ದಾರಿ ತಪ್ಪುಸದ್ದ ವಾತಾವರಣ!!

March 8, 2010 ರ 11:11 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಮಾಜಲ್ಲಿ ತುಂಬಾ ವಿಷಯಂಗೊ ಇರ್ತು. ಒಳ್ಳೇದೂ ಇದ್ದು, ಕೆಟ್ಟದ್ದುದೆ ಇದ್ದು.

ಒಳ್ಳೆದರ ನೋಡಿ ನಮ್ಮದಾಗಿಸಿಕೊಳ್ಳದ್ದರೆ ನವಗೆ ನಷ್ಟ, ಕೆಟ್ಟದರ ನೋಡಿ ಅದರೊಟ್ಟಿಂಗೆ ನಾವು ಹೋದರೆ ಎಲ್ಲೋರಿಂಗು ಕಷ್ಟ.

ಆದ ಕಾರಣ ಒಳ್ಳೆದರ ತೆಕ್ಕೊಳ್ಳೆಕು, ಬೇಡದ್ದರ ಬಿಡೆಕು ಹೇಳಿ ಹೇಳುದರ ನಾವು ಕೇಳ್ತು ಯಾವಾಗಳುದೆ.
ಆದರೆ ಯಾವುದು ಒಳ್ಳೇದು, ಯಾವುದು ಬೇಡದ್ದು, ಎಂತ ಮಾಡ್ಳಕ್ಕು, ಮಾಡ್ಲಾಗ ಹೇಳಿ ವಿವೇಕ ಬಪ್ಪದು ಒಂದು ಹಂತದ ಪ್ರಾಯವೋ ತಿಳುವಳಿಕೆಯೋ ಬಂದ ಮತ್ತೆಯೇ, ಅಲ್ಲದ?

ಮಕ್ಕೊಗೆ ಆ ಸಾಮರ್ಥ್ಯ ಇರ್ತಿಲ್ಲೆನ್ನೆ?

ಹಾಂಗಾರೆ ಸಣ್ಣಾಗಿಪ್ಪಗ ನವಗೆ ಬೇಡಂಕೆಟ್ಟದ್ದು ಸಿಕ್ಕದ್ದ ಹಾಂಗೆ ಮಾಡಿದ್ದದು ಆರು? ನಾವು ಪೆದಂಬ ಆಗದ್ದ ಹಾಂಗೆ, ಹಾಳಾಗಿ ಹೋಗದ್ದಾಂಗೆ ಆರು ನೋಡಿದ್ದದು?

ನಮ್ಮ ಅಪ್ಪ-ಅಮ್ಮ, ಮನೆಯವು,ಮಾಷ್ಟ್ರಕ್ಕೋ,ಹಿತೈಶಿಗೋ, ಹೀಂಗೇ ಸುಮಾರು ಜನಂಗೋ….

ಇವ್ವೆಲ್ಲ ಮಕ್ಕೊಗೆ ಬೇಕಾದ ವಿಷಯವ ಸಿಕ್ಕೆಕಾದ ರೀತಿಲ್ಲಿ ಸಿಕ್ಕುವ ಹಾಂಗೆ ವ್ಯವಸ್ಥೆ ಮಾಡಿ (ಬೇಕಾದಷ್ಟೇ ಲೂಟಿ ಮಾಡ್ಲೆ ಬಿಟ್ಟು) ಹಾಳು ಶಕ್ತಿಯ ಉಪ್ಪದ್ರ ತಾಗದ್ದಾಂಗೆಯೋ ಉಪಾಯಲ್ಲಿ ಅದರತ್ರೆ ಹೋಗದ್ದ ಹಾಂಗೆಯೋ ರಕ್ಷಣೆಯ ಆವರಣ ಕೊಡುವ ಹಿರಿಯವು. ನಾವು ಆ ವಿಷಯದ ಬಗ್ಗೆ ಯೋಚಿಸೇಕು, ಎಂತಕೆ ? ನಾವುದೇ ದೊಡ್ಡ ಆವ್ತಾ ಇದ್ದು!! ನಮ್ಮಲ್ಲಿಪ್ಪ ಒಳ್ಳೆತನದ ಸಣ್ಣ ಕಿಡಿಯ ರಕ್ಷಿಸಿ, ಅದಕ್ಕೆ ಲಾಯಕಕ್ಕೆ ಬೆಳಕು ಕೊಡುವ ಶಕ್ತಿ ತಪ್ಪದು ಹಿರಿಯವೇ ಅಲ್ಲದೋ?

ಹಳೆಮನೆ ಅಣ್ಣನ ಕಣ್ಣಿಂಗೆ ಕಂಡದು! ಅರ್ಥ ಆಗದ್ರೆ ಎಡದ ಹೊಡೆಲ್ಲಿ ಬರದ್ದದು ಓದಿ!!

ಸಣ್ಣ ಜ್ವಾಲೆ ಉರಿವಲೆ ಗಾಳಿ ಬೇಕು, ಆದರೆ ಜೋರಾಗಿ ಗಾಳಿ ಬೀಸಿರೆ ಅದು ನಂದಿ ಹೋಕು!!
ಹಾಂಗಾಗಿ ಹದಾಕೆ  ಬೇಕಾದಷ್ಟೇ ಗಾಳಿ ಸಿಕ್ಕುವ ಹಾಂಗೆ ಒಂದು ತಡೆ ಬೇಕು.

ಆವರಣ ಇಲ್ಲದ್ದ ಗಾಳಿ ಬರೇ `ವಾತ’ ಆಗಿ ಉಪದ್ರ ಕೊಡುಗು. ಹಾಂಗೆ ಹೇಳಿ ಉಸಿರು ಕಟ್ಟುಸುವ ಆವರಣ ಅಪ್ಪಲಾಗ!

ವಾತವೂ (ಗಾಳಿ) ಬೇಕು ಆವರಣವೂ ಬೇಕು! ಮಕ್ಕೊಗೆ ಒಳ್ಳೆ ವಾತಾವರಣ ಬೇಕು, ದಾರಿ ತಪ್ಪುಸದ್ದ ವಾತಾವರಣ!!

ಹಾಂಗಾರೆ ಒಂದು ಸುಸಂಸ್ಕೃತ ವಾತಾವರಣ ಬೇಕು ನಾವು ಬೆಳವಲೆ, ಬೆಳಶಲುದೆ ಹೇಳಿ ಆತು!

ಸರೀ  ಗೊಂತಾಯೆಕಾರೆ ಬಲದ ಹೊಡೆಲ್ಲಿ ಅಂಟುಸಿದ ಪಟ ನೋಡಿ.

ಸಣ್ಣಾಗಿಪ್ಪಗ ನವಗೆ ಸುಮಾರು ವಿಷಯಲ್ಲಿ ನವಗೆ ಬೇಕಾದ ಹಾಂಗೆ ಮಾಡ್ಲೆ ಬಿಟ್ಟಿರವು. ಆ ಕಾರಣಕ್ಕೆ ನಾವು ಆರುದೆ ಬೇಜಾರ ಮಾಡ್ತಿಲ್ಲೆ!!
ಎಂತಕೆ ಹೇಳಿರೆ, ದೊಡ್ಡ ಅಪ್ಪಗ ಸ್ವಂತ ನಿರ್ಣಯ ತೆಕ್ಕೊಂಬಲೆ ಬೇಕಾದ ಅರ್ಹತೆಯ ನೀಡುವದೆ ಈ ಕಟ್ಟುಪಾಡಿಂಗೆ ಒಳಪಟ್ಟ ಜೀವನ ಅಲ್ಲದೋ?!
ನಮ್ಮ ಸ್ವ`ತಂತ್ರ‘ರನ್ನಾಗಿ ಮಾಡುವದು ಬಾಲ್ಯದ ಆ ನಿಯಂತ್ರಣ ಇಪ್ಪ ಸ್ವೇಚ್ಛೆ.

ಆ ಕಟ್ಟುಪಾಡುಗಳ ಚೆಂದಕೆ ನಿಯಮಿತವಾಗಿ ಕಲುಶಲೆ ನಮ್ಮಲ್ಲಿಪ್ಪ ಕೆಲವು ರೀತಿಯ ಕ್ರಮಂಗೋ ಸಹಾಯ ಮಾಡುತ್ತು.

ಉದಾಹರಣೆಗೆ ನಮ್ಮದೇ ಆದ ಒಂದು ಊಟದ ಕ್ರಮ. ಬೇರೆಯವು ನೋಡಿರೆ ಇಷ್ಟೊಂದು ಕ್ರಮಲ್ಲಿ ಉಂಬದು ಎಷ್ಟು ಕಷ್ಟ ಹೇಳುಗು! ಆದರೆ ನವಗೆ ಗೊಂತಾಗದ್ದೆ ಆ ಶಿಸ್ತು ನಮ್ಮಲ್ಲಿ ಬಯಿಂದಿಲ್ಲೆಯೋ?
ಹಾಂಗೆ ರಕ್ಷಣೆಯ ಆವರಣ ಬಿಗಿಯಾಗದ್ದ ಹಾಂಗೆ, ನಮ್ಮ ಸಂಪ್ರದಾಯಂಗ, ಆಚಾರಂಗ, ಸಂಸ್ಕೃತಿ ನಮ್ಮ ಬೆಳಶುವದು.

ಒಂದು ಸುಭಾಷಿತ ಹೇಳ್ತು:
ಮಾತಾ ಶತ್ರು: ಪಿತಾ ವೈರೀ ಯೇನ ಬಾಲೋ ನ ಪಾಠಿತಃ

ಇದರ ಅರ್ಥ ಎಜುಕೇಶನ್ ಕೊಡುಸುವದು ಹೇಳಿ ಮಾಂತ್ರ ಅಲ್ಲ. ಹಾಂಗಿಪ್ಪ ಸಾಮಾನ್ಯ ಶಿಕ್ಷಣ ಇಂದು ಶಾಲೆಗೆ ಸೇರುಸಿರೆ ಸಿಕ್ಕುತ್ತು,
ಶಾಲೆಲ್ಲಿ ಸಂಪೂರ್ಣ ಪ್ರಮಾಣಲ್ಲಿ ಸಿಕ್ಕದ್ದ, ಮನೆಯ ಸಂಸ್ಕಾರಂದ ಬಪ್ಪ ಕೆಲವು ನಡತೆಗೊ ಇದ್ದವನ್ನೇ? ಅದು ಅವಕ್ಕೆ ಸಿಕ್ಕದ್ರೆ ಅವರ ಬಾಲ್ಯದ ಹಕ್ಕು (ರೈಟ್) ಅವಕ್ಕೆ ಸಿಕ್ಕಿದ್ದಿಲ್ಲೆ ಹೇಳಿ ಅರ್ಥ.

ಎಲ್ಲೋರಿಂಗುದೆ ಅವರವರ ಹಕ್ಕು ಇದ್ದಡ, ಹಾಂಗೆ ಮಕ್ಕೊಗುದೆ ಇದ್ದು ಹೇಳಿ ಹೇಳ್ತವು.
ಒಳ್ಳೆಯ ಸಂಸ್ಕಾರ ತೆಕ್ಕೊಂಬ ಹಕ್ಕುದೆ ಅವಕ್ಕೆ ಇದ್ದು. ಅವಕ್ಕಿದ್ದು ಹಕ್ಕು- ನಮ್ಮ ಸಂಸ್ಕೃತಿಯ ಕಲಿವಲೆ.  (ಮಕ್ಕಳ ಹಕ್ಕಿನ ಬಗ್ಗೆ ಮಾತಾಡುವವು ಇದರ ಬಗ್ಗೆ ಮಾತಾಡ್ತವೆ ಇಲ್ಲೆ :( )
ಆ ಕಾಲಲ್ಲೇ ಪೆಟ್ಟು ತಿಂಬಲೆ (ತಪ್ಪಿನ ತಿದ್ದಿಕೊಂಬಲೆ) ಸಾಮರ್ಥ್ಯ ಇಪ್ಪದು. ಅಂಬಗ ಮಕ್ಕಳ ದಂಡಿಸೆಕಾದ್ದದು ಹಿರಿಯರ ಕರ್ತವ್ಯ. ಅದಕ್ಕೆ ಬೇಕಾಗಿ ಕೆಲವು ಸರ್ತಿ ಮನಸ್ಸು ಗಟ್ಟಿ ಮಾಡೆಕಕ್ಕು!

ಮಕ್ಕೊಗೆ ಅವರ ರೈಟು ಕೊಡದ್ರೆ ದೊಡ್ಡವು ರೈಟ್  ಅಪ್ಪದು ಹೇಂಗೆ?

ಎಲ್ಲೋರಿಂಗುದೆ ಆ ಶಿಸ್ತು ಹೇಳಿ ಕೊಡುವ ತಾಕತ್ತು / ಚಾಕಚಕ್ಯತೆ (ಅಥವಾ ಪುರುಸೊತ್ತು ?) ಇರ, ಅಥವಾ ನಮ್ಮ ಮನೆಂದಲೇ ಎಲ್ಲವು ಸಿಕ್ಕ.  ಹಾಂಗಿಪ್ಪ ನಮ್ಮಹಾಂಗಿಪ್ಪವಕ್ಕೆ ಸಹಾಯ ಆಗಲಿ ಹೇಳಿಯೇ ನಮ್ಮದೊಂದು ಸಮಾಜ ಹೇಳಿ ಇಪ್ಪದು.

ಕೆಲವು ಮಕ್ಕೊಗೆ ಅಜ್ಜನ ಮನೆಂದ ಸಿಕ್ಕುಗು, ಇಲ್ಲದ್ರೆ ಹತ್ರಾಣವರಿಂದ ಸಿಕ್ಕುಗು. ಸಮುದಾಯದ ಒಂದೇ ರೀತಿಯ ಆಚರಣೆ, ಊಟದ ವಿಧಾನ, ಶಿಷ್ಟಾಚಾರಂಗೋ ಎಲ್ಲ ಇದರಲ್ಲಿ ಸಹಾಯ ಮಾಡ್ತು ಅಲ್ಲದ?

ಈ ಆಚಾರಂಗೋ, ಪದ್ಧತಿಗೋ ಎಲ್ಲ ಒಂದು ರೀತಿಯ ಪಾಠ್ಯ ಕ್ರಮದ ಹಾಂಗೆ.
ಒಂದು ಸಿಲೆಬಸ್ಸು ಹೇಳಿ ಇದ್ದರೆ ಮಾಷ್ಟ್ರಕ್ಕೊಗೆ ಪಾಠ ಮಾಡ್ಲೆ ಸುಲಭ ಆವ್ತ ಹಾಂಗೆ,
ಆಚಾರಂಗೋ ಹೇಳಿ ಇದ್ದರೆ ಸಂಸ್ಕೃತಿಯ ಮಾಲ್ಯಂಗಳ ಮುಂದುವರುಸಲೆ ಹಿರಿಯವಕ್ಕೆ ಸುಲಭ ಆವ್ತು.

ನವಗೆ ನಮ್ಮದೇ ಪರಿಸರಲ್ಲಿಪ್ಪಗ/ ಹಳ್ಳಿಲ್ಲಿಪ್ಪಗ ನವಗೆ ಅದರ ಮಹತ್ತ್ವ ಅಷ್ಟಾಗಿ ಅರಿವಿಂಗೆ ಬಾರ.
ಶಾಲೆಗೇ ಹೋಪಗ, ಪೇಟೆಗೆ ಹೋಪಗ, ಆಯನಲ್ಲಿ, ಎಲ್ಲೋಡಿಕುದೆ  ಅಪ್ಪಚ್ಚಿಯಕ್ಕೋ, ಅತ್ತೆಯಕ್ಕೋ, ಅಜ್ಜಂದ್ರು, ಮಾವಂದ್ರು. ಹೀಂಗೇ ಆರಾರನ್ನೋ ನಮ್ಮವರ ಕಂಡೊಂಡೇ ಇರ್ತು.  ಹಾಂಗಾಗಿ ಹಾಳಪ್ಪಲೆ ಎಂತ, ನಮ್ಮ ಕ್ರಮಂದ ಅತ್ಲಾಗಿ ಹೋಪಲೇ ಅವಕಾಶ ಇಲ್ಲೆ!!

ಹೆದರಿಕೆ, ನಾಚಿಕೆಗಳ ಒಂದು ಮಟ್ಟದ ವರೆಗೆ ಜೀವನ ಪೂರ್ತಿ ಉಳುಶಿಕೊಂಬ ಮಾಡುವದು ಇದುವೆಯೋ ಎಂತದೋ?!
ನವಗೆ ಆ ರೀತಿಯ ಸಂಸ್ಕಾರ ಸಿಕ್ಕದ್ದಿದ್ದರೆ ನಾವು ಹೆಂಗೆಂಗಾರೋ ತಿರುಗಾಡಿಗೊ ಆಗಿ ಬೆಳೆತ್ತಿತ್ತಿಲ್ಲೆಯೋ?

ಇದು ಅರ್ಥ ಆಯೆಕಾರೆ  ಕೆಲವು (ಬಾಲ್ಯವೇ ಸಿಕ್ಕದ್ದ) ಮಕ್ಕಳ  ನೋಡೆಕು ಒಂದರಿ. ರೈಲಿಲ್ಲಿ ಬೇಡುವವು, ಬಸ್ಟೆಂಡಿಲ್ಲಿ, ಪ್ಲೇಟುಫೋರ್ಮಿಲ್ಲಿ ತಿರುಗುವವರಲ್ಲಿ  ನವಗೆ ಊಹಿಸಲುದೆ ಎಡಿಯದ್ದ ದುಷ್ಟ ಚಟಂಗ ಇರ್ತು, ಹೇಳ್ಲಾಗದ್ದೆಲ್ಲ ಮಾತಾಡುಗು.

ನಮ್ಮ ಮನೆ ನಮ್ಮ `ಚಿಪ್ಪಿನ ಒಳಾಣ ಮುತ್ತಿನ‘ ಹಾಂಗೆ ರಕ್ಷಿಸಿದ್ದದು ಗೊಂತಾವ್ತು.

ದೊಡ್ಡ ಆದ ಮತ್ತೆ ನಮ್ಮ  ಹಾಳಾಗದ್ದ ಹಾಂಗೆ ಆರು ನೋಡ್ಯೋಂಬದು? ಎಲ್ಲೋರುದೆ ದೊಡ್ಡವೇ! ಆರು ಆರಿಂಗೆ ಬುದ್ಧಿ ಹೇಳುದು? ಹೇಳಿರೆ ಕೇಳುವವು ಬೇಕನ್ನೇ?
ಆದರೂ ನಾವು ತಪ್ಪು ಮಾಡದ್ದ ಹಾಂಗೆ ತಡವದು ಆರು? ತಪ್ಪೋ ಸರಿಯೋ ಹೇಳಿ ನಮ್ಮಷ್ಟಕೆ ನಾವು ವಿಚಾರ ಮಾಡುವದು ಯಾವುದರ ಆಧಾರದ ಮೇಲೆ?
ನಮ್ಮ ಧರ್ಮದ / ಸಂಸ್ಕೃತಿಯ ತತ್ತ್ವದ ಆಧಾರದ ಮೇಲೆ, ನಾವು ಬೆಳದ ಪರಿಸರದ ಆಧಾರದ ಮೇಲೆ.
ಅದೇ ದಾರಿಲ್ಲಿ ನಮ್ಮ ನಿರ್ಣಯ, ವ್ಯವಹಾರಂಗೋ ನಡವದು.

ನಾವು ಕಂಡಾಪಟ್ಟೆ ಖರ್ಚು ಮಾಡ್ಲಾಗ ಹೇಳಿ ನವಗೆ ಗೊಂತಪ್ಪದು ಹೇಂಗೆ?ನಮ್ಮ ಬುದ್ಧಿ ಹೇಳ್ತು-ಯಾವಗ?

 • ಐಶಾರಾಮಿ ಜೀವನ ಸರಿಯಲ್ಲ, ತ್ಯಾಗದ ಜೀವನ ಮಾಡೆಕು  ಹೇಳಿ ನಮ್ಮ ಸಂಸ್ಕೃತಿ ಹೇಳ್ತು ಹೇಳಿ ತಿಳ್ಕೊಂಡಪ್ಪಗ, ಅಥವಾ
 • ನಾವು ಬೆಳದ ಹಳ್ಳಿಯ/ಮನೆಯ  ವಾತಾವರಣ ನೆಂಪಪ್ಪಗ !

ಒಂದು ವೇಳೆ ನವಗೆ ಈ ತಪ್ಪು-ಸರಿ ನಿರ್ಣಯ ಮಾಡುವ ಧರ್ಮದ, ಸಂಸ್ಕೃತಿಯ ತಳಹದಿ ಇಲ್ಲದ್ದೆ ಹೋದರೆ ನಾವು ಅತಂತ್ರರಾಗಿ ಹೋಕು!

ಹಾಂಗಾಗಿ ಹೇಳುವದು  “ಧರ್ಮೋ ರಕ್ಷತಿ ರಕ್ಷಿತಃ ”–  ರಕ್ಷಿಸಲ್ಪಟ್ಟ ಧರ್ಮ [ನಮ್ಮ] ರಕ್ಷಿಸುತ್ತು – ಹೇಳಿ.

ಹಾಂಗಾಗಿ ನಮ್ಮ ಸ್ವಂತದ ಬಗ್ಗೆ ಆಲೋಚನೆ ಮಾಡಿರೂ ಸಂಸ್ಕೃತಿಯ ರಕ್ಷಣೆ ಮಾಡೆಕು!
ಸಮಾಜಕ್ಕೆ ಬೇಕಾಗಿ ಹೇಳಿ ಆಲೋಚನೆ ಮಾಡಿರೂ ಆ ಕೆಲಸ ಆಯೆಕು!!

ಅದಕ್ಕೆ ಸಮಯ `ಇಲ್ಲೆ‘ ಹೇಳಿ ಅಪ್ಪಲಾಗ ಅದ!   ಅಜ್ಜಕಾನ ಭಾವ ಒಪ್ಪುಗು!!

ಹೀಂಗುದೆ ಹೇಳಲಕ್ಕು:
ಒಳ್ಳೆ ವಿಷಯಂಗ ಬೇಡ ಹೇಳಿ ಕಾಂಬದೂ,  ಹಾಳು ವಿಚಾರಂಗ ಬೇಕು ಹೇಳಿ ಅಪ್ಪದೂ ಸಹಜವೇ.
ಬೇಡ ಹೇಳಿ ಕಾಂಬ ಬೇಕಾದ್ದದರ ಬೇಕು ಹೇಳುವ ಹಾಂಗೆ ಮಾಡುವದು ಗುರುಗಳು.

ಇಷ್ಟೆಲ್ಲಾ ನೆಂಪಾದ್ದು ಹೇಂಗೆ?
ಹಳೆಮನೆ ಅಣ್ಣ ತೋರುಸಿದ ಚಿತ್ರ ಇಷ್ಟೆಲ್ಲಾ ಹೇಳುಸಿತ್ತು ಎನ್ನತ್ರೆ.
ಆಚ ಕೋಣೆಲ್ಲಿ ನೇಲುಸಿದ ಪಟವ `ಜಾಗ್ರತೆ’ ಲ್ಲಿ ಜೆರೋಕ್ಸು ಮಾಡಿ ಇಲ್ಲಿ ಅಂಟುಸಿದ್ದೆ, ಹರೀಶಣ್ಣಂಗೆ ಹೇಳದ್ದೆ!

ದಾರಿ ತಪ್ಪುಸದ್ದ ವಾತಾವರಣ!!, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಹಳೆಮನೆ ಅಣ್ಣ

  ಮಹೇಶಣ್ಣ… ಲೇಖನ ಲಾಯ್ಕ ಆಯಿದು. ಆನು ಈ ಪಟ ತೆಗದ್ದು ಕೊಡೆಯಾಲದ ‘ಆಸರೆ’ ಹೇಳ್ತ ಒಂದು ಸಂಸ್ಥೆಗೆ ಬೇಕಾಗಿ. ಅದರ ಅರ್ಥ ಬಪ್ಪ ಹಾಂಗೆ ಚಿತ್ರ ತೆಗದು ಕೊಡೆಕು ಹೇಳಿತ್ತಿದ್ದವು. ಹಾಂಗೆ ಎನಗೆ ಈ ಪಟ ತೆಗವ ಐಡಿಯಾ ಬಂದದು. ಹೆಚ್ಚು ಕಮ್ಮಿ ಇದೇ ರೀತಿಲಿ ಎಲ್ಲೈಸಿಯ ಲಾಂಛನವೂ ಇದ್ದಲ್ಲದಾ? ನಮ್ಮಭಾರತದ ಸಂಸ್ಕೃತಿಯ ನಾವೇ ಒಳಿಶಿ, ಬೆಳೆಶೆಕ್ಕು. ಬೇರೆ ಹೊಡೇಂದ ಬಿರುಗಾಳಿಗೊ ಬತ್ತಾ ಇದ್ದು ಈಗಾಗಲೇ. ನಾವು ನಮ್ಮ ಸಂಸ್ಕೃತಿಯ ದೀಪವ ನಂದಿ ಹೋಗದ್ದ ಹಾಂಗೆ ಕಾಪಾಡೆಕ್ಕು. ಇದು ನಮ್ಮ ಕನಿಷ್ಠ ಕರ್ತವ್ಯ.

  [Reply]

  ಡಾಮಹೇಶಣ್ಣ

  ಮಹೇಶ Reply:

  ಅಪ್ಪು, ಎಲ್ಲೈಸಿಯ ಲಾಂಛನವೂ ಅದೇ ನಮುನೆದು.
  `ಯೋಗಕ್ಷೇಮಂ ವಹಾಮ್ಯಹಂ’ ಹೇಳಿ ಎಲ್ಲೈಸಿಯ ಧ್ಯೇಯವಾಕ್ಯ ಇಪ್ಪದು. ಭಗವದ್ಗೀತೆಂದ ತೆಕ್ಕೊಂಡದು.

  ಧ್ಯೇಯ ಸಾರುವ ಹಳೆಮನೆ ಹರೀಶಣ್ಣನ ಚಿತ್ರಂಗೋ ಹೆಚ್ ಹೆಚ್ ಬರಲಿ!!

  [Reply]

  VA:F [1.9.22_1171]
  Rating: 0 (from 0 votes)
 2. ಗಣರಾಜ ಬನಾರಿ

  ಚಿತ್ರ ನೋಡಿ ಕವಿವರ್ಯರ (ಕೆ ಎಸ್ ನ ಹೇಳಿ ನೆನಪು) “ದೀಪವು ನಿನ್ನದೇ ಗಾಳಿಯು ನಿನ್ನದೇ …” ನೆನಪಾವುತ್ತು… ಕೆಲವು, ಚಿತ್ರಕ್ಕೆ ಬರಹಂಗೋ ಮತ್ತೆ ಕೆಲವು, ಬರಹಕ್ಕೆ ಚಿತ್ರಂಗೋ!. ಮಹೇಶನ ಬರಹ ಲಾಯಿಕ ಬಯಿಂದು. ಮುಂದೆಯೂ ಹೀಂಗೆ ಬರೆಯಕ್ಕು ಹೇಳಿ ಎನ್ನ ಆಗ್ರಹ ಮತ್ತು ಆಶಯ.

  [Reply]

  VA:F [1.9.22_1171]
  Rating: 0 (from 0 votes)
 3. ಮಹೇಶಣ್ಣ ಲಾಯಿಕಾಯಿದು ಬರದ್ದದು.. :)
  ಅದೇ.. ದೊಡ್ಡೋರು ಅಂದು ಬೈವಗ ಬಡಿವಗ ವೈರಿಗಳ ಹಾಂಗೆ ಕಾಂಗು..
  ಏಗ ಗೊಂತಾವ್ಥು ಎಲ್ಲ ಒಳ್ಳೆದಕ್ಕೇ ಹೇಳುದು ಹೇಳಿ..! 😉

  [Reply]

  VA:F [1.9.22_1171]
  Rating: 0 (from 0 votes)
 4. subrahmanya Kuloor

  Oppanagale,
  Very nice and meaningful article and perfectly fits to the Deepa of Halemane Harish! Keep it up Mahesh, this kind of writings are required more & we need to make all our Havyakas to read as well.

  Best Wishes to Oppanna go ke.
  Bhat K S

  [Reply]

  VA:F [1.9.22_1171]
  Rating: 0 (from 0 votes)
 5. ಜಯಶ್ರೀ ನೀರಮೂಲೆ
  jayashree.neeramoole

  ಎಂತಹ ಅದ್ಭುತ ಲೇಖನ… ಬಾರಿ ಬಾರಿ ಚಿಂತಿಸೆಕ್ಕು… ಇಂದು ಎಲ್ಲ ಕಡೆಂದಲೂ ಗಾಳಿ ಬೀಸುತ್ತಾ ಇದ್ದು… ನಮ್ಮ ಎರಡು ಕೈಗಳ ತಡೆ ಗೋಡೆ ಮಾಡಿರೆ ಆ ತಡೆ ಗೋಡೆಯೇ ಅಡ್ಡಿ ಅಕ್ಕೋ ಹೇಳುವ ಪರಿಸ್ಥಿತಿ… “ಒಳ್ಳೆ ಆಹಾರ,ಒಳ್ಳೆ ಕ್ರಮಂಗೋ, ಆಚಾರಂಗೋ… ಹೇಳಿ ತಡೆಗೋಡೆ ಮಾಡಿರೆ; ಹಂಚಿ ತಿನ್ನೆಕ್ಕು,ಎಲ್ಲರ ಜೊತೆ ಬೆರೆತು ಬಾಳೆಕ್ಕು,ಸಮರಸವೇ ಜೀವನ… ಹೇಳುದರ ಕಲಿಶುಲೇ ಎಡಿಯದ್ದ ಪರಿಸ್ಥಿತಿ…”. ಒಂದೇ ದಾರಿ “ನಾವೆಲ್ಲ ಒಂದಾಗಿ ಜೀವನ ನಡೆಸೆಕ್ಕು…”. ಎಂತ ಮಾಡುದು?????????

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ಅನು ಉಡುಪುಮೂಲೆಪುಣಚ ಡಾಕ್ಟ್ರುಹಳೆಮನೆ ಅಣ್ಣಮಂಗ್ಳೂರ ಮಾಣಿಜಯಗೌರಿ ಅಕ್ಕ°ವಿಜಯತ್ತೆಚೆನ್ನಬೆಟ್ಟಣ್ಣಅಜ್ಜಕಾನ ಭಾವವಿನಯ ಶಂಕರ, ಚೆಕ್ಕೆಮನೆದೊಡ್ಡಭಾವಶುದ್ದಿಕ್ಕಾರ°ಶೇಡಿಗುಮ್ಮೆ ಪುಳ್ಳಿನೀರ್ಕಜೆ ಮಹೇಶಸರ್ಪಮಲೆ ಮಾವ°ಬೋಸ ಬಾವಅನುಶ್ರೀ ಬಂಡಾಡಿಸುಭಗಚುಬ್ಬಣ್ಣಮಾಷ್ಟ್ರುಮಾವ°ಎರುಂಬು ಅಪ್ಪಚ್ಚಿಡಾಗುಟ್ರಕ್ಕ°ಸಂಪಾದಕ°ಚೂರಿಬೈಲು ದೀಪಕ್ಕಅನಿತಾ ನರೇಶ್, ಮಂಚಿಮಾಲಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ