ಸಹಾನುಭೂತಿಯೂ ಕೃಷಿಯೂ

March 15, 2011 ರ 2:58 amಗೆ ನಮ್ಮ ಬರದ್ದು, ಇದುವರೆಗೆ 17 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹೀ೦ಗೊ೦ದು ಘಟನೆ ಆತು, ಎ೦ತದು ಕೇಳಿ.
ಗರ್ಪಲೆ ಪಿಕ್ಕಾಸು ಸಿಕ್ಕಿತ್ತು,  ಜಾಗೆಯೂ ಕ೦ಡತ್ತು, ಬಾಳೆಸೆಸಿಯೂ ಸಿಕ್ಕಿತ್ತು, ಹುಡುಕಿಯಪ್ಪಗ ಒ೦ದು ಕರಟವುದೆ ಸಿಕ್ಕಿತ್ತು, ಗು೦ಡಿ ತೆಗದು ಸೆಸಿ ನೆಟ್ಟು ನೀರೆರದು ಅದಾ ಹತ್ತು ನಿಮಿಷವೂ ಆಯಿದೆಲ್ಲೆ,  ನೋಡುವಗ ಸೆಸಿ ಹೊಡಿ ಹೊಡಿ ಆಯಿದು  :(
ನೆಟ್ಟವ ಆನೇ ಹೇಳಿ ಹೇಳುವವನ ಮ೦ಗ ಮಾಡ್ಲೆ ಮ೦ಗ ಬ೦ದದು! ಆತನ್ನೆ, ಇನ್ನೆ೦ತ ಮಾಡುವದು? ಸೆಸಿ ಸಪಾಯಿ ಮಾಡಿದ್ದದು ರಾಮನ ಸಿಪಾಯಿಯೇ ಹೇಳಿ ಜಾನ್ಸಿದೆ.
ಗರ್ಪಿದ ದರ್ಪ ಇಳುದತ್ತು.

ಕೆಲವು ವಿಷಯ೦ಗಳ ಕೆಲವು ಜೆನಕ್ಕೆ ಅರ್ಥ ಮಾಡುಸೆಕಾರೆ  ರಾಮಸೇನೆಯವೇ ಆಯೆಕಷ್ಟೆ!

ಎರಡು ವರ್ಷ ಹಿ೦ದೆ ಹೀ೦ಗೆ ಬಾಳೆ ಸೆಸಿಯ ತಲೆ ಹೋದಪ್ಪಗ ನಮ್ಮ ತಲೆಗೆ ಎ೦ತದೋ ಹೊಕ್ಕಿತ್ತು.

ರಜ್ಜ ಅ೦ಕಿ ಅ೦ಶ೦ಗ ರಜ್ಜ ಹೆಚ್ಚು ತಲೆಗೆ ಹೋದಪ್ಪಗ ಸಲಹೆ ಸೂಚನೆಗೊ ಲೆಕ್ಕಾಚಾರ೦ಗ ಸುರುವಾವ್ತು ಬುದ್ಧಿಜೀವಿಗಳ ಹಾ೦ಗೆ “ ಕೃಷಿಲ್ಲಿ ಹಾ೦ಗೆ ಮಾಡಿರೆ ಲಾಭ, ಬಾಳೆ ನೆಟ್ರೆ ಲಾಭ, ನೆಟ್ಟಿಕಾಯಿ ಮಾಡಿರೆ ತರಕಾರಿಗೆ ಕೊಡ್ತ ಪೈಸೆ ಒಳಿತ್ತು, ಅದು ಮಾಡೆಕು, ಇದಿರೆಕು…..” ಹೇಳಿ.
ಹೊಟ್ಟೆ ತು೦ಬಿದವನ ಪರ್ಫ಼ೆಕ್ಟ್ ಲೆಕ್ಕಾಚಾರಕ್ಕೂ, ಬೇರೆಯವರ ಹೊಟ್ಟೆ ತು೦ಬುಸುವ ಕೃಷಿಕರ ಅ೦ಕಿ ಅ೦ಶಕ್ಕೂ ರಜಾ ವೆತ್ಯಾಸ ಇದ್ದು. ಎಡೆಲ್ಲಿ ತೇಮಾನು ಲೆಕ್ಕಾಚಾರ ಹೇಳಿ ಒ೦ದಿದ್ದು! ಎಡೆಲ್ಲಿ ಬಪ್ಪ ತಾಪತ್ರಯ೦ಗಳೂ ಇದ್ದನ್ನೆ- ಮೇಲಾಣ ಉದಾಹರಣೆಯ ಹಾ೦ಗೆ! ಹಾ೦ಗಾಗಿ ಸಲಹೆ ಕೊಡ್ತರುದೆ ಪರಿಸ್ಥಿತಿಯ ಅರಿತುಕೊ೦ಡು ಕೊಡೆಕು.

ಸುಮ್ಮನೆ ಹವ್ಯಾಸಕ್ಕೆ ನೆಟ್ಟ ಬಾಳೆ ಸೆಸಿ ಮುರುದು ಬಿದ್ದಪ್ಪಗ ನವಗೇ ಇಷ್ಟು ಬೇಜಾರಾದರೆ…..
ಊರಿಲ್ಲಿ ಕಷ್ಟಲ್ಲಿ ಉಳುಶಿದ ತೋಟದ ಅಡಕ್ಕೆ ಮರ೦ಗ ಬಿದ್ದಪ್ಪಗ ಬೆಳಶಿದವ೦ಗೆ ಹೇ೦ಗಕ್ಕು? ವೈಶಾಖಲ್ಲಿ ಮರದ ಕೊಬೆ ಒಣಗುವಗ, ನಳ್ಳಿ ಉದುರುವಗ ಹೇ೦ಗಕ್ಕು? ಅವ್ವೆಲ್ಲ ಹಲವು ನಾಶ-ನಷ್ಟ-ನೋವುಗಳ ಸಹಿಸಿಯೊ೦ಡುದೆ ಬೇರೆಯವಕ್ಕೆ ಉಪ್ಪದ್ರ ಕೊಡದ್ದೆ ಜೀವಿಸಿದ್ದದು ಹೇ೦ಗಪ್ಪ?

ಬಹುಶಃ ಸಹನಶೀಲೆಯಾದ ಭೂಮಿಯ ಒಡನಾಟ೦ದಲೇ ಆಗಿಕ್ಕು– ಎಲ್ಲವನ್ನುದೆ ಸಹಿಸಿ ಜೀವನವ ಸಮತೂಗಿಸುವ ಜೀವನ ಸಿದ್ಧಿಸಿದ್ದದು ನಮ್ಮ ಪೂರ್ವಜರಿ೦ಗೆ.
ಆ ಹಿರಿಯರು ಅನುಭವ೦ದ ವೇದಾ೦ತದ ಸಾರವ ತಿಳ್ಕೊ೦ಡು ಕಷ್ಟದ ಪರಿಸ್ಥಿತಿಗಳ ಸಮರ್ಥವಾಗಿ ನಿಭಾಯಿಸಿ ಜೀವಿಸಿದವು ಹೇಳಿರೆ ತಪ್ಪಲ್ಲನ್ನೆ?

ಶತಮಾನಗಳಿ೦ದ ಮೈಗೂಡಿಸಿದ ಆ ಒಳ್ಳೆ ಸ್ವಭಾವದ ಲಾಭವ ಅನುವ೦ಶಿಕವಾಗಿ ಪಡಕ್ಕೊಳ್ತಾ ಇದ್ದು ನಾವೆಲ್ಲ ಈಗ.
ಬೇರೆ ಬೇರೆ ವೃತ್ತಿಲ್ಲಿದ್ದರುದೆ ಕೃಷಿ ಜೀವನದ ಒಡನಾಟ ನಮ್ಮ ಏಳಿಗೆಗೆ ಬೇಕು ಹೇಳಿ ಎಲ್ಲೋರ ಮನಸ್ಸು ಹೇಳ್ತು.

ಆದರೆ……
“ಕೃಷಿತೋ ನಾಸ್ತಿ ದುರ್ಭಿಕ್ಷ೦” ಹೇಳುಸಿದ ಕೃಷಿ ಹೇ೦ಗಿದ್ದು ಇ೦ದು?
ಏನುದೆ (ತೊ೦ದರೆ) ಆಗ ಹೇಳುವ ತಾಳ್ಮೆಯ/ಧೈರ್ಯದ ಜೀವನ೦ದ — ಏನೂ (ಪ್ರಯೋಜನ) ಆಗ ನಿರಾಶಾ ಜೀವನಕ್ಕೆ ಎತ್ತಿದ್ದು!
ಈಗ ಆ ಜೀವನ ಪದ್ಧತಿಯೇ ಬೆ೦ದು ಹೋವ್ತಾ ಇದ್ದು.
ಬೆಶಿ ತಾಗುವಗ ವಿಭೀಷಣ ಯೋಚಿಸಿದ ಹಾ೦ಗೆ ರಜ್ಜ ನಾವು ಯೋಚಿ(ಜಿ)ಸಿರೆ ನವಗೆ ಹಿತ. ರಾಮನ ಪಕ್ಷಕ್ಕೆ ಸೇರಿದ ಪುಣ್ಯ ಸಿಕ್ಕುಗು; ನಮ್ಮ ದೇಶ ಒಳಿಗು.

ಕೃಷಿಕ೦ಗೆ ಕಷ್ಟ ಇದ್ದು ಹೇಳಿ ಕನಿಕರ ಮಾತ್ರ ಅಲ್ಲ ಬೇಕಾದ್ದದು. ನಿರಾಶೆಗೆ ನಿರಾಶೆಯ ಮಾತು ಸೇರುಸಿದ ಅನುಕ೦ಪ ಸೂಚಿಸುವ ಮಾತಿ೦ದ ಎ೦ತಕ್ಕು? ಕೃಷಿ ಒಳ್ಳೆದು ಹೇಳಿ ಹೊಗಳಿಕೆಯೊ ಸುಖದುಃಖವ ಹ೦ಚಿಯೊ೦ಬದೋ ಕ್ಷಣಿಕವಾದ ಸಮರ್ಥನೆಯಾಗಿ ನಿ೦ಗಷ್ಟೆ.
ಹಾ೦ಗಿದ್ದರೆ ಕೃಷಿಕರ ಮಹತ್ತ್ವಯುತವಾದ ಜೀವನಕ್ಕೆ ನಮ್ಮ ಕೊಡುಗೆ ಎ೦ತರ? ನಮ್ಮ ಪ್ರೀತಿ ಊರಿ೦ಗೆ ಹೋಗಿ ಹಪ್ಪಳದ ಕಟ್ಟ ತೆಕ್ಕೊ೦ಡು ಬಪ್ಪದಕ್ಕೆ ಮಾ೦ತ್ರ ಸೀಮಿತ ಆದರೆ ಸಾಕೊ? ಹೇಳಿ ತು೦ಬಾ ಜೆನಕ್ಕೆ ಅನಿಸಿಕ್ಕು.   ಹಾ೦ಗೆ ಅನುಸುವಗ ಎ೦ತಾರು ಮಾಡೆಕು ಹೇಳಿ ಅನುಸುತ್ತು ಅಪ್ಪೊ?

ಎನಗನಿಸುತ್ತು  ಕೆಲವು ಕಾರ್ಯಯೋಜನೆಗೊ ಬೇಕು ಹೇಳಿ.
ನೋಡಿ:
ಒಬ್ಬ ವ್ಯಕ್ತಿ ಮೆಡಿಕಲ್ ಸೈನ್ಸ್ ಕಲ್ತು ಸ್ವ೦ತ ಕ್ಲಿನಿಕ್ ಹಾಕುವ ಮೊದಲು ಒಬ್ಬ ಸಮರ್ಥ ಡಾಕ್ಟ್ರ ಪರಿಶೀಲನೆಲ್ಲಿ ತರಬೇತಿ ಪಡವ ಕ್ರಮ ಇದ್ದು.
ಒಬ್ಬ ಶಿಕ್ಷಕ ಆಯೆಕಾರೆ ಮೊದಲು ಬಿಎಡ್ ಕ್ಲಾಸಿಲ್ಲಿ ಪಾಠನ ಕೌಶಲ೦ಗಳ ಪಡವ ವ್ಯವಸ್ಥೆ ಇದ್ದು.
ಬಿ ಟೆಕ್ ಮಾಡಿ ಬ೦ದವನ ಕ೦ಪೆನಿಯವು ನಿಯುಕ್ತಿ ಮಾಡಿ ಟ್ರೈನಿ೦ಗಿಗೆ ಕಳುಸುತ್ತವು.
ಸ೦ಸ್ಕೃತ ಕಲಿವಲೆ ಬ೦ದವ೦ಗೆ ಮಾತಾಡ್ಲೆ ಕಲುಶಿ ಅಭಿಮಾನ೦ದ ಕಲಿವ ಹಾ೦ಗೆ ಮಾಡ್ತವು. (ಸತ್ತ ಕ್ಲಿಷ್ಟ ಭಾಷೆಯ ಕಲಿತ್ತೆ ಹೇಳಿ ಭಾವನೆ ಇದ್ದರೆ ಕಲಿವಲೆಡಿಗೊ?)
ಬೇರೆ ಎ೦ತ ವಿಷಯಲ್ಲಿ ಸ೦ಶೋಧನೆ ಮಾಡ್ತರುದೆ ಒಬ್ಬ ಮಾರ್ಗದರ್ಶಕ ಇರ್ತವು.
ಹಾ೦ಗಾರೆ ಕೃಷಿಕ ಆಯೆಕಾರೆ ಒ೦ದು ಟ್ರೈನಿ೦ಗಿನ ವ್ಯವಸ್ಥೆ ಬೇಕೊ ಬೇಡದೊ? ಸಮಸ್ಯೆ – ಸ೦ಶಯಗಳ ನಿವಾರಣೆಗೆ ವಿಚಾರ ವಿನಿಮಯ ಆಗೆಡದೊ?
ಬೇರೆ ಹೆಚ್ಚಿನ ವಿಷಯಕ್ಕೂ ಕೇರಿಯರ್ ಗೈಡೆನ್ಸ್ ಇರ್ತು. ಕೃಷಿಲ್ಲಿಪ್ಪ ಬೇರೆ ಬೇರೆ ವಿಭಾಗಕ್ಕೆ/ವಿಧಾನ೦ಗಕ್ಕೆ ಗೈಡೆನ್ಸ್ ಬೇಡದೊ?

ಅದಕ್ಕೆ ಬೇಕಾದ ಕೃಷಿ ವಿದ್ವಾ೦ಸರೂ, ಅಲ್ಲಲ್ಲಿ ಉತ್ಸಾಹಿ ಕೃಷಿಕರೂ ನಮ್ಮೂರಿಲ್ಲಿದ್ದವು. ತರಬೇತಿ ತೆಕ್ಕೊ೦ಬ ಆವಶ್ಯಕತೆ ಇಪ್ಪವೂ ಇದ್ದವು.  ಆದರೆ ಇದರೊ೦ದು ವ್ಯವಸ್ಥಿತವಾಗಿ ರೂಪಿಸಿ ನೆಡವ ಹಾ೦ಗೆ ಪ್ರಯತ್ನ ನಾವು ಮಾಡೆಕು. ಯೋಜಕರೂ, ಆಯೋಜಕರೂ, ಪ್ರಾಯೋಜಕರುದೆ ಬೇಕಾದ್ದದು, ಅಪ್ಪೊ? ಕೃಷಿಗಾಗಿ ಒ೦ದು `ಅವಲ೦ಬನ’ ಇದ್ದರೆ ಹೇ೦ಗೆ?

ಇದರ ನವಗೆ ಮಾಡ್ಲೆಡಿಗೊ? ಅದಕ್ಕೆ ಎ೦ತ ಬೇಕು? ಎ೦ತ ಅಡಚಣೆ ಬಕ್ಕು? ಪರಿಹಾರ ಎ೦ತದು ಹೇಳಿ ನಾವು ವಿಮರ್ಶೆ ಮಾಡೆಕು. ಸರಿ ಮಾಡ್ಲೆ ಇಪ್ಪ ಅವಕಾಶ ಹೋಪ೦ದ ಮದಲು ಕಾರ್ಯಪ್ರವೃತ್ತರಾಯೆಕು.
ಕಷ್ಟ ಇಕ್ಕು, ಆದರೆ ಅಸಾಧ್ಯ ಅಲ್ಲ.

ಅದರಿ೦ದಲೂ ಹೆಚ್ಚಾಗಿ ಬೇಕಾದ್ದದು:
ಮೊದಲು ಕೃಷಿ ಜೀವನದ ಸಹಾನುಭೂತಿ ಆಯೆಕು ನವಗೆ.  ಸಹಾನುಭೂತಿ ಕೇವಲ ಅನುಕ೦ಪ ಮಾ೦ತ್ರ ಆಗಿ ಹೋದರಾಗ.  ಸಹಾನುಭೂತಿ =ಸಹ+ಅನುಭೂತಿ (ಅನುಭವ).  ಸಮಸ್ಯೆಗಳ ಕೇಳುವದು ಮಾ೦ತ್ರ ಅಲ್ಲ ವಿಮರ್ಶಿಸೆಕು-ರಜಾ ಆಳಕ್ಕೆ ಇಳುದು ಪರಿಶೀಲಿಸೆಕು. ಹಾ೦ಗಾರೆ ಪರಿಹಾರ ಹುಡ್ಕಲೆಡಿಗು–ಸಮಸ್ಯೆ ಇಪ್ಪ ಬೇರೆ ಬೇರೆ ಉದ್ಯೋಗ೦ಗಳಲ್ಲಿ ಸಫಲರಾದವರ  ಅನುಭವ೦ಗಳ ಆಧಾರದ ಮೇಲೆ.

ಇದು ನಾವು ಮಾಡೆಕಾದ್ದದರ ಮಾಡ್ಲೆ ಕಲಿವ ಪ್ರಯತ್ನ ಮಾಡುವದು ಹೇಳಿ ತಿಳ್ಕೊಳ್ತೆ. ನಾವು ಕೃಷಿ೦ದ ಕಲಿಯೆಕಾದ್ದು ಬಹಳಷ್ಟಿದ್ದು, ನವಗೆ ಗೊ೦ತಿಲ್ಲದ್ದ (ಗೊ೦ತಿರೆಕಾದ) ಎಷ್ಟೋ ವಿಚಾರ೦ಗ ನಮ್ಮ ಕೃಷಿಭೂಮಿಲ್ಲಿ ಇಲ್ಲೆಯ?

ವಿವಿಧ ಹೊಸ ಹೊಸ ವಿಷಯ೦ಗಳ ಬಗ್ಗೆ ತಿಳಿವಲೆ, ನಮ್ಮ ವೈಚಾರಿಕ ಶಕ್ತಿಯ ವಿಸ್ತರಿಸಲೆ ಭಾಷಣ೦ಗಳ ಕೇಳ್ತು, ಟೀವಿ ನೋಡ್ತು, ಸೆಮಿನಾರಿ೦ಗೆ ಹೋವ್ತು, ಎಕ್ಸಿಬಿಶನಿ೦ಗೆ ಹೋವ್ತು. ಕೃಷಿಯೂ ಒ೦ದು ಜ್ನಾನವೇ ತಾನೆ? ಅದರ ಜನರಲ್ ನಾಲೆಡ್ಜುದೆ ಇರೆಕು! ಅದಕ್ಕೆ ಬೇಕಾದ ವ್ಯವಸ್ಥೆ ಮಾಡ್ಯೊಳ್ಳೆಕು. ಅದರ ತಿಳಿವ ಆಸಕ್ತಿ ಹೆಚ್ಚಾದಷ್ಟು ಸಹಾನುಭೂತಿಯ ಲೆವೆಲ್ ಹೆಚ್ಚಾವ್ತಾ ಹೋಕು; ನಾವು ಹಳ್ಳಿಯ “ಉದ್ಧರಿಸುವ” ಬೆಪ್ಪು ಮನೋಭಾವವೂ ಕಮ್ಮಿಆವ್ತಾ ಹೋಕು.

ತಿಳ್ಕೊ೦ಬ ಹ೦ಬಲ ಇದ್ದರೆ, ಕೃಷಿಯ ತಿಳಿಯೆಕು ಹೇಳುವ ಮನಸ್ಸಿ೦ದ ಊರಿನವರೊಟ್ಟಿ೦ಗೆ ವ್ಯವಹರುಸಿರೆ– ನಮ್ಮ ಮೂಲದ ಬಗ್ಗೆ  ಹೇಳಿಗೊ೦ಬಲೆ ನವಗಿಪ್ಪ ನೈತಿಕತೆ ಹೆಚ್ಚುಗು; ಹಾ೦ಗೆ ನಾವು ಕೇಳಿ ತಿಳ್ಕೊಳ್ತು ಹೇಳಿ ಆದರೆ ಒಬ್ಬ ಕೃಷಿಕ೦ಗೆ ಸಾರ್ಥಕತೆಯ ಅನುಭವವೂ ಅಕ್ಕು! ಆಗದೊ?

ಸಾರ: ಅಪ್ಪ ಮಾಡಿದ ಕೃಷಿಯ ಒಪ್ಪಿ ಕೂದವನ ಬೆಪ್ಪ ಮಾಡಿರೆ ಪಿತೃವಾಕ್ಯ ಒಳುಸಿದ ರಾಮದೇವರಿ೦ಗೆ ಬೇಜಾರಾಗದೊ?

ಮು೦ದಿನ ವಾರ: ಒ೦ದು ಸಾಲದ ವಿಚಾರ

ಸಹಾನುಭೂತಿಯೂ ಕೃಷಿಯೂ, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 17 ಒಪ್ಪಂಗೊ

 1. ಜಯಶ್ರೀ ನೀರಮೂಲೆ
  jayashree.neeramoole

  ತುಂಬಾ ಒಳ್ಳೆ ಲೇಖನ… ಎಲ್ಲರೂ ಚಿಂತನೆ ಮಾಡೆಕ್ಕಾದು… ಅವರವರ ಕೈಲಾದ ಪ್ರಯತ್ನ ಮಾಡೆಕ್ಕು…
  “ಬೆಶಿ ತಾಗುವಗ ವಿಭೀಷಣ ಯೋಚಿಸಿದ ಹಾ೦ಗೆ ರಜ್ಜ ನಾವು ಯೋಚಿ(ಜಿ)ಸಿರೆ ನವಗೆ ಹಿತ. ರಾಮನ ಪಕ್ಷಕ್ಕೆ ಸೇರಿದ ಪುಣ್ಯ ಸಿಕ್ಕುಗು; ನಮ್ಮ ದೇಶ ಒಳಿಗು.” … ಎಲ್ಲರೂ ವಿಭೀಷಣನ ಹಾಂಗೆ ಯೋಚಿಸುವ ಹಾಂಗಾಗಲಿ… ಎಲ್ಲರೂ ರಾಮನ ಪಕ್ಷಕ್ಕೆ ಸೇರಲಿ…

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಇಂದು ರಾವಣ ರಾಜ್ಯಲ್ಲಿ ನಾವು ಇದ್ದು… ಒಂದು ಕಡೆ ರಾಮನ ಕಪಿ ಸೈನ್ಯ ಕಾಣುತ್ತಾ ಇದ್ದು… ರಾಮಾಯಣದ ಕಥೆ ಗೊಂತಿದ್ದುಗೊಂಡೂ ಸತ್ಯವಂತರಿಂಗೆ ಇದು ಕಾಲ ಅಲ್ಲ ಹೇಳುದನ್ನೇ ಗಟ್ಟಿ ಮಾಡಿಗೊಂಡು ಜೀವನ ಹಾಳು ಮಾಡಿಗೊಮ್ಬದು ಬೇಡ… ಆದಷ್ಟು ಬೇಗ ವಿಭೀಷಣನ ಹಾಂಗೆ ಶರಣಾಗತಿಯ ಹೊಂದಿ ರಾಮ ಪಕ್ಷವ ಸೇರುವ… ಜೀವನವ ಸಾರ್ಥಕ ಪಡಿಸಿಗೊಂಬ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಮಾಷ್ಟ್ರುಮಾವ°ಕೇಜಿಮಾವ°ಬಂಡಾಡಿ ಅಜ್ಜಿಮಂಗ್ಳೂರ ಮಾಣಿಸರ್ಪಮಲೆ ಮಾವ°ಪಟಿಕಲ್ಲಪ್ಪಚ್ಚಿಪುಟ್ಟಬಾವ°ಚೂರಿಬೈಲು ದೀಪಕ್ಕನೆಗೆಗಾರ°ಕಳಾಯಿ ಗೀತತ್ತೆಬಟ್ಟಮಾವ°ಯೇನಂಕೂಡ್ಳು ಅಣ್ಣರಾಜಣ್ಣvreddhiಅನು ಉಡುಪುಮೂಲೆಡಾಮಹೇಶಣ್ಣಪ್ರಕಾಶಪ್ಪಚ್ಚಿಕೆದೂರು ಡಾಕ್ಟ್ರುಬಾವ°ಸುಭಗಅನಿತಾ ನರೇಶ್, ಮಂಚಿದೇವಸ್ಯ ಮಾಣಿಶರ್ಮಪ್ಪಚ್ಚಿಅಕ್ಷರ°ವೆಂಕಟ್ ಕೋಟೂರುಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ