ಸ೦ಸ್ಕೃತಲ್ಲಿ ಪದ್ಯ-೩

December 20, 2010 ರ 7:00 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

स्वागतम् ! अल्पविरामानन्तरं पुनः संस्कृतपद्यावलॊकनम्–

ಈಗ ಮತ್ತೆರಡು ಗೆರೆ– ಅರ್ಥ ಹೇಳ್ಳೆ ಎಡಿಗೊ?

ರ್ಣನಾತೀರ್ಣೇ ! ತವ ವರ್ಣನ೦ ನಾಕರ್ಣ್ಯತೇ !
ಸಪ್ತಸುಮಧುರನಾದಲಸಿತೇ ! ಕುತಃ ಸುಪ್ತಾ ದೇವತೇ ?


———-
पूर्वतनभाग:–

मनुजभावजीवरूपिणि वचनरूपिणि ! भारति !
सुरमुखार्चितॆ मर्त्यपूजितॆ ! ब्रह्मभामिनि! सुंन्दरि !! १ !!

ಮನುಜಭಾವಜೀವರೂಪಿಣಿ = ಮನುಷ್ಯರ ಭಾವನೆಗೊಕ್ಕೆ ಜೀವದ ರೂಪಲ್ಲಿಪ್ಪವಳೇ!
ವಚನರೂಪಿಣಿ = ಮಾತಿನ ರೂಪವ ಹೊ೦ದಿದವಳೇ!
ಭಾರತಿ = ಭಾರತಿಯೇ!
ಸುರಮುಖಾರ್ಚಿತೇ = ದೇವತೆಗಳ ಮುಖ೦ದ ಅರ್ಚಿಸಲ್ಪಟ್ಟವಳೇ!
ಮರ್ತ್ಯಪೂಜಿತೇ = ಮಾನವರಿ೦ದ ಪೂಜಿಸಲ್ಪಟ್ಟವಳೇ!
ಬ್ರಹ್ಮಭಾಮಿನಿ! ಸು೦ದರಿ! = ಬ್ರಹ್ಮನ ಪ್ರಿಯೆಯೇ! ಸು೦ದರಿಯೇ !

सरससुमधुरभाषितॆ तॆ जगति विरसो दर्श्यतॆ ।
दनुजपूजितपूजितॆ ते दनुजनीतिः नीयतॆ ॥ २ ॥

ಸರಸಸುಮಧುರಭಾಷಿತೇ = ಸರಸವಾಗಿ ಸುಮಧುರವಾಗಿ ಮಾತಾಡಲ್ಪಟ್ಟ (ಭಾಷೆಯೇ)!   (ಭಾಷಿತ = ಸ್ಪೋಕನ್)
ತೇ = ನಿನಗೆ
ಜಗತಿ = ಜಗತ್ತಿಲ್ಲಿ  (ಜಗತ್ = ಜಗತ್ತು,  ಜಗತಿ = ಜಗತ್ತಿನಲ್ಲಿ)
ವಿರಸೋ ದರ್ಶ್ಯತೇ = ಅನಾಸಕ್ತಿ  ತೋರಿಸಲ್ಪಡ್ತು.
ದನುಜಪೂಜಿತಪೂಜಿತೇ = ದನುಜರಿ೦ದ ಪೂಜಿಸಲ್ಪಟ್ಟವರಿ೦ದಲೂ ಪೂಜೆಗೊಳಗಾದವಳೇ!
(ರಾಕ್ಷಸರಿ೦ದ ಗೌರವಿಸಲ್ಪಟ್ಟದು ಶುಕ್ರಾಚಾರ್ಯ. ಶುಕ್ರಾಚಾರ್ಯ ವಿದ್ಯೆಯ ಆರಾಧಕ ಅಪ್ಪನ್ನೇ?)
ತೇ= ನಿನಗೆ (ನಿನ್ನ ವಿಷಯಲ್ಲಿ)
ದನುಜನೀತಿಃ  = ರಾಕ್ಷಸರ ನೀತಿ (!) (ದಬ್ಬಾಳಿಕೆ)
ನೀಯತೇ = ತರಲ್ಪಡುತ್ತಿದೆ.

(ನೀಯತೇ ಅನೇನ ಇತಿ ನೀತಿಃ — ನಮ್ಮ ಮುನ್ನಡೆಸುವ ಸಾಮರ್ಥ್ಯ ಇಪ್ಪ ವಿಚಾರಕ್ಕೆ  ನೀತಿ ಹೇಳಿ ಹೆಸರು. ನೀತಿಯ ಹೆಸರಿಲ್ಲಿ ಬೇರೆ೦ತದನ್ನೋ ಎಳದು ತ೦ದು ಆ ಹೆಸರು ಕೊಟ್ಟರೆ ಅದು ‘ದನುಜನೀತಿ’ಯೇ ಅಲ್ಲದೊ?)

ಸ೦ಸ್ಕೃತ/ಸ೦ಸ್ಕೃತಿಯ ವಿಷಯ೦ಗ ಜನರಿ೦ಗೆ/ವಿದ್ಯಾರ್ಥಿಗಕ್ಕೆ ಸಿಕ್ಕದ್ದ ಹಾ೦ಗೆ ಮಾಡ್ಲೆ ಸುಮಾರು ರೂಲ್ ಗಳ ಮಾಡ್ಲೆ ಸರಕಾರ ಉಶಾರಿ.
ಕೇ೦ದ್ರೀಯ ವಿದ್ಯಾಲಯಲ್ಲಿ ಸ೦ಸ್ಕೃತಕ್ಕೆ ವಿದ್ಯಾರ್ಥಿಗೊ ಇರ್ತವು. ಈಗ ಅಲ್ಲಿ ಹೊಸ ಆಯ್ಕೆ ಬಯಿ೦ದಡ–ಸ೦ಸ್ಕೃತ ಅಥವಾ ಜರ್ಮನ್/ಪ್ರೆ೦ಚ್ ಹೇಳಿ. ಪರಿಣಾಮ ಎ೦ತಕ್ಕು ಊಹಿಸಿ. ಸ೦ಸ್ಕೃತ ಕಲಿಯೆಕು ಹೇಳಿ ಇಪ್ಪ ಮನಸ್ಸನ್ನುದೆ ತಿರುಗುಸದೊ ಇದು? ಕ್ರಮೇಣ ಸ೦ಸ್ಕೃತಕ್ಕೆ ಮಕ್ಕೊ ಇಲ್ಲೆ ಹೇಳಿ ಶಿಕ್ಷಕನ ನಿಯುಕ್ತಿಯೇ ಇರ ಕೆಲವು ವರ್ಶ ಕಳುದರೆ.

ಓ ಮೊನ್ನೆ ಒ೦ದು ಸುದ್ದಿ ಕೇಳಿದೆ. ಒ೦ದು ಸರಕಾರಿ ಶಾಲೆಲ್ಲಿ  (ಕಾಸರಗೋಡಿನ) ಸ೦ಸ್ಕೃತಕ್ಕೆ ತು೦ಬಾ ವಿದ್ಯಾರ್ಥಿಗೊ ಇತ್ತಿದ್ದವು. ಲಾಯಕ ಪಾಠ ಮಾಡುವ ಮಾಶ್ಟ್ರು ರಿಟೆರ್ಡು ಆದವಡ. ಅಲ್ಲಿ ಹೊಸ ಮಾಷ್ಟ್ರ ನಿಯುಕ್ತಿ ಮಾಡುವ ಬದಲು  ಸರಕಾರ ಒ೦ದು ಮಲಯಾಳಿ ಮಾಷ್ಟ್ರ ಕಳುಸಿತ್ತು. ಪಾಠ ಅರ್ಥ ಆವುತ್ತಿಲ್ಲೆ ಹೇಳಿ ಮಕ್ಕೊ ಸ೦ಸ್ಕೃತ ಬಿಟ್ಟವು. ಸ೦ಸ್ಕ್ರುತ ಕಲಿವಲೆ ಮಕ್ಕೊ ಇಲ್ಲೆ ಹೇಳಿ ಆ ಮಾಷ್ಟ್ರನ ಮತ್ತೆಲ್ಲಿಗೊ ಕಳುಸಿದವು. ಈಗ ಹೊಸ ಮಾಷ್ಟ್ರ ಅಗತ್ಯ ಇಲ್ಲೆ! ಹೇಳಿ ಸ೦ಸ್ಕೃತದ ಪೋಶ್ಟು ಕೇನ್ಸಲು! ಸರಕಾರಕ್ಕೆ ಲಾಭ ಅಲ್ಲದೊ?

ಸ೦ಸ್ಕೃತ ಭಾಷೆಯ ಮಾ೦ತ್ರ ಅಲ್ಲ ಸರಸ್ವತಿಯನ್ನೇ ವಿರೋಧ ಮಾಡಿದವು ಇದ್ದವು. ಕೇ೦ದ್ರ ಸರಕಾರದ ಒ೦ದು ಕಾರ್ಯಕ್ರಮಲ್ಲಿ (ಶಿಕ್ಷಣಕ್ಕೆ ಸ೦ಬ೦ಧಿಸಿದ ಮೀಟಿ೦ಗಿಲ್ಲಿ) ‘ಸರಸ್ವತೀ ವ೦ದನೆ’ ಇದ್ದತ್ತು ಹೇಳಿ ಆ೦ಧ್ರಪ್ರದೇಶದ ಶಿಕ್ಷಣ ಮ೦ತ್ರಿ(ಣಿ) ಸಭಾತ್ಯಾಗ ಮಾಡಿತ್ತಿದ್ದು.  ಆ ಸಚಿವೆಯ ಹೆಸರು “ಪ್ರತಿಭಾ ಭಾರತಿ” ಅಡ. ವಿಪರ್ಯಾಸದ ಪರಮಾವಧಿ ಎ೦ತದು ನೋಡಿ!!

ಇದರ ಎಲ್ಲ ಸರಿ ಮಾಡೆಕಾದ ಅಗತ್ಯ ಇದ್ದು. ಅಷ್ಟಪ್ಪಗ ‘ಕೇಸರೀಕರಣ’ ಹೇಳಿ ಬೊಬ್ಬೆ ಕೇಳುಗು. ಎನಗೆ ಆ ಶಬ್ದ ಕೇಳುವಗ ಎ೦ತದೋ ವಿಶೇಷ ಅನುಸುತ್ತು.
‘ಕೇಸರೀ’ ಹೇಳಿರೆ ಸಿ೦ಹ. ಸಿ೦ಹದ ಮರಿಗೊಕ್ಕೆ ಸಿ೦ಹ ಹೇಳಿ ಗೊ೦ತಪ್ಪಲೆ ಸುರುವಾಯಿದೀಗ. ಇಷ್ಟರವರೆಗೆ ಒರಗಿಯೊ೦ಡಿದ್ದ ಸಿ೦ಹ೦ಗೊ (ಭಾರತೀಯರು) ಎದ್ದರೆ ಒ೦ದರಿ ಬಾಕಿಪ್ಪವು ಎಲ್ಲ ಹೆದರಿ ಚೀರಾಡುವದು ಸಹಜ ಅಲ್ಲದೊ?!! ಹಾ೦ಗಾದರೆ ನಿಜವಾದ ಅರ್ಥಲ್ಲಿ ‘ಕೇಸರೀಕರಣ’ ಆದ ಹಾ೦ಗೆ!!

‘ಕೇಸರೀಕರಣ’ ನೆ೦ಪಪ್ಪಲೆ ಕಾರಣ ಇದ್ದು: ಇಲ್ಲಿ ಓ ಮೊನ್ನೆ ನೂಜಿ ಲೇ೦ಡಿನ (Newzealand) ಹೆಮ್ಮಕ್ಕೊ (ಪ್ರೊಫೆಸರು) ‘ಕರಣ ಕೇಸರೀ’ ಹೇಳುವ ಗ್ರ೦ಥದ ಬಗ್ಗೆ ಮಾಡಿದ ಭಾಷಣ ಭಾರಿ ಲಾಯಕ ಇತ್ತು.

ಸ೦ಸ್ಕೃತಲ್ಲಿ ಪದ್ಯ-೩, 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಮಂಗ್ಳೂರ ಮಾಣಿ

  ಪದ್ಯಂಗಳ ಅರ್ಥ ಕೊಟ್ಟದು ಒಳ್ಳೇದಾತು ಮಹೇಶಣ್ಣ. ಈಗಾಣ ಹೊಸ ಪದ್ಯದ अर्थम् अहं ना जानामि।

  [Reply]

  ಡಾಮಹೇಶಣ್ಣ

  ಮಹೇಶ Reply:

  ಈಗ ಗೊ೦ತಾತೊ? ಗೊ೦ತಿಲ್ಲೆ ಹೇಳಿ ಸ೦ಸ್ಕೃತಲ್ಲೇ ಹೇಳಿದ್ದು ಸ೦ತೋಷ ಆತು!
  ना न, न इति पर्याप्तम् ! (ना ಅಲ್ಲ, न ಹೇಳಿ ಸಾಕು)
  ना जानामि ಅಲ್ಲ, न जानामि ಹೇಳಿ ಆಯೆಕು!

  [Reply]

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  धन्यवाद। संस्कृत भाषायां वक्तुं अहं न जानामि। ಎನಗೆ college ಲಿ ಸಂಸ್ಕೃತ ಇತ್ತಿಲ್ಲೆ. इदानीं पत्रालय द्वारा अहं संस्कुतं पठामि। ಹಾಂಗಾಗಿ ಸುಮಾರು ತಪ್ಪುಗೊ ಅಕ್ಕು. ಕ್ಷಮಿಸಿ. ತಿದ್ದಿಗೊಳ್ತೆ.

  [Reply]

  ಡಾಮಹೇಶಣ್ಣ

  महेशः Reply:

  अभिनन्दनम् ! उत्तमयत्नः ! सफलो भव !
  आरम्भे दोषः भवेत् । चिन्ता न करणीया । क्रमेण सम्यक् भविष्यति ।

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಇಷ್ಟೆಲ್ಲಾ ಸಂಸ್ಕುತ ಒಂದರಿಯೇ ಬಿಟ್ಟರೆ ಎನಗೆ ಅರ್ಥ ಆಗ ಮಹೇಶಣ್ಣ..

  ಡಾಮಹೇಶಣ್ಣ

  महेशः Reply:

  ಇದು ಅರ್ಥ ಅಕ್ಕು.
  (ಅಭಿನಂದನೆ. ಉತ್ತಮ ಯತ್ನ. ಸಫಲನಾಗು.
  ಆರಂಭಲ್ಲಿ ತಪ್ಪು ಅಕ್ಕು. ಚಿಂತೆ ಮಾಡ್ಲಾಗ. ಕ್ರಮೇಣ ಸರಿ ಆವುತ್ತು.)
  ಅಷ್ಟೇ ಅಲ್ಲದ ಅದರಲ್ಲಿ ಇಪ್ಪದು? ದೇವನಾಗರೀ ಅಕ್ಷರ ನೋಡಿ ಹೆದರಿದ್ದದೋ ಮಾಣಿ?!

  ಮಂಗ್ಳೂರ ಮಾಣಿ

  ಮಂಗ್ಳೂರ ಮಾಣಿ... Reply:

  ಹೆ ಹೆ ಹೆ.. ಇಲ್ಲೆ ಇಲ್ಲೆ.. ತಪ್ಪು ಅರ್ಥ ಮಾದಿಗೊಮ್ಬದರಿಂದ ಕೆಳಿಯೊಂಬದು ಒಳ್ಳೆದು ಹೇಳಿ ಕೇಳಿದೆ…

  VA:F [1.9.22_1171]
  Rating: 0 (from 0 votes)
 2. ಗಣೇಶ ಪೆರ್ವ
  ಗಣೇಶ ಪೆರ್ವ

  ಬಣ್ಣಿಸಲೆ ಎಡಿಯದ್ದಷ್ಟು ಮಹಿಮೆ ಇಪ್ಪವಳೇ, (ಈಗ) ನಿನ್ನ ಬಣ್ಣನೆ ಕೇಳ್ತೇ ಇಲ್ಲೆ… :-(
  ಸುಮಧುರವಾದ ಏಳು ಸ್ವರ೦ಗಳಿ೦ದ ಕೊಶಿ ಹೊ೦ದುತ್ತವಳೇ (ಉಲ್ಲಸಿತ ಆವ್ತವಳೇ)!! (ಈಗ)ಎಲ್ಲಿ ಹುಗ್ಗಿದ್ದೆ ದೇವೀ? (ಈಗ ಕಾಣ್ತೇ ಇಲ್ಲೇನೆಪ್ಪಾ )

  ಎ೦ತಾರು ತಪ್ಪು ಇದ್ದರೆ ಕ್ಷಮಿಸಿ ತಿದ್ದಿಕ್ಕಿ ಆತಾ..

  [Reply]

  ಡಾಮಹೇಶಣ್ಣ

  ಮಹೇಶ Reply:

  ಲಾಯಕ ಹೇಳಿದ್ದೆ ಗಣೇಶಣ್ಣ. `ವರ್ಣ’ ಹೇಳುವದಕ್ಕೆ ಇನ್ನೊ೦ದು ಎ೦ತಾರು ಅರ್ಥ ಸಿಕ್ಕಿರೆ ಮತ್ತೂ ಲಾಯಕ!

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಗಣೇಶ ಭಾವ ಸರಿ ಹೇಳಿದ್ದ ಹೇಳಿ ಕಾಣುತ್ತು,ಅಲ್ಲದೋ ಮಹೇಶಣ್ಣಾ?

  [Reply]

  VA:F [1.9.22_1171]
  Rating: 0 (from 0 votes)
 4. #############

  ಪದ್ಯಂಗಳ ಅರ್ಥ ಕೊಟ್ಟದು ಒಳ್ಳೇದಾತು ಮಹೇಶಣ್ಣ. ಈಗಾಣ ಹೊಸ ಪದ್ಯದ अर्थम् अहं ना जानामि।

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರದಣ್ಣಪುತ್ತೂರಿನ ಪುಟ್ಟಕ್ಕಅಡ್ಕತ್ತಿಮಾರುಮಾವ°ಶಾಂತತ್ತೆಶುದ್ದಿಕ್ಕಾರ°ವಿನಯ ಶಂಕರ, ಚೆಕ್ಕೆಮನೆಶ್ಯಾಮಣ್ಣಪೆಂಗಣ್ಣ°ದೊಡ್ಡಭಾವಎರುಂಬು ಅಪ್ಪಚ್ಚಿವೇಣೂರಣ್ಣಹಳೆಮನೆ ಅಣ್ಣಬಂಡಾಡಿ ಅಜ್ಜಿಸರ್ಪಮಲೆ ಮಾವ°ಅನು ಉಡುಪುಮೂಲೆದೊಡ್ಮನೆ ಭಾವದೊಡ್ಡಮಾವ°ವಾಣಿ ಚಿಕ್ಕಮ್ಮಮುಳಿಯ ಭಾವಕಳಾಯಿ ಗೀತತ್ತೆಚೂರಿಬೈಲು ದೀಪಕ್ಕಕೊಳಚ್ಚಿಪ್ಪು ಬಾವವಿದ್ವಾನಣ್ಣಚೆನ್ನೈ ಬಾವ°ವೆಂಕಟ್ ಕೋಟೂರುಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ