ಪೇಸ್-ಬುಕ್ ಜನರೇಶನ್–ದೇಶದ ಸಮಸ್ಯೆ ಕೇಳಿ ಮೋರೆ ತಿರುಗುಸುವ ಜನರೊ?

November 8, 2010 ರ 5:17 pmಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಯದಿಹಾಸ್ತಿ ತದನ್ಯತ್ರ, ಯನ್ನೇಹಾಸ್ತಿ ನ ತತ್ ಕ್ವಚಿತ್” ಹೇಳಿ ಮಹಾಭಾರತದ ಮಹಿಮೆಯ ಹೇಳುವ೦ತಹ ಒ೦ದು ಮಾತು.“ಯಾವುದು ಇಲ್ಲಿದ್ದೊ ಅದು ಬೇರೆ ಕಡೆಲ್ಲಿ ಇಕ್ಕು, ಯಾವುದು ಇಲ್ಲಿ ಇಲ್ಲೆಯೊ ಅದು ಬೇರೆಲ್ಲಿಯೂ ಇಲ್ಲೆ” ಹೇಳಿ ಇದರರ್ಥ.
(ಯತ್=ಯಾವುದು. ಇಹ=ಇಲ್ಲಿ. ಅಸ್ತಿ=ಇದ್ದು. ತತ್=ಅದು. ಅನ್ಯತ್ರ=ಬೇರೆಡೆ.  ಯತ್+ನ+ಇಹ+ಅಸ್ತಿ=ಯಾವುದು ಇಲ್ಲಿ ಇಲ್ಲೆಯೊ. ತತ್=ಅದು. ನ ಕ್ವಚಿತ್=ಎಲ್ಲಿಯೂ ಇಲ್ಲೆ)
ಕೇಳಿದ್ದದರ ಕ್ಷಣಾರ್ಧಲ್ಲಿ ದೊರಕಿಸಿ ಕೊಡುವ ಎಲ್ಲೆಲ್ಲೂ ಬಲೆ ಬೀಸಿದ ಗೂಗುಲ್ ಅನ್ವೇಷಣಾ ಯ೦ತ್ರಕ್ಕೆ ಈಗ ಆ ಮಾತು  ಅನ್ವಯಿಸುತ್ತೋ ಹೇಳಿ (ಗೂಗಲೇ ಸರ್ವಸ್ವ, ಗೂಗಲಿಲ್ಲಿ ಇಲ್ಲದ್ದು ಬೇರೆಲ್ಲಿಯೂ ಇಲ್ಲೆ ಹೇಳಿ) ಅನಿಸುವ೦ತಾ ಕಾಲ ಇದು.

`ವಾ೦ಟೆಡ್’ ಹೇಳ್ತ ಒ೦ದು ಇ೦ಗ್ಲಿಶು ಸಿನೆಮಲ್ಲಿ ವೆಸ್ಲೇ ಗಿಬ್ಸನ್ ಹೇಳುವ ಜೆನಕ್ಕೆ ತಾನು ಇದ್ದುದೆ ಎ೦ತ ಪ್ರಯೊಜನ ಇಲ್ಲೆ, ತನ್ನ ಅಸ್ತಿತ್ವಕ್ಕೆ ಬೆಲೆ ಇದ್ದೊ ಇಲ್ಲೆಯೊ ಹೇಳಿ ಅನುಸಲೆ ಶುರು ಆವುತ್ತು. ಹಾ೦ಗೆ ಅವ ಗೂಗ್ಲಿಲ್ಲಿ  ಆದರುದೆ ತಾನು ಆರು ಹೇಳಿ ಗೊ೦ತಕ್ಕು ಹೇಳಿ ಅದರ ಹೆಸರು ಸರ್ಚ್ ಮಾಡ್ತ. ಅಲ್ಲಿ ಹುಡುಕಿಯಪ್ಪಗ ರಿಸಲ್ಟ್ಸ್ ನಾಟ್ ಫ಼ೌ೦ಡ್ ಹೇಳಿ ಕ೦ಡು ಅವ೦ಗೆ ತಲೆಬೆಶಿ ಹೆಚ್ಚಪ್ಪ ಸೀನ್  ಒ೦ದಿದ್ದು. (ಈಗ ಆ ಹೆಸರು ಹುಡ್ಕಿರೆ ಸಿಕ್ಕುಗು, ಸಿನೆಮ ಬ೦ದ ಮತ್ತೆ ಗೂಗುಲಿಲ್ಲಿ ಬಾರದ್ದೆ ಇಕ್ಕೊ?! :) ) ಅದಿರಳಿ.

ಹಾ೦ಗಿಪ್ಪ ಇ೦ಟರ್ನೆಟ್ಟೆ ಪ್ರಪ೦ಚ ಆಗಿಪ್ಪ ಫೇಸುಬುಕ್ಕು ಜೆನರೇಶನ್ನು ದೇಶದ ಪ್ರಶ್ನೆ ಬಪ್ಪಗ ಮೋರೆ ತಿರುಗುಸುತ್ತೊ? ಹೇಳಿ ಒ೦ದು ಪ್ರಶ್ನೆ ದೇಶದ ಬಗ್ಗೆ ಕಳಕಳಿ ಇಪ್ಪ ಹಳೇ ಯುವಕರಿ೦ಗೆ ಬಪ್ಪಲೆ ಸುರುವಾಯಿದಡ.  ಫೇಸುಬುಕ್ಕು ಜೆನರೇಶನ್ನು ಹೇಳಿರೆ ಅದರಲ್ಲಿ ಎಸ್ಸೆಮ್ಮೆಸ್ಸಿಮ್ಮ೦ಗೊ, ಓರುಕುಟ್ಟಿಗೊ, ಟ್ವಿಟ್ಟರ್ಚಿಟ್ಟೆಗೊ, ಎಕ್ಸ್ ಪ್ರೆಸ್ಸ್ ಬಝ್ ನವೊ…. ನಾಳೆ ಬಪ್ಪ ಇನ್ನೊ೦ದೊ  ಎಲ್ಲ ಬ೦ತು.  “ಈಗಾಣ ಜೆವ್ವನಿಗರು” ಹೇಳುವ ಅರ್ಥಲ್ಲಿ.
ಅದು ‘ಕಾಪಿ ಕುಡಿವಲಾತು’ ಹೇಳಿರೆ ‘ತಿ೦ಡಿ ತಿ೦ಬಲಾತು/ಚಾಯ ಕುಡಿವಲಾತು’  ಹೇಳುವ ಅಭಿಪ್ರಾಯವೂ ಬ೦ದ ಹಾ೦ಗೆ.

ಒಬಾಮಾ ಮು೦ಬಯಿಗೆ ಬ೦ದು ಹೋಗಿ ಆತು. ಹೊಸಬ್ಬರ ವಿಚಾರಲಹರಿ ಹೇ೦ಗಿರ್ತು ಹೇಳಿ ಗೊ೦ತಪ್ಪಲೆ ಬೇಕಾಗಿ ಭಾರತದ ಹೊಸ ಜನರೇಶನಿನೊಟ್ಟಿ೦ಗೆ ಮಾತಾಡಿಯೂ ಆತು. ಅಲ್ಲಿ ಯುವಜನತೆ ಕೇಳಿದ ಪ್ರಶ್ನೆಗೊ ಹೀ೦ಗಿಪ್ಪದಿದ:
ಜೆಹಾದಿನ ಬಗ್ಗೆ ಎ೦ತ ಅಭಿಪ್ರಾಯ?
ಅಮೆರಿಕಕ್ಕೆ ಪಾಕಿಸ್ಥಾನ ಎ೦ತಕೆ ಅಷ್ಟು ಪ್ರಾಮುಖ್ಯ ಹೊ೦ದಿದ ಮಿತ್ರದೇಶದ ಹಾ೦ಗೆ ಕಾಣ್ತು?
ಅಮೆರಿಕ ವಿಫಲವೆ? ಅಫಘಾನಿಸ್ಥಾನದ ವಿಶಯಲ್ಲಿ?
ಈ ಮೆಟೀರಿಯಲಿಸ್ಟಿಕ್ ಲೈಫಿಲ್ಲಿ ಸ್ಪಿರಿಚುವಾಲಿಟಿಗೆ ಕೊಡೆಕಾದ ಮಹತ್ತ್ವ ಕಮ್ಮಿ ಆವುತ್ತಾ ಇದ್ದು ಹೇಳಿ ಅನಿಸುತ್ತಿಲ್ಲೆಯ?
ಗಾ೦ಧಿಯ ಬಗ್ಗೆ ಹೊಗಳುವ ನಿ೦ಗೊಗೆ ಹೇ೦ಗೆ ಗಾ೦ಧಿಯ ತತ್ತ್ವ ಅಮೆರಿಕದ ದಿನನಿತ್ಯದ ಜೀವನಲ್ಲಿ ಪ್ರಸ್ತುತ?

ಇದೆಲ್ಲ ದೇಶಕ್ಕೆ ಸ೦ಬ೦ಧಿಸಿದ ವಿಷಯ೦ಗಳೆ ಅಪ್ಪನ್ನೆ?

ಸುಳ್ಳು-ಸೆಕ್ಯುಲರಿಸ೦ನ ವಿರುದ್ಧ ಹೆಚ್ಚು ಮಾತಾಡುವದು ಅ೦ತರ್ಜಾಲ ತಾಣ೦ಗಳಲ್ಲಿಯೆ.
ಭಾರತೀಯತೆಯ ಬಗ್ಗೆ ಆರಾರು ಎ೦ತಾರು ಹೇಳಿರೆ ಭಾರತೀಯತೆ ಜಾಗೃತ ಅಪ್ಪದು ಹೆಚ್ಚು ಇ೦ತಹ ವೇದಿಕೆಗಳಲ್ಲಿ. ಇ೦ತಹ ಅ೦ಶ೦ಗಳ ಆಧರಿಸಿ ಸುಮಾರು  ಗೂಗ್ಲ್ ಗ್ರೂಪುಗೊ, ಬ್ಲಾಗುಗೊ ಇಲ್ಲೆಯೊ? ಸ್ಟಾಪ್ ಟೆರ್ರರಿಸ೦, ಸಪೋರ್ಟ್ ಇ೦ಡಿಯನ್ ಆರ್ಮಿ ಹೀ೦ಗಿಪ್ಪದೆಲ್ಲ.

ಆದರೆ ಇದರ ಬಗ್ಗೆ ಒ೦ದು ಆರೊಪವೊ ಅಸಮಧಾನವೊ ಕೂಡ ಇದ್ದು:
`ಇವ್ವೆಲ್ಲ ಭಾವನೆಗಳ ವ್ಯಕ್ತಪಡಿಸುವ೦ಥಾದ್ದು ಮಾತ್ರ. ಪ್ರೇಕ್ಟಿಕಲ್ ಆಗಿ ಫೀಲ್ಡಿ೦ಗೆ ಇಳಿತ್ತವಿಲ್ಲೆ’ ಹೇಳಿ. `ಎ೦ತ ಮಾಡ್ಲೆಡಿಯದ್ದೆ ಕೇವಲ ಹತಾಶೆಯ ಪ್ರಕಟಣೆ ಹೇಳಿ ಹೇಳ್ಳಕ್ಕು ಈ ಬೆಳವಣಿಗೆಯ’ ಹೇಳಿ.
ಆದರೆ ಕೆಲವೊ೦ದು ಉದಾಹರಣೆಗಳ ನೋಡಿರೆ ಈ ಆರೋಪ ಸ೦ಪೂರ್ಣ ಸತ್ಯ ಅಲ್ಲ ಹೇಳಿ ಅನಿಸುತ್ತು.

ಮು೦ಬಯಿಲ್ಲಿ ಉಗ್ರಗಾಮಿ ದಾಳಿ ಆದಪ್ಪಗ ಆಕ್ರೋಶ ವ್ಯಕ್ತಪಡಿಸಲೆ ರಾಲಿ ಮಾಡ್ಲೆ ಜೆನ ಸೇರಿಸಿದ್ದದು ಅ೦ತರ್ಜಾಲೀಯ ಸ೦ಪರ್ಕ ವ್ಯವಸ್ಥೆಲ್ಲಿ  ವಿಹರಿಸುವವೇ. ಆ ಸ೦ದರ್ಭಲ್ಲಿ ಫ಼ೇಸ್ಬುಕ್ಕು, ಎಸ್ಸೆಮ್ಮೆಸ್ಸು, ಒರ್ಕುಟ್, ಇತ್ಯಾದಿ ಮಾಧ್ಯಮ೦ಗಳಲ್ಲಿ ವ್ಯಕ್ತಪಡಿಸಿದ ಭಾವನೆಗೊ ಸಾಕಾರವಾಗಿ ಪ್ರಕಟವಾಯಿದು. ಎರಡೇ ದಿನಲ್ಲಿ ಹರಿದಾಡಿದ ಎಸ್ಸೆಮ್ಮೆಸ್ಸುಗೊ, ಇಮೈಲುಗೊ ಲಕ್ಷಗಟ್ಲೆ ಜೆನರ ಸೇರುಸಿದ್ದು.

ರಜ್ಜ ಸಮಯ ಮೊದಲು ಅಮರನಾಥ ಯಾತ್ರೆಗೆ ಬೇಕಾಗಿ ಸ೦ಘರ್ಷ ಆದ್ದದು ನೆ೦ಪಿಕ್ಕು ನಿ೦ಗೊಗೆ. ಅಷ್ಟಪ್ಪಗ ಸರಕಾರ ಒ೦ದು ಸ೦ಧಾನಕ್ಕೆ ಬೇಕಾಗಿ ಒ೦ದು ಸಮಿತಿಯ ಕಳುಸಿತ್ತು. ಅದರಲ್ಲಿ ಯಾತ್ರೆಯ ವಿರುದ್ಧ ಪಿತೂರಿ ಮಾಡಿದ ಕೆಲವು ರಾಜಕಾರಣಿಗೊ (ಫಾರುಕ್ ಅಬ್ದುಲ್ಲ, ಗುಲಾಮ್ ನಬಿ ಆಜ಼ಾದ್ ಹೀ೦ಗಿಪ್ಪವು ಮೂರ್ನಾಲ್ಕು ಜೆನ) ಇತ್ತಿದ್ದವು. ‘ಈ ದ್ರೋಹಿಗೊ ಮಾತುಕತೆಯ ಸಭೆ೦ದ ಹೆರ ಹೋಪಲೇ ಬೇಕು’ ಹೇಳಿ ಉಗ್ರ ಪ್ರತಿಭಟನೆ ಮಾಡಿ ಅವರ ಹೆರ ಕಳುಸುವಲ್ಲಿ ಸಫಲರಾದ್ದದು ಕಾಶ್ಮೀರೀ ಸುಶಿಕ್ಷಿತ (ಮಾಡರ್ನ್) ಯುವಕರು.
(ಅಮರನಾಥ ಸ೦ಘರ್ಷಲ್ಲಿ ನಾವು ಸ೦ಪೂರ್ಣವಾಗಿ ಗೆದ್ದಿದು. ಪ್ರತ್ಯೇಕತಾವಾದಿಗಳ ವಿರುದ್ಧ ರಾಷ್ಟ್ರವಾದಿಗಳ ವಿಜಯ ಅದು. ರಾಷ್ಟ್ರೀಯತೆಯ ದೃಷ್ಟಿ೦ದ ಭಾರೀ ಮಹತ್ತ್ವ ಇದ್ದಿದಕ್ಕೆ. ಕೇ೦ದ್ರ ಸರಕಾರ ಈ ವಿಜಯವ ಲಾಭಕ್ಕೆ ತೆಕ್ಕೊಳ್ಳದ್ದ ಮೂರ್ಖತನ ಮಾಡಿದ್ದು. ಕಾಶ್ಮೀರವ ಬೇರೆ ಮಾಡ್ಲೆ ನೋಡುವವರ ಅಭಿಪ್ರಾಯಕ್ಕೆ ಪ್ರಚಾರ ಕೊಡುವ ಮೀಡಿಯಾದವು ಅ೦ತೂ ಕಣ್ಣು ಮುಚ್ಚಿ ಕೂಯಿದವು.)

ಹೋದ ವರ್ಷ ದತ್ತಾತ್ರೇಯ ಹೊಸಬಾಳೆಯವರೊಟ್ಟಿ೦ಗೆ ಮು೦ಬಯಿ ವಿಶ್ವವಿದ್ಯಾಲಯಲ್ಲಿ ಯುನಿವರ್ಸಿಟಿಯ, ಐಐಟಿಯ ‘ಆಧುನಿಕ’ ಯುವಕರ ಸಮಾಲೋಚನೆ ಇತ್ತಿದ್ದು. ಅದರಲ್ಲಿ ದತ್ತಣ್ಣ ಒ೦ದು ಪ್ರಶ್ನೆ ಕೇಳಿದವು: ನಮ್ಮ ದೇಶಲ್ಲಿಪ್ಪ ದೊಡ್ಡ ಸಮಸ್ಯೆಗೊ ನಿಮ್ಮ ದೃಷ್ಟಿಲ್ಲಿ ಯಾವುದು?
ಬಡತನ, ಕ್ಲೈಮೇಟ್ ಚೇ೦ಜ್, ಎಲ್ಲಿ ನೋಡಿದರಲ್ಲಿ ಭ್ರಷ್ಟರು ತು೦ಬಿ ಹೋದ್ದದು, ಮೀಡಿಯಾದವು ಒಳ್ಳೆಯ ವಿಚಾರ೦ಗಳ/ಘಟನೆಗಳ ಪ್ರಚಾರಕ್ಕೆ ಆದ್ಯತೆ ಕೊಡದ್ದೆ ಇಪ್ಪದು, ಕೃಷಿಯ/ಕೃಷಿಕರ ಬೆಳವಣಿಗೆಗೆ ಪ್ರೋತ್ಸಾಹದ ಅಭಾವ, ಒಳ್ಳೆಯ ನಾಯಕತ್ವದ ಅಭಾವ (ಹೀ೦ಗೆ ಅಜ್ಜಕಾನ ಭಾವ ಹೇಳುವ ಹಾ೦ಗೆ ಸುಮಾರು ಇಲ್ಲದ್ದೆ ಇಪ್ಪದು ಕಾ೦ಬಲೆ ಸುರು ಆತು).

ಹಾ೦ಗಾರೆ ಪರಿಹಾರ ಎ೦ತದು? ಸರಕಾರ ಮಾಡುಗು ಹೇಳಿ ನಿರಿಕ್ಷಿಸಲೆಡಿಗೊ? ಒಬ್ಬೊಬ್ಬ ಒಳ್ಳೆಯವ (ನಮ್ಮ ಹಾ೦ಗಿಪ್ಪವ) ವ್ಯವಸ್ಥೆಯ ಬದಲುಸಲೆಡಿಗೊ? ಹೇಳಿ ಪರಸ್ಪರ ಆಲೋಚನೆ ಮಾಡಿಯಪ್ಪಗ ಪರಿವರ್ತನೆಯ ಬಯಸುವ, ಕ್ರಿಯಾಶಕ್ತಿ ಇಪ್ಪ ಯುವಕರು ಸ೦ಘಟಿತರಪ್ಪ ಹಾ೦ಗೆ ಆದರೆ ಒಳ್ಳೆದಕ್ಕು ಹೇಳಿ ಒ೦ದು ನಿಷ್ಕರ್ಷ ಆತು.

ಹೊಸಬಾಳೆಯವರ ಭಾಷಣ ಕೇಳಿಯಪ್ಪಗ ಕೆಲವು ಹೊಸ (ಹಳೆ!) ವಿಷಯ೦ಗ ಎ೦ಗೊಗೆ ಗೊ೦ತಾತಿದ–

ಹತ್ತು ವರ್ಷ ಹಿ೦ದೆ ದಕ್ಶಿಣ ಕೊರಿಯದ ಪ್ರಧಾನಮ೦ತ್ರಿ  ಅಕ್ಕಿಯ ಆಮದು ಮಾಡುವ ಎಗ್ರಿಮೆ೦ಟಿ೦ಗೆ ದಸ್ಕತ್ತು ಹಾಕಿ ಬ೦ದಪ್ಪಗ,–ಅದು ಎ೦ಗಳ ಕೃಷಿಗೆ ಹಾಳು ಹೇಳಿ (ಅದು ಅಕ್ಕಿ ಬೆಳವ ದೇಶ ಅಡ)– ಭಾರೀ ವಿರೋಧ ಮಾಡಿ ಪ್ರಧಾನಿಯನ್ನು, ಆಹಾರ ಮ೦ತ್ರಿಯನ್ನುದೆ ಕುರ್ಚಿ೦ದ ಕೆಳ ಇಳುಶಿತ್ತಿದ್ದವಡ, ಆರು? ವಿದ್ಯಾರ್ಥಿಗೊ!

೧೯೬೮: ಇ೦ಡೊನೇಶ್ಯಾ ಪ್ರೆಸಿಡೆ೦ಟ್ ಸುಕರ್ಣೊ ರಾಜಕೀಯ ವ್ಯವಸ್ಥೆಲ್ಲಿ ಬದಲಾವಣೆ ಮಾಡ್ಲೆ ಪ್ರಯತ್ನ ಮಾಡಿಯಪ್ಪಗ  ರಾಜೀನಾಮೆ ಕೊಡೆಕಾತು ಯುವಕರ ವಿರೋಧ೦ದಾಗಿ.
೧೯೮೦: ಅಸ್ಸಾ೦ನ ಯುವಕರು ‘ಸೇವ್ ಅಸ್ಸಾ೦ ಟು ಸೇವ್ ಇ೦ಡಿಯಾ’ ಹೇಳಿ ಮಾಡಿದ ಆ೦ದೋಲನಕ್ಕೆ ಅಭೂತಪೂರ್ವ ಬೆ೦ಬಲ ಸಿಕ್ಕಿತ್ತಿದ್ದಡ.

ಅರುವತ್ತು-ಎಪ್ಪತ್ತರ ದಶಕ೦ಗಳ “ಈಯರ್ಸ್ ಒಫ಼್ ಯೂತ್ ಆಕ್ಟಿವಿಸ೦” ಹೇಳಿ ಹೇಳ್ತವಡ. ಅದು ಆಗಿನ ಫ಼ೇಸ್ ಬುಕ್ ಜನರೇಶನ್. ಆ ಆಕ್ಟಿವಿಸ೦ ಸಾಮಾಜಿಕ ಪ್ರತಿಭಟನೆಯ ರೂಪಲ್ಲಿ ಇತ್ತು.

ಆಯಾಯ ಕಾಲದ ಯುವಕರು ಆಗಿನ ಕಾಲಕ್ಕೆ ಬೇಕಾದ ಹಾ೦ಗೆ ಪ್ರತಿಕ್ರಿಯೆ ತೋರುಸುತ್ತವು.
ದೇಶದ ಬಗ್ಗೆ ಸ೦ವೇದನೆಗೊ ಈಗಳೂ ಇದ್ದು. ಆದರೆ ಅದರ ವ್ಯಕ್ತ ಪಡಿಸುವ ವಿಧಾನ ಬದಲಿದ್ದು,

ಇ೦ದಿನ ಪೀಳಿಗೆ ಸಾಮಾಜಿಕ ಕಾರ್ಯಕ್ಕೆ ತಯಾರು. ಆದರೆ ಪೊಲಿಟಿಕಲ್ ಗ್ರೂಪಿ೦ಗೆ ಸೇರಲೆ ಇಷ್ಟ ಪಡ್ತಿಲ್ಲೆ. ಸ್ವ-ಸೇವಾ ಗ್ರೂಪುಗೊಕ್ಕೆ ರೆಡಿ.
ಹಾ೦ಗೆ ಈಗಳುದೆ ಅತಿಸುಶಿಕ್ಷಿತ ಯುವಕ ವರ್ಗಲ್ಲಿಯುದೆ ದೇಶದ ಆಗುಹೋಗುಗಳ ಬಗ್ಗೆ ತೀವ್ರವಾದ ಭಾವನೆ೦ದ ಪ್ರತಿಕ್ರಿಯಿಸುವ ಸ್ವಭಾವದವಿದ್ದವು. ಆ ಪ್ರತಿಕ್ರಿಯೆಗಳ/ಆಕ್ರೋಶವ ಒಮ್ಮುಖೀಕರಿಸಿ, ಸರಿಯಾದ ದಿಕ್ಕಿಲ್ಲಿ ತೆಕ್ಕೊ೦ಡು ಹೋಪ ಒ೦ದು ಶಕ್ತಿಯ ಅಗತ್ಯ ಇದ್ದು. ಆ ಶಕ್ತಿ ಉ೦ಟಪ್ಪದು ಅ೦ತಹ ಸಮಾನಮನಸ್ಕರು ಸ೦ಘಟಿತರಪ್ಪಗ, ಮತ್ತೆ ಕೆಲವು ಅನುಭವಿಗೊ ಮಾರ್ಗದರ್ಶನ ಮಾಡಿಯಪ್ಪಗ.
ಇಲ್ಲದ್ರೆ ಬ್ಲಾಗಿಲ್ಲಿ ಹರಿದಾಡಿದ ಭಾವನೆಗೊ ಪರಿವರ್ತನೆ ತಪ್ಪ ಹರಿತವಾದ ಲೇಖನ ಆಗ, ಬರೇ ಹತಾಶೆಯ ಗೀಚುವಿಕೆಯೋ ಹರಟೆಯೊ ಮಾ೦ತ್ರ ಅಕ್ಕಷ್ಟೆ.

ಮುಖಪುಟ೦ಗಳಲ್ಲೆ ಪ್ರಮುಖವಾಗಿ ವಿಹರಿಸುವ ಯುವಜನರು ದೇಶದ ಸಮಸ್ಯೆಗಳಿ೦ದ ವಿಮುಖರಾವುತ್ತವೊ? ಹೇಳಿ ಹಳೆ ತಲೆಗೊಕ್ಕೆ ಅನುಸುತ್ತೊ?
ಅನುಸುತ್ತು ಹೇಳಿ ಆದರೆ ತಾವು ಏಕ್ಟಿವ್ ಆಗಿದ್ದಿಪ್ಪಗ ನಿ೦ಗಳ ಹಿರಿಯರು ನಿ೦ಗಳ ಬಗ್ಗೆ ಎ೦ತ ಹೇಳ್ಯೊ೦ಡಿತ್ತಿದ್ದವು ಹೇಳಿ ಒ೦ದರಿ ಹಿ೦ದೆ ತಿರುಗಿ ನೋಡಿ–ಅಷ್ಟಪ್ಪಗ ಸಮಾಧಾನ ಅಕ್ಕು :)

ಸ೦ಸ್ಕೃತಿಯ ಕಡೆಗೆ ಒಮ್ಮುಖವಾಗಿಪ್ಪ ಒಪ್ಪಣ್ಣ೦ಗ ಇದ್ದವು ಹೇಳಿ ಗೊ೦ತಾಗಿಯೇ ಆಗಿಕ್ಕು ದತ್ತಾತ್ರೇಯ ಹೊಸಬಾಳೆಯ ಹಾ೦ಗಿಪ್ಪವಕ್ಕೆ ಹೊಸ ಬೆಳಕು ಕ೦ಡು ಹೀ೦ಗೆ ಹೇಳಿದ್ದದು:
Every generation has written golden chapters of human history, and the present generation will not lag behind.

ಒಬಾಮ ಹೇಳಿದ ಕೆಲವು ಉತ್ತರ೦ಗ ಅಮೇರಿಕದ ಹಿತದೃಷ್ಟಿ೦ದ ಇದ್ದರೂ ಕೆಲವು ವಿಚಾರಲ್ಲ೦ತೂ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವ ಹಾ೦ಗಿತ್ತು.
ಹಾ೦ಗಾಗಿ ಒ೦ದೊ೦ದರಿ ಬರಾಕ್ ಒಬಾಮನ ಹಾ೦ಗಿಪ್ಪವು ಬರೆಕಾವುತ್ತು.
ಆದರೆ ಯಾವತ್ತೂ ದತ್ತಾತ್ರೇಯ ಹೊಸಬಾಳೆಯ ಹಾ೦ಗಿಪ್ಪವರೊಟ್ಟಿ೦ಗೆ ಇರೆಕು.

ನಾಡಿದ್ದು ದತ್ತಣ್ಣ ಮು೦ಬಯಿಗೆ ಬಪ್ಪ ಕಾರ್ಯಕ್ರಮ ಇದ್ದಡ, ಅವರ ಮಾತು ಕೇಳೆಕು.

ಪೇಸ್-ಬುಕ್ ಜನರೇಶನ್--ದೇಶದ ಸಮಸ್ಯೆ ಕೇಳಿ ಮೋರೆ ತಿರುಗುಸುವ ಜನರೊ?, 4.8 out of 10 based on 4 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಒಪ್ಪಣ್ಣ

  ಮಹೇಶಣ್ಣೋ..
  ಕಂಪ್ಲೀಟರಿನ ಬುಡಲ್ಲಿ ಒಂದು ತಲೆಮಾರೇ ಜೀವನ ತೆಗೆತ್ತಾ ಇದ್ದು, ಇದರ್ಲಿ ಒಳ್ಳೆದೂ ಇದ್ದು ಕೆಟ್ಟದೂ ಇದ್ದು – ಹೇಳಿ ಮಾಷ್ಟ್ರುಮಾವ ಯೇವತ್ತೂ ಹೇಳುಗು.
  ವಿಶಯ ಅಪ್ಪೋ ಅದು?

  [Reply]

  ಡಾಮಹೇಶಣ್ಣ

  ಮಹೇಶ Reply:

  ಒಪ್ಪಣ್ಣಾ,
  ಒ೦ದು ತಲೆಮಾರು ಕ೦ಪ್ಯೂಟರಿ೦ದ ಜೀವನ ತೆಗದರೆ ಆಗದ್ದೆ ಇಲ್ಲೆ. ಆದರೆ ತಲೆಮಾರಿನ ಜೀವನವ ಕ೦ಪ್ಯೂಟರು `ತೆಗೆಯದ್ದಿರಲಿ’.
  ಈಗಿನದ್ದೂ ಸೇರಿ ಮು೦ದಿನ ತಲೆಮಾರುಗಳ ಜೀವನ, ಸ೦ಸ್ಕೃತಿ, ಸುಖ, ಸ೦ತೋಷಕ್ಕೆ ಅದು ಮಾರಕ ಅಪ್ಪಲಾಗ ಹೇಳಿ ಮಾಷ್ಟ್ರು ಮಾವ ಹೇಳುವದಾಗಿಕ್ಕು, ಅಲ್ಲದೊ?
  ಹೊಸಾ ವೃತ್ತಿ ನಮ್ಮ ಪ್ರವೃತ್ತಿಯ ನಾಶ ಮಾಡದ್ದಿರಲಿ! ಎ೦ತ ಹೇಳ್ತಿ ನಿ೦ಗೊ?

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಕೆಲವು ವರ್ಷ ಹಿಂದಂಗೆ ಹೋದರೆ, ಯಾವುದೇ ಮಾಹಿತಿ ಸಿಕ್ಕೆಕ್ಕಾರೆ, ಲೈಬ್ರೆರಿಗೆ ಹೋಗಿ, ಪುಸ್ತಕ ಹುಡುಕ್ಕಿ, ಅದರಲ್ಲಿಪ್ಪದರ ನೋಟ್ ಮಾಡೆಕ್ಕಾದ ಪರಿಸ್ಥಿತಿ ಇದ್ದತ್ತು. ಈಗ ಎಲೆಕ್ಟ್ರೋನಿಕ್ ಮಾಧ್ಯಮಂದಾಗಿ, ಮಾಹಿತಿಗೊ ಬೇಕಾದಪ್ಪಗ ಬೇಕಾದಲ್ಲಿ ಸಿಕ್ಕುತ್ತು. ಆವಿಷ್ಕಾರಂಗೊ ಬಂದ ಹಾಂಗೆ ಉಪಯೋಗವೂ ಇದ್ದು ,ದುರುಪಯೋಗ ಮಾಡುವವೂ ಇದ್ದವು. ಭಾವನೆಗೆಳ ವ್ಯಕ್ತ ಮಾಡಿ, ಗ್ರೂಪ್ ಮಾಡಿ ಜೆನಂಗಳ ಸೇರಿಸಿ ಅದರ ಬಗ್ಗೆ ಹೋರಾಟ ಮಾಡ್ಲೆ ಈಗ ಹೆಚ್ಚು ಸಮಯ ಬೇಡ. ಮನಸ್ಸು ಮಾತ್ರ ಬೇಕಾದ್ದು. ಈಗಾಣ ವಿಧಾನಲ್ಲಿ ಸಂದೇಶಂಗೊ ಬೇಗನೆ ತಲುಪೆಕ್ಕಾದಲ್ಲಿಂಗೆ ತಲುಪುತ್ತು.
  [ಪರಿವರ್ತನೆಯ ಬಯಸುವ, ಕ್ರಿಯಾಶಕ್ತಿ ಇಪ್ಪ ಯುವಕರು ಸ೦ಘಟಿತರಪ್ಪ ಹಾ೦ಗೆ ಆದರೆ ಒಳ್ಳೆದಕ್ಕು] ಹಾಂಗೇ ಆಗಲಿ ಹೇಳಿ ಹಾರೈಸುವದರೊಟ್ಟಿಂಗೆ ನಾವು ಕೂಡಾ ಆ ಕಾರ್ಯಂಗಳಲ್ಲಿ ಒಂದು ಕೈ ಜೋಡುಸುವೊ.
  ಚಿಂತನೆಗೆ ಎಡೆಮಾಡಿ ಕೊಡುವ ಒಳ್ಳೆ ಲೇಖನ ಕೊಟ್ಟ ಮಹೇಶಂಗೆ ಧನ್ಯವಾದಂಗೊ

  [Reply]

  VA:F [1.9.22_1171]
  Rating: +1 (from 1 vote)
 3. ಡಾಮಹೇಶಣ್ಣ
  ಮಹೇಶ

  ಎಲ್ಲೋರುದೆ ಲೇಖನಕ್ಕೆ ಪೂರಕವಾಗಿ ಒಪ್ಪ ಕೊಟ್ಟಿದಿ. ನಿ೦ಗೊಗೆ ಎಲ್ಲೋರಿ೦ಗೂ ಧನ್ಯವಾದ೦ಗ.
  ಆದರ್ಶನೂ ಕೃಷ್ಣಮೋಹನಪ್ಪಚ್ಚಿಯೂ ವಿಚಾರವ ಮಥಿಸಿದವು. ಲಾಯಕಾತು.
  ನಮ್ಮ ನಾವೇ ನಿಯ೦ತ್ರಿಸೆಕು. ಪರಿಸ್ಥಿತಿಯ, ಅವಕಾಶಗಳ ವಿವೇಕ೦ದ ಉಪಯೋಗಿಸುವ ಸಾಮರ್ಥ್ಯ ನಮ್ಮಲ್ಲಿರೆಕು ಹೇಳುವದು ಎಲ್ಲೊರ ಆಶಯ.
  ಎ೦ತಕೆ ಹೇಳಿರೆ ಎಲ್ಲಾ ವಿಶಯಲ್ಲುದೆ ನಮ್ಮ ಸರಿ ತಪ್ಪು ನಿರ್ಣಯ ಮಾಡ್ಲೆ ಜೆನ ಸಿಕ್ಕವು.
  ಹಿರಿಯರಿ೦ಗೆ ಎಲ್ಲವನ್ನೂ ನಿಯ೦ತ್ರಿಸಲೆ ಎಡಿಯ. ಆದರೆ ಅವು ಕೊಟ್ಟ ಸ೦ಸ್ಕಾರ೦ಗ ನಮ್ಮ ನಿಯ೦ತ್ರಿಸುಗು, ಅದಪ್ಪೊ?

  ಬೇಡದ್ದದರ ಕಡೆಗೆ ಆಕರ್ಷಣೆ ಅಪ್ಪದು ಇ೦ದು ಸುರುವಾದ ಸಮಸ್ಯೆ ಅಲ್ಲ. ಹಾ೦ಗಾಗಿ ಸಮಸ್ಯೆಯೊಟ್ಟಿ೦ಗೆ ಪರಿಹಾರ೦ಗೊ ಕೂಡ ಇ೦ದೇ ಹೊಸತಾಗಿ ಹುಡುಕೆಕಾದ ಅಗತ್ಯ ಇಲ್ಲೆ. ಹಿ೦ದಿನವು ಹೇಳಿದ್ದರ ಇ೦ದಿ೦ಗೆ ಬೇಕಾದ ಹಾ೦ಗೆ ಹೊ೦ದಿಸಿಕೊ೦ಡರೆ ಸಾಕು!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೀಪಿಕಾಪ್ರಕಾಶಪ್ಪಚ್ಚಿಡಾಗುಟ್ರಕ್ಕ°ತೆಕ್ಕುಂಜ ಕುಮಾರ ಮಾವ°ದೊಡ್ಮನೆ ಭಾವವಿನಯ ಶಂಕರ, ಚೆಕ್ಕೆಮನೆವಿಜಯತ್ತೆಕಾವಿನಮೂಲೆ ಮಾಣಿಪುತ್ತೂರಿನ ಪುಟ್ಟಕ್ಕವೆಂಕಟ್ ಕೋಟೂರುಕಜೆವಸಂತ°ಗೋಪಾಲಣ್ಣಶ್ಯಾಮಣ್ಣvreddhiಶೀಲಾಲಕ್ಷ್ಮೀ ಕಾಸರಗೋಡುಸಂಪಾದಕ°ಎರುಂಬು ಅಪ್ಪಚ್ಚಿವಾಣಿ ಚಿಕ್ಕಮ್ಮಸುವರ್ಣಿನೀ ಕೊಣಲೆಅಕ್ಷರ°ಶಾಂತತ್ತೆಚುಬ್ಬಣ್ಣಕೊಳಚ್ಚಿಪ್ಪು ಬಾವಶ್ರೀಅಕ್ಕ°ಪುಟ್ಟಬಾವ°ಮಾಲಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ