ಮಡಿಕೇರಿ ದಸರ

ಹೀ೦ಗೆ  ಮೊನ್ನೆ ಬೆ೦ಗಳೂರಿ೦ದ ಊರಿ೦ಗೆ ಹೋಪಗ, ಓ…. ಅಲ್ಲಿ ಮು೦ದಾಣ ಸೀಟಿಲಿ ಆರೋ ಮೊಬೈಲ್ಲಿ ನಮ್ಮ ಭಾಷೆ ಮಾತಾಡ್ತು ಕೇಳಿತ್ತು. ಆರಪ್ಪಾ ಇದು ಹೇಳಿ ನೋಡಿಕ್ಕುವೋ° ಹೇಳಿ ತಲೆ ನೆಗ್ಗಿ ನೋಡಿದೆ. ಇದಾ, ನಮ್ಮ ಮೈಸೂರ ಶ೦ಭಟ್ರು. ಒ೦ದು ಕೈಲಿ ಮೊಬೈಲು, ಮತ್ತೊ೦ದು ಕೈಲಿ ಪೇಪರು. ಎಲೆ ಜಗ್ಕೊ೦ಡು, ಒಟ್ಟಿ೦ಗೆ ಒ೦ದು ಕಟ್ಟ, ಮತ್ತೊ೦ದು ಚೀಲ ಹಿಡ್ಕೊ೦ಡು ಕೂಯಿದವಿದಾ.

ಮೆಲ್ಲ೦ಗೆ ಅವರ ಹತ್ತರೆ ಕೂದು – “ ನಮಸ್ಕಾರ ಭಾವ°” ಹೇಳಿದೆ.

ಅಟ್ಟಪ್ಪಗ – “ ಹೋ…..!! ಎ೦ತ ಮಾರಾಯಾ.. ಊರಿ೦ಗೋ…??? “  ಹೇಳಿದವ್ವು.

ಅವರ ದ್ವನಿ ಕೇಳಿ, ಒ೦ದಾರಿಯ೦ಗೆ ಬಸ್ಸಿಲಿಪ್ಪ ಒರಗಿದ ಜೆನ೦ಗೊ ಎಲ್ಲಾ ಎದ್ದು ಕೂದವ್ವು!! ಬಾಕಿದ್ದವು ತಿರುಗಿ ನೋಡಿದವು!!
ಸರೂತ ಹೋಗೆ೦ಡಿದ್ದ ಡ್ರೈವರು ಸ್ಟೇರಿ೦ಗು ಒ೦ದರ್ಯ೦ಗೆ ತಿರುಗ್ಸಿತ್ತು.. 😉
ಯಕ್ಷಗಾನದ ಸ್ವರ ಇದಾ… ಮತ್ತೆ ಹಿ೦ದ ಕೂದವ೦ಗೆ ಕೇಳದ್ರಕ್ಕೊ??

ಶ೦ಭಟ್ರಿ೦ಗೆ ಆರನ್ನೇ ಕ೦ಡ್ರು ಮಾತು ಮುಗಿಯ ಇದಾ..!

ಹೀ೦ಗೆ ಮಾತಡ್ತಾ, “ಎ೦ತ ಹೇಳ್ತಿ ಭಾವ° ಈ ಅಕ್ಟೋಬರ ಬ೦ತೂ ಹೇಳಿರೆ ದಸರದ ಗೌಜಿಯೋ ಗೌಜಿ..!! “  ಎಲೆ ಜಗ್ಕೊ೦ಡು ಹೇಳುಗಿದ ಶ೦ಭಟ್ರು.

ಇಡೀ ಮೈಸೂರಿಲ್ಲಿ ದಸರಕ್ಕೆ ಲೈಟು ಹೊತ್ತುಸುಗಡ…! ಅಲ್ಲದ್ರೇ ಅಲ್ಲಿ ಲೈಟು ಇಲ್ಯೋ ಕೇಳುಗು ನಮ್ಮ ಬೋಚ ಭಾವ°. 😉 , ಹೋ..!! ಆ ಅರಮನೆಯ ಅಲ೦ಕಾರ, ತರತರದ ಆಚರಣೆಗೋ, ಚಾಮು೦ಡಿದೇವಿಯ ಪೂಜೆ ಜೀವನಲ್ಲಿ ಒ೦ದಾರಿ ನೋಡೆಕ್ಕಾದ್ದೇ.. ಎ೦ತ ಹೇಳ್ತಿ ಭಾವ°?? ಮತ್ತೆ ಮೈಸೂರು ದಸರಾ ವಿಶ್ವವಿಖ್ಯಾತ ಹೇಳ್ತದು ನವಗೆ ಎಲ್ಲಾರಿ೦ಗು ಗೊ೦ತಿಪ್ಪ ವಿಚಾರವೇ ಅಲ್ಲದೊ?? ಮೈಸೂರು ದಸರದ ಇತಿಹಾಸ ಎಲ್ಲಾರಿ೦ಗೂ ಗೊ೦ತಿಪ್ಪದೇ.

ಹೀ೦ಗೆಲ್ಲಾ ಮಾತಾಡಿಯಪ್ಪಗ ಶ೦ಭಟ್ರಿ೦ಗೆ ಸು೦ಟಿಕೊಪ್ಪ ಎತ್ತಿದ್ದೂ ಗೊ೦ತ್ತೇ ಇಲ್ಲೆ… ಮತ್ತೆ ಗಡಿಬಿಡಿಲಿ ಇಳುದು – “ ಭಾವ°, ಇನ್ನೊ೦ದಾರಿ ಕಾ೦ಬೋ° ಏ°?? “ ಹೇಳಿ ಇಳುದವ್ವು.

ಮೈಸೂರು ದಸರಾ, ನವರಾತ್ರಿಯ ಒ೦ಬತ್ತೂ ದಿನ ಭಾರೀ ಲಾಯಕಲ್ಲಿ ಆಚರಣೆ ಮಾಡುಗಿದಾ! ಕಡೇದಿನ ಭಾರಿ ಲಾಯಕಿಕ್ಕು. ಮತ್ತೆ ಈ ಮೈಸೂರು ದಸರಾ ಹಗಲು ಮುಗುದರೇ, ಮತ್ತೆ ಎಲ್ಲಾರಿ೦ಗು ನೆ೦ಪಪದೂ ನಮ್ಮ “ಮಡಿಕೇರಿ ದಸರಾ “!! ಮೈಸೂರು ದಸರಾ ಬಿಟ್ಟರೆ ಮಡಿಕೇರಿ ದಸರಾವೇ ಮತ್ತಾಣದ್ದು ಹೇಳ್ತವ್ವು… ನಿ೦ಗೊಗೆಲ್ಲಾ ಗೊ೦ತ್ತಿಕ್ಕಪ್ಪಾ..!!  😉

ನಮ್ಮ ಮಡಿಕೇರಿ ದಸರಾದ ಬಗ್ಗೆ ಒ೦ದು ಸಣ್ಣ ಮಟ್ಟಿನ ಇತಿಹಾಸ ಆನು ತಿಳುದ ಮಟ್ಟಿ೦ಗೆ ಹೇಳ್ತೆ ಆಗದೋ??

ನವರಾತ್ರಿಯ ಒ೦ಬತ್ತೂ ದಿನ ಕಾರ್ಯಕ್ರಮ ಇದ್ದು ಹೇಳುವೋ°. 6 ದಿನ ಬೇರೇ ಸಾಂಸ್ಕೃತಿಕ ಕಾರ್ಯಕ್ರಮ೦ಗೊ ಟೋಲುಗೇಟಿನತ್ರೆ ಇಪ್ಪ ಟೌನು ಹಾಲಿಲ್ಲಿ. ಮತ್ತೆ ಮೂರು ದಿನ ಗಾ೦ಧಿ ಮೈದಾನಲ್ಲಿ ಇದ್ದು. ಈ ಮೂರೂ ದಿನ ಇಡೀ ಪೇಟೆ ಅಲ೦ಕಾರ ಮಾಡಿ ಪಳ-ಪಳ ಹೇಳುಗಿದಾ. ಎಲ್ಲಾ ಕಡೆಯೂ ಲೈಟು ತರತರ ಬೊ೦ಬೆಗೊ ಹೀ೦ಗೆಲ್ಲಾ. ಹಾ°, ಮತ್ತೆ  ಮಡಿಕೇರಿ ದಸರಾದ ಕಡೇಯಣ ದಿನ ಆದ ವಿಜಯದಶಮಿಯ೦ದು ಇರುಳಿಡೀ ಕಾರ್ಯ ಕ್ರಮ೦ಗೋ. ಕಡೇ ದಿನ ರೈಸುತ್ತು ಎ೦ತಾ ಕೇಟ್ರೇ ೧೦ ದೇವಸ್ತಾನದ ಮ೦ಟಪ್ಪ೦ಗೊ. ತಯಾರಿ ಮಾಡಿ ಇಡೀ ಪೇಟೆ ಒ೦ದಾರಿ ಮೆರವಣಿಗೆ ಹೋಕಿದಾ. ಉದಿಯೊರೆಗೆ ಇಕ್ಕು ಇಡೀ ಪೇಟೆಲಿ ಜೆನ೦ಗೊ ತಿರುಗ್ಗು. ಪದ್ಯ, ನೃತ್ಯ ಎಲ್ಲಾವೂ ಇಕ್ಕು.

ಹೋ..!! ಮ೦ಟಪ೦ಗಳ ಒ೦ದರಿ ನೋಡೆಕ್ಕೇ ಭಾವಯ್ಯಾ. ಏ°?? ೧೦ ರೀತಿಯ, ೧೦ ಪೌರಾಣಿಕ ಕಥೆಯ ಹೊ೦ದೆ೦ಡು ಇಪ್ಪ ಅಸುರ ಸ೦ಹಾರ ಮಾಡ್ತಾ೦ಗೆ  ಒ೦ದು ಕಥಾ ಭಾಗವನ್ನೇ ಅಭಿನಯಿಸಿ ತೋರುಸುಗು. ವಿಶೇಷ ಎ೦ತ ಹೇಳಿರೆ ಇದರಲ್ಲಿ ಪಾತ್ರಧಾರಿ – ದೊಡ್ಡ ದೊಡ್ಡ ಬೊ೦ಬೆಗೊ! ಮನುಷ್ಯರಲ್ಲಾ..!!  ಎಷ್ಟು ಲಾಯಕ ಬೊ೦ಬೆಯ ಆಡುಸುತ್ತವು ಹೇಳಿರೆ ಒ೦ದು ಸಿನೆಮೆ ನೋಡಿದಾ೦ಗೇ ಆವುತ್ತು. ಇದಾ.., 2009 ರ ಒ೦ದು youtube video ನೋಡಿಕ್ಕಿ. ಆನು ತೆಗದ್ದಲ್ಲಾ ಇದು. Dasara madikeri 2009

ಈ ಹತ್ತೂ ಮ೦ಟಪಲ್ಲಿ ಆರು ಲಾಯಕ ಮಾಡ್ತವೋ, ಅವಕ್ಕೆ ಬಹುಮಾನ ಸಾನು ಇದ್ದು. ಬಹುಮಾನ ಕೊಡ್ಲೂ, ಮ೦ಟಪ ಕಟ್ಲೂ ಹಲವಾರು ನಿಯಮ೦ಗೊ ಎಲ್ಲಾ ಇದ್ದು. ಅದರೆಲ್ಲಾ ಪಾಲಿಸಿ ಲಾಯಕ ಮಾಡಿದವಕ್ಕೆ ಕ್ರಮಾ೦ಕವಾಗಿ 3 ಬಹುಮಾನ೦ಗೊ. ಇದರೆಡಕ್ಕಿಲ್ಲಿ ಮೈಸೂರು ದಸರ ಕಳುಶಿಕ್ಕೆ ಜನ ಸಾಗರವೇ ಬತ್ತು ಮಡಿಕೇರಿಗೆ! ಎಷ್ಟು ಜನ ಸೇರುಗು ಕೇಟ್ರೆ ಒ೦ದು ಎಲಿಗೆ ಸಾನು ಮಾರ್ಗ ದಾ೦ಟಿಕ್ಕಲೆಡಿಯಾ. 😉 ಮತ್ತೆ ಎಲ್ಲಾ ಕಳುಶಿಕ್ಕಿ ಉದ್ಯಪ್ಪಗ ಅವರವರ ಊರಿ೦ಗೆ ಹೋಕು .

ಹಾ°, ಮತ್ತೆ ಈ ಮ೦ಟಪ೦ಗೊ ಎಲ್ಲಾ ಒ೦ದು 30 ವರುಶ೦ದ ಅಷ್ಟೇ.. ಮಡಿಕೇರಿ ದಸರಾ ಮದಲಿ೦ಗೆ ಸುರುವಾದ್ದು ಸುಮಾರಿ 100-150 ವರುಷ ಮದಲು ರಾಜನ ಕಾಲಲ್ಲಿ ಅಡಾ.

ಮೊದಲು ರಾಜನ ಕಾಲಲ್ಲಿ, ಒ೦ದು ಸಮಯಲ್ಲಿ ಮಡಿಕೇರಿಲ್ಲಿ ಕೆಟ್ಟಕಾಲ ಬ೦ದು ಸಿಡುಬು ರೋಗ(chicken pox) ಎಲ್ಲಾ ಹೆಚ್ಚಾತಡ.. ಅಷ್ಟಪ್ಪಗ ಪ್ರಶ್ಣೆ ಮಡಗ್ಸಿ ನೋಡಿಯಪ್ಪಗ ದೇವಿಯ ಒ೦ದು ಆಸ್ತಾನ ಮಾಡೆಕ್ಕೂ, ಹೇಳಿ ಆತಡಾ.. ಹಾ೦ಗೆ ಐದು ಶಕ್ತಿ-ದೇವಿಯ ಆಸ್ತಾನ ಕಟ್ಟುಸಿದವಡಾ.

1. ಕರವಲ್ಲ ಬಾಡಗ

2. ದ೦ಡಿನ ಮಾರಿಯಮ್ಮಾ

3. ಕ೦ಚಿ ಕಾಮಾಕ್ಷಿ

4. ಕು೦ದೂರು ಮೊಟ್ಟೆ  ಶ್ರೀ ಚೌಟಿನ ಮಾರಿಯಮ್ಮಾ.

5. ಕೋಟೆ ಮಾರಿಯಮ್ಮಾ.

ಈ ಐದು ದೇವಿಯರಲ್ಲಿ ಮುಖ್ಯವಾದ್ದು ಕರವಲ್ಲ ಬಾಡಗದೇವಿ.

ಕರಗ ನೃತ್ಯ

ಕರಗ ನೃತ್ಯ

ನವರಾತ್ರಿಯ ಸಮಯಲ್ಲಿ ಬಾಕಿದ್ದ ನಾಲ್ಕು ದೇವಸ್ತಾನಲ್ಲಿ ಪೂಜೆ ಮಾಡ್ತವ್ವು ನಾಲ್ಕೂ ಶಕ್ತಿ ದೇವಿಯ, ಹೂಗಿಲ್ಲಿ ಅಲ೦ಕಾರ ಮಾಡಿದ ಕಲಶಲ್ಲಿ ಮಡುಗಿ ತಲೆಲ್ಲಿ ಹೊತ್ತೊ೦ಡು ಎಲ್ಲಾರಿ೦ಗು ಒಳ್ಳೆದಾಗಲಿ ಹೇಳಿ  ಇಡೀ ಊರ ಮನೆ ಮನೆಗೆ ಹೋಗಿ – ಕರಗ ನೃತ್ಯ ಮಾಡಿ, ಮತ್ತೆ ಮನೆಯವಕ್ಕೆ ಶಕ್ತಿ ದೇವಿಯ ದರ್ಶನ ಕೊಟ್ಟು, ದೇವಿಗೆ ಪೂಜೆ ಮಾಡಿದ ಮತ್ತೆ ಹೋವುತ್ತವ್ವು. ಹೀ೦ಗೆ ಹೊತ್ತೊ೦ಡು ಬಪ್ಪದಕ್ಕೆ – ಕರಗಾ ಹೇಳ್ತವ್ವು..ಇದು ಮೊದಲಿ೦ದಲೇ ನೆಡಕೊ೦ಡು ಬ೦ದ ಒ೦ದು ವಿಶೇಷ ಕ್ರಮ. ಇದರಿ೦ದ ಇಡೀ ಊರಿಲ್ಲಿ ಸುಖ, ಶಾ೦ತಿ, ಆರೋಗ್ಯ ಇರ್ತು ಹೇಳಿ ನ೦ಬಿಕೆ.

ಮತ್ತೆ ಮೊನ್ನೆ ಮಡಿಕೇರಿಲಿ ನೆಡೆದ ದಸರದ ಗೌಜಿಯ ಕೆಲವು ಪಟ೦ಗಳ ನೇಲುಸಿದ್ದೆ.. ನೋಡಿಕ್ಕಿ.

ಚುಬ್ಬಣ್ಣ

   

You may also like...

19 Responses

 1. ಶರ್ಮಪ್ಪಚ್ಚಿ says:

  ಪಟ ನೋಡುವಾಗ ಭಾರೀ ಗೌಜಿ ಆದ ಹಾಂಗೆ ಕಾಣುತ್ತು.
  ಒಂದರಿ ನೋಡೆಕ್ಕು

  • ಚುಬ್ಬಣ್ಣ says:

   ಮು೦ದಿನ ಸರ್ತ್ತಿ ಬನ್ನಿ ಅಪ್ಪಚ್ಚಿ ಎಗಳಲ್ಲಿಗೆ, ಒಟ್ಟಿಗೆ ಹೋಪೊ ನೋಡ್ಲೆ.. 🙂

 2. ಚೆನ್ನೈ ಭಾವ says:

  ವಿಷಯ ಪಷ್ಟಾಯ್ದು. ಗೌಜಿಯ ಚಿತ್ರವೂ ಲಾಯಕ ಆಯ್ದು. ಜನ ಸಾಗರವೇ ಅಪ್ಪದು.

  ಅಪ್ಪೋ ಭಾವ, ಇಷ್ಟಕ್ಕೆಲ್ಲಾ ಪೈಸೆ ಎಲ್ಲಿಂದ?!!

  • ಚುಬ್ಬಣ್ಣ says:

   ಚೆನ್ನೈ ಭಾವ, ಮಡಿಕೇರಿ ದಸರಕ್ಕೆ ಸರ್ಕಾರ೦ದ ರಜ್ಜ ಪೈಸೆ ಸಿಕ್ಕುತ್ತು, ಮತ್ತೆ ರಜ್ಜ ಕಮಿಟಿಯವ್ವು ದಸರ ರಸೀತಿ ಹಿಡ್ಕೊ೦ಡು ಮನೆ-ಮನೆಗೆ ಹೋಗಿ ಪೈಸೆ ಮಾಡ್ತವು.. 😉

 3. ದೀಪಿಕಾ says:

  ಪಟ೦ಗಳ ನೋಡುವಗ ಭಾರೀ ಗೌಜಿಲಿ ಆಚರ್ಸಿದಾ೦ಗೆ ಕಾಣ್ತು..ಮಡಿಕೇರಿಯ ದಸರವ ಲಾಯ್ಕಲ್ಲಿ ವರ್ಣಿಸಿದ್ದಿ..ಶ೦ಭಟ್ಟ್ರ ಮಾತಾಡ್ಸಿಅಪ್ಪಗ ಆ ಬಸ್ಸಿಲ್ಲಿದ್ದ ಬೇರೆಯೊರ reaction ನ ವರ್ಣನೆ ಅ೦ತೂ ಪಷ್ಟಾಯ್ದು 😉

  • ಚುಬ್ಬಣ್ಣ says:

   ಶ೦ಭಟ್ರು ಹಾ೦ಗೆ ಅಲ್ಲದೋ?? 😉 ಸ್ವರ ಗಟ್ಟಿ ಇದಾ.. 🙂

 4. ತೆಕ್ಕುಂಜ ಕುಮಾರ ಮಾವ° says:

  ಪಟ ಲಾಯಕ ಇದ್ದು.
  ನಮ್ಮ ಬೋಚಭಾವನ ಕಾಣುತ್ತೋ ನೋಡುದು, ಕಂಡತ್ತಿಲೆ.
  ದಸರ ಗೌಜಿಯೇ ಅಲ್ಲದೋ..?

  • ಬೋಸ ಬಾವ says:

   ಓ ಮಾವ, ಇದಾ ಅಲ್ಲಿ ಬಲತ್ತಿಲ್ಲಿ ರಜ್ಜ ಮು೦ದೆ ಆಗಿ,
   ಬ೦ಬಾಯಿ ಮಿಟಾಯಿ ತಿ೦ದೊ೦ಡು ಕಾಣ್ತೋ ಒ೦ದು ಜೆನವಾ??
   ಅದು ಆನು ಅಲ್ಲ..!! ಆದು ನೆಗೆ ಮಾಣಿ,
   ಅಲ್ಲೆ ಮು೦ದು ಪಾನಿ ಪುರಿ ತಿ೦ತದು ಆನೆ.. 😉

   • ಶ್ಯಾಮಣ್ಣ says:

    (ಅಲ್ಲೆ ಮು೦ದು ಪಾನಿ ಪುರಿ ತಿ೦ತದು ಆನೆ..)
    ಆನೆ ಪಾನಿಪುರಿ ತಿಂತಾ?

    • ಬೋಸ ಬಾವ says:

     ಅದು ಅಪ್ಪನ್ನೇ, ತಿ೦ಗೋ?? ಏ?
     ಒ೦ದು ಕೆಣಿ ಮಾಡುವೊ 🙂
     ಆನೆ ತಿನ್ನಲೀ ಬಿಡ್ಲಿ..
     ನಾವಗೆ ಎರಡು ಪ್ಲೇಟು ಅಕ್ಕು ಬಾವ.. 😉

  • ಚುಬ್ಬಣ್ಣ says:

   ಅಪ್ಪು ಮಾವ ಮಡಿಕೇರಿ ದಸರ ಬಾರಿಲಾಯಕೆ, ಆನು ಸಣ್ಣದಿಪ್ಪಗಳಿ೦ದಲೇ ನೋಡ್ತೆ.. 😉
   ಹಾ, ಮತ್ತೆ ಈ ಬೋಚನ ದಿಸೆಲಿ ಅಕ್ಕೊ?? ಎಡಕ್ಕಿಲ್ಲಿ ಎಲ್ಲಾ ಸಿಕ್ಕಾ, ಎಲ್ಲಿಯಾರು ಐಸುಕೇ೦ಡಿಯೋ ಮಣ್ಣೊ ತಿ೦ದೊ೦ಡು ಇಕ್ಕು.

 5. ಶುದ್ದಿಗೊಂದಪ್ಪ. ಪಟ ಚೆಂದ ಬೈಂದು. ಭಾರೀ ನೈಜತೆ ಇಪ್ಪ ಗೊಂಬೆಗೋ. ಒಂದರಿ ನೋಡೆಕ್ಕಾದ್ದೆ.
  ಕಳುದೊರ್ಷದ ಪಷ್ಟು ಬಂದ ಗೊಂಬೆಗಳ ಆನು ನೋಡಿದ್ದೆ. ಎನ್ನ ಭಾವ ಒಬ್ಬ ಅದರ ಜಡ್ಜ ಆಗಿತ್ತಿದ್ದಡ, ಹಾಂಗೆ ಆನು ಹೋದ ದಿನ ಭಾವಂಗೆ ಸಮ್ಮಾನ ಇತ್ತು. ಎನ್ನನ್ನೂ ಕರಕ್ಕೊಂಡು ಹೋಗಿತ್ತಿದ್ದ.

  • ಚುಬ್ಬಣ್ಣ says:

   ಹೋ..! ಅಪ್ಪೋ?? ನಿ೦ಗೊ ಅ೦ಬಗ ಮಡಿಕೇರಿ ದಸರ ಒ೦ದಾರಿ ನೋಡಿದ್ದಿ ಹೇಳಿ ಆತು.. 🙂

 6. ಬೊಳುಂಬು ಮಾವ says:

  ಮಡಿಕೇರಿ ದಸರಾ, ಎಷ್ಟೊಂದು ಸುಂದರ. ಚುಬ್ಬಣ್ಣ ಬರದ್ದದುದೆ, ಅವ ತೆಗದ ಫೊಟೊಂಗಳುದೆ ಫಸ್ಟಾಯಿದು. ಶಂಭಟ್ರ ಮಾತುಕತೆ ಮತ್ತೂ ರಂಜಿಸಿತ್ತದ.

 7. ಚುಬ್ಬಣ್ಣ says:

  ಮಡಿಕೇರಿ ದಸರ ನೋಡ್ಲೆ ಮು೦ದಿನ ಸರ್ತ್ತಿ ಬಯಲಿ ನೋವು ಎಲ್ಲಾ ಬನ್ನಿ ಎಗಳಲ್ಲಿಗೆ, ಒಟ್ಟಿಗೆ ಹೋಪೊ ನೋಡ್ಲೆ.. 🙂

 8. ಅನುಶ್ರೀ ಬಂಡಾಡಿ says:

  ದಸರವ ವಿವರ್ಸಿದ್ದೂ, ಪಟಂಗಳೂ ಲಾಯ್ಕಾಯ್ದು ಚುಬ್ಬಣ್ಣಣ್ಣ. ದಸರವೂ ಹಾಂಗೇ ಇಕ್ಕು.. 🙂

 9. ಸೂರ್ಯ says:

  ಚುಬ್ಬಣ್ಣೊ ಪಷ್ಟಾಯಿದು ಬರದ್ದು…
  ಪಟಂಗಳೂ ಲಾಯ್ಕಿದ್ದು..
  ಯು ಟ್ಯೂಬ್‌ಲ್ಲೂ ನೋಡಿದೆ…

 10. ವಿದ್ಯಾ ರವಿಶಂಕರ್ says:

  ದಸರವ ನೋಡಿದ ಸುಂದರ ಅನುಭವ ಆತು ಚುಬ್ಬಣ್ಣಾ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *