ಬೈಲಿಂಗೆ ಲಾಗ ಹಾಕಲೆ

ಎನ್ನ ನೆಂಪು ಮಡಿಕ್ಕೊ

ಗುಟ್ಟುಶಬ್ದ ಮರದತ್ತೋ!

ಚೋಲು - ಡಬ್ಬಲ್ ಚೋಲು

ಹಳತ್ತಿಂಗೆ ಮಡಗಿದ್ದು:

ಮಿಂಚಂಚೆಗೆ ಶುದ್ದಿ ಬರೆಕ್ಕೋ?

ದಾರಿ ತಪ್ಪುಸದ್ದ ವಾತಾವರಣ!!, 5.0 out of 5 based on 2 ratings

ಬೆಶಿ ಬೆಶಿ ಒಪ್ಪಂಗೊ..

  • ಶ್ರೀಕೃಷ್ಣ ಭಟ್: ಪೇಟೆಲಿ ಒಂದು ಮನೆ. ಅದರಲ್ಲಿ ಒಂದು ಸಣ್ಣ ದೇವರ ಕೋಣೆ. ಅದರ ಸರೀ ಮೇಲೆ ‘ಕಮೋಡು’ ಇಪ್ಪ ಒಂದು...
  • shyamaraj.d.k: Lekhana layaka ayidu Oppanna.
  • ಗಣೇಶ ಮಾವ°: ನಮ್ಮ ಬಲದ ಕೈಯ ಗೆಂಟು ಇದ್ದಲ್ದಾ?ಅದರಿಂದ ರಜ್ಜ ಮೇಗೆ.ಹೆಬ್ಬೆರಳು ಸುರು...
  • ಗುತ್ತಿನ ಸದಾಶಿವ°: ಮುದ್ದಾದ ಮುಕುಂದಾಷ್ಟಕವ ಓದುವಗ ಅದರ ಮುದ್ರಿಸುಲೆ ಎನ್ನ ಮನಸ್ಸಿಂಗೆ ಆಶೆ ಆತು –...
  • ಶ್ರೀಕೃಷ್ಣ ಶರ್ಮ.: ಚುಬ್ಬಣ್ಣ ತೆಗದ ಪಟಂಗೊ ಚೆಂದ ಚೆಂದ ಇದ್ದು. ಇನ್ನೂ ಹೀಂಗಿಪ್ಪದು ಬರಲಿ
  • ಡಾ.ಸೌಮ್ಯ ಪ್ರಶಾಂತ: ಎನಗುದೇ ದಿವ್ಯ ಹೇಳಿದ್ದು ಸರಿ ಕಾಣ್ತು..ದೇವರಕೋಣೆ ಸಣ್ಣದಿಪ್ಪದು ಆದಿಕ್ಕು ಶುಭ ಅತ್ತೆಯ...
  • Akshara: gooood one…. :)
  • Akshara: tumbaa laayka iddu..
  • ಶ್ರೀಕೃಷ್ಣ ಶರ್ಮ.ಹಳೆಮನೆ: ನಮ್ಮ ಜೀವಮಾನ ಇಡೀ ಎಂತಾದರೂ ಕಲಿವಲೆ ಇದ್ದೇ ಇರ್ತು. ಗುರುಗಳ ಮಾರ್ಗದರ್ಶನ ಯಾವಾಗಲೂ...
  • ದಿವ್ಯಾ: ದೇವರ ಕೋಣೆ ದೊಡ್ಡ ಇದ್ದು ಹೇಳಿ ಆರಾದರೂ ದೇವರ ಕೋಣೆಯ ಒಳಗೆ ನಾಯಿಯ ಹೋಪಲೆ ಬಿಡ್ತವ ಒಪ್ಪಣ್ಣ...
  • ದಿವ್ಯಾ: ಒಪ್ಪಣ್ಣ….. ಈ ಲೇಖನ ಓದಿ ಅಪ್ಪಗ ಎನಗೆ ಒಂದು ಸಂಶಯ ಬಂತು .. ಎಂತ ಹೇಳಿದರೆ ಒಬ್ಬನ ಮನೆಯ ದೇವರ...
  • ಶ್ರೀಶ. ಹೊಸಬೆಟ್ಟು: ಒಪ್ಪಣ್ಣ, ನೀನು ಶುಭತ್ತೆಯ ಹೀಂಗೆಲ್ಲ ಹೇಳಿರೆ ಹೇಂಗೆ? ಪಾಪ ಮನೆ ಕಟ್ಟುವಾಗ ಮಗಂಗೊಂದು...
  • ಶ್ರೀಶ. ಹೊಸಬೆಟ್ಟು: [ಅದೇ ಜೆಪಲ್ಲಿತ್ತಡ್ಡ, ಪೂಜೆ ಸಂಕಲ್ಪಂದ ಊಟ ಅಪ್ಪನ್ನಾರವುದೇ.] ನಾರಾಯಣಂಗೆ ಮತ್ತೆ...
  • ಶ್ರೀದೇವಿ ವಿಶ್ವನಾಥ್: ಒಪ್ಪಣ್ಣ, ಶುದ್ದಿ ಲಾಯ್ಕಾಯಿದು.ಈಗಾಣ ಜೆನಂಗೊಕ್ಕೆ, ಸಣ್ಣ ಕುಟುಂಬ, ಸಣ್ಣ ದೇವರ ಕೋಣೆ...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಪಟಂಗೊ ಲಾಯಿಕ ಬಯಿಂದು. ಇದಕ್ಕೆ contrast ಪಟಂಗೊ ಬೇಕಾರೆ ನಮ್ಮ ರೋಡ್ ಗಳದ್ದು...
  • ಶ್ರೀಕೃಷ್ಣ ಶರ್ಮ. ಹಳೆಮನೆ: ಚೆನ್ನಬೆಟ್ಟನ ಮದುವೆಗೆ ಹೋಗಿತ್ತಿದ್ದೆ. ಈಗ ಸಟ್ಟುಮುಡಿಗೆ ಕೂಡಾ ಹೋದ ಹಾಂಗೆ ಆತು....
  • ಕೆದೂರುಡಾಕ್ಟ್ರು: {ಸಿನೆಮ ನೋಡ್ಲೆ ಬ೦ದ ಕಾರು!} ಆ ಕಾರು ನಮ್ಮಲಿಯಾಣ ಸಿನೆಮ ತಿಯೇಟರಿನಶ್ಟು ದೊಡ್ಡವೇ ಇದ್ದನ್ನೆ!
  • ಅಜ್ಜಕಾನ ಭಾವ: {ಅಜ್ಜಿಗೆ ಉಂಡ್ಳಕಾಳು, ಚಕ್ಕುಲಿ, ಹಪ್ಪಳ ಎಲ್ಲ ಕಟ್ಟಿಕೊಡ್ಳೆ ಎಂತರ ಮಾಡುದೂಳಿ ಮಂಡೆಬೆಶಿ} ಅದಾ.....
  • ಅಜ್ಜಕಾನ ಭಾವ: ಮಾವ ನಿಂಗೊಳ ಚುಟುಕು ಸಾಂಧರ್ಬಿಕವಾಗಿ ಲಾಯ್ಕಲ್ಲಿ ಬೈಂದು.. ನಿಂಗೊ ಹೇಳಿದ “ಒಂದು...
  • ಪುಟ್ಟಭಾವ ಹಾಲುಮಜಲು: [ಅದೂ ಅಲ್ಲದ್ದೆ ಅದರ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲೆ.] ಬೇರೆಯವ್ವು ಅನುಭವಂದ ಹೇಳಿದ್ದರ...
  • ಪುಟ್ಟಭಾವ ಹಾಲುಮಜಲು: [ದಪ್ಪ ಅಪ್ಪಲೆ ಎಂತ ಅವು ಉದ್ದಿನ ದೋಸೆಯೋ] ಹೇಳುಲೇ ಎಡಿಯ!! ಬೋಂಡ ಆದಿಕ್ಕು!!
  • ಪುಟ್ಟಭಾವ ಹಾಲುಮಜಲು: ತಲೆಕ್ಕೊಂಬು ಮಾಡಿರೆ ಬೇಗ ತಲೆಗೆ ಹೋಗಿ ಬೇಗ ಹೇಳಿಕೊಡುಗು!!!!
  • ಚುಬ್ಬಣ್ಣ...: “…..ಐರಾವತಲ್ಲಿ ದೇವೇಂದ್ರನ ಹಾಂಗೆ ಹೆರಟಿದೆ” ಬಾವ… :P ಎನಗೆ ಒ೦ದು...
  • ಪುಟ್ಟಭಾವ ಹಾಲುಮಜಲು: ಭಾವಾ!! ಮದಿಮ್ಮಾಯನ ಸ್ವಾಗತ ಮಾಡಿದ್ದೂ ಭಾರೀ ಲಾಯ್ಕಯ್ದು!! ಅದು ಸರಿ !! ಉದಿಯಪ್ಪಗಳೇ...
  • raghumuliya: ಒಪ್ಪಣ್ಣಾ, ಒಳ್ಳೆಯ ಲೇಖನ. ತರವಾಡು ಮನೆಗಳ ದೇವರ ಕೋಣೆ ಮನೆಯ ಮಧ್ಯಲ್ಲಿದ್ದು, ಅದರ ಸುತ್ತಲೂ...
  • Jayalakshmi Pailoor: Theertha ellinda kudiyakku? Enage artha ayiddille. Chandana, kumkuma,...
  • ಗೋಪಾಲ ಮಾವ: ಬೆಂಗಳೂರಿಂದ ಮಂಗಳೂರಿಂಗೆ ಐರಾವತಲ್ಲಿ ಇಳಿದು ಬಂದ ಅನುಭವ, ಸಟ್ಟುಮುಡಿಯ ವಿವರಣೆ ಶೈಲಿ...
  • ಬೆಣಚ್ಚಿಪ್ಪಲ್ಲಿ ಹುಡ್ಕಲೆ

    ದಾರಿ ತಪ್ಪುಸದ್ದ ವಾತಾವರಣ!!

    March 8, 2010 ರ 11:11 amಗೆ ನಮ್ಮ ಡಾಮಹೇಶಣ್ಣ ಬರದ್ದು, ಇದುವರೆಗೆ 5 ಒಪ್ಪಂಗೊ.

    ಸಮಾಜಲ್ಲಿ ತುಂಬಾ ವಿಷಯಂಗೊ ಇರ್ತು. ಒಳ್ಳೇದೂ ಇದ್ದು, ಕೆಟ್ಟದ್ದುದೆ ಇದ್ದು.

    ಒಳ್ಳೆದರ ನೋಡಿ ನಮ್ಮದಾಗಿಸಿಕೊಳ್ಳದ್ದರೆ ನವಗೆ ನಷ್ಟ, ಕೆಟ್ಟದರ ನೋಡಿ ಅದರೊಟ್ಟಿಂಗೆ ನಾವು ಹೋದರೆ ಎಲ್ಲೋರಿಂಗು ಕಷ್ಟ.

    ಆದ ಕಾರಣ ಒಳ್ಳೆದರ ತೆಕ್ಕೊಳ್ಳೆಕು, ಬೇಡದ್ದರ ಬಿಡೆಕು ಹೇಳಿ ಹೇಳುದರ ನಾವು ಕೇಳ್ತು ಯಾವಾಗಳುದೆ.
    ಆದರೆ ಯಾವುದು ಒಳ್ಳೇದು, ಯಾವುದು ಬೇಡದ್ದು, ಎಂತ ಮಾಡ್ಳಕ್ಕು, ಮಾಡ್ಲಾಗ ಹೇಳಿ ವಿವೇಕ ಬಪ್ಪದು ಒಂದು ಹಂತದ ಪ್ರಾಯವೋ ತಿಳುವಳಿಕೆಯೋ ಬಂದ ಮತ್ತೆಯೇ, ಅಲ್ಲದ?

    ಮಕ್ಕೊಗೆ ಆ ಸಾಮರ್ಥ್ಯ ಇರ್ತಿಲ್ಲೆನ್ನೆ?

    ಹಾಂಗಾರೆ ಸಣ್ಣಾಗಿಪ್ಪಗ ನವಗೆ ಬೇಡಂಕೆಟ್ಟದ್ದು ಸಿಕ್ಕದ್ದ ಹಾಂಗೆ ಮಾಡಿದ್ದದು ಆರು? ನಾವು ಪೆದಂಬ ಆಗದ್ದ ಹಾಂಗೆ, ಹಾಳಾಗಿ ಹೋಗದ್ದಾಂಗೆ ಆರು ನೋಡಿದ್ದದು?

    ನಮ್ಮ ಅಪ್ಪ-ಅಮ್ಮ, ಮನೆಯವು,ಮಾಷ್ಟ್ರಕ್ಕೋ,ಹಿತೈಶಿಗೋ, ಹೀಂಗೇ ಸುಮಾರು ಜನಂಗೋ….

    ಇವ್ವೆಲ್ಲ ಮಕ್ಕೊಗೆ ಬೇಕಾದ ವಿಷಯವ ಸಿಕ್ಕೆಕಾದ ರೀತಿಲ್ಲಿ ಸಿಕ್ಕುವ ಹಾಂಗೆ ವ್ಯವಸ್ಥೆ ಮಾಡಿ (ಬೇಕಾದಷ್ಟೇ ಲೂಟಿ ಮಾಡ್ಲೆ ಬಿಟ್ಟು) ಹಾಳು ಶಕ್ತಿಯ ಉಪ್ಪದ್ರ ತಾಗದ್ದಾಂಗೆಯೋ ಉಪಾಯಲ್ಲಿ ಅದರತ್ರೆ ಹೋಗದ್ದ ಹಾಂಗೆಯೋ ರಕ್ಷಣೆಯ ಆವರಣ ಕೊಡುವ ಹಿರಿಯವು. ನಾವು ಆ ವಿಷಯದ ಬಗ್ಗೆ ಯೋಚಿಸೇಕು, ಎಂತಕೆ ? ನಾವುದೇ ದೊಡ್ಡ ಆವ್ತಾ ಇದ್ದು!! ನಮ್ಮಲ್ಲಿಪ್ಪ ಒಳ್ಳೆತನದ ಸಣ್ಣ ಕಿಡಿಯ ರಕ್ಷಿಸಿ, ಅದಕ್ಕೆ ಲಾಯಕಕ್ಕೆ ಬೆಳಕು ಕೊಡುವ ಶಕ್ತಿ ತಪ್ಪದು ಹಿರಿಯವೇ ಅಲ್ಲದೋ?

    ಹಳೆಮನೆ ಅಣ್ಣನ ಕಣ್ಣಿಂಗೆ ಕಂಡದು! ಅರ್ಥ ಆಗದ್ರೆ ಎಡದ ಹೊಡೆಲ್ಲಿ ಬರದ್ದದು ಓದಿ!!

    ಸಣ್ಣ ಜ್ವಾಲೆ ಉರಿವಲೆ ಗಾಳಿ ಬೇಕು, ಆದರೆ ಜೋರಾಗಿ ಗಾಳಿ ಬೀಸಿರೆ ಅದು ನಂದಿ ಹೋಕು!!
    ಹಾಂಗಾಗಿ ಹದಾಕೆ  ಬೇಕಾದಷ್ಟೇ ಗಾಳಿ ಸಿಕ್ಕುವ ಹಾಂಗೆ ಒಂದು ತಡೆ ಬೇಕು.

    ಆವರಣ ಇಲ್ಲದ್ದ ಗಾಳಿ ಬರೇ `ವಾತ’ ಆಗಿ ಉಪದ್ರ ಕೊಡುಗು. ಹಾಂಗೆ ಹೇಳಿ ಉಸಿರು ಕಟ್ಟುಸುವ ಆವರಣ ಅಪ್ಪಲಾಗ!

    ವಾತವೂ (ಗಾಳಿ) ಬೇಕು ಆವರಣವೂ ಬೇಕು! ಮಕ್ಕೊಗೆ ಒಳ್ಳೆ ವಾತಾವರಣ ಬೇಕು, ದಾರಿ ತಪ್ಪುಸದ್ದ ವಾತಾವರಣ!!

    ಹಾಂಗಾರೆ ಒಂದು ಸುಸಂಸ್ಕೃತ ವಾತಾವರಣ ಬೇಕು ನಾವು ಬೆಳವಲೆ, ಬೆಳಶಲುದೆ ಹೇಳಿ ಆತು!

    ಸರೀ  ಗೊಂತಾಯೆಕಾರೆ ಬಲದ ಹೊಡೆಲ್ಲಿ ಅಂಟುಸಿದ ಪಟ ನೋಡಿ.

    ಸಣ್ಣಾಗಿಪ್ಪಗ ನವಗೆ ಸುಮಾರು ವಿಷಯಲ್ಲಿ ನವಗೆ ಬೇಕಾದ ಹಾಂಗೆ ಮಾಡ್ಲೆ ಬಿಟ್ಟಿರವು. ಆ ಕಾರಣಕ್ಕೆ ನಾವು ಆರುದೆ ಬೇಜಾರ ಮಾಡ್ತಿಲ್ಲೆ!!
    ಎಂತಕೆ ಹೇಳಿರೆ, ದೊಡ್ಡ ಅಪ್ಪಗ ಸ್ವಂತ ನಿರ್ಣಯ ತೆಕ್ಕೊಂಬಲೆ ಬೇಕಾದ ಅರ್ಹತೆಯ ನೀಡುವದೆ ಈ ಕಟ್ಟುಪಾಡಿಂಗೆ ಒಳಪಟ್ಟ ಜೀವನ ಅಲ್ಲದೋ?!
    ನಮ್ಮ ಸ್ವ`ತಂತ್ರ‘ರನ್ನಾಗಿ ಮಾಡುವದು ಬಾಲ್ಯದ ಆ ನಿಯಂತ್ರಣ ಇಪ್ಪ ಸ್ವೇಚ್ಛೆ.

    ಆ ಕಟ್ಟುಪಾಡುಗಳ ಚೆಂದಕೆ ನಿಯಮಿತವಾಗಿ ಕಲುಶಲೆ ನಮ್ಮಲ್ಲಿಪ್ಪ ಕೆಲವು ರೀತಿಯ ಕ್ರಮಂಗೋ ಸಹಾಯ ಮಾಡುತ್ತು.

    ಉದಾಹರಣೆಗೆ ನಮ್ಮದೇ ಆದ ಒಂದು ಊಟದ ಕ್ರಮ. ಬೇರೆಯವು ನೋಡಿರೆ ಇಷ್ಟೊಂದು ಕ್ರಮಲ್ಲಿ ಉಂಬದು ಎಷ್ಟು ಕಷ್ಟ ಹೇಳುಗು! ಆದರೆ ನವಗೆ ಗೊಂತಾಗದ್ದೆ ಆ ಶಿಸ್ತು ನಮ್ಮಲ್ಲಿ ಬಯಿಂದಿಲ್ಲೆಯೋ?
    ಹಾಂಗೆ ರಕ್ಷಣೆಯ ಆವರಣ ಬಿಗಿಯಾಗದ್ದ ಹಾಂಗೆ, ನಮ್ಮ ಸಂಪ್ರದಾಯಂಗ, ಆಚಾರಂಗ, ಸಂಸ್ಕೃತಿ ನಮ್ಮ ಬೆಳಶುವದು.

    ಒಂದು ಸುಭಾಷಿತ ಹೇಳ್ತು:
    ಮಾತಾ ಶತ್ರು: ಪಿತಾ ವೈರೀ ಯೇನ ಬಾಲೋ ನ ಪಾಠಿತಃ

    ಇದರ ಅರ್ಥ ಎಜುಕೇಶನ್ ಕೊಡುಸುವದು ಹೇಳಿ ಮಾಂತ್ರ ಅಲ್ಲ. ಹಾಂಗಿಪ್ಪ ಸಾಮಾನ್ಯ ಶಿಕ್ಷಣ ಇಂದು ಶಾಲೆಗೆ ಸೇರುಸಿರೆ ಸಿಕ್ಕುತ್ತು,
    ಶಾಲೆಲ್ಲಿ ಸಂಪೂರ್ಣ ಪ್ರಮಾಣಲ್ಲಿ ಸಿಕ್ಕದ್ದ, ಮನೆಯ ಸಂಸ್ಕಾರಂದ ಬಪ್ಪ ಕೆಲವು ನಡತೆಗೊ ಇದ್ದವನ್ನೇ? ಅದು ಅವಕ್ಕೆ ಸಿಕ್ಕದ್ರೆ ಅವರ ಬಾಲ್ಯದ ಹಕ್ಕು (ರೈಟ್) ಅವಕ್ಕೆ ಸಿಕ್ಕಿದ್ದಿಲ್ಲೆ ಹೇಳಿ ಅರ್ಥ.

    ಎಲ್ಲೋರಿಂಗುದೆ ಅವರವರ ಹಕ್ಕು ಇದ್ದಡ, ಹಾಂಗೆ ಮಕ್ಕೊಗುದೆ ಇದ್ದು ಹೇಳಿ ಹೇಳ್ತವು.
    ಒಳ್ಳೆಯ ಸಂಸ್ಕಾರ ತೆಕ್ಕೊಂಬ ಹಕ್ಕುದೆ ಅವಕ್ಕೆ ಇದ್ದು. ಅವಕ್ಕಿದ್ದು ಹಕ್ಕು- ನಮ್ಮ ಸಂಸ್ಕೃತಿಯ ಕಲಿವಲೆ.  (ಮಕ್ಕಳ ಹಕ್ಕಿನ ಬಗ್ಗೆ ಮಾತಾಡುವವು ಇದರ ಬಗ್ಗೆ ಮಾತಾಡ್ತವೆ ಇಲ್ಲೆ :( )
    ಆ ಕಾಲಲ್ಲೇ ಪೆಟ್ಟು ತಿಂಬಲೆ (ತಪ್ಪಿನ ತಿದ್ದಿಕೊಂಬಲೆ) ಸಾಮರ್ಥ್ಯ ಇಪ್ಪದು. ಅಂಬಗ ಮಕ್ಕಳ ದಂಡಿಸೆಕಾದ್ದದು ಹಿರಿಯರ ಕರ್ತವ್ಯ. ಅದಕ್ಕೆ ಬೇಕಾಗಿ ಕೆಲವು ಸರ್ತಿ ಮನಸ್ಸು ಗಟ್ಟಿ ಮಾಡೆಕಕ್ಕು!

    ಮಕ್ಕೊಗೆ ಅವರ ರೈಟು ಕೊಡದ್ರೆ ದೊಡ್ಡವು ರೈಟ್  ಅಪ್ಪದು ಹೇಂಗೆ?

    ಎಲ್ಲೋರಿಂಗುದೆ ಆ ಶಿಸ್ತು ಹೇಳಿ ಕೊಡುವ ತಾಕತ್ತು / ಚಾಕಚಕ್ಯತೆ (ಅಥವಾ ಪುರುಸೊತ್ತು ?) ಇರ, ಅಥವಾ ನಮ್ಮ ಮನೆಂದಲೇ ಎಲ್ಲವು ಸಿಕ್ಕ.  ಹಾಂಗಿಪ್ಪ ನಮ್ಮಹಾಂಗಿಪ್ಪವಕ್ಕೆ ಸಹಾಯ ಆಗಲಿ ಹೇಳಿಯೇ ನಮ್ಮದೊಂದು ಸಮಾಜ ಹೇಳಿ ಇಪ್ಪದು.

    ಕೆಲವು ಮಕ್ಕೊಗೆ ಅಜ್ಜನ ಮನೆಂದ ಸಿಕ್ಕುಗು, ಇಲ್ಲದ್ರೆ ಹತ್ರಾಣವರಿಂದ ಸಿಕ್ಕುಗು. ಸಮುದಾಯದ ಒಂದೇ ರೀತಿಯ ಆಚರಣೆ, ಊಟದ ವಿಧಾನ, ಶಿಷ್ಟಾಚಾರಂಗೋ ಎಲ್ಲ ಇದರಲ್ಲಿ ಸಹಾಯ ಮಾಡ್ತು ಅಲ್ಲದ?

    ಈ ಆಚಾರಂಗೋ, ಪದ್ಧತಿಗೋ ಎಲ್ಲ ಒಂದು ರೀತಿಯ ಪಾಠ್ಯ ಕ್ರಮದ ಹಾಂಗೆ.
    ಒಂದು ಸಿಲೆಬಸ್ಸು ಹೇಳಿ ಇದ್ದರೆ ಮಾಷ್ಟ್ರಕ್ಕೊಗೆ ಪಾಠ ಮಾಡ್ಲೆ ಸುಲಭ ಆವ್ತ ಹಾಂಗೆ,
    ಆಚಾರಂಗೋ ಹೇಳಿ ಇದ್ದರೆ ಸಂಸ್ಕೃತಿಯ ಮಾಲ್ಯಂಗಳ ಮುಂದುವರುಸಲೆ ಹಿರಿಯವಕ್ಕೆ ಸುಲಭ ಆವ್ತು.

    ನವಗೆ ನಮ್ಮದೇ ಪರಿಸರಲ್ಲಿಪ್ಪಗ/ ಹಳ್ಳಿಲ್ಲಿಪ್ಪಗ ನವಗೆ ಅದರ ಮಹತ್ತ್ವ ಅಷ್ಟಾಗಿ ಅರಿವಿಂಗೆ ಬಾರ.
    ಶಾಲೆಗೇ ಹೋಪಗ, ಪೇಟೆಗೆ ಹೋಪಗ, ಆಯನಲ್ಲಿ, ಎಲ್ಲೋಡಿಕುದೆ  ಅಪ್ಪಚ್ಚಿಯಕ್ಕೋ, ಅತ್ತೆಯಕ್ಕೋ, ಅಜ್ಜಂದ್ರು, ಮಾವಂದ್ರು. ಹೀಂಗೇ ಆರಾರನ್ನೋ ನಮ್ಮವರ ಕಂಡೊಂಡೇ ಇರ್ತು.  ಹಾಂಗಾಗಿ ಹಾಳಪ್ಪಲೆ ಎಂತ, ನಮ್ಮ ಕ್ರಮಂದ ಅತ್ಲಾಗಿ ಹೋಪಲೇ ಅವಕಾಶ ಇಲ್ಲೆ!!

    ಹೆದರಿಕೆ, ನಾಚಿಕೆಗಳ ಒಂದು ಮಟ್ಟದ ವರೆಗೆ ಜೀವನ ಪೂರ್ತಿ ಉಳುಶಿಕೊಂಬ ಮಾಡುವದು ಇದುವೆಯೋ ಎಂತದೋ?!
    ನವಗೆ ಆ ರೀತಿಯ ಸಂಸ್ಕಾರ ಸಿಕ್ಕದ್ದಿದ್ದರೆ ನಾವು ಹೆಂಗೆಂಗಾರೋ ತಿರುಗಾಡಿಗೊ ಆಗಿ ಬೆಳೆತ್ತಿತ್ತಿಲ್ಲೆಯೋ?

    ಇದು ಅರ್ಥ ಆಯೆಕಾರೆ  ಕೆಲವು (ಬಾಲ್ಯವೇ ಸಿಕ್ಕದ್ದ) ಮಕ್ಕಳ  ನೋಡೆಕು ಒಂದರಿ. ರೈಲಿಲ್ಲಿ ಬೇಡುವವು, ಬಸ್ಟೆಂಡಿಲ್ಲಿ, ಪ್ಲೇಟುಫೋರ್ಮಿಲ್ಲಿ ತಿರುಗುವವರಲ್ಲಿ  ನವಗೆ ಊಹಿಸಲುದೆ ಎಡಿಯದ್ದ ದುಷ್ಟ ಚಟಂಗ ಇರ್ತು, ಹೇಳ್ಲಾಗದ್ದೆಲ್ಲ ಮಾತಾಡುಗು.

    ನಮ್ಮ ಮನೆ ನಮ್ಮ `ಚಿಪ್ಪಿನ ಒಳಾಣ ಮುತ್ತಿನ‘ ಹಾಂಗೆ ರಕ್ಷಿಸಿದ್ದದು ಗೊಂತಾವ್ತು.

    ದೊಡ್ಡ ಆದ ಮತ್ತೆ ನಮ್ಮ  ಹಾಳಾಗದ್ದ ಹಾಂಗೆ ಆರು ನೋಡ್ಯೋಂಬದು? ಎಲ್ಲೋರುದೆ ದೊಡ್ಡವೇ! ಆರು ಆರಿಂಗೆ ಬುದ್ಧಿ ಹೇಳುದು? ಹೇಳಿರೆ ಕೇಳುವವು ಬೇಕನ್ನೇ?
    ಆದರೂ ನಾವು ತಪ್ಪು ಮಾಡದ್ದ ಹಾಂಗೆ ತಡವದು ಆರು? ತಪ್ಪೋ ಸರಿಯೋ ಹೇಳಿ ನಮ್ಮಷ್ಟಕೆ ನಾವು ವಿಚಾರ ಮಾಡುವದು ಯಾವುದರ ಆಧಾರದ ಮೇಲೆ?
    ನಮ್ಮ ಧರ್ಮದ / ಸಂಸ್ಕೃತಿಯ ತತ್ತ್ವದ ಆಧಾರದ ಮೇಲೆ, ನಾವು ಬೆಳದ ಪರಿಸರದ ಆಧಾರದ ಮೇಲೆ.
    ಅದೇ ದಾರಿಲ್ಲಿ ನಮ್ಮ ನಿರ್ಣಯ, ವ್ಯವಹಾರಂಗೋ ನಡವದು.

    ನಾವು ಕಂಡಾಪಟ್ಟೆ ಖರ್ಚು ಮಾಡ್ಲಾಗ ಹೇಳಿ ನವಗೆ ಗೊಂತಪ್ಪದು ಹೇಂಗೆ?ನಮ್ಮ ಬುದ್ಧಿ ಹೇಳ್ತು-ಯಾವಗ?

    • ಐಶಾರಾಮಿ ಜೀವನ ಸರಿಯಲ್ಲ, ತ್ಯಾಗದ ಜೀವನ ಮಾಡೆಕು  ಹೇಳಿ ನಮ್ಮ ಸಂಸ್ಕೃತಿ ಹೇಳ್ತು ಹೇಳಿ ತಿಳ್ಕೊಂಡಪ್ಪಗ, ಅಥವಾ
    • ನಾವು ಬೆಳದ ಹಳ್ಳಿಯ/ಮನೆಯ  ವಾತಾವರಣ ನೆಂಪಪ್ಪಗ !

    ಒಂದು ವೇಳೆ ನವಗೆ ಈ ತಪ್ಪು-ಸರಿ ನಿರ್ಣಯ ಮಾಡುವ ಧರ್ಮದ, ಸಂಸ್ಕೃತಿಯ ತಳಹದಿ ಇಲ್ಲದ್ದೆ ಹೋದರೆ ನಾವು ಅತಂತ್ರರಾಗಿ ಹೋಕು!

    ಹಾಂಗಾಗಿ ಹೇಳುವದು  “ಧರ್ಮೋ ರಕ್ಷತಿ ರಕ್ಷಿತಃ ”-  ರಕ್ಷಿಸಲ್ಪಟ್ಟ ಧರ್ಮ [ನಮ್ಮ] ರಕ್ಷಿಸುತ್ತು – ಹೇಳಿ.

    ಹಾಂಗಾಗಿ ನಮ್ಮ ಸ್ವಂತದ ಬಗ್ಗೆ ಆಲೋಚನೆ ಮಾಡಿರೂ ಸಂಸ್ಕೃತಿಯ ರಕ್ಷಣೆ ಮಾಡೆಕು!
    ಸಮಾಜಕ್ಕೆ ಬೇಕಾಗಿ ಹೇಳಿ ಆಲೋಚನೆ ಮಾಡಿರೂ ಆ ಕೆಲಸ ಆಯೆಕು!!

    ಅದಕ್ಕೆ ಸಮಯ `ಇಲ್ಲೆ‘ ಹೇಳಿ ಅಪ್ಪಲಾಗ ಅದ!   ಅಜ್ಜಕಾನ ಭಾವ ಒಪ್ಪುಗು!!

    ಹೀಂಗುದೆ ಹೇಳಲಕ್ಕು:
    ಒಳ್ಳೆ ವಿಷಯಂಗ ಬೇಡ ಹೇಳಿ ಕಾಂಬದೂ,  ಹಾಳು ವಿಚಾರಂಗ ಬೇಕು ಹೇಳಿ ಅಪ್ಪದೂ ಸಹಜವೇ.
    ಬೇಡ ಹೇಳಿ ಕಾಂಬ ಬೇಕಾದ್ದದರ ಬೇಕು ಹೇಳುವ ಹಾಂಗೆ ಮಾಡುವದು ಗುರುಗಳು.

    ಇಷ್ಟೆಲ್ಲಾ ನೆಂಪಾದ್ದು ಹೇಂಗೆ?
    ಹಳೆಮನೆ ಅಣ್ಣ ತೋರುಸಿದ ಚಿತ್ರ ಇಷ್ಟೆಲ್ಲಾ ಹೇಳುಸಿತ್ತು ಎನ್ನತ್ರೆ.
    ಆಚ ಕೋಣೆಲ್ಲಿ ನೇಲುಸಿದ ಪಟವ `ಜಾಗ್ರತೆ’ ಲ್ಲಿ ಜೆರೋಕ್ಸು ಮಾಡಿ ಇಲ್ಲಿ ಅಂಟುಸಿದ್ದೆ, ಹರೀಶಣ್ಣಂಗೆ ಹೇಳದ್ದೆ!

    ದಾರಿ ತಪ್ಪುಸದ್ದ ವಾತಾವರಣ!!, 5.0 out of 5 based on 2 ratings
    VN:F [1.9.3_1094]
    ರೇಟೆಷ್ಟು :
    Rating: 5.0/5 (2 votes cast)

    ದಾರಿ ತಪ್ಪುಸದ್ದ ವಾತಾವರಣ!! - ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

    1. ಹರೀಶ್ ಹಳೆಮನೆ
      ಹಳೆಮನೆ ಅಣ್ಣ

      )

      ಮಹೇಶಣ್ಣ… ಲೇಖನ ಲಾಯ್ಕ ಆಯಿದು. ಆನು ಈ ಪಟ ತೆಗದ್ದು ಕೊಡೆಯಾಲದ ‘ಆಸರೆ’ ಹೇಳ್ತ ಒಂದು ಸಂಸ್ಥೆಗೆ ಬೇಕಾಗಿ. ಅದರ ಅರ್ಥ ಬಪ್ಪ ಹಾಂಗೆ ಚಿತ್ರ ತೆಗದು ಕೊಡೆಕು ಹೇಳಿತ್ತಿದ್ದವು. ಹಾಂಗೆ ಎನಗೆ ಈ ಪಟ ತೆಗವ ಐಡಿಯಾ ಬಂದದು. ಹೆಚ್ಚು ಕಮ್ಮಿ ಇದೇ ರೀತಿಲಿ ಎಲ್ಲೈಸಿಯ ಲಾಂಛನವೂ ಇದ್ದಲ್ಲದಾ? ನಮ್ಮಭಾರತದ ಸಂಸ್ಕೃತಿಯ ನಾವೇ ಒಳಿಶಿ, ಬೆಳೆಶೆಕ್ಕು. ಬೇರೆ ಹೊಡೇಂದ ಬಿರುಗಾಳಿಗೊ ಬತ್ತಾ ಇದ್ದು ಈಗಾಗಲೇ. ನಾವು ನಮ್ಮ ಸಂಸ್ಕೃತಿಯ ದೀಪವ ನಂದಿ ಹೋಗದ್ದ ಹಾಂಗೆ ಕಾಪಾಡೆಕ್ಕು. ಇದು ನಮ್ಮ ಕನಿಷ್ಠ ಕರ್ತವ್ಯ.

      [ಉತ್ತರುಸಿ]

      ಮಹೇಶ ಉತ್ತರ ಕೊಟ್ಟದು:

      VA:F [1.9.3_1094]
      Rating: 0 (from 0 votes)

      ಅಪ್ಪು, ಎಲ್ಲೈಸಿಯ ಲಾಂಛನವೂ ಅದೇ ನಮುನೆದು.
      `ಯೋಗಕ್ಷೇಮಂ ವಹಾಮ್ಯಹಂ’ ಹೇಳಿ ಎಲ್ಲೈಸಿಯ ಧ್ಯೇಯವಾಕ್ಯ ಇಪ್ಪದು. ಭಗವದ್ಗೀತೆಂದ ತೆಕ್ಕೊಂಡದು.

      ಧ್ಯೇಯ ಸಾರುವ ಹಳೆಮನೆ ಹರೀಶಣ್ಣನ ಚಿತ್ರಂಗೋ ಹೆಚ್ ಹೆಚ್ ಬರಲಿ!!

      [ಉತ್ತರುಸಿ]

    2. ಗಣರಾಜ ಬನಾರಿ

      )
      VA:F [1.9.3_1094]
      Rating: 0 (from 0 votes)

      ಚಿತ್ರ ನೋಡಿ ಕವಿವರ್ಯರ (ಕೆ ಎಸ್ ನ ಹೇಳಿ ನೆನಪು) “ದೀಪವು ನಿನ್ನದೇ ಗಾಳಿಯು ನಿನ್ನದೇ …” ನೆನಪಾವುತ್ತು… ಕೆಲವು, ಚಿತ್ರಕ್ಕೆ ಬರಹಂಗೋ ಮತ್ತೆ ಕೆಲವು, ಬರಹಕ್ಕೆ ಚಿತ್ರಂಗೋ!. ಮಹೇಶನ ಬರಹ ಲಾಯಿಕ ಬಯಿಂದು. ಮುಂದೆಯೂ ಹೀಂಗೆ ಬರೆಯಕ್ಕು ಹೇಳಿ ಎನ್ನ ಆಗ್ರಹ ಮತ್ತು ಆಶಯ.

      [ಉತ್ತರುಸಿ]

    3. ದಿವ್ಯ

      )
      VA:F [1.9.3_1094]
      Rating: 0 (from 0 votes)

      ಮಹೇಶಣ್ಣ ಲಾಯಿಕಾಯಿದು ಬರದ್ದದು.. :)
      ಅದೇ.. ದೊಡ್ಡೋರು ಅಂದು ಬೈವಗ ಬಡಿವಗ ವೈರಿಗಳ ಹಾಂಗೆ ಕಾಂಗು..
      ಏಗ ಗೊಂತಾವ್ಥು ಎಲ್ಲ ಒಳ್ಳೆದಕ್ಕೇ ಹೇಳುದು ಹೇಳಿ..! ;)

      [ಉತ್ತರುಸಿ]

    4. subrahmanya Kuloor

      )
      VA:F [1.9.3_1094]
      Rating: 0 (from 0 votes)

      Oppanagale,
      Very nice and meaningful article and perfectly fits to the Deepa of Halemane Harish! Keep it up Mahesh, this kind of writings are required more & we need to make all our Havyakas to read as well.

      Best Wishes to Oppanna go ke.
      Bhat K S

      [ಉತ್ತರುಸಿ]

    ಒಪ್ಪ ಕೊಡ್ಳೆ ಇಲ್ಲಿ ಬರೆಯಿ: