ಪಟವೂ ಕಲಾಕೃತಿಯೂ

May 6, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪಟ ಹೇಳುವದು ಸರಿಯೋ? ಅಲ್ಲ ಫಟ ಹೇಳಿ ಹೇಳೆಕೋ? ಅಥವಾ ಎರಡೂ ಸರಿಯಲ್ಲದೊ?
ಫೋಟೋ ಹೇಳುವ ಆ ಇಂಗ್ಲಿಷು ಶಬ್ದವ ಸುಲಭಕೆ ಹಾಂಗೆ ಉಚ್ಚಾರ ಮಾಡಿದ್ದದು ಹೇಳಿ ಆಲೋಚನೆ ಮಾಡಿದಿರೋ?
ಹಾ೦ಗೆ ಯೋಚಿಸಿರೆ ಫೋಟೋ ಹೇಳುವದೇ ಸರಿ ಹೇಳಿ ಅನಿಸುಗು. ಅ೦ಬಗ `ಫೋ’ಟೋ ಹೇಳಿ ಬರವದು ಸರಿಯಾದ್ದದೊ? ಆ Ph/F ಗಳ ನಮ್ಮ ಲಿಪಿಲ್ಲಿ ಬರವದು ಹೇ೦ಗೆ?! ಹೇಳಿ ಕನ್ ‘ಪ್ಯೂ’ ಶನು ಆವ್ತನ್ನೆ!

ಫೋಟೋ ಹೇಳುವದು ಫೋಟೊಗ್ರಾಫ್ ನ ಸಣ್ಣರೂಪ. ಫೋಟೋ ಹೇಳುವ ಗ್ರೀಕ್ ಮೂಲ೦ದ ಬ೦ದ ಪದಕ್ಕೆ ಬೆಣಚ್ಚು ಹೇಳಿ ಅರ್ಥ ಅಡ.
ಫೋಟೋ ಗ್ರಾಫ್- ಬೆಳಕಿನ ಬರವಣಿಗೆ. ಆದರೆ ಆ ಶಬ್ದವ ಅನುವಾದ ಮಾಡುವಗ ನಾವು ಹೇಳುವದು `ಛಾಯಾಚಿತ್ರ’ ಹೇಳಿ!! ವಿರುದ್ಧಾರ್ಥದ ಹಾ೦ಗೆ ಅನಿಸಿತ್ತೊ?
ಯಾವುದು ಸರಿ? ನೆರಳಿನ ಚಿತ್ರವೋ – ಬೆಳಕಿನ ಬರವದೋ?

ಇಷ್ಟೆಲ್ಲ ಆಲೋಚನೆ ಮಾಡುವಗ `ಕನ್ ಫ್ಯೂಸ್’ ಬಿಟ್ಟು ‘ಫ್ಯೂಸ್’ ಹೋದಾ೦ಗೆ ಆಕ್ಕು!

ಪಟ  ಹೇಳುವದು ಫೋಟೋ ಹೇಳುವದರ ಸುಲಭ ಮಾಡಿದ ಅಥವಾ ತಿರುಚಿದ ರೂಪ ಅಲ್ಲ, ಪಟ ಹೇಳಿ ಒ೦ದು ಶಬ್ದ ನಮ್ಮ ಭಾಷೆಗಳಲ್ಲಿ ಇದ್ದು.

ಪಟ–ಹೇಳಿರೆ ಎಂತದು?
ಪಟ ಹೇಳಿರೆ ವಸ್ತ್ರ ಹೇಳಿ ಅರ್ಥ. ಹಿಂದಾಣ ಕಾಲಲ್ಲಿ ಚಿತ್ರ ಬರವದು ವಸ್ತ್ರಲ್ಲಿ ಆಗಿತ್ತಿದ್ದ ಕಾರಣ ರಚಿಸಿದ ಚಿತ್ರಕ್ಕೆ ಚಿತ್ರಪಟ ಹೇಳಿ ಹೆಸರಾತು.
ಸಿನೇಮವನ್ನುದೆ ಬೆಳೀ ಪರದೆಯ ಮೇಲೆ ಕಾಂಬ ಹಾಂಗೆ ಮಾಡುವದಲ್ಲದೋ? ಹಾಂಗಾಗಿ ಸಿನೆಮಕ್ಕುದೆ ಚಿತ್ರಪಟ ಹೇಳ್ತವು. ಮರಾಠಿ ಭಾಷೆಲ್ಲಿ ಸಿನೆಮಾಕ್ಕೆ ಚಿತ್ರಪಟ ಹೇಳಿಯೇ ಹೇಳುವದು.

ಚಿತ್ರಪಟ ಹೇಳುವ ಶಬ್ದ ಚ೦ದಮಾಮ ಕಥೆಲ್ಲಿ ಓದಿ ಹೆಚ್ಚು ಗೊ೦ತಿಪ್ಪದಿದ–ರಾಜಕುಮಾರಿಯ ಸ್ವಯ೦ವರಕ್ಕೆ ಬೇಕಾಗಿ ಹಲವು ರಾಜಕುಮಾರರ ಚಿತ್ರಪಟ೦ಗಳ  ತರುಸುವದು ಹೇಳಿ. ಪುನಾ ಅದೇ ರೀತಿಗೆ (ವಿವಾಹದ ವ್ಯವಸ್ಥೆ೦ದ ಸ್ವಯ೦ವರದ ಅವಸ್ಥೆಗೆ) ಕಾಲ ಮರಳುತ್ತಾ ಇದ್ದೊ ಹೇಳಿ ತೆಕ್ಕು೦ಜೆ ಕುಮಾರಣ್ಣ ಮುಳಿಯಭಾವನತ್ರೆ ಹೇಳಿಯೊ೦ಡಿದ್ದಿದ್ದವಡ!

ಅಂತೂ ಈಗ ಪಟ ಹೇಳುವದು ಫೋಟೋ(ಗ್ರಾಫ್) ಹೇಳುವ ಅರ್ಥಲ್ಲಿ ರೂಢಿ   ಆಯಿದು.
~~
ಮೊದಲೆಲ್ಲ ಪಟ ಬರವದು, ಈಗ ಪಟ ತೆಗವದು ಹೇಳಿ ಆಯಿದು!
ಈಗ ಫಟ ತೆಗವದು ತುಂಬ ಸುಲಭ ಆಯಿದು, ಡಿಜಿಟಲ್ ಕೆಮರ ಬಂದ ಮತ್ತೆ. ಪಟಪಟನೆ ಪಟ ತೆಗವಲಾವುತ್ತು. ಅದರಲ್ಲಿ ‘ಆಟೋ’ ಎಜಸ್ಟ್ಮೆ೦ಟು ಇಪ್ಪ ಕಾರಣ ನಮ್ಮ೦ಥವರ ಆಟ ನೆಡೆತ್ತು.  ಅದಿಲ್ಲದ್ರುದೆ ಕೆಮರಲ್ಲಿ ಆಟ ಆಡುವ ಕೆಮರದಣ್ಣ೦ದ್ರು-ತಾಳ್ಮೆಲ್ಲಿ ಪಟ ತೆಗವವು- ಇನ್ನೂ ಚೆಂದಕೆ ಅದರ ಉಪಯೋಗ ಮಾಡ್ತವು.

ಈಗ ವಸ್ತ್ರಲ್ಲಿ ಬರವದು ಬೇನರು ಮಾತ್ರ. ಅದುದೆ ಕಮ್ಮಿ ಆಯಿದು. ಅದನ್ನುದೆ ಪ್ರಿ೦ಟು ಮಾಡ್ತವೀಗ. ಬೇನರುಗಳಲ್ಲಿಯುದೆ ಪಟ ಹಾಕಲೆಡಿತ್ತೀಗ.
ಗೊ೦ತಿದ್ದನ್ನೆ-ಕೆಲವು ಹೊಡಿ ನಾಯಕರು ದೊಡ್ಡ ನಾಯಕರಿ೦ಗೆ ಶುಭಾಶಯ ಹೇಳುವ ಲೆಕ್ಕಲ್ಲಿ ತನ್ನ ಪಟವನ್ನೂ ಹಾಕಿ ತಾವು ಪ್ರಸಿದ್ಧರಪ್ಪದು! ಹೀ೦ಗೆ ಹಲವರು ಬೆನರು ಕಟ್ಟಿ(ಸಿ) ಪ್ರಸಿದ್ದರು ಅಪ್ಪದು, ಮತ್ತೆ ಕೆಲವು ಜೆನ ಬೇರೆಯವರ ಬೇನರು ಹರುದು ಪ್ರಸಿದ್ದಿ ಪಡವದು. ವಿಶ್ವೇಶಭಟ್ರು ಒ೦ದರಿ ಒಬ್ಬ ಮ೦ತ್ರಿಗೆ ಎಸ್ಸೆಮ್ಮೆಸ್ಸು ಕಳುಸಿತ್ತಿದ್ದವಡ “ಹುಟ್ಟುಹಬ್ಬದ ಶುಭಾಶಯ, ನಿ೦ಗಳ ಪಟವೂ ಚೆ೦ದ ಇದ್ದು. ಆದರೆ ದಾರಿಲ್ಲಿಡೀ ನಿ೦ಗಳ ಪಟ ನೋಡ್ಲೆ ಹಿ೦ಸೆ ಆವುತ್ತು.” ಹೇಳಿ!!

ಬುದ್ಧಿ ಇಲ್ಲದ್ರುದೆ ಸುದ್ದಿಲ್ಲಿಲ್ಲದ್ರೆ ರಾಜಕಾರಣಿಗಕ್ಕೆ ಅರಜ್ಜೀವ ಆದ ಹಾ೦ಗಾವುತ್ತಡ, ಹಾ೦ಗಾಗಿ ಈ ಎಲ್ಲ ನಾಟಕ.

ಅ೦ಗಿ ಹರುದೋ, ಕತ್ತೆ ಮೆರವಣಿಗೆ ಮಾಡಿಯೋ (ಕು)ಖ್ಯಾತರಪ್ಪವರ (`ಗೂಳಿ’ಸ್ವಭಾವದವು, `ಮುಟ್ಟಾಳ’ರಾಜರ) ಬಗ್ಗೆ ಗೊ೦ತಿದ್ದನ್ನೆ ಎಲ್ಲೋರಿ೦ಗುದೆ.
ಅ೦ಥವಕ್ಕೆ ಬೇಕಾಗಿಯೇ ಹೇಳಿ ಮಾಡುಸಿದ ಹಾ೦ಗೆ ಆರೊ ಬರದು ಮಡುಗಿದ್ದವು ಒ೦ದು ಪದ್ಯವ–

ಘಟಂ ಭಿಂದ್ಯಾತ್, ಪಟಂ ಛಿ೦ದ್ಯಾತ್,
ಕುರ್ಯಾತ್ ರಾಸಭರೋಹಣಂ |
ಯೇನ ಕೇನ ಪ್ರಕಾರೇಣ
ಪ್ರಸಿದ್ಧಃ ಪುರುಷೋ ಭವೇತ್ ||

(ಕೊಡಪಾನ ಒಡದು ಹಾಕಿರಕ್ಕು, ವಸ್ತ್ರ ಹರುದರಕ್ಕು, ಕತ್ತೆ ಮೇಲೆ ಹತ್ತಿರೂ ಅಕ್ಕು. ಎಂತೆಂತ ಮಾಡಿಯಾದರೂ ದೊಡ್ಡ ಜೆನ ಆಯೆಕ್ಕು)

~

ವಸ್ತ್ರಲ್ಲಿ ಚಿತ್ರ ಅರಳಿರೆ ಅದರ ಕಲೆ ಹೇಳಿ ಹೇಳ್ತವು.
ವಸ್ತ್ರಲ್ಲಿ ಮೆತ್ತಿದ ಕಲೆಯ ಮೋಡರ್ನ್ ಆರ್ಟ ಹೇಳ್ಳಕ್ಕು.

ಕೆಲವು ಒಳ್ಳೊಳ್ಳೆ ಮೋಡರ್ನ್ ಆರ್ಟುಗಳ ಪಟ ಇಲ್ಲಿದ್ದು.

ಇದರ ಎಲ್ಲ appreciate ಮಾಡ್ಳಕ್ಕು ಆದರುದೆ-

ಸುರೂಪ ಇಪ್ಪ ಹಳೇ  ಚಿತ್ರ೦ಗಳ/ಕಲಾಕೃತಿಗಳ ಆಸ್ವಾದನೆಯ ಮಹತ್ತ್ವವೇ ಬೇರೆ. ಅದು ನಿತ್ಯನೂತನ.

ಮನುಷ್ಯನ ಎದುರು ಕೂರುಸಿ ಚೆ೦ದಕೆ ಪಟ ಬಿಡುಸುವ ಕಲಾಕಾರ೦ಗಳ ನೋಡಿದೆ ಓ ಮೊನ್ನೆ:

ಜೆನರ ಎದುರು ಕೂರ್ಸಿಯೊ೦ಡು ಕೆಲವು ಕಲಾಕಾರರು ಎಷ್ಟು ಚೆ೦ದಕೆ ಚಿತ್ರ ಬಿಡುಸುತ್ತವು!!

ಭಾವಚಿತ್ರಲ್ಲಿ ಪ್ರತ್ಯಕ್ಷವಾಗಿ ಎದುರಿಪ್ಪವನ ಮುಖಲ್ಲಿಪ್ಪ ಭಾವನೆ ಚಿತ್ರಿತ ಅಪ್ಪದು.
ಕಲಾಕಾರ ಊಹಿಸಿ ಬರದ ಚಿತ್ರಂಗಳಲ್ಲಿ/ಕಲಾಕೃತಿಗಳಲ್ಲಿ ಕಲಾಕಾರನ ಕಲ್ಪನೆಗೆ ರೂಪ ಬಪ್ಪದು.  (ಉದಾ: ದೇವರ ಪಟ, ರಾಜರ ಚಿತ್ರ, ಇತಿಹಾಸದ ಘಟನೆಗಳ ಚಿತ್ರಣ)

~

ಮನುಷ್ಯನ ವಸ್ತ್ರಲ್ಲಿ ಚಿತ್ರ ಇಲ್ಲದ್ರೆ ಬೇಜಾರಿಲ್ಲೆ. ಮನುಷ್ಯನ ಚಿತ್ರಲ್ಲಿ ವಸ್ತ್ರ ಇಲ್ಲದ್ರೆ ಅದರ ಕಲಾ-ವಿಕೃತಿ ಹೇಳಿ ಹೇಳೆಕಷ್ಟೇ.
ಪಟಲ್ಲಿ ಚಿತ್ರ ಬಿಡುಸಲಿ. ಚಿತ್ರಲ್ಲಿ ಪಟ ಬಿಟ್ಟು ಬಿಡಲಾಗ. (ಪಟ=ವಸ್ತ್ರ)

ಪಟದ ಅರ್ಥ ವಸ್ತ್ರ ಹೇಳಿಯೋ ಚಿತ್ರ ಹೇಳಿಯೋ ಎ೦ತಾರು ಇರಲಿ. ವಸ್ತ್ರ ಆದರೂ ಚಿತ್ರ ಆದರೂ
ಪಟಲ್ಲಿ ಆಕೃತಿಯೂ ಇರಲಿ. ಸಂಸ್ಕೃತಿಯೂ ಇರಲಿ!

ಪಟವೂ ಕಲಾಕೃತಿಯೂ, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಮುಳಿಯ ಭಾವ
  ರಘುಮುಳಿಯ

  ಮಹೇಶಾ,
  ಚೆ೦ದದ ಬರಹ. ವರ್ತಮಾನದ ಕೆಲವು ಸೂಕ್ಷ್ಮ೦ಗೊ ಎಡಕ್ಕಿಲಿ ಕಾಣುತ್ತಾ ಇದ್ದು.
  ಪಟ ಹೇಳುವ ಶಬ್ದ ಬಳಕೆಯೇ ಸರಿಯಲ್ಲ,ಆದರೆ ಈಗ ಬಳಕೆಲಿ ಇದ್ದು.ಸ್ವಯ೦ವರದ ಅವಸ್ಥೆ ಮತ್ತೆ ಬ೦ದ ಎಲ್ಲಾ ಲಕ್ಷಣ೦ಗಳೂ ನಮ್ಮ ಎದುರು ಇದ್ದನ್ನೆ.
  ಗೂಳಿ ಸ್ವಭಾವದ ರಾಜಕಾರಣಿಗೊಕ್ಕೂ, ವಿಕೃತಿ ಚಿತ್ರಪ್ರವೀಣ ‘ಹು’ ಸೇನ೦ಗೊಕ್ಕೂ ಸರಿಯಾದ ಸ೦ದೇಶ.

  [Reply]

  VA:F [1.9.22_1171]
  Rating: 0 (from 0 votes)
 2. ಘಟಂ ಭಿಂದ್ಯಾತ್, ಪಟಂ ಛಿ೦ದ್ಯಾತ್,…..ಪ್ರಸಿದ್ಧಃ ಪುರುಷೋ ಭವೇತ್-ಮಹೇಶಣ್ಣ ಇದರ ಓದಿಯಪ್ಪಗ ಎನಗೆ ಈ ಸುಭಾಷಿತ ನೆಂಪಾತು,
  ಸ್ಥಾನಭ್ರಷ್ಟಾ ನ ಶೋಭಂತೇ ದಂತಾಃ ಕೇಶಾಃ ನಖಾಃ ನರಾಃ
  ಇತಿ ಸಂಚಿಂತ್ಯ ಮತಿಮಾನ್ ಸ್ವಸ್ಥಾನಂ ನ ಪರಿತ್ಯಜೇತ್
  ಹೇಳಿದರೆ,
  ಸ್ಥಾನ ಕಳಕ್ಕೊಂಡವು ಯಾವತ್ತೂ ಶೋಭಿಸುತ್ತವಿಲ್ಲೆ,ಉದಾಹರಣೆ-ಉದುರಿದ ಹಲ್ಲುಗೊ,ಉದುರಿದ ತಲೆಕೂದಲು,ಕತ್ತರಿಸಿದ ಉಗುರು ಹಾಂಗೇ ಸ್ಥಾನ ಕಳಕ್ಕೊಂಡ ಮನುಷ್ಯರೂ.ಆದ್ದರಿಂದ ಎಲೈ ಮಂಡೆ ಇಪ್ಪವನೇ, ಎಂತಾದರೂ ನೀನು ನಿನ್ನ ಕುರ್ಚಿಯ ಮಾತ್ರ ಬಿಟ್ಟಿಕ್ಕಡ!!
  ಇಂದ್ರಾಣ ನಮ್ಮ ಹೆಚ್ಚಿನ ಮಂತ್ರಿಗಳೂ ಈ ಸುಭಾಷಿತವ ಮಹೇಶಣ್ಣನ ಹತ್ರೆ ಕಲ್ತಿಕ್ಕಿಯೇ ಮೇಲೆ ಹೋದ್ದದೋ ಹೇಳಿ!!

  [Reply]

  VN:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನೆರಳು ಬೆಳಕಿನ ಆಟ, ಇದರೊಟ್ಟಿಂಗೆ ನಮ್ಮ ಭಾಷೆಲಿ “ಪಟ” ಶಬ್ದಕ್ಕೆ ಇಪ್ಪ ಅರ್ಥ, ರಾಜಕಾರಿಣಿಗೊ ಪಟ ಹಾಕಿಯೇ ದೊಡ್ಡ ಜೆನ ಹೇಳ್ಸಿಗೊಂಬದು, ಎಲ್ಲವೂ ಚೊಕ್ಕಕೆ ಬಯಿಂದು ಲೇಖನಲ್ಲಿ.
  [ಪಟಲ್ಲಿ ಆಕೃತಿಯೂ ಇರಲಿ. ಸಂಸ್ಕೃತಿಯೂ ಇರಲಿ!]-ಒಳ್ಳೆ ಆಶಯ. ಚಿತ್ರ ಬಿಡುಸುವದು ಹೇಳಿ, ಹಿಂದೂ ದೇವತೆಗೊಕ್ಕೆ ಅವಮಾನ ಮಾಡಿದ ಉದಾಹರಣೆಗೊ ಬೇಕಾಷ್ಟು ಇದ್ದು. ಇದು ಸಂಸ್ಕೃತಿ ಇಲ್ಲದ್ದವು ಮಾಡುವ ಕೆಲಸಂಗೊ.
  ಆಕೃತಿಲಿ ಸಂಸ್ಕೃತಿಯೂ ಇದ್ದರೇನೆ ಆರಾಧನೆ, ಇಲ್ಲದ್ದರೆ ಅದರ ತಿರಸ್ಕಾರ ಮಾಡ್ಲೇ ಬೇಕು.
  ಮದುವೆಲಿ ಮದುಮ್ಮಾಯ-ಮದುಮಾಳಿಂಗೆ ಅಡ್ಡ ಹಿಡಿವ ವಸ್ತ್ರಕ್ಕೆ ಅಂತರ್ಪಟ ಹೇಳಿಯೂ ಹೇಳ್ತವು.

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಮಾವ

  ಪಟದ ಬಗೆಲಿ ಒಳ್ಳೆ ಲೇಖನ. ಅಂದ್ರಾಣ ಸುಭಾಷಿತ ಇಂದ್ರಾಣ ಕಾಲಕ್ಕೆ ಎಷ್ಟು ಚೆಂದಕೆ ಹೊಂದಿ ಕೊಳ್ಳುತ್ತು ನೋಡಿ. ಅಂತೂ ಇಂತೂ ಎಂತಾರು ಮಾಡಿ ದೊಡ್ಡ ಜೆನ ಆಯೆಕು. ಪೇಪರಿಲ್ಲಿ ಪಟ ಬರೆಕು. ವಸ್ತ್ರಲ್ಲಿ ಮೆತ್ತಿದ ಕಲೆ, ಮೋಡರ್ನ್ ಆರ್ಟು. ಸರಿಯಾಗಿ ಹೇಳಿದೆ. ಕಡೆಣ ಒಪ್ಪ ಲಾಯಕಾಯಿದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಎರುಂಬು ಅಪ್ಪಚ್ಚಿಪಟಿಕಲ್ಲಪ್ಪಚ್ಚಿಅನು ಉಡುಪುಮೂಲೆಮುಳಿಯ ಭಾವಸುಭಗಪುಟ್ಟಬಾವ°ಯೇನಂಕೂಡ್ಳು ಅಣ್ಣಪುತ್ತೂರಿನ ಪುಟ್ಟಕ್ಕಕಜೆವಸಂತ°ಮಾಲಕ್ಕ°ತೆಕ್ಕುಂಜ ಕುಮಾರ ಮಾವ°ಅಡ್ಕತ್ತಿಮಾರುಮಾವ°ಹಳೆಮನೆ ಅಣ್ಣಅನುಶ್ರೀ ಬಂಡಾಡಿಪವನಜಮಾವಬೋಸ ಬಾವಅಜ್ಜಕಾನ ಭಾವವಿಜಯತ್ತೆಅಕ್ಷರದಣ್ಣಬೊಳುಂಬು ಮಾವ°ಚೆನ್ನೈ ಬಾವ°ವೇಣಿಯಕ್ಕ°ಕೊಳಚ್ಚಿಪ್ಪು ಬಾವಶೇಡಿಗುಮ್ಮೆ ಪುಳ್ಳಿವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ