ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಪೆಂಗಣ್ಣ°ಚೆನ್ನಬೆಟ್ಟಣ್ಣಒಪ್ಪಕ್ಕಮಂಗ್ಳೂರ ಮಾಣಿತೆಕ್ಕುಂಜ ಕುಮಾರ ಮಾವ°ನೀರ್ಕಜೆ ಮಹೇಶಅನಿತಾ ನರೇಶ್, ಮಂಚಿಚೂರಿಬೈಲು ದೀಪಕ್ಕದೇವಸ್ಯ ಮಾಣಿಪಟಿಕಲ್ಲಪ್ಪಚ್ಚಿಶರ್ಮಪ್ಪಚ್ಚಿಚುಬ್ಬಣ್ಣಯೇನಂಕೂಡ್ಳು ಅಣ್ಣಡೈಮಂಡು ಭಾವಜಯಶ್ರೀ ನೀರಮೂಲೆವಿನಯ ಶಂಕರ, ಚೆಕ್ಕೆಮನೆವಾಣಿ ಚಿಕ್ಕಮ್ಮಉಡುಪುಮೂಲೆ ಅಪ್ಪಚ್ಚಿಅಕ್ಷರದಣ್ಣಡಾಗುಟ್ರಕ್ಕ°ಪುಟ್ಟಬಾವ°ಗಣೇಶ ಮಾವ°


ಬೈಲಿನ ಮೋರೆಪುಟ:

ಗುರ್ವಷ್ಟಕಂದ ಒಂದಿಷ್ಟು – ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್

July 2, 2012 ರ 11:50 amಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತತಃ ಕಿಂ  ತತಃ ಕಿಂ  ತತಃ ಕಿಂ  ತತಃ ಕಿಮ್

ಕೆಲವು ಸರ್ತಿ ಹಲವು ಜೆನಂಗಕ್ಕೆ ಅನಿಸುತ್ತು -

ಎನ್ನತ್ರೆ ಅದಿದ್ದು, ಇದಿದ್ದು, ಅಷ್ಟಿದ್ದು, ಇಷ್ಟಿದ್ದು, ಹಾಂಗೆ ಮಾಡಿದೆ, ಹೀಂಗೆ ಮಾಡುವೆ…. ಇತ್ಯಾದಿ..

ಮಮ ಸಮೀಪೇ ತದಸ್ತಿ, ಏತದಸ್ತಿ, ತಾವದಸ್ತಿ, ಏತಾವದಸ್ತಿ, ತಥಾ ಕೃತವಾನ್, ಏವಂ ಕರಿಷ್ಯಾಮಿ…ಇತ್ಯಾದಿ ಭಾವನಾಃ ಭವಂತಿ!

ಶಂಕರಾಚಾರ್ಯರು ಅಷ್ಟಪ್ಪಗ ಕೇಳ್ತವು — so what? ಹೇಳಿ । ಅವು ಕೇಳ್ತವು ಹೇಳುವದಕ್ಕಿಂತ ಪ್ರತಿಯೊಬ್ಬನೂ ಕೇಳೆಕು ಹೇಳಿ ಪ್ರೇರಣೆ ಕೊಟ್ಟಿದವು ಹೇಳ್ಳಕ್ಕು.

ಶಂಕರಾಚಾರ್ಯರ ಶ್ಲೋಕಂಗಳೇ ಹಾಂಗೆ — ಸಮಾಜದ ಎಲ್ಲಾ ರೀತಿಯ ಜೆನಂಗಳ ಭಾವನೆಯನ್ನೂ/ಅವಸ್ಥೆಯನ್ನೂ  ಶ್ಲೋಕಲ್ಲಿ ವ್ಯಕ್ತಪಡಿಸಿ ಸರಿದಾರಿಗೆ ಬಪ್ಪ ಹಾಂಗೆ ಮಾಡುವ ಶೈಲಿ ಅದು.

ಎನ್ನತ್ರೆ ಅದು ಇದ್ದು ಇದು ಇದ್ದು ಹೇಳಿ ಅಪ್ಪಗ ನಾವು ಕೇಳಿಯೊಳ್ಳೆಕು – ತತಃ ಕಿಮ್?

ಬಾಕಿ ಎಲ್ಲ ಇದ್ದರುದೆ  ಗುರುವಿನಲ್ಲಿ ಮನಸ್ಸು ಲೀನ ಆಗದ್ರೆ ಎಂತ ಲಾಭ?

ಇಲ್ಲಿ ಕೆಲವು ಶ್ಲೋಕಂಗ ಇದ್ದು – ಗುರ್ವಷ್ಟಕಂದ ಹೆರ್ಕಿದ್ದದು -

ಅತ್ರ ಕೇಚಿತ್ ಶ್ಲೋಕಾಃ ಸಂತಿ – ಗುರ್ವಷ್ಟಕತಃ ಸ್ವೀಕೃತಾಃ ।

ನೋಡುವ° (ಪಶ್ಯಾಮ)


~~~~

ಒಬ್ಬಂಗೆ ಅನಿಸಿತ್ತಡ – ಆನು ಭಾರೀ ದೊಡ್ಡ ದಾನಶೂರ° ಹೇಳಿ. ಮತ್ತೆಂತಾತು?

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್

ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ ।

ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥

ದಾನಪ್ರತಾಪಾತ್ = ದಾನ ಮಾಡುವ ಸಾಮರ್ಥ್ಯಂದಾಗಿ

ದಿಕ್ಷು = ಎಲ್ಲಾ ದಿಕ್ಕುಗಳಲ್ಲಿ

ಮೇ ಯಶಃ = ಎನ್ನ ಯಶಸ್ಸು

ಗತಂ = ಪಸರಿಸಿದ್ದು.

ಜಗದ್ವಸ್ತು ಸರ್ವಂ= ಜಗತ್ತಿನ ಪ್ರತಿಯೊಂದು ವಸ್ತು

ಕರೇ = ಕೈಯಿಲ್ಲಿ (ಇದ್ದು.)

ಯತ್ಪ್ರಸಾದಾತ್ = ಆರ ಅನುಗ್ರಹಂದವೋ ಆ

ಗುರೋಃ = ಗುರುವಿನ

ಅಂಘ್ರಿಪದ್ಮೇ=ಪಾದಕಮಲಲ್ಲಿ

ಮನಃ =ಮನಸ್ಸು

ನ ಲಗ್ನಂ ಚೇತ್ = ಸೇರಿದ್ದಿಲ್ಲೆ ಹೇಳಿ ಆದರೆ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್= ಅದರಿಂದೆಂತ ಅದರಿಂದೆಂತ ಅದರಿಂದೆಂತ ಅದರಿಂದೆಂತ (ಪ್ರಯೋಜನ)?

ಆನು ಮಾಡಿದ ದಾನದ ಪ್ರಭಾವಂದಾಗಿ ಎಲ್ಲಾ ಕಡೆಲ್ಲಿಯುದೆ ಎನ್ನ ಹೆಸರು ಪ್ರಸಿದ್ಧ ಆಯಿದು. ಜಗತ್ತಿನ ಎಲ್ಲ ವಸ್ತುಗಳೂ ಎನ್ನ ಕೈಗೆಟುಕುವ ಹಾಂಗಿದ್ದು. ಆದರೆ ಇದು ಯಾರ ಅನುಗ್ರಹಂದವೊ ಆ ಗುರುವಿನ ಚರಣಕಮಲಲ್ಲಿ  ಮನಸ್ಸು ನೆಲೆಗೊಂಡಿದಿಲ್ಲೆ ಹೇಳಿ ಆದರೆ ಮತ್ತೆಂತ? ಮುಂದೆಂತದು? ಅದರಿಂದೆಂತ ಪ್ರಯೋಜನ?

~~~~~

ಮತ್ತೊಬ್ಬಂಗೆ ಹೀಂಗಾತು – ಆನು ದೊಡ್ಡ ಜೆನ ಆಯಿದೆ. ಒಳ್ಳೆ ಗುಣನಡತೆ ಇದ್ದು – ಆದರುದೆ `ತತಃ ಕಿಮ್?’ ಹೇಳಿ ಪ್ರಶ್ಣೆ ಬಂತು.

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ

ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ ।

ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥

ಪದಾರ್ಥಃ

ವಿದೇಶೇಷು = ವಿದೇಶಂಗಳಲ್ಲಿ

ಮಾನ್ಯಃ = ಗೌರವಿಸಲ್ಪಟ್ಟವ.

ಸ್ವದೇಶೇಷು =ತನ್ನ ದೇಶಲ್ಲಿ

ಧನ್ಯಃ =ಧನ್ಯ ಆಯಿದೆ.

ಸದಾಚಾರವೃತ್ತೇಷು = ಸದಾಚಾರದ ವಿಷಯಂಗಳಲ್ಲಿ

ಮತ್ತಃ = ಎನ್ನಂದ ಹೆಚ್ಚು

ನ ಚ ಅನ್ಯಃ =ಇನ್ನೊಬ್ಬ ಇಲ್ಲೆ.

ಗುರೋಃ = ಗುರುವಿನ

ಅಂಘ್ರಿಪದ್ಮೇ=ಪಾದಕಮಲಲ್ಲಿ

ಮನಃ =ಮನಸ್ಸು

ನ ಲಗ್ನಂ ಚೇತ್ = ಸೇರಿದ್ದಿಲ್ಲೆ ಹೇಳಿ ಆದರೆ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್= ಅದರಿಂದೆಂತ ಅದರಿಂದೆಂತ ಅದರಿಂದೆಂತ ಅದರಿಂದೆಂತ (ಪ್ರಯೋಜನ)?

ದೇಶವಿದೇಶಂಗಳಲ್ಲಿ ಹೆಸರು ಗಳಿಸಿದ್ದೆ, ಧನ್ಯತೆಯ ಭಾವನೆ ಇದ್ದು. ಒಳ್ಳೆ ನಡತೆಲ್ಲಿ ಎನ್ನಂದ ಮೇಲೆ ಆರೂ ಇಲ್ಲೆ.  ಆದರೆ ಇದರಿಂದ ಎಲ್ಲ ಎಂತ ಪ್ರಯೋಜನ -  ಮನಸ್ಸು ಗುರುವಿನ ಪಾದಲ್ಲಿ ನೆಲೆಗೊಳ್ಳದ್ದೇ ಇದ್ದರೆ?

~~~~~~

ತುಂಬ  ಕಲ್ತು, ಚೆಂದಕೆ ಪದ್ಯ, ಗದ್ಯ ಬರೆತ್ತವಂಗೆ  ಎಂತ ಅನ್ಸಿತ್ತೋ–

ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ

ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ।

ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ॥


ಷಡಂಗಾದಿವೇದಃ = ಆರು ಅಂಗಗಳಿಂದ ಕೂಡಿದ ವೇದ

ಶಾಸ್ತ್ರವಿದ್ಯಾ = ವಿವಿಧ ಶಾಸ್ತ್ರಂಗ

ಮುಖೇ = ಬಾಯಿಲ್ಲಿ ಇದ್ದು.

ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ = ಕವಿತ್ವವೇ ಮೊದಲಾದ ಪ್ರತಿಭೆ ಗದ್ಯಕಾವ್ಯ ಪದ್ಯಕಾವ್ಯಂಗಳ ರಚನೆ ಮಾಡುತ್ತು.

ಆದರೆ,

ಗುರೋರಂಘ್ರಿಪದ್ಮೇ =ಗುರುವಿನ  ಪಾದಪದ್ಮಲ್ಲಿ

ಮನಃ  ನ ಲಗ್ನಂ ಚೇತ್ = ಮನಸ್ಸು ನೆಲೆಗೊಳ್ಳದ್ದೇ ಇದ್ದರೆ

ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ = ಮತ್ತೆಂತ ಇದ್ದು?

~~~

ಛಂದಸ್ಸಿನ ಬಗ್ಗೆ -

ಮೇಲೆ ಹೇಳಿದ ಶ್ಳೋಕಂಗ `ಭುಜಂಗಪ್ರಯಾತ‘ ಛಂದಸ್ಸಿಲ್ಲಿ ಇಪ್ಪದು.  ಒಂದು ಗೆರೆಲ್ಲಿ ನಾಲ್ಕು `ಯ’ಗಣಂಗ – ಒಟ್ಟು ೧೨ ಅಕ್ಷರಂಗ ಇರ್ತು.

ಒಂದು `ಲಘು’, ಎರಡು `ಗುರು’ ಅಕ್ಷರಂಗ ಇದ್ದರೆ ಅದು ಯಗಣ. `ಭುಜಂಗಪ್ರಯಾತ’ವ ಹೇಳುವ ಶೈಲಿ  ಹಾವು ಹರಕ್ಕೋಂಡು ಹೋಪ ಹಾಂಗೆ ಅಡ !

ಬಾಕಿ ಎಲ್ಲ ಇದ್ದರುದೆ
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

  1. ರಘು ಮುಳಿಯ
    ಮುಳಿಯ ಭಾವ
    VA:F [1.9.22_1171]
    Rating: 0 (from 0 votes)

    ಮಹೇಶಾ,
    ತತಃ ಕಿಂ?
    ಗುರುಪೂರ್ಣಿಮೆಯ ಸಮಯಲ್ಲಿ ಶ೦ಕರಾಚಾರ್ಯರ ಅರ್ಥಪೂರ್ಣ ಪ್ರಶ್ನೆಗೊ.
    ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣಾ ಮುಕುತಿ’-ದಾಸರ ಈ ನುಡಿ ನಿತ್ಯಸತ್ಯ.

    [ಉತ್ತರುಸಿ]

  2. ಶರ್ಮಪ್ಪಚ್ಹಿ
    ಶರ್ಮಪ್ಪಚ್ಚಿ
    VA:F [1.9.22_1171]
    Rating: 0 (from 0 votes)

    ಇಲ್ಲಿ ಎಲ್ಲವೂ ಇದ್ದು. ಅದರೆ ಗುರುವಿನ ಮಾರ್ಗದರ್ಶನ, ಅನುಗ್ರಹ ಇಲ್ಲದ್ದೆ ಯಾವದೂ ಪ್ರಾಪ್ತಿ ಆಗ.
    ಹಾಂಗಿಪ್ಪಗ, ಗುರುಸ್ಮರಣೆ ಅತೀ ಅಗತ್ಯ.

    [ಉತ್ತರುಸಿ]

  3. ಜಯರಾಮ ಮಾಂಬಾಡಿ
    VA:F [1.9.22_1171]
    Rating: 0 (from 0 votes)

    ಸಮಾಜದ ಎಲ್ಲಾ ರೀತಿಯ ಜೆನಂಗಳ ಭಾವನೆಯನ್ನೂ/ಅವಸ್ಥೆಯನ್ನೂ ಶ್ಲೋಕಲ್ಲಿ ವ್ಯಕ್ತಪಡಿಸಿ ಸರಿದಾರಿಗೆ ಬಪ್ಪ ಹಾಂಗೆ ಮಾಡುವ ಶಂಕರಾಚಾರ್ಯರ ಶೈಲಿಯ ಪರಿಚಯ ಮಾಡಿ ಕೊಟ್ಟದಕ್ಕೆ ಧನ್ಯವಾದಗಳು

    [ಉತ್ತರುಸಿ]

  4. ಮಂಗ್ಳೂರ ಮಾಣಿ
    ಮಂಗ್ಳೂರ ಮಾಣಿ
    VA:F [1.9.22_1171]
    Rating: 0 (from 0 votes)

    ಹರೇ ರಾಮ ಮಹೇಶಣ್ಣಾ..
    ಲಾಯ್ಕಾಯಿದು.
    ಬಹು ಸಮೀಚೀನಮ್ :)

    [ಉತ್ತರುಸಿ]

  5. ಚೆನ್ನೈ ಭಾವ°
    ಚೆನ್ನೈ ಭಾವ°
    VA:F [1.9.22_1171]
    Rating: 0 (from 0 votes)

    ಉತ್ತಮಾಃ ಶ್ಲೋಕಾಃ | ಧನ್ಯವಾದಃ | ಏತದೇವ ಅನುವರ್ತಯತು |

    [ಉತ್ತರುಸಿ]

  6. ಎಸ್.ಕೆ.ಗೋಪಾಲಕೃಷ್ಣ ಭಟ್ಟ
    ಗೋಪಾಲಣ್ಣ
    VA:F [1.9.22_1171]
    Rating: 0 (from 0 votes)

    ಉತ್ತಮಾಃ ಶ್ಲೋಕಾಃ
    ಚತುರ್ ಯಂಗಳಿಂದಾ ಭುಜಂಗಪ್ರಯಾತಂ-ಹೇಳುವ ಮಾತು ನೆನಪಾತು.ಎಲ್ಲರಿಂಗೂ ಗುರು ಪೂರ್ಣಿಮೆಯ ಶುಭಾಶಯ.ಸಕಾಲಿಕ ಬರಹಕ್ಕೆ ಮಹೇಶಣ್ಣಂಗೆ ಧನ್ಯವಾದ.ಇಡೀ ಶ್ಲೋಕಂಗಳ [ಅಷ್ಟಕ]ವಿವರಣೆ ಕೊಡಿ ಹೇಳಿ ವಿನಂತಿ.

    [ಉತ್ತರುಸಿ]

    ಡಾಮಹೇಶಣ್ಣ ಉತ್ತರ ಕೊಟ್ಟದು:
    ಡಾಮಹೇಶಣ್ಣ

    VN:F [1.9.22_1171]
    Rating: 0 (from 0 votes)

    “ಭುಜಂಗಪ್ರಯಾತಂ ಭವೇದ್ಯೈಶ್ಚತುರ್ಭಿಃ” ಹೇಳಿ ಸಂಸ್ಕೃತಲ್ಲಿ ಇಪ್ಪದು.

    ಭವೇತ್+ಯೈಃ+ ಚತುರ್ಭಿಃ =ಭವೇದ್ಯೈಶ್ಚತುರ್ಭಿಃ

    [ಉತ್ತರುಸಿ]

    ಎಸ್.ಕೆ.ಗೋಪಾಲಕೃಷ್ಣ ಭಟ್ಟ ಉತ್ತರ ಕೊಟ್ಟದು:
    ಗೋಪಾಲಣ್ಣ

    VA:F [1.9.22_1171]
    Rating: 0 (from 0 votes)

    ಧನ್ಯವಾದ

    [ಉತ್ತರುಸಿ]

  7. ಬೋದಾಳ
    ಬೋದಾಳ
    VA:F [1.9.22_1171]
    Rating: 0 (from 0 votes)

    ಗುರುಪೂಜಗೆ ಹೋಯೆಕ್ಕೋದು ಗ್ರೇಶಿಂಡು ಮನುಗಿದ್ದು ನಿನ್ನೆ ಇರುಳು. ಎಂತ ಮಾಡುದು? ಏಳುವಗಳೇ ಘಂಟೆ ಎಂಟು…. :-(

    [ಉತ್ತರುಸಿ]

  8. jayashree.neeramoole
    ಜಯಶ್ರೀ ನೀರಮೂಲೆ
    VA:F [1.9.22_1171]
    Rating: 0 (from 0 votes)

    ಶಂಕರಾಚಾರ್ಯರ ಶ್ಲೋಕಂಗಳ ಎಷ್ಟು ಶ್ಲಾಘಿಸಿದರೂ,ವರ್ಣಿಸಿದರೂ,ಅರ್ಥ ಮಾಡಿಗೊಂಡರೂ ಸಾಲ… ಅಂತಹ ಮಾಧುರ್ಯ ಅದರಲ್ಲಿ ಇರುತ್ತು… ಮಹೇಶಣ್ಣ೦ಗೆ ಧನ್ಯವಾದಂಗ…

    “ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್” ನಾವು ಒಂದು ಲೋಕಲ್ಲಿ ಮುಳುಗಿಪ್ಪಗ ಇದು ಎಷ್ಟೇ ಅರ್ಥ ಮಾಡಿಗೊಮ್ಬಲೆ ಪ್ರಯತ್ನಿಸಿರೂ ಅರ್ಥವೇ ಆವುತ್ತಿಲ್ಲೇ… ಯಾವುದೇ ಲೋಕಂದ ಒಂದು ಬಾಹ್ಯ ಪ್ರೇರಣೆ ಇಲ್ಲದ್ದೆ ನಾವು ಹೆರ ಬತ್ತೂ ಇಲ್ಲೇ… ಹಾಂಗಾರೆ ಇದು ಅರ್ಥ ಆಯೆಕ್ಕಾರೆ ನಾವು ಒಂದು ಲೋಕಲ್ಲಿ ಉತ್ತುಂಗದ ಸ್ಥಿತಿಗೆ ಎತ್ತಿ ಅಲ್ಲಿಂದ ಹೊಸ ಲೋಕಕ್ಕೆ ಬರೆಕು… ಅಲ್ಲಿ ನಾವು ಏನೂ ಗೊಂತಿಲ್ಲದ್ದವು ಎಲ್ಲದಕ್ಕೂ ದೇವರಿಂಗೆ ಶರಣು ಹೋವುತ್ತು… ಅಂತಹ ಸಂದರ್ಭಲ್ಲಿ ಗುರು ಸಿಕ್ಕೆಕ್ಕು… ಅಷ್ಟಪ್ಪಗ ಎಲ್ಲವೂ ಅರ್ಥ ಆವುತ್ತು…

    [ಉತ್ತರುಸಿ]

  9. ಕು ರ ಶಿವಕುಮಾರ,ಮಡಿಕೇರಿ
    VA:F [1.9.22_1171]
    Rating: 0 (from 0 votes)

    ಗುರುವಿನ ಗುಲಾಮನಾಗುವ ತನಕ ದೊರೆಯದಣ್ನ ಮುಕುತಿ! ಗುರು ಪೂರ್ಣಿಮೆಯ ಸಂದರ್ಬದಲ್ಲಿ ಒೞೆಯ ಲೇಕನ

    [ಉತ್ತರುಸಿ]

  10. ಕಾಂತಣ್ಣ
    ಕಾಂತಣ್ಣ
    VN:F [1.9.22_1171]
    Rating: 0 (from 0 votes)

    ಹರೇ ರಾಮ ಮಹೇಶಣ್ಣ.
    ನಿನ್ನೆ ಮಠಲ್ಲಿ ಸಾಮೂಹಿಕ ಪಾರಾಯಣ ಮಾಡ್ತಿದ್ದದ್ದ ಹೆಮ್ಮಕ್ಕ.
    ಉಚ್ಚಾರಣೆ ಮಾಡುವಾಗ ತತ ಕಿಮ್ ತತ ಕಿಮ್ ಹೇಳ್ತಿದ್ದ,
    ವಿಸರ್ಗದ ಮುಂದೆ ಕ್ ಬಂದಿಪ್ಪಾಗ್ ಅಕ್ ಹೇಳಿ ಉಚ್ಚಾರ ಮಾಡೆಕು ಹೇಳಿ
    ತಿಳಿಸಿದ್ದೆ, ಬಹುತೇಕ ಕಡೆಗಳಲ್ಲಿ ಈ ಸಕ್ರಮ ಹೇಳೆಕ್ಕು ಕಾಣ್ತು.

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಲೇ | ಶ್ರೀಮತಿ ಪಾರ್ವತಿ ಎಂ.ಭಟ್.ಕೂಳಕ್ಕೋಡ್ಳುಹೃದಯಲ್ಲಿಪ್ ಆತಿಥ್ಯ ಕೃತಿಯಾಗಿ ಕೈಗೆತ್ತಲಿಚಿತ್ರ ಕೃಪೆ:
ವೆಂಕಟ್ ಕೋಟೂರ್

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME