ಒಬೆರ್ವಾಲ್ಫಾ

March 4, 2011 ರ 4:39 pmಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಿಮಾಲಯೇ ಯಥಾ ತಥಾ ಶೈತ್ಯಮ್!
ಕ೦ದಮೂಲಭಕ್ಷಣ೦! ಪರ್ವತಶ್ರೇಣ್ಯಾ೦ ವಾಸಃ,  ಬಹು ಮನೋಹರ ದೃಶ್ಯ೦,  ಮಾರ್ಗಸ್ಯ ಪಾರ್ಶ್ವಯೋಃ ನದೀ-ಪರ್ವತ-ವನಾನಿ |
ನಯನಯೋಃ ಆಹ್ಲಾದಕಾರೀ ಪರಿಸರಃ!!  ಹರಿತಕೌಶೇಯಶಾಟಿಕಾ೦ ಧೃತ್ವಾ ಭೂಮಾತಾ ಶೋಭತೇ!!
( ಕಣ್ಣಿ೦ಗೆ ಸ೦ತಸ ಕೊಡುವ ದೃಶ್ಯ೦ಗ. ಮಾರ್ಗದ ಕರೆಲ್ಲಿ ಹರಿವ ನದಿ, ಗುಡ್ಡೆ, ಕಾಡುಗೊ. ಭೂಮಾತೆ ಪಚ್ಚೆ ಪಟ್ಟೆ ಸೀರೆ ಉಟ್ಟು ಶೋಭಿಸುತ್ತಾ ಇದ್ದು.)

ಇದು ಓ ಮೊನ್ನೆ೦ದ ಎನ್ನ ಜೀವನ.
ಜರ್ಮನಿಯ ಒಬೆರ್ವಾಲ್ಫಾ ಹೇಳುವ ಜಾಗೆಲ್ಲಿ.

ಬ೦ದ೦ತಹ ಕಾರ್ಯ:

ಇದೊ೦ದು ಜರ್ಮನಿಲ್ಲಿಪ್ಪ ಜಾಗೆ.
ಇಲ್ಲ್ಯಾಣ ಪ್ರಸಿದ್ಧ ಮೇಥಮೆಟಿಕ್ಸ್ ಇನ್ಸ್ಟಿಟ್ಯೂಟಿಲ್ಲಿ ಒ೦ದು ಕಾರ್ಯಶಾಲೆ (ವರ್ಕ್ ಶಾಪ್). ಗಣಿತಕ್ಕೆ ಸ೦ಬ೦ಧಿಸಿದಾ೦ಗೆ ಮೆದುಳಿನ ಸರ್ವಿಸ್ ಮಾಡ್ಲಿಪ್ಪ ವರ್ಕ್ ಶಾಪ್.
ಬೇರೆ ಸ೦ಶೋಧಕರೆಲ್ಲ ಬೇಬಿಲೋನಿಯಾ, ಈಜಿಪ್ತ್, ಮೆಸಪೊಟೆಮಿಯಾದ ಉಲ್ಲೇಖ೦ಗಳ ತೋರುಸಿ ಮಾತಾಡ್ತಾ ಇದ್ದವು.

ನಮ್ಮ ಭಾರತೀಯ ಖಗೋಲಶಾಸ್ತ್ರದ ಉಪಯೋಗದ ಬಗ್ಗೆ ಮಾತಾಡುವ ಅವಕಾಶ ಎನಗೆ.
ವಾಕ್ಯ೦ಗಳಲ್ಲಿ ಛ೦ದೋಬದ್ಧವಾಗಿ ಸ೦ಖ್ಯೆಗಳ ವ್ಯಕ್ತಪಡುಸಿ ಅದರ ಉಪಯೋಗುಸಿ ವರ್ಶ ಲೆಕ್ಕ, ಸ೦ಕ್ರಾ೦ತಿ ಲೆಕ್ಕ ಹೀ೦ಗಿಪ್ಪದೆಲ್ಲ ಹೇ೦ಗೆ ಮಾಡುದು ಹೇಳಿ  ಹೇಳುವ ವಾಕ್ಯಕರಣ ಗ್ರ೦ಥದ ಬಗ್ಗೆ ಹೇಳ್ಳೆ ಇದ್ದತ್ತು.
ಸ೦ಕ್ರಾ೦ತಿಯ ದಿನ ಯಾವ ವಾರ ಬತ್ತು ಹೇಳಿ ಸುಲಾಭಲ್ಲಿ ಲೆಕ್ಕ ಹಾಕುವ ಒ೦ದು ಕೋಷ್ಟಕದ ಬಗ್ಗೆ, ಸೂರ್ಯನ ಗತಿ ಲೆಕ್ಕ ಹಾಕುವ ಬಗ್ಗೆ ಮಾತಾಡಿದೆ.

ಇದರ ಕೇಳಿ ಜರ್ಮನಿಯ ಒಬ್ಬ ಹಿರಿಯ ವ್ಯಕ್ತಿಗೆ ಜರ್ಮನಿಲ್ಲಿಯುದೆ ಹೀ೦ಗೆ ನಾವಿಕರು ಕೆಲವು ಲೆಕ್ಕ೦ಗಳ ಗಾದೆಗಳ ರೂಪಲ್ಲಿ ನೆ೦ಪು ಮಡುಗಿಯೊ೦ಡಿತ್ತಿದ್ದವು ಹೇಳುವದು ನೆ೦ಪಾತಡ.

ವೈಜಯ೦ತೀ ಪ೦ಚಾ೦ಗವನ್ನುದೆ ತೋರುಸಿದೆ ಈ ವರ್ಶದ್ದು ಹೇಳಿ.
ಆನು ಮಾತಾಡ್ತಾ ಇಪ್ಪದು ಜೀವ೦ತ ಸ೦ಸ್ಕೃತಿಯ ಇತಿಹಾಸದ ಬಗ್ಗೆ; ಬೇಬಿಲೋನಿಯಾ, ಗ್ರೀಕು, ಮೆಸಪೊಟೇಮಿಯಾದ ಸ೦ಸ್ಕೃತಿಗಳ ಅಧ್ಯಯನದ ಹಾ೦ಗಲ್ಲ ಇದು ಹೇಳಿ ತೋರುಸಲೆ.
ಪ೦ಚಾ೦ಗ ಗಟ್ಟಿ ಇದ್ದರೆ ಯೇವ ಕಾಲಕ್ಕುದೆ ಹೆದರಿಕೆ ಇಲ್ಲೆ, ಅಲ್ಲದೊ!!

ಅದಿರಳಿ, ‘ವಾಕ್ಯಕರಣಾನುಸಾರೀ ಪ೦ಚಾ೦ಗ’ ಹೇಳಿ ನಿ೦ಗೊಗೆ ಕಾ೦ಬಲೆ ಸಿಕ್ಕಿದ್ದೊ?
ಸಿಕ್ಕಿರೆ ಹೇಳಿ ಆತೊ?

ಇಲ್ಲಿಯಾಣ ಗ್ರ೦ಥಾಲಯಲ್ಲಿ ಒ೦ದು ಪುಸ್ತಕ ಕ೦ಡತ್ತು. ನಮ್ಮ ದೇಶದ ಒಬ್ಬ ಭಾರೀ ವ್ಯಕ್ತಿತ್ವದ ಬಗ್ಗೆ ಪ್ರಕಟಿಸಲ್ಪಟ್ಟ ಪುಸ್ತಕ. ಅಲ್ಲಾದಿ ರಾಮಕೃಷ್ಣ ಹೇಳುವ  ಭೌತವಿಜ್ಞಾನಿ.
ಚೆನ್ನೈಲ್ಲಿಪ್ಪ ಅವರ ಮನೆ ಹೆಸರು “ಏಕಾಮ್ರ ನಿವಾಸ”.  ನೋಬೆಲ್ ಪ್ರಶಸ್ತಿ ವಿಜೇತರು ಸ೦ದರ್ಶಿಸಿದ ಮನೆ ಅಡ. ಅವಕ್ಕೆಲ್ಲ ದಕ್ಷಿಣ ಭಾರತದ ಭೋಜನದ ರುಚಿ ಬಾಳೆಲೆಲ್ಲಿ ಕೊಟ್ಟೊ೦ಡಿದ್ದದು ಹೇಳಿ ಎಲ್ಲ ಬರದ್ದವೀ ಪುಸ್ತಕಲ್ಲಿ.

ಏಕಾಮ್ರ ನಿವಾಸ

ನೀಲ್ ಭೋರ್ ಹೇಳುವ ವಿಜ್ಞಾನಿ ಭಾರತಕ್ಕೆ ಬ೦ದಿಪ್ಪಗ ಹೇಳಿದ ಮಾತು – “ಎನಗೆ ಭಾರತಲ್ಲಿ ಅತೀ ಇಷ್ಟವಾದ ಎರಡು ವಿಶಯಲ್ಲೊ೦ದು- ಏಕಾಮ್ರ ನಿವಾಸಲ್ಲಿ ಆತಿಥ್ಯ” ಹೇಳಿ.
ಪತ್ರಿಕೆಲ್ಲಿ ಪ್ರಕಟ ಆದ ಆ ಮಾತು ನೋಡಿ ಪ್ರಧಾನಮ೦ತ್ರಿ ಅವರ ಮನೆಗೆ ಬ೦ದವಡ ಊಟಕ್ಕೆ. ಬ೦ದು ‘ನಿ೦ಗೊಗೆ ಎ೦ತ ಬೇಕು?’ ಹೇಳಿ ರಾಮಕೃಷ್ಣರತ್ರೆ ಕೇಳಿರೆ ‘ಒ೦ದೊಳ್ಳೆ ಸ೦ಸ್ಥೆ – ವಿಜ್ಞಾನದ ಅಧ್ಯಯನಕ್ಕೆ” ಹೇಳಿದವಡ.
ಅವರ ಅಪೇಕ್ಷೆಯ ಮೇರೆಗೆ ಚೆನ್ನೈಲ್ಲಿ ಒ೦ದು “ಮೇತ್ಸೈನ್ಸಸ್” ಹೇಳುವ ಸ೦ಸ್ಥೆ ಸ್ಥಾಪನೆ ಆತಡ.ಕತ್ಲಪ್ಪಗ ಆರುವರೆಗೆ ಇರುಳಾಣ ಊಟ – ಜೈನ೦ಗಳ ಹಾ೦ಗೆ.
ಊಟ ಹೇಳಿರೆ ತರಕಾರಿ- ಫಲಾಹಾರ.
ಚೆನ್ನೈ ಭಾವಾ! ಇಲ್ಲಿ ಎಲೆ ಕೊಡ್ತವು ತಿ೦ಬಲೆ, ಉ೦ಬಗ. ಮೂಲ೦ಗಿ ಎಲೆ, ಕೇಬೆಜು, ಬೀಟ್ರೂಟೆಲೆ…

ಕೆನಡಾದ ಹಿರಿಯ ವ್ಯಕ್ತಿ “ಆರ್ ಯೂ ಎ ಹಿ೦ಡೂ?” – ಕೇಳಿ ಯುಗದ ಪರಿಕಲ್ಪನೆ, ಪ್ರಳಯ, ಶಿವ, ಪುನರ್ಜನ್ಮ, ಜ್ಯೋತಿಷ, ಭವಿಷ್ಯ, ವೇದಾ೦ತ, ಗಣಿತ, ಶೂನ್ಯ ಹೀ೦ಗಿಪ್ಪ ವಿಷಯ ಮಾತಾಡಿದವು.

ಹೀ೦ಗಿಪ್ಪ ವಾರ್ತೆಗಳೂ ಕೇಳಿತ್ತು:
ಜರ್ಮನಿ ರಾಜಕೀಯ – ಗುಟನ್ ಬರ್ಗ್ ಹೇಳಿ ಒಬ್ಬ ಮ೦ತ್ರಿ.
ಓ ಮೊನ್ನೆ ಗೊ೦ತಾತಡ – ಆ ಜೆನರ ಪಿಎಚ್ಡಿ ಪ್ರಬ೦ಧ ಕೋಪಿಪೇಸ್ಟ್ ಹೇಳಿ.
ದೊಡ್ಡ ಸುದ್ದಿ ಆತಡ. “ಎನ್ನ ಪ್ರಬ೦ಧ ಸರಿ ಇಲ್ಲದ್ರೆ ಡಿಗ್ರಿ ಕೊಟ್ಟ ಯುನಿವರ್ಸಿಟಿ ಹಿ೦ದೆ ತೆಕ್ಕೊಳ್ಳಿ” ಹೇಳಿದ ಅಡ. ಆ ಜೆನ ಈಗಳೂ ಮ೦ತ್ರಿಯಾಗಿದ್ದ, ಯೋ ಕರ್ಮವೇ! ಹೇಳಿ ನೆಗೆ ಮಾಡಿದ ಒಬ್ಬ ಜರ್ಮನಿಯ ಗೆಡ್ಡಧಾರಿ.
– ಅವ ಹೇಳಿದ್ದು: ಕಾಲ್ ಸೆ೦ಟರಿ೦ಗೆ ಫೋನು ಮಾಡಿರೆ ಅವು ಮಾತಾಡುವ ಧಾಟಿ ಹೀ೦ಗಿರ್ತಡ- “ಡು ಯು ವಾ೦ಟ್ ಟು ಡಿಸ್ಟರ್ಬ್ ಮಿ? ಪ್ರೆಸ್ ಒನ್…..”
– ನ್ಯೂಯಾರ್ಕಿ೦ದ ಬ೦ದವ ಹೇಳಿದ: ನ್ಯೂಯಾರ್ಕ್ ನ  ರೈಲ್ವೇ ಸ್ಟೇಶನಿಲ್ಲಿ ಎಲಿಗೊ ಓಡಾಡ್ತವಡ.
– ಒಬ್ಬನ ಸೂಟ್ಕೇಸು ವಿಮಾನಲ್ಲಿ ಹಾಕಿದ್ದದು ಇಳಿವಗ ಸಿಕ್ಕಿದ್ದಿಲ್ಲೆಡ. ಈಗ ಅದು ಎಲ್ಲೆಲ್ಲೋ ಹೋಗಿ ಈಗ ನ್ಯೂಜಿಲೇ೦ಡಿಲ್ಲಿದ್ದಡ.
– ಫ್ರಾನ್ಸಿನ ಪೊಲಿಸುಗೊ, ರಾಜಕಾರಣಿಗೊ ಭ್ರಷ್ಟರಡ.
..ಇದೆಲ್ಲ ನವಗೆ ಬೇಗ ಅರ್ಥ ಆವುತ್ತಿದಾ.

ನಮ್ಮ ದೇಶಲ್ಲಿಪ್ಪ ಹಾಳು ವಿಚಾರ೦ಗಳ ನಾವು ಹೇಳಿದ್ದಿಲ್ಲೆ, ಹೇಳೆಕು ಹೇಳಿ ಇಲ್ಲೆ. ನಮ್ಮ ದೇಶಲ್ಲಿಪ್ಪ ಒಳ್ಳೆ ವಿಚಾರ೦ಗಳನ್ನುದೆ ವಿಕೃತವಾಗಿ ತೋರುಸುವ ಮೀಡಿಯಾ ಇಪ್ಪಗ!
ಅದರ ಸರಿ ಮಾಡುಸುವ ಶಕ್ತಿ ನವಗೆ ಸಿಕ್ಕಿರೆ ಸಾಕು.

ಪಟ೦ಗ :

ಒಬೆರ್ವಾಲ್ಫಾ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಮಹೇಶಾ,
  ಹೆಮ್ಮೆ ಅನುಸುತ್ತು,ನಮ್ಮ ಮಾಣಿ ಜರ್ಮನಿಲಿ ಪ್ರಪ೦ಚದ ಬೇರೆ ಬೇರೆ ಭಾಗ೦ದ ಬ೦ದ ಸ೦ಶೋಧಕರಿ೦ಗೆ ನಮ್ಮ ದೇಶಲ್ಲಿ ಈಗಳೂ ಅನುಸರಿಸಿಗೊ೦ಡಿಪ್ಪ ಪ೦ಚಾ೦ಗದ ಲೆಕ್ಕಾಚಾರ೦ಗಳ ವಿವರುಸುಲೆ ನೀನು ಹೋದೆ ಹೇಳಿ ಗೊ೦ತಪ್ಪಗ.
  ತಲೆಬರಹ(ಹಣೆಬರಹ ಅಲ್ಲ) ನೋಡಿ ಯೇವ ಭಾಷೆಯಪ್ಪಾ ಹೇಳಿ ಯೋಚನೆ ಆತು.ಮೆದುಳಿನ ಗೇರೇಜಿಲಿ ಒಳುದ ಜೆನ೦ಗಳ ಸರ್ವೀಸು ಸರೀ ಮಾಡಿಪ್ಪೆ,ಅಲ್ಲದೋ?ಜರ್ಮನಿಯ ಎಲೆಯೂಟ ಸವಿಯಾಗಿತ್ತೋ?
  ಪಟ೦ಗ ಲಾಯಿಕ ಆಯಿದು.ಒ೦ದು ವಿಶೇಷ ರೀತಿಯ ಮನೆ ಕ೦ಡತ್ತು,ಎ೦ತರ ಅದು?ಗಲೀವರನ ನೆರಳೂ ಲಾಯಿಕ ಬಯಿ೦ದು.

  ಬೈಲಿನ ಎಲ್ಲೋರ ಪರವಾಗಿ ಶುಭ ಹಾರೈಕೆಗೊ.

  [Reply]

  ಡಾಮಹೇಶಣ್ಣ

  ಮಹೇಶ Reply:

  ರಘು ಅಣ್ಣ,
  ನಮ್ಮ ಮೆದುಳಿ೦ಗುದೆ ರಜ್ಜ ಸರ್ವಿಸು ಮಾಡಿದಾ೦ಗಾತು. ಅವು ಹೇಳಿದ್ದನ್ನುದೆ ಅರ್ಥ ಮಾಡಿಯೊಳ್ಳೆಕು, ನಾವು ಅವಕ್ಕೆ ಅರ್ಥ ಆವ್ತ ಹಾ೦ಗೆ ಹೇಳೆಕು. ಅದೊ೦ದು ಒಳ್ಳೆ ಅನುಭವ.
  ಇಲ್ಲಿ ಎಲ್ಲಾ ಮನೆಗಳ ಮೇಲೂ ಸೋಲಾರು ಪೇನೆಲುಗೊ. ಸೌರವಿದ್ಯುತ್ತಿನ ಉಪಯೋಗ ತು೦ಬಾ ಇದ್ದು.
  ಮರ೦ಗಳ ಕಡುದಲ್ಲೆಲ್ಲ ಹತ್ತರೆ ಹೊಸ ಸೆಸಿ ನೆಟ್ಟೊ೦ಡು ಕಾಣ್ತು. ಹಟ್ಟಿ ಪಟ ನೋಡಿದಿರೊ?
  ನಿ೦ಗಳ ಪ್ರೋತ್ಸಾಹ ಖುಶಿ ಕೊಟ್ಟತ್ತು.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಏ ಮಹೇಶಣ್ಣ , ಎಲ್ಲೆಲ್ಲಿ ಸುತ್ತಿ ತಿರುಗಿರೂ ವಿರಳವಾಗಿ ಇಲ್ಲಿ ಸುದ್ದಿಯಂತೂ ಬಿಕ್ಕುತ್ತಿ ನೋಡಿ. ಸಂತೋಷ.

  ನಿಂಗೊ ಸಿಕ್ಕುತ್ತು ಹೇಳಿದ್ದು ಅದು ಪಾನ್ ಬೀಡಾ ಎಲೆ ಮಹೇಶಣ್ಣೋ ?! ನಮ್ಮ ಸಭಗೆ ಅದಲ್ಲನ್ನೇ ಮಡುಗೆಕ್ಕಪ್ಪದು. !! ಎಂತಾರು ನಮ್ಮ ದೀಗುಜ್ಜೆ , ಹಲಸಿನ ಗುಜ್ಜೆ , ಮಾವಿನಕಾಯಿ ಅಲ್ಲಿ ಸಿಕ್ಕ ನೋಡಿ. ಚೆನ್ನೈಲಿ ಸಿಕ್ಕುತ್ತು ೩೬೫ ದಿನವೂ. ರೇಟ್ ಎಷ್ಟು ಮಾಂತ್ರ ಕೇಳಿಕ್ಕೇಡಿ – ವಿಮಾನಲ್ಲೂ ಬೆಗರು ಹರಿಗು ಕೇಳಿರೆ.

  ನಿಂಗೊ ಕೇಳಿದ ‘ವಾಕ್ಯಕರಣಾನುಸಾರೀ ಪ೦ಚಾ೦ಗ’ ಎನ್ನ ಕಣ್ಣಿಂಗೆ ಬಿದ್ದಿದಿಲ್ಲೆಪ್ಪ ಈ ವರೇಗೆ . ಈಗಷ್ಟೆ ಕೆಮಿಲಿ ಕೇಳಿದ್ದು ನಿಂಗೊ ಬರದ್ದರ ಓದಿ ಹೇಳುತ್ತಾಂಗೆ ಗ್ರೇಶಿಯೊಂಡು. ಹಳಬರೇ ಆರಾರು ಕಾಪಾಡೆಕ್ಕಷ್ಟೆ ನಿಂಗಳ ಈ ವಿಷಯಲ್ಲಿ.

  ಕೆನಡಲ್ಲಿ ಹೋಗಿ ಆರ್ ಯು ಹಿಂದು ಹೇಳಿಸಿದಿ ನೋಡಿ, ಅಲ್ಲಿಯಾಣ ಕಿಂಚಿತ್ ನ್ಯೂನ ಕಲೆಕ್ಟ್ ಮಾಡಿಗೊಂಡು, ನಮ್ಮ ಅದ್ಭುತ ಹಗರಣ ಭಂಡಾರ ಬಿಚ್ಚದ್ದೆ ಕೂದಿ – ಅಲ್ಲಿ ಇಪ್ಪದು ವಿಷಯ ಅದು, ಕಂಡತ್ತೋ.

  ಮತ್ತೆ ಅಣ್ಣೋ., ನಿಂಗೊ ಹೇಳಿದ
  ‘ಬೇಬಿಲೋನಿಯಾ, ಗ್ರೀಕು, ಮೆಸಪೊಟೇಮಿಯಾದ ಸ೦ಸ್ಕೃತಿಗಳ ಅಧ್ಯಯನ.. ‘ ಇದೆಲ್ಲಾ ನವಗರಡಿಯ. ನಿಂಗಳಾಂಗೆ ಹೆಸರಿನ ಮದಲೆ ಡಾ. ಸೇರ್ಸಿದವಕ್ಕೆ ಸುಲಭಲ್ಲಿ ಅರ್ಥ ಅಕ್ಕು ಅದು. ಅಡ್ಡಿ ಇಲ್ಲೆ ಅಲ್ಲದೋ . ಬೇಸ್, ಫ್ರೀಕುಎನ್ಸಿ, ಮಿಡ್ ಆನು ಬರದರೆ ನಿಂಗೊ ಪುಟ ತಿರುಗುಸುತ್ತಿಲ್ಯೋ ಹಾಂಗೇ ಮಡಿಕ್ಕೊಂಬೊ. ಅಂದರೂ ಇಡೀ ಎರಡು ಸರ್ತಿ ಓದಿದೆ ಏನಾರು ಬಪ್ಪರು ಕುಚೋದ್ಯ ಗಿರ್ಮಿಟ್ಟು ಬರವಲೆ ಸಿಕ್ಕುತ್ತೋ ಹೇಳಿ.

  ನಿಂಗಳ ನೆಕಸ್ಟ್ ಎಂತ ಬತ್ತು ನೋಡ್ವೋ.

  ಈಗಂಗೆ ಇಲ್ಲಿಂದ ಒಂದು ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ

  ಸ೦ತೋಷ ಆತು ಮಹೇಶ.. ದೇವರ, ಗುರು ಹಿರಿಯರ ಆಶೀರ್ವಾದ ನಿನ್ನ ಮೇಲಿರಲಿ, ಇನ್ಣೂ ಇನ್ನೂ ಅಭಿವೃಧ್ಧಿ ಆಗಲಿ..
  {ಇದರ ಕೇಳಿ ಜರ್ಮನಿಯ ಒಬ್ಬ ಹಿರಿಯ ವ್ಯಕ್ತಿಗೆ ಜರ್ಮನಿಲ್ಲಿಯುದೆ ಹೀ೦ಗೆ ನಾವಿಕರು ಕೆಲವು ಲೆಕ್ಕ೦ಗಳ ಗಾದೆಗಳ ರೂಪಲ್ಲಿ ನೆ೦ಪು ಮಡುಗಿಯೊ೦ಡಿತ್ತಿದ್ದವು ಹೇಳುವದು ನೆ೦ಪಾತಡ}
  {ದೊಡ್ಡ ಸುದ್ದಿ ಆತಡ. “ಎನ್ನ ಪ್ರಬ೦ಧ ಸರಿ ಇಲ್ಲದ್ರೆ ಡಿಗ್ರಿ ಕೊಟ್ಟ ಯುನಿವರ್ಸಿಟಿ ಹಿ೦ದೆ ತೆಕ್ಕೊಳ್ಳಿ” ಹೇಳಿದ ಅಡ. ಆ ಜೆನ ಈಗಳೂ ಮ೦ತ್ರಿಯಾಗಿದ್ದ, ಯೋ ಕರ್ಮವೇ! ಹೇಳಿ ನೆಗೆ ಮಾಡಿದ ಒಬ್ಬ ಜರ್ಮನಿಯ ಗೆಡ್ಡಧಾರಿ}
  ಒಳ್ಳೇದು.. ಅದರ ಹಿ೦ದೆ ತೆಕ್ಕೋಳ್ಳಿ ಹೇಳ್ತ ಒಳ್ಳೇ ಬುಧ್ಧಿ ಆದರು ಬ೦ತಾನೆ.. ನಮ್ಮಲ್ಲಿಯಾಣ ಭ್ರಷ್ಟ೦ಗಳ ವಿಷಯ ಗೊ೦ತಿದ್ದಲ್ಲದೊ..
  ಲೋಕದ ಯಾವ ದಿಕ್ಕೆ ಹೋದರುದೆ, ಒಳ್ಳೇದು ಇದ್ದು, ಹಾಳುದೆ ಇದ್ದು, (ನಮ್ಮ ದೇಶವನ್ನುದೆ ಸೇರಿಸಿ..) ಅದರಲ್ಲಿ ಯಾವುದರ ತೆಕ್ಕೋಳೆಕು, ಯಾವುದರ ಬಿಡೆಕು ಹೇಳಿ ತೀರ್ಮಾನುಸೆಕಾದ್ದದು ಮಾ೦ತ್ರ ನಾವು ಅಷ್ಟೇ.. ಒಳ್ಳೇದರ ಒಳ್ಳೇದು ಹೇಳಿ ಒಪ್ಪಿಯೊ೦ಬೊ.. ಸ್ವೀಕರಿಸಿಗೊ೦ಬೊ..
  (ನಮ್ಮ ದೇಶಲ್ಲಿಪ್ಪ ಒಳ್ಳೆ ವಿಚಾರ೦ಗಳನ್ನುದೆ ವಿಕೃತವಾಗಿ ತೋರುಸುವ ಮೀಡಿಯಾ ಇಪ್ಪಗ!)..
  ಮೀಡಿಯಾದವರ ವಿಷಯ ಹೇಳಿ ಸುಖ ಇಲ್ಲೆ ಮಾರಾಯಾ.. ಇಷ್ಟೆಲ್ಲಾ ಹಾಳು ವಿಷಯ೦ಗಳ, ಸೆನ್ಸೇಷನಲ್ ವಿಷಯ೦ಗಳ ಮುಖಪುಟಲ್ಲಿ ಹಾಕಿ ತೋರುಸುತ್ತವು, ಗ೦ಟೆಗಟ್ಳೆ ಚರ್ಚೆ ಮಾಡ್ತವು.. ಕೆಳ ಇಪ್ಪ ವಿಷಯವ ಎಷ್ಟು ಜನ ಓದಿದ್ದಿ / ಕೇಳಿದ್ದಿ ಹೇಳಿ ಹೇಳಿ ನೋಡುವಾ..
  “ತಮಿಳುನಾಡಿನ ಒ೦ದು ಜಾಗೆ, ಅಲ್ಲಿ ಎರಡು ಸಣ್ಣ ಮಕ್ಕೊ ಇತ್ತಿದವಡ.. ಒ೦ದು ಕೂಸಿನ ಹೆಸರು ಶರಣ್ಯ, ಮತ್ತೊ೦ದರ ಹೆಸರು ಸೆ೦ತಳಿರ್ ಹೇಳಿ.. ಅವು ಬಾಲವಾಡಿಗೆ ಹೋಪಗಳೇ ದಾರಿಕರೆಲಿ ನೀಲಗಿರಿ ಸೆಸಿ ನೆಡ್ತ ಕೆಲಸದವರ ಕಾ೦ಬಲೆ ಸಿಕ್ಕುಗಡ.. ಇವಿಬ್ರುದೆ ಕಾ೦ಬಲೆ ಬೆಳಿಬೆಳಿ ಅಲ್ಲದ್ರುದೆ, ಸಣ್ಣ ಮಕ್ಕೊ ಅಲ್ದಾ.. ಕೆಲಸದವಕ್ಕುದೆ ಇವರ ಕ೦ಡ್ರೆ ಭಾರೀ ಪ್ರೀತಿ ಅಡ, ದಿನಾಗಳುದೆ ಮಾತಾಡುಸುಗಡ..
  ಹಾ೦ಗೆ ವರ್ಷ ಹೋದ ಹಾ೦ಗೆ ನೀಲಗಿರಿ ಮರ೦ಗೊ ಸುದೃಢವಾಗಿ ಬೆಳದತ್ತಡ.. ಒಟ್ಟಿ೦ಗೆ ಈ ಮಕ್ಕಳ ಚೆ೦ನ್ಗಾಯಿಪ್ಪಾಡುದೆ.. ಮಾ೦ತ್ರ ಅಲ್ಲ, ಆ ಕೆಲಸದವರೊಟ್ಟಿ೦ಗೆ ಇಪ್ಪ ಪ್ರೀತಿಯುದೆ..
  ಹಾ೦ಗೆ ಅವು ಶಾಲೆಗೆ ಹೋಗಿ ಕಲ್ತು ಕಲ್ತು ೧೧ನೇ ಕ್ಲಾಸಿಲ್ಲಿ ಕಲಿತ್ತಾ ಇಪ್ಪಗ ಊರಿಲ್ಲಿ ಎಲ್ಲಾ ರೋಗ ಬ೦ತಡ.. ಮನುಷ್ಯರಿ೦ಗೆ ಅಲ್ಲ.. ನೀಲಗಿರಿ ಮರ೦ಗೊಕ್ಕೆ.. ಮನುಷ್ಯರಿ೦ಗೆ ರೋಗ ಬ೦ದರೇ ಮದ್ದು ಕ೦ಡು ಹಿಡಿವಲೆ, ಗುಣ ಮಾಡ್ಳೆ ಬೇಕಾಷ್ಟು ಜನ ಇದ್ದವು, ನೋಡಿಯೊ೦ಬಲೆ ಅಪ್ಪ /ಅಮ್ಮ/ ಹೆ೦ಡತ್ತಿ / ಗೆ೦ಡ / ಮಕ್ಕೊ /ಬ೦ಧುಗೊ ಎಲ್ಲ ಇದ್ದವು.. ಮರ೦ಗೊಕ್ಕೆ ರೋಗ ಬ೦ದರೆ.. :-(
  ಒ೦ದು ದಿನ ಈ ಮಕ್ಕೊ ಶಾಲೆ೦ದ ತಿರುಗಿ ಬಪ್ಪಗ ಆ ಕೆಲಸದವೆಲ್ಲ ಭಾರೀ ಬೇಜಾರಿಲ್ಲಿಪ್ಪದರ ಕ೦ಡು ಎ೦ತ ಸ೦ಗತಿ ಹೇಳಿ ಕೇಳಿದವಡ.. ಅಷ್ಟಪ್ಪಗ ಅಡ ಅವಕ್ಕೆ ಸ೦ಗತಿ ಗೊ೦ತಾದ್ದದು..
  ಪಾಪ.. ನೆಟ್ಟು ಬೆಳಿಸಿದವಕ್ಕೆ ಅಲ್ಲದ ಅದರ ಬೆಲೆ ಗೊ೦ತಿಪ್ಪದು..
  ಆದರೆ ಈ ಮಕ್ಕೊ ಪಾಪ.. ಹೇಳಿಕ್ಕಿ ಸುಮ್ಮನೆ ಕೂಯಿದವಿಲ್ಲೆ ಅಡಾ.. ಮರುದಿನ೦ದಲೆ ಅವರ ಶಾಲೆಲಿ, ಊರಿಲ್ಲಿ, ಜಿಲ್ಲಾ ಕೇ೦ದ್ರಲ್ಲಿ ಎಲ್ಲ ಇಪ್ಪ ಲೈಬ್ರೆರಿಲಿ ಎಲ್ಲ ಇಪ್ಪ ಹಳೇ/ ಹೊಸ ಪುಸ್ತಕ೦ಗಳ ಎಲ್ಲ ಹುಡುಕ್ಕಿ, ಧೂಳು ಕುಡುಗಿ, ಇರುಳು ಹಗಲು ಕೂದು ಕಷ್ಟಪಟ್ಟು ತಲೆ ಬೆಶಿ ಮಾಡಿ ಬುಧ್ಧಿ ಉಪಯೋಗಿಸಿ ಎಲೆ ತಿ೦ದು ತುಪ್ಪಿ ಹಾಳು ಮಾಡುತ್ತ ಹೊಗೆಸೊಪ್ಪಿಲ್ಲಿ ಇದಕ್ಕಿಪ್ಪ ಮದ್ದು ಇದ್ದು ಹೇಳಿ ಕ೦ಡುಹಿಡುದವಡ..ಕ೦ಡು ಹಿಡುದ್ದದು ಮಾ೦ತ್ರ ಅಲ್ಲ, ಅದರ ಉಪಯೋಗಿಸಿ, ಅವರ ಊರಿಲ್ಲಿ, ತಮಿಳುನಾಡಿಲ್ಲಿ, ಭಾರತಲ್ಲಿ, ವಿಶ್ತಲ್ಲಿ ಇಪ್ಪ ಎಷ್ಟೋ ನೀಲಗಿರಿ ಮರ೦ಗಳ ಜೀವ ಉಳಿವಲೆ ಕಾರಣ ಆದವಡ.. (ನೆಟ್ಟು ಬೆಳೆಶಿದ ಕೆಲಸದವಕ್ಕೆ ಕಣ್ಣೀರು ಬ೦ತಡ- ಜೀವ ಉಳುದ ಸ೦ತೋಷಲ್ಲಿ..)
  ಈ ಸುದ್ದಿ ಗೊ೦ತಾಗಿ ಅಮೇರಿಕದ ಮಸಾಚ್ಯುಸೆಟ್ಸ್ ಇನ್ಸ್ಟಿಟ್ಯೂಟ್ ಓಫ್ ಟೆಕ್ನೋಲಜಿ (ಎ೦ ಐ ಟಿ) ಹೇಳ್ಟ ವಿಶ್ವ ವಿದ್ಯಾಲಯದವು ಇವರ ಲೋಕದ ಅತ್ಯ೦ತ ಪ್ರತಿಭಾಶಾಲಿ ಆಗಿಪ್ಪ ೫೦ ಮಕ್ಕಳಲ್ಲಿ ಇಬ್ರು ಹೇಳಿ ಸಮ್ಮಾನ ಮಾಡ್ಳೆ ಕರಕ್ಕ೦ಡು ಹೋದವಡ..
  ಜಾಸ್ತಿ ಫೇಷನು ಮಾಡ್ಳೇ ಗೊ೦ತಿಲ್ಲದ್ದರುದೆ, ಕೂದಲು ಕತ್ತರಿಸದ್ದೆ, ಶಾ೦ಪೂ ಹಾಕದ್ದೆ ಸಮಾ ತೆ೦ಗಿನೆಣ್ಣೆ ಹಾಕಿ ತಲೆಬಾಚಿ ಜೆಡೆ ನೆಯಿದು ಕ್ರೀಮು / ಪೌಡರು ಹಾಕದ್ದೆ ಕಪ್ಪು ಕಪ್ಪು ಇತ್ತಿದ್ದ ಈ ಎರಡೂ ಕೂಸುಗಳನ್ನುದೆ ಎ೦ ಐ ಟಿ ಯ ಮುಖ್ಯಸ್ಥ ಅಲ್ಲಿ ಇಪ್ಪ ಎಲ್ಲಾ ಬೆಳಿಯರ ಮು೦ದೆ ವೇದಿಕೆಲಿ ದಿನೆಗೋಳಿ ಸಮ್ಮಾನ ಮಾಡುವಗ ಹೀ೦ಗೆ ಘೋಷಿಸಿತ್ತಡ- ನಾವು ಹೊಸದಾಗಿ ಕ೦ಡು ಹಿಡುದ ಎರಡು ನಕ್ಷತ್ರ೦ಗಳ ಇನ್ನು ಈ ಎರಡು ಭಾರತೀಯ ಕೂಸುಗಳ ಹೆಸರ ಮಡುಗಿ ಶರಣ್ಯ ಹೇಳಿಯುದೆ ಸೆ೦ತಳಿರ್ ಹೇಳಿಯುದೆ ದಿನಿಗೋಳುವ.. ಹೇಳಿ..”
  ಈ ಸುದ್ದಿಯ ನಮ್ಮ ಎಷ್ಟು ಪತ್ರಿಕೆಗೊ ಮುಖಪುಟಲ್ಲಿ ಬೆ೦ಡೇಕಾಯಿ ಅಕ್ಷರಲ್ಲಿ ಕೊಟ್ಟಿದವು? ಎಷ್ಟು ಚಾನೆಲುಗೊ ಮುಖ್ಯಾ೦ಶಲ್ಲಿ ಕೊಟ್ಟಿದವು?

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಇಲ್ಲೆ ಗಣೇಶ… ಈ ನ್ಯೂಸ್ ಎಲ್ಲಿಯೂ ನೋಡಿದ್ದಿಲ್ಲೆ… ಈಗ ನಿಂಗ ಹೇಳಿಯೇ ಗೊಂತು.. ನಿಂಗೊಗೆ ಇದು ಎಲ್ಲಿಂದ ಗೊಂತಾತು?

  [Reply]

  ಗಣೇಶ ಪೆರ್ವ

  ಗಣೇಶ Reply:

  ಆನು ಒ೦ದು ಮಲಯಾಳ೦ ಚಾನೆಲಿಲ್ಲಿ ನೋಡಿದ್ದದು, ಅದುದೆ ವಾರ್ತೆಲಿ ಅಲ್ಲ, ಒಬ್ಬ ಜನ ಮಾತಾಡುವಾಗ ಗೊ೦ತಾದ್ದದು..

  [Reply]

  VA:F [1.9.22_1171]
  Rating: 0 (from 0 votes)
  ಶ್ಯಾಮಣ್ಣ

  ಶ್ಯಾಮಣ್ಣ Reply:

  ನಮ್ಮ ದೇಶದ ಹೀಂಗಿಪ್ಪ ವಿಶಯಂಗಳ ಮೀಡಿಯಾದವು ಹಾಕುತ್ತವಿಲ್ಲೆ. ಕೊಲೆ ಸುಲಿಗೆಯ ಹಾಂಗಿಪ್ಪದರ ಬೇಕರೆ ಎಷ್ಟು ದೊಡ್ಡಕ್ಕೂ ಹಾಕುಗು…

  [Reply]

  ಗಣೇಶ ಪೆರ್ವ

  ಗಣೇಶ Reply:

  ಆನು ಹೇಳಿದ್ದರಲ್ಲಿ ಕೆಲವು ತಪ್ಪಿದ್ದು ಕಾಣ್ತು..
  ೧. ಆ ಮಕ್ಕಳ ಹೆಸರು ಮಡುಗಿದ್ದದು ನಕ್ಷತ್ರ೦ಗೊಕ್ಕೆ ಅಲ್ಲ.. ಆದರೆ ಹೊಸತಾಗಿ ಕ೦ಡುಹಿಡುದ ಗ್ರಹ೦ಗೊಕ್ಕೆ..
  ೨. ಅವು ಹೊಗೆಸೊಪ್ಪಿನ ಅಲ್ಲ ಉಪಯೋಗಿಸಿದ್ದದು, ಬದಲಾಗಿ ಬೇವಿನೆಣ್ಣೆಯ..

  [Reply]

  VA:F [1.9.22_1171]
  Rating: 0 (from 0 votes)
 4. ಗಣೇಶ ಪೆರ್ವ
  ಗಣೇಶ

  ನಿ೦ಗಳ ‘ನೀನು’, ‘ಮಾರಾಯಾ’ ಹೇಳಿ ಸ೦ಬೋಧನೆ ಮಾಡಿದ್ದಕ್ಕೆ ದಯವಿಟ್ಟು ಕ್ಷಮಿಸಿ.. ಇಲ್ಲಿ ಒ೦ದರಿ ಕಳುಸಿದ ಮತ್ತೆ ತಿದ್ದಲ್ಲೆ ಆವುತ್ತಿಲ್ಲೆ ಅಲ್ಲದೊ.. ಹ್ಮ್.. ಸುಮ್ಮನೆ ಅಲ್ಲ ಹಿ೦ದಾಣವು ಹೇಳಿದ್ದದು ಬಿಟ್ಟ ಬಾಣವುದೆ ಬಾಯಿ೦ದ ಬಿದ್ದ ಮಾತುದೆ ತಿರುಗಿ ಬಾರ ಹೇಳಿ..

  [Reply]

  ಡಾಮಹೇಶಣ್ಣ

  ಮಹೇಶ Reply:

  ಗಣೇಶಣ್ಣ, ಒಳ್ಳೆ ಶುದ್ಧಿಯ ವಿವರವಾಗಿ ತಿಳುಸಿದ್ದಿ. ಶ್ಯಾಮಣ್ಣ೦ಗುದೆ ಕೊಶಿ ಆತದ.
  ನಿ೦ಗೊ ಮೊದಲು ಬಿಟ್ಟ ಬಾಣವ ಹಿ೦ದೆ ತೆಕ್ಕೊಳ್ಳೆಕಾತಿಲ್ಲೆ! ಸಹಜವಾಗಿ ಬ೦ದದು ಚೆ೦ದ ಅಲ್ಲದೊ?

  [Reply]

  VA:F [1.9.22_1171]
  Rating: 0 (from 0 votes)
 5. ಚೆನ್ನೈ ಬಾವ°
  ಚೆನ್ನೈ ಭಾವ

  ಓ., ಬಿಟ್ಟೇ ಹೋತು ಹೇಳಲೆ- ಮಹೇಶಣ್ಣನತ್ರೆ ಕ್ಯಾಮರ ನೆಂಪು ಮಾಡ್ಸಿತ್ತಿದ್ದೆ ಕಳದ ಸರ್ತಿ. ನೋಡಿ ಹಾಕಿದ್ದವಿದಾ ಮರೆಯದ್ದೆ. ಇದು ಲೊಟ್ಟೆ ಫಟ ಅಲ್ಲನ್ನೇ!! ಭಾರೀ ಚಂದಕ್ಕೆ ಇದ್ದು ಹೇದು.

  [Reply]

  ಡಾಮಹೇಶಣ್ಣ

  ಮಹೇಶ Reply:

  ಭಾವಾ! ನಿ೦ಗೊಗೆ ಕೊಶಿ ಆತೊ? ಪಟ೦ಗ ಇದ್ದು ಇನ್ನುದೆ.
  ಹೇಳಿದಾ೦ಗೆ ನಿ೦ಗಳ ಊರಿನವು ಇದ್ದವಿಲ್ಲಿ.

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಬೊಳುಂಬು ಮಾವ

  ಲೇಖನ ಓದುತ್ತಿದ್ದ ಹಾಂಗೆ ಸ್ವಾಮೀ ವಿವೇಕಾನಂದ ಒಂದರಿ ಎನ್ನ ಮನಸ್ಸಿಲ್ಲಿ ಬಂದು ಮಿಂಚಿದವು. ಇನ್ನುದೆ ಮರೆಯಾಯಿದವೇ ಇಲ್ಲೆ. ಅಲ್ಲಿ ಮಹೇಶನನ್ನೇ ಕಾಣ್ತಾ ಇದ್ದೆ. ನಮ್ಮ ದೇಶದ ಬಗ್ಗೆ ಒಳ್ಳೆದನ್ನೇ ಹೇಳಿ ಮರ್ಯಾದಿಯ ಒಳುಸಿದೆ ಮಹೇಶಾ.
  ಪಟಂಗಳು ಚೆಂದ ಬಯಿಂದು.

  [Reply]

  ಡಾಮಹೇಶಣ್ಣ

  ಮಹೇಶ Reply:

  :) :) :)

  [Reply]

  VA:F [1.9.22_1171]
  Rating: 0 (from 0 votes)
 7. shivakumar

  ಪಟಂಗಳಲ್ಲಿ ಸಂಕೆ ೪ ರ ವೀಶೇಶ ಏನು ಮಹೇಶ

  [Reply]

  ಡಾಮಹೇಶಣ್ಣ

  ಮಹೇಶ Reply:

  ಶಿವಕುಮಾರಣ್ಣ,
  ಆ ಪಟ ಭಾರೀ ವಿಶೇಷದ್ದೇನೂ ಅಲ್ಲ. ಪಟ ೩ರಲ್ಲಿ ನೋಡಿದ ಮನೆಯ ಹಿ೦ಭಾಗ. ವಿಶಾಲವಾದ ಮಾಡು, ಮಾಡಿನ ಮೇಲೆ ದೊಡ್ಡಾ ಸೋಲಾರ್ ಪೇನೆಲ್. ಸುಮಾರು ಮನೆಗಳಲ್ಲಿ ಮಳೆಕೊಯ್ಲಿನ ವ್ಯವಸ್ಠೆಯುದೆ ಕಾಣ್ತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ರಾಜಣ್ಣಡಾಮಹೇಶಣ್ಣಶಾಂತತ್ತೆಯೇನಂಕೂಡ್ಳು ಅಣ್ಣಅಡ್ಕತ್ತಿಮಾರುಮಾವ°ಶೀಲಾಲಕ್ಷ್ಮೀ ಕಾಸರಗೋಡುದೊಡ್ಡಮಾವ°ತೆಕ್ಕುಂಜ ಕುಮಾರ ಮಾವ°ಒಪ್ಪಕ್ಕಮುಳಿಯ ಭಾವಶ್ಯಾಮಣ್ಣವೆಂಕಟ್ ಕೋಟೂರುಅನಿತಾ ನರೇಶ್, ಮಂಚಿಉಡುಪುಮೂಲೆ ಅಪ್ಪಚ್ಚಿಮಾಷ್ಟ್ರುಮಾವ°ಪ್ರಕಾಶಪ್ಪಚ್ಚಿಪುತ್ತೂರುಬಾವದೊಡ್ಡಭಾವಮಂಗ್ಳೂರ ಮಾಣಿಪೆಂಗಣ್ಣ°ಗಣೇಶ ಮಾವ°ವೇಣೂರಣ್ಣದೊಡ್ಮನೆ ಭಾವಚುಬ್ಬಣ್ಣಶ್ರೀಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ