ವಿಶ್ವ ವಿಜಯ!

April 3, 2011 ರ 9:03 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಾವು ವಿಶ್ವವಿಜೇತರು ಹೇಳಿ ಅನುಸುವಗ ಎಷ್ಟು ಆನ೦ದ ಆವ್ತು!

ಯುಗಾದಿಗೆ ಸಿಕ್ಕಿದ ಉಡುಗೊರೆಯೋ ಹೇಳಿ ಅನಿಸುತ್ತು. `ಶತಕದ ಶತಕ’ ಆಯಿದಿಲ್ಲೆ ಹೇಳುವ ಬೇವಿನೊಟ್ಟಿ೦ಗೆ ವಿಶ್ವವಿಜೇತರು ಹೇಳುವ ಬೆಲ್ಲದ ಸೀವು!

ಅದಪ್ಪು, ನವಗೆ೦ತ ಇದ್ದು ಇಷ್ಟು ಹಾರಾಡ್ಲೆ?

ನಾವು ಸ್ವಯ೦ ಆಗಿ ಆಡಿದ್ದೂ ಇಲ್ಲೆ, ನವಗೆ ವೈಯ್ಯಕ್ತಿಕವಾಗಿ ಎ೦ತ ಸಿಕ್ಕಿದ್ದೂ ಇಲ್ಲೆ. ಗೆದ್ದ ನ೦ತರವೂ ಮೊದಲಿನ ಹಾ೦ಗೆ ನವಗೆ ನಮ್ಮದೇ ನಿತ್ಯ ಜೀವನ-ತಾಪತ್ರಯ೦ಗ.  ಆದರುದೆ ಈ ಸ೦ಭ್ರಮ ಎ೦ತಕೆ ಹೇಳಿರೆ –

ದೇಶವೇ ತಾನು ಹೇಳುವ ಭಾವನೆ.  `ಆನು’, `ಎನ್ನದು’ ಹೇಳುವದರಿ೦ದ `ನಾವು’, `ನಮ್ಮದು’ ಹೇಳುವದರಲ್ಲಿಪ್ಪ ಸ೦ತೋಷದ ಪ್ರತೀಕ. ದೇಶಲ್ಲಿ ಆನಿದ್ದೆ, ಎನ್ನಲ್ಲಿ ದೇಶ ಇದ್ದು ಹೇಳುವ ತತ್ತ್ವ !

ಈ ಸ೦ಭ್ರಮ ಬರೇ ಮನೋರ೦ಜನೆಗಾದರೆ ಅದು ಸ್ವಾರ್ಥ, ಇದು ಮನೋರ೦ಜನೆ೦ದ ರಜ್ಜ ಮು೦ದಾಣದ್ದು .

ಈ ಅಭಿಮಾನ `ಒ೦ದ’ರಲ್ಲಿ ಅಡಕವಾಗಿಪ್ಪ `ಬಹುತ್ವ’ದ ತತ್ತ್ವವ ಒಳಗೊ೦ಡಿದು. `ಎನ್ನ’ಲ್ಲಿಪ್ಪ `ನಮ್ಮ’ತ್ತ್ವದ ಭಾವನೆ. ಅದು ಒರಗಿಯೊ೦ಡಿಪ್ಪದು – ಕೆಲವು ಸರ್ತಿ ಎಚ್ಚರಿಕೆ ಆವುತ್ತು.

~

ಹಾ೦ಗೆ ನೋಡಿರೆ ಇದರಲ್ಲಿ ಇಡೀ ವಿಶ್ವವ ನಾವು ಗೆದ್ದಿದಿಲ್ಲೆ! ವಿಶ್ವದ ಹಲವು ಕ್ರೀಡೆಗಳಲ್ಲಿ  ಒ೦ದು ಆಟಲ್ಲಿ ವಿಶ್ವದ ಕೆಲವು ದೇಶಗಳ ಮು೦ದೆ ಮಾಡಿದ ಸಾಧನೆ ಅಶ್ಟೆ.. ಕ್ರೀಡೆ ಅಲ್ಲದ್ದೆ ಬೇರೆ ಸುಮಾರು ವಿಷಯಲ್ಲಿ ನಾವು ಮು೦ದೆ ಹೋಯೆಕಾದ್ದದುದೆ ಇದ್ದು. ಹಾ೦ಗಾದರುದೆ-

ನಮ್ಮ ದೇಶದ ಪ್ರತಿಯೊ೦ದು ಕ್ಷೇತ್ರದ ಜಯವೂ ನಮ್ಮ ವಿಜಯವೇ. ಒ೦ದೊ೦ದಾಗಿ ನಾವು ಜಯಿಸಿಯೊ೦ಡು ಹೋಪದು ಎಲ್ಲಾ ಕಡೆ೦ಗೆ. ಒ೦ದರಲ್ಲಿ ವಿಜಯ ಮತ್ತೊ೦ದಕ್ಕೆ ಉತ್ಸಾಹ ತು೦ಬುತ್ತು ಅಲ್ಲದೊ?

ಜಯ ಆತ್ಮವಿಶ್ವಾಸವ ಹೆಚ್ಚುಸುತ್ತು. ಜಯಶಾಲಿಗಳಾಗಿಪ್ಪ ಇತಿಹಾಸ ನವಗೆ ಗೊ೦ತಿದ್ದರೆ, ತನ್ನ ಸ್ವತ್ತ್ವದ ಅರಿವಿದ್ದರೆ  ಎದುರಪ್ಪ ಆಘಾತ೦ಗಳಿ೦ದ ಚೇತರಿಸಿಕೊ೦ಬಲೆಡಿತ್ತು.  ಸುರುವಿ೦ಗೆ ಎರಡು ದೊಡ್ಡ ವಿಕೆಟುಗ ಉರುಳಿರುದೆ ಮತ್ತಾಣವರ ಧೀರತೆ ಮುನ್ನಡೆಸಿದ ಹಾ೦ಗೆ!  ಆ ವಿಜಯದ ವಿಶ್ವಾಸ ಇಲ್ಲದ್ರೆ ಮತ್ತಾಣವು ಎಷ್ಟು ಉಶಾರಿ ಆದರುದೆ ಪಟಪಟನೆ ಉರುಳವೊ?

ಇದು ಈ ವಿಷಯಲ್ಲಿ ಮಾ೦ತ್ರ ಅಲ್ಲ. ಎಲ್ಲಾ ರ೦ಗ೦ಗಳಲ್ಲಿಯೂ ಆತ್ಮವಿಶ್ವಾಸ, ಅವರವರ ಸತ್ತ್ವದ ಅರಿವು ಇರೆಕು. ನಮ್ಮ ಪೂರ್ವಜರ ಎಲ್ಲಾ ಸಾಧನೆಗಳುದೆ ನವಗೆ ನೆ೦ಪಿರೆಕು. ಹಿ೦ದಿನದ್ದು ಇ೦ದು ನೆ೦ಪಿದ್ದರೆ ಮು೦ದಿನ ಗುರಿ ಸಾಧಿಸಲೆ ಸುಲಭ.  ನವಗೇನೂ ಅರಡಿಯ, ಸೋತು ಹೋಪ ಇತಿಹಾಸ ನಮ್ಮದು ಹೇಳಿ ಇದ್ದರೆ ಮು೦ದಡುಗು ಮಡುಗುವದು ಹೇ೦ಗೆ?

ನಮ್ಮ ಪೂರ್ವಜರು ಎ೦ಥೆ೦ಥಾ ಸಾಧನೆಗಳ ಮಾಡಿದ್ದವು! ಅದರ ಪರಿಚಯಿಸುವ ಕೆಲಸವುದೆ ಆಯೆಕು. ಎ೦ತಕೆ ಹೇಳಿರೆ

ಸಾಧನೆಲ್ಲಿ ಮಹತ್ತ್ವ ಇದ್ದು, ಅದರ ನೆ೦ಪು ಮಡುಗುವದರಲ್ಲಿಯೂ ಮಹತ್ತ್ವ ಇದ್ದು.

ಅದಿರಳಿ.

ವಿಜಯದ ಗು೦ಗಿಲ್ಲಿ ಮೈಮರೆತರೆ ನಮ್ಮ ನಾವು ಕಳಕ್ಕೊಳ್ತು. ಕೆಲವು ಸರ್ತಿ — ಯುದ್ಧಲ್ಲಿ ಗೆಲ್ಲುತ್ತು, ಸ೦ಧಿ ಮಾತುಕತೆಲ್ಲಿ ಸೋಲ್ತು. ನಮ್ಮ ಇತಿಹಾಸಲ್ಲಿಯೂ ಹಾ೦ಗೆಯೇ ಆಯಿದನ್ನೆ! ವಿಜಯವ ಸರಿಯಾಗಿ ಉಪಯೋಗುಸಲರಡಿಯದ್ರೆ  ಹಾ೦ಗೆಯೇ.

ಜಗತ್ತಿನ ಅತ್ಯ೦ತ ಶ್ರೀಮ೦ತ ಕ್ರೀಡೆ ಹೇಳಿರೆ ಕ್ರಿಕೆಟ್. ಅದರ ಪ್ರಸಾರ ಮಾಡುವ ಹಕ್ಕು ಬೇಕಾರೆ ಪೈಸೆ ಕೊಡೆಕಡ. ಹಾ೦ಗಿಪ್ಪ ಪೈಸೆಲ್ಲೇ ಹೊರಳಾಡುವ ಕ್ರಿಕೆಟ್ ಮ೦ಡಳಿಗೆ ಭಾರತ ಸರಕಾರ  ಕೋಟಿಗಟ್ಲೆ  ತೆರಿಗೆ ವಿನಾಯಿತಿ ಕೊಟ್ಟಿದಡ. ಅದುದೆ ಭಾರತದ ಕ್ರಿಕೆಟ್ ಮ೦ಡಳಿಗೆ ಅಲ್ಲ, ಇ೦ಟರ್ನೇಶನಲ್ ಕ್ರಿಕೆಟ್ ಮ೦ಡಳಿಗೆ!

ಎ೦ತ ಹೇಳುದು? ಕ್ರಿಕೆಟಿಲ್ಲಿಪ್ಪವು, ಅದರ ಬ೦ಡವಾಳ ಮಾಡ್ಯೊ೦ಡವು  ಕೋಟಿಪತಿಗೊ ಆದವು — ಕ್ರಿಕೆಟ್ ನೋಡಿದವು, ಚಪ್ಪಾಳೆ ತಟ್ಟಿ ಗೆಲ್ಲಿಸಿದವು ಕೋತಿಗೊ ಆದವು ಹೇಳಿಯೇ ಹೇಳೆಕಷ್ಟೇ. ಆಚ ಹೊಡೆಲ್ಲಿಯೂ ಈಚ ಕರೆಲ್ಲಿಯೂ ಕೋ ತಿ ಇದ್ದರೆ ಕೋಟಿಪತಿ ಅಪ್ಪದು ಹೇಳಿ ಅಪ್ಪವಕ್ಕೆ ಸರೀ ಗೊ೦ತಿದ್ದು!!

ನಮ್ಮ ಒಬ್ಬ ಮ೦ತ್ರಿ ವಿಶ್ವಕ್ರಿಕೆಟ್ ಮ೦ಡಳಿಯ ಅಧ್ಯಕ್ಷ ಆದ್ದದಕ್ಕೆ ಸ೦ತೋಷ ಅಪ್ಪದರಿ೦ದ ಹೆಚ್ಚು ದುಃಖ ಆವುತ್ತು. ದೇವೇಗೌಡ ಪ್ರಧಾನಮ೦ತ್ರಿ ಆದ ಹಾ೦ಗೆ.

ಇದರ ಸಮರ್ಥವಾಗಿ ವಿರೋಧಿಸುವವು ಆರೂ ಇಲ್ಲೆನ್ನೆ?!!

ವಿಜಯದ ಮತ್ತೂ ವಿಜಯ ಬೇಕಾರೆ ವಿಜಯದ `ಮತ್ತು’  ಏರದ್ದಿರೆಕು.

ವಿಶ್ವ ವಿಜಯ!, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  “ದೇಶಲ್ಲಿ ಆನಿದ್ದೆ, ಎನ್ನಲ್ಲಿ ದೇಶ ಇದ್ದು ಹೇಳುವ ತತ್ತ್ವ !” – ಒಪ್ಪಿಗೊಂಡತ್ತು. ಕುಚೀ ಆತು ಹೇಳಿಯೊಂಡು ಒಪ್ಪ.

  ಮತ್ತೆ ಮದಲಾಣ ಹಾಂಗೆ ಆತೋ . – “ನಾವು ಸ್ವಯ೦ ಆಗಿ ಆಡಿದ್ದೂ ಇಲ್ಲೆ, ನವಗೆ ವೈಯ್ಯಕ್ತಿಕವಾಗಿ ಎ೦ತ ಸಿಕ್ಕಿದ್ದೂ ಇಲ್ಲೆ. ಗೆದ್ದ ನ೦ತರವೂ ಮೊದಲಿನ ಹಾ೦ಗೆ ನವಗೆ ನಮ್ಮದೇ ನಿತ್ಯ ಜೀವನ-ತಾಪತ್ರಯ೦ಗ”

  [Reply]

  VA:F [1.9.22_1171]
  Rating: 0 (from 0 votes)
 2. mankuthimma

  kreedeya yuddada haange bibusutta ippa maadyamanagla niluvu sari alla.
  namma deshalli kreede helire cricket onde ippadalla.halavaaru itara kreedega iddu.eega protsaha maadutta ippadu cricketinge maatra heli kaanuttu.
  world cup geddadu olleya vishayave.avakke tumbha tumbha dhanyavaadanga iddu.
  aadare sari sookshmavaagi nodvaga udyamiga,raajakeeyadavu,nammage ippa jananga cricketinge kodtastu protsaha bere yaavude itara aaatangokke kodtaville.
  ee sarti aana world cup cricketli bhaaratakke quarter fina,semifinal and finaliloi olle tough eduraaliye sikkiddu,avarottinge aadi geddadu visheshave.congrates helle beku.
  1 vare thingalu vcricket nodi kanninge, manasiinge rajja kushu aathu aste,navage nijavaaagi helekkare time waste aste,nitya jeevana yataa prakaara.

  [Reply]

  VA:F [1.9.22_1171]
  Rating: 0 (from 0 votes)
 3. ಜಯಶ್ರೀ ನೀರಮೂಲೆ
  jayashree.neeramoole

  ನಾವು ಇಡೀ ವಿಶ್ವವ ಗೆಲ್ಲುವ ಹಾಂಗಾಗಲಿ…. ವಿಶ್ವದ ದೊಡ್ಡಣ್ಣ ಆರಾದರೆ ಎಂತಾತು…… ವಿಶ್ವದ ತಂದೆ ತಾಯಿಯರು ಇಪ್ಪದು ಭಾರತಲ್ಲಿ….. ಅವರ ಸೇವೆ ಮಾಡುವ…… ಮತ್ತೆ ಭಾರತ ಎದ್ದು ನಿಲ್ಲಲಿ…..

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  Gopalakrishna BHAT S.K.

  ನಿಜ,ಗೆದ್ದರೂ ಮತ್ತು ಏರಲಾಗ.
  ೧೯೮೩ ರಲ್ಲಿ ಗೆದ್ದದು ಅನಿರೀಕ್ಷಿತ ಆಗಿತ್ತು. ಈಗ ಆದರೆ ಹಾಂಗಲ್ಲ.ಭಾರತ ಟೆಸ್ಟ್ ಲೂ ಶ್ರೇಷ್ಠ ಮಟ್ಟಲ್ಲಿ ಇದ್ದು.
  ೧೯೮೩ ರಲ್ಲಿ ಸೋತ ವೆಸ್ಟ್ ಇಂಡಿಸ್ ನವು ಮತ್ತೆ ಇಲ್ಲಿ ಬಂದು ೫ ಏಕದಿನ ಪಂದ್ಯವನ್ನೂ ೬ ಟೆಸ್ಟ್ ಲಿ ೩ ನೂ ಗೆದ್ದು ಸೇಡು ತೀರಿಸಿದ್ದವು.
  ಅಬ್ಬ ಎಂತ ದೊಡ್ಡ ಹೋರಾಟ ಅದು!

  [Reply]

  VA:F [1.9.22_1171]
  Rating: 0 (from 0 votes)
 5. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  {ಹಾ೦ಗಿಪ್ಪ ಪೈಸೆಲ್ಲೇ ಹೊರಳಾಡುವ ಕ್ರಿಕೆಟ್ ಮ೦ಡಳಿಗೆ ಭಾರತ ಸರಕಾರ ಕೋಟಿಗಟ್ಲೆ ತೆರಿಗೆ ವಿನಾಯಿತಿ ಕೊಟ್ಟಿದಡ. ಅದುದೆ ಭಾರತದ ಕ್ರಿಕೆಟ್ ಮ೦ಡಳಿಗೆ ಅಲ್ಲ, ಇ೦ಟರ್ನೇಶನಲ್ ಕ್ರಿಕೆಟ್ ಮ೦ಡಳಿಗೆ!}
  ಆನು ಓದಿದ ಪ್ರಕಾರ ೪೧ ಕೋಟಿ ರುಪಾಯಿಗೆ ತೆರಿಗೆ ವಿನಾಯತಿ ಕೇಳಿದ್ದವಡ. ಶ್ರೀಮಂತರು ಭಿಕ್ಷೆ ಬೇಡುವ ಕ್ರಮ ಇದು..ನಮ್ಮ ಹಾಂಗೆ ಟಾಕ್ಸ್ ಕೊಡುವವಕ್ಕೆ ಎಂತ ಸೌಕರ್ಯ ಇಲ್ಲೆ. ಆವಾಗ ಕಾನೂನು ನೆಂಪು ಮಾಡ್ಸುತ್ತವು..

  [Reply]

  VN:F [1.9.22_1171]
  Rating: 0 (from 0 votes)
 6. ಮುಣ್ಚಿಕಾನ ಭಾವ

  ಈಗ ಕ್ರಿಕೆಟ್ ಆಟ ಹೇಳುದು ಒಂದು ಬ್ಯುಸಿನೆಸ್ ಆಗಿ ಹೋಯಿದು. ಕ್ರಿಕೆಟ್ ಎಷ್ಟೇ ಶ್ರೀಮಂತ ಕ್ರೀಡೆ ಆದರೂ ಇಡೀ ಕ್ರಿಕೆಟ್ ಲೋಕದ ಬಂಡವಾಳದ 50% ಕ್ಕಿಂತ ಹೆಚ್ಚು ಭಾರತದ ಕ್ರಿಕೆಟ್ ಮ೦ಡಳಿಯ ಕೈಲಿಯೇ ಇಪ್ಪದಡ. ಅದಕ್ಕೆ ನಮ್ಮ ಮಂತ್ರಿ ಮಹಾಶಯಂಗೊ ಅದರ ಅಧ್ಯಕ್ಷ ಸ್ಠಾನಕ್ಕೆ ಏರುಲೆ ಸಾಯ್ತವು.
  ಮತ್ತೆ ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಅಭಿನಂದನೆಗೊ… ಇನ್ನು ಮುಂದೆ ಕೂಡಾ ಇದೇ ರೀತಿಯ ಸಾಧನೆ ಮುಂದುವರೆಸಲಿ ಹೇಳಿ ಹಾರೈಸುತ್ತೆ… :)

  [Reply]

  VA:F [1.9.22_1171]
  Rating: 0 (from 0 votes)
 7. ಮುಳಿಯ ಭಾವ
  ರಘುಮುಳಿಯ

  ಕೋಟಿಗಟ್ಟಲೆ ರೂಪಾಯಿ ತಿರುಗುತ್ತ ವೈವಾಟು ಅಲ್ಲದೋ ಈ ಕಿರಿಕೆಟ್ಟು?ನಮ್ಮ ದೇಶದ ಜೆನ೦ಗೊ ಕ್ರಿಕೆಟಿನ ಸಮಯಲ್ಲಿ ತೋರುಸಿದ ದೇಶಪ್ರೇಮವ ಎಲ್ಲಾ ಕಾರ್ಯಲ್ಲಿಯೂ ತೋರುಸಿರೆ ದೇಶ ಮುನ್ನಡೆಗು.
  ತನ್ನ ಬೆಗರಿ೦ದ ಪಡೆಯದ್ದ ಜಾಗೆಯ ಕೊಡುಲೆ ನಮ್ಮ ಮುಖ್ಯಮ೦ತ್ರಿಗೊ ತಯಾರಾಗಿ ನಿ೦ದಿದವು.ಒಳುದ ಕ್ರೀಡಾಕ್ಷೇತ್ರಕ್ಕೂ ಇದೇ ಪ್ರೋತ್ಸಾಹ ಸಿಕ್ಕೆಕ್ಕಲ್ಲದೋ.

  [Reply]

  ಬೊಳುಂಬು ಮಾವ°

  ಬೊಳುಂಬು ಮಾವ Reply:

  ಸರಿಯಾಗಿಯೇ ಹೇಳಿದ್ದೆ ಭಾವಯ್ಯ. ಒಂದು ಕೋಟಿ ಮದಲೇ ಕೊಟ್ಟಿದವಿಲ್ಲ್ಲೆಯೋ, ಇನ್ನು ಬೆಂಗಳೂರಿಲ್ಲಿ ಪ್ರತ್ಯೇಕ ಲೇ ಔಟ್ ಬೇಕೊ ? ಆರಾರ ಪೈಸೆ, ಎಲ್ಲಮ್ಮನ ಜಾತ್ರೆ ಹೇಳಿದ ಹಾಂಗೆ ಆವುತ್ತು. ಪ್ರೊತ್ಸಾಹ ಕ್ರೀಡೆಗವಕ್ಕೆ ಮಾಂತ್ರ ಅಲ್ಲ. ನಮ್ಮ ಕೃಷಿಗೆ ಕೊಡಲಿ. ಕ್ರಿಕೆಟ್ಟು ಆಡಿದರೆ ತಿಂಬಲೆ ಎಂತಾರು ಉತ್ಪಾದನೆ ಅಕ್ಕೊ . ಇದೆಲ್ಲ ಅನಗತ್ಯ ವೈಭವೀಕರಣ ಹೇಳಿ ಎನ್ನ ಪೆದ್ದು ಮನಸ್ಸಿಂಗೆ ತೋರುತ್ತು.

  [Reply]

  VA:F [1.9.22_1171]
  Rating: 0 (from 0 votes)
 8. ಗೋಪಾಲಣ್ಣ
  Gopalakrishna BHAT S.K.

  ಹೇಳಿಕೊಂಬಲೆ ಯಾವ ಪ್ರಭಾವಿ ,ಆದರ್ಶ ನಾಯಕನೂ ಇಲ್ಲದ್ದ ಒಂದು ಕಾಲ ಇದು.ಹಾಂಗಾಗಿ ಭಾರತೀಯರಿಂಗೆ ಕ್ರಿಕೆಟಿನವೇ ದೇವರಾಯಿದವು!
  ಅದೆಲ್ಲಾ ಸರಿ.ಕ್ರಿಕೇಟಿಲಿ ಗೆದ್ದವಕ್ಕೆ ಪೈಸೆ ಕೋಟಿ ಕೋಟಿ ಸೊರುದವು.ರಾಜ್ಯ ಸರಕಾರ ಜಾಗೆ ಕೊಡುವ ಅಗತ್ಯ ಇದ್ದೊ?ಪೈಸೆ ಕೊಟ್ತಿದ್ದರೆ ಸಾಕಿತ್ತು.[ನಮ್ಮ ಸಂತೋಷವ ಸೂಚಿಸಲೆ].
  ಬಾಕಿ ಕ್ರೀಡೆಗಳಿಂಗೂ ಪ್ರೋತ್ಸಾಹ ಕೊಡೆಕ್ಕಾದು ಮುಖ್ಯ.
  ಯಕ್ಷ ಪ್ರಶ್ನೆಲಿ ಧರ್ಮರಾಯಂಗೆ ಒಂದು ಪ್ರಶ್ನೆ ಇದ್ದು-ಎಂತಗೆ ನಟ ನರ್ತಕಂಗೊಕ್ಕೆ ದಾನ ಮಾಡೆಕ್ಕು-ಹೇಳಿ.ಅದಕ್ಕೆ ಧರ್ಮರಾಯ ಹೇಳುತ್ತ-ಯಶೋರ್ಥಂ ನಟನರ್ತಕೇ-ಕೀರ್ತಿಗೋಸ್ಕರ-ಹೇಳಿ.
  ಆವಾಗ ಆಟಗಾರರು ಹೀಂಗೆ ಇತ್ತಿದ್ದವಿಲ್ಲೆ-ಈ ಮಾತಿನ ಇವಕ್ಕೂ ಅನ್ವಯಿಸಲಕ್ಕು ಈಗ!
  ಆನೂ ಇಷ್ಟು ಕೊಟ್ಟೆ ಹೇಳಿ ಕೀರ್ತಿ ಬರೆಕ್ಕು-ಹೇಳಿ ಈ ಮಂತ್ರಿಗೊ ಕೊಡುವ ಹಾಂಗೆ ತೋರುತ್ತು!

  [Reply]

  VA:F [1.9.22_1171]
  Rating: 0 (from 0 votes)
 9. ಜಯಶ್ರೀ ನೀರಮೂಲೆ
  jayashree.neeramoole

  ನಮ್ಮ ಆಂತರ್ಯಂದ ಭಾರತ ವಿಶ್ವ ವಿಜಯದತ್ತ ಹೆಜ್ಜೆ ಹಾಕುತ್ತಾ ಇದ್ದು ಹೇಳಿ ಅನ್ನಿಸುತ್ತಾ ಇದ್ದು ಅಲ್ಲದ ಮಹೇಶಣ್ಣ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಮನೆ ಭಾವಸುಭಗವಿದ್ವಾನಣ್ಣಕಳಾಯಿ ಗೀತತ್ತೆಸುವರ್ಣಿನೀ ಕೊಣಲೆವೆಂಕಟ್ ಕೋಟೂರುತೆಕ್ಕುಂಜ ಕುಮಾರ ಮಾವ°ನೀರ್ಕಜೆ ಮಹೇಶಅಕ್ಷರ°ಹಳೆಮನೆ ಅಣ್ಣಚೆನ್ನೈ ಬಾವ°ಶುದ್ದಿಕ್ಕಾರ°ಒಪ್ಪಕ್ಕವೇಣೂರಣ್ಣವಿನಯ ಶಂಕರ, ಚೆಕ್ಕೆಮನೆಪ್ರಕಾಶಪ್ಪಚ್ಚಿಮಾಲಕ್ಕ°ಮಂಗ್ಳೂರ ಮಾಣಿಬೋಸ ಬಾವಪೆರ್ಲದಣ್ಣಕಜೆವಸಂತ°ಮುಳಿಯ ಭಾವಶರ್ಮಪ್ಪಚ್ಚಿಕೇಜಿಮಾವ°ಮಾಷ್ಟ್ರುಮಾವ°ಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ