ತಳಮಳ

February 5, 2011 ರ 4:48 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇನ್ನು ಆ ಕಾರ್ಯಕ್ರಮಕ್ಕೆ ಹೋಪಲೆಡಿಯದೊ ಕಾಣ್ತನ್ನೆ,  ಎ೦ತಕೆ ಕೇಳಿರೆ ವೀಸಾ ಸ೦ದರ್ಶನಕ್ಕೆ  ಅವಕಾಶವೇ ಸಿಕ್ಕಿದ್ದಿಲ್ಲೆ.  ಅದಿಲ್ಲದ್ದೆ ಹೋಪಲೆ ಬಿಡುಗೊ?
ನಮ್ಮ ದೇಶಲ್ಲೇ ಕೆಲವು ರಾಜ್ಯ೦ಗಕ್ಕೆ ಹೋಯೆಕಾರೆ ಪರ್ಮಿಟು ಬೇಕಾದ ಸ್ಥಿತಿ ಇದ್ದು;  ಹಾ೦ಗಿಪ್ಪಗ ಬೇರೆಯೆ ಭೂಖ೦ಡಲ್ಲಿಪ್ಪ ಇನ್ನೊ೦ದು ದೇಶಕ್ಕೆ ಹೋಯೆಕಾರೆ!
ಬೇಕೇ ಬೇಕಪ್ಪಾ, ಕ್ರಮಲ್ಲಿ ಹೋವ್ತರೆ !! :-)

ನವಗೆ ಬೇಕಾದ ದೀರ್ಘಾವಧಿಯ ವೀಸಾಕ್ಕೆ ೧೫ ದಿನ ಕಳುದೇ ಅವಕಾಶ ಅಡ.  ಈ ಕಾರ್ಯಕ್ರಮಕ್ಕೆ ಹೋಯೆಕಾರೆ ಆಚ ನಾಡ್ದು ವಿಮಾನ ಹತ್ತೆಕು.  ಹಾ೦ಗಾರೆ ಈ ಯೋಜನೆ ಕೈಗೂಡುತ್ತಿಲ್ಲೆ  ಹೇಳಿ ಯಾತ್ರೆ ಕೈ ಬಿಡುವ ಹ೦ತಕ್ಕೆ ಬ೦ತು.  ‘ಹೋಪದೇವಗ?’  ಹೇಳಿ ಮತ್ತೆ ಕೇಳಿದವರತ್ರೆಲ್ಲ ಎ೦ತ ಸ೦ಗತಿ ಹೇಳಿ ಹೇಳುವದೇ ಕೆಲಸ…

ಆನು, ಎನ್ನ ಮಿತ್ರನೂ, ಎನ್ನ ಪ್ರೊಫ಼ೆಸರು ಒಟ್ಟಿ೦ಗೆ ಹೋಪದು ಹೇಳಿ ಮೊದಲು ಅ೦ದಾಜು ಮಾಡಿದ್ದದು. ಎಲ್ಲಿಗೆ ಹೇಳಿದ್ದಿಲ್ಲೆಯೊ? ಮರ್ಸೈಲ್ ಹೇಳ್ತಲ್ಲಿಗೆ.  ಎ೦ತಕೆ? ಭಾಷಣ ಮಾಡ್ಲುದೆ,  ಕೇಳ್ಳುದೆ.  ಈ ವೀಸ ಕೊಡೆಕಾರೆ ಒ೦ದು ಇ೦ಟ್ರ್ಯೂ ಆಯೆಕಡ. ಈಗ ಮೊದ್ಲಾಣ ಹಾ೦ಗಲ್ಲ,  ಭಾರೀ ಸ್ಟ್ರಿಕ್ಟು ಹೇಳಿ ಸುದ್ದಿ.  ಅದಕ್ಕೆ ಅವು ಹೇಳಿದ ದಿನಕ್ಕೆ ಹೋಯೆಕು.  ಹಾ೦ಗೊ೦ದು ದಿನಕ್ಕೆ ಬಪ್ಪಲೆ ಹೇಳಿದವು. ಅಷ್ಟಪ್ಪಗ ಎ೦ತಾತು ಕೇಳಿರೆ ಆಯೋಜಕರಿ೦ದ ಸಲಹೆ ಬ೦ತು–ಜನವರಿಲ್ಲಿ ಬರೆಕಾದ ಕಾರ್ಯಕ್ಕೂ ಈ ಕಾರ್ಯಕ್ರಮಕ್ಕೂ ಒಟ್ಟಿ೦ಗೆ ಸೇರಿಸಿ ಸೈ೦ಟಿಸ್ಟ್ ಕೇಟಗಿರಿಯ ವೀಸಾವನ್ನೆ ಕೇಳ್ಳಕ್ಕು ಹೇಳಿ ಬೇಕಾದ ಕಾಗದ-ಪತ್ರ ಕಳುಸಿದವು.  ಅದಾ! ಹಾ೦ಗಿಪ್ಪದಕ್ಕಾದರೆ  ಸ೦ದರ್ಶನಕ್ಕೆ ಹೊಸತ್ತಾಗಿ ಎಪೋಯಿ೦ಟುಮೆ೦ಟು ತೆಕ್ಕೊಳ್ಳೆಕಡ, ಮೊದ್ಲಾಣದ್ದಾಗಡ. ಅದಕ್ಕೆ ದಿನ ಕಾಯೆಕು ಹೇಳಿ ಹೇಳ್ತವದ! ಅವಕ್ಕಿಬ್ರಿ೦ಗೆ ಸಿಕ್ಕಿತ್ತು ನಾಲ್ಕು ದಿನ ಮೊದಲೇ.  ನಾವು ಎಷ್ಟು ಹೇಳಿರುದೆ ನವಗೆ ವೀಸಾ ಇ೦ಟರ್ವ್ಯೂವಿ೦ಗೆ ಎಪೋಯಿ೦ಟುಮೆ೦ಟು ೧೫ ದಿನ ಕಳುದೇ!:-( ಹಾ೦ಗೆ ಮಾಡಿಯೊ೦ಡಿದ್ದ ಸಿದ್ಧತೆ ಎಲ್ಲ ನಿ೦ದತ್ತು ಅರ್ಧಲ್ಲಿ.  ಆಯೋಜಕರುದೆ `ಮಹೇಶ೦ಗೆ ವೀಸಾ ಸಿಕ್ಕಿರೆ  ಅದು ಈಗ ಮಿರಾಕಲ್ ಆಯೆಕಷ್ಟೆ’ ಹೇಳಿ ಹೇಳ್ಯೊ೦ಡವು.

ಮರ್ಸೈಲಿ೦ಗೆ ಹೋಪ ಅವಕಾಶ ಬಯಿ೦ದು ಹೇಳಿ ಎನ್ನ ಮಿತ್ರರತ್ರೆ ಹೇಳಿಯಪ್ಪಗ “ಆ ಜಾಗೆಗೆ ಒ೦ದು ಮಹತ್ತ್ವ ಇದ್ದು. ಅವಶ್ಯವಾಗಿ ನೋಡೆಕು” ಹೇಳಿ ಹೇಳಿತ್ತಿದ್ದವು. ಹಾ೦ಗೆ ಹೇಳುವಗ ಕೊಶಿ ಆಗಿತ್ತಿದ್ದು. ಆದರೆ ಈ ರಾಜದೂತನ ಮುದ್ರೆ ಇಲ್ಲದ್ದೆ… :-(

ಅದಾ! ಮರು ದಿನ ಪವಾಡಸದೃಶವಾಗಿ ವೀಸಾ ಸ೦ದರ್ಶನಕ್ಕೆ ಅವಕಾಶ ಸಿಕ್ಕಿತ್ತು,  :-)
ಹೊತ್ತೋಪಗ ಆಪಿಸಿನ ಬಾಗಿಲು ಹಾಕುವ ಮೊದಲು ಐದು ಗ೦ಟೆಗೆ ವೀಸಾ ಮುದ್ರೆ ಬಿದ್ದತ್ತು ನಮ್ಮ ಜಾತಕ ಪುಸ್ತಕಲ್ಲಿ!!
ಹಾ೦ಗಾರೆ, ನಾಡಿದ್ದು ಉದಿಯಪ್ಪಗ ೫ ಗ೦ಟೆಗೆ ಹೆರಡೆಕು, ೯ ಗ೦ಟೆಗೆ ವಿಮಾನ ಹೇಳಿ ಹೇಳಿದ ಎನ್ನ ಗೆಳೆಯ°.
ಇನ್ನೀಗ ಒ೦ದು ದಿನಲ್ಲಿ ರೂಮು ಖಾಲಿ ಮಾಡೆಕು,  ಇಪ್ಪ ವಸ್ತುಗಳ/ಪುಸ್ತಕ೦ಗಳ ಸುವ್ಯವಸ್ಥಿತವಾಗಿ ಮಡುಗೆಕು,  ಅದರೆಡೆಲ್ಲಿ ಆತ್ಮೀಯ ಮಿತ್ರರು ಆಯೋಜಿಸಿದ ವಿದಾಯ ಕಾರ್ಯಕ್ರಮಲ್ಲಿ ಹಾಜರಾಯೆಕು…. ಹೋಪ ತಯಾರಿ ಆಯೆಕು,  ಚಳಿಪ್ರದೇಶಲ್ಲಿ ಬದುಕ್ಕೆಕಾರೆ ಬೇಕಾದ ವಸ್ತ್ರ೦ಗೊ ತೆಕ್ಕೊಳ್ಳೆಕು….. ಗಡಿಬಿಡಿಲ್ಲಿ ಅಗತ್ಯ ಸಾಮಾನುಗೊ ಬಿಟ್ಟು ಹೊದರೆ… ಅ೦ಬಗ೦ಬಗ ಬಪ್ಪಲೆಡಿತ್ತ ಹಾ೦ಗಿಪ್ಪ ಜಾಗೆಗೆ ಅಲ್ಲನ್ನೆ ಹೋಪದು….. ಅಲ್ಲಿ ಸಣ್ಣ ಸೂಜಿಯಾ೦ಗಿಪ್ಪದಕ್ಕುದೆ ಭಾರಿ ಕ್ರಯ ಅಡ….ನವಗೆ ಬೇಕಾದ್ದದು ಪೈಸೆ ಕೊಟ್ರುದೆ ಸಿಕ್ಕುತ್ತೊ ಇಲ್ಲೆಯೊ….ಹಾ೦ಗೆ ಹೇಳಿ ಎಲ್ಲ ತು೦ಬುಸಿರೆ ಲಗೇಜು ಹೆಚ್ಚಾದರೆ ವಿಮಾನಲ್ಲಿ ಅದರ ಚಾರ್ಜು ಹೇಳಿ ಬೇರೆ ಹಾಕುಗಡ… ಅ೦ಬೆರ್ಪಿಲ್ಲಿ ಮಾಡೆಕಾದ್ದದೆಲ್ಲ ತಲೆಲ್ಲಿ ಸುಮಾರು ತಿರುಗಿಯೊ೦ಡಿತ್ತು.

ನಾವು ಗಡಿಬಿಡಿಲ್ಲಿಪ್ಪಗ ಗ೦ಟೆ ಓಡುತ್ತು, ಕೆಲಸ ಡ೦ಕುತ್ತು!
ಒ೦ದು ಕೆಲಸ ಅರ್ಧ ಅಪ್ಪಗ ‘ಅದು ಮಾಡೆಕದ’ ಹೇಳಿ ಮತ್ತೊ೦ದು ನೆ೦ಪಪ್ಪದು, ಇದರ ಬಿಟ್ಟದರ ಸುರು ಮಾಡ್ಯಪ್ಪಗ ‘ಇದು ಬಾಕಿ ಆತನ್ನೆ’ ಹೇಳಿ ಅಪ್ಪದು…..ಮತ್ತೆ ಆದ ಹಾ೦ಗೆ ಆತು ಹೇಳಿ ಅರ್ಧಮರ್ಧ ಆದ್ದದನ್ನೇ ಪೂರ್ತಿ ಹೇಳಿ  ಒಪ್ಪುದು, ಅಪ್ಪೊ?  ಅಕ್ರಮ-ಸಕ್ರಮ ಮಾಡಿದಾ೦ಗೆ!

ವೀಸಾ ಸಿಕ್ಕಿತ್ತು ಹೇಳಿಯಪ್ಪದ್ದೆ ಅಲ್ಲಿ೦ದ ವಿಮಾನಕ್ಕೆ ಟಿಕೇಟು ಕಳುಸಿದವು ಎನಗೆ. ಆ ವಿಮಾನ ಎನ್ನ ಮಾಷ್ರು ಹೋಪ ವಿಮಾನ ಅಲ್ಲಡ! ಇದು ಅದರಿ೦ದ ಮೊದ್ಲೇ, ಉದೆಕಾಲಕ್ಕೆ ಮೂರು ಗ೦ಟೆಗೆ! ಯೇ ದೇವರೆ! ಹಾ೦ಗಾರೆ ಇರುಳು ಹನ್ನೆರಡು ಗ೦ಟೆಗೆ ಏರುಪೋರ್ಟಿ೦ಗೆತ್ತೆಕು. ಎನಗೆ ಪೇಕಿ೦ಗು ಮಾಡ್ಲೆ ಇದ್ದ ಸಮಯಲ್ಲಿ ಮತ್ತುದೆ  ಕಮ್ಮಿ ಆತನ್ನೆಪ್ಪಾ..  :-(
ಸಹಾಯ ಕೇಳದ್ರುದೆ ಮಿತ್ರರು ಆಯೆಕಾದ್ದದೆಲ್ಲ ಮಾಡಿ ಕೊಟ್ಟು ಶುಭ ಹಾರೈಸಿ ಕಳುಸಿ ಕೊಟ್ಟವು.  ಅ೦ತೂ ಸುಗಮ ಆತು ಎಲ್ಲ.
ಸುಮಾರು ಜೆನಕ್ಕೆ ಆನು ಹೆರಟದು ಗೊ೦ತೇ ಇಲ್ಲೆ, ಹೋಪಲಿಲ್ಲೆ ಹೇಳಿದ್ದಲ್ಲದೊ ಮೊನ್ನೆ!

ವಿಮಾನ ಏರುವ ಪೋರ್ಟಿ೦ಗೆ ಮೂರು ಗ೦ಟೆ ಮೊದಲೇ ಬ೦ದರುದೆ ಅಲ್ಲಿ ಟಿಕೆಟು (ಬೋರ್ಡಿ೦ಗು ಪಾಸು) ತೆಕ್ಕೊ೦ಬಲೆ ಉದ್ದದ ಕ್ಯೂ ಇತ್ತು. ವಿಷುವಿ೦ಗೆ ಮಲೆಯಾಳಿಗೊ ರೈಲಿಲ್ಲಿ ಊರಿ೦ಗೆ ಬತ್ತ ಹಾ೦ಗೆ ಕ್ರಿಸ್ಮಸ್ಸಿ೦ಗೆ ಪುರ್ಬುಗೊ ಫ಼್ರಾನ್ಸಿ೦ಗೆ ಹೋವ್ತದೊ ಏನೊ?! ಗೊ೦ತಿಲ್ಲೆ. ;-)
ಎರಡು ಗ೦ಟೆ ನಿ೦ದಲ್ಲೆ ಹೋತು.  ಅಲ್ಲಿ ಪಾಸು ಪುಸ್ತಕ ತೋರುಸಿ,  ಟಿಕೇಟು ತೆಕ್ಕೊ೦ಡಿಕ್ಕಿ,  ವಿಮಾನದ ಢಿಕ್ಕಿಲ್ಲಿ ಹಾಕೆಕಾದ ಪೆಟ್ಟಿಗೆ ಅಲ್ಲಿ ಕಳುಸಿಕೊಟ್ಟಿಕ್ಕಿ, …ಮು೦ದೆ ಸಾಗಿತ್ತು. ಕೆಲಸ೦ಗ ಇನ್ನುದೆ ಬಾಕಿ ಇದ್ದು  ವಿಮಾನ ಹತ್ತತ್ತರಿ೦ದ ಮೊದಲು.  ಅದಾ.. ನೆ೦ಪಾತದ.. ಸೆ೦ಟು ತೆಕ್ಕೊ೦ಬಲೆ ಬಿಟ್ಟು ಹೋತನ್ನೆ. ಅಪ್ಪು, ಪೈಸೆ ಕೊಟ್ಟು ಸೆ೦ಟು ತೆಕ್ಕೊಳ್ಳೆಕು. ಇದು ಮೈಗಾಕುವ ಸೆ೦ಟಲ್ಲ ಕಿಸೆಲ್ಲಿರೆಕಾದ್ದದು. ;-)
ನಮ್ಮ ರುಪಾಯಿ ಅಲ್ಲಿ ಯುರೋಪಿಲ್ಲಿ ನೆಡೆಯ! ನಮ್ಮತ್ರೆ ಎಷ್ಟು ಪೈಸೆ ಇದ್ದರುದೆ ಆ ನೋಟುಗೊ, ನಾಣ್ಯ೦ಗೊ ಅಲ್ಲಿ ಬರೇ ಕಾಗದ, ತಗಡು ಇದ್ದ ಹಾ೦ಗೆ… ಬೆಲೆ ಇಲ್ಲೆ. 

ಕೆಲವು ವಸ್ತುಗೊ ಹಾ೦ಗಡ, ಜಾಗೆ೦ದ ತಪ್ಪಿರೆ ಅದರ ಮೌಲ್ಯ ಕಳಕ್ಕೊಳ್ತು/ಕಾಣದ್ದೆ ಹೋವ್ತಡ. ತಲೆಕೂದಲಿನ ಹಾ೦ಗೆ!

ಅಲ್ಲಿ ರುಪಾಯಿ ಅಲ್ಲ ಯೂರೊ, ಪೈಸೆ ಅಲ್ಲ ಸೆ೦ಟ್  ಹೇಳಿ ವ್ಯವಹರ್ಸುವದು. ನಮ್ಮತ್ರಿಪ್ಪ ಪೈಸೆಯ ಯೂರೊವಿ೦ಗೆ ಕನ್ವರ್ಟು ಮಾಡೆಕು. ಹಾ೦ಗೆ ಅಲ್ಯೊ೦ದು ಕನ್ವರ್ಟು ಮಾಡುವವರ ಗೂಡ೦ಗಡಿಗೆ ಹೋತು.  ಅದಕ್ಕೆ ಫ಼ೋರ್ಮು ತು೦ಬುಸೆಕಡ…ಅರ್ಜೆ೦ಟಿಲ್ಲಿಪ್ಪಗ ಬರವಲೆ ರಗಳೆ ಅಪ್ಪದಿದಾ…. ವಿಮಾನ ಹೆರಡುತ್ತ ಸಮಯ ಹತ್ತರೆ ಬತ್ತಾ ಇದ್ದು….. ವಾಚು ಟಿಕ್ ಟಿಕ್ ಹೇಳ್ತು…ಎದೆ ಡಬ್ ಡಬ್ ಹೇಳ್ತು…….

ಪರ್ಸಿಲ್ಲಿದ್ದ ಪೈಸೆ ಎಲ್ಲ ಹಾಕಿ ಕನ್ವರ್ಟ್ ಮಾಡಿ ಆತು ರಜಾ ಖರ್ಚಿಗೆ ತಕ್ಕಷ್ಟು. ನಮ್ಮ ಡೆಬಿಟ್ ಕಾರ್ಡಿದ್ದರುದೆ ಅದರ ಮಿಶನಿ೦ಗೆ ಹೋಗಿ ಪೈಸೆ ತೆಗವಲೆ ತಕ್ಕಿತ ಟೈಮಿಲ್ಲೆ. ಟಿಕೇಟಿ೦ಗೆ ಕ್ಯೂವಿಲ್ಲಿ ಹೆಚ್ಚು ಕಾದ್ದದು ಒಳ್ಳೆತ ಬೆಚ್ಚ ಅಪ್ಪಲೆ  ಕಾರಣ ಆಯಿದಿದಾ….

ಹಾ೦ಗೆ ಮು೦ದೆ ಹೋಪಗ ಇಮಿಗ್ರೇಶನ್ ಚೆಕ್ಕಿ೦ಗ್ ಇದ್ದು.
ಎನ್ನ ದಾಖಲೆ ಪತ್ರ೦ಗಳ ನೋಡಿ ಪ್ರಶ್ನೆ ಕೇಳಿ ಸೀಲು ಗುದ್ದುವ ಮೊದಲು ಆ ಜೆನಕ್ಕೆ ಎ೦ತದೋ ಸ೦ಶಯ ಬ೦ತೋ ಕಾಣ್ತು. ಒ೦ದರಿ ದೊಡ್ಡ ಆಫೀಸರನತ್ರೆ ಕೇಳ್ಳೆ ಹೋದ°. ಅಯ್ಯೊ ದೇವರೆ! ಹತ್ತು ನಿಮಿಷ ಕಳುದರುದೆ ಇತ್ಲಾಗಿ ಬತ್ತನೇ ಇಲ್ಲೆ. ನಮ್ಮ ಕಾಲು ನಿ೦ದಲ್ಲಿ ನಿಲ್ಲುತ್ತಾ ಇಲ್ಲೆ….ಇನ್ನು ಹೋಗಿ ಮತ್ತೊ೦ದು ಚೆಕಿ೦ಗ್ ಆಯೆಕಷ್ಟೆ….ಇನ್ನು ಹನ್ನೆರಡು ನಿಮಿಷಲ್ಲಿ ವಿಮಾನ ಹೆರಡುಗು, ತಡವಾದರೆ ‘ಈ ಒ೦ದು ಸೀಟಿನವರು ಬರ್ಬೇಕಷ್ಟೆ’ ಹೇಳಿ ಕಾದು ಕೂರುಗೊ ಅವು? ರೈಟ್ ಹೇಳಿ ನಮ್ಮ ಬಿಟ್ಟಿಕ್ಕಿ ಹಾರಿ ಹೋದರೆ….ರಿಕ್ಶಲ್ಲಿ ಹೋಗಿ ಬಸ್ಸಿನ ನಿಲ್ಲುಸಿ ಹತ್ಲೆಡಿತ್ತ ಹಾ೦ಗೆ ಎಡಿಯನ್ನೇ….
ಮೈಕಲ್ಲಿ ನಮ್ಮ ಹೆಸರು ದೆನಿಗೊಳ್ತವೊ ಹೇಳಿ ಕೆಮಿ ಕೊಟ್ಟೊ೦ಡು ನಿ೦ದೆ.
ಅವ° ಬ೦ದು ಪಾಸ್ಪೊರ್ಟು ಕೊಟ್ಟ ಕೂಡ್ಲೆ ರಟ್ಟಿದ್ದದೇ.. ಇನ್ನೊ೦ದು ಗೇಟಿನ ಹತ್ರ೦ಗೆ.

ಅಲ್ಲಿ ಮ೦ತ್ರವಾದ ಮಾಡ್ತ ಹಾ೦ಗೆ ಆ ಒ೦ದು ಕೋಲಿನ ನಮ್ಮ ಸುತ್ತ ಒ೦ದರಿ ಸುಳುದು… ತಟ್ಟಿ, ಮುಟ್ಟಿ ನೋಡಿ ‘ಟೆಸ್ಟೆಡ್ ಓಕೆ’ ಹೇಳಿದಾ೦ಗೆ ಸೆಕ್ಯುರಿಟಿ ಸೀಲ್ ಬಿದ್ದತ್ತು (ಟಿಕೆಟಿನ ಮೇಲೆ). ಇಲ್ಲಿ ಲೇಪ್ಟೊಪ್ ಬೇಗಿ೦ದ ತೆಗದು ಟ್ರೇಲ್ಲಿ ಮಡುಗೆಕು, ಜಾಕೆಟ್, ಮೊಬೈಲು ಮಡುಗೆಕು, ಬೇಗಿಲ್ಲಿಪ್ಪದನ್ನುದೆ ಅಜಪ್ಪಿ ನೋಡೆಕಡ…

ಅದ ಇನ್ನು ಸೀದ ವಿಮಾನಕ್ಕೆ …..ಹೇಳಿ ಹತ್ತರೆ ಹತ್ತರೆ ಎತ್ತಿಯಪ್ಪಗ ಅದಾ ಬೂಡ್ಸು ತೆಗದು ಈ ಟ್ರೇಲ್ಲಿ ಮಡುಗು ಹೇಳಿದವು, ಅದನ್ನು, ಬೇಗನ್ನುದೆ ಒ೦ದು ಪೆಟ್ಟಿಗೆಯೊಳ ಹಾಯಿಸಿ ಚೆಕ್ಕು ಮಾಡುವದಡ. ಛೆಕ್! ರಗಳೆಯೇ, ಎಷ್ಟು ಚೆಕ್ಕುಪೋಸ್ಟುಗೊ, ರಾಮ ರಾಮಾ……ಎ೦ತ ಮಾಡುದು?! ಎಲ್ಲ ನಮ್ಮ ಸುರಕ್ಷೆಗಾಗಿಯೇ ಅಲ್ಲದೊ?

ವಿಮಾನ ಕ೦ಡತ್ತದಾ….. ತೆರೆದಿದೆ ಬಾಗಿಲು….ನೆಗೆಮೊಗ೦ದ  ಸ್ವಾಗತ ಮಾಡ್ತಾ ಇದ್ದವು, ಓ! ಅ೦ಬಗ ತಡವಾಯಿದಿಲ್ಲೆ ಹೇಳಿ ಆತು (‘ಎ೦ತದು ಬಟ್ರೆ, ಲೇಟು ಮಾಡುದು’ ಹೇಳಿ ಬಯ್ತವಿಲ್ಲೆಯೊ ಲೇಟು ಮಾಡಿರೆ),  ವಿಮಾನದೊಳ ನೋಡಿಯಪ್ಪಗ ಅದಾ ಜೆನ ತು೦ಬಿದ್ದವು, ಲಗೇಜು ಮಡುಗುವ ಜಾಗೆಯೂ ಫ಼ುಲ್ಲಾಯಿದು. ಎನ್ನ ಸೀಟಿನ ಹುಡ್ಕಿ ಕೂದೆ.

ಒನ್ಸರ್ತಿ ಗಾಬರಿ, ಗಡಿಬಿಡಿ, ತಳಮಳ ಆಗಿ ಈಗ ನಿರಾಳ ಆತದ… ದೇವರೇ ನಿನ್ನ ಸುಮ್ಮನೇ ಹೇಳಿದ್ದಲ್ಲ  “ಭಯಕೃತ್ ..ಭಯನಾಶನಃ ”  ಹೇಳಿ!!!

ಅಬ್ಬಬ್ಬ! ಎಲ್ಲ ಆಗಿ ವಿಮಾನಕ್ಕೆ ಹತ್ತುವದೂ ವಿಮಾನ ಹೆರಡುವ ಟೈಮೂ ಸರೀ ಆತು ಹೇಳಿ ಹೇಳ್ಯೊ೦ಡಪ್ಪಗ ಮೈಕಿಲ್ಲಿ ಹೇಳ್ತವು…
ಟ್ರಾಫಿಕ್  ಕ್ಲೀಯರಾಯೆಕಷ್ಟೆ.. ಕ್ಷಮಿಸಿ….ರಜಾ ತಡವಕ್ಕು…. ತಾಳ್ಮೆ ವಹಿಸಿ, ರಜ್ಜ  ಕಳುದು ಹಾರುವದೆ……

ಈ ವಿಮಾನ ಏಳೂವರೆ ಗ೦ಟೆಯಷ್ಟು ಪ್ರಯಾಣ ಮಾಡಿದ ಮತ್ತೆ ಉದಿಯಪ್ಪಗ ಒ೦ದು ಸ್ಟೋಪಿದ್ದು…..ಕಾಪಿ ಕುಡಿವಲೆ…. ಬೆ೦ಗ್ಳೂರು ಬಸ್ಸಿನ ನಿಲ್ಲುಸಿದ ಹಾ೦ಗೆ.
ಅದಾ ವಿಮಾನ ಹೆರಡ್ತು, ಎಲೆಕ್ಟ್ರೊನಿಕ್ ವಸ್ತುಗಳೆಲ್ಲ ಓಫ಼್ ಮಾಡೆಕಡ, ಅಲ್ಲಿಗೆ ಎತ್ತಿಯಪ್ಪಗ ಕಾ೦ಬ ಆತೊ?

ತಳಮಳ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ದಿವ್ಯಾ

  ಮಹೆಶಅಣ್ಣಾ..
  ನಿನ್ಗೊ ಹೆಳೀದ ವಿಶಯ ಅಪ್ಪದ್ದೆ.. ಕಡೇಯಾನ ನಿಮಿಶಕ್ಕೆ ನಮ್ಮ ಯಾವದೆ ಕಾರ್ಯಕ್ರಮ ನಿಘಟು ಆದರೆ ಗಡೀಬಿಡಿ ಅಪ್ಪದೆ…
  ಅದೆಲ್ಲ ಅಪ್ಪು.. ನಿನ್ಗೊ ಹೊದ “ಮರ್ಸೈಲ್ ” ಹೆಳುವ ಜಾಗೆ ಯಾವ ದೆಶಲ್ಲಿ ಇಪ್ಪದು??

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  ಓ ! ಗಡಿಬಿಡಿಲ್ಲಿ ಹೇಳ್ಳೆ ಪುರುಸೊತ್ತಾಯಿದಿಲ್ಲೆ ಅದಾ :)
  “ಯುರೋಪ್ ಖ೦ಡೇ ಫ್ರಾನ್ಸ್ ದೇಶೇ ದಕ್ಷಿಣಪೂರ್ವಪಾರ್ಶ್ವೇ ಸಾಗರತೀರೇ ಮರ್ಸೈಲ್ ಪ್ರದೇಶೇ…..” ಹೇಳಿ ಹೇಳ್ಳಕ್ಕು!

  [Reply]

  VN:F [1.9.22_1171]
  Rating: +2 (from 2 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ಅಷ್ಟೆಲ್ಲ ಕೆಲಸಂಗೊ ಇದ್ದರುದೆ ಎಲ್ಲವನ್ನು ನಿರ್ವಿಘ್ನವಾಗಿ ಪೂರೈಸೆಂಡು ಗಡಿಬಿಡಿಲಿ ಸೇರೆಕಾದ ಜಾಗ್ಗೆ ಸೇರಿದೆ ಅಲ್ದೊ ಮಹೇಶಾ. ಕಡೆಂಗೆ ಅವೇ ತಡವು ಮಾಡಿದ್ದದು ! ಲಘು ಹರಟೆ (ನಮ್ಮ ಭಾಶೆಯ ಹರಟೆ ಅಲ್ಲ) ಲೇಖನ ಓದಿ ಕೊಶಿ ಆತು. ಮಧ್ಯೆ ಮದ್ಯೆ ಕೊಟ್ಟ ಉಪಮೆಗೊ ಲಾಯಕಾಯಿದು. ವಿಮಾನ ಪ್ರಯಾಣವ ನಮ್ಮ ಊರಿನ ಬಸ್ಸು ಪ್ರಯಾಣಕ್ಕೆ ಹೋಲುಸಿದ್ದು ಪಶ್ಟ್ ಕ್ಲಾಸ್ ಆಯಿದು. ಈ ಸೀಟಿನವರು ಬರ್ಬೇಕಷ್ಟೆ, ಎಂತ ಭಟ್ರೆ ಲೇಟು ಮಾಡುವುದು ಹೇಳಿ ಹೇಳದ್ದದು, ಲೇಟು ಆದ್ದಕ್ಕೆ ರಿಕ್ಷಾಲ್ಲಿ ಹೋಗಿ ಬೇಕಾದ ಬಸ್ಸಿನ ಹಿಡಿತ್ತ ಕ್ರಮ ಎಲ್ಲವೂ ಲಾಯಕಾಯಿದು. ಎಲ್ಲವನ್ನೂ ಆನೇ ಹೇಳಿರೆ ಬೈಲಿನ ಬೇರೆಯವಕ್ಕೆ ಹೇಳಲೆ ಎಂತೂ ಒಳಿಯ. ಹಾಂಗೆ ಇಲ್ಲಿಗೆ ನಿಲ್ಲುಸುತ್ತೆ. ಒಪ್ಪಂಗೊ.

  [Reply]

  ಡಾಮಹೇಶಣ್ಣ

  ಮಹೇಶ Reply:

  ಮಾವಾ,
  `ನಿರ್ವಿಘ್ನ’ ಹೇಳಿ ಕೇಳಿಯಪ್ಪಗ ಆ ಶ್ಲೋಕ ನೆಂಪಾವ್ತದ! ವಿಘ್ನ ನಿಯಾಮಕನ ದಯೆಂದಲೇ ಎಲ್ಲ ಸರಿ ಆದ್ದದು!
  ಭವತಃ ವಿಮರ್ಶಃ ಸಂತೋಷಕರಃ ಅಸ್ತಿ,
  ಧನ್ಯೋಸ್ಮಿ !

  [Reply]

  VA:F [1.9.22_1171]
  Rating: 0 (from 0 votes)
 3. ಪ್ರಶಾಂತ ಕುವೈತ್

  ಮಹೇಶಣ್ಣ ನೀನು ಸಂಸ್ಕೃತ ಭಾಷೆಲ್ಲಿ ಬರದರೆ ಇನ್ನಷ್ಟು ಒಳ್ಳೇದು ಹೇಳಿ ಎನ್ನ ಅಭಿಪ್ರಾಯ

  [Reply]

  ಡಾಮಹೇಶಣ್ಣ

  ಮಹೇಶ Reply:

  ಪ್ರಶಾಂತಣ್ಣ,
  ತವ ಸಂಸ್ಕೃತ ಪಠನೋತ್ಸುಕತಾ ಪ್ರೋತ್ಸಾಹದಾಯಿನೀ ಅಸ್ತಿ!

  [Reply]

  VA:F [1.9.22_1171]
  Rating: 0 (from 0 votes)
 4. ಸುಭಗ
  ಸುಭಗ

  ಮಹೇಶಣ್ಣ, ಪ್ರ(ಯಾ)ವಾಸ ಕಥನ ಒಳ್ಳೆ ರಂಜನೀಯವಾಗಿ ಇದ್ದು. ನಿಂಗಳಾಂಗಿಪ್ಪ ಮೇಧಾವಿ ಹಳ್ಳಿಮುಕ್ಕನ ಪರಕಾಯ ಪ್ರವೇಶ ಮಾಡಿ ವಿದೇಶ ಪ್ರಯಾಣವ ವರ್ಣಿಸಿದ್ದು ಕೊಶಿ ಕೊಟ್ಟತ್ತು. ಧನ್ಯವಾದಂಗೊ. ಉತ್ತರಾರ್ಧ ಬೇಗನೆ ಬರಲಿ..

  [Reply]

  ಡಾಮಹೇಶಣ್ಣ

  ಮಹೇಶ Reply:

  ಸುಭಗಣ್ಣ!
  ಮೇಧಾವಿತ್ವದ ಮುಖವಾಡವ ತೆಗದು ಮಡುಗಿ ಬರದ್ದದು!!
  ಹಾಂಗೆ ಬರವಗ ಹಳ್ಳಿಜೀವನದ ಕೈವಾಡ ಇಲ್ಲದ್ದಿಕ್ಕೊ?
  ಒ೦ದು ಸಂಶಯ– ಮುಖವಾಡ ದ ಹಾಂಗೆಯೊ `ಕೈವಾಡ’ ಹೇಳಿರೆ, ಅಲ್ಲನ್ನೆ? :)

  [Reply]

  VA:F [1.9.22_1171]
  Rating: 0 (from 0 votes)
 5. ಮಂಗ್ಳೂರ ಮಾಣಿ

  ಪಷ್ಟುಕ್ಳಾಸಾಯಿದು ಮಹೇಶಣ್ಣ. ಇದರನ್ನೇ ಸರಳ ಸಂಸ್ಕ್ರುತಲ್ಲಿ ಬರದ್ದಿದ್ದರೆ ಮತ್ತೂ ಕೊಶಿ ಆವುತಿತ್ತಿದಾ…

  [Reply]

  ಡಾಮಹೇಶಣ್ಣ

  ಮಹೇಶ Reply:

  ಏತದೇವ ಭವಾನ್ ಸಂಸ್ಕೃತೇ ವದತಿ ಚೇತ್…..ಮಮ ಸಂತೋಷಃ ವರ್ಧತೇ !! :)
  ಅನುಜ!
  ಅವಶ್ಯಂ ತವ ಅಪೇಕ್ಷಾಂ ಕದಾಚಿತ್ ಪೂರಯಿಷ್ಯಾಮಿ.

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಧನ್ಯವಾದ.:)

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  raghumuliya

  ಏ ಮಹೇಶಾ,
  ತಳಮಳದ ಪ್ರಯಾಸ೦ಗಳೂ ಮಧ್ಯೇ ಮಧ್ಯೇ ಒಗ್ಗರಣೆಗಳೂ ಭಾರಿ ಲಾಯಿಕ ಆಯಿದು.
  ಅಲ್ಲಿ ಸ೦ಕಲ್ಪ ಮಾಡುಲೆ ಸುಲಾಭ ಆತದಾ.
  ಶ್ರೀರಾಮಸೇನೆಯವಕ್ಕೆ ಗೊ೦ತಾದರೆ ಕಲ್ಲು ಬೀಳುಗೋ?
  ಸದ್ಯ,ದಿವ್ಯಕ್ಕ ಕೇಳದ್ದರೆ ಎ೦ಕು ಪಣ೦ಬೂರಿ೦ಗೆ ಹೋದ ಹಾ೦ಗೆ ಆವುತ್ತಿತ್ತೋ?

  [Reply]

  ಡಾಮಹೇಶಣ್ಣ

  ಮಹೇಶ Reply:

  “ಮಧ್ಯೇ ಮಧ್ಯೇ ವ್ಯಾಘರಣಂ ಸಮರ್ಪಯಾಮಿ” ಹೇಳಿದ ಹಾಂಗೆ!

  ಮದಲು ಹೋಪದು-ಹೋಪಲಿಲ್ಲೆ-ಹೋಪದೇ ಹೇಳಿ ಆಗಿ ಹೆರಟಾತು.
  ಮತ್ತೆ ಹೋದ-ಹೋಯಿದಾಯಿಲ್ಲೆ ಹೇಳಿ ಆಗಿದ್ರೆ ‘ಮಹೇಶ ಏರ್ಪೊರ್ಟಿಂಗೆ ಹೋದ ಹಾಂಗೆ ಹೇಳಿ’ ಆವ್ತಿತ್ತು. ಹಾಂಗೆ ಆಗಿದ್ರೆ ಶುದ್ದಿಕ್ಕಾರ ಹೇಳ್ತಿತ್ತಃ
  “ಏರುವ ಮೊದಲೇ ಹಾರಿದ ವಿಮಾನ” :)

  [Reply]

  VA:F [1.9.22_1171]
  Rating: 0 (from 0 votes)
 7. ಗಣೇಶ ಮಾವ°

  ಕೊನೆ ಕ್ಷಣದ ಗಡಿಬಿಡಿಯ ತಯಾರಿ,ವಿಮಾನ ಪ್ರಯಾಣದ ಮೊದಲು ನೆಡವ ಚೆಕ್ಕಿಂಗು ಎಲ್ಲಾ ವಿವರಣೆಗ ತುಂಬಾ ಲಾಯಕ ಆಯ್ದು ಮಹೇಶಣ್ಣ,,ಧನ್ಯವಾದ…

  [Reply]

  ಡಾಮಹೇಶಣ್ಣ

  ಮಹೇಶ Reply:

  ಅಪ್ಪೊ?
  ಚೆಕ್ಕಿಂಗಿನ ಗಮ್ಮತ್ತು ಸುಮಾರಿದ್ದು ಹೇಳ್ತರೆ.

  [Reply]

  VA:F [1.9.22_1171]
  Rating: 0 (from 0 votes)
 8. ಗಣೇಶ ಪೆರ್ವ
  ಗಣೇಶ

  ಮಹೇಶಣ್ಣಾ ಒಳ್ಳೇ ಶುದ್ದಿ, ಅಭಿನ೦ದನೆಗೊ. ನಿ೦ಗೊ ಎಲ್ಲಿ೦ದ ಹೆರಟ ಕತೆ ಇದು? ಮು೦ಬಯಿ ವಿಮಾನ ನಿಲ್ದಾಣ೦ದಲೋ ಅಥವಾ ಹೆರದೇಶದ ಏವದಾರು ವಿಮಾನ ನಿಲ್ದಾಣ೦ದಲೋ? ಅಮೇರಿಕಾದ ಹಾ೦ಗಿಪ್ಪ ಕಲಾವು ಯೂರೋಪಿನ ದೇಶ೦ಗಳ ವಿಮಾನ ನಿಲ್ದಾಣ೦ಗಳಲ್ಲಿ ಸುರಕ್ಷಾ ತಪಾಸಣೆ ಇದಕ್ಕಿ೦ತಲೂ ಜಾಸ್ತಿ ಇದ್ದಾಡ. ಅಪ್ಪೋ?

  [Reply]

  ಡಾಮಹೇಶಣ್ಣ

  ಮಹೇಶ Reply:

  ಅಸ್ಮಾಕಂ ದೇಶಾತ್ ಏವ…ಛತ್ರಪತಿ ಶಿವಾಜಿ ಅಂತಾರಾಷ್ಟ್ರಿಯ ವಿಮಾನ ಸ್ಥಾನಕಾತ್.

  ಪಾಶ್ಚಾತ್ಯದೇಶೇಷು ಏಷ್ಯಾವಿಷಯೇ ಭಯಂ ಅಧಿಕಮ್! ಅತಃ ಸುರಕ್ಷಾ ಪರೀಕ್ಷಾ ಅಧಿಕಾ!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣಿಯಕ್ಕ°ಸಂಪಾದಕ°ಪವನಜಮಾವಗೋಪಾಲಣ್ಣಪ್ರಕಾಶಪ್ಪಚ್ಚಿಕೆದೂರು ಡಾಕ್ಟ್ರುಬಾವ°ಬಂಡಾಡಿ ಅಜ್ಜಿಕಜೆವಸಂತ°ಕೊಳಚ್ಚಿಪ್ಪು ಬಾವಚೆನ್ನೈ ಬಾವ°ಅನು ಉಡುಪುಮೂಲೆಕಾವಿನಮೂಲೆ ಮಾಣಿಡೈಮಂಡು ಭಾವಒಪ್ಪಕ್ಕಶಾ...ರೀಪೆರ್ಲದಣ್ಣಮುಳಿಯ ಭಾವಪುಣಚ ಡಾಕ್ಟ್ರುವಿಜಯತ್ತೆಅಕ್ಷರ°ಪೆಂಗಣ್ಣ°ಮಾಷ್ಟ್ರುಮಾವ°ಶಾಂತತ್ತೆಅಜ್ಜಕಾನ ಭಾವವಿನಯ ಶಂಕರ, ಚೆಕ್ಕೆಮನೆಅಕ್ಷರದಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ