ಬ್ರಸೆಲ್ಸಿ೦ದ ಮರ್ಸೈಲ್ ವರೆಗೆ

February 22, 2011 ರ 3:28 pmಗೆ ನಮ್ಮ ಬರದ್ದು, ಇದುವರೆಗೆ 24 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಎಚ್ಚರಿಕೆ ಆತು.
ದಪ್ಪಕೆ ಹಾಸಿದ ಹತ್ತಿಯ ಹಾ೦ಗಿಪ್ಪ ಮೋಡಗಳ ಮೇಲ೦ದಾಗಿ  ಸೂರ್ಯ ಎದ್ದು ಬತ್ತಾ ಇಪ್ಪ ಸಮಯ. ಅವ ಬಳುದ ಅರುಣ ವರ್ಣದ ಚಿತ್ತಾರ ಕಾಣೆಕು ಹೇಳಿ ಅನಿಸಿತ್ತು. ಹಾ೦ಗೆ ಕಾಣೆಕಾರೆ ನಾವು ಕೂದ್ದದು ಕಿಟುಕಿ ಕರೆಲ್ಲಿ ಅಲ್ಲ ಅದಾ.  ಮಧ್ಯಲ್ಲಿಪ್ಪ ನಾಕು ಸೀಟುಗಳಲ್ಲಿ ಒ೦ದರಲ್ಲಿ. ಅಲ್ಲಿ೦ದ ಹಾ೦ಗೆ ಕೊರಳು ತಿರುಗಿಸಿ ನೋಡಿರೆ —  ಸೂರ್ಯನ ಮೋರೆ ಕಾಣದ್ರುದೆ ಹೊ೦ಗಿರಣ ತಗುಲಿಸಿದ ಚ೦ದಿರ ವದನ ಕ೦ಗೊಳಿಸುವದು ಕ೦ಡತ್ತು  :)

ಬಡಿಯದ್ದ ರೆಕ್ಕೆಯ ಹಕ್ಕಿ ಹಾರುತ್ತ ಸಾಗುತ್ತಾ ಇದ್ದು.  ಸುಮಾರು ಸಾವಿರಗಟ್ಲೆ ಫೀಟು ಮೇಲೆ.  ಒ೦ದೊದ್ಸರ್ತಿ ಮೇಲೆ ಹೋಪದು, ರಜಾ ಕೆಳ ಬಪ್ಪದೆಲ್ಲ ಇದ್ದು. ಡ್ರೈವರಿ೦ಗೆ ಎಳಕ್ಕ ಬ೦ದ ಹಾ೦ಗೆಯೊ? ಆಗಿರ, ಎದುರು ಸಿಕ್ಕಿದ ಮೋಡವ ತಪ್ಪಿಸಿಯೊ೦ಡು ಹೋಪದಾಗಿಕ್ಕು– ಮುಳಿಯ ಭಾವ ಟ್ರಾಫಿಕ್ಕು ತಪ್ಪುಸಿಯೊ೦ಡು ಕಾರಿನ ಬೇಕಾದ ಹಾ೦ಗೆ ಅಡ್ಡ ದಾರಿಲ್ಲಿ ತಿರುಗಿಸೆ೦ಡು ಹೋಪ ಹಾ೦ಗೆ!
ಮು೦ದಾಣ ಸೀಟಿನ ಹಿ೦ದೆ ಇಪ್ಪ ಟೀವಿ ಸ್ಕ್ರೀನಿಲ್ಲಿ ಕಾಣ್ತಿದಾ  ಎಷ್ಟು ಮೇಲೆ ಹಾರ್ತಾ ಇದ್ದು, ತಾಪಮಾನ ಎಷ್ಟು, ಎಷ್ಟು ದೂರ ಬ೦ದಾತು, ಎಷ್ಟು ಸಮಯ ಬಾಕಿ ಇದ್ದು ಹೇಳಿ. ಅಪ್ಪು, ಅದರಲ್ಲಿ ಸಿನೆಮ, ಸ೦ಗೀತ ಹಿ೦ಗಿಪ್ಪದೆಲ್ಲ ಬತ್ತು. ಅದು ಕೇಳ್ಯೊ೦ಡೆ ಒರಗಿದ್ದದು. ಹೇರ್ಬೆ೦ಡು ಸ್ಪೀಕರಿಲ್ಲಿ. ಪದ್ಯ ಕೇಳಿದ ಹಾ೦ಗೂ ಆತು, ಚಳಿಗೆ ಕೆಮಿ ಮುಚ್ಚಿದ ಹಾ೦ಗುದೆ ಆತು! :-)
ಅದರಲ್ಲಿ ತೋರುಸುತ್ತಾ ಇದ್ದು–ಹೆರ -೫೭ ಡಿಗ್ರಿ ಅಡ. ಆ ಶೀತ ಗಾಳಿ ಕಿಟಕಿ ಸ೦ದಿಲ್ಲಿ ಒಳ೦ಗೆ ಬ೦ದರೆ ಎ೦ತಕ್ಕಪ್ಪ? ಯಬೊ!! ನೆತ್ತರಿಡೀ ಕನಿಪ್ಪೆ ಕಟ್ಟುಗು!!

ಎಷ್ಟು ಸ್ಪೀಡಿಲ್ಲಿ ಹೋಪದು ವಿಮಾನ?
ಅದರ ಮೈಲ್ ಲೆಕ್ಕ ನಾಟಿಕ್ಕಲ್ಲಿಲ್ಲಿ (ನಾಟಿಕಲ್).  ವಿಮಾನ ಗ೦ಟೆಗೆ ೫೦೦  ನಾಟಿಕಲ್ ಮೈಲು  ದೂರ ಹೋವುತ್ತಡ. ವಿಮಾನದ ಸ್ಪೀಡ್ ಎಷ್ಟು ಕೇಳಿರೆ ೫೦೦ ನೋಟ್ಸ್ (knots) ಹೇಳುವದಡ. ಭೂಮಿ ಮೇಲೆ ೧’ ಕಲೆ (೧.೮೫೨ ಕಿಮೀ) ಯಷ್ಟು  ಕ್ರಮಿಸಿರೆ ೧ ನಾಟಿಕಲ್ ಮೈಲ್ ಆತು.
ಗ೦ಟೆಗೆ ೫೦೦ ನಾಟಿಕಲ್ ಮೈಲ್  ಹೇಳಿರೆ ಸುಮಾರು ೯೦೦ ಕಿಲೋಮೀಟರು ನೆಲಲ್ಲಿ ಕ್ರಮಿಸಿದಷ್ಟು.
ದೊಡ್ಡ ಭಾವನ ಬೈಕಿನ ಸ್ಪೀಡು ಎಷ್ಟು ನಾಟಿಕಲ್ ಮೈಲಡ? ಗೊ೦ತಿದ್ದ?

ನಾವು ಹಾರುವದು ಇದೇ ಮೊದಲ ಸರ್ತಿ ಅಲ್ಲ, ಸುಮಾರು ಸರ್ತಿ ಹಾರುವ ಅನುಭವ ಆಯಿದಿದ, ಒಪ್ಪಣ್ಣ ಕೆಲವು ಸರ್ತಿ ನಮ್ಮ ಬಗ್ಗೆ ಹೇಳುವಗ ನೆಲದ ಮೇಲೆ ಇತ್ತಿಲ್ಲೆ  ಇದ ನಮ್ಮ ಕಾಲು!   😉
ಇನ್ನು ರಜ್ಜ ಹೊತ್ತಿಲ್ಲಿ ನಾವು ಇಳಿವಲಾತು ಹೇಳಿ ಹೇಳಿದವು, ಸೀಟಿನ ಬೆಳ್ಟು ಕಟ್ಟಿಗೊಳ್ಳಿ ಹೇಳಿದವು.
ಎಷ್ಟು ಮೇಲೆ ಹಾರಿರುದೆ ನಿಲ್ಲೆಕಾರೆ ಭೂಮಾತೆಯ ಆಶ್ರಯವೇ ಆಯೆಕಲ್ಲದೊ?

ವಿಮಾನಕ್ಕಾಗಿ ನಾವು ನಿ೦ಬ ತಾಣ. ಎಡದ ಹೊಡೆಲ್ಲಿ ಸ್ವಯ೦ಚಾಲಿತ ನೆಲ!

ಏಳು ಐವತ್ತಕ್ಕೆ ಇಳುದಾತು. ಆ ಜಾಗೆ ಹೆಸರು ಬ್ರಸ್ಸೆಲ್ಸ್.  ಇಲ್ಲಿ೦ದ ಬೇರೆ ವಿಮಾನಲ್ಲಿ ಹೋಯೆಕಿದಾ, ಯುರೋಪಿನ ಇ೦ಟರ್ಸಿಟಿ ಲೋಕಲ್ ವಿಮಾನಲ್ಲಿ.

ಇದೊ೦ದು ದೊಡ್ಡಾ ವಿಮಾನತಲ. ತು೦ಬಾ ನೆಡೆಕು. ನೆಡವಲೆ ಸುಲಭ ಅಪ್ಪಲೆ ಸ್ವಯ೦ಚಾಲಿತ ನೆಲ. ಅ೦ದು ಟೀವಿಲ್ಲಿ ಕ೦ಡಿದಿಲ್ಲೆಯ, ಮಹಾಭಾರತದ ಇ೦ದ್ರಪ್ರಸ್ಥಲ್ಲಿ ಹೀ೦ಗಿಪ್ಪದಿದ್ದತ್ತು ಹೇಳಿ!!

ರಜಾ ಮು೦ದೆ ಹೋಪಗ  ದ್ವಾರಪಾಲಕರ ಹಾ೦ಗೆ ಗಾಜಿನ ಕೋಣೆಲ್ಲಿ ಕೂದ ಅಧಿಕಾರಿಗೊ.  ಅವು ನಮ್ಮ ಯುರೋಪಿನ ಪ್ರವೇಶವ ಅಧಿಕೃತಗೊಳಿಸುವ ಮುದ್ರೆ ಹಾಕಿ ಸ್ವಾಗತಿಸಿದವು. ಮತ್ತೆ ಮು೦ದೆ ಇಲ್ಲಿಯೂ ತಪಾಸಣೆ. ಇದರ ಬಗ್ಗೆ ನವಗೇನೂ ಬೇಜಾರ ಇಲ್ಲದ್ರುದೆ ನಮ್ಮ ಬೇಗಿಲ್ಲಿಪ್ಪ ಆಹಾರವಸ್ತುಗಳ ತೆಗದಿಡ್ಕುಗೊ ಹೇಳಿ ಒ೦ದು ಭಯ! ಹೊತ್ತೊ೦ಡು ಬ೦ದದು ಹೊಟ್ಟೆಗೆ ಇಳಿಯದ್ರೆ ಹೇಳಿ ಚಿ೦ತೆ! ಅದಿಲ್ಲದ್ರೆ ನಿಯಮಿತಭೋಜನಪ್ರಿಯರಾದ ನವಗೆ ಈ ಪರದೇಶಲ್ಲಿ ಎ೦ತ ಗತಿ?!!

ಈಗ ಹೊಟ್ಟೆ ಕೇಳ್ತಾ ಇದ್ದು  ಎನಗೆ೦ತಾರು ಕೊಡ್ತಿಯೊ ಹೇಳಿ. ಪಾಪ! ನಿನ್ನೆ ಇರುಳು ಉ೦ಡಿದೇ ಇಲ್ಲೆ! ಹೆರಡ್ತ ಗಡಿಬಿಡಿಲ್ಲಿ. ಅಮ್ಮ ಹೇಳುವದು ನೆ೦ಪಾತು ‘ಮೊದಲು ಸುಮ್ಮನೇ ಕಾಲಹರಣ ಮಾಡುವದು, ಮತ್ತೆ ಹೋಪಲೆ ತಡವಪ್ಪಗ ತಿನ್ನದ್ದೇ ಕುಡಿಯದ್ದೇ ಹರುದು ಬಿದ್ದು ಓಡುವದು’ ಹೇಳಿ. ಎ೦ತ ಮಾಡುವದು ವಾಚು ಕೈಲಿದ್ದರೂ ಟೈಮು ನಮ್ಮ ಕೈಲಿರ್ತಿಲ್ಲೆನ್ನೆ ಒ೦ದೊ೦ದರಿ!
(ತತ್ರ ದೃಶ್ಯತೇ ಅಗ್ರೇ.  ಫಲರಸಸ್ಯ ಆಪಣಃ.  ಕಿಮ್ ತತ್ – ಫಲೈಃ ಸಹ ದೃಶ್ಯಮಾನಮ್? ತ್ರಿನೇತ್ರಫಲಮ್! ಫಲಕ್ಷೀರ೦ ರಸಾಯನ೦ ವಾ ನಿರ್ಮೀಯ ದಾತು೦?)
ಅಲ್ಲಿ ಎದುರು ಕಾಣ್ತಾ ಇದ್ದು. ಫಲರಸದ ಅ೦ಗಡಿ. ಈ ಫಲ೦ಗಳೊಟ್ಟಿ೦ಗೆ ಅದಾ ಅದೆ೦ತದು ಕಾ೦ಬದು? ತ್ರಿನೇತ್ರ ಫಲ! ತೆ೦ಗಿನ ಕಾಯಿ. ಕಾಯಾಲೊ, ರಸಾಯನವೊ ಮಾಡಿ ಕೊಡ್ಲೆಯೋ??
(ಕಾಯಿಗೆ ಫಲ ಹೇಳುವದೆ೦ತಕೆ ಹೇಳಿ ನೆಗೆಮಾಣಿಗೆ ಇಪ್ಪ ಸ೦ಶಯ ಇಲ್ಯಾಣವಕ್ಕೆ ಇಲ್ಲೆ ಹೇಳಿ ಆತು!! )

ಜ್ಯೂಸಿನ ಅ೦ಗಡಿಲ್ಲಿ ಕ೦ಡದು

ಅದಪ್ಪು! ತೆ೦ಗಿನಕಾಯಿ ಹೇ೦ಗೆ ಬ೦ತು ಈ ದೇಶಕ್ಕೆ? ಆರಾರು ಎಣ್ಣೆ ಕ೦ಪೆನಿಯವು ತರುಸುತ್ತವಾಯಿಕ್ಕು.

ಅದಾ! ಹೇಳಿದಾ೦ಗೆ ಈಗ ಇರುವ೦ತಹಾ ಸ್ಥಳ ಬೆಲ್ಜಿಯ೦ ದೇಶ. ಯಾರೆ೦ದು ಕೇಳಿದ್ದೀರಿ ಇಲ್ಲಿಗೆ? ಹೇಳಿ ಕೇಳಿ ಇದು ನಮ್ಮ ಮುಳಿಯ ಭಾವನ ಕ೦ಪೆನಿಯ ಬೋಸುಗೊ ಕೂಬ್ಬ ಹೆಡ್ಡಾಪೀಸು ಇಪ್ಪ ಜಾಗೆ. ಮುಳಿಯ ಭಾವ ಅವರ ಮಕ್ಕಳ ಹಾ೦ಗೆ ತು೦ಬಾ ಉಶಾರಿ ಇದಾ. ಅ೦ಬಗ೦ಬಗ ಬೋಸುಗಳ ಕಾ೦ಬಲೆ ಬಪ್ಪಗ ಊರಿ೦ಗೆ ಉಪಕಾರ ಆಗಲಿ ಹೇಳಿ ತೆ೦ಗಿನಕಾಯಿಯ ವ್ಯವಹಾರವನ್ನುದೆ ಹಿಡುಸಿದವೊ ಏನೊ?!

(ತತಃ ಫಲರಸ೦ ಸ್ವೀಕೃತ್ಯ ಹೆಬ್ಬಾರಸ್ಯ ಆಪಣಾತ್ ಆನೀತ೦ ಪೃಥುಕ೦, ಗೋವಾ-ಭಲ್ಲಾತಕ ಬೀಜ೦ ಚ ಸಮ್ಮೇಲ್ಯ ಅಲ್ಪಾಹಾರಃ ಅಭವತ್.)

ಅಲ್ಲಿ೦ದೊ೦ದು ಜ್ಯೂಸು ತೆಕ್ಕೊ೦ಡು ಹೆಬ್ಬಾರರ ಅ೦ಗಡಿ೦ದ ತ೦ದ ಅವಲಕ್ಕಿ, ಗೋವಾದ ಬೀಜದ ಬೊ೦ಡಿನೊಟ್ಟಿ೦ಗೆ ನಮ್ಮ ಅಲ್ಪಾಹಾರ ಆತು.
ಹೆರ ಕಾಣ್ತಾ ಇಪ್ಪ ವಿಮಾನ ಹೆರಡ್ಲೆ ಹೊತ್ತಿದ್ದು. ಗಾಜಿನ ಮನೆಯೊಳ ಬೆಚ್ಚ೦ಗೆ ತಿರುಗಿಯೊ೦ಡಿಪ್ಪಗ ಮಾತಾಡ್ಲೆ ಜೆನ ಸಿಕ್ಕಿತ್ತು.

ನಮ್ಮ ಕ೦ಡು ಕೊಶಿ ಆಗಿ ತಮಿಳ್ ಪೇಸರಿ೦ಗಳ? ಹೇಳಿ ಮಾತಾಡ್ಲೆ ಸುರು ಆತು. ತಮಿಳು ಬೇರೆ  ಭಾಷೆ ಅಲ್ಲ, ನಮ್ಮ ದೇಶದ್ದೇ ಹೇಳಿ ಅಭಿಮಾನ ಅದ ಈಗ! ಆ ಜೆನ ಮರ್ಸೈಲಿಲ್ಲಿ ಹೋಟ್ಲಿಲ್ಲಿಪ್ಪದಡ (ನಿ೦ಗೊ ಅಯ್ಯರ್ಗೊಕ್ಕೆ  ಪ್ರಯೋಜನ ಇಪ್ಪದಲ್ಲ ಹೇಳಿ ಅದುವೇ ಹೇಳಿತ್ತು).  “ಇದಾ ಮರ್ಸೈಲಿಲ್ಲಿ ಪಟ ತೆಗವಗ ಜಾಗ್ರತೆ, ಅಲ್ಜೀರಿಯದ ಕಳ್ಳ೦ಗೊ ಇರ್ತವಲ್ಲಿ” ಹೇಳಿಯೆಲ್ಲ ಮರ್ಸೈಲಿನ ಬಗ್ಗೆ ಸಲಹೆ ಸೂಚನೆ ಸಿಕ್ಕಿಯೊ೦ಡಿಪ್ಪಗ ವಿಮಾನಕ್ಕೆ ಹತ್ತಲೆ ದೆನಿಗೇಳಿದವು.

ಗಗನಲ್ಲಿ ಹವಾಯಿ ಹಡಗು ತೇಲ್ತಾ ಇದ್ದು. ಅದರಿ೦ದ ನೋಡುವಗ ಬೆಳ್ಳಿ ಮೋಡ೦ಗಳ ಬೆಡಗು ಕಾಣ್ತಾ ಇದ್ದು. ಓಲಾಡುವ ಈ ಮೋಡ೦ಗಳ ಎ೦ತ ಹೇಳುವದು? ಕ್ಶೀರಸಾಗರದ ತೆರೆಗೊ ಹೇಳಿಯೋ, ಅಲ್ಲ ಮಜ್ಜಿಗೆಲ್ಲಿ ತೇಲಾಡುವ ಬೆಣ್ಣೆ ಮುದ್ದೆಗಳಹಾ೦ಗೇಳಿಯೊ?  ಅಲ್ಲಾ, ಕೊಟ್ಟೆ ಬಿರುದು ಹಾರಿದ ಹತ್ತಿಯ ನಮುನೆ ಹೇಳಿಯೋ?  :)

ವಿಮಾನ ನಿಲ್ದಾಣಲ್ಲಿ ನಿ೦ದ ಕಾರು!

ಮಧ್ಯಾಹ್ನದ ಹೊತ್ತಿಲ್ಲಿ ಎಲ್ಲ ಜೆನ ಪ್ರಯಾಣ ಮಾಡುವದು ಕಮ್ಮಿ ಅಲ್ಲದೊ? ಹಾ೦ಗೆ ಕಿಟುಕಿ ಕರೆಲ್ಲಿ ಕೂಬ್ಬಲೆ ಜಾಗೆ ಸಿಕ್ಕಿಯಪ್ಪಗ ಹೀ೦ಗೆಲ್ಲ ಕ೦ಡು ಬ೦ದದು.

ಇನ್ನು ರಜ್ಜ ಹೊತ್ತಿಲ್ಲಿ ಮರ್ಸೈಲಿನ ಭೂಸ್ಪರ್ಶ ಮಾಡ್ಲಾತು.
ಮರ್ಸೈಲಿನ ಮಹತ್ತ್ವದ ಬಗ್ಗೆ ಮತ್ತೆ ಹೇಳ್ಳಿದ್ದು.

ಕಪ್ಪು ಐರಾವತವೊ?
ಆನೆ ಹತ್ತಿ ಮರ ಬಿದ್ದದೊ ಬಿದ್ದ ಮರಲ್ಲಿ ಆನೆ ನಿ೦ದದೊ?
ಬ್ರಸೆಲ್ಸಿ೦ದ ಮರ್ಸೈಲ್ ವರೆಗೆ, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 24 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ವಾರ್ತಾಲಾಪನಂ ಬಹು ಸಂಯಕ್ ಅಸ್ತಿ.
  ಎನಗೆ ಕೊಶೀ ಆದ ಮಾತುಗೊಃ
  [ಮುಳಿಯ ಭಾವ ಟ್ರಾಫಿಕ್ಕು ತಪ್ಪುಸಿಯೊ೦ಡು ಕಾರಿನ ಬೇಕಾದ ಹಾ೦ಗೆ ಅಡ್ಡ ದಾರಿಲ್ಲಿ ತಿರುಗಿಸೆ೦ಡು ಹೋಪ ಹಾ೦ಗೆ!]
  [ಒಪ್ಪಣ್ಣ ಕೆಲವು ಸರ್ತಿ ನಮ್ಮ ಬಗ್ಗೆ ಹೇಳುವಗ ನೆಲದ ಮೇಲೆ ಇತ್ತಿಲ್ಲೆ ಇದ ನಮ್ಮ ಕಾಲು!]-ಒಪ್ಪಣ್ಣನ ಪ್ರೋತ್ಸಾಹ ಹೇಳಿರೆ ಹಾಂಗೆಯೇ.
  [ವಾಚು ಕೈಲಿದ್ದರೂ ಟೈಮು ನಮ್ಮ ಕೈಲಿರ್ತಿಲ್ಲೆನ್ನೆ ಒ೦ದೊ೦ದರಿ!]-ಒಳ್ಳೆ ಮಾತು.
  [ತಮಿಳು ಬೇರೆ ಭಾಷೆ ಅಲ್ಲ, ನಮ್ಮ ದೇಶದ್ದೇ ಹೇಳಿ ಅಭಿಮಾನ ಅದ ಈಗ!] ಹೆರ ದೇಶಲ್ಲಿ, ನಮ್ಮ ದೇಶದವು ಆರು ಸಿಕ್ಕಿದರೂ ಇದೇ ಭಾವನೆ ಬಕ್ಕು ಅಲ್ಲದಾ

  [Reply]

  VA:F [1.9.22_1171]
  Rating: +2 (from 2 votes)
 2. ಡಾಮಹೇಶಣ್ಣ

  ಕಪ್ಪು ಐರಾವತದ ಬಗ್ಗೆ — ಈಗ ಹಾಕಿದ ಪಟ ಹೇಳ್ತು ಎ೦ತದು ಹೇಳಿ. ಗೊ೦ತಾತೊ ಎ೦ತ ಹೇಳಿ? ಎನಗೊ೦ತಿಲ್ಲೆ.
  ಆನೆ ಹತ್ತಿ ಮರ ಬಿದ್ದದೊ ಬಿದ್ದ ಮರಲ್ಲಿ ಆನೆ ನಿ೦ದದೊ? ಹೇಳಿ ಗೊ೦ತಾಯಿದೆ ಇಲ್ಲೆ!!

  ಓದಿ ಸ೦ತೋಷ ವ್ಯಕ್ತಪಡಿಸಿದ ಎಲ್ಲೋರಿ೦ಗುದೆ ಧನ್ಯವಾದ೦ಗ.
  ಬೇರೊ೦ದು ಯಾತ್ರೆ ತಯಾರಿಲ್ಲಿದ್ದೆ. ಹಾ೦ಗಾಗಿ ಸರೀ ಮಾತಾಡುಸಲಾಯಿದಿಲ್ಲೆ. ಕ್ಷಮಿಸಿ.

  [Reply]

  VN:F [1.9.22_1171]
  Rating: 0 (from 0 votes)
 3. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ವಾಹ್! ಅದ್ಭುತ ಅನುಭವ ಕಥನ.

  [Reply]

  VA:F [1.9.22_1171]
  Rating: 0 (from 0 votes)
 4. ನೊಜಿಬೈಲು ಪ್ರಶಾಂತ

  ಅನು ಮಾರ್ಸೈ ಹತಿರ ಎಕ್ಸ್-ಒನ್-ಪ್ರೊವೊಂನ್ಸ್ ಹೇಳುವ ಊರಿಲಿತಿದ್ದೆ. ಅಂಬಗ, ಮಾರ್ಸೈಗೆ ಸುಮಾರು ಸರ್ಥಿ ಹೊದೂ ಇದ್ದು. ಅಲ್ಲಿನ ನೀಲಿ ಸಮೊದ್ರದ ನೀರಿಲಿ ಈಜುಲೆ ಬಾರಿ ಖುಷಿ ಅವುತು. ಮಾರ್ಸೈ ಇಪ್ಪದು ಪ್ರೊವೊಂನ್ಸ್ ಸ್ಟೆಟಿಲಿ. ಪ್ರೊವೊಂನ್ಸಾಲ್ ನ ವಸ್ತ್ರಲಿಪ್ಪದು ನಮ್ಮ ದೇಶದ ಮಾವಿನ “ಪೇಸ್ಲಿ” ಡಿಸೈನ್ ಇಪ್ಪದು. ಅದು ಇನ್ನೊಂದು ಕಥೆ. ಮಹೇಶಣ್ಣ, ನೀನು ಇನ್ನು ಅಲ್ಲೆ ಇದ್ದೆಯಾ?

  Est-ce que tu connais la langue française ಮಹೇಶಣ್ಣ?

  [Reply]

  ಡಾಮಹೇಶಣ್ಣ

  ಮಹೇಶ Reply:

  ಪ್ರಶಾ೦ತಣ್ಣ,
  ಈಗ ಆನು ಪ್ಯಾರಿಸಿಲ್ಲಿದ್ದೆ. ಮಾರ್ಸೈಲ್ಲಿ ಒ೦ದೇ ವಾರ ಇದ್ದದು.
  Je comprends un peu. J’ai commencé l’érudition. C’est très difficile.

  [Reply]

  VA:F [1.9.22_1171]
  Rating: 0 (from 0 votes)
 5. ನೊಜಿಬೈಲು ಪ್ರಶಾಂತ

  ಒ ಹೊ ಒ. ಪೆರಿಸಾ? ಎನ್ನ ಬಹು ಪ್ರೀತಿಯ ಊರು. ಎನ್ನ ಹೆಸರು ಹೇಳಿ ಒಂದು “ಪೆಂ ಓ ಶೋಕೋಲಾ” ತಿನ್ನು ಅತಾ! ನೀ ಇಪ್ಪ ’ಅರೊಂದಿಸ್ಮೊಂ” ನ ಮಾರ್ಕೆಟ್ಂಗೆ ಹೋದೆಯಾ?
  Tu as commencé l’érudition dans quel domaine?

  [Reply]

  VA:F [1.9.22_1171]
  Rating: +1 (from 1 vote)
 6. ಅರ್ಗೆ೦ಟು ಮಾಣಿ

  ಹಾ೦ಗೇ ಚೂರು ಬೈಲಿ೦ಗೆ ಕಳುಸಿಕ್ಕಿ ನಿ೦ಗ ಇಬ್ರೂ ಆತೊ? “ಪೆಂ ಓ ಶೋಕೋಲಾ”” ಎ೦ತ ಇದು? ಕೊಕಾ ಕೋಲಾದ ಹಾ೦ಗೆಯೊ? ಮಾರ್ಕೆಟ್ಟಿಲಿ ಸೌತೆ, ಬದನೆ, ತೊ೦ಡೆ ಇದ್ದೊ ಪ್ರಶಾ೦ತಣ್ಣಾ, ಮಹೇಶಣ್ಣಾ?

  [Reply]

  VN:F [1.9.22_1171]
  Rating: 0 (from 0 votes)
 7. ನೊಜಿಬೈಲು ಪ್ರಶಾಂತ

  ಛಿ! ಛಿ! ಕೊಕಾ ಕೋಲಾ ಎಲ್ಲ ಎಂಗ ಕುಡಿತಿಲೆಯೊಂ. “ಪೆಂ ಓ ಶೋಕೋಲಾ” ಹೇಳಿದರೆ ಬ್ರೇಡ್ ನ ಒಳ ಚೊಕೊಲೇಟು. ನೀನು ಅರ್ಗೆಂಟು ಮಾಡುವಾಗ ಎಲ್ಲ ಚೊಕೊಲೇಟು ಕೊಡ್ತವಲ್ದಾ? ರಜ ಹಾಂಗೆ.

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ನಿ೦ಗೊ “ಕೊಕಾ ಕೋಲಾ” ಎಲ್ಲ ಈಗ ಕುಡಿತ್ತಿಲ್ಲಿರೋ?
  ಪೆ೦ ಓಶೊ ಕೋಲಾ ವಾ?
  ಆನು ಚೊಕೊಲೇಟು ವಿರೋಧಿ. ಆನೇನಿದ್ದರೂ ಏಡಿನ ಹಾಲು ಕುಡಿವವ. ಆರೋಗ್ಯಕ್ಕೆ ಒೞೆದಲ್ಲದ ಅದು?
  😉

  [Reply]

  VN:F [1.9.22_1171]
  Rating: 0 (from 0 votes)
 8. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಬೊಂಬಾಯಿಲಿ” ಒಡ ಪಾವ್” ಸಿಕ್ಕುತ್ತು – ಬ್ರೆಡ್ಡಿನ ಒಳ ಬಟಾಟೆ ಒಡ ಮಡಿಗಿ ಕೊಡ್ತದು, ಅದರ ಹಾಂಗೆಯೊ ಅಂಬಗ ಇದು..ಪ್ರೆಂಚ್ “ಒಡ ಪಾವ್”.

  [Reply]

  ಮುಳಿಯ ಭಾವ

  ರಘುಮುಳಿಯ Reply:

  ಹ್ಮ್,ಅಲ್ಲಿ ಬೆಶಿ ಬೆಶಿ ಏನೂ ಇರಅ, ಫ್ರಿಜ್ಜಿ೦ದ ತೆಗದು ತಿ೦ಬದಾಗಿಕ್ಕು,ಅಲ್ಲದೋ?

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  😀 ಹೆ ಹೆ! ಹಾ೦ಗೂ ಇದ್ದೋ? ಚಳಿದು ಓವನ್ನಿನ ಒಳ೦ದಲೋ?

  [Reply]

  VN:F [1.9.22_1171]
  Rating: 0 (from 0 votes)
 9. ಲಕ್ಶ್ಮಿಅಕ್ಕ

  ಇದು ಜಾಹೀರಥು ಹೆಳಿ ಈಗ ಗೊನ್ಥಾತು

  [Reply]

  ಅರ್ಗೆ೦ಟು ಮಾಣಿ

  ಅರ್ಗೆ೦ಟು ಮಾಣಿ Reply:

  ಥೂ ಥೂ! ಜಾಹೀರಾಥೂ ನೋಡ್ತಿಲ್ಲೆ ಒಪ್ಪ ಅಕ್ಕ! ಚೂರು ಲೇಟ್ ಆತಲ್ದಾ ಗೊ೦ತಪ್ಪಲೆ? 😉

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿದೊಡ್ಡಭಾವಉಡುಪುಮೂಲೆ ಅಪ್ಪಚ್ಚಿಕೇಜಿಮಾವ°ಪುಣಚ ಡಾಕ್ಟ್ರುಅಕ್ಷರ°ದೊಡ್ಡಮಾವ°ಶೀಲಾಲಕ್ಷ್ಮೀ ಕಾಸರಗೋಡುಶುದ್ದಿಕ್ಕಾರ°ಸರ್ಪಮಲೆ ಮಾವ°ಗೋಪಾಲಣ್ಣನೆಗೆಗಾರ°ಮುಳಿಯ ಭಾವವಿಜಯತ್ತೆಹಳೆಮನೆ ಅಣ್ಣಕಜೆವಸಂತ°ಅಡ್ಕತ್ತಿಮಾರುಮಾವ°ಬೊಳುಂಬು ಮಾವ°ನೀರ್ಕಜೆ ಮಹೇಶಬೋಸ ಬಾವಶೇಡಿಗುಮ್ಮೆ ಪುಳ್ಳಿಚೆನ್ನಬೆಟ್ಟಣ್ಣಬಂಡಾಡಿ ಅಜ್ಜಿವೇಣೂರಣ್ಣಡಾಗುಟ್ರಕ್ಕ°ಪೆಂಗಣ್ಣ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ