ನಮಗೆಂತಗೆ ರಾಜಕೀಯ?

March 11, 2013 ರ 11:15 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮಗೆ ರಾಜಕೀಯ ಎಂತಗೆ? ಹೀಂಗೆ ಮಾತಾಡುವವು-ತಮ್ಮ ಮನಸ್ಸಿಲಿ ಒಂದು ಸಿದ್ಧಾಂತ ಮಾಡಿಕೊಂಡಿದವು-ರಾಜಕೀಯ ಹೊಲಸು.ಅದು ಮರ್ಯಾದಸ್ಥರಿಂಗೆ ಹೇಳಿಸಿದ್ದಲ್ಲ ಹೇಳಿ.
ಹಾಂಗಾದರೆ,ರಾಜಕೀಯ ಒಳ್ಳೆದಾಯೆಕ್ಕಾದರೆ ಮರ್ಯಾದಸ್ಥರು ಅದಕ್ಕೆ ಇಳಿಯೆಕ್ಕು,ಕೆಸರು ತೊಳೆಯೆಕ್ಕು!
ಆನು ಮರ್ಯಾದಸ್ಥ,ಎನಗೆ ಬೇಡ ಹೇಳಿ ಕೂಪ ಸ್ವಾತಂತ್ರ್ಯ ಎಲ್ಲರಿಂಗೂ ಇದ್ದು.
ಹಾಂಗೆ ಹೇಳಿ ಎಲ್ಲಾ ಮರ್ಯಾದಸ್ಥರೂ ಸುಮ್ಮನೆ ಕೂದರೆ ನಮ್ಮ ಸರಕಾರ ಆರ ಕೈಗೆ ಹೋವುತ್ತು? ಅವು ಆರ ಬೈತ್ತವೊ ಆ ಜೆನಂಗಳ ಕೈಗೆ.
ರಾಜಕೀಯ ಎಷ್ಟು ಹೊಲಸು,ಏಕೆ ಹೊಲಸು ಹೇಳಿ ನಿಂಗೊ ಏವ ಪತ್ರಿಕೆ ಹಿಡಿದು ನೋಡಿರೂ ಗೊಂತಕ್ಕು.ಅದರ ವಿವರ ಆನು ಇಲ್ಲಿ ಬರೆತ್ತಿಲ್ಲೆ; ಏವ ಪಕ್ಷವನ್ನೂ ಹೆಸರಿಸುತ್ತಿಲ್ಲೆ.
ಆದರೆ ನಾವು ರಾಜಕೀಯವ ಅರ್ಥ ಮಾಡಿಕೊಂಬದು,ರಾಜಕಾರಣಿಗಳ ಧೋರಣೆಗಳ ಕುರಿತು ತಿಳಿಕ್ಕೊಂಬದು ಪ್ರಜಾಪ್ರಭುತ್ವಲ್ಲಿ ಅಗತ್ಯ. ಪ್ರತಿ ಚುನಾವಣೆಗೆ ಮೊದಲೂ ಜನರೊಟ್ಟಿಂಗೆ ಅಭ್ಯರ್ಥಿಗಳ ಸಂವಾದ ನಡೆದರೆ,ಅದು ಜನಂಗೊಕ್ಕೂ ,ರಾಜಕಾರಣಿಗೊಕ್ಕೂ ಒಳ್ಳೆದು.ಸರಿಯಾದ ರಾಜಕಾರಣಿಗೊ ಮುಂದೆ ಬಪ್ಪಲೆ ಅದು ಸಹಾಯ ಅಕ್ಕು.
ಸರಕಾರದ ನೀತಿಗೊ ನಮ್ಮ ಬದುಕಿನ ಮೇಲೆ ಪರಿಣಾಮ ಬೀರುತ್ತು.ನಮ್ಮ ಆರ್ಥಿಕ ,ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣ ಆವುತ್ತು. ಇಂತಾ ವಿಷಯ ಹೊಲಸು ಹೇಳಿ ಮೂಗು ಮುರಿದರೆ,ಅದು ಎಷ್ಟು ಸೂಕ್ತ? ಹೀಂಗೆ ಮಾಡಿದರೆ,ಪರೋಕ್ಷವಾಗಿ ಅಯೋಗ್ಯರ ಬೆಂಬಲಿಸಿದ ಹಾಂಗೆ ಆವುತ್ತು. ನಾವು ಹೀಂಗಾಗಿ ರಾಜಕೀಯಕ್ಕೆ[ಹೊಲಸು ರಾಜಕೀಯಕ್ಕಲ್ಲ] ಕೆಮಿ ಕೊಡಲೇ ಬೇಕಾವುತ್ತು.ಈ ಯುಗಲ್ಲಿ ಸಂಘಕ್ಕೆ ಶಕ್ತಿ; ಬಹುಮತಕ್ಕೆ ಬೆಲೆ. ಸಾರ್ವಜನಿಕ ಅಭಿಪ್ರಾಯದ ರೂಪೀಕರಣ ,ನಮ್ಮ ಇಂದ್ರಾಣ ಅಗತ್ಯ. ಬರೀ ರಾಜಕೀಯ ಮೇಲಾಟಂಗಳ ಬಗ್ಗೆ ಬರೆದ್ದರ ಓದಿರೆ,ಈಗ ಮಕ್ಕೊಗೆ ನಿಜವಾದ ರಾಜಕಾರಣದ,ಸರಕಾರದ ,ಸಾರ್ವಜನಿಕ ಜೀವನದ ಋಜುತೆಯ ತಿಳುವಳಿಕೆ ಬಾರ. ಯಾವುದನ್ನೇ ಆಗಲಿ ನಿಷ್ಪಕ್ಷವಾಗಿ ವಿಮರ್ಶೆ ಮಾಡುವ ಕ್ರಮ ಬೆಳೆಯದ್ದರೆ ಮುಂದೆ ಸಾರ್ವಜನಿಕ ಬದುಕು ಗೊಂದಲದ ಗೂಡಕ್ಕು.ಸರಿಯಾದ ರಾಜಕಾರಣ ಬರೆಕ್ಕು,ಇದಕ್ಕಾಗಿ ನಾವು ಎಲ್ಲಾ ರಾಜಕಾರಣಿಗಳನ್ನೂ ಸಂವಾದಕ್ಕೆ ಎಳೆಯೆಕ್ಕು-ಮಾಧ್ಯಮದವು ಈ ಕೆಲಸವ ಯಾವುದೇ ಮಸಾಲೆ ಬೆರಸದ್ದೆ ಮಾಡಲಿ-ಹೇಳಿ ಹಾರೈಸುತ್ತೆ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಚೆನ್ನೈ ಬಾವ°

  ಒಳ್ಳೆ ಅಭಿಪ್ರಾಯ. ಹತ್ತಾರು ಅಣ್ಣಾ ಹಜಾರೆಯಾಂಗಿಪ್ಪವು ಎದ್ದು ನಿಲ್ಲೆಕು, ಸಂಘಟನೆ ಆಯೇಕು. ನಾವೆಲ್ಲ ಸೇರೆಕು.

  [Reply]

  VN:F [1.9.22_1171]
  Rating: 0 (from 0 votes)
 2. Prabhakara Bhat Konamme

  ನಿಂಗಳ ಅಭಿಪ್ರಾಯಕ್ಕೆ ಸಹಮತ ಇದ್ದು. ಹೆಚ್ಚು ಹೆಚ್ಚು ಜೆನ ಹೀ೦ಗೆ ಯೋಚಿಸಲಿ. ಕಾಯ೯ ಪ್ರವೄತ್ತರಾಗಲಿ. ಸಮಾಜಮುಖಿ ಚಿ೦ತನೆಯ ಬರೆಹಕ್ಕೆ ಧನ್ಯವಾದ೦ಗೊ!

  [Reply]

  VA:F [1.9.22_1171]
  Rating: 0 (from 0 votes)
 3. ಡಾಮಹೇಶಣ್ಣ

  ಗೋಪಾಲಣ್ಣ! ನಿಂಗ ಒಳ್ಳೆ ಚಿಂತನೆಯ ಹೇಳಿದ್ದಿ.

  ರಾಜಕಾರಣಿಗ ಬಪ್ಪದು ನಮ್ಮ ಸಮಾಜಂದಲೇ ಅಲ್ಲದ? ಸಮಾಜವೇ ಹೊಲಸಾದರೆ ಅದರಲ್ಲಿ ಬಪ್ಪ ರಾಜಕಾರಣಿಗಳೂ ಅದೇ ರೀತಿ ಇಕ್ಕಷ್ಟೆ. ಸಮಾಜಲ್ಲಿ ವ್ಯಕ್ತಿತ್ವ ನಿರ್ಮಾಣದ ವ್ಯವಸ್ಥೆ ಸರಿ ಇದ್ದರೆ ಮಾಂತ್ರ ಉತ್ತಮ ನೇತೃತ್ವ/ನೇತಾರರು ತಯಾರಕ್ಕು.

  ರಾಜಕೀಯಕ್ಕೆ `ರಾಜನೀತಿ’ ಹೇಳಿ ಹೇಳ್ತವು. ಆದರೆ ಆ `ನೀತಿ’ ಯ ಅರಿವು (ಸಾಮಾನ್ಯ ಜ್ಞಾನ) ನಮ್ಮ ಸುಶಿಕ್ಷಿತ ಸಮಾಜಕ್ಕುದೆ ಬೇಕು.

  ರಾಜಕೀಯ ವ್ಯವಸ್ಥೆಯ ಬಗ್ಗೆ ನಮ್ಮ ಸಮಾಜಲ್ಲಿಯೇ (ಹವ್ಯಕರಿಂಗೆ) ಬಹಳಷ್ಟು ಜನಂಗೊಕ್ಕೆ ಗೊಂತಿರ. ಹಾಂಗಾಗಿ ಕೆಲವು ಸರ್ತಿ ನಾವು ರಾಜಕೀಯ ವ್ಯವಸ್ಥೆಯ ಬಗ್ಗೆ ಗೊಂತಿಲ್ಲದ್ದೆ ಅನವಶ್ಯಕ ಟೀಕೆ ಮಾಡುವದಿದ್ದು.
  ಗ್ರಾಮ ಪಂಚಾಯ್ತು, ಜಿಲ್ಲಾ ಪಂಚಾಯತು, ಬ್ಲೋಕು, ವಿಧಾನ ಸಭೆ, ವಿಧಾನಪರಿಷತ್ತು, ಎಮ್ ಎಲ್ ಎ, ಎಮ್ ಎಲ್ ಸಿ– ಹೀಂಗೆ ಹೇಳಿರೆ ಎಂತ ವ್ಯತ್ಯಾಸ ಹೇಳಿಯೂ ಗೊಂತಿರ.

  ಹೀಂಗಿಪ್ಪ ವಿಷಯಂಗಳ ಬಗ್ಗೆ ನಮ್ಮ ಬೈಲಿಲ್ಲಿಯೇ ಗೊಂತಿಪ್ಪವು ಶುದ್ದಿ ಹೇಳಿರೆ ಒಳ್ಳೆದು.

  [Reply]

  VN:F [1.9.22_1171]
  Rating: 0 (from 0 votes)
 4. ಶ್ರೀಹರ್ಷ ಭಟ್ (ಸಾಹಸಿ)

  ಮುಕ್ಕೊ ಮಂತ್ರಿ ! ತಿನ್ನೋ ಮಂತ್ರಿ ! ನೆಕ್ಕೋಮಂತ್ರಿ ಹೇಳಿ ಮೂರು ವಿಭಾಗ
  ಮುಕ್ಕೋ ಮಂತ್ರಿ ಒಬ್ಬನೇ
  ತಿನ್ನೋಮಂತ್ರಿಗೊ ಸಾಮಾನ್ಯವಾಗಿ ೫-೭
  ಬಾಕಿ ಒಳುದ ೨೦-೨೫ ನೆಕ್ಕೋಮಂತ್ರಿಗೊ…!

  ಪ್ರಜಾಪ್ರಭುತ್ವ ಬಂದಮೇಲೆ ನಿಜವಾದ executive power ಆಡಳಿತ ಅಡಿಕಾರಿಗಳಕೈಲಿ ಇಪ್ಪದು.
  ಬ್ರಾಹ್ಮಣರಿಂಗೆ ರಾಜಕೀಯಲ್ಲಿ ಜಾತಿ ಬಂದಮೇಲೆ ಅಧಿಕಾರ ಇಲ್ಲೆ.
  ಮೀಸಲಾತಿ ಬಂದಮೇಲೆ ಸರಕಾರಿ ಅಧಿಕಾರಊಇಲ್ಲೆ.

  ಸಾಧ್ಯ ಇದ್ದರೆ ನಮ್ಮ ಮಕ್ಕಳ ನಾವು I.A.S,I.P.S, I.R.S ಇತ್ಯಾದಿ ನಿಜ ಅಧಿಕಾರ ಇಪ್ಪ ಹುದ್ದೆಗೊಕ್ಕೆ ತಯಾರುಮಾದೆಕ್ಕು.

  ಜಾತಿ ರಾಜಕೀಯಲ್ಲಿ ಅಧಿಕಾರ ಹಿಡಿವ ಸಾಮರ್ಥ್ಯ ಹಣಬಲ ಇಪ್ಪವಂಗೆ ಮಾಂತ್ರ ಎಡಿಗು.

  ಅಡಿಕಾರಿ ಅಪ್ಪಲೆ ಬುದ್ದಿಬಲ ಸಾಕು.

  [Reply]

  VA:F [1.9.22_1171]
  Rating: +1 (from 1 vote)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ರಾಜಕಾರಣ ಪ್ರಾಮಾಣಿಕವಾಗಿ ಒಳುದ್ದಿಲೆ. ಪ್ರತಿಯೊಂದು ಪಕ್ಷವೂ ಹೇಂಗೆ ಜೆನಂಗಳ ಮರುಳು ಮಾಡಿ ಓಟು ತೆಕ್ಕೊಂಬದು ಹೇಳಿ ನೋತ ಹಾಕುದಲ್ಲದ್ದೆ ಜನಪರ ಕಾಳಜಿ ಇರ್ತಿಲೆ.
  ಆನಿಪ್ಪ ಏರಿಯಲ್ಲಿ ( ಬೆಂಗಳೂರು) ಹಲವು ದಿಕ್ಕೆ ಪ್ರತಿ ವರ್ಷವೂ ನೀರಿಂಗೆ ತತ್ವಾರ . ಬೋರ್ ವೆಲ್ ನೀರು ತರ್ಸಿಗೊಂಬದು. ಈ ವರ್ಷ, ಸುಮಾರು ಏರಿಯಲ್ಲಿ ಪಕ್ಷದ ವತಿಂದ ನೀರು ಸರಬರಾಜು ಮಾಡ್ತಾ ಇದ್ದವು. ದಿನಕ್ಕೆ ಎರಡು ಸರ್ತಿ ಹಾಕಿದರೂ ೫೦೦ ರುಪಾಯಿ ಬೇಕು. ಇಲೆಕ್ಷನ್ ಇಲ್ಲದೆ ಇರ್ತಿದ್ದರೆ ಹೀಂಗೆ ಸರಬರಾಜು ಆವುತಿತ್ತೋ, ಕಾಳಜಿ ಇರ್ತಿತ್ತೋ..? ಎಲ್ಲ ಕಲ್ತವೇ ಇಪ್ಪ ಏರಿಯ. ಇವಕ್ಕೆ ರಾಜಕೀಯದ ಬಗ್ಗೆ, ನಮ್ಮ ಹಕ್ಕಿನ ಬಗ್ಗೆ, ನಮ್ಮ ಕರ್ತವ್ಯದ ಬಗ್ಗೆ ಯೇವಾಗ ಮನವರಿಕೆ ಬಕ್ಕೋ..?
  ಪ್ರತಿಯೊಬ್ಬನೂ ವೋಟು ಕೇಳುಲೆ ಬಪ್ಪ ಅಭ್ಯರ್ಥಿಯ ಪ್ರಶ್ನೆ ಮಾಡೆಕ್ಕು ” ನಿನಗೆ ಯಾವ ಕಾರಣಕ್ಕಾಗಿ ಆನು ವೋಟು ಹಾಕೆಕ್ಕು” ಹೇಳಿ. ಪ್ರತಿಯೊಬ್ಬನೂ ಉತ್ತರ ಕೊಡೆಕ್ಕು. ಇದುವೇ ಎಲ್ಲ ದಿಕ್ಕೆ ಮುಂದುವರಿದರೆ, ಅಭ್ಯರ್ಥಿಗೊ ವೋಟು ಕೇಳುಲೆ ಬರೆಕ್ಕಾರೆ ಮದಲು ಜೆನರೊಟ್ಟಿಂಗೆ “ಸಂವಾದ”ರೂಪ ಪಡೆಗು ಹೇಳ್ವದು ಎನ್ನ ದೂರಾಲೋಚನೆ. ನವಗೂ , ಅಭ್ಯರ್ಥಿಗೊಕ್ಕೂ ಸರಿಯಾದ ಜೆವಾಬುದಾರಿಯ ಅರ್ಥ ಅಕ್ಕು.
  ನಾವು ಆಶಾವದಿಗೊ ಆಯೆಕ್ಕು ಅಲ್ಲದೊ..?

  [Reply]

  VN:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘು ಮುಳಿಯ

  ಮುಕ್ಕಾಲುವಾಶಿ ರಾಜಕಾರಣಿಗೊ ಸ೦ವಾದ ಬಿಡಿ,ಸರಿ ಮಾತಾಡ್ಲೆ ಗೊ೦ತಿಲ್ಲದ್ದವು ನಮ್ಮ ಪ್ರತಿನಿಧಿಸುವ ನಾಯಕ೦ಗೊ. ಇನ್ನು ಪಕ್ಷ೦ಗಳ ನಡೆ ಧೋರಣೆಗೊ ನೀರಿನ ಮೇಲೆ ಬರದ ಚಿತ್ರದ ಹಾ೦ಗೆ !
  ನಮ್ಮ ಯೋಚನೆ ಬದಲ್ಸೆಕ್ಕು.ಮತದಾನದ ದಿನ ತಪ್ಪದ್ದೆ ಹೋಗಿ ನಮ್ಮ ಕರ್ತವ್ಯವ ಮಾಡೆಕ್ಕು.ಅರ್ಹ ಅಭ್ಯರ್ಥಿಗೆ ವೋಟು ಹಾಕೆಕ್ಕು.
  ಇ೦ದು ಬರೀ ನಲ್ವತ್ತು ಶೇಕಡಾ ಮತದಾನ ಅಪ್ಪದು,ಅದರ್ಲಿ ಮೂವತ್ತು ಶೇಕಡಾ ವೋಟು ಸಿಕ್ಕಿದವ ಹೋಗಿ ಪೀಠಭದ್ರ ಅಪ್ಪದು !

  [Reply]

  VA:F [1.9.22_1171]
  Rating: 0 (from 0 votes)
 7. ರಾಮಚಂದ್ರ ಮಾವ°
  aramachandrabhat

  aadalitada chukkaaniye raajakaaranigala kaili heli ippaaga raajakiya holasu beda helule aavuttille. ningo helida vichaara sari iddu. prajnaavantaraagi raajakiyalli irakku.

  [Reply]

  VA:F [1.9.22_1171]
  Rating: 0 (from 0 votes)
 8. ಮುಣ್ಚಿಕಾನ ಭಾವ

  ಈಗಾಣ ರಾಜಕೀಯ ಹೊಲಸು ಆಯಿದು. ಆದರೆ ಅದಕ್ಕೆ ಕಾರಣ ಆರು ಕೇಳಿರೆ ಉತ್ತರ “ನಾವೇ”.
  ಎಂತಗೆ ಹೇಳಿರೆ ನೋಟಿನ ಆಸೆಗೆ ವೋಟನ್ನೇ ಮಾರಿಬಿಡುವ ಜೆನಂಗೊ ಇಪ್ಪಗ ಖಂಡಿತವಾಗಿ ರಾಜಕೀಯ ಹೋಲಸು ಆಗಿಯೇ ಆವ್ತು.
  ಅದರ ಸರಿ ಮಾಡೆಕ್ಕಾರೆ “ನಾವೇ” ಪ್ರಯತ್ನ ಮಾಡೆಕ್ಕಷ್ಟೆ. ವೋಟು ಹಾಕುವಾಗ ರಜ್ಜ ಅಲೋಚನೆ ಮಾಡಿ ಹಾಕೆಕ್ಕು ವಿನ: ಸುಮ್ಮನೆ ಪಾರ್ಟಿಯ ಹೆಸರಿಳಿ ಹಾಕುಲೆ ಆಗ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಂಡಾಡಿ ಅಜ್ಜಿವಿಜಯತ್ತೆಶುದ್ದಿಕ್ಕಾರ°ದೊಡ್ಡಭಾವದೀಪಿಕಾಚೆನ್ನಬೆಟ್ಟಣ್ಣಅಜ್ಜಕಾನ ಭಾವಸರ್ಪಮಲೆ ಮಾವ°ಶೀಲಾಲಕ್ಷ್ಮೀ ಕಾಸರಗೋಡುಕೆದೂರು ಡಾಕ್ಟ್ರುಬಾವ°ಸಂಪಾದಕ°ದೊಡ್ಡಮಾವ°ಉಡುಪುಮೂಲೆ ಅಪ್ಪಚ್ಚಿಡಾಮಹೇಶಣ್ಣಸುವರ್ಣಿನೀ ಕೊಣಲೆಗೋಪಾಲಣ್ಣಹಳೆಮನೆ ಅಣ್ಣವಾಣಿ ಚಿಕ್ಕಮ್ಮಮಾಲಕ್ಕ°ಚೂರಿಬೈಲು ದೀಪಕ್ಕಅನು ಉಡುಪುಮೂಲೆದೇವಸ್ಯ ಮಾಣಿವಿನಯ ಶಂಕರ, ಚೆಕ್ಕೆಮನೆಕಳಾಯಿ ಗೀತತ್ತೆಶರ್ಮಪ್ಪಚ್ಚಿಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ