ರವಿ ಚೆಂದ ನೋಡುವದು !! (ಚಿತ್ರ+ಕಾವ್ಯ)

April 23, 2011 ರ 7:34 pmಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇಲ್ಲ್ಯಾಣ ಬೆಶಿಲು ಹೇಂಗಿದ್ದು? ಹೇಳಿ ಚೆನ್ನೈ ಭಾವನ ಜಿಜ್ನಾಸೆ.  ಇಲ್ಲಿ ಬೇಸಗೆ ಸುರುವಾಯಿದಿಲ್ಲೆ.

ಹೇಳಿ ಕೇಳಿ ಈಗ ಸ್ಪ್ರಿಂಗ್ ಸಮಯ. ಬೇಸಗೆಂದ ಮೊದಲು – ಚಳಿಗಾಲದ ನಂತರ ಇಪ್ಪ ಕಾಲ. ಇರುಳಿಂದ ದಿನದ ಪ್ರಮಾಣ ಹೆಚ್ಚು. ಇಲ್ಲಿ ಬೇಗ ಉದಿಯಾದರೆ ಕಸ್ತಲಪ್ಪಗ  ಒಂಭತ್ತು ಗಂಟೆ ಆವುತ್ತು. ಜೂನಿಲ್ಲಿ ೧೦  ಗಂಟೆ ಕಳಿಯೆಕು ಕತ್ತಲೆ ಆಯೆಕಾರೆ.  ಸೂರ್ಯ ಹೆಚ್ಚು ಹೊತ್ತು ಕಾಂಬ ಸಮಯ. ಇನ್ನು ಮೂರು ತಿಂಗಳು ಹಾಂಗೆಯೇ. ಸೂರ್ಯ° ಬೇಗ ಉದಯ ಆಗಿ ಮೆಲ್ಲಂಗೆ ಬೇಕೋ ಬೇಡದೋ ಹೇಳಿ ಮೆಲ್ಲಂಗೆ ಅಸ್ತಾಚಲಕ್ಕೆ ಸಾಗುವದು. ಅದೆಂತಕಾಗಿಕ್ಕು? ಹೇಳಿ  ಒಂದು ಕಾರಣ ಹುಡ್ಕಿ ಸಿಕ್ಕಿದ್ದು. ಅದರ ಸಂಸ್ಕೃತ ಪದ್ಯಲ್ಲಿ ಕೇಳುವ–

ಗೇಹಾತ್ ಸತ್ವರನಿರ್ಗತೋ ರವಿರಯಂ ಕಿಂ ಕಾರಣಂ ಜ್ನಾಯತಾಂ!!!

ಈ ರವಿ ತನ್ನ ಮನೆಂದ ಬೇಗನೇ ಅಂಬೆರ್ಪಿಲ್ಲಿ ಹೆರಟಿದ°  ಎಂತ ಹೇಳಿ ಕಾರಣ ತಿಳ್ಕೊಳ್ಳಿ! ಎಂತಕೆ ಹೇಳಿರೆ

ಈ ಸಮಯ ಹೂಗು ಅರಳುವ ಸಮಯ. ಟ್ಯೂಲಿಪ್ ಹೇಳುವ ಹೂವಿನ ಸೀಸನ್ ಇದು. ಭೂಮಿ ವರ್ಣರಂಜಿತವಾಗಿ ವಿಧವಿಧದ ಹೂಗಳಿಂದ ಕಂಗೊಳಿಸುವದು ಈಗ. ಅದರ ನೋಡ್ಲೆ ಬೇಕಾಗಿ ಬೇಗ ಬಪ್ಪದು; ಅದರ ನೋಡಿದಲ್ಲೇ ಬಾಕಿ ನಮ್ಮ  ಸೂರ್ಯ°!!

ಅದನ್ನೇ ನಾವು ಹೀಂಗೆ ಹೇಳಿರೆ ನಿಂಗೊಗೆ ಅರ್ಥ ಅಕ್ಕೊ?

ಪುಷ್ಪೈರದ್ಭುತವರ್ಣಕೈಃ ಬಹುವಿಧೈಃ ಸಂಶೋಭಿತಾ ಭೂರಮಾ

ಮಾರ್ಗೇ ಯಾನ್ ಯುವೇವ ಸೋಪಿ ನ ಗೃಹಂ ಪ್ರಸ್ಥಾತುಕಾಮಾಯತೇ !

ಪಶ್ಯನ್ನೇವ ಮುದಾ ಸುಮಂ ಸ್ವಸಮಯಂ ಸಂಯಾಪ್ಯ ಸಂಮೋದಯನ್

ಸಂಪೂರ್ಯಾರುಣಿಮಾಂ ಕಪೋಲಯುಗಲೇ ಸಂಯಾತಿ ಮಂದಂ ಮುದಾ !!

ಅರ್ಥ–

ಈಗ ಭೂರಮೆ ಬಹುವಿಧ ಬಣ್ಣಬಣ್ಣದ ಹೂಗಳಿಂದ ಶೋಭಿಸುತ್ತಾ ಇಪ್ಪದಿದಾ!

(ಹಾಂಗಾಗಿ) ಮಾರ್ಗಲ್ಲಿ ಹೋಪ (ಅಡ್ಡಾಡುವ) ಯುವಕರ ಹಾಂಗೆ ಸೂರ್ಯಂಗುದೆ ಮನೆ ಸೇರಲೆ ಮನಸ್ಸಿಲ್ಲೆ!

ಹೂಗಳ ಚೆಂದ ನೋಡಿಯೊಂಡೇ ತನ್ನ ಸಮಯ ಯಾಪನೆ ಮಾಡಿಯೊಂಡು ಖುಷಿ ಪಟ್ಟೊಂಡು

ಕಡೆಂಗೆ ತನ್ನ ಕಪೋಲಂಗಳೆರಡರಲ್ಲಿ ಅರುಣವರ್ಣವ ತುಂಬುಸಿಯೊಂಡು (ಕೆಪ್ಪಟೆ ಕೆಂಪಾಗಿಸಿಯೋಂಡು) ಮೆಲ್ಲಂಗೆ (ಮನೆಗೆ) ಹೋವ್ತ°!  (ಇಲ್ಲದ್ರೆ ಅಮ್ಮ ಬೈಗದ!)

ಪದ್ಯದ ಛಂದಸ್ಸು — ಶಾರ್ದೂಲವಿಕ್ರೀಡಿತ

ರಾಗ – ಮಂಗಲಾಷ್ಟಕದ್ದು (ಅಥವಾ ಯಾಕುಂದೇಂದು…ಶ್ಲೋಕ)

ಪಟಂಗ

ರವಿ ಚೆಂದ ನೋಡುವದು !! (ಚಿತ್ರ+ಕಾವ್ಯ), 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಡಾಮಹೇಶಣ್ಣ
  ಮಹೇಶ

  ಹಸ್ತಕ್ಷೇಪವೊ? ಕುಸುಮ ಬಾಲೆಯರ ಹಾರುವ ಮುತ್ತಿನ ಮತ್ತಿನ ಗಮ್ಮತ್ತೋ? ಉಮ್ಮಪ್ಪ!

  ಹೀಂಗೆ ಹೇಳಿರಕ್ಕೊ ಸುಭಗಣ್ಣಾ?

  ಸ್ವಸ್ಮೈ ಕೃತ್ವಾ ಸುಮಸ್ಮಿತಂ
  ಕುಸುಮ-ಶರ-ಪೀಡಿತಃ !
  ರಂಜಯತಿ ಸ್ವಕಲ್ಪಿತ-
  ವಿಹಂಗಾಧರಮುದ್ರಯಾ !!

  ಆ ಹೂಗು ನಗೆ ಮಾಡಿದ್ದು ತನಗಾಗಿಯೇ ಹೇಳಿ ತಿಳ್ಕೊಂಡು ‘ಹೂಬಾಣ’ ಪೀಡಿತನಾದವ° ಹಾರಿ ಬಂದ ಮುತ್ತಿನ ಕಲ್ಪಿಸಿಯೊಂಡು ತನ್ನ ತಾನೇ ಕೆಂಪಾಗಿಸಿಯೊಂಡ!!
  (ವಿಹಂಗಾಧರಮುದ್ರೆ=ವಿಹಂಗ+ಅಧರಮುದ್ರೆ) ಹಾಂಗೊಂದು ಇದ್ದಡ! 😉
  (ವಿಹಂಗ=ಹಾರುವ / ಫ್ಲೈಯಿಂಗ್)

  ‘ಕುಸುಮ’ದ ಮೇಲೆ ಷಟ್ಪದಿ ಕೂದರೆ ಹೀಂಗೆ (ಸಂಸ್ಕೃತಲ್ಲಿ)–

  ಧರಣ್ಯಾಂ ಸುಮಹಾಸ-
  ಸರಣೀಮಿಹ ದೃಷ್ಟ್ವಾ
  ಶರಕುಸುಮಬಾಧಾ ಮನಸಿ ತಸ್ಯ ಹಿ !
  ಸರಸೇನ ವಿಹಂಗಾ-
  ಧರಮುದ್ರಯಾ ಪಶ್ಯ
  ಕಿರಣೇಶ-ಕಪೋಲೇ ಅರುಣರಾಗಃ !!

  ಅರ್ಥ ಅದುವೇ….
  (ಧರಣಿಯ ಮೇಲೆ ಹೂಗಳ ನೆಗೆಮಾಲೆಯ ನೋಡಿ ಅವನ ಮನಸ್ಸಿಲ್ಲಿ ಆದ ಕುಸುಮಶರನ ಪ್ರಭಾವವೇ! ಸರಸವಾಗಿ ಬಂದ ಮುತ್ತಿನಿಂದ — ಅದಾ ನೋಡಿ ಕಿರಣೇಶನ ಕೆನ್ನೆಲ್ಲಿ ಅರುಣ ರಾಗ (ಬಣ್ಣ)!! )

  ಕನ್ನಡದ ಛಂದಸ್ಸು ಸಂಸ್ಕೃತಕ್ಕೆ ಹೇಂಗಾವುತ್ತು ಹೇಳಿ ನೋಡಿದ್ದದಷ್ಟೇ.

  [Reply]

  ಮುಳಿಯ ಭಾವ

  ರಘುಮುಳಿಯ Reply:

  {ವಿಹಂಗಾಧರಮುದ್ರೆ} ಕುಳಕ್ಕೋಡ್ಲು ಅಪ್ಪಚಿಗೆ ಹೇಳೆಕ್ಕಾತನ್ನೆ,ಮಾಣಿ ಹೊಸ ಸ೦ಶೋಧನೆ ಮಾಡಿದ್ದ° ಹೇಳಿ. FLYING KISS – ಸಂಸ್ಕೃತಲ್ಲಿಯೂ ಬ೦ದ ಹಾ೦ಗಾತು.

  [Reply]

  ಸುಭಗ

  ಸುಭಗ Reply:

  😀 ಹ್ಹ ಹ್ಹ ಹ್ಹಾ…! ಎನಗೆ ಅಂದೇ ಸಂಶಯ ಬಯಿಂದು.. ವಿಮಾನಲ್ಲಿ ಕೂದಂಡು ಪಡುವಂತಾಗಿ FLY ಮಾಡಿಂಡಿಪ್ಪಗಳೇ ನಮ್ಮ ಮಹೇಶಣ್ಣಂಗೆ ಹೀಂಗಿರ್ತ ಕಲ್ಪನೆಗೊ ಎಲ್ಲ ಬಪ್ಪಲೆ ಸುರುವಾದ್ದು..! 😉

  ಸಾರಂಗ-ಭೃಂಗ-ವಿಹಂಗ ಮುದ್ರಾ ಚತುರ ನಟರಾಜಂಗೂ ಈ ಮುದ್ರೆ ಗೊಂತಿರ!

  ಏನೇ ಆಗಲಿ ಮುದ್ರೆಯ ಹೆಸರು, ಕುಸುಮ ಛಂದಸ್ಸು ಭಾರೀ ಚೆಂದ ಆಯಿದು..

  [Reply]

  VN:F [1.9.22_1171]
  Rating: +1 (from 1 vote)
 2. ಮುಳಿಯ ಭಾವ
  ರಘುಮುಳಿಯ

  ಮಹೇಶಾ,
  ಇದು ಭೂಮಿಗೆ ಸ್ವರ್ಗದ ನ೦ದನವನವೇ ಇಳುದ್ದದೋ ಹೇಳಿ ಸ೦ಶಯ ಆತೊ೦ದರಿ.

  ಕೆ೦ಪು ಅರಶಿನ ಬಣ್ಣಗಳ ಸುಮ
  ಕ೦ಪು ಹರಡಿದ ಭೂರಮೆಲಿ ಕೆಮಿ
  ಗಿ೦ಪು ಕೊಡಿವಾ ರಾಗವಾತೀ ಮ೦ಗಳಾಷ್ಟಕವೂ
  ತ೦ಪುಗಾಳಿಯ ಪರಿಸರದ ಹಳೆ
  ನೆ೦ಪು ಬ೦ದೀಗೆನ್ನ ಮನಸಿಲಿ
  ಪ೦ಪ ರನ್ನರ ಪದವೆ ತಿರುಗುತ್ತಿದ್ದು ಪಟನೋಡಿ

  ಮುದ್ದಣ ಈ ಪರಿಸರ ನೋಡಿದ್ದರೆ ಅತ್ಯದ್ಭುತ ಕಾವ್ಯವನ್ನೇ ಸೃಷ್ಟಿ ಮಾಡುತ್ತಿದ್ದನೋ ಏನೋ..

  [Reply]

  VA:F [1.9.22_1171]
  Rating: +1 (from 1 vote)
 3. ಮುಳಿಯ ಭಾವ
  ರಘುಮುಳಿಯ

  ಮಹೇಶಾ,
  ನಿನ್ನ ಚೆ೦ದದ ಚಿತ್ರ-ಕಾವ್ಯ ಹೊಸತ್ತು ಕಲಿವಲೆ ಪ್ರೇರಣೆ ಕೊಟ್ಟತ್ತಿದಾ.ಶಾರ್ದೂಲ ವಿಕ್ರೀಡಿತದ ಪರಿಚಯ ರಜಾ ಆತು.

  ಸಾಲ೦ಕಾರದ ಕೂಸು ಭೂಮಿ ರಮೆಯೇ ನಿ೦ದತ್ತೊ ಸಂತೋಷದೀ
  ಪ್ಯಾರೀಸಾತದ ಡಾ ಮಹೇಶ ನಿಜಕೂ ಈ ಭೂಮಿಯಾ ನಂದನಾ
  ಕಾವ್ಯಾಲ೦ಕೃತವಾದ ಶುದ್ದಿ ವಿಷಯಾ ನೋಡೀಗ ಮಾರಾಯನೇ
  ಆನಂದಾಮೃತ ಧಾರೆ ನೀರು ಹರುದು ಬಂತೀಗಳೇ ಬೈಲಿಲೀ II

  [Reply]

  VA:F [1.9.22_1171]
  Rating: +1 (from 1 vote)
 4. ಸುಭಗ
  ಸುಭಗ

  ವಾಹ್.. ವಾಹ್..! ಮಹೇಶಣ್ಣ , ಮುಳಿಯ ಭಾವ- ಈ ಎರಡು ಕವಿಶಾರ್ದೂಲಂಗೊ ಬೈಲಿಲ್ಲಿ ಕ್ರೀಡಿಸಿಂಡಿಪ್ಪಗ ಎನ್ನಾಂಗಿರ್ತವಕ್ಕೆ ಆ ಕ್ರೀಡೆಯ ನೋಡಿ ಅಸ್ವಾದನೆ ಮಾಡುದು ಮಾಂತ್ರ ಕೆಲಸ 😉

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿದ್ವಾನಣ್ಣಯೇನಂಕೂಡ್ಳು ಅಣ್ಣಅನಿತಾ ನರೇಶ್, ಮಂಚಿಪುತ್ತೂರುಬಾವಅನು ಉಡುಪುಮೂಲೆಸಂಪಾದಕ°ಅಜ್ಜಕಾನ ಭಾವನೆಗೆಗಾರ°ವೆಂಕಟ್ ಕೋಟೂರುಶ್ರೀಅಕ್ಕ°ಡಾಗುಟ್ರಕ್ಕ°ದೊಡ್ಮನೆ ಭಾವಗಣೇಶ ಮಾವ°ರಾಜಣ್ಣಬಟ್ಟಮಾವ°ವಾಣಿ ಚಿಕ್ಕಮ್ಮಪಟಿಕಲ್ಲಪ್ಪಚ್ಚಿಪೆಂಗಣ್ಣ°ವೇಣೂರಣ್ಣಜಯಗೌರಿ ಅಕ್ಕ°ವಿನಯ ಶಂಕರ, ಚೆಕ್ಕೆಮನೆಚೆನ್ನಬೆಟ್ಟಣ್ಣಬೊಳುಂಬು ಮಾವ°ಬೋಸ ಬಾವಒಪ್ಪಕ್ಕಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ