ಯಾತಿ.. ನ ಯಾತಿ… ನಾಯಾತಿ….. ಕಾ ಯಾತನಾ!

ಅಂದೊಂದರಿ ಭೂರಮೆ ಕಂಗೊಳಿಸುವ ಚೆಂದವ ರವಿ ನೋಡಿದ ವಿಷಯ ಹೇಳಿದ್ದು ನೆಂಪಿದ್ದಾ? ಸ್ಮರಂತಿ ವಾ?

ಮತ್ತೆಂತಾತು? ನೋಡಿ-  ತದನಂತರಂ ಕಿಮ್ ಅಭವತ್?

ಸ್ಪ್ರಿಂಗ್ ಲ್ಲಿ ಹಾರಾಡಿದ ಸೂರ್ಯ ಬೇಸಗೆಲ್ಲಿ ಪ್ರತಾಪ ತೋರುಸಿದ.  ತದನಂತರದ  ಆಟಂ ಕಾಲ ಮುಗಿವಲಾತು. ಇನ್ನು ಬಪ್ಪಲಿಪ್ಪದು ವಿಂಟರು.

ಸೂರ್ಯನಿಂದಾಗಿ  ಬಳಲಿ ಬೆಂಡಾಗಿ ಕೆಂಪುಕೆಂಪಾದ  ನಿಸರ್ಗ ಈಗ ಅಪರ್ಣೆ (ಎಲೆಗಳೆ ಇಲ್ಲದ್ದೆ) ಆವ್ತಾ ಇದ್ದು.

ಈಗ ರವಿಗೂ  ಚಳಿ ಹಿಡುದ್ದು.  ಕಾಂಬದೇ ಕಮ್ಮಿ.  ಬಪ್ಪದೇ ತಡವು;  ಹೋಪದು ಬೇಗ. (ಉದಿಯಪ್ಪದು 8 ಗಂಟೆಗೆ; ಐದು ಗಂಟೆಗೆ ಸೂರ್ಯಾಸ್ತ ಆವುತ್ತು!). ಇರುಳು ಹೆಚ್ಚು.

ಇದಾನೀಂ ಸೂರ್ಯಸ್ಯಾಪಿ ಶೈತ್ಯಪೀಡಾ!  ತಸ್ಯ ದರ್ಶನಮೇವ ದುರ್ಲಭಮ್!  ಆಗಮನಂ ವಿಲಂಬೇನ; ಕಿಂತು ಗಮನಂ ತು ಶೀಘ್ರಮ್!!

ಹಾಂಗಾಗಿ ಈಗ ರವಿಯ ಆಟ ಅಲ್ಲ!  ಇದು ನಿಶೆ ಮತ್ತು ನಿಶಾಕರನದ್ದು,  ಶೀತ ಮತ್ತು ಶೀತಾಂಶುವಿನದ್ದು!

ಹಾಂಗಿಪ್ಪಗ  ಎಂತಾಯಿದು  ಹೇಳಿರೆ…  ಈ ಕಥೆ — ಶ್ರೂಯತಾಮ್

– – – –

ನಿದ್ರಾಯಾತಿ ನ ಮಾನಸಂ ಲಸತಿ  ಚೇತ್  ತತ್ರ ಪ್ರಿಯಾಯಾಂ ಸದಾ

ಶೈತ್ಯೇಸ್ಮಿನ್ ಕಿಲ  ಸಾ  ನಿಶಾ  ಹಿಮಕರೇಣಾಶ್ಲಿಷ್ಯ  ಸಂಬಧ್ಯತೇ !

ಮಂದಾ ಚೇನ್ಮಮ ಧೀಃ ಕಥಂ ಹಿ ಕವಿತಾ ಸಂಯಾತಿ ಮನ್ಮಾನಸಂ

ನಿದ್ರಾ ಯಾತಿ ನಿಶಾ ನ ಯಾತಿ ಕವಿತಾ ನಾಯಾತಿ ಕಾ ಯಾತನಾ !

– – – –

[audio:http://oppanna.com/wp-content/uploads/2011/11/nidraa-yaati.mp3|titles=nidraa yaati]

ಒರಕ್ಕು ಬತ್ತಿಲ್ಲೆ; ಎಂತಕೆ?

ನಿದ್ರಾ+ಆಯಾತಿ  ನ = ಈ  ಒರಕ್ಕು ಬತ್ತೇ  ಇಲ್ಲೆ;

ಮಾನಸಂ ಲಸತಿ ಚೇತ್ ತತ್ರ ಪ್ರಿಯಾಯಾಂ ಸದಾ = ಮನಸ್ಸು ಅಲ್ಲಿ ಪ್ರಿಯೆಯ ಹತ್ರೆ ನರ್ತಿಸುತ್ತಾ ಇದ್ದರೆ!

ಇರುಳು ಮುಂದೆ ಹೋವ್ತಿಲ್ಲೆ; ಎಂತ ಕಾರಣ ?

ಶೈತ್ಯೇಸ್ಮಿನ್ ಕಿಲ  ನಿಶಾ = ಈ ಚಳಿಲ್ಲಿ ಈ ನಿಶೆ

ಹಿಮಕರೇಣಾಶ್ಲಿಷ್ಯ ಸಂಬಧ್ಯತೇ = ಚಂದ್ರನಿಂದ  ಬರಸೆಳೆದು ಬಾಹುಬಂಧನಕ್ಕೆ ಒಳಗಾಯಿದು !

ಪದ್ಯ ಬರವಲೆಡಿತ್ತಿಲ್ಲೆ; ಎಂತಾತು?

ಮಂದಾ ಚೇನ್ಮಮ ಧೀಃ = ಎನ್ನ ಬುದ್ಧಿಯೇ  ಮಂದ ಆದರೆ,

ಕಥಂ ಹಿ ಕವಿತಾ = ಹೇಂಗೆ ತಾನೇ ಕವಿತೆ

ಸಂಯಾತಿ ಮನ್ಮಾನಸಂ = ಎನ್ನ ಮನಸ್ಸಿಂಗೆ ಹೊಗುಗು ? !!

ಒಟ್ಟಿಲ್ಲಿ, (ಹೀಂಗೆ)

ನಿದ್ರಾ ಯಾತಿ = ನಿದ್ರೆ ಹೋತತ್ಲಾಗಿ

ನಿಶಾ ನ ಯಾತಿ = ಇರುಳು ಹೋವ್ತೇ ಇಲ್ಲೆ!

ಕವಿತಾ ನಾಯಾತಿ = ಕವಿತೆ ಬತ್ತೇ ಇಲ್ಲೆ;

ಕಾ ಯಾತನಾ! = ಯೋ! ಎಂತ ಒಂದು ಯಾತನೆಯೋ !!!

ಕಥಮ್  ಅಸ್ತಿ? ಹೇಂಗಿದ್ದು?

– – – – – –

ಡಾಮಹೇಶಣ್ಣ

   

You may also like...

14 Responses

 1. ಗಣೇಶ ಪೆರ್ವ says:

  ಓಹ್!!!!

  ಅಭಿನ೦ದನಾನಿ ಮಹೇಶ ಮಹೋದಯಃ! ಬಹು ಸಮ್ಯಕ್ ಅಸ್ತಿ.

 2. jayashree.neeramoole says:

  ಕವಿತಾ ತಥಾ ಚಿತ್ರಪಟಂ… ಅತ್ಯುತ್ತಮಂ ಅಸ್ತಿ| ಶೋಭಯಂತೀಂ ಭೂರಮಾಂ ಅಸ್ವಾದಿತ: ಭವಾನ್ ಸತ್ಯತ: ಭಾಗ್ಯವಾನ್ ಏವ|

 3. ತೆಕ್ಕುಂಜ ಕುಮಾರ ಮಾವ° says:

  “ಕವಿತಾ ನಾಯಾತಿ ಕಾ ಯಾತನಾ !”
  ಕವಿ ಈ ಯಾತನೆಂದ ಹೆರ ಬಂದು ಕೊನೆಗೂ “ಕವಿತೆ”ಯ ಕೈಹಿಡುದು ಬಂದ ಕತೆಯೂ ಬರಳಿ.

 4. ರಘು ಮುಳಿಯ says:

  ಮಹೇಶಾ,
  ಲಾಯ್ಕ ಆಯಿದು,ಅಲ್ಯಾಣ ಚಳಿಗೆ ಥರಥರ ನಡುಗಿ ತರತರ ಯಾತನೆಲಿದ್ದೆಯೋ?
  ಪ್ಯಾರಿಸ್ ಚಳಿಗೆ ಕವಿತೆ ಬತ್ತಿಲ್ಲೆ ಸರಿ,ಆದರೆ ಮನಸ್ಸು ಎಲ್ಲಿ ಮತ್ತೆ ಆರ ಒಟ್ಟಿ೦ಗೆ ಕೊಣಿತ್ತಾ ಇದ್ದು??ವಿವರಣೆ ಬಕ್ಕೊ?

  • ಒರಕ್ಕು ಬಾರದ್ರೂ ಕನಸು ಕಾಂಬಲೆಂತ ಅಲ್ಲದೊ? 🙂
   ಸ್ವಪ್ನೇ ಕಾ ದರಿದ್ರತಾ? (ಕನಸಿಂಗೆಂತ ದಾರಿದ್ರ್ಯ) ಹೇಳಿ ಹೇಳ್ಳಕ್ಕೊ?

 5. skgkbhat says:

  ಕವಿತೆ ಯಾತನೆಲೂ ಹುಟ್ಟುಗು,ಚಳಿಲೂ ಹುಟ್ಟುಗು…
  ಲಾಯ್ಕ ಆಯಿದು

  • ಯಾತನೆಗೆ ಅದುವೇ ಸಮಾಧಾನ, ಚಳಿಗೆ ಅದುವೇ ಬೆಚ್ಚನೆ !

   ಕವಿತಾ–
   ಯಾತನಾಯಾಂ ಸಾಂತ್ವನಂ
   ಶೈತ್ಯೇ ಸಾ ಏವ ಉಷ್ಣತಾ !

 6. ಚೆನ್ನೈ ಭಾವ says:

  ಶ್ರೀಮನ್ – ಉತ್ತಮಮ್ । ಸಮ್ಯಕ್ ಅಸ್ತಿ । ಶೈತ್ಯೇ ಕೃತ ಧ್ವನಿಮುದ್ರಣಂ ಅಪಿ ಸಮ್ಯಕ್ ಅಸ್ತಿ । ಗಾಯನಮ್ ಭಾವಪೂರ್ಣಮ್ ಅಸ್ತಿ । ಚಿತ್ರಾಣಿ ಅಪಿ ಮನೋಹರಂ ದೃಶ್ಯತೀ । ಶ್ಲಾಘನೀಯಮ್ ।

  ಅಹೋ..! ತತ್ರ ರಾತ್ರಿಃ ಅಧಿಕಮಸ್ತಿ ಕಿಲ? ಇದಾನೀಂ ವಯಮ್ ಸರ್ವೇ ಮಿಲಿತ್ವಾ ತತ್ರ ಏಕವಾರಂ ಗಮಿಷ್ಯಾಮಃ । ಅತ್ರಃ ಸಮಯಃ ನಾಸ್ತಿ । ತತ್ರ ಅಧಿಕ ಸಮಯಂ ಅಸ್ತಿ । ಸರ್ವೇ ಏಕತ್ರ ಸಮಾಹೂಯ ಸಮ್ಯಕ್ ಮನೋರಂಜನಮ್ ಕುರ್ಮಃ । ವಾಸ-ಭೋಜನಾರ್ಥಂ ಮಹೋದಯಸ್ಯ ಗೃಹಮಸ್ತಿ ಕಿಲ ., ಚಿಂತಾ ಮಾಸ್ತು ।

 7. ಸತ್ಯಮ್; ರಾತ್ರಿಃ ಅಧಿಕಾ! ಕಿಂತು ದಿನಂ ಅಲ್ಪಮ್!!
  ನಿದ್ರಾಪ್ರಿಯಾಣಾಂ ಲಾಭಃ ! 🙂
  ಅವಶ್ಯಂ ಸರ್ವೇ ಅಪಿ ಆಗಚ್ಛಂತು!!! ಕಿಂತು ಉಷ್ಣವಸ್ತ್ರಾಣಿ ಆನಯಂತು!
  ಶಿರಸ್ತ್ರಂ (ಟೊಪ್ಪಿ), ಸ್ವೇದಕಮ್ (ಸ್ವೆಟರು), ಆವರಕಮ್ (ಕೋಟು) ಅಪಿ ಆವಶ್ಯಕಾನಿ !!!
  — – – –
  {ಚಿತ್ರಾಣಿ ಅಪಿ ಮನೋಹರಂ ದೃಶ್ಯತೀ}
  ಚಿತ್ರಾಣಿ ಮನೋಹರಾಣಿ ದೃಶ್ಯಂತೇ (ಕಾಣುತ್ತವೆ)
  ದೃಶ್ಯತೇ =ಕಾಣುತ್ತದೆ
  ಅತ್ರಃ — ಅತ್ರ ವಿಸರ್ಗಃ ಮಾಸ್ತು!
  ರಾತ್ರಿಃ ಅಧಿಕಮಸ್ತಿ — ರಾತ್ರಿಃ ಅಧಿಕಾ ಅಸ್ತಿ
  ಅಧಿಕ ಸಮಯಂ — ಅಧಿಕಸಮಯಃ
  ಗಮಿಷ್ಯಾಮಃ = ಹೋವ್ತೆಯ°
  ಗಚ್ಛಾಮ = ಹೋಪ°

  • ಆಮ್ , ತಥೈವ ಸಮೀಚೀನಮ್ । ಸಾವಧಾನೇನ ಅವಲೋಕಯತಿ ಚೇತ್ ಕಂ ದೋಷಂ ಕೃತವಾನ್ ಇತಿ ಅವಗಚ್ಛಾಮಿ । ಚಿಂತಾ ನಾಸ್ತಿ। ಧನ್ಯವಾದಃ ।

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *