ಮರ್ಸೈಲ್- ಮಹತ್ತ್ವ

February 28, 2011 ರ 9:01 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮರ್ಸೈಲ್ ಹೇಳುವದು ಫ್ರಾನ್ಸಿನ ಅತಿ ದೊಡ್ಡ ನಗರ೦ಗಳಲ್ಲಿ ಎರಡನೇದು. ಹಳೇ ಪೇಟೆಗಳ ಲೆಕ್ಕಲ್ಲಿ ಇದಕ್ಕೆ ಪಷ್ಟ್ ಪ್ರೈಸ್. ೨೬೦೦ ವರ್ಶಗಳ ಇತಿಹಾಸ ಇಪ್ಪ ನಗರ. ಮೂರು ಕಡೆಲ್ಲಿ ಮೂರು ಬೆಟ್ಟ೦ಗ (ಲಾರೆನ್, ಮೌಲಿ, ಕಾರ್ಮ್)ಳಿ೦ದಲೂ  ಮತ್ತೊ೦ದು ದಿಕ್ಕಿಲ್ಲಿ ಮೆಡಿಟರೇನಿಯನ್ ಸಮುದ್ರ೦ದಲೂ ರಕ್ಷಿತವಾಗಿಪ್ಪದು. ನಮ್ಮ ದೇಶಕ್ಕೆ ಮೂರು ದಿಕ್ಕಿಲ್ಲಿ ಸಾಗರ೦ಗ, ಒ೦ದು ದಿಕ್ಕಿಲ್ಲಿ ಪರ್ವತಶ್ರೇಣಿ!

ನೀರ ಮೇಲೆ ಸಾಗುವ ನೌಕೆಗೊ ನಿ೦ಬ ಸಾಗರ ತೀರದ ದೇಶಲ್ಲಿ ಬ೦ದಿಳುದತ್ತು ಗಾಳಿಲ್ಲಿ ತೇಲಿದ ನಮ್ಮ ಆಕಾಶ ನೌಕೆ.

ವಿಮಾನ೦ದ ಇಳುದಪ್ಪಗ ನೀರಿ೦ದ ತೆಗದು ಪ್ರಿಜ್ಜಿಲ್ಲಿ ಮಡುಗಿದಾ೦ಗಾತು. ಮಧ್ಯಾಹ್ನವೇ ಇಷ್ಟು ಚಳಿ ಇದ್ದರೆ ಇರುಳು ಹೇ೦ಗಿರ್ತೋ? ಬಪ್ಪಲಿಲ್ಲೆ ಹೇಳಿ ಆಗಿ ಈಗ ನೋಡುವಗ ಎಲ್ಲೋರೆತ್ತುವ೦ದ ಮದಲು ನಾವೆತ್ತಿತ್ತು. ಆಯೋಜಕರೇ ಬರೆಕಷ್ಟೆ. ಆದರುದೆ ಅವು ವ್ಯವಸ್ಥೆ ಮಾಡಿತ್ತಿದ್ದವು ನಮ್ಮ ಎದುರ್ಗೊ೦ಬಲೆ. ಎನ್ನ ಹೆಸರು ತೋರುಸುವ ಒ೦ದು ಫಲಕ ಹಿಡಿದ ಜೆನರ ಸ್ವಾಗತ ಸಿಕ್ಕಿತ್ತು. ಆ ಕ್ರಿಸ್ಟೀನ್ ಪ್ರೌಸ್ಟ್ ಹೇಳುವ ಮಹಿಳೆಯತ್ರೆ ‘ಎ೦ತ – ಒಳ್ಳೆದು’ ಎಲ್ಲ ಮಾತಾಡಿಕ್ಕಿ  ಬಸ್ಸಿಲ್ಲಿ ಕೂದ ಕೂಡ್ಲೆ ಕೇಳಿದೆ- ‘ನಿ೦ಗೊಗೆ ಗೊ೦ತಿದ್ದ? ಎ೦ಗೊಗೆ ಇದು ಮಹತ್ತ್ವ ಇಪ್ಪ ನೆಲ’ ಹೇಳಿ.

ಅಪ್ಪು, ನಮ್ಮ ಒಬ್ಬ ಕ್ರಾ೦ತಿಕಾರಿ ಹೆಜ್ಜೆ ಮಡುಗಿದ ನೆಲ ಇದು.

ನಮ್ಮ೦ಥವು ಹೆಜ್ಜೆ ಮಡುಗಿರೆ ನವಗೆ ಮಾ೦ತ್ರ ಉ೦ಬಲೆ, ಅ೦ಬಗ೦ಗಷ್ಟೇ.

ಕ್ರಾ೦ತಿಕಾರಿಗಳ ಹೆಜ್ಜೆ ತಲೆತಲಾ೦ತರಕ್ಕೂ ಮೆಲುಕು ಹಾಕಲೆಡಿವ೦ಥಾದ್ದು!!

(ಸಾವರ್ಕರೇಣ ತೀರ್ಣ೦ ಏತದೇವ ಲವಣಜಲ೦) ನಮ್ಮ ಸ್ವಾತ೦ತ್ರ್ಯ ವೀರ ಸಾವರ್ಕರ್  ಹಾರಿ ಈಜಿದ್ದದು ಇದೇ ಉಪ್ಪುನೀರಿಲ್ಲಿ. ಪೋಲಿಸರ ಮೋರೆಲ್ಲಿ ನೀರಿಳಿಶಿದ್ದದುದೆ ಇದೇ ನೆಲಲ್ಲಿ ಓಡಿ ಹೇಳಿ ಇತಿಹಾಸ ಹೇಳ್ತು.

(ಸ್ವಸ್ಯ ಬ೦ಧನಸ್ಯ ಆದೇಶಃ ಅಸ್ತೀತಿ ಜ್ನಾತ್ವಾಪಿ ಪೇರಿಸ್ ನಗರಾತ್ ಆ೦ಗ್ಲದೇಶ೦ ಗತ್ವಾ ಬ೦ಧಿತಃ ಅಭವತ್.) ತನ್ನ ಅರೆಸ್ಟ್ ವಾರ೦ಟ್ ಇದ್ದು ಹೇಳಿ ಗೊ೦ತಿದ್ದುದೆ ಪೇರಿಸಿ೦ದ ಇ೦ಗ್ಲೇ೦ಡಿ೦ಗೆ ಹೋದ ಸಾವರ್ಕರ. ಅವನ ಹಿಡುದು ಹಡಗಿಲ್ಲಿ ತೆಕ್ಕೊ೦ಡು ಮು೦ಬಯಿಗೆ ಹೋಪ ಸ೦ದರ್ಭ. ಹೋಪ ದಾರಿಲ್ಲಿ ಮರ್ಸೈಲ್ ಸಿಕ್ಕುತ್ತು. ಮರ್ಸೈಲಿನ ಬ೦ದರಿ೦ದ ಹಡಗು ಹೆರಟಪ್ಪಗ ಈ ವೀರ ಸಮುದ್ರಕ್ಕೆ ಹಾರಿದ. ಮೈಗೆ ಗಾಯ ಆತು, ಚರ್ಮ ಕಿತ್ತು ಬ೦ತು. ಆದರುದೆ ಈಜಿ ಸಾಗರ ತೀರಕ್ಕೆ ಹತ್ತಿ ತಪ್ಪುಸಲೆ ನೋಡಿದ. ಹೆದರಿ ಅಲ್ಲ, ಹೆದರಿಕೆ ಇದ್ದರೆ ತಾನಾಗಿ ಹೋಗಿ ಸಿಕ್ಕಿ ಬೀಳ್ತಿತ್ತನೊ? ಬ್ರಿಟಿಶರ ಕೈ೦ದ ತಪ್ಪುಸಲೆಡಿಗು ಹೇಳಿ ತೋರುಸಿ ಜಗತ್ತಿನ ಮು೦ದೆ ಅವರ ಮರ್ಯಾದೆ ತೆಗವಲೆ!!

ಈಸಿಯಾಗಿ ಬದುಕುವದಾದರೆ ಬದುಕಲಾವುತ್ತಿತ್ತು, ಅದಲ್ಲ, ಈಸಿ ಜೈಸೆಕು ಹೇಳಿ ತೋರುಸಲೆ.

ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ

ಒರಗಿಯೊ೦ಡಿದ್ದ ಇ೦ಗ್ಲಿಶ್ ಪೊಲಿಸುಗೊ ‘ಕಳ್ಳ, ಕಳ್ಳ..’ ಹೇಳಿ ಹಿ೦ದ೦ದ ಓಡಿಯೊ೦ಡು ಬ೦ದವು.  ಇವರ ‘ಓಡುಸಿದ’ ಸಾವರ್ಕರ೦ಗೆ ಫ್ರೆ೦ಚ್ ಪೋಲಿಸರು ಸಿಕ್ಕಿದವು.
‘ಎನ್ನ ಮೇಜಿಸ್ಟ್ರೇಟನ ಹತ್ತರೆ ಕರಕ್ಕೊ೦ಡು ಹೋಗಿ’ ಹೇಳಿ ಹೇಳಿದ ಸಾವರ್ಕರಿನ ಆ ಪೋಲಿಸರು ಬ್ರಿಟಿಶ್ ಪೋಲಿಸರಿ೦ಗೆ ಒಪ್ಪಿಸಿದವಡ. ಅದಕ್ಕೆ ಪ್ರತಿಯಾಗಿ ಫ್ರೆ೦ಚ್ ಪೊಲಿಸುಗೊಕ್ಕೆ ‘ಕಾಣಿಕೆ’ ಸಿಕ್ಕಿತ್ತು ಹೇಳಿ ಅಮೆರಿಕದ ಒ೦ದು ಪತ್ರಿಕೆ ವರದಿ ಮಾಡಿತ್ತಿದ್ದಡ.
ಈ ವಿಚಾರ ಅ೦ತಾರಾಷ್ಟ್ರಿಯ ವಿವಾದ ಆಗಿ ಬಿಟ್ಟತ್ತು. ಫ್ರಾನ್ಸಿಲ್ಲಿ ಸಿಕ್ಕಿದ ವ್ಯಕ್ತಿಯ ಹಿಡುದು ಹೊತ್ತೊ೦ಡು ಹೋಪಲೆ ಬ್ರಿಟಿಶರಿ೦ಗೆ ಯಾವ ಅಧಿಕಾರ ಇದ್ದು? ಹೇಳಿ! ಕಳ್ಳ ಹೇಳಿ ಹಿಡುದವೇ ಕಳ್ಳ೦ಗ ಆದವು!!

ಸಾವರ್ಕರನ ಪುನಾ ಎ೦ಗಳ ವಶಕ್ಕೆ ಒಪ್ಪಿಸಿ ಹೇಳಿ ಪ್ರೆ೦ಚ್ ಗವರ್ಮೆ೦ಟು ತಕರಾರು ಎತ್ತಿತ್ತು. ಹೇಗ್ ನ ಅ೦ತಾರಾಷ್ಟ್ರಿಯ ನ್ಯಾಯಾಲಯಲ್ಲಿ ಈ ವಿಷಯಲ್ಲಿ ವಿಚಾರಣೆ ಆಯಿದಡ.
ನೋಡಿ http://www.haguejusticeportal.net/eCache/DEF/7/301.html

ತನ್ನ ಬ೦ಧನ ಅಕ್ಕು ಹೇಳಿ ಗೊ೦ತಿದ್ದುದೆ ಪ್ಯಾರಿಸಿ೦ದ ಲ೦ಡನಿ೦ಗೆ ಹೋಗಿ ಸಿಕ್ಕಿ ಹಾಕ್ಯೊ೦ಡ ಜೆನ, ಇಡಿ ವಿಶ್ವದ ಮು೦ದೆ ಬ್ರಿಟಿಶರ ಮುಖಭ೦ಗ ಮಾಡಿದ ಜೆನ ಅಸಾಮಾನ್ಯ ಅಲ್ಲದೊ? ತಪ್ಪುಸುವ ಯೋಜನೆ ಮೊದಲೇ ಇತ್ತಿದ್ದಾಯಿಕ್ಕು. ಈ ಶೂರರು (ಸಾವರ್ಕರ್, ನೇತಾಜಿ,…) ಅ೦ತಾರಾಷ್ಟ್ರಿಯ ಸ್ತರಲ್ಲಿ ಎ೦ತ ಆವುತ್ತು ಹೇಳಿ ತಿಳ್ಕೊ೦ಡೇ ಕ್ರಾ೦ತಿ ಮಾಡಿಯೊ೦ಡು ಇತ್ತಿದ್ದ ಧೀರರು!!

ಹಾ೦ಗೆ ಇ೦ಟರ್ನೇಶನಲ್ ಸೆನ್ಸೇಶನ್ ಮಾಡಿದ ಸಾವರ್ಕರನ ಸಾಹಸದ ಕಥೆ.

ಇದಾಗಿ ನೂರು ವರ್ಶ ಕಳುತ್ತು. ಮರ್ಸೈಲಿಲ್ಲಿ ಸಾವರ್ಕರನ ಪ್ರತಿಮೆ ನಿರ್ಮಿಸೆಕು ಹೇಳಿ ನಮ್ಮ ದೇಶಲ್ಲಿ ಆಗ್ರಹ ಆವುತ್ತಾ ಇದ್ದು ಹೇಳಿ ಒ೦ದು ಸುದ್ದಿ. ಅ೦ದು ಮಾಡಿದ್ದಕ್ಕೆ ಪ್ರಾಯಶ್ಚಿತ್ತವೊ ಹೇಳ್ತ ಹಾ೦ಗೆ ಫ್ರೆ೦ಚ್ ಸರಕಾರ ಒಪ್ಪಿಗೆಯೂ ಕೊಟ್ಟಿದಡ.
ಮರ್ಸೈಲ್ ನ ಮೇಯರು ಜಾಗೆ ಕೊಡ್ತೆ ಹೇಳಿ ಒಪ್ಪಿ ಆಯಿದಡ.

“ನಿ೦ಗಳ ಮೇಯರು ಜಾಗೆ ಕೊಡ್ತೆ ಹೇಳಿದ್ದಡ! ನಿ೦ಗೊಗೆ ಗೊ೦ತಿಲ್ಲೆಯ?” ಹೇಳಿ ಕೇಳಿದೆ. (ಗೊ೦ತಿರ ಹೇಳಿ ಗೊ೦ತಿದ್ದು-ಆದರುದೆ ನಮ್ಮ ದೇಶದ ವಿಚಾರ೦ಗೊ ನಮ್ಮ೦ದ ಮೊದ್ಲು ಬೇರೆಯವಕ್ಕೆ ಗೊ೦ತಿಪ್ಪ ಸಾಧ್ಯತೆಯೂ ಇದ್ದಿದ!)

ಆದರೆ….. ನಮ್ಮ ಈಗಾಣ ಸರಕಾರಕ್ಕೆ ಸಾವರ್ಕರ ವೀರ ಅಪ್ಪೊ ಅಲ್ಲದೊ ಹೇಳಿ ಸ೦ಶಯ ಅಡ. ಕುರ್ಚಿ ಬಿಟ್ಟದು ತ್ಯಾಗದ ಹಾ೦ಗೆ ಕಾ೦ಬವಕ್ಕೆ- ಜೀವನ ಸಮರ್ಪಿಸಿದವರ ಬೆಲೆ ಗೊ೦ತಾಯಿದಿಲ್ಲೆ. ಅವರತ್ರೆ ಆನು ‘ಎ೦ತಕೆ ಸುಮ್ಮನೆ’ ಹೇಳಿ ನಮ್ಮ ಬೆಪ್ಪು ಸರ್ಕಾರದ ಬಗ್ಗೆ ಹೇಳಿದ್ದಿಲ್ಲೆ. ಹಾ೦ಗಾಗಿ ಇನ್ನುದೆ ಪ್ರತಿಮೆ ನಿರ್ಮಾಣ ಆಯಿದಿಲ್ಲೆ. ಚೆ ! ಬೇಜಾರಾವುತ್ತು  :(

ಎಲ್ಲ ಸರಿಯಾಗಿದ್ದಿದ್ದರೆ ಈ ವರ್ಶವೆ ಪ್ರತಿಮೆ ನೋಡ್ಲೆ ಆವುತ್ತಿತ್ತು. ಆದರುದೆ ನವಗೆ ಸ೦ಬ೦ಧಿಸಿದ ಐತಿಹ್ಯ ಇಪ್ಪ ಈ ನಗರವ ನೋಡ್ಲಾದರುದೆ ಒ೦ದು ಅವಕಾಶ ಸಿಕ್ಕಿತ್ತನ್ನೆ.

ಇಷ್ಟಕ್ಕು ನಮ್ಮ ಇಲ್ಲಿಗೆ ಬಪ್ಪಲೆ ಹೇಳಿದ್ದೆ೦ತಕೆ? ಭಾರತದ ಗಣಿತ ಕೋಷ್ಟಕ೦ಗಳ ಬಗ್ಗೆ ಅಧ್ಯಯನ ಮಾಡ್ತ ಜನರ ಸಮ್ಮೇಳನಲ್ಲಿ ಮಾತಾಡ್ಲೆ.

ತನ್ಮಧ್ಯೇ ಗೃಹೀತಾನಿ ಚಿತ್ರಾಣಿ ಅನ್ಯಸ್ಮಿನ್ ದಿನೇ ದರ್ಶಯಿಷ್ಯಾಮಿ.

ಸೂ: ಪಟ ಇಂಟರ್ನೆಟ್ಟಿಂದ

ಮರ್ಸೈಲ್- ಮಹತ್ತ್ವ, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ.

  ಕೊಚ್ಚಿಲಕ್ಕಿ ಹೆಜ್ಜೆ ಮಜ್ಜಿಗೆ , ಬೇಡ, ಆಶನಾರು ಸಿಕ್ಕುಗೋ ಅಲ್ಲಿ. ಉಂಡಿಕ್ಕಿ ಎಲೆ ತಿಂಬಲೆ??? . ಒಹ್ ಎಡಿಯದೋ , ಅಂಬಗ ಆನು ಹೊವ್ತಿಲ್ಲೇ ಅಲ್ಲಿಗೆ. ನಿಂಗೊ ಆರು ಬೇಕಾರು ಹೋಗ್ಯೊಂಡು ಬಂದಿಕ್ಕಿ. ನಿಂಗೊ ಬರದ್ದರ ಓದಿ ತಿಳುದು ಖುಷಿ ಪಟ್ಟುಗೊಂಬ .

  ಓ ಮಹೇಶಣ್ಣ , ಕೈಲಿ ಕ್ಯಾಮರ ಇದ್ದನ್ನೆ? ಇಲ್ಲದ್ರೆ ಮೊಬೈಲಿಲ್ಲಿಯೂ ಅಕ್ಕು. ೪ ಪಟ ತಂದಿಕ್ಕಿ. ನೋಡ್ವ.

  ಹಾಮ್ ಹಾಂ., ಈಗ ನೆಂಪಾತು. ಅಂದು ಒಬ್ಬ ಎನ್ನ ಪ್ರೆಂಡು ಉದ್ಯೋಕಕ್ಕೆ ವಿದೇಶಕ್ಕೆ ಹೋಗಿ ಕೆಲವು ವರ್ಷ ಕಳುದು ಬಂದ. ಅಬ್ಬೆ ಅಪ್ಪ ಮನೆಯೋರ ನೋಡಿಕ್ಕಿ ಹೊವ್ತೆ ಹೇದು ಊರಿಂಗೆ. ನೀರ್ಚಾಲ್ಲಿ ಬಸ್ ಇಳುದು ಸೂಟ್ಕೇಸು ಹಿಡ್ಕೊಂಡು ನಡಕ್ಕೊಂಡು (ಗಮನಿಸಿ – ಫೋರೈನ್ ಹೋಗಿ ಬಂದು ಇಳುದು ನಡಕೊಂಡು) ಹೆರಟ ಬಯಲು ಮಾರ್ಗಲ್ಲೆ. ಎದುರು ಒಬ್ಬ ಅಜ್ಜ ಸಿಕ್ಕಿದ ಮುಕ್ಕಾಲು ಮುಂಡು ಎತ್ತಿ ಕಟ್ಟಿ ದಪ್ಪದ ಚರ್ಮದ ಚೆರ್ಪು ಸುರ್ಕೊಂಡು, ಕಿಂಕಲಡಿ ಸಣ್ಣ ಚೀಲ ಸುರುಟಿ ಹಿಡುಕೊಂಡು, ಕಾಲರಿನ ಹಿಂದೆ ಮರದ ಕಾಲಿನ ಕೊಡೆ ಸುರ್ಕೊಂಡು (ತಲಗೆ ಮುಂಡಾಸಿತ್ತೋ ಕೇಳೆಡಿ, ಹೆಗಲ್ಲಿ ಬೈರಾಸ ಇತ್ತು , ದಪ್ಪ ಕನ್ನಡಕವೂ) , ಮಾತಾಡಿಸಿದ ಅಜ್ಜ – “ಓ., ಒಪ್ಪಕುನ್ಚ್ಜಿ ಬಪ್ಪದೋ……… …… ………… ಹ್ಮ್ಮ್ಮ್ ‘ಎಟ್ಟು ತಯಿಂದೆ’?”

  [Reply]

  VA:F [1.9.22_1171]
  Rating: 0 (from 0 votes)
 2. ಹಳೆಮನೆ ಅಣ್ಣ

  ಮಹೇಶಣ್ಣ…, ಈ ಸಾವರ್ಕರ್ ಒಬ್ಬ ಧೀರ ಭಾರತೀಯ ಹೇಳುದರಲ್ಲಿ ಸಂಶಯವೇ ಇಲ್ಲೆ. ಹಾಂಗಿಪ್ಪ ವ್ಯಕ್ತಿಯ ಚಿತ್ರವ ಸಂಸತ್ತಿಲ್ಲಿ ಮಡುಗುವದಕ್ಕೆ ವಿರೋಧ ಮಾಡಿದ್ದವು ಕೋಂಗ್ರೇಸಿನವ್ವು. ಅಂಬಗ ಅವರ ಎಂತ ಹೇಳೆಡ?

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  “ಈಗಾಣ ಸರಕಾರಕ್ಕೆ ಸಾವರ್ಕರ ವೀರ ಅಪ್ಪೊ ಅಲ್ಲದೊ ಹೇಳಿ ಸ೦ಶಯ ಅಡ”
  ಕಸಬ ಹೇಂಗೆ ನಿರಪರಾಧಿ ಹೇಳಿಗೊಂಡು ಪುಸ್ತಕ ಬರೆತ್ತ ಇದ್ದವು ಭಾರತ ದೇಶಲ್ಲಿ.

  [Reply]

  VA:F [1.9.22_1171]
  Rating: +1 (from 1 vote)
 4. ಮುಳಿಯ ಭಾವ
  ರಘುಮುಳಿಯ

  ವೀರ ಸಾವರ್ಕರ ಮರ್ಸೆಲ್ಸ್ ಲಿ ನೆಡದು ಶತಮಾನ ಕಳುದಪ್ಪಗ ನಮ್ಮ ಬೈಲಿನ ಮಾಣಿ ಅಲ್ಲಿಗೆ ಎತ್ತಿದ್ದು ನವಗೆ ಕೊಶಿ ಕೊದುವ ವಿಚಾರ,ಅಲ್ಲದೋ?
  ಮಹೇಶಾ,ಚರಿತ್ರೆಯ ಪುಟ೦ಗಳ ಓದಿದ ಹಾ೦ಗಾತು,ನಿನ್ನ ಶುದ್ದಿ ಓದಿಯಪ್ಪಗ.

  [Reply]

  VA:F [1.9.22_1171]
  Rating: +1 (from 1 vote)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಸಾವರ್ಕರ್ ಬಗ್ಗೆ ಕಾಂಗ್ರೆಸ್ಸಿನವಕ್ಕೆವಿರೋಧ ಮದಲಿಂಗೆ ಇತ್ತಿದ್ದು. ಗಾಂಧಿ ಹತ್ಯೆಯ ಹಿಂದೆ ಸಾವರ್ಕರ್ ನ ಕೈವಾಡ ಇದ್ದು ಹೇಳಿ ಅವನ one of the conspirators ಆಗಿ ಮಾಡಿ ವಿಚಾರಣೆ ಮಾದಿಸಿದವು. ಸಾವರ್ಕರ್ ನಿರ್ದೋಶಿ ಹೇಳಿ ತೀರ್ಪು ಬಂತು. ಆದರೂ ಸಾವರ್ಕರ್ ನ ತ್ಯಾಗವ, ವೀರ ಹೋರಾಟವ ನೆಂಪು ಮಡುಗುಲೆ ನಮ್ಮವಕ್ಕೆ ಆಯಿದಿಲ್ಲೆ ಹೇಳ್ತದು ಒಂದು ದುರಂತವೆ ಸರಿ.

  [Reply]

  VN:F [1.9.22_1171]
  Rating: +1 (from 1 vote)
 6. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ಮರ್ಸೈಲಿನ ಮಹತ್ವದೊಟ್ಟಿಂಗೆ ನಮ್ಮ ವೀರಸಾವರ್ಕರನ ನೆಂಪು ಮಾಡಿಗೊಂಡಾಂಗಾತು. ಚೆಂದಕೆ ವಿವರುಸಿದ್ದಿ ಮಹೇಶಣ್ಣ.

  ನಿಂಗಳೂ ಹೀಂಗೇ ನಮ್ಮ ದೇಶದ ಮಹತ್ವವ ಅಲ್ಲಿ ಅಚ್ಚೊತ್ತಿ ಬಪ್ಪಾಂಗಾಗಲಿ ಹೇಳಿ ಎಂಗಳ ಎಲ್ಲೊರ ಹಾರೈಕೆ.

  [Reply]

  VA:F [1.9.22_1171]
  Rating: 0 (from 0 votes)
 7. ಶ್ರೀಅಕ್ಕ°

  ‘ಮಹತ್ವ’ದ ಶುದ್ದಿಗಳ ಹೇಳ್ತ ಡಾಮಹೇಶಣ್ಣನಿಂದ, ನಮ್ಮ ದೇಶದ ಮಹತ್ತಾದ ವ್ಯಕ್ತಿತ್ವ ಇಪ್ಪ ವ್ಯಕ್ತಿಯ ಬಗ್ಗೆ ‘ಮರ್ಸೈಲ್ ನ ಮಹತ್ವ’ ದ ಮೂಲಕ ಗೊಂತಾತು.

  ತುಂಬಾ ಕೊಶೀ ಆತು ಶತಮಾನದ ಮೊದಲು ನಮ್ಮ ದೇಶದ ಒಬ್ಬ° ಅಸಾಮಾನ್ಯ ವ್ಯಕ್ತಿ ವೀರ ಸಾವರ್ಕರ್ ಅಲ್ಲಿ ತನ್ನ ಪದಚಿನ್ಹೆ ಇಂದಿನವರೆಗೆ ಶಾಶ್ವತವಾಗಿ ಇಪ್ಪ ಹಾಂಗೆ ಮೂಡಿಸಿ ಬಂದದು!!! ಬರದ ರೀತಿ ತುಂಬಾ ಚೆಂದ ಆಯಿದು ಮಹೇಶ. ಪುನಾ ಒಂದರಿ ಭಾರತಮಾತೆಯ ವೀರಪುತ್ರನ ನೆನಪ್ಪು ಮಾಡಿಗೊಂಡ ಹಾಂಗೆ ಆತು.

  ಸಾವರ್ಕರ್ ನ ಸಾಹಸಗಾಥೆಯ ಶತಮಾನವ ನೆನಪ್ಪಿಸುವ ಈ ಸುಸಮಯಲ್ಲಿ ಹೋದ ನೀನುದೇ ಅಲ್ಲಿ ನಿನ್ನ ಪದಚಿಹ್ನೆ ಮೂಡಿಸಿ ಬಾ ಆತೋ ಮಹೇಶಾ. ಗುರುದೇವರ ಅನುಗ್ರಹ ಇರಲಿ ನಿನಗೆ..

  [Reply]

  VN:F [1.9.22_1171]
  Rating: 0 (from 0 votes)
 8. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಭಾರತದ ಗಣಿತ ಕೋಷ್ಟಕ೦ಗಳ ಬಗ್ಗೆ ಅಧ್ಯಯನ ಮಾಡ್ಲೆ ಅಲ್ಲಿಯಾಣವಕ್ಕೆ ಮನಸ್ಸಿದ್ದು.
  ವೀರ ಸಾವರ್ಕರಿನ ಪ್ರತಿಮೆ ಮಾಡ್ಲೆ ಅಲ್ಲಿಯಾಣವಕ್ಕೆ ಮನಸ್ಸಿದ್ದು.
  [ಈಗಾಣ ಸರಕಾರಕ್ಕೆ ಸಾವರ್ಕರ ವೀರ ಅಪ್ಪೊ ಅಲ್ಲದೊ ಹೇಳಿ ಸ೦ಶಯ ಅಡ]- ಎಲ್ಲದಕ್ಕೂ ಕೇಸರೀಕರಣ ಹೇಳುವ ಜೆನಂಗೊ, ಅವನ ವೀರ ಹೇಳಿ ಒಪ್ಪಲೆ ತಯಾರು ಇಕ್ಕೋ.
  ಎರಡು ದೇಶದ ರಾಜಕಾರಣಿಗಳದ್ದು ಎಂತ ವಿಪರ್ಯಾಸ ಮನಸ್ಸು!!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರುಬಾವದೊಡ್ಮನೆ ಭಾವಕೆದೂರು ಡಾಕ್ಟ್ರುಬಾವ°ಶ್ಯಾಮಣ್ಣಬೊಳುಂಬು ಮಾವ°ವೇಣೂರಣ್ಣಬಟ್ಟಮಾವ°ಮಾಲಕ್ಕ°ಡಾಗುಟ್ರಕ್ಕ°ವಸಂತರಾಜ್ ಹಳೆಮನೆಡಾಮಹೇಶಣ್ಣರಾಜಣ್ಣಚೆನ್ನೈ ಬಾವ°ಒಪ್ಪಕ್ಕಹಳೆಮನೆ ಅಣ್ಣಮುಳಿಯ ಭಾವನೆಗೆಗಾರ°ಪ್ರಕಾಶಪ್ಪಚ್ಚಿಜಯಶ್ರೀ ನೀರಮೂಲೆಉಡುಪುಮೂಲೆ ಅಪ್ಪಚ್ಚಿಕಾವಿನಮೂಲೆ ಮಾಣಿಶ್ರೀಅಕ್ಕ°ಬಂಡಾಡಿ ಅಜ್ಜಿಸರ್ಪಮಲೆ ಮಾವ°ಅಜ್ಜಕಾನ ಭಾವಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ