Oppanna.com

ಕೃಷಿಲಿ ಗೆಲ್ಲುಲೆ ಮಾರ್ಗ ಎಂತರ?

ಬರದೋರು :   ನೀರ್ಕಜೆ ಮಹೇಶ    on   20/07/2010    25 ಒಪ್ಪಂಗೊ

ನೀರ್ಕಜೆ ಮಹೇಶ

ನವಗೆಲ್ಲ ಗೊಂತಿಪ್ಪ ಹಾಂಗೆ ಹವ್ಯಕ ಸಮುದಾಯ ಮೂಲತ: ಕೃಷಿಯನ್ನೇ ನೆಚ್ಚಿಕೊಂಡಿದ್ದಂತಹ ಸಮುದಾಯ. ಕೃಷಿ ಜೊತೆಗೆ ಕೆಲವು ಜನ ಪೌರೋಹಿತ್ಯ, ಅಡಿಗೆ, ಅಂಗಡಿ ಮುಂಗಟ್ಟು ಇತ್ಯಾದಿಗೊ ಇದ್ದರುದೆ ಕೃಷಿ ಹೇಳ್ತು ಇದೆಲ್ಲದರೊಟ್ಟಿಂಗೆ ಇದ್ದೇ ಇತ್ತು. ಇದು ಪ್ರಾಕಿಲಿ ಇದ್ದ ವ್ಯವಸ್ಥೆ, ಈಗ ಈ ಪರಿಸ್ಥಿತಿ ಇಲ್ಲೆ. ಈ ನಿಟ್ಟಿಲಿ ಎನಗೆ ಕೆಲವು ವಿಷಯಂಗಳ ಹೇಳೆಕ್ಕು ಹೇಳಿ ಅನ್ಸಿತ್ತು.
ಕೃಷಿ ಪರಿಸ್ಥಿತಿ ಎಂತಕ್ಕೆ ಈಗ ಹಾಳಾಯಿದು ಹೇಳಿ ಎಲ್ಲರಿಂಗೂ ಗೊಂತಿದ್ದು. ಅದನ್ನೇ ಪುನಾ ಪುನಾ ಹೇಳಿ ನಿಂಗಳ ತಲೆ ತಿಂತಿಲ್ಲೆ. ಎನ್ನ ಪ್ರಯತ್ನ ಈ ಸಮಸ್ಯೆಗೊಕ್ಕೆ ಪರಿಹಾರ ಎಂತಾರು ಇದ್ದಾ ಹೇಳ್ತ ಒಂದು ಚಿಂತನೆ ಮಾತ್ರ. ಆದರೂ ಸಾಮಾನ್ಯವಾಗಿ ಎಲ್ಲರೂ ತಿಳುದಿಪ್ಪ ಕಾರಣಂಗಳ ಹೊರತಾಗಿ ಎನಗೆ ಕಾಂಬ ಕಾರಣದ ಬಗ್ಗೆ ನಿಂಗೊಗೆ ಹೇಳೆಕ್ಕು ಹೇಳಿ ಕಂಡತ್ತು. ಅದೆಂತ ಹೇಳ್ರೆ – ಪ್ರಸ್ತುತ ರೂಢಿಲಿಪ್ಪ ಸರಕಾರಿ ಯೋಜನೆಗಳಲ್ಲಿ ಕೈಗಾರಿಕೆಗೆ ಮತ್ತೆ ವ್ಯಾಪಾರಕ್ಕೆ ಹೆಚ್ಚು ಒತ್ತು ಇದ್ದು. ಸರಕಾರದ ಅಘೋಷಿತ ಪಾಲಿಸಿ ಎಂತ ಹೇಳ್ರೆ ಭಾರತ ಒಟ್ಟು ಜನಸಂಖ್ಯೆಲಿ ಶೇ ೨೦ ಜನರ ಮಾತ್ರ ಕೃಷಿಲಿ ಒಳುಶಿ ಒಳುದ ೮೦ ಶೇ ಜನರ ಕೈಗಾರಿಕೆ ಅಥವಾ ಪಟ್ಟಣ ಆಧಾರಿತ ಕೆಲಸಲ್ಲಿ ತೊಡಗ್ಸೆಕ್ಕು, ಆ ಮೂಲಕ ದೇಶದ ಅಭಿವೃಧ್ಧಿ (ಜಿ.ಡಿ.ಪಿ.) ಮಾಡೆಕ್ಕು ಹೇಳ್ತದು. ಸರಕಾರದ ಎಲ್ಲಾ ಯೋಜನೆಗೊದೇ ಈ ಮೂಲ ನೀತಿಯ ಮೇಲೆಯೇ ನಿಂತಿಪ್ಪದು. ಈ ನೀತಿ ಶುರುವಾದ್ದು ಗ್ಯಾಟ್ ಒಪ್ಪಂದದ ಮೂಲಕ, ೧೯೯೨ ರಲ್ಲಿ (ಆ ಸಮಯಲ್ಲಿ ಕೆಲವು ಜನಕ್ಕೆ ಈ ಸಮಸ್ಯೆಯ ಅರಿವಾಗಿತ್ತಿದು, ಚೂರು ಪ್ರತಿಭಟನೆ ಎಲ್ಲ ಆಗಿತ್ತಿದು). ಅದರ ಪರಿಣಾಮವೇ ನವಗೆ ಈಗ ಪ್ರಸ್ತುತ ಕಾಣುತ್ತಾ ಇಪ್ಪ ಕೃಷಿಯ ಸಮಸ್ಯೆಗೊ. ಇದರೊಟ್ಟಿಂಗೆ ಭಾರತದ ಹಸಿರು ಕ್ರಾಂತಿಯ ಕರ್ಮಫಲವೂ ಇದ್ದು. ಹಾಂಗಿಪ್ಪ ಪರಿಸ್ಥಿತಿಲಿ ಸರಕಾರವೇ ಈ ಕೃಷಿಯ ಹಾಳುಮಾಡುಲೆ ಯೋಜನೆ ಮಾಡಿಪ್ಪಗ ಸದ್ಯದ ಪರಿಸ್ಥಿತಿಲಿ ಅದೇ ರೀತಿ ಅವುತ್ತ ಇಪ್ಪದರಲ್ಲಿ ವಿಶೇಷ ಎಂತ ಇಲ್ಲೆ ಅಲ್ಲದ? ಹಾಂಗಾಗಿ ಕೃಷಿ ಸಮಸ್ಯೆಗೆ ಕಾರಣಂಗೊ ಕೂಲಿ ಸಮಸ್ಯೆ , ರೇಟು ಸಮಸ್ಯೆ ಹೇಳ್ತದು ಕೇವಲ “Symptoms” ಅಷ್ಟೆ. ನಿಜವಾದ ಕಾರಣ ಭಾರತ ಸರಕಾರದ ಆರ್ಥಿಕ ನೀತಿ.
ಇನ್ನು ಕೃಷಿ ಸಮಸ್ಯೆಗೊಕ್ಕೆ ಪರಿಹಾರ ಎಂತಕ್ಕೆ ಬೇಕು? ಈಗ ಬೇರೆ ಬೇರೆ ಕ್ಷೇತ್ರಗಳಲ್ಲಿ ಹವ್ಯಕರು ಮಿಂಚುತ್ತಾ ಇದ್ದವು, ಹಾಂಗಾಗಿ ಕೃಷಿ ಕೃಷಿ ಹೇಳಿಯೊಂಡು ಕೂಪದಕ್ಕಿಂತ ಇಂತಹ ಅವಕಾಶಗಳ ಸದುಪಯೋಗ ಮಾಡಿಕೊಂಡು ಜೀವನ ಮಟ್ಟ ಉತ್ತಮ ಪಡಿಸಿಕೊಂಬಲಕ್ಕನ್ನೇ ಹೇಳುವವು ಇದ್ದವು. ಅಂತಹವಕ್ಕೆ ಈ ಲೇಖನ ಬರದ್ದಲ್ಲ. ಈ ಬರಹ ಕೃಷಿಲಿ ನಂಬಿಕೆ, ಆಸಕ್ತಿ ಇದ್ದು, ಇದರ ಪ್ರಸ್ತುತ ಸಮಸ್ಯೆಗಳ ಕಾರಣಂದ ದೂರ ಉಳುದವು, ಅಥವಾ ಕೃಷಿಲೇ ಇದ್ದುಗೊಂಡು ಹೇಂಗೋ ದಿನ ನೂಕುತ್ತಾ ಇಪ್ಪವಕ್ಕೆ. ಆದರೂ ಈ ಸುರುವಣ ಕೆಟಗರಿ ಜನರ ವಾದದ ಬಗ್ಗೆ ಒಂದು ಮಾತು ಹೇಳೆಕ್ಕು ಹೇಳಿ ಕಾಣುತ್ತು. ಆನು ಮೇಲೆ ಹೇಳಿದ ರೀತಿಲಿ ಜನ ಕೃಷಿ ಬಿಟ್ಟು ಪೇಟೆಗೆ ಹೋಪದು ಸರಕಾರದ ಯೋಜನೆಯ ಅನುಸಾರವೇ ಅಪ್ಪದು ಹೇಳಿ ಇದ್ದರೆ, ಆನು ಹೇಳುದು ಈ ಯೋಜನೆ ಸಫಲ ಆವುತ್ತಿಲ್ಲೆ ಹೇಳಿ. ಈಗ ಸುರುವಂಗೆ ಯೋಜನೆ ಪ್ರಕಾರವೇ ಜನ ಹಳ್ಳಿಂದ ಪೇಟೆಗೆ ಹೋಕು. ಆದರೆ ಈ ವಲಸೆ ಸುಸ್ಥಿರ ಅಪ್ಪ (Sustainable) ಸಾಧ್ಯತೆ ಕಮ್ಮಿ ಎನ್ನ ಪ್ರಕಾರ. ಎಂತಕ್ಕೆ ಹೇಳ್ರೆ ಇದು ಅಮೆರಿಕದ ಕ್ರಮ. ಅಲ್ಲಿ ನೂರು ಜನ ಪ್ರಜೆಗೊಕ್ಕೆ ಒಬ್ಬ ಕೃಷಿಕ ಇಪ್ಪದು. ಅವ ಯಂತ್ರೋಪಕರಣ, ಸಬ್ಸಿಡಿ, ರಾಸಾಯನಿಕಗಳ ಉಪಯೋಗ್ಸಿಕೊಂಡು ಉಳುದ ೯೯ ಜನಕ್ಕೆ ತಿಂಬಲೆ ಹಾಕುತ್ತ. ಆದರೆ ಈ ಮಾಡೆಲು ಅವು ಮಾಡಿದ್ದು ೩೦-೪೦ ವರ್ಷದ ಹಿಂದೆ. ಆಗ ತೈಲದ ಬೆಲೆ ತುಂಬಾ ಕಮ್ಮಿ ಇತ್ತು ಮತ್ತೆ ಜನಸಂಖ್ಯೆಯೂ ಕಮ್ಮಿ ಇತ್ತು! ಆದರುದೆ ಈಗಣ ಆರ್ಥಿಕ ಪರಿಸ್ಥಿತಿಲಿ ಅವಕ್ಕೆ ಈ ಮಾಡೆಲ್ಲಿನ ನಿಭಾಯ್ಸುಲೆ ಕಷ್ಟ ಆವುತ್ತಾ ಇದ್ದು. ಅದಕ್ಕೇ ಅಲ್ಯಾಣ ಗವರ್ಮೆಂಟು ಕೃಷಿ ಸಬ್ಸಿಡಿಯ ಕಮ್ಮಿ ಮಾಡುಲೆ ಯೋಚನೆ ಮಾಡ್ತಾ ಇದ್ದವು. ಹಾಂಗೆ ಮಾಡಿರೆ ಅಮೆರಿಕದ ಆಹಾರ ಉತ್ಪಾದನೆ ಮೇಲೆ ದೊಡ್ಡ ಪೆಟ್ಟು ಬೀಳ್ತು. ಹಾಂಗಿಪ್ಪಗ ಭಾರತ ಇದೇ ಮೋಡೆಲ್ಲಿನ ಈಗ ಶುರು ಮಾಡಿರೆ ಹೇಂಗಕ್ಕು? ಇಲ್ಲಿ ಲಭ್ಯ ಇಪ್ಪ ಭೂಮಿ ಕಮ್ಮಿ, ಜನಸಂಖ್ಯೆ ಜಾಸ್ತಿ. ಅವರಷ್ಟು ತೈಲ ಶಕ್ತಿಯೂ ನಮ್ಮಲ್ಲಿ ಇಲ್ಲೆ. ಹಾಂಗಿಪ್ಪಗ ೮೦ ಜನರ ಹೊಟ್ಟೆ ತುಂಬ್ಸುಲೆ ೨೦ ಜನಕ್ಕೆ ಹೇಂಗೆ ಸಾಧ್ಯ! ಇರ್ಲಿ, ಈಗ ಶೇ ೮೦ ಜನರ ಕೃಷಿಂದ ಬಿಡ್ಸಿರೆ ಅವಕ್ಕೆ ಕೆಲಸ ಕೊಡೆಕ್ಕನ್ನೇ? ಹೆಚ್ಚು ಕಮ್ಮಿ ೧೦೦ ಕೋಟಿ ಜನಕ್ಕೆ ಎಂತ ಕೆಲ್ಸ ಕೊಡುಗು ಗೌರ್ಮೆಂಟು? ಯೋಚಿಸೆಕ್ಕಾದ ವಿಷಯ ಅಲ್ಲದೋ? ಹಾಂಗಾಗಿ ಎನಗೆ ಅನ್ಸುದು ಈ ಪೇಟೆಗೆ ಹೋಪ ವ್ಯವಸ್ಥೆ ಒಂದು ದಿನ ಕುಸುದು ಬೀಳುದೆ. ಅದು economically and ecologically sustainable ಅಪ್ಪಲೆ ಸಾಧ್ಯ ಇಲ್ಲೆ. ಅಮೆರಿಕಲ್ಲೆ ಅದು ಸಾಧ್ಯ ಇಲ್ಲೆ ಹೇಳಿದ ಮೇಲಿ ಇಲ್ಲಿ ಎಂತರ ಸಾಧ್ಯ ಅಪ್ಪದು? ಹಾಂಗಿಪ್ಪಗ ಎಲ್ಲಾ ಹವ್ಯಕರೂ ಪೇಟೆ ಜಾಬಿಲಿ ಸೆಟ್ಲ್ ಅಪ್ಪದು ಕನಸೇ ಸರಿ. ಕೆಲವೊಂದು ಜನಕ್ಕೆ ಸಾಧ್ಯ ಅಕ್ಕು, ಆದರೆ ಒಳುದೋರ ಕಥೆ ಎಂತ? ಅವಕ್ಕಾದರೂ ಕೃಷಿಲಿ ಒಂದು ವ್ಯವಸ್ಥೆ ಆಯೆಕ್ಕನ್ನೇ?
ಆನು ಹೇಳಿದ ವಿಷಯಂಗಳ ಬಗ್ಗೆ ಹೆಚ್ಚು ತಿಳಿಯೆಕ್ಕಾದರೆ ಈ ವೀಡಿಯೊ ನೋಡಿ :
 
ಹಾಂಗೆಯೇ ಈ ಲೇಖನ :
 
ಇರಲಿ. ಈಗ ವಿಷಯಕ್ಕೆ ಬಪ್ಪ. ಕೃಷಿಯ ಸಮಸ್ಯೆಗಳ ಪರಿಹರ್ಸುದು ಹೇಂಗೆ? ಎನಗೆ ಅನ್ಸುವ ಪ್ರಕಾರ ನೈಸರ್ಗಿಕ ಕೃಷಿಯ ಅಳವಡ್ಸಿಕೊಂಡರೆ ಇದಕ್ಕೆ ಪರಿಹಾರ ಇದ್ದು. ಆದರೆ ನೈಸರ್ಗಿಕೆ ಕೃಷಿ ಹೇಳಿ ಅಪ್ಪಗ ಇದರಲ್ಲಿ ಕೆಲವು ವಿಷಯಂಗಳ ಗಮನ್ಸೆಕ್ಕು. ನೈಸರ್ಗಿಕ ಕೃಷಿ ಹೇಳ್ತು ಇತ್ತೀಚೆಗೆ ಬೇರೆ ಬೇರೆ ಹೆಸರುಗಳಲ್ಲಿ ಬಂದು ಎಲ್ಲರಿಂಗೂ ಕನ್ಫ್ಯೂಸು ಆಗಿ ಹೋಯಿದು. ಕೆಲವು ಸಾವಯವ ಕೃಷಿ ಹೇಳ್ತವು. ಇನ್ನು ಕೆಲವು ಜೈವಿಕ ಕೃಷಿ, ಮತ್ತೆ ಕೆಲವು Zero Budget Farming, Fukuoka Method ಹೀಂಗೆಲ್ಲ ಇದ್ದು. ಇದರಲ್ಲಿ ಯಾವುದು ಸರಿ ಯಾವುದು ತಪ್ಪು ಹೇಳಿ ಗೊಂತಪ್ಪದು ಹೇಂಗೆ? ಇದರ ವಿವರ್ಸುದೇ ಎನ್ನ ಒಂದು ಸಣ್ಣ ಪ್ರಯತ್ನ.
ಇದರಲ್ಲಿ ಪ್ರತಿಯೊಂದನ್ನೂ ವಿವರ್ಸುವ ಮೊದಲು ಈ ಎಲ್ಲಾ ಬಗೆಗಳಲ್ಲಿ ಸಾಮಾನ್ಯವಾಗಿ ಇಪ್ಪ ವಿಷಯಂಗ ಎಂತರ ಹೇಳಿ ನೋಡುವ. ಅವುಗಳ ಹೀಂಗೆ ಹೇಳುಲಕ್ಕು :
೧. ರಾಸಾಯನಿಕ ಗೊಬ್ಬರಗಳ ಬಳೆಕೆಂದ ಸೆಸಿಗೊ ’ಸೂಕ್ಷ್ಮ’ ಆವುತ್ತವು. ಹೇಳ್ರೆ ಅವಕ್ಕೆ ರೋಗನಿರೋಧಕ ಶಕ್ತಿ ಕಮ್ಮಿ ಆವುತ್ತು, ಮತ್ತೆ ಅವು ಹೆಚ್ಚು ಹೆಚ್ಚು ಗೊಬ್ಬರಕ್ಕೆ ಒಗ್ಗಿ ಹೋವುತ್ತವು (ಒಂದು ರೀತಿಲಿ ಮನುಷ್ಯರು ಪಿಜ್ಜ ಬರ್ಗರ್ ತಿಂದು ಎಂತ ಆವುತ್ತು ಹಾಂಗೆಯೆ).

೨. ಅನೈಸರ್ಗಿಕವಾಗಿ ಬೆಳೆಸಿದ ಸೆಸಿಗೊಕ್ಕೆ ನೈಸರ್ಗಿಕವಾಗಿ ಬೆಳೆಸಿದ ಸೆಸಿಗಳಂದ ಹೆಚ್ಚು ಪೋಷಕಾಂಶ, ಕೀಟನಾಶಕಂಗೊ ಬೇಕಾವುತ್ತು (ಪೇಟೆಲಿಪ್ಪ ಜನೊಂಗೊಕ್ಕೆ ಹೆಚ್ಚು ಮದ್ದು ಬೇಕಾವುತ್ತಿಲ್ಲೆಯ ಹಾಂಗೆ?? 🙂 ).

೩. ಕೀಟಂಗೊ ಯೇವಗಳುದೆ ಹಾನಿ ಮಾಡುವವು ಅಲ್ಲ. ಹೆಚ್ಚಿನ ಸಂದರ್ಭಂಗಳಲ್ಲಿ ನೈಸರ್ಗಿಕವಾಗಿ ಬೆಳದ ಬೆಳೆಗೆ ಕೀಟ ಬಂದರೂ ತೀರಾ ಹಾನಿ ಹೇಳ್ತು ಆವುತ್ತಿಲ್ಲೆ. ಒಂದು ವೇಳೆ ಆವುತ್ತ ಹಾಂಗೆ ಇದ್ದರೂ ನೈಸರ್ಗಿಕ ಕೀಟ ನಾಶಕ ಬಳಸಿ ಅದರ ನಿಯಂತ್ರುಸುಲೆ ಸಾಧ್ಯ ಇದ್ದು.

೪. ಆಧುನಿಕ ಕೃಷಿ ಸೋಲುಲೆ ಮುಖ್ಯ ಕಾರಣ ಮಣ್ಣು. ಮಣ್ಣಿಲಿ ಹ್ಯೂಮಸ್ ಇದ್ದರೆ ಮಾತ್ರ ಕೃಷಿ sustainable ಅಪ್ಪಲೆ ಸಾಧ್ಯ. ಈಗಣ ರಾಸಾಯನಿಕ ಕೃಷಿಲಿ ಮಣ್ಣಿನ ಹ್ಯೂಮಸ್ ಕ್ರಮೇಣ ಕಮ್ಮಿ ಅಪ್ಪ ಕಾರಣ ಮಣ್ಣಿನ ಧಾರಣಾ ಶಕ್ತಿಯೂ ಕಮ್ಮಿ ಆವುತ್ತಾ ಹೋವುತ್ತು.

೫. ಮಣ್ಣಿಲಿ ಹ್ಯೂಮಸ್ ಕಮ್ಮಿ ಆದ್ದರ ಪರಿಣಾಮ ಹೇಳ್ರೆ ಹೆಚ್ಚು ಗೊಬ್ಬರದ ಅವಶ್ಯಕತೆ, ಹೆಚ್ಚು ರೋಗ, ಹೆಚ್ಚು ನೀರಿನ ಅವಶ್ಯಕತೆ (ಹ್ಯೂಮಸ್ಸಿಂಗೆ ನೀರು ಹಿಡಿದಿಟ್ಟುಕೊಂಬ ಗುಣ ಇದ್ದು).

೬. ಹಾಂಗಾಗಿ ಈ ಸಮಸ್ಯೆಗೊ ಎಲ್ಲ ಪರಿಹಾರ ಆಯೆಕ್ಕಾರೆ ಮುಖ್ಯವಾಗಿ ಆಯೆಕ್ಕಾದ ಕೆಲಸ ಹೇಳ್ರೆ ಮಣ್ಣಿನ ಹ್ಯೂಮಸ್ ಬೆಳೆಶುದು. ಅದಕ್ಕೆ ರಾಸಾಯನಿಕಗಳ ಬಳಕೆ ಕಮ್ಮಿ ಇದ್ದಷ್ಟೂ ಒಳ್ಳೆದು. ಕನಿಷ್ಠ ರಾಸಯನಿಕ ಕೀಟನಾಶಕಂಗಳ ಪೂರ್ತಿಯಾಗಿ ನಿಲ್ಸೆಕ್ಕಾವುತ್ತು.

೭. ಪ್ರಕೃತಿಯ ಒಂದು ನಿಯಮ ಎಂತ ಹೇಳ್ರೆ ಮಣ್ಣು ಯೇವಗಳುದೆ ಮುಚ್ಚಿಗೊಂಡು ಇರೆಕ್ಕು. ಕಾಡಿಲಿ ಬಜಕುರೆ ಇಪ್ಪದು ಇದೇ ಕಾರಣಕ್ಕೆ. ನಾವು ಶಾಲೆಗೆ ಹೋವುತ್ತ ಇಪ್ಪಗ ಕಲ್ತದು ನೆಂಪಿದ್ದ – ಎಲೆ ಉದುರಿಸುವ ಮರಗಳು ಬೇಸಗೆಯಲ್ಲಿ ನೀರಿನ ಕೊರತೆ ಇರುವುದರಿಂದ ಅವು ಎಲೆ ಉದುರಿಸುತ್ತವೆ – ಹೇಳಿ? ಆದರೆ ಅದು ತಪ್ಪು. ನಮ್ಮ ಶಿಕ್ಷಣ ವ್ಯವಸ್ಥೆ, ಅದರಲ್ಲೂ ಕೃಷಿ ಶಿಕ್ಷಣದ (ಅ)ವ್ಯವಸ್ಥೆಗೆ ಒಂದು ಉದಾಹರಣೆ ಇದು. ಮರಂಗೊ ಎಲೆ ಉದುರ್ಸುದು ಯಾವಾಗ ಹೇಳಿ ವಿಚಾರ್ಸಿದ್ದೀರ? ಬೇಸಗೆಲಿ ಅಲ್ಲ. ಯುಗಾದಿ ಸಮಯಲ್ಲಿ ಎಲೆ ಉದುರ್ಸುದು ಅವು. ಎಂತಕ್ಕೆ ಹೇಳ್ರೆ ಮುಂದೆ ಬಪ್ಪ ಬೇಸಗೆಲಿ ಮಣ್ಣಿನ ಮೇಲೆ ಕಂಡಾವಟ್ಟೆ ಬೆಶಿಲು ಬಿದ್ದು ಹಾಳಪ್ಪಲಾಗ, ನೀರೆಲ್ಲ ಆವಿಯಾಗಿ ಮಣ್ಣು ಒಣಗುಲಾಗ, ಅದರಲ್ಲಿಪ್ಪ ಸೂಕ್ಷ್ಮ ಜೀವಿಗ ಸಾವಲಾಗ ಹೇಳಿ! ಇದರ ಅರ್ಥ ಮಾಡಿಯೊಂಡರೆ ಕೃಷಿಲಿಯುದೆ ಮುಚ್ಚಿಗೆ (ಮಣ್ಣಿನ ಸಾವಯವ ವಸ್ತುಗಳಿಂದ ಮುಚ್ಚುದು) ಹೇಳ್ತದು ಎಷ್ಟು ಮುಖ್ಯ ಹೇಳಿ ಅರ್ಥ ಅಕ್ಕು.

೮. ನಿಸರ್ಗಲ್ಲಿ ಯೇವಗಳುದೆ Diversity ಗೆ ಆದ್ಯತೆ. ಎಲ್ಲಿಯುದೇ ಒಂದೇ ರೀತಿಯ ಬೆಳೆ ಬಪ್ಪಲೆ ನಿಸರ್ಗಲ್ಲಿ ಅವಕಾಶ ಇಲ್ಲೆ. ಅದಕ್ಕೇ ನಮ್ಮ ಪಶ್ಚಿಮ ಘಟ್ಟದ ಕಾಡಿನ ನೋಡಿರೆ ಎಷ್ಟು ಬಗೆಯ ಸೆಸಿಗೊ ಇದ್ದು ಅಲ್ಲಿ! ಈ ನಿಯಮವನ್ನುದೆ ಕೃಷಿಲಿ ಎಡಿಗಾಷ್ಟು ಅಳವಡಿಸಿಕೊಳ್ಳೆಕ್ಕು – ಹೇಳ್ರೆ ಎಡಿಗಾಷ್ಟು ಬೆಳೆಗಳ ಮಿಶ್ರ ಮಾಡಿ ಬೆಳೆಯೆಕ್ಕು.

೯. ಕೃಷಿಯ ವಿಷಯಕ್ಕೆ ಬಂದಪ್ಪಗ ದನವ ಮರವಲೇ ಆಗ. ದನ ಇಲ್ಲದ್ದೆ ಕೃಷಿ ಸಾಧ್ಯವೇ ಇಲ್ಲೆ. ೬ ತಿಂಗಳಿಲಿ ಅಪ್ಪ ಕಾಂಪೋಸ್ಟಿನ ಒಂದೇ ದಿನಲ್ಲಿ ಮಾಡುವ (ಸಗಣ) ವಿಧಾನ ಬೇರೆ ಎಲ್ಲಿ ಸಿಕ್ಕುತ್ತು ಹೇಳಿ?

೧೦. ಸೆಸಿಗೊಕ್ಕೆ ನೀರು ಬೇಡ. ನೀರ ಪಸೆ ಬೇಕಪ್ಪದು ಅವಕ್ಕೆ.

೧೧. ಹೆಚ್ಚು ಹೆಚ್ಚು ಬೆಳೆ ಬೆಳವದು ಕೃಷಿಯ ಉದ್ದೇಶ ಅಲ್ಲ. ಬದಲಾಗಿ ದೀರ್ಘ ಸಮಯ ನಿರೀಕ್ಷಿತ ಫಸಲು ಕಮ್ಮಿ ಖರ್ಚಿಲಿ ಬಪ್ಪದೇ ನೈಸರ್ಗಿಕ ಕೃಷಿಯ ಉದ್ದೇಶ. ಇದರ ಒಪ್ಪದ್ದವು ನೈಸರ್ಗಿಕ ಕೃಷಿಗೆ ಕೈ ಹಾಕುದರಲ್ಲಿ ಅರ್ಥವೇ ಇಲ್ಲೆ.

೧೨. ನಿಸರ್ಗಲ್ಲಿ ಕಳೆ ಹೇಳ್ತದಕ್ಕೆ ಅರ್ಥ ಇಲ್ಲೆ. ಪ್ರತಿಯೊಂದು ಸೆಸಿಯೂ ಉಪಯೋಗಕ್ಕೆ ಬಪ್ಪದೇ. ಎಂತಕ್ಕೂ ಇಲ್ಲಾರೆ ಮಣ್ಣು ಸಂರಕ್ಷಣೆಗಾದರೂ ಉಪಯೋಗಕ್ಕೆ ಬತ್ತು. ಅದಕ್ಕೇ ಕಳೆ ತೆಗವ ವ್ಯರ್ಥ ಕೆಲಸವ ಮದಲು ಬಿಡೆಕ್ಕು. ತೀರಾ ಅಗತ್ಯ ಇಪ್ಪಗ ಕಳೆಯ ’ನಿವಾರ್ಸುವ’ ಬದಲು ಹೆರದು ದನಕ್ಕೆ ಹಾಕುಲೋ ಅಥವಾ ಕಾಂಪೋಸ್ಟು ಮಾಡುಲೋ ಉಪಯೋಗ್ಸೆಕ್ಕು.

೧೩. ಇಡೀ ಕೃಷಿ ಜಮೀನಿಲಿ ಎಲ್ಲಿಯೂ ಮಣ್ಣು ಸವಕಳಿ ಅಪ್ಪಲಾಗ. ಹಾಂಗೆಯೇ ಕಸ ಕಡ್ಡಿ ಇತ್ಯಾದಿಗಳ ಸದುಪಯೋಗ ಆಯೆಕ್ಕು (ಕಾಂಪೋಸ್ಟ್). ಕಸದಿಂದ ರಸ ಹೇಳ್ತದರ ಅಕ್ಷರಶಹ ಪಾಲ್ಸೆಕ್ಕು.

ಈಗ ಮದಲು ಹೇಳಿದ ಬೇರೆ ಬೇರೆ ನೈಸರ್ಗಿಕ ವಿಧಾನಂಗಳ ಬಗ್ಗೆ ನೋಡುವ :
೧. ಸಾವಯವ ಕೃಷಿ :
ಸಾಮಾನ್ಯವಾಗಿ ಭಾರತಲ್ಲಿ ಸಾವಯವ ಕೃಷಿ ಹೇಳ್ರೆ ಮೇಲೆ ಹೇಳಿದ ಎಲ್ಲಾ ವಿಧಾನಂಗಳುದೇ ಬತ್ತು. ಆದರೆ ಬೇರೆ ದೇಶಂಗಳಲ್ಲಿ ವಿಚಾರ್ಸಿರೆ ಅಥವಾ ’ಸಾವಯವ ಕೃಷಿ’ ಹೇಳ್ತ ಶಬ್ದದ ಅರ್ಥ ಹುಡ್ಕಿರೆ ನೈಸರ್ಗಿಕ ಕೃಷಿಗೂ ಸಾವಯವ ಕೃಷಿಗೂ ವ್ಯತ್ಯಾಸ ಗೊಂತಾವುತ್ತು. ಸಾವಯವ ಕೃಷಿ ಹೇಳ್ತು ಕೇವಲ ಒಂದು ಕೃಷಿ ಪಧ್ಧತಿ. ರಾಸಾಯನಿಕಗಳ ಬದಲು ಸಾವಯವ ವಸ್ತುಗಳ cheap raybans sunglasses ಉಪಯೋಗ್ಸುದು ಅಷ್ಟೇ. ಅದು ಬಿಟ್ಟರೆ ಸಾವಯವ ಕೃಷಿಲಿ ಕೃಷಿಕನ ಜೀವನ ಪಧ್ಧತಿ ಮೇಲೆ ಯಾವುದೇ ಪರಿಣಾಮ ಇಲ್ಲೆ. ಇದರಲ್ಲಿದೆ ರಾಸಾಯನಿಕ ಪಧ್ಧತಿಲಿ ಇಪ್ಪ ಹಾಂಗೆ ಹೆಚ್ಚು ಹೆಚ್ಚು ಬೆಳೆ ಬೆಳದು ’ಪೈಸೆ’ ಮಾಡುದೇ ಉದ್ದೇಶ. ಹಾಂಗೆಯೇ ಇನ್ನೊಂದು ಮುಖ್ಯ ವ್ಯತ್ಯಾಸ ಹೇಳ್ರೆ ಈ ಸಾವಯವ ಕೃಷಿಲಿ ಕೃಷಿ ಒಳಸುರಿಗೊ ಎಲ್ಲ ವಾಣಿಜ್ಯಿಕ. ಹೇಳ್ರೆ ಕೃಷಿ ಒಳಸುರಿಗಳ in-situ ಉತ್ಪಾದನೆಗಿಂತ ಅದನ್ನೂ ಬೇರೆ ಕಡೆಂದ ತೆಕ್ಕೊಂಡು ಅಥವಾ ಸಾವಯವ ಗೊಬ್ಬರ ಮಾರಾಟವನ್ನೇ ಉದ್ಯಮವಾಗಿ ಮಾಡಿಕೊಂಬ ಒಂದು ವ್ಯವಸ್ಥೆ. ಅದಕ್ಕೇ ಇದರಲ್ಲಿ ಖರ್ಚುದೆ ಜಾಸ್ತಿ ಆವುತ್ತು. ಎಂತಕ್ಕೆ ಹೇಳ್ರೆ ಸಾವಯವ ಗೊಬ್ಬರ ಹೆರಂದ ತೆಕ್ಕೊಳ್ತರೆ ಅದಕ್ಕೂ ಕಂಡಾವಟ್ಟೆ ಪೈಸೆ ಕೊಡೆಡದ? ಮತ್ತೆ ಈ ಸಾವಯವಲ್ಲಿ ಗೊಬ್ಬರಕ್ಕೇ ಹೆಚ್ಚು ಮಹತ್ವ ಹೊರತು ecological sustainability ಗೆ ಅಲ್ಲ.
೨. ನೈಸರ್ಗಿಕ ಕೃಷಿ  :
ನೈಸರ್ಗಿಕ ಕೃಷಿ ಹೇಳ್ತು ಸಾವಯವಂದ ಒಂದು ಹೆಜ್ಜೆ ಮುಂದೆ ಹೋಪದು. ಇಲ್ಲಿ ಸಾವಯವದ ಎಲ್ಲಾ ಕೃಷಿ ಕ್ರಮಂಗಳೂ ಇದ್ದು, ಆದರೆ ಇಲ್ಲಿ ನಮ್ಮ ಜೀವನ ಪಧ್ಧತಿಯುದೆ ಬದಲಾವುತ್ತು. ಅಥವಾ ಇದೊಂದು ಕೃಷಿ ಪಧ್ಧತಿ ಹೇಳುದಕ್ಕಿಂತಲೂ ಜೀವನ ಪಧ್ಧತಿ. ಇಲ್ಲಿ ಪ್ರಕೃತಿಯ ಇನ್ನೂ ಹೆಚ್ಚು ಹತ್ತರಂದ ಅರ್ಥ ಮಾಡಿಕೊಳ್ಳೆಕ್ಕಾವುತ್ತು. ಕೃಷಿಯ/ಜೀವನದ ಬಗೆಗಿನ ಒಂದು ರೀತಿಯ Holistic Approach ಇದು. ಇಲ್ಲಿ ಹೆಚ್ಚು ಬೆಳೆ ತೆಗವದೇ ಉದ್ದೇಶ ಅಲ್ಲ. ಬದಲಾಗಿ ಸುಸ್ಥಿರ ಕೃಷಿ ವ್ಯವಸ್ಥೆ (Both Economically and Ecologically) ರೂಪಿಸಿಕೊಂಡು ಅದರ ಮೂಲಕ ಸಂತೃಪ್ತ ಜೀವನ ನಡೆಶುದು. ಇದರಲ್ಲಿ ಒಳಸುರಿಗಳ ಆದಷ್ಟು ಕಮ್ಮಿ ಮಾಡಿ in-situ ಕ್ರಮಗಳ ಮೂಲಕ ಕೃಷಿ ಮಾಡುದು. ಸುಭಾಷ್ ಪಾಳೇಕರ್ ನ Zero Budget Farming, ಫ್ಹುಕುವೋಕ ನ Fukuoka Method ಮತ್ತೆ ನಮ್ಮ ಗುರುಗೊ ಹೇಳ್ತ ಗೋ-ಆಧಾರಿತ ಬೇಸಾಯ ಇವೆಲ್ಲ ನೈಸರ್ಗಿಕ ಕೃಷಿಯ ಅಡಿಲಿ ಬಪ್ಪಂಥವು. ಇನ್ನು ಜೈವಿಕ ಕೃಷಿ ಹೇಳ್ತದು ನೈಸರ್ಗಿಕೆ ಕೃಷಿಯೇ, ಆದರೆ ಇದರಲ್ಲಿ ಸೂಕ್ಷ್ಮಾಣು ಜೀವಿಗಳ ಉಪಯುಕ್ತತೆ ಬಗ್ಗೆ ಹೆಚ್ಚು ಗಮನ, ಒತ್ತು ಇರ್ತು ಅಷ್ಟೆ.
೩. ಆಧ್ಯಾತ್ಮಿಕ ಕೃಷಿ :
ಇದು ನೈಸರ್ಗಿಕ ಕೃಷಿಂದ ಇನ್ನೂ ಒಂದು ಹೆಜ್ಜೆ ಮುಂದೆ. ಸಾವಯವ ಕೃಷಿಯ, ನೈಸರ್ಗಿಕ ಕೃಷಿಯ ವೈಜ್ನಾನಿಕವಾಗಿ ಸಾಧಿಸುಲೆ ಎಡಿಗು. ಆದರೆ ಆಧ್ಯಾತ್ಮಿಕತೆ ಅದರ ಪರಿಧಿಗೆ ಬತ್ತಿಲ್ಲೆನ್ನೆ! ಈ ಕೃಷಿ ಪಧ್ಧತಿಲಿ ಪ್ರಾಕೃತಿಕ-ಆಧ್ಯಾತ್ಮಿಕ ನಿಯಮಗಳನ್ನು ಅರಿತುಕೊಂಡು ಅವುಗಳ ಮೂಲಕ ಮಾಡುವ ಕೃಷಿ. ದನದ ಕೊಂಬಿಂಗೆ ಸಗಣ/ಬೆಣಚು ಕಲ್ಲು ತುಂಬ್ಸಿ ಅದರ ೬ ತಿಂಗಳು ನೆಲಲ್ಲಿ ಹುಗುದು ಮಡಿಗಿ ಮತ್ತೆ ತೆಗದು ನೀರಿಂಗೆ ಹಾಕಿ ಒಂದು ಗಂಟೆ ಚಕ್ರಾಕಾರಲ್ಲಿ ತಿರುಗಿಸಿ (ಪಾಯಸದ ಹಾಂಗೆ) ಮತ್ತೆ ಮಣ್ಣಿಂಗೆ, ಸೆಸಿಗೊಕ್ಕೆ ಸ್ಪ್ರೇ ಮಾಡುವ ವಿಧಾನ ಎಲ್ಲ ಕೇಳಿಪ್ಪಿ ನಿಂಗ. ಅದಕ್ಕೆ Biodiversity Farming ಹೇಳಿಯೂ ಹೇಳ್ತವು. ಇನ್ನು ಅಗ್ನಿಹೋತ್ರ ಕೃಷಿ ಅಥವಾ ವೈದಿಕ ಕೃಷಿ ಹೇಳ್ತದುದೆ ಇದ್ದು. ಇಲ್ಲಿ ದಿನ ನಿತ್ಯ ವೈದಿಕ ಕ್ರಿಯೆಗಳ (ಅಗ್ನಿಹೋತ್ರ ಇತ್ಯಾದಿ) ಮೂಲಕ ಬೆಳೆಗೆ ಪೂರಕ ವಾತಾವರಣ ಸೃಷ್ಟಿಸುದು. ಇದೆಲ್ಲದುದೆ ಆಧ್ಯಾತ್ಮಿಕ ಕೃಷಿಯ ಪರಿಧಿಲಿ ಬಪ್ಪಂಥವು.
ಈ ಮೂರರಲಿ ನವಗೆ ಉಪಯೋಗಕ್ಕೆ ಬಪ್ಪಂಥದ್ದು ನೈಸರ್ಗಿಕ ಕೃಷಿ ಮಾತ್ರ ಹೇಳಿ ಎನಗೆ ಅನ್ಸುದು. ಎಂತಕ್ಕೆ ಹೇಳ್ರೆ ಸಾವಯವ ಕೃಷಿ ದುಬಾರಿ, ಪುನಾ ನಷ್ಟಕ್ಕೆ ದಾರಿ ಮಾಡಿ ಕೊಡುವ ಹಾಂಗಿಪ್ಪದು. ಮತ್ತೆ ಆಧ್ಯಾತ್ಮಿಕ ಕೃಷಿ ಎಲ್ಲರಿಂಗೂ ಅರಡಿವಂಥದ್ದಲ್ಲ. ಅಲ್ಲದ? ಇರಲಿ, ಈ ನೈಸರ್ಗಿಕ ಕೃಷಿ ಮಾಡಿ ಗೆದ್ದವರ ಶುದ್ದಿಗೊ ಎಲ್ಲ ಇತ್ತೀಚೆಗೆ ನಿಂಗ ಪೇಪರ್ಲಿ ಟೀವಿಲಿ ಎಲ್ಲ ನೋಡಿಪ್ಪಿ. ಹಾಂಗಾರೆ ಇದು ಎಲ್ಲಾ ದಿಕ್ಕೆಯು ಶುರುವಾಯಿದಿಲ್ಲೆ ಎಂತಕ್ಕೆ? ಪೇಪರ್ಲಿ ಬಪ್ಪದೆಲ್ಲ ಸುಳ್ಳೋ? ಸಾಧ್ಯ ಇಲ್ಲೆ. ಕೆಲವು ಸುಳ್ಳಾದಿಪ್ಪಲೂ ಸಾಕು, ಎಲ್ಲವೂ ಸುಳ್ಳಪ್ಪಲೆ ಸಾಧ್ಯ ಇಲ್ಲೆ. ಕೆಲವೊಂದು ಆನು ಕಣ್ಣಾರೆ ನೋಡಿದ್ದೆ. ಹಾಂಗಾಗಿ ಸುಳ್ಳಪ್ಪಲೆ ಸಾಧ್ಯ ಇಲ್ಲೆ. ಎನ್ನ ಪ್ರಕಾರ ನೈಸರ್ಗಿಕ ಪಧ್ಧತಿ ಹೆಚ್ಚು ಪ್ರಚಾರ ಆಗದ್ದಕ್ಕೆ ಕೆಲವು ಕಾರಣಂಗೊ ಇದ್ದು :
೧. ಹೊಸತ್ತಾಗಿ ನೈಸರ್ಗಿಕ ಕೃಷಿ ಶುರು ಮಾಡ್ತರೆ ಅಥವಾ ರಾಸಾಯನಿಕಂದ ನೈಸರ್ಗಿಕಕ್ಕೆ ಬತ್ತಾರೆ ೪-೫ ವರ್ಷ (ಸಾವಯವಂದ ನೈಸರ್ಗಿಕಕ್ಕೆ ಬತ್ತರೆ ೧-೨ ವರ್ಷ ಸಾಕು) Buffer Period ಬೇಕು. ಈ ಅವಧಿಲಿ ಉತ್ಪತ್ತಿ ಇರ್ತಿಲ್ಲೆ ಅಥವಾ ಭಾರಿ ಕಮ್ಮಿ ಇರ್ತು. ಅಷ್ಟು ಸಮಯ ಉತ್ಪತ್ತಿ ಇಲ್ಲದ್ದೆ ಸಂಸಾರ ನಿಭಾಯ್ಸುದು ಹೇಂಗೆ? ಇದು ಎಲ್ಲಕ್ಕಿಂತ ದೊಡ್ಡ ಸಮಸ್ಯೆ. ಸುಮಾರು ಜನ ಇದರ ಬಗ್ಗೆ ತಿಳಿಯದ್ದೆ ನೈಸರ್ಗಿಕ ಕೃಷಿಗೆ ಹಾರಿ ಒಂದೆರಡು ವರ್ಷಲ್ಲಿ ಕೈಬಿಟ್ಟವು ಇದ್ದವು.
೨. ತಾಳ್ಮೆ. ಕೆಲವು ಜನಕ್ಕೆ ಅದರಲ್ಲೂ ರಾಸಾಯನಿಕಕ್ಕೆ ಒಗ್ಗಿ ಹೋದವಕ್ಕೆ ೪-೫ ವರ್ಷ ಕಾವ ತಾಳ್ಮೆ ಇರ್ತಿಲ್ಲೆ. ತಾಳ್ಮೆ ಹೇಳುದಕ್ಕಿಂತಲೂ ೪-೫ ವರ್ಷ ಕಳದರೆ ಒಳ್ಳೆದಾವುತ್ತು ಹೇಳ್ತ ನಂಬಿಕೆ ಇರ್ತಿಲ್ಲೆ. ನಂಬಿಕೆ ಬಪ್ಪಲೆ ಒಂದೇ ದಾರಿ ಹೇಳ್ರೆ ಈಗಾಗಲೇ ನೈಸರ್ಗಿಕ ಕೃಷಿ ಮಾಡಿ ಫಲ ಬತ್ತಾ ಇಪ್ಪ ಕೃಷಿಕರ ಹತ್ತರೆ ಹೋಗಿ ಮುಖತಹ ನೋಡುದು. ಪೇಪರ್ಲಿ ಬಪ್ಪದು ಎಲ್ಲ ನಂಬುಲೆಡಿಯ. ಹೋಗಿ ನೋಡಿ ಅಪ್ಪಗಳೇ ಗೊಂತಪ್ಪದು.
೩. ತಿಳುವಳಿಕೆ. ಇದು ಸಮಸ್ಯೆಯೇ ಅಲ್ಲ. ಇತ್ಲಾಗಿ ಅಂತೂ ನೈಸರ್ಗಿಕ ಕೃಷಿ ಬಗ್ಗೆ ಬೇಕಾಷ್ಟು ಪುಸ್ತಕಂಗೊ, ಲೇಖನಂಗೊ ಬೈಂದು. ಸುಭಾಷ್ ಪಾಳೇಕರ್, ನಾರಾಯಣ ರೆಡ್ಡಿ ಮುಂತಾದವೆಲ್ಲ ಬರದ ಪುಸ್ತಕಂಗೊ ಬಯಿಂದು. ಇದರೆಲ್ಲ ಓದಿದರೆ ಪ್ರಥಮ ಮಾಹಿತಿ ಸಿಕ್ಕುಗಷ್ಟೆ. ಪೂರ್ತಿ ಗೊಂತಪ್ಪದು ಸ್ವತಹ ಮಾಡಿದ ಮೇಲೆಯೇ.
೪. ಅತಿಯಾಸೆ. ನೈಸರ್ಗಿಕ ಕೃಷಿಗೂ ಅತಿಯಾಸೆಗೂ ಆಗಿಬತ್ತಿಲ್ಲೆ. ಅತಿಯಾಸೆ ಹೇಳ್ತುದೇ ನೈಸರ್ಗಿಕ ಅಲ್ಲ. ಅದಕ್ಕೇ ನಮ್ಮ ಹಿರೀಕರು ಅತಿಯಾಸೆ ಗತಿಗೇಡು ಹೇಳಿದ್ದು. ಹಾಂಗಾಗಿ ಕಮ್ಮಿ ಸಮಯಲ್ಲಿ ಹೆಚ್ಚು ಪೈಸೆ ಮಾಡೆಕ್ಕು ಹೇಳ್ತವಕ್ಕೆ ಇದು ಅಪ್ಪ ಹೋಪ ಜಂಬರ ಅಲ್ಲ. ಅಂಥವಕ್ಕೆ ಕೃಷಿ ವಿಶ್ವ ವಿದ್ಯಾಲಯಂಗೊ ಹೇಳುವ ರಾಸಾಯನಿಕ ಪಧ್ಧತಿಯೇ ಸೂಕ್ತ. ಆದರೆ ಈ ಪಧ್ಧತಿ ತುಂಬ ಸಮಯ ಬಪ್ಪದಲ್ಲ ಹೇಳ್ತು ಅವಕ್ಕೆ ಗೊಂತಾಯೆಕ್ಕು.
ಎನ್ನ ಪ್ರಕಾರ ಮೇಲೆ ಹೇಳಿದ ಒಂದನೇ ಕಾರಣ ಮತ್ತೆ ಸ್ವಲ್ಪ ಮಟ್ಟಿಂಗೆ ನಾಲ್ಕನೇ ಕಾರಣಂಗಳೇ ನೈಸರ್ಗಿಕ ಕೃಷಿ ಹೆಚ್ಚು ಪ್ರಚಾರ ಆಗದ್ದಕ್ಕೆ ಕಾರಣ. ಹಾಂಗರೆ ಈ Buffer Period ಸಮಸ್ಯೆಗೆ ಪರಿಹಾರ ಎಂತ? ಎಲ್ಲಕ್ಕಿಂತ ಹೆಚ್ಚಾಗಿ ಕೃಷಿ ಮಾಡುವ ಜವ್ವನಿಗರೇ ಊರಿಲಿ ಇಲ್ಲೆ ಹೇಳಿದ ಮತ್ತೆ ಯಾವ ಕೃಷಿ ಪಧ್ಧತಿ ಇದ್ದೆಂತ ಉಪಯೋಗ? ಅಲ್ಲದ?
ನಿಂಗಳ ಅನಿಸಿಕೆ ಬರೆಯೆಕ್ಕು ಇದಾ… ಮರೆಯೆಡಿ..

25 thoughts on “ಕೃಷಿಲಿ ಗೆಲ್ಲುಲೆ ಮಾರ್ಗ ಎಂತರ?

  1. ಅರೆರೆ, ಹಳೇಕಾಲಲ್ಲಿ ಬರದ ಲೇಖನಕ್ಕೆ ಪುನಾ ಕಾಮೆಂಟುಗೊ ಬಂದದು ಗೊಂತೇ ಆಯಿದಿಲ್ಲೆ ಅದಾ… ಕಾಮೆಂಟಿಸಿದ ಎಲ್ಲರಿಂಗೂ ಧನ್ಯವಾದ.

  2. ಮಹೇಶಣ್ಣ,
    ನಿಂಗಳ ಕನಸಿನ ಬಗ್ಗೆ ಓದಿ ಎನಗೆ ತುಂಬಾ ಖುಷಿ ಆತು… ಎಂತಕೆ ಹೇಳಿರೆ ಆನುದೇ ಅದೇ ಕನಸು ಕಂಡವಳು…
    “ಅವಕ್ಕೆ ಪೇಟೆ ಜೀವನ ಇಷ್ಟವೇ ಇಲ್ಲೆ! ಹಳ್ಳಿಗೆ ಹೋಯೇಕು, ದೊಡ್ಡ ಕೃಷಿಭೂಮಿ ಮಾಡೇಕು, ತೋಟ ಮಾಡಿ ನೆಮ್ಮದಿಯ ಅಶನ ಉಣ್ಣೇಕು, ದನ, ಕಂಜಿ, ಶುದ್ಧ ಹಾಲು, ಶುದ್ಧ ನೀರು, ಶುದ್ಧ ಅಳತ್ತೊಂಡೆ, ಚೆಕ್ಕರ್ಪೆ – ತರಕಾರಿಗೊ ಎಲ್ಲ ತಿಂದುಗೊಂಡು ಮನೆ- ಮಕ್ಕಳ ಬೆಳೆಶೇಕು ಹೇಳಿಯೇ ಅವರ ಯೋಜನೆ! ”
    ಈ ವಾಕ್ಯವ ಭಾವಿಸಿ ಭಾವಿಸಿ ಓದಿದಷ್ಟು ಸಾಕಾವುತ್ತಿಲ್ಲೇ!!!!! ಆದರೆ ಎನ್ನದು ಅರೆವಾಶಿ ಆಯುಷ್ಯ ಮುಗುದತ್ತು. ಇನ್ನುದೆ ಕನಸು ಕನಸಾಗಿಯೇ ಇದ್ದು… ಇನ್ನು ಕನಸು ಕಂಡುಗೊಂಡು ಕೂದರೆ ಕನಸಿಲ್ಲಿಯೇ ಪೂರ್ತಿ ಆಯುಷ್ಯ ಮುಗುದು ಹೋಕು ಹೇಳಿ ಅನ್ನಿಸುತ್ತು… ಕನಸಿನ ನನಸಾಗಿಸುವಲ್ಲಿ ಹೆಜ್ಜೆ ಹಾಕುದು ಹೇಳುವ ದೃಢ ನಿರ್ಧಾರ ಮಾಡಿದ್ದೆ…
    ಮೊದಲಿಂಗೆ ಒಪ್ಪಣ್ಣ ಹೇಳಿದ ಹಾಂಗೆ ಎಂಗಳ ಬೋಳು ಗುಡ್ದೆಲ್ಲಿ ಹತ್ತು ದನ ನೆಟ್ಟು ಸಾಂಕುದು ಹೇಳಿ ಅಂದಾಜಿ… ಸಾವಯವ ಗೊಬ್ಬರ ತಯಾರಿಸಿ ಎಂಗಳ ತೋಟಕ್ಕೂ ಹಾಕುದು… ಹತ್ತರಾಣವಕ್ಕೆ ಮಾರಾಟ ಮಾಡುದು… ಮುಂದಾಣ ಆಲೋಚನೆ ಇಷ್ಟು ಆದ ಮೇಲೆ ಮಾಡುದು…
    ಗೋಮೂತ್ರ,ಗೋಮಯ,ಬೆಲ್ಲ ಎಲ್ಲ ಸೇರುಸಿ ಯಾವುದೊ ವಿಧಾನಲ್ಲಿ ಗೊಬ್ಬರ ತಯಾರಿಸಲಾವುತ್ತು ಹೇಳಿ ಎಲ್ಲ ಮೊದಲು ಕನಸು ಕಾಮ್ಬಗ ಓದಿದ್ದೆ. ಈಗ ನನಸಾಗಿಸೆಕ್ಕಾರೆ ಸರಿಯಾದ ವಿಧಾನ ಗೊಂತು ಬೇಕು. ನಿಂಗೊಗೆ ಈ ವಿಷಯಲ್ಲಿ ತುಂಬಾ ಜ್ಹಾನ ಇದ್ದು ಹೇಳಿ ಗೊಂತಾತು. ದಯವಿಟ್ಟು ಎನಗೆ ಸಹಾಯ ಮಾಡುವಿರ?

    1. ಅಕ್ಕೋ, ಅರ್ಧ ಆಯುಷ್ಯ ಮುಗುದತ್ತು ಹೇಳಿದ್ದಿ. ನಿಂಗೊಗೆ ಪ್ರಾಯ ಎಷ್ಟಾತು ಗೊಂತಿಲ್ಲೆ. ಪಟ ನೋಡಿರೆ ನಲವತ್ತರಿಂದ ಜಾಸ್ತಿ ಆಯಿದಿಲ್ಲೆ ಹೇಳಿ ಕಾಣುತ್ತು (ಮೋರೆ ನೋಡಿ ಪ್ರಾಯ ಹೇಳುವಷ್ಟು ಅನುಭವ ಇದ್ದು ಹೇಳಿ ಗ್ರೇಶೆಡಿ ಮತ್ತೆ 🙂 ). ಎನ್ನ ಮಾವ ಒಬ್ಬ ಅರುವತ್ತಮೂರರ ಪ್ರಾಯಲ್ಲಿ ಹೊಸ ಜಾಗೆ ತೆಗದು ಕೃಷಿ ಮಾಡ್ತಾ ಇದ್ದವು. ಫೋನಿಲಿ ಮಾತಾಡುವಗ ಹೇಳಿತ್ತಿದವು – ಎನಗೆ ಕೃಷಿ ಮಾಡಿಯೊಂಡು ಇನ್ನೂ ಅರುವತ್ತಮೂರು ವರ್ಷ ಇಪ್ಪಲೆಡಿಗು ಹೇಳಿ ಅನುಸುತ್ತು – ಹೇಳಿ… ಹೊಸದಾಗಿ ಕೃಷಿ ಮಾಡೆಕ್ಕು ಹೇಳ್ತವಕ್ಕೆ ಅವು ಒಂದು ಸ್ಪೂರ್ತಿ. ಅದಕ್ಕೆ ಹೇಳಿದೆ.
      ಹೆಚ್ಚಿನ ವಿಚಾರ ಇನ್ನೊಂದರಿ ಮಾತಾಡುವ. ಮೈಲ್ ಮಾಡಿ.

      1. ವಾರೆ ವಾಹ್ !!! ಅದ್ಭುತ ಸಾಧನೆ… 63 ವರ್ಷಲ್ಲಿ ಕೃಷಿ ಶುರು ಮಾಡಿ ಯಶಸ್ಸು ಸಾಧಿಸಿ ತೋರುಸಿದ್ದವು… ನಾವು ಸಣ್ಣ ಪ್ರಾಯದವು ಇನ್ನುದೆ ಎಡಿಗಾ ಎಡಿಯದ ಹೇಳಿ ಚರ್ಚೆ ಮಾಡಿಗೊಂಡು ಕೂಯಿದು ಹೇಳಿ ಗೊಂತಾದರೆ ಆ ಮಾವಂಗೆ ನೆಗೆ ತಡಕ್ಕೊಮ್ಬಲೆ ಎಡಿಯ… ಆ ಮಾವನ ಸಾಧನೆಯ ವಿವರುಸುವ ಲೇಖನವ ಬೈಲಿಲ್ಲಿ ಖಂಡಿತವಾಗಿಯೂ ಹಾಕೆಕ್ಕು… ಅವಕ್ಕೆ ಅಭಿನಂದನೆಗಳ ಸಲ್ಲುಸೆಕ್ಕು… ದಯವಿಟ್ಟು ಎನಗೋಸ್ಕರ ಆದರೂ ಬರೆರಿ ಆತಾ…

  3. ಹರೇ ರಾಮ ಮಹೇಶಣ್ಣ,
    ಗೋಮೂತ್ರ ಮತ್ತು ಗೊಮಯಂಗಳ ಕೆಲವು ಕ್ರಮಲ್ಲಿ ಮಿಕ್ಸ್ ಮಾಡಿ ಗೊಬ್ಬರಂಗಳ ತಯಾರುಸುಲೇ ಆವುತ್ತು ಅಲ್ದಾ… ಅದರ ಬಗ್ಗೆ ಮಾಹಿತಿ ಇದ್ದರೆ ಕೊಡುವಿರಾ?

    1. ಸ್ವಂತ ಹೇಳುವಷ್ಟು ಅನುಭವ ಇಲ್ಲೆ. ಆದರೆ ಮಾಹಿತಿ ಸಂಗ್ರಹಿಸಿ ಮಾಡಿ ಮಡಿಗಿದ್ದೆ. ನಿಂಗಳ ಮೈಲ್ ಐಡಿ ಕೊಡಿ. ಎನ್ನತ್ರೆ ಇಪ್ಪದರ ಕಳ್ಸುತ್ತೆ. ಅಥವಾ ಎನಗೆ ಮೈಲ್ ಮಾಡಿ prasad.mahesh@gmail.com

  4. ಹೊಯ.. ಮಹೇಶ ಭಾವ ಆನು ನಿಂಗಳ ಸಂತಿಗೆ ಕೃಷಿ ಮಾಡೂಲೆ ಬತ್ತೆ…>:)

    1. ನಮ್ಮದು ಊರು ದೂರ ಆತನ್ನೆ ಭಾವ! 🙂 ಅಡ್ಡಿ ಇಲ್ಲೆ. ಇದು ಇಂಟರ್ನೆಟ್ ಯುಗ ಅಲ್ಲದ… ದೂರದೂರಂದಲೇ ಮಾಹಿತಿ ಹಂಚಿಕೊಂಬ! 🙂

  5. ನೀರ್ಕಜೆ ಅಪ್ಪಚ್ಚಿದು ಲೇಖನ ಬಾರಿಲೈಕಯಿದು ಬೈಲಿಲಿ ಬಂದ ಅತ್ಯುತ್ತಮ ಲೇಖನ . ವಾಸ್ತವತೆಯ ಕಣ್ಣಿಂಗೆ ಕಟ್ಟುವಹಾನ್ಗೆ ವಿವರಿಸಿದ್ದಿ
    ತುಂಬಾ ಧನ್ಯವಾದಂಗ.
    ಎನ್ನ ಪ್ರಕಾರ ಸಧ್ಯದ ಪರಿಸ್ತಿತಿಲಿ ಕುತ್ತಕಂಡೆ ಲಾಗ ಹಾಕಿದರು ಯುವಕರಿಂಗೆ ಕ್ರಿಶಿಲಿ ಆಸಕ್ತಿ ಬರ್ಸುಲೇ ಕಷ್ಟ ಇದ್ದು.ಯೆಂಥಗೆ ಹೇಳಿದರೆ ನಮ್ Basic education System ಸರಿ ಇಲ್ಲೇ. ಕೃಷಿಕ ಹೇಳಿದರೆ ಜೀವನಲ್ಲಿ ಏನು ಮಾಡಲೇ ಯೆಡಿಯದ್ದೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯ ನೋದ್ಯೊಂದು ಇಪ್ಪದು ಹೇಳಿ ಸಾಮಾಜದ ಅನಿಸಿಕೆ.ಕೃಷಿಯು ಒಂದು most respectable proffession ಆಗಿ ಸ್ವಿಕಿರುಸುಲೇ ನಾವು ತಯಾರಿಲ್ಲೇ. ನಾವು ಶಾಲಗೆ ಹೊಪಗ ಸರಿಯಾಗಿ ಓದದ್ದರೆ ಮಾಸ್ತರ ಬೈವವದು ಹೆಂಗೆ ಗೊಂಥಿದ್ದ “ಚೆನ್ನಾಗಿ ಓದಿಲ್ಲಂದ್ರೆ ತೋಟದಿಂದ ಅಡಿಕೆ ಹೆಕ್ಕೊಂಡ್ ಸೆಗಣಿ ಬಚ್ಕೊಂಡ್ ಮನೇಲಿ ಇರಬೇಕಾಗುತ್ತೆ “ಹೇಳಿ….. ಹಿಂಗೆ ಹೇಳಿಯಪ್ಪಗ ಎಲ್ಲರ ತಲೇಲಿ ಬಪ್ಪದು ಡಾಕ್ಟರ /ಇಂಜಿನಿಯರ್ /ಸಾಫ್ಟ್ವೇರ್ ಅಯೇಕು ಹೇಳಿ.
    ಅದಲ್ಲದ್ದೆ ಸಾಮಜಲ್ಲಿ ಬೇರೆ ವ್ರ್ಯತ್ತಿಯವಕ್ಕೆ ಕೊಡುವಸ್ತು ಗೌರವ ಕ್ರಿಶಿಕರಿನ್ಗೆ ನಾವು ಕೊಡ್ತ್ಹಿಲೆ ಇದು ಒಂದು ಕರಾನ ಆಗಿಕ್ಕು ಯುವಕರಿನ್ಗೆ ಕ್ರಿಶಿಲಿ ಆಸಕ್ತಿ ಇಲ್ಲದ್ದಿಪ್ಪಲೇ. ಕ್ರಿಶಿಲಿ ಜಾಸ್ತಿ ಪೈಸೆ ಮಾಡಲೇ ಆಗದ್ದರು ನೆಮ್ಮದಿಯ ಜೀವನ ಮಾಡಲೇ ಅವತು ಹೇಳಿ ಹಿರಿಯರು ಹೇಳಿದರೆ /ಸಪೋರ್ಟ್ ಮಾಡಿದರೆ ಜವ್ವನಿಗರು ಖಂಡಿತ ಕೃಷಿಗೆ ಬಕ್ಕು.
    ಯೆಲ್ಲರಿಂಗು ಗೊಂಥಿಪ್ಪ ಹಾಂಗೆ ನಮ್ಮ ಸಾಮಜಲ್ಲಿ ೩ ವಿಧದ ಜನಂಗ ಇರ್ಥವು. ೧.ಅತಿ ಬುದ್ದಿವಂಥರು. ೨. ಮಧ್ಯಮ ೩. ಕಾರ್ಮಿಕ
    ಮೊದಲನ ವರ್ಗದವಕ್ಕೆ IQ ಜಾಸ್ತಿ ಇರ್ತು ಅವರ ಪೋಷಕರು ಹೇಳಿದ ಹಾಂಗೆ ಡಾಕ್ಟರ/ಇಂಜಿನಿಯರ್/ಇತ್ಯಾದಿ ,ಕೆಲಸ ಮಾಡಿದರೆ ಸಂಬಳ ಬಪ್ಪ ಹಾಂಗಿಪ್ಪ ವೃತ್ತಿಗೆ ಹೊವುತ್ತವು. ಹಾಂಗಾಗಿ ಲಕ್ಷ್ಕ್ಕೊಬ್ಬ, ಮನೇಲಿ ಎಂತಾರು ಸಮಸ್ಯೆಯಾಗಿ ಕೃಷಿ ವೃತ್ತಿಗೆ ಬಕ್ಕಸ್ತೆ.(ಬಂದವು ಪ್ರಗತಿಪರ ಕೃಷಿಕ ಅವುತವು.) ಇನ್ನು ೨ ನೆ ವರ್ಗದವು ೨೫% ಕೃಷಿಗೆ ಬತ್ತವು ೩ನೆ ವರ್ಗದವು ೯೦% ಜನ ಕೃಷಿ ಅವಲಂಬಿಸಿರ್ತವು. ಹೀಂಗೆ ಜಾಸ್ತಿ IQ ಇಪ್ಪವು ಕೃಷಿಗೆ ತಲೆ ಹಾಕದ್ದಿಪ್ಪಗ ಕೃಷಿ ನವಗೆ ನಸ್ಟ ಹೇಳಿ ಕಾಣುತ್ತು. ಯೆಂಥಗೆ ಹೇಳಿದರೆ ಅಲ್ಲಿ ಪ್ರಯೋಗ ಶೀಲತೆ ಕಮ್ಮಿ ಇರ್ತು.
    ತೊಂದರೆ ಇಲ್ಲೇ “ಕಾಲಾಯ ತಸ್ಮೈ ನಮಃ” ಹೇಳಿದಂಗೆ ಚೂರು ಸಮಯ ಕಳುದಪ್ಪಗ ಯೆಲ್ಲರಿಂಗು ಬುದ್ದಿ ಬಕ್ಕು. ( ತಿಮ್ಬಲೇ ಆಹಾರಕ್ಕೆ ಕುಡಿವಲೆ ನೀರಿಂಗೆ ಸಮಸ್ಯೆ ಅದಪ್ಪಗ ) ಪೇಟೇಲಿ ಲೈಕಿನ ನೀರು ಕುಡಿಯೇಕ್ಕರು ಹಾಲಿಂದ ಜಾಸ್ತಿ ಪೈಸೆ ಕೊಡೆಕ್ಕು.
    ಕೊನೆಯದಾಗಿ ಬೈಲಿ ಒಂದು ಮಾತು ಅನು ಹೇಳ್ತೆ……………. ನಿಂಗಳಿಂದ ಕೃಷಿ ಮಾಡಲೇ ಯೆದಿಯದ್ದರು ಕೊಚ್ಚಿ ಪೋರ್ಬುಗೊಕ್ಕೆ ಮಾರಿಕ್ಕಿ ಮಾತ್ರ ಹೋಗಡಿ. ಪಿತ್ರಾರ್ಜಿತವಾಗಿ ಬಂದ ಕಾರಣ ನಿಂಗಳ ಇಪ್ಪ ಕೆಲಸದೊತ್ತಿನ್ಗೆ ಮೈನ್ಟೈನ್ ಮಾಡಿ. ಪೇಟೇಲಿ ಕೆಲಸ ಮಾಡಿ ಉದಾಸಿನ ಅಪ್ಪಗ ರೆಸಾರ್ಟ್ನಗೆ ಹೋಪ ಬದಲು ಅವರವರ ತೋಟಲ್ಲಿ ಬಂದು ಕೆಲಸ ಮಾಡಿ ಮನಸ್ಸು ಫ್ರೆಶ್ ಅಪ್ಪಲಕ್ಕು. (ಪೈಸೆ ಕಾರ್ಚಗದ್ದಕರಣ ಟೆನ್ಶನ್ kammi )

    1. 🙂 ಕೃಷಿ ಮಾಡುಲೆ ಆಸಕ್ತಿಯೂ ಬೇಕು, ದೈವಬಲವೂ ಬೇಕು ಹೇಳಿ ಕಾಣುತ್ತು. ದೇವರು ಆಸಕ್ತಿ ಇಪ್ಪೋರಿಂಗೆಲ್ಲಾ ಶಕ್ತಿ ಸಾಮರ್ಥ್ಯ ಕೊಟ್ಟು ಸಲಹಲಿ ಅಲ್ಲದ! 🙂

  6. ಅಪ್ಪಚ್ಚೀ..!!!
    ಅತ್ಯದ್ಭುತ ಲೇಖನ..
    ಹೊಸತ್ತು, ಹಳತ್ತು – ಎರಡನ್ನೂ ನೋಡಿದ ನಿಂಗೊಗೆ ಮಾಂತ್ರ ಈ ಲೇಖನ ಬರವದು ಸಾಧ್ಯ.
    ತುಂಬಾ ತುಂಬಾ ಚೆಂದ ಆಯಿದು!
    ಬೈಲಿನ ಅತ್ಯಂತ ಒಳ್ಳೆ ಲೇಖನಂಗಳಲ್ಲಿ ಇದುದೇ ಒಂದು.
    ಕೊಶೀ ಆತಪ್ಪಚ್ಚಿ.
    { ನೀರು ಬೇಡ. ನೀರ ಪಸೆ ಬೇಕಪ್ಪದು ಅವಕ್ಕೆ } – ಎಲ್ಲೊರಿಂಗುದೇ ಹಾಂಗೆಯೇ ಅಲ್ಲದೋ?
    ಯೇವದರದ್ದಾದರೂ ರಜಾ ಅಂಶ ಸಿಕ್ಕಿರೆ ಸಾಕು, ಸಾಕಾವುತ್ತು.
    ಕೃಷಿಗಿಪ್ಪ ಪ್ರಚೋದನೆಯುದೇ..
    ಬೈಲಿಂಗಿಡೀ ಒಳ್ಳೆದಾಗಲಿ.

  7. ನಮ್ಮ ಕೃಶಿ ಕರಿಂಗೆ ಪೈಸ ಮಾಡುವ ಗೌಜಿಲಿ ಅದೊನ್ದೂ ತಲಗೆ ಹೋವುತ್ತಿಲ್ಲೆ.ಕೆಲವು ಜನ ಇನ್ನೂ ಅಡಕ್ಕೆ ಮರಕ್ಕೆ ಬೇಸಗೆಲಿ Endosulfan ಬಿಡುತ್ತವು ಅದೂ…ಎಸ್ತ್ತು ಹೇಳೀ ಬಾವಿಸಿದ್ದಿ ?ಪಡ್ರೆಲಿ 100 liter ನೀರಿನ್ಗೆ 100 ML ಹಾಕಿ ಬಿಟ್ಟದರಲ್ಲಿ ಅಸ್ತ್ತೆಲ್ಲಾ ಅನಾಹುತ ಆಯಿದು ಆಉತ್ತಾ ಇದ್ದು.ಇಲ್ಲಿ ಕೆಲವು ಜನಂಗ 100 Liter ನೀರಿಂಗೆ 300ML ವರೆಗೂ ಹಾಕಿ ಬಿದುತ್ತವು.ಇನ್ನುಎಂತಕ್ಕು ಹೇಳಿ.ಇದಕ್ಕೆಲ್ಲಾ ಕಾರಣ ಮಾಹಿತಿಯ ಕೊರತೆ…ನಮ್ಮಲ್ಲಿ ಎಸ್ತ್ತ್ತೊಕೃಶಿ ಸಂಶೊದನಾ ಕೇಂದ್ರಂಗ ಇದ್ದು ಸಾವಿರಾರು ಕೋಟಿ ಮುಗಿಶುತ್ತವು…ಅವು ಕ್ರಿಶಿಕರ ಕಣ್ನೆತ್ತಿಕೂಡಾ ನೋಡುತ್ತವಿಲ್ಲೆ.ಕೇಳಿದರೆ ಅವಕ್ಕೆ ಎಂತದೂ ಗೊಂತಿಲ್ಲೆ ಬರೀ ಹಾರಿಕೆಯ ಉತ್ತರಂಗಳೆಸಿಕ್ಕುತ್ತಸ್ತ್ತ.ಹಾಂಗೆ ಎಸ್ತ್ತು ಉಪಯೋಗ ಮಾಡೆಕ್ಕಾ ಅದರಿಂದ ಎಸ್ತ್ತೋ ಪಟ್ಟು ಹೆಚ್ಹಿಗೆ ಕಾರ್ಕೊಟಕ ವಿಷಂಗಳ ರೈತರು ಉಪಯೋಗಿಸುತ್ತವು .ಅದರಿಂದಾಗಿ ಪರಿಸರ ಸ್ಥ್ನೇಹಿ ಎಸ್ಟ್ಟೊಜೀವಿಗ ಅಳುದು ಹೋಉತ್ತಾ ಇದ್ದು. ಇನ್ನಾದರೂ ವಿದ್ಯಾವಂತ ಯುವಕರು ಈ ಕಡೆಂಗೆ ರಜ್ಜ ಗಮನ ಕೊಡುವಿರ?

    1. ಹಳೆಮನೆ ಮಾವ, ಅಡ್ಕತ್ತಿಮಾರುಮಾವ ಬರದ್ದು ಅಕ್ಷರಷಹ ನಿಜ.
      {ಇನ್ನಾದರೂ ವಿದ್ಯಾವಂತ ಯುವಕರು ಈ ಕಡೆಂಗೆ ರಜ್ಜ ಗಮನ ಕೊಡುವಿರ?} ಅಕ್ಕು ಮಾವ, ನಿಂಗ ಹೇಳಿದ ಹಾಂಗೆ ಮಾಡ್ತೆಯ 🙂
      ಈ ನಿಟ್ಟಿಲಿ ಆಸಕ್ತಿ ಇಪ್ಪ ಹವ್ಯಕ ಯುವಕರು ಒಟ್ಟಾಯೆಕ್ಕು ಇದ.. ಕಲಿಯುಗಲ್ಲಿ ಕೂಡಿಬಾಳುವವಂಗೆ ಮಾತ್ರ ಉಳಿಗಾಲ ಅಲ್ಲದ?? ಹಾಂಗೆ ಆರಾರು ಇದ್ದರೆ ಹೇಳಿ..

  8. ಆಧುನಿಕ ಕೃಷಿಲಿ ಮುಖ್ಯವಾಗಿ ರಾಸಾಯನಿಕ ಗೊಬ್ಬರಂಗೊ ಮತ್ತೆ ಕೀಟ ನಾಶಕಂಗಳ ಬಳಕೆ ಜಾಸ್ತಿ. ಹೀಂಗೆ ಉಪಯೋಗಿಸಿದ ಕೆಮಿಕಲ್ಸ್ ಗೊ ಮಣ್ಣಿಂಗೆ ಸೇರುವದು ಮಾತ್ರ ಅಲ್ಲ, ಅಂತರ್ಜಲಕ್ಕೆ ಕೂಡಾ ಸೇರುತ್ತು. ಕೀಟ ನಾಶಕದ (ಎಂಡೋಸಲ್ಫಾನ್) ರುದ್ರಾವತಾರವ ನಾವು ಕಾಸರಗೋಡಿ ಜಿಲ್ಲೆಯ ಪಡ್ರೆಲಿ ಸಾಕಷ್ಟು ಕಂಡಿದು.
    ಇದೇ ರೀತಿ ಹೆಚ್ಚು ಉಪಯೋಗ ಅಪ್ಪ ಇನ್ನೊಂದು ಕೀಟ ನಾಶಕ DDT. ಇದು ಮಣ್ಣಿಂಗೆ ಸೇರುತ್ತಿಲ್ಲೆ (bio degradable ಅಲ್ಲ). ಹುಲ್ಲು ತಿಂದ ದನದ ಹಾಲಿಲ್ಲಿ WHO ನಿಗದಿ ಪಡಿಸಿದ್ದಕ್ಕಿಂತ ಹಲವು ಪಾಲು ಹೆಚ್ಚು ಇದರ ಅಂಶ ಇರ್ತು ಹೇಳಿ ಸಾಬೀತು ಆಯಿದು.
    ಗೆದ್ದೆಗೊಕ್ಕೆ ಹಾಕಿದ ಕೀಟ ನಾಶಕಂಗೊ ಹುಲ್ಲಿಂಗೆ, ಬಾವಿ ನೀರಿಂಗೆ, ಕೆರೆಗೆ ಎಲ್ಲಾ ಸೇರುತ್ತು. ಕುಡಿತ್ತ ನೀರಿಲ್ಲಿ ಇದರ ಪ್ರಮಾಣ ತುಂಬಾ ಜಾಸ್ತಿ ಇರ್ತು. ಅಗತ್ಯ ಇದ್ದೋ ಇಲ್ಲೆಯೋ, ಕಂಡಾಬಟ್ಟೆ ಫರ್ಟಿಲೈಸರ್ ಮತ್ತೆ ಪೆಸ್ಟಿಸೈಡ್ ಉಪಯೋಗಿಸಿರೆ ಬೆಳೆ ಜಾಸ್ತಿ ಬತ್ತು ಹೇಳುವ ಒಂದು ಬ್ರಾಂತು
    ಈ ಬಗ್ಗೆ ಜೆನಂಗೊಕ್ಕೆ ಜಾಗೃತಿ ಮೂಡೆಕ್ಕು.

  9. ಇಂದು ಏರೆನ ಕತೆ. ಗುಣಾಜೆ ಧನಿಕ್ಕುಲೆನ ದೋಸ್ತಿನ ಕತೆನಾ.. ಆರೆನ ಅಮ್ಮೇರಾಂಟ ಎಡ್ಡೆ ಜನೊ.. ಆರೆಗು ಅಂಚ ಆಯರ ಬಲ್ಲಿತ್ತುಂಡು

  10. ಬಾಣಾರೆ ಇಂಚ ಮಲ್ಪೊಡ್ಚಿ. ಬೊಕ್ಕ ಎಂಕು ಮರ್ದು ಬುಡ್ಯರ ಇಜ್ಜಿಂದು ಆವು…

    1. ಅಂದಾ ಬಟ್ಯ,
      ಮರ್ದು ಬುಡಿಯಾರ ಬಲ್ಲ ಎಂದು ಏತು ಸರ್ತಿ ಪಂಡಲಾ ನಿಕ್ಕು ಬರಿಯಾರ ಪುರ್ಸೊತ್ತೇ ಇಜ್ಜಿ. ಬರ್ಪೆ ಪಂಡ ದಿನ ಏನ್ ಮರ್ದು ಕೂಟುದು ದೀಯಿನವೇ ಬತ್ತುಂಡು. ಮೊಬೈಲುಡು ಫೋನ್ ಮಲ್ತುತು ಬರಿಯಾರ ಅಪ್ಪುಜ್ಜಿ ಎಂದು ಈ ಸುಲಾಭಡು ಪಣ್ಪ. ಎಂಕ್ಲೆನ ಬಙ ಇತ್ತೆ ಆಂಡಲಾ ತೆರಿಯುಂಡು ಅತ್ತಾ. ಅವೇ ಸಂತೋಷ. ನಣ ಅಂಚ ಮಲ್ಪೋಡ್ಚಿ, ಆವಾ?

  11. uff! ಇಶ್ಟುದೆ ಇದ್ದಾ ಕೃಷಿಗೆ ನೀರ್ಕಜೆ ಮಾವಾ..

  12. ನಮಸ್ಕಾರ,
    ಲೇಖನ ಭಾರಿ ಲಾಯ್ಕಾಯಿದು. ಆನು ಒಂದು ಪುಸ್ತಕ ಓದಿತ್ತಿದ್ದೆ. ನೈಸರ್ಗಿಕ ಕೃಷಿ ಬಗ್ಗೆ. ನರೇಂದ್ರ ರೈ ದೇರ್ಲ ಹೇಳುವವು ಬರದ್ದು. ಅದರಲ್ಲಿ ಲಾಯ್ಕು ವಿವರುಸಿತ್ತಿದ್ದವು.
    ಪ್ರಾಯಶಃ ನಮ್ಮಲ್ಲಿ ಸಣ್ಣ ಹಿಡುವಳಿದಾರರಿಂಗೆ ಈ ಬದಲಾವಣೆ ರಜ್ಜ ಕಷ್ಟ ಅಪ್ಪಲೂ ಸಾಕು. ಎಂತಕೆ ಹೇಳಿರೆ ಅವಕ್ಕೆ ೩-೪ ವರ್ಷ ಉತ್ಪಾದನೆ ಕಮ್ಮಿ ಆದರೆ ಜೀವನಕ್ಕೆ ಕಷ್ಟ ಅಪ್ಪಲೂ ಸಾಕು. ಆದರೆ ದೊಡ್ಡ ಜಮೀನು ಇಪ್ಪವಕ್ಕೆ ಈ migration ಖಂಡಿತ ಕಷ್ಟ ಆಗ ಹೇಳಿ ಕಾಣ್ತು. ಅಂತವು ಆ ದಿಕ್ಕಿಲಿ ಆಲೋಚನೆ ಮಾಡ್ಲೆ ಸುರು ಮಾಡಿರೆ ಒಳ್ಳೆದಕ್ಕು.
    ನಮ್ಮ ಹಾಂಗೆ ಪೇಟೆಲಿ ಇಪ್ಪವುದೆ ಈ ಆಲೋಚನೆ ಮಾಡುದು ಒಳ್ಳೆದು. ಎಂತಕೆ ಹೇಳಿರೆ:
    ೧. ನಾವು ಪೇಟೆಗಳಲ್ಲಿ ೨೦-೨೫ ಲಕ್ಷ ಕೊಟ್ಟು ಪ್ಲಾಟ್ ತೆಕ್ಕೊಳ್ಲು. ಇದರ ೧/೧೦ ಬೆಲೆಲಿ ಊರಿಲಿ ಒಂದು ಸಣ್ನ ಜಾಗೆ ಆದರು ತೆಕ್ಕೊಂಬಲೆ ಎಡಿಗು.
    ೨. ಕೆಲವು ರೀತಿಯ ಬೆಳೆಗೊಕ್ಕೆ ನೈಸರ್ಗಿಕ ಕೃಷಿಲಿ ಹೆಚ್ಚು ಸಮಯ ಕೊಡೆಕ್ಕಾವುತ್ತಿಲ್ಲೆ.ವಾರ ಅಥವಾ ತಿಂಗಳಿಂಗೆ ಒಂದರಿ ಹೋಗಿ ನೋಡಿರೂ ಸಾಕು ಆವುತ್ತು. ಇದರಿಂದ ಹೆಚ್ಚು ಲಾಭ ಬಾರ. ಆದರೆ ನಷ್ಟ ಅಂತೂ ಖಂಡಿತ ಆಗ.
    ೩. ಊರಿಲಿ ಇಪ್ಪ ಜಾಗೆ ಪೂರ ಮಾರಿ ಪೇಟೆಗೆ ಹೋಪಂತಹ ಸಾಮಾಜಿಕ ದಿವಾಳಿತನ ತಪ್ಪುತ್ತು.
    ೪. ನಮ್ಮವುದೆ ಇದ್ದ ಜಾಗೆಗಳ ಎಲ್ಲ “ಆರಾರಿಂಗೆ” ಮಾರಿ ಹೋಪದು ತಪ್ಪುತ್ತು.
    ೫. ಊರಿಲಿ ಕೃಷಿ ಮಾಡಿಯೊಂಡು ಇಪ್ಪ ನಮ್ಮವಕ್ಕುದೆ ಒಂದು ಧೈರ್ಯ ಬತ್ತು.
    5. ಏನಾರು ಹೆಚ್ಚುಕಮ್ಮಿ ಆಗಿ ನಮ್ಮ ಸಾಪ್ಟುವೇರು,ಹಾರ್ಡ್‌ವೇರು ಎಲ್ಲ ಮುಳುಗಿರೆ ಹೋಗಿ ಕೂಪಲೆ ಒಂದು ಜಾಗೆ ಇರ್ತು :).
    ಇದಲ್ಲಿಯೂ ಸುಮಾರು ಸಮಸ್ಯೆಗೊ ಖಂಡಿತ ಇಕ್ಕು. ಕೆಲಸದವು ಸಿಕ್ಕುತ್ತವಿಲ್ಲೆ, ನೋಡುವವು ಆರು ..ಇತ್ಯಾದಿ.
    ಎನಗೆ ಈ ವಿಷಯಲ್ಲಿ ಅನುಭವ ಸಾಲ. ಇದು impractical ಯೋಜನೆ ಆಗಿಪ್ಪಲೂ ಸಾಕು. ಆರಾರು ಆಸಕ್ತಿ ಇಪ್ಪವು ಇದ್ದರೆ ಹೇಳಿ. ಚರ್ಚೆ ಮಾಡುವ. ಒಪ್ಪಣ್ಣನ ಹತ್ತರೆ ಹೇಳಿ ಬೇರೆ thread ಲಿ ಮಾತಾಡುವ.
    ನೀರ್ಕಜೆ ಅಪ್ಪಚ್ಚಿ, ನಿಂಗಳ ಅಭಿಪ್ರಾಯ ಎಂತ ?.
    ಧನ್ಯವಾದ,
    ಮುರಳಿ

  13. ಅಪ್ಪಚ್ಚೀ…. ಸಕಾಲಿಕವೂ, ಮಾಹಿತಿ ಪೂರ್ಣ ಲೇಖನ.. ಅರ್ಥ ಮಾಡಿಕೊಂಡು ಓದಲೆ ರಜ್ಜ ಸಮಯ ಹಿಡಿದತ್ತು.. ನಮ್ಮ ಬೈಲಿಲಿ ಹೀಂಗಿಪ್ಪ ಲೇಖನಗಳ ಅಗತ್ಯವೂ ಇದ್ದು..
    ಹೇಳಿದಾಂಗೆ ಹ್ಯೂಮಸ್‌ ಹೇಳ್ರೆ? ಡಿಕ್ಷನರಿಲ್ಲಿ ಹುಡ್ಕಿದೆ (ಕೆಳಾಣ ಅರ್ಥ ಸಿಕ್ಕಿತ್ತು)
    (humus= ಮಣ್ಣುಗೊಬ್ಬರ, ನೆಲಗೊಬ್ಬರ, ಜೈವಿಕ ಪದಾರ್ಥಗಳು, ನಿಧಾನವಾಗಿ ಕೊಳೆತು ಕಪ್ಪೇರಿದ ಮಣ್ಣು ಗೊಬ್ಬರ)
    ಪ್ರಾಯಶಃ ಇದೇ ಆಗಿಕ್ಕು ಅಲ್ಲದಾ….

  14. ಆನು ಕಳುದ35 ವರ್ಶಂದ ಕೃಶಿ ಮಾಡುತ್ತಾ ಇದ್ದೆ.ನಿಂಗಳ ಲೇಖನ ಓದಿ ತುಂಬಾ ಸಂತೋಶ ಆತು.ನಮ್ಮಲ್ಲಿಯ ಮಣ್ಣು ಈಗಾಗಲೆ ರಾಸಾಯನಿಕ ಬಳಕೆಂದಾಗಿ ತುಂಬಾ ಹಾಳಾಯಿದು ಅದರ ಸರಿ ಮಾಡೆಕ್ಕಾರೆ ಕೆಲವು ದಶಕಂಗಳೆ ಬೇಕಕ್ಕು.ನಿಂಗಳ ಹಾಂಗಿಪ್ಪ ಉಮೇದಿನೋರು ವ್ಯವಸಾಯಕ್ಕೆ ಬಂದರೆ ಸರಿ ಅಪ್ಪಲೂ ಸಾಕು.

  15. ಕೃಷಿ ಮಾಡುವದರ ಬಗ್ಗೆ ತಜ್ಞ ಮಾಹಿತಿ.
    ಜೆನಂಗೊ ನೈಸರ್ಗಿಕ ಕೃಷಿಗೆ ಬಾರದ್ದೆ ಇಪ್ಪಲೆ ನಿಂಗ ಹೇಳಿದ ಕಾರಣಂಗಳ ಒಪ್ಪುತ್ತೆ.
    ಟನ್ ಗಟ್ಲೆ ರಾಸಾಯನಿಕಂಗಳೂ, ಕ್ರಿಮಿ ನಾಶಕಂಗಳು ತಯಾರು ಮಾಡುವ ಕಂಪೆನಿಯ ಉದ್ಧಾರ ಮಾಡ್ಲೆ ಸರಕಾರ ಪಣ ತೊಟ್ಟ ಹಾಂಗೆ ಕಾಣುತ್ತು. ನಮ್ಮದು ಕೃಷಿ ಪ್ರಧಾನ ದೇಶ ಹೇಳಿ ಭಾಷಣ ಬಿಗಿವದಲ್ಲದೆ ಅವಕ್ಕೆ ಬೇಕಾದ ಕನಿಷ್ಟ ಸೌಲಭ್ಯಂಗಳ ಕೊಡ್ಲೆ ಕೂಡಾ ಸರಕಾರಕ್ಕೆ ಮನಸ್ಸಿಲ್ಲೆ.
    ಅದೇ ಸರಕಾರ industry ಯವಕ್ಕೆ ಬೇಕಾದ ಎಲ್ಲಾ ಸೌಲಭ್ಯಂಗಳ ಧಾರಾಳ ಕೊಡ್ತು.
    ಬೆಳೆದವಂಗೆ ಸಿಕ್ಕುವ ಮೌಲ್ಯ, ಮಧ್ಯವರ್ತಿಗೊಕ್ಕೆ ಸಿಕ್ಕುವಷ್ಟು ಇಲ್ಲದ್ದೆ ಅಪ್ಪಗ ಅವಂಗೆ ಹೆಚ್ಚು ಬೆಳೆ ತೆಗದು ಪೈಸೆ ಮಾಡೆಕ್ಕು ಹೇಳುವದು ಮಾತ್ರ ಕಾಂಗಷ್ಟೆ. ರಾಸಾಯನಿಕ ಪದ್ಧತಿಂದ ನೈಸರ್ಗಿಕಕ್ಕೆ ಬದಲುಸುವ transition period (ಎರಡು ಮೂರು ವರ್ಷ) ಕಮ್ಮಿ ಬೆಳೆ ಬಂದರೆ ಅವಂಗೆ ಆದಾಯ ಲೆಕ್ಕಲ್ಲಿ ನಷ್ಟ ಹೇಳಿಯೇ ಕಾಂಗಷ್ಟೆ.
    ಕೃಷಿಕರಿಂಗೆ ಈ ವಿಶಯಲ್ಲಿ ಜಾಗೃತಿ ಮೂಡೆಕ್ಕಷ್ಟೆ.
    ಈ ನಿಟ್ಟಿಲ್ಲಿ ಲೇಖನ ಒಂದು ಒಳ್ಳೆ ಪ್ರಯತ್ನ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×