣಅಡ್ಕತ್ತಿಮಾರುಮಾವ°ಅಜ್ಜಕಾನ ಭಾವಬೊಳುಂಬು ಮಾವ°ಪವನಜಮಾವಉಡುಪುಮೂಲೆ ಅಪ್ಪಚ್ಚಿಗಣೇಶ ಮಾವ°ಜಯಶ್ರೀ ನೀರಮೂಲೆಪುತ್ತೂರುಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ