ಸುಭಾಷಿತ – ೩

ಸುಭಾಷಿತಮ್

ಹೀಂಗೊಂದು ಸುಭಾಷಿತ ಇದ್ದು –

ಗಚ್ಛನ್ ಪಿಪೀಲಕೋ ಯಾತಿ ಯೋಜನಾನಿ ಶತಾನ್ಯಪಿ।

ಅಗಚ್ಛನ್ ವೈನತೇಯೋಪಿ ಪದಮೇಕಂ ನ ಗಚ್ಛತಿ॥

ಇದರ ವಾಕ್ಯ ಮಾಡಿ ಬರದರೆ ಹೀಂಗೆ ಓದ್ಲಕ್ಕು –

ಗಚ್ಛನ್ ಪಿಪೀಲಕಃ ಶತಾನಿ ಯೋಜನಾನಿ ಅಪಿ ಯಾತಿ। ಅಗಚ್ಛನ್ ವೈನತೇಯಃ ಏಕಂ ಅಪಿ ಪದಂ ನ ಗಚ್ಛತಿ।

ಈಗ ಶಬ್ದಶಃ ಅರ್ಥ ತಿಳ್ಕೊಂಬ –

ಗಚ್ಛನ್ = ಹೋವ್ತಾ ಇಪ್ಪ

ಪಿಪೀಲಕಃ = ಎರುಗು,

ಶತಾನಿ ಯೋಜನಾನಿ = ನೂರಾರು ಯೋಜನಗಳಷ್ಟು

ಅಪಿ = ಕೂಡ

ಯಾತಿ = ಹೋಗಿ ಸೇರ್ತು.

ಅಗಚ್ಛನ್ = ಚಲಿಸದ್ದೇ ಇಪ್ಪ

ವೈನತೇಯಃ = ಗರುಡ (ವಿನತೆಯ ಮಗ)

ಏಕಂ ಅಪಿ ಪದಂ = ಒಂದು ಮೆಟ್ಟುದೆ

ನ ಗಚ್ಛತಿ = [ಮುಂದೆ] ಹೋಗ!

ಎರುಗು ಹೇಳಿರೆ ಬಲ ಇಲ್ಲದ್ದ ಸಾಮರ್ಥ್ಯ ಇಲ್ಲದ್ದ ಒಂದು ಜೀವಿ.

ಗರುಡ – ಅತಿ ಸಮರ್ಥ! ಅಲ್ಲದಾ?

ಆದರೆಂತ?

ಸತತ ಪ್ರಯತ್ನ ಮಾಡಿರೆ ಎಂಥವನುದೆ ಗುರಿ ಮುಟ್ಟಲೆಡಿಗು.

ಎಷ್ಟೇ ಸಾಮರ್ಥ್ಯ ಇದ್ದು ಹೇಳಿರುದೆ ಸುರು ಮಾಡದ್ರೆ ಕೆಲಸ ಆಗ!

ಇನ್ನೊಂದು ಸುಭಾಷಿತ ನೋಡುವೊ –

ಅಶ್ವಂ ನೈವ ಗಜ೦ ನೈವ ವ್ಯಾಘ್ರಂ ನೈವ ಚ ನೈವ ಚ।

ಅಜಾಪುತ್ರಂ ಬಲಿಂ ದದ್ಯಾತ್ ದೇವೋ ದುರ್ಬಲಘಾತಕಃ॥

ಮೊದಲು ಶಬ್ದಾರ್ಥ ನೋಡುವೊ –

ಅಶ್ವಂ = ಕುದುರೆಯ

ನೈವ = ನ + ಏವ = ಅಲ್ಲ

ಗಜಂ ನೈವ = ಆನೆಯನ್ನೂ ಅಲ್ಲ,

ವ್ಯಾಘ್ರಂ ನೈವ ಚ, ನೈವ ಚ = ಹುಲಿಯನ್ನಂತೂ ಅಲ್ಲವೇ ಅಲ್ಲಪ್ಪ!

ಅಜಾಪುತ್ರಂ = ಆಡಿನ ಕುಂಞಿ ಯ

ಬಲಿಂ ದದ್ಯಾತ್ = ಬಲಿಯಾಗಿ ಕೊಡೆಕಾವ್ತು!

ನೋಡಿ –

ದೇವೋ = ದೇವರು

ದುರ್ಬಲಘಾತಕಃ = ಬಡಪಾಯಿಯ ಕೊಲ್ಲುವವ.

ದೇವಃ + ದುರ್ಬಲಘಾತಕಃ = ದೇವೋ ದುರ್ಬಲಘಾತಕಃ   (ಇಲ್ಲಿ ‘ವಃ’ ದ ಮುಂದೆ ‘ದ’ ಅಕ್ಷರ ಬಂತು, ಹಾಂಗಾಗಿ ವಿಸರ್ಗ ‘ವೋ’ ಹೇಳಿ ಬದಲಿತ್ತು)

ಇಲ್ಲಿ ದೇವರ ಸಣ್ಣ ಮಾಡಿದ್ದದು ಹೇಳಿ ತಿಳ್ಕೊಂಬಲಾಗ!

ಬಡಪಾಯಿಗಳ ಬಲಿಪಶು ಮಾಡ್ತದು ಹೇಳಿ ಲೋಕಲ್ಲಿ ಸಹಜವಾಗಿ ಕಾಣ್ತಲ್ಲದಾ?  ಹಾಂಗಾಗಿ ನಾವು ನಮ್ಮ ಶಕ್ತಿ ಹೆಚ್ಚು ಮಾಡ್ಯೊಳ್ಳೆಕು, ಶಕ್ತಿವಂತರಾಯೆಕು ಹೇಳಿ ಸುಭಾಷಿತದ ಸಂದೇಶ.

ಅರ್ಥ ಗೊಂತಾತಲ್ಲದಾ? ಈಗ ಸುಭಾಷಿತವ ನೆಂಪು  ಮಡುಗಲೆ ಸುಲಭ ಅಲ್ಲದಾ?

 

ಡಾಮಹೇಶಣ್ಣ

   

You may also like...

9 Responses

 1. ಚೆನ್ನೈ ಭಾವ° says:

  ಅಪ್ಪು ಅರ್ಥಗೊಂತಾದಪ್ಪಗ ಇದು ಶುಭಾಷಿತ ಹೇಳಿ ಮನದಟ್ಟಾವ್ತು. ಇಲ್ಲದ್ರೆ ಅದು ಎಂತದೋ ಒಂದು ಬರೇ ಶ್ಲೋಕ. ಧನ್ಯವಾದಂಗೊ ಮಹೇಶಣ್ಣ.

 2. Dr Narayana pradeepa says:

  ಧನ್ಯವಾದಂಗೊ

 3. ಲಾಯ್ಕದ ಎರಡು ಶುಭಾಷಿತಂಗೊ.
  ಅದು ಅಜಪುತ್ರವೋ ಅಲ್ಲ ಅಜಾಪುತ್ರವೋ ಮಹೇಶಣ್ಣಾ? ಅಜಪುತ್ರ ಆಯೆಕ್ಕಾ?

  • ಅಜ = ಆಡು
   ಅಜಾ = ಹೆಣ್ಣು ಆಡು.
   ಯಾವುದಾದರುದೆ ಅರ್ಥಲ್ಲಿ ವಿಶೇಷ ವ್ಯತ್ಯಾಸ ಏನೂ ಇಲ್ಲೆ.
   ಛಂದಸ್ಸಿಲ್ಲಿಯೂ ಏನೂ ವ್ಯತ್ಯಾಸ ಆವ್ತಿಲ್ಲೆ.
   ಸುಭಾಷಿತ ಅನುಷ್ಟುಪ್ ಛಂದಸ್ಸಿಲ್ಲಿ ಇದ್ದು.

 4. ಮಹೇಶಣ್ಣಂಗೆ ಧನ್ಯವಾದಂಗೊ. ಒಳ್ಳೆಯ ಎರಡು ಸುಭಾಷಿತಂಗೊ. ಅಜಾ ಹೇಳಿರೆ ಹೆಣ್ಣು ಆಡು ಹೇಳಿ ಗೊಂತಾತು. ಮಕ್ಕಳ ಕೆಲವು ಹೆಸರುಗೊ ದೀರ್ಘ ಎಳದಪ್ಪಗ ಕೂಸುಗಳ ಹೆಸರು ಆವುತ್ತು, ಅದುದೆ ಹೀಂಗೆಯೋ ಹೇಳಿ?

  • {ಕೆಲವು ಹೆಸರುಗೊ ದೀರ್ಘ ಎಳದಪ್ಪಗ ಕೂಸುಗಳ ಹೆಸರು ಆವುತ್ತು,}
   ಅಪ್ಪು, ಉದಾಹರಣೆಗೆ –
   ಕೃಷ್ಣಃ – ಕೃಷ್ಣಾ
   ಚೇತನ – ಚೇತನಾ
   ಸ್ವರೂಪ – ಸ್ವರೂಪಾ
   ಪ್ರಶಾಂತಃ – ಪ್ರಶಾಂತಾ
   ಸುಂದರಃ – ಸುಂದರೀ
   ಶಂಕರಃ – ಶಂಕರೀ
   ದೀಪಕಃ – ದೀಪಿಕಾ

   ಸಾಮಾನ್ಯವಾಗಿ `ವಿಶೇಷಣ/adjective’ ಶಬ್ದದ ವಿಷಯಲ್ಲಿ ಹೀಂಗೆ ಆವ್ತು. ನಿಂಗೊಗೆ ನೆಂಪಾದ್ದದನ್ನೂ ಹೇಳಿ.

 5. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಲಾಯ್ಕ ಆಯಿದು

 6. ಮಾನೀರ್ ಮಾಣಿ says:

  ಚೊಲೋ ಆಯ್ದು.. ಧನ್ಯವಾದ ಮಹೇಶಣ್ಣಾ..

 7. ರಘು ಮುಳಿಯ says:

  ದೇವರಿ೦ಗೆ ಬೇಕಾಗಿ ಅಲ್ಲ,ದೇವರ ಹೆಸರಿಲಿ ಬಲಿ ಕೊಟ್ಟು ಮತ್ತೆ ಮುಕ್ಕುಲೆ ಅಲ್ಲದೋ ಪಾಪದ ಪ್ರಾಣಿಗಳ ಬಲಿಕೊಡೊದು !ಸುಭಾಷಿತಕಾರ೦ಗೊ ಅದನ್ನೂ ದೇವರ ತಲಗೇ ಕಟ್ಟಿದವು ಹಾ೦ಗಾರೆ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *