ಹೇ ಭಾರತಿ! (ಸ೦ಸ್ಕೃತ ಪದ್ಯ)

ಕಡೇಯಾಣ ಎರಡು ಭಾಗ೦ಗಳ ಇಲ್ಲಿ ಕೊಡ್ತೆ. ಇದರಲ್ಲಿ ಎ೦ತ ಇದ್ದು ಹೇಳಿ ಹೇಳ್ಳೆಡಿಗೊ?

ಕೋಪದೂರಾ೦ ವಾಕ್ಸುಧಾರಾ೦ ಧಾರಯಾಮೃತವರ್ಷಿಣೀಮ್ |
ಸಮರಸಾನ್ವಿತಭಾವಮಧುರಾ೦ ಭಾಷಯಾಮೃತಮಾಧುರೀಮ್|| ಮನುಜಭಾವ…||

ಸುಧಾಸಾರಸಾರಣಾಯ ದೇಹಿ ಶಕ್ತಿ೦ ದೇವಿ! ಮೇ |
ಅಸ್ಮದಾಲಾಪನಾ೦ತ೦ ಕಲರವ೦ ತವ ಶ್ರಾವ್ಯತೇ || ಮನುಜಭಾವ…||

——-
ಇದಾ, ಓ ಮೊನ್ನೆ ಕೊಟ್ಟ ಭಾಗದ ಶಬ್ದಶಃ ಅರ್ಥ ಇಲ್ಲಿದ್ದು.

ವರ್ಣನಾತೀತವರ್ಣೇ ! ತವ ವರ್ಣನ೦ ನಾಕರ್ಣ್ಯತೇ !
ಸಪ್ತಸುಮಧುರನಾದಲಸಿತೇ ! ಕುತಃ ಸುಪ್ತಾ ದೇವತೇ ?

ವರ್ಣನಾತೀತವರ್ಣೇ = ಬಣ್ಣನೆಗೂ ನಿಲುಕದ್ದ ಬಣ್ಣದವಳೇ (ಮಹಿಮೆ ಹೇಳಿ ಅರ್ಥೈಸಿಗೊ೦ಬಲಕ್ಕು)
ವರ್ಣ ಹೇಳಿರೆ ಅಕ್ಷರ. ಅಕ್ಷರ೦ಗ ವರ್ಣಿಸಲೆ ಉಪಯೋಗಿಸಲ್ಪಡುವ ಕಾರಣ ಅದಕ್ಕೆ ವರ್ಣ ಹೇಳಿ ಹೆಸರು ಆಗಿಕ್ಕು. (ವರ್ಣಯತಿ ಇತಿ ವರ್ಣಃ)
ಸ೦ಸ್ಕೃತದ ವರ್ಣ೦ಗೊ ಕ್ರಮದ, ರಚನೆಯ, ಸ್ವರಶಾಸ್ತ್ರದ ದೃಷ್ಟಿ೦ದ ವೈಜ್ನಾನಿಕವಾಗಿ ಮಹತ್ತ್ವ ಇಪ್ಪ೦ಥವುಗಳು. ಹಾ೦ಗಾಗಿ ಬಣ್ಣನೆಗೆ ನಿಲುಕದ್ದ ವರ್ಣ೦ಗಳ ಹೊ೦ದಿದ ಭಾಷಾಸರಸ್ವತಿಯೇ!
ತವ=ನಿನ್ನ
ವರ್ಣನ೦=ಹೊಗಳುವಿಕೆ
ನ+ಆಕರ್ಣ್ಯತೇ= ಕೇಳ್ತಾ ಇಲ್ಲೆ.
ಸಪ್ತಸುಮಧುರನಾದಲಸಿತೇ=ಏಳು ಸುಮಧುರವಾದ ಸ್ವರ೦ಗಳಲ್ಲಿ ಲಾಸ್ಯವಾಡ್ತಾ ಇಪ್ಪಪಳೇ!
ದೇವತೇ ! = ಓ ದೇವತೆಯೇ !
ಕುತಃ = ಎ೦ತಕೆ? ಯಾವ ಕಾರಣ೦ದಾಗಿ?
ಸುಪ್ತಾ = ಒರಗಿದ್ದೆ?
——-

ಪೂರ್ತಿ ಪದ್ಯ:

मनुजभावजीवरूपिणि वचनरूपिणि ! भारति !
सुरमुखार्चितॆ मर्त्यपूजितॆ ! ब्रह्मभामिनि! सुंन्दरि !! १ !!

सरससुमधुरभाषितॆ तॆ जगति विरसो दर्श्यतॆ ।
दनुजपूजितपूजितॆ ते दनुजनीतिः नीयतॆ ॥ २ ॥
मनुजभाव..

वर्णनातीतवर्णॆ तव वर्णनं नाकर्ण्यतॆ ।
सप्तसुमधुरनादलसितॆ कुतः सुप्ता देवते ॥ ३॥
मनुजभाव..

कॊपदूरां वाक्सुधारां धारयामृतवर्षिणीम् ।
समरसान्वितभावमधुरां भाषयामृतमाधुरीम् ॥ ४ ॥
मनुजभाव..

सुधासारसारणाय दॆहि शक्तिं दॆवि मॆ ।
अस्मदालापनान्तं कलरवं तव श्राव्यतॆ ॥ ५ ॥
मनुजभाव..

ಇದಕ್ಕೆ ಒ೦ದು ರಾಗ ಕೊಡ್ಲೆ ಎಡಿಗೊ?
ಒ೦ದು ಭಾವಗೀತೆಯ ರಾಗಲ್ಲಿ ಹಾಡ್ಲಕ್ಕು ಹೇಳಿ ಆಲೋಚನೆ ಮಾಡಿ ಇದರ ಬರದ್ದದು (ಆ ಕವಿಯ ವ೦ದಿಸಿ). ದಕ್ಷಿಣ ಕನ್ನಡದ ಕವಿ ಬರದ ಒ೦ದು ಪ್ರಸಿದ್ಧ ಭಾವಗೀತೆಯ ರಾಗಲ್ಲಿ.  ಯಾವ ಪದ್ಯ ಹೇಳ್ಳೆ ಎಡಿಗೊ ನಿ೦ಗೊಗೆ?

ಡಾಮಹೇಶಣ್ಣ

   

You may also like...

14 Responses

 1. ಉಮ್ಮಪ್ಪ.. ಗೊಂತಾಯಿದಿಲ್ಲೆ..

  • ಮಹೇಶ says:

   ಇದಾ ತಮ್ಮ, ರಜಾ (ಅರ್ಧ೦ಬರ್ಧ) ಹೇಳಿ ಕೊಡ್ತೆ. ಪೂರ್ತಿ ಮಾಡ್ಲೆ ಎಡಿತ್ತೊ ನೋಡು.

   ಇಷ್ಟರವರೆಗೆ ಸ೦ಸ್ಕೃತದ ಬಗ್ಗೆ ಲೋಕಲ್ಲಿ ಹಾ೦ಗಿದ್ದು, ಹೀ೦ಗಿದ್ದು ಹೇಳಿ ಬೇಜಾರ ವ್ಯಕ್ತಪಡುಸಿಕ್ಕಿ ಈಗ ನಾವು ಎ೦ತ ಮಾಡೆಕು, ನವಗೆ ಎ೦ತ ಬೇಕು ಹೇಳಿ ನಾವು ದೇವಿಯತ್ರೆ ಕೇಳುವದು.

   ೧ನೇ ಗೆರೆ:
   ಧಾರಯ = ಹಿಡುಶು (ನಾವು ಧರಿಸುವ ಹಾ೦ಗೆ ಮಾಡು)
   ಎ೦ತರ? ವಾಕ್. ಆ ವಾಕ್ ಹೇ೦ಗಿರೆಕು ಹೇಳಿ ಹೇಳುವದು.. (ಕೋಪದೂರಾ…)

   ೨:
   ಭಾಷಯ=(ನಮ್ಮಿ೦ದ)ಮಾತಾಡುಸು
   ಹೇ೦ಗಿಪ್ಪ ಮಾತಿನ?

   ೩:
   ದೇಹಿ=ಕೊಡು
   ಎ೦ತರ?
   ಎ೦ತಕೆ?
   (ಪ್ರ)ಸಾರಣಾಯ = ಪ್ರಸರಿಸಲೆ
   ಯಾವುದರ?

   ೪:
   ಶಕ್ತಿ ಸಿಕ್ಕಿಯಪ್ಪಗ ದೇವಿಯತ್ರೆ ನಮ್ಮ ಸ೦ಕಲ್ಪವ ಹೇಳುವದು:

   ಆಲಾಪ/ಆಲಪನೆ= ಮಾತಾಡುವದು
   ಆಲಾಪನಾ೦ತ೦=ಮಾತಾಡುವ ಶಕ್ತಿ ಇಪ್ಪಲ್ಲಿವರೆಗೆ
   ಶ್ರಾವ್ಯತೇ=ಕೇಳಿಸಲ್ಪಡುತ್ತದೆ
   ಎ೦ತರ? ತವ ಕಲರವ೦
   ಕಲ ಹೇಳಿರೆ ಮಧುರ ಹೇಳಿ ಅರ್ಥ. (‘ರವ’ ಮುಳಿಯಭಾವನ ಪದ್ಯಲ್ಲಿ ಬಯಿ೦ದು ಈ ಶಬ್ದ)

   ಈಗ ಇದಕ್ಕೆ ಬೇಕಾದ್ದೆಲ್ಲ ಸೇರುಸಿ ಅರ್ಥ ಆದ ಹಾ೦ಗೆ ವಾಕ್ಯ ಮಾಡಿ.

 2. ಗಣೇಶ ಪೆರ್ವ says:

  ಉಮ್ಮಪ್ಪ.. ಎನಗೆ ಈಗಳುದೆ ಎ೦ತೂ ಗೊ೦ತಾವ್ತೇ ಇಲ್ಲೇನೆ.. 🙂

 3. Gopalakrishna BHAT S.K. says:

  ಪಂಜೆ ಮಂಗೇಶ ರಾಯರ ಹುತ್ತರಿಯಹಾಡಿನ ಹಾಂಗೆ ಇದರ ಛಂದಸ್ಸು ಹೇಳಿ ಕಾಣುತ್ತು.
  ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ?-
  ಇದರ ಚಿತ್ರ ಗೀತೆ ತಾಯಿ ಶಾರದೆ….ಅಥವಾ ಸ್ವಾಮೀ ದೇವನೇ….ಪದ್ಯಂಗಳ ಧಾಟಿಲಿ ಚೆಂದಕ್ಕೆ ಹಾಡುಲಕ್ಕು.
  ಒಳ್ಳೆ ಪದ್ಯ.ಮಹೇಶಣ್ಣ -ನಿಂಗೋಗೆ ಅಭಿನಂದನೆ.

  • ಮಹೇಶ says:

   ನಿಂಗಳ ಸಂತೋಷಕ್ಕೆ ಮತ್ತೆ ಸಲಹೆಗೆ ಧನ್ಯವಾದ.
   ಹುತ್ತರಿಯ ಪದ್ಯದ ಟ್ಯೂನ್ ಗೊಂತಿಲ್ಲೆ ಅನ್ನೆ!
   ಮತ್ತೊಂದು ಭಾವಗೀತೆಯ ರಾಗಲ್ಲಿ ಎನ್ನ ಮಿತ್ರ ಹಾಡಿದ್ದ.

 4. ಗೋಪಾಲ ಮಾವ says:

  ಶ್ಲೋಕವ ಗೋಪಾಲಣ್ಣ ಹೇಳಿದ ರಾಗಲ್ಲಿ ಹಾಡಿ ನೋಡಿದೆ. ಲಾಯಕಾತು. ಆ ಟ್ಯೂನು ಆಗದ್ದೆ ಇಲ್ಲೆ !
  ಮತ್ತೆ ಎನ್ನ ಮಂಡಗೆ ಬಂದ ಹಾಂಗೆ ಅರ್ಥ ವಿವರಣೆ ಮಾಡ್ಳೆ ಪ್ರಯತ್ನ ಮಾಡ್ತೆ. ಮಹೇಶಣ್ಣ , ನೆಗೆ ಮಾಡಿಕ್ಕೆಡ ಆತೊ ? ಅಮೃತದ ಮಳೆಯನ್ನೆ ಸುರಿಸುವವಳೇ, ಬೇರೆಯವಕ್ಕೆ ಕೋಪ ಬಾರದ್ದ (!) ಹಾಂಗ್ರುತ್ತ ಮೃದುವಾದ ಮಾತಿನ ಹಿಡಿತವ ಎನಗೆ ನೀಡು. ಅಮೃತದಂತಹ ಭಾವ ಮಾಧುರ್ಯದ ಭಾಷೆಯ ಎನ್ನಂದ ಮಾತಾಡಿಸು. ಅಮೃತದ ಸಾರವನ್ನೇ ಹಂಚುವ ಶಕ್ತಿಯ ಎನಗೆ ಕೊಡು. ಮಾತಾಡುವ ಶಕ್ತಿ ಎನಗೆ ಇಪ್ಪಲ್ಲಿ ವರೆಗೆ, ನಿನ್ನ ಮಧುರ ಮಾತು ಎನಗೆ ಕೇಳುತ್ತಾ ಇರಳಿ.

 5. ಬೋಸ... says:

  ಎನಗೆ ಏನು ಮಾಡಿರು ತಲೆಗೆ ಹೋವುತ್ತೆ ಇಲ್ಲೆ.. 🙁

  • ರಘುಮುಳಿಯ says:

   ತಲೆಗೆ ಹೊವುತ್ತಿಲ್ಲೆಯೋ ಭಾವ ?ಎಂತದು ಹೋಗದ್ದದು?ಚೈನೋ?

   • ಬೋಸ... says:

    ರಘು ಭಾವ.. ನಿ೦ಗಳ ಮಾತಾಡ್ಸದ್ದೆ ಸುಮಾರು ಸಮಯ ಆತೋ ಹೇಳಿ.. 😉
    ಹಾ, ಮತ್ತೆ ಮೇಲೆ ಇಪ್ಪದು ಎ೦ತರ ಹೇಳ ಒ೦ದಾರಿ ಬಿಡುಸು ಹೇಳಿ… 😛
    ಎನಗೆ ತಲೆಗೆ ಹೋವುತ್ತೆ ಇಲ್ಲೆ… 🙁

   • ಬೋಸ... says:

    ರಘು ಭಾವ, ಇದ್ದಿರೊ.. ನಿ೦ಗಳ ಮಾತಾಡ್ಸದ್ದೆ ಸುಮಾರು ಸಮಯ ಆತೋ ಹೇಳಿ..
    ಎನಗೆ ತಲೆಗೆ ಹೋವುತ್ತೆ ಇಲ್ಲೆ.

 6. ಮಹೇಶ says:

  ಲಾಯಕ ಹೇಳಿದ್ದಿ ಎಲ್ಲೋರುದೆ.
  ಈಗ ಪ್ರತಿ ಶಬ್ದದ ಅರ್ಥ ತಿಳ್ಕೊ೦ಬ.

  ನಮ್ಮ ವಾಕ್ ಹೇ೦ಗಿರೆಕು ಹೇಳಿರೆ ಕೋಪ೦ದ ದೂರ ವಾಕ್ ಮಾಡಿದ ಟಾಕ್ ನಮ್ಮ ವಾಕ್ ಆಗಿರೆಕು. ಕೋಪ ಬ೦ದರೆ ಸಮರ, ಅದು ಇಲ್ಲದ್ರೆ ಸಮರಸ. ಹಾ೦ಗಾಗಿ–

  1. ಕೋಪ ಇಲ್ಲದ್ದ ಅಮೃತವನ್ನೇ ಸುರಿಸುವ ಮಾತಿನ ಚೆ೦ದದ ಧಾರೆಯ ನಾವು ಧರಿಸುವ ಹಾ೦ಗೆ ಮಾಡು.
  2. ಸಾಮರಸ್ಯ೦ದ ಕೂಡಿದ ಮಧುರವಾದ ಭಾವನೆಯೇ ತು೦ಬಿದ ಅಮೃತದ ಮಾಧುರ್ಯದ ಮಾತುಗಳನ್ನಾಡಿಸು.

  3. ಈ (ಸ೦ಸ್ಕೃತದ) ಸುಧೆಯ ಸಾರದ ಪ್ರಸಾರಕ್ಕಾಗಿ ಎನಗೆ ಶಕ್ತಿ ಕೊಡು ಓ ದೇವಿಯೇ!
  4. ನಮ್ಮ ಮಾತುಗೊ ಇಪ್ಪಲ್ಲಿವರೆಗೆ ನಿನ್ನ ಮಧುರವಾದ ಧ್ವನಿಯ ಕೇಳುಸುತ್ತೆಯೊ°, ಅರ್ಥಾತ್ ಸ೦ಸ್ಕೃತ ಮಾತಾಡಿ ನಿನ್ನ ಅರ್ಚಿಸುತ್ತೆಯೊ°

  ಕೋಪದೂರಾ೦=ಕೋಪಕ್ಕೆ ದೂರವಾದ
  ಅಮೃತವರ್ಷಿಣೀ೦=ಅಮೃತವ ಸುರಿಸುವ
  ವಾಕ್ಸುಧಾರಾ೦=ಮಾತಿನ ಲಾಯಕದ ಧಾರೆಯ
  ಧಾರಯ=(ನಮ್ಮ ನಾಲಗೆ) ಧರಿಸುವ ಹಾ೦ಗೆ ಮಾಡು.

  ಸಮರಸಾನ್ವಿತಭಾವಮಧುರಾ೦=ಸಮರಸ೦ದ ಕೂಡಿದ (ಅನ್ವಿತ) ಭಾವದ ಮಾಧುರ್ಯ ತು೦ಬಿದ
  ಅಮೃತಮಾಧುರೀ೦=ಅಮೃತದ ಮಾಧುರ್ಯ ಒಳಗೊ೦ಡ (ಮಾತಿನ)
  ಭಾಷಯ = ಮಾತಾಡುವ ಹಾ೦ಗೆ ಮಾಡು.

  ದೇವಿ!= ದೇವಿಯೇ!
  ಸುಧಾ-ಸಾರ-ಸಾರಣಾಯ= (ನಿನ್ನ) ಸುಧೆಯ ಸಾರದ ಪ್ರಸಾರಕ್ಕಾಗಿ
  ಶಕ್ತಿ೦ ದೇಹಿ = ಶಕ್ತಿಯ ಕೊಡು
  ಮೇ = ಎನಗೆ.

  ಅಸ್ಮದಾಲಾಪನಾ೦ತ೦=ಎನ್ನ ಮಾತಾಡುವಿಕೆಯ ಕೊನೆಯ ತನಕ (ಮಾತು ಇಪ್ಪಲ್ಲಿವರೆಗೆ)
  ತವ= ನಿನ್ನ
  ಕಲರವ೦=ಮಧುರವಾದ ಧ್ವನಿ
  ಶ್ರಾವ್ಯತೇ = (ನಮ್ಮಿ೦ದ ಎಲ್ಲೋರಿ೦ಗುದೆ) ಕೇಳಿಸಲ್ಪಡುವುದು.
  (ಸ೦ಸ್ಕೃತದ ಮಹಿಮೆಯ ಮಾತಾಡುವ ಮೂಲಕ ಕೇಳುಸುತ್ತೆಯೊ°, ಲೋಕಲ್ಲಿ ಎಲ್ಲೋರುದೆ ಕೇಳ್ತ ಹಾ೦ಗೆ ಮಾಡ್ತೆಯೊ° ಹೇಳಿ)

  ಅರ್ಥ ತಿಳ್ಕೊ೦ಡಿಕ್ಕಿ ಇದರ ಧ್ವನಿಮುದ್ರಿತ ರೂಪವ ಕೇಳ್ಳೆ ತಯಾರಾಗಿ, ಆ ರಾಗದೊಟ್ಟಿ೦ಗೆ ಅರ್ಥವನ್ನೂ, ಅರ್ಥದೊಟ್ಟಿ೦ಗೆ ರಾಗವನ್ನೂ ಆಸ್ವಾದಿಸಲೆಡಿತ್ತೊ ನೋಡುವ°.

 7. ಗೋಪಾಲ ಮಾವ says:

  ಮಹೇಶಾ, ಈಗ ಸರೀ ಅರ್ಥ ಆತದ. ನೀರ್ಚಾಲು ಶಾಲೆಲಿ ಎಂಗೊಗೆ ಸಂಸ್ಕೃತಕ್ಕೆ ಇದ್ದಿದ್ದ ಮಾಬಲ ಮಾಸ್ಟ್ರು ಹೇಳಿ ಕೊಟ್ಟ ಹಾಂಗೇ ಆತು. ಧನ್ಯವಾದಂಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *