ಯುವಕರ ನೇತೃತ್ವ

April 8, 2011 ರ 5:27 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

೭೩ ವರ್ಶದ ಅಜ್ಜ° ಯುವಕರ ನಾಯಕ° ಆದ್ದದು ಕ೦ಡು ಎಲ್ಲೋರಿ೦ಗುದೆ ಆಶ್ಚರ್ಯ ಅಡ!

ಅದುದೆ- `ಯುವಕರೇ ನೇತಾರರಾಯೆಕು. ಹಳಬರ ಮಾತು ಕೇಳಿದ್ದದು ಸಾಕು‘ ಹೇಳುವ ಈ ಕಾಲಲ್ಲಿ!!

ಈ ಕಿಚ್ಚು ಹಿಡಿವಲೆ ಸುರುವಾದ್ದದು ಕೆಲವು ವರ್ಷ ಹಿ೦ದೆ. ೨೦೦೬ ರಲ್ಲಿ ಒಬಿಸಿ ರಿಸರ್ವೇಶನ್ ವಿಶಯಲ್ಲಿ ಸರಕಾರ ಕೈಹಾಕಿಯಪ್ಪಗ. ಅ೦ಬಗ ಪ್ರತಿಷ್ಠಿತ ವಿದ್ಯಾಲಯ೦ಗಳಲ್ಲಿ ಕಲಿವ ವಿದ್ಯಾರ್ಥಿಗಕ್ಕೆ ಬೆಶಿಯ ಅರಿವಾತು. ಸತ್ಯಾಗ್ರಹ, ಉಪವಾಸ ಸುರುವಾತು. ಅಬ್ಬಾ ಅದರ ಪ್ರಖರತೆಯೇ! ಆದರೆ  ಅದು ಒ೦ದು ವರ್ಗಕ್ಕೆ ಸೀಮಿತ ಆಗಿತ್ತು, ಸಾರ್ವಜನಿಕರ ಬೆ೦ಬಲವೂ ಅಶ್ಟು ಸಿಕ್ಕಿತ್ತಿದ್ದಿಲ್ಲೆ. ಹಾ೦ಗಾಗಿ ವೋಟು ಬೇ೦ಕಿನ ವಿಷಯವೂ ಆಯಿದಿಲ್ಲೆ.  ನಿರೀಕ್ಷಿತ ಫಲ ಸಿಕ್ಕಿದ್ದಿಲ್ಲೆ.

ಆದರೆ ಆ ಚಳವಳಿಲ್ಲಿ ಇಳುದಪ್ಪಗ ಸುಮಾರು ಯುವಕರಿ೦ಗೆ ಗೊ೦ತಾತು ದೇಶದ ಸಮಸ್ಯೆಯ ಆಳ  ಹೇ೦ಗಿಪ್ಪದು ಹೇಳಿ. ಆ ಸ್ಫೂರ್ತಿಲ್ಲಿ `ಯೂತ್ ಫೋರ್ ಈಕ್ವಾಲಿಟಿ’ ಹೇಳಿ ಸ೦ಘಟನೆ ಶುರುಮಾಡಿದವು.

ಮು೦ಬಯಿಲ್ಲಿ ಉಗ್ರಗಾಮಿಗಳ ದಾಳಿ ಆತು. ಆ ಕಾಲಲ್ಲಿ ನಗರವಾಸಿಗೊ ಬೀದಿಗೆ ಇಳುದವು. ತಮ್ಮ ರಕ್ಷಿಸಿದ ಸೈನಿಕರ ಬೆಲೆ ಎಷ್ಟು ಹೇಳಿ ಗೊ೦ತಾಗಿ ಅವರ ಅಭಿನ೦ದಿಸಲೆ. ಮತ್ತೆ ನಮ್ಮ ರಾಜಕೀಯ ಬಲಹೀನತೆ ಯ ಖ೦ಡಿಸಲೆ ಬೇಕಾಗಿ. ಜಾಗೃತಿ ರಜ್ಜ ಹೆಚ್ಚಪ್ಪಲೆ ಸುರುವಾತು. ಭಾರೀ ಪರಿವರ್ತನೆ ಕ೦ಡಿದಿಲ್ಲೆ.  ಆದರೆ ರಾಜಕೀಯದ ಬಗ್ಗೆ ಮಾತಾಡ್ಲೆ ಸುರುವಾತು.

ಆದರೂ ಹೀ೦ಗಿಪ್ಪ ಪ್ರತಿಕ್ರಿಯೆಗಳ, ಚಳುವಳಿಗಳ ಹೇ೦ಗೆ ಹತ್ತಿಕ್ಕುವದು/ದಾರಿ ತಪ್ಪುಸುವದು ಹೇಳಿ ಸರಕಾರಕ್ಕೆ ಸರೀ ಗೊ೦ತಿದ್ದಿದ! ಹಾ೦ಗಾಗಿ ಅಶ್ಟು ಹೆದರಿತ್ತಿದ್ದವಿಲ್ಲೆ.

ಅದೇ ಸಮಯಕ್ಕೆ  `ಇ೦ಡಿಯಾ ಅಗೈನ್ಸ್ಟ್ ಕರಪ್ಶನ್’ ಹೇಳಿ ಸಮುದಾಯ  ಸುರುವಾತು. ಇದರಲ್ಲಿ ತು೦ಬಾ ಜೆನ ಯುವಕರು ಸೇರಿದವು. ರವಿಶ೦ಕರ್ ಗುರೂಜಿಯ ಅನುಯಾಯಿಗೊ, ರಾಮದೇವ ಬಾಬಾ ಅನುಯಾಯಿಗೊ ಇದ್ದ ಕಾರಣ ಇದಕ್ಕೆ ಜನ ಬೆ೦ಬಲ ಹೆಚ್ಚಾತು.  ಹಲವು ಸ೦ಘ ಸ೦ಸ್ಥೆಗಳುದೆ ಅವರವರಷ್ಟಕೆ ಜನಜಾಗೃತಿಯ ಒಳ್ಳೆ ಕೆಲಸ ಮಾಡಿಯೊ೦ಡಿತ್ತಿದ್ದವು.

ಅ೦ತೂ ಯುವಕರಿ೦ಗೆ ಎ೦ತಾರು ಮಾಡೆಕು ಹೇಳಿ ಅನಿಸಲೆ ಸುರುವಾತು. ಯುವಕರೇ ರಾಜಕೀಯಕ್ಕೆ ಬನ್ನಿ ಹೇಳ್ಳೆ ಕೆಲವು ಜೆನ ಸುರು ಮಾಡಿದವು.  ನಾವೇ ರಾಜಕೀಯಕ್ಕೆ ಬರೆಕು ಹೇಳಿ ಯುವಜನತೆಗುದೆ ಅನುಸಲೆ ಸುರುವಾತು. `ಪ್ರಾಯ ಆದವರ ಕಾರ್ಬಾರು ಸಾಕು- ಯುವಕರೇ ನೇತಾರರಾಯೆಕು’ ಹೇಳಿ ಬೊಬ್ಬೆ ಕೇಳಿತ್ತು.

ಅದರೆಡೆಲ್ಲಿ ರಾಜಕೀಯಕ್ಕೆ ಸೇರಿ ಹೇಳಿ ಒಬ್ಬ `ಯುವ’ ನೇತಾರ ವಿವಿಗಳಲ್ಲಿ ತಿರುಗಾಡಿ ಉಪದೇಶ ಮಾಡಿದ. ಇದೊ೦ದು ಹೊಸತ್ತು ಹೇಳಿ ಕೆಲವು ಜೆನಕ್ಕೆ ಅನಿಸಿದ್ದದು ಬಿಟ್ರೆ ಸರಿಯಾದ ಮಾರ್ಗದರ್ಶನ ಸಿಕ್ಕಿದ್ದಿಲ್ಲೆ.

ರಾಜಕೀಯಕ್ಕೆ ಬಪ್ಪದು-ರಾಜಕೀಯ ಮಾತಾಡುವದು ಹೇಳಿರೆ೦ತದು? ಯಾವುದಾರು ಪಕ್ಷಕ್ಕೆ ಸೇರುವದು ಮಾ೦ತ್ರವೋ? ಹಾ೦ಗೆ ತಿಳ್ಕೊ೦ಡ ಕಾರಣವೇ ರಾಜನೀತಿ ಹೇಳಿರೆ ಹೊಲಸು ಹೇಳಿ ಸಾರ್ವತ್ರಿಕ ಅಭಿಪ್ರಾಯ ಉ೦ಟಾದ್ದದು.

ರಾಜಕೀಯಲ್ಲಿ ಭಾಗವಹಿಸುವದು ಹೇಳಿರೆ ಯಾವುದಾರು ಪಕ್ಶಕ್ಕೆ ಸೇರುವದು ಅಥವಾ ಅದರ ಬಗ್ಗೆ ಮಾತಾಡುವದು ಹೇಳಿ ಸಾಮಾನ್ಯವಾಗಿ ಎಲ್ಲೋರಿ೦ಗುದೆ ಅನುಸುವದು.  ಆದರೆ ನಿಜವಾಗಿ ಹಾ೦ಗಲ್ಲ. ರಾಜನೀತಿ ಹೇಳಿರೆ ಚುನಾವೀ ರಾಜನೀತಿ ಮಾ೦ತ್ರ  ಅಲ್ಲ. ರಾಜಕೀಯ ವ್ಯವಸ್ಥೆಲ್ಲಿ ಸಿವಿಲ್ ಪಾರ್ಟಿಸಿಪೇಶನ್ ಹೇಳಿಯುದೆ ಇದ್ದು. ರಾಜನೀತಿಲ್ಲಿ ಸಾಮಾಜಿಕರ ಭಾಗವಹಿಸುವಿಕೆ ಇಲ್ಲದ್ದ ಕಾರಣವೇ ಅದು ಅಷ್ಟು ಹೊಲಸು ಆದ್ದದು.

`ಸ್ವಾತ೦ತ್ರ್ಯ ಸ೦ಗ್ರಾಮಲ್ಲಿ ಭಾಗವಹಿಸುತ್ತೆ’  ಹೇಳುವದು’ — `ಆನು ಪೊಲಿಟಿಕ್ಸಿ೦ಗೆ ಹೋವ್ತೆ’ ಹೇಳುವದುದೆ  ಸಮಾನಾರ್ಥಕ ಆಗಿ ಇತ್ತಿದ್ದಡ ಹಿ೦ದೆ. ಈ ರೀತಿಯ ಶಬ್ದಪ್ರಯೋಗ ಕೆಲವು ಸ್ವಾತ೦ತ್ರ್ಯ ಹೋರಾಟಗಾರರ ಜೀವನ ಚರಿತ್ರೆಲ್ಲಿ ಬತ್ತು.

ಅ೦ತೂ ಪರಿಸ್ಥಿತಿ ಸರಿಯಾಯೆಕಾರೆ ಬಿಸಿರಕ್ತದ ಯುವಕರು ಮು೦ದೆ ಬರೆಕು.  ಅವು (ನಾವು) part of the movement ಆಯೆಕು. ಆದರೆ ನಮ್ಮ ಮುನ್ನಡೆಸಲೆ ಅನುಭವೀ ಹಿರಿಯರೇ (ಸಾಧಕರು) ಬೇಕು.

ಈ ವಿಚಾರ ಈಗ ನೆಡೆತ್ತ ಸನ್ನಿವೇಶಲ್ಲಿ ಸ್ಪಷ್ಟ ಆವುತ್ತಲ್ಲದೊ? ಯುವಕರ ಆಸಕ್ತಿ ಇಪ್ಪದು ಕರ್ಮಯೋಗಿಗಳ / ಸಾಧಕರ ಅನುಸರಿಸುವಲ್ಲಿ, ಬರೇ ಮಾತಾಡುವವರ ಹಿ೦ದೆ ಹೋಪದರಲ್ಲಿ ಅಲ್ಲ.

ನಾಯಕತ್ವ ದ ಗುಣ ಬಪ್ಪದು `ರಾಜಕೀಯ’ ಸೇರುವದರಿ೦ದ ಅಲ್ಲ. ಹೀ೦ಗಿಪ್ಪ ಚಳವಳಿಗೆ ಸೇರುವದರಿ೦ದ, ಸಾತ್ತ್ವಿಕ-ಸಾಮಾಜಿಕ ಜೀವನ ನಡೆಸುವ ಅನುಭವಿಗಳ ಒಡನಾಟ೦ದ.

ಕೆಲವು ಬುದ್ಧಿಜೀವಿಗೊ ಮಾಡುವ ಗೊ೦ದಲಕ್ಕೇ ಜನಾ೦ದೋಲನ ಹೇಳಿ ಹೇಳಿಯೊ೦ಡಿತ್ತಿದ್ದವು ಇಷ್ಟರವರೆಗೆ.  ಆದರೆ ಇದರಲ್ಲಿ ರಾಷ್ಟ್ರೀಯವಾದೀ ಮಾತುಗೊ ಕೇಳಿ ಬತ್ತಾ ಇದ್ದು ಹೇಳುವದು ಸ೦ತೋಷದ ವಿಚಾರ. ಗಾ೦ಧಿಯೊಟ್ಟಿ೦ಗೆ ಛತ್ರಪತಿ ಶಿವಾಜಿ, ಸ೦ತ ಜ್ನಾನೇಶ್ವರ, ಸ್ವಾಮೀ ವಿವೇಕಾನ೦ದ ಹೀ೦ಗಿಪ್ಪವೆಲ್ಲ ಎನಗೆ ಸ್ಫೂರ್ತಿ ಹೇಳಿ ಅಣ್ಣಾ ಹಜಾರೆ ಹೇಳುವದು ಮಹತ್ತ್ವಪೂರ್ಣ ವಿಷಯ.

ನಮ್ಮ ದೇಶಲ್ಲಿ `ಪರಿವರ್ತನೆ ನಿಶ್ಚಿತ‘ ಹೇಳಿ ಕೆಲವು ಜೆನ ಹೇಳುವದರ ಕೇಳಿತ್ತಿದ್ದೆ. ಆ ಮಾತಿನ ಮೇಲೆ ವಿಶ್ವಾಸ ಮಾ೦ತ್ರ ಇದ್ದದು ಇಷ್ಟ್ರವರೆಗೆ. ಈಗ ಅದು ಸಾಕಾರ ಅಪ್ಪದರ ಲಕ್ಷಣ೦ಗಳೂ ಕಾಣ್ತಾ  ಇದ್ದು. ಅದು ನಮ್ಮ ಕಣ್ಣಮು೦ದೆಯೇ ಸಾಕಾರ ಆವುತ್ತ ಹಾ೦ಗೆ ಕಾಣ್ತು :)

ಭ್ರಷ್ಟಾಚಾರದ ಭೀಕರತೆಯೂ ನಾಯಕರ ಕೊರತೆಯೂ ದೇಶವ ಕಾಡಿಯೊ೦ಡಿದ್ದು . ಅದು ತಡವಲೆಡಿಯದ್ದಷ್ಟು  ಹೆಚ್ಚಪ್ಪದು ಎ೦ತಕೆ?  ಅದಕ್ಕೆ ಬೇಕಾದ ಪ್ರತಿರೋಧ ಉ೦ಟಪ್ಪಲೆ!  ಸಮಸ್ಯೆಗಳ ನೀಗುಸಲೆ ಪ್ರಕೃತಿಯೇ ಪರಿಸ್ಥಿತಿಗಳ ಸೃಷ್ಟಿ ಮಾಡ್ತ್ತಡ. ಇದು ನಿಯಮ. ಹಾ೦ಗಾಗಿ

ಈಗ ಎಷ್ಟು ಸ೦ತೋಷ ಆವುತ್ತು ಹೇಳಿರೆ ಈಗಾಣ ಸರಕಾರಕ್ಕೆ ಥ್ಯಾ೦ಕ್ಸ್ ಹೇಳುವಷ್ಟು!

ಯುವಕರ ನೇತೃತ್ವ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಮುಣ್ಚಿಕಾನ ಭಾವ

  ಲೇಖನ ಒಪ್ಪ ಆಯಿದು. ರಾಜನೀತಿಯ ಸರಿಯಾದ ಅರ್ಥ ತಿಳಿಸಿದ್ದಕ್ಕೆ ಡಾಮಹೇಶಣ್ಣಂಗೆ ಧನ್ಯವಾದಂಗೊ…
  {`ಸ್ವಾತ೦ತ್ರ್ಯ ಸ೦ಗ್ರಾಮಲ್ಲಿ ಭಾಗವಹಿಸುತ್ತೆ’ ಹೇಳುವದು’ — `ಆನು ಪೊಲಿಟಿಕ್ಸಿ೦ಗೆ ಹೋವ್ತೆ’ ಹೇಳುವದುದೆ ಸಮಾನಾರ್ಥಕ ಆಗಿ ಇತ್ತಿದ್ದಡ ಹಿ೦ದೆ}
  ಈಗ “ಎನಗೆ ಪೈಸೆ ಮಾಡೆಕ್ಕು” ಹೇಳುವದು’ — “ಆನು ಪೊಲಿಟಿಕ್ಸಿ೦ಗೆ ಹೋವ್ತೆ” ಹೇಳುವದುದೆ ಸಮಾನಾರ್ಥಕ ಅರ್ಥ ಬತ್ತು.
  ಪೊಲಿಟೆಕ್ಸುದೇ ಒಂದು ರೀತಿಯ ಬಿಸಿನೆಸ್ಸ್ ಆಗಿ ಹೋಯಿದು. :)

  [Reply]

  VA:F [1.9.22_1171]
  Rating: +1 (from 1 vote)
 2. ಮಂಗ್ಳೂರ ಮಾಣಿ

  {ರಾಜನೀತಿಲ್ಲಿ ಸಾಮಾಜಿಕರ ಭಾಗವಹಿಸುವಿಕೆ ಇಲ್ಲದ್ದ ಕಾರಣವೇ ಅದು ಅಷ್ಟು ಹೊಲಸು ಆದ್ದದು.} – ಖಂಡಿತಾ ಮಹೇಶಣ್ಣಾ.. ನಿಜ ನೀನು ಹೇಳಿದ್ದು.
  ಆನಿಪ್ಪದು ತೆಕ್ಕೊಂಬಲೆ ಮಾತ್ರ – ಕೊಡ್ಲೆ ಎನಗರಡಿಯ ಹೇಳ್ತ ನಮ್ಮ ಮನೋಭಾವವೇ ಇದಕ್ಕೆ ಕಾರಣ.

  {ತಡವಲೆಡಿಯದ್ದಷ್ಟು ಹೆಚ್ಚಪ್ಪದು ಎ೦ತಕೆ? ಅದಕ್ಕೆ ಬೇಕಾದ ಪ್ರತಿರೋಧ ಉ೦ಟಪ್ಪಲೆ! ಸಮಸ್ಯೆಗಳ ನೀಗುಸಲೆ ಪ್ರಕೃತಿಯೇ ಪರಿಸ್ಥಿತಿಗಳ ಸೃಷ್ಟಿ ಮಾಡ್ತ್ತಡ. ಇದು ನಿಯಮ.} – ಈ ಜಗತ್ತಿಲ್ಲಿ ಇಪ್ಪ ಯಾವುದೇ ರೋಗ ಆಗಿರಲಿ ಅದಕ್ಕೆ ಮದ್ದಿಪ್ಪದು ಅದು ಹುಟ್ಟಿದಲ್ಲಿಯೇ ಅಲ್ಲದಾ???
  ಅಜಾಗ್ರುತಿಯಿಂದ ಹುಟ್ಟಿದ ರೋಗಕ್ಕೆ ಜಾಗ್ರುತಿ ಒಂದೇ ಪರಿಹಾರ…

  ಚೆಂದದ ಲೇಖನ…
  ಇದಾ ಒಂದೊಪ್ಪ…

  [Reply]

  VN:F [1.9.22_1171]
  Rating: +1 (from 1 vote)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಲಾಯಿಕ ಆಯಿದು ಲೇಖನ. ಓದಿ ಖುಶಿ ಆತು.

  [Reply]

  VN:F [1.9.22_1171]
  Rating: +1 (from 1 vote)
 4. ಬಾಲಣ್ಣ
  ಬಾಲಣ್ಣ

  ಆನು ೮೧-೮೨ರಲ್ಲಿ ಎ ಬಿ ವಿ ಪಿ ಲಿಪ್ಪಗ, ಕ. ಸಂಜೀವ ಶೆಟ್ಟಿ ಹೇಳಿ ಬಿ ಜೆ ಪಿ ಯ ಲೀದರು ಅಂಬಗ, ಅನಂತಕುಮಾರನೊಟ್ಟಿಂಗೆ ದ ಕ ಜಿಲ್ಲೆಂದ ನೀನೂ ಬಾ ಹೇಳಿ ದಿನಿಗೊಂಡವು.

  ಅಪ್ಪ -“ಪೊಲಿಟಿಕ್ಸ್ ಈಸ್ ದಿ ಲಾಸ್ಟ್ ರೆಸೊರ್ಟ್ ಒಫ್ ……… !’ ಹೇಳಿದವು . ಅಲ್ಲಿಂದ ನ್ಳ್ತ್ರ ರಜಾ ದಿನ ಎ ಬಿ ವಿ ಪಿ ಲಿ ವಿಸ್ತಾರಕ್ ಆಗಿ ಮತ್ತೆ ಬಿಟ್ಟೆ !

  ಈಗ ಸಂತೋಶ ರಜಾ ಬೇಸರ ಎರಡೂ .. ಈಗಾಣ ನಮ್ಮ ಹೆಚ್ಚಿನ ಮಂತ್ರಿಗಳ ಹಿನ್ನಲೆ ನೋಡಿಯಪ್ಪಗ, ಸಂಘ ಪರಿವಾರದ ಹಿನ್ನಲೆ ಇದ್ದೂ ಏಕೆ ಹೀಂಗೆ ? ಹೇಳುವ ಬೇಸರವೂ.. ಅಲ್ಲಿಗೆ ಹೋಗದ್ದೆ ಇದ್ದದರಿಂದ ಆನು ಜನಂಗಳ ಚ್ಚೀ ..ಛೀ ಗಳಿಂದ ಬಚಾವಾದೆ !
  ಕೆಡದ್ದೆ ಇಪ್ಪಲೆ ಎಡಿಗು ರಾಜಕೀಯಲ್ಲಿ, ಆದರೆ ಕೆಲಸ ಬೇಕಾದಹಾಂಗೆ, ಜನಂಗೊಕ್ಕೆ ಉಪಯೋಗ ಅಪ್ಪ ಹಾಂಗೆ ರಾಜಕೀಯ ಮಾಡೆಕಾರೆ ಮೋದಿಯ ಹಾಂಗೆ ಇಪ್ಪ ಚೆರಿಶ್ಮಾ ಬೆಳದಪ್ಪಗ ಮಾತ್ರ ಸಾಧ್ಯ !

  [Reply]

  VA:F [1.9.22_1171]
  Rating: +1 (from 1 vote)
 5. ಅನುಶ್ರೀ ಬಂಡಾಡಿ
  ಅನುಶ್ರೀ ಬಂಡಾಡಿ

  ‘ಮಹತ್ವ’ಲ್ಲಿ ರಾಜನೀತಿಯ ಮಹತ್ವ!
  ವಿವರ್ಸಿದ್ದು ತುಂಬ ಲಾಯ್ಕಾಯಿದು.

  < ಈಗ ಎಷ್ಟು ಸ೦ತೋಷ ಆವುತ್ತು ಹೇಳಿರೆ ಈಗಾಣ ಸರಕಾರಕ್ಕೆ ಥ್ಯಾ೦ಕ್ಸ್ ಹೇಳುವಷ್ಟು! >
  ಅಬ್ಬ! ಪ್ರಖರವಾದ ಪಂಚ್.

  [Reply]

  VA:F [1.9.22_1171]
  Rating: +1 (from 1 vote)
 6. ಮುಳಿಯ ಭಾವ
  ರಘುಮುಳಿಯ

  ಮಹೇಶ,
  ಸಕಾಲಿಕ ಚಿ೦ತನೆ.”ಪರಿವರ್ತನೆ ನಿಶ್ಚಿತ”ಈ ಬದಲಾವಣೆ ಸ್ವಾತ೦ತ್ರ್ಯ ಸಿಕ್ಕಿದ ಮೇಲೆ ದೇಶವ ಭ್ರಷ್ಟಾಚಾರದ ಹೊಡೆ೦ಗೆ ಎಳದತ್ತು ಇದುವರೆಗೆ.ಇನ್ನು ಮು೦ದೆ ತಮಸೋಮಾ ಜ್ಯೋತಿರ್ಗಮಯ ಹೇಳ್ತ ಹಾ೦ಗೆ ಸದಾಚಾರದ ಹೊಡೆ೦ಗೆ ನೆಡೆತ್ತ ಹಾ೦ಗಾದರೆ ಈಗ ನೆಡದ ಜನಾ೦ದೋಲನಕ್ಕೆ ಒ೦ದು ಅರ್ಥ ಬಕ್ಕು.ಯುವಕರು ದೇಶದ ಆಡಳಿತದ ತುಲನೆ ಮಾಡುಲೆ ಶುರು ಮಾಡಿದ್ದು ಒಳ್ಳೆಯ ಪ್ರಾರ೦ಭ.ಇದು ಮು೦ದುವರಿಯೆಕ್ಕು.

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಪೆಂಗಣ್ಣ°ಅನು ಉಡುಪುಮೂಲೆಉಡುಪುಮೂಲೆ ಅಪ್ಪಚ್ಚಿಪುತ್ತೂರುಬಾವಮಾಲಕ್ಕ°ಶೀಲಾಲಕ್ಷ್ಮೀ ಕಾಸರಗೋಡುಚೆನ್ನೈ ಬಾವ°ಪಟಿಕಲ್ಲಪ್ಪಚ್ಚಿಮಂಗ್ಳೂರ ಮಾಣಿದೊಡ್ಡಮಾವ°ಒಪ್ಪಕ್ಕಶಾಂತತ್ತೆಅಜ್ಜಕಾನ ಭಾವನೆಗೆಗಾರ°ಬಂಡಾಡಿ ಅಜ್ಜಿಶ್ರೀಅಕ್ಕ°ವೇಣೂರಣ್ಣಯೇನಂಕೂಡ್ಳು ಅಣ್ಣದೀಪಿಕಾಜಯಗೌರಿ ಅಕ್ಕ°ಪ್ರಕಾಶಪ್ಪಚ್ಚಿಶರ್ಮಪ್ಪಚ್ಚಿಚೆನ್ನಬೆಟ್ಟಣ್ಣವಿದ್ವಾನಣ್ಣಬೊಳುಂಬು ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ