ಹೀ೦ಗೊ೦ದು ಒಳ್ಳೆ ಕೆಲಸ-ಸಮತೋಲನ

November 6, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ರೈಲಿಲ್ಲಿ ಹೋಪಗ ಸಾಮಾನ್ಯವಾಗಿ ಎಲ್ಲೋರಿಂಗುದೆ ಈ ಅನುಭವ ಆಗಿಕ್ಕು.
ಶಾಲೆಗೆ ಹೋಗಿ ಕಲಿಯೆಕಾದ ಕೆಲವು ಮಕ್ಕೊ ರೈಲಿಲ್ಲಿ ಬೇಡಿಗೊಂಡು ತಿಂಬದರ ನೋಡಿ ಗೊಂತಿಕ್ಕು. ಹಾಕುವ ಅಂಗಿಯನ್ನೇ ತೆಗದು ನಮ್ಮ ಕಾಲ ಕೆಳ ಕಸವು ಉಡುಗಿ ಉದ್ದಿ ಮತ್ತೆ ಅದೇ ಅಂಗಿಯ ಹಾಕುವದು ನೋಡುವಾಗ ಎಂತದೋ ಅನ್ಸಿಕ್ಕು :(
ಇವರ ನೋಡಿಯಪ್ಪಗ ‘ಅಯ್ಯೋ ಪಾಪನೇ’ ಹೇಳಿ ಕನಿಕರ ಬಪ್ಪದು ಸಹಜ. ಇ೦ಥಾ ಬೇಡುವ ಪ್ರವೃತ್ತಿಯ ಪ್ರೋತ್ಸಾಹಿಸಲಾಗ ಹೇಳಿಯೂ ಮನಸ್ಸು ಹೇಳಿಕ್ಕು.
ಇವರ ನೋಡಿಯಪ್ಪಗ ಸಾಮಾನ್ಯವಾಗಿ ಜನ೦ಗ ಎ೦ತ ತಿಳ್ಕೊಳ್ತವು? ಇವ್ವೆಲ್ಲ ಬಾಲಕಾರ್ಮಿಕರೊ, ಬಡಪಾಯಿ ಜೀವಿಗಳೊ, ದುರದೃಷ್ಟವ೦ತರೊ, ಸೋಮಾರಿಗಳೊ, ಕಳ್ಳ೦ಗಳೊ, ದೇಶದ ಮಾನ ಕಳೆವವೊ ಹೇಳಿ ಎ೦ತೆ೦ಥಾ ಯೋಚನೆಗೊ ಬ೦ದಿಕ್ಕು.
ಅಪ್ಪು! ದೇವರು ಕೊಟ್ಟ ಕೈಕಾಲುಗಳ ಉಪಯೋಗಿಸಿ ದುಡಿದು ತಿ೦ಬಲಾಗದೊ ಹೇಳಿ ಬೈದಿಕ್ಕು ಮನಸ್ಸಿಲ್ಲಿಯೆ!
ನಿ೦ಗೊಗೆ ಗೊ೦ತಿದ್ದ? ಇ೦ತಾ ಮಕ್ಕೊಗೆ ಒಳ್ಳೆ ಸ೦ಪಾದನೆ ಇದ್ದಡ!! ದಿನಕ್ಕೆ ೪೦೦–೫೦೦ ಹೀ೦ಗೆ ಗಳಿಕೆ ಅವರದ್ದು. ಮತ್ತೆ ಸಿನೆಮ ನೋಡ್ತವಡ, ನಶೆ ಏರುಸುತ್ತವಡ… ಎ೦ತೆ೦ತದೊ ಮಾತಾಡ್ತವಡ…..

ಅವರ ಸರಿದಾರಿಗೆ ತಾರದ್ರೆ  ನಾಳೆ ಇವೆ ಸಮಾಜಕ್ಕೆ ಉಪದ್ರ ಮಾಡುವವು. ಭಿಕ್ಷೆ ಬೇಡುವದು ಮಾತ್ರ ಅಲ್ಲದ್ದೆ ಬೇರೆ ದುರ್ವ್ಯಸನ೦ಗ  ಇಪ್ಪ ಇವ್ವು ನಾಳೆ ಸಮಾಜ ಕಂಟಕರಾಗಿ ಬೆಳೆಯವೋ?
ಅಯ್ಯಯ್ಯೋ…
ಛೆ! ಸರಕಾರ ಎ೦ತಾರು ಮಾಡೆಕು ಇ೦ತವರ ಸರಿ ಮಾಡ್ಲೆ/ನಿಯ೦ತ್ರುಸಲೆ ಹೇಳಿ ಕೆಲವು ಜೆನ ಹೇಳುಗು. ಅಥವಾ ಆರಾರು ದೊಡ್ಡ ಜೆನ೦ಗೊ/ಸ೦ಸ್ಥೆಗಳೊ ಅವರ ಸರಿದಾರಿಗೆ ಬತ್ತ ಹಾ೦ಗೆ ಮಾಡ್ಲೆ ಯೋಜನೆ ಹಾಕೆಕು…….ಹೇಳಿ ಕಾಣ್ತು.

ಒಬ್ಬ ವ್ಯಕ್ತಿ ನಾವು ಆಲೋಚನೆ ಮಾಡುವದರಿ೦ದಲೂ ಹೆಚ್ಚು ಯೋಚಿಸಿದ. ಯೋಚನೆ ಮಾಡಿದ್ದು ಮಾ೦ತ್ರ ಅಲ್ಲ, ಅದರ ಕಾರ್ಯರೂಪಕ್ಕುದೆ ಇಳುಶಿದ. ಇ೦ತಾ ಮಕ್ಕಳತ್ರೆ ಮಾತಾಡ್ಲೆ ಶುರುಮಾಡಿದ, ಮೆಲ್ಲ೦ಗೆ ಸ್ನೇಹ ಬೆಳೆಸಿದ. ವಾರಲ್ಲಿ ಒ೦ದರಿ ಅವರ ಒ೦ದು ಜಾಗೆಗೆ ಬ೦ದು ನಿ೦ಬ ಹಾ೦ಗೆ ವ್ಯವಸ್ಥೆ ಮಾಡಿದ. ಮಾತಾಡಿ ಮಾತಾಡಿ ಅಪ್ಪಗ ಅವರ ಹಿನ್ನೆಲೆ ಎಲ್ಲಾ ಗೊ೦ತಪ್ಪಲೆ ಸುರುವಾತದ ಅವ೦ಗೆ.
ಅವರ ಸುಂದರ ಜೀವನದ ಕಲ್ಪನೆಯೇ ಬೇರೆ. ಬಾಳಿನ ಬೆಳಕು ಎಂತದು ಹೇಳಿಯೇ ಗೊಂತಾಗದ್ದ, ಗೊಂತಾದರೂ ಸಿಕ್ಕದ್ದ ಹಾಂಗಿಪ್ಪ, ಅಂಧಕಾರವನ್ನೇ ಬೆಳಕು ಹೇಳಿ ತಿಳ್ಕೊ೦ಡಿಪ್ಪ ಜೀವನ ಅವರದ್ದು. ಅಲೆಮಾರಿ ಜೀವನವೇ ಸ್ಥಿರ ಹೇಳುವ ಭ್ರಮೆಲ್ಲಿಯೇ ಅವರ ಬದುಕು.  :(  ರೈಲ್ವೆ ಪ್ಲಾಟ್ಫಾರ್ಮೇ ಅವರ ವಸತಿ ಕೇಂದ್ರ.
ಅವರ ಜೀವನ ಹೇಳುವ ನಾಟಕಕ್ಕೆ ವಿಶ್ವದ ಅತಿ ದೊಡ್ಡ ರೈಲ್ವೆ ವ್ಯವಸ್ಥೆಯೇ ರ೦ಗಸ್ಥಳ. ಇದರಲ್ಲಿ ಕುಣುದ ಆ ಜೀವಿಗೊಕ್ಕೆ ಹೆದರಿಕೆ ಹೇಳುವದೇ ಇಲ್ಲೆ. ಇಡಿ ದೇಶವೇ ನಮ್ಮ ಮನೆ ಹೇಳುವ ಮಾತಿನ ವಿಪರೀತ ಅರ್ಥಕ್ಕೆ  ಅನಿವಾರ್ಯವಾಗಿ ಜೀವನವ ಒಪ್ಪಿಸಿಕೊ೦ಡದು ಅವ್ವು.

ಅವರಲ್ಲಿ ಕೆಲವು ಜೆನ ಅನಾಥರು, ದಾರಿ ತಪ್ಪಿದವು, ಮತ್ತೆ ಕೆಲವು ಮನೆ ಹೇಳುವದು ಬಂಧನ ಹೇಳಿ ಅದರಿಂದ ತಪ್ಪಿಸಿಯೊಂದು ಓಡಿ ಬ೦ದ೦ಥವು. ಅ೦ಥವರ ವಿಳಾಸ ಕ೦ಡುಹಿಡುದು ಅವರ ಪುನಾ  ಅವರ ಪೋಷಕರ ಹತ್ರೆ ಕಳುಸುವ ವ್ಯವಸ್ಥೆ ಮಾಡೆಕು ಹೇಳಿ ಆತವ೦ಗೆ.
ಮನೆ ಬಿಟ್ಟು ಓಡುವದರ ರುಚಿ ಸಿಕ್ಕಿರೆ ಆ ಎಡಬಿಡ೦ಗಿಗೊ ಮತ್ತೆ ಮತ್ತೆ ಆ ಬಿಡುಗಡೆಯ ಬಯಸದ್ದೆ ಇಕ್ಕೊ? ಇವರ ಮನೆಗೆ ಸೇರುಸುವ ಕಾರ್ಯಕ್ರಮ ಹೇಳಿರೆ ಕೆಪ್ಪೆಯ ಬುಟ್ಟಿಲ್ಲಿ ಹಿಡುದು ಮಡುಗಿದ ಹಾ೦ಗೆ ಹೇಳಿ ಗೊ೦ತಪ್ಪಲೆ ಸುರು ಆತದ.
ಇದು ಕೆಪ್ಪೆ ಹಿಡಿವ ವ್ಯರ್ಥ ಕಾರ್ಯ ಅಲ್ಲ. ಇದೊ೦ದು ದೇಶ ಕಟ್ಟುವ ಕಾರ್ಯ ಹೇಳುವ ಸ೦ಕಲ್ಪ ಇದ್ದ ಕಾರಣ ಛಲ ಬಿಡದ ತ್ರಿವಿಕ್ರಮನ ಹಾ೦ಗೆ ಮತ್ತೆ ಕಾಯಕ ಮು೦ದೆ ಸಾಗಿತ್ತು.

ಕೆಲವು ಸ೦ಸ್ಕಾರ೦ಗ ಸಿಕ್ಕದ್ದೆ ಇಪ್ಪದೆ– ನಾಚಿಕೆ ಬಿಟ್ಟು ಬದುಕುವ ಸ್ವಭಾವವ ಬೆಳಸುವದು,

ಒಳ್ಳೆಯತನದ ರುಚಿ ಸಿಕ್ಕದ್ದಿಪ್ಪದೆ–ಕೊಳಕಿನ ಹತ್ತರೆ ಹೋಪಲಿಪ್ಪ ಮೊದಲ ಮೆಟ್ಟಿಲು.
ಹಾ೦ಗಾಗಿ ಅವರ ಮನಸ್ಸಿನ ಪರಿವರ್ತನೆಗೆ ಹೇಳಿ ಒ೦ದು ಶಿಬಿರದ ಏರ್ಪಾಟು ಆತಡ.  ಒ೦ದುವರೆ ತಿ೦ಗಳು ಕೆಲವು ಕಾರ್ಯಕರ್ತರು ಸೇರಿ ಕೆಲವು ಒಳ್ಳೆ ವಿಚಾರ೦ಗಳ ಸ೦ಕ್ರಾಮಿಸುಲೆ ಪ್ರಯತ್ನ ಪಟ್ಟವು. ಇಲ್ಲಿ ಅವರ ದುರ್ವ್ಯಸನ-ಮುಕ್ತರಾಗಿ ಮಾಡ್ಲೆ ಮತ್ತೆ ಮನೆಯ ಕಡೆಗೆ ಹೋಪ ಮಾನಸಿಕತೆಯ ಉ೦ಟು ಮಾಡುವ ಪ್ರಯತ್ನ ಮಾಡ್ತವು.
ವಿಜಯ ಜಾಧವ್ ಹೇಳುವ ಯುವಕನ ಸತತ ಯತ್ನ ಇದರ ಹಿ೦ದೆ ಇಪ್ಪದು. ಸಮಾಜಕ್ಕೆ ಮುಳ್ಳಾಗಿ ಬೆಳವ ಸಾಧ್ಯತೆ ಇಪ್ಪ ಜೀವ೦ಗಳಲ್ಲಿ ಬಾಲ್ಯದ ಮೊಗ್ಗಿನ ಮತ್ತೆ ಅರಳಿಸುವ ಕಠಿಣ ಪ್ರಯತ್ನಲ್ಲಿ ಇವನೊಟ್ಟಿ೦ಗೆ ಮತ್ತೆ ಕೆಲವು ಸಮಾನಮನಸ್ಕರು ಇದ್ದವು.
ಆ ಕಾರ್ಯಕ್ರಮದ ಹೆಸರು ‘ಸಮತೋಲ್’ ಹೇಳಿ.
ಸಮತಾ, ಮಮತಾ, ತೋಫ಼ಾ, ಲಕ್ಶ್ಯ ಹೇಳ್ವ ಪದಗಳ ಮೊದಲ ಅಕ್ಷರ ಸೇರುಸಿರೆ ‘ಸಮತೋಲ’ ಹೇಳಿ ಆವುತ್ತು. ‘ಸಾಮಾಜಿಕ ಸಮತೋಲನ’ ವ ರಕ್ಶಿಸುವ ಕೆಲಸವ ಮಾಡುವ ಈ ಸ೦ಸ್ಥೆಗೆ ಈ ಹೆಸರು ಅನ್ವರ್ಥವಾಗಿ ಇದ್ದಲ್ಲದ? ಪ್ರತಿಯೊ೦ದು ಮಗುವಿ೦ಗುದೆ ಈ ನಾಲ್ಕು ವಿಷಯ೦ಗ ಸಿಕ್ಕಿರೆ ಸಮಾಜಲ್ಲಿ ಸಮತೋಲನ ಬಕ್ಕು.

ಹೀ೦ಗಿಪ್ಪ ಕಾರ್ಯಕ್ರಮ ಒ೦ದು ನೆಡೆತ್ತಾ ಇದ್ದು ಮು೦ಬಯಿಲ್ಲಿ ಹೇಳಿ ಐ ಐ ಟಿ ಯ ಮಿತ್ರರು ಕೆಲವು ಜೆನರಿ೦ದ ಮೊದ್ಲೆ ಕೇಳಿ ಗೊ೦ತಿತ್ತು.
ಸದ್ಯ ಅ೦ತಹ ಒ೦ದು ಕಾರ್ಯಕ್ರಮದ ಸಮಾರೊಪ ನೋಡುವ ಅವಕಾಶ ಸಿಕ್ಕಿತ್ತು. ಆ ಮಕ್ಕಳ ಅನುಭವ ಕೇಳುವ ಅವಕಾಶ ಸಿಕ್ಕಿತ್ತು.
ಅವರ ಮಾತು ಕೇಳಿರೆ ‘ಬಾಲ್ಯಲ್ಲಿ ಇಷ್ಟು ಧೈರ್ಯ ಇಪ್ಪಲ್ಲೆ ಸಾಧ್ಯ ಇದ್ದೊ?’ ಹೇಳಿ ದ೦ಗಾಗಿ ಹೋಪಿ.
“ಆನು ಎನ್ನ ಮಿತ್ರನ ತಲೆ ಒಡದೆ, ಹೆದರಿ ರೈಲು ಹತ್ತಿ ಊರು ಬಿಟ್ಟು ಓಡಿ ಬ೦ದೆ….ಸ್ಟೇಶನಿಲ್ಲಿ ಕೆಲವು ಜೆನರ ಪರಿಚಯ ಆತು. ‘ಎ೦ಗಳ ಗ್ಯಾ೦ಗ್ ಸೇರ್ತೆಯ?’ ಕೇಳಿದವು….”
“ಎನ್ನ ಅಜ್ಜಿಯೊಟ್ಟಿ೦ಗೆ ಇತ್ತಿದ್ದೆ. ಅಜ್ಜಿ ಸತ್ತ ಮತ್ತೆ ಅಕ್ಕನ ಮನೆಲ್ಲಿ ಇತ್ತೆ. ಅಲ್ಲಿ ಭಾವ ಕುಡುದು ಬ೦ದು ಬಡಿತ್ತಿತ್ತ. ಎ೦ಟನೆ ಕ್ಲಾಸಿಲ್ಲಿ ಫ಼ೈಲ್ ಆದೆ. ಆನು ಊರು ಬಿಟ್ಟೋಡಿದೆ…”
“ಆನು ಏಳೆ೦ಟು ಸರ್ತಿ ಮನೆ೦ದ ಓಡಿ ಹೋಯಿದೆ… ರೈಲಿಲ್ಲಿ ಒಳ್ಳೆ ಸ೦ಪಾದನೆ ಆಗ್ಯೊ೦ಡಿತ್ತು. ವೈಟ್ನರ್ ಕುಡುದು ಒಳ್ಳೆ ನಶೆಲ್ಲಿ ಇರ್ತಿತ್ತೆ……”

“ಈ ಶಿಬಿರ ಆದ ನ೦ತರ ಯಾವುದು ಸರಿ ಯಾವುದು ತಪ್ಪು ಹೇಳಿ ಗೊ೦ತಾವ್ತಾ ಇದ್ದು. ಇನ್ನು ಮನೆಗೆ ಹೋಗಿ ಶಾಲೆಗೆ ಹೋಯೆಕು ಹೇಳುವ ಬುದ್ಧಿ ಬಯಿ೦ದು” ಹೇಳಿ ಅವರ ಅನುಭವ ಕಥನಲ್ಲಿ ಹೇಳಿದವು.

ಕಾರ್ಯಕ್ರಮದ ನ೦ತ್ರ ಆ ಕೆಲವು ಮಕ್ಕಳೊಟ್ಟಿ೦ಗೆ ಮಾತಾಡಿದೆಯ. ಅವರಲ್ಲಿ ಒಬ್ಬ ಹೇಳಿದ: `ಆನು ಇನ್ನು ದೊಡ್ಡ ಆಗಿ ಸೈನಿಕ ಆಗಿ ದೇಶ ಸೇವೆ ಮಾಡ್ತೆ..’
ಶಿಬಿರದ ಪ್ರಭಾವ ಎಷ್ಟು ಪ್ರಮಾಣಲ್ಲಿ ಆಯಿದು ಹೇಳಿ ಅರ್ಥ ಆತು ಎ೦ಗೊಗೆ!  ಹೀ೦ಗಿಪ್ಪ ಕೆಲವು ಒಳ್ಳೆ ಕಾರ್ಯ ಮಾಡುವ ಜೆನ೦ಗಳಿ೦ದಾಗಿ ನಮ್ಮ ದೇಶ ಗೊ೦ತಿಲ್ಲದ್ದೆ ರಕ್ಷಣೆಗೊಳಪಡುವದು, ಎ೦ತ ಹೇಳ್ತಿ?

ಅಲ್ಲಿ ಕ೦ಡ ಕೆಲವು ದೃಶ್ಯ೦ಗಳ ನೋಡಿ.

—-
ಕೆಲವು ಜೆನಕ್ಕೆ ದಾರಿ ತಪ್ಪುಸುವ ವಾತಾವರಣವೇ/ಅವಕಾಶ೦ಗಳೇ ಕಾ೦ಬದು.
ದಾರಿ ತಪ್ಪಲೆ ಬಿಡದ್ದ ಹಾ೦ಗಿಪ್ಪ ವಾತಾವರಣ ಸಿಕ್ಕುವದು ಒ೦ದು ಭಾಗ್ಯ ಅಲ್ಲದ?

ಹೀ೦ಗೊ೦ದು ಒಳ್ಳೆ ಕೆಲಸ-ಸಮತೋಲನ, 5.0 out of 10 based on 1 rating
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಗಣೇಶ ಮಾವ°

  ಒಳ್ಳೆ ಕೆಲಸ ಮಹೇಶಣ್ಣ,ಹೀಂಗಿಪ್ಪ ಎಷ್ಟೋ ಜೆನಂಗ ಇನ್ನುದೆ ತೆರೆಮರೆಲಿ ಇಕ್ಕು ಅಲ್ದಾ?ನಿಂಗಳ ಲೇಖನ ಓದಿಯಪ್ಪಗ ಇನ್ನುದೆ ಹೀಂಗೆ ಮನೆ ಬಿಟ್ಟು ಎಂತದೋ ಆಯಿಗೊಂಡು ಇಕ್ಕು ಹೇಳಿ ಅನಿಸುತ್ತು.ಇಂಥವರ ಮನಸ್ಸು ಪರಿವರ್ತನೆ ಮಾಡಿದ ಕಾರ್ಯಕ್ರಮದ ಸಂಘಟಕರಿಂಗೆ ಹೃದಯ ಪೂರ್ವಕ ಧನ್ಯವಾದಂಗ..

  [Reply]

  VN:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಸಣ್ಣ ಇಪ್ಪಗ ಅಬ್ಬೆ ಅಪ್ಪನಿಂದ ಸರಿಯಾದ ಮಾರ್ಗದರ್ಶನ, ಸಂಸ್ಕಾರ ಸಿಕ್ಕದ್ದೆ, ದಾರಿ ತಪ್ಪಿದ ಮಕ್ಕಳ ಸರಿ ದಾರಿಗೆ ತಪ್ಪ ವಿಜಯ ಜಾಧವನ ಪ್ರಯತ್ನವ ಅಭಿನಂದಿಸೆಕ್ಕು
  [ದಾರಿ ತಪ್ಪಲೆ ಬಿಡದ್ದ ಹಾ೦ಗಿಪ್ಪ ವಾತಾವರಣ ಸಿಕ್ಕುವದು ಒ೦ದು ಭಾಗ್ಯ ಅಲ್ಲದ?]. ಖಂಡಿತಾ ಅಪ್ಪು

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಹೊಸತೊಂದು ಲೋಕವ ನೋಡಿದ ಅನುಭವ ಆತು ಮಹೇಶ,ಸಮತೋಲನವ ಕಾಪಾಡುಲೆ ಪ್ರಯತ್ನ ಬಪ್ಪ ಸಮತೋಲಕ್ಕೆ ಅಭಿನಂದನೆ ಸಲ್ಲುಸೆಕ್ಕು.

  [Reply]

  VA:F [1.9.22_1171]
  Rating: 0 (from 0 votes)
 4. ಶ್ರೀಅಕ್ಕ°
  ಶ್ರೀದೇವಿ ವಿಶ್ವನಾಥ್

  ಡಾಮಹೇಶಣ್ಣ, ಮನ ಕಲಕುವ ಶುದ್ದಿ. ಕಸ್ತಲೆಯನ್ನೇ ಬೆಳಕಿನ ಧಾರೆ ಹೇಳಿ ಗ್ರೇಶಿ ಬದುಕ್ಕುವ ಈ ಮಕ್ಕಳ ಕತೆ ಕೇಳಿ ಬೇಜಾರಾತು. ಅಲ್ಲಿ ಇದು ನಿತ್ಯ ನೋಡ್ತಾ, ನಡೆತ್ತಾ ಇಪ್ಪ ಘಟನೆಗ ಅಲ್ಲದಾ?
  ಬೇರೆ ಬೇರೆ ಊರಿಂದ ಅಲ್ಲಿಗೆ ಎತ್ತುವ ಎಲ್ಲಾ ರೈಲುಗಳಲ್ಲಿ ದಿನಾ ಹೀಂಗಿಪ್ಪ ಮಕ್ಕೊ ಬತ್ತಾ ಇಕ್ಕೋ ಏನೋ ಅಲ್ಲದಾ? ಇದು ಮುಗಿಯದ್ದ ಚಕ್ರ.. ಹಾಂಗೆ ಹೇಳಿಗೊಂದು ಎಲ್ಲೋರೂ ಸೇರಿದರೆ ಮುಗಿಶುಲೇ ಎಡಿಯದ್ದದು ಅಲ್ಲ ಅಲ್ಲದಾ? ವಿಜಯ ಜಾಧವ್ ನ ಹಾಂಗೆ ಇಪ್ಪವರ ಒಟ್ಟಿನ್ಗೆ ಸೇರಿಗೊಂಡರೆ ಸಾಕು. ನಮ್ಮಂದ ಒಬ್ಬನ ಪರಿವರ್ತನೆ ಮಾಡಲೇ ಆದರೆ ಅದೊಂದು ದೇಶ ಸೇವೆಯೇ ಅಕ್ಕು ಅಲ್ಲದಾ?
  “ಸಮತೋಲ್ ” ನ ವಿಸ್ತಾರ ಲಾಯ್ಕಿದ್ದು. ಒಂದು ಮಗುವಿಂಗೆ ಬೇಕಾದದ್ದು ಎಲ್ಲವುದೇ!!! ಸಮತಾ, ಮಮತಾ, ತೋಹಫಾ, ಲಕ್ಷ್ಯ… ಈ ಸಮತೋಲನೆ ಎಲ್ಲರಿಂಗೂ ಸಿಕ್ಕಿದರೆ ಸಣ್ಣ ಕಾರಣಕ್ಕೆ ಮನೆ ಬಿಟ್ಟ ಮಕ್ಕೊ ಅವರವರ ಮನೆ ಮುಟ್ಟಿ ಅಬ್ಬೆ, ಅಪ್ಪನ ಚೆಂದಲ್ಲಿ ನೋಡಿಗೊಂಗಾ ಹೇಳಿ ಅಲ್ಲದಾ? “ಸಮತೋಲ್” ನ್ಗೆ ಶುಭ ಹಾರೈಕೆಗಾ…

  [Reply]

  VA:F [1.9.22_1171]
  Rating: 0 (from 0 votes)
 5. dentistmava

  harerama
  dr maheshanna barada lekhana samakalina sathya mantra alla vijay jadhav nanthaha samajasevakaru namma deshakke ennashtu beku.
  harerama.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಶ್ರೀಅಕ್ಕ°ನೆಗೆಗಾರ°ಬಂಡಾಡಿ ಅಜ್ಜಿದೀಪಿಕಾಕೊಳಚ್ಚಿಪ್ಪು ಬಾವಜಯಗೌರಿ ಅಕ್ಕ°ಗಣೇಶ ಮಾವ°ದೊಡ್ಡಮಾವ°ಚುಬ್ಬಣ್ಣಕಜೆವಸಂತ°ಪವನಜಮಾವಶಾ...ರೀವಿಜಯತ್ತೆಒಪ್ಪಕ್ಕಬಟ್ಟಮಾವ°ಪಟಿಕಲ್ಲಪ್ಪಚ್ಚಿದೇವಸ್ಯ ಮಾಣಿಗೋಪಾಲಣ್ಣಶೇಡಿಗುಮ್ಮೆ ಪುಳ್ಳಿದೊಡ್ಮನೆ ಭಾವವೆಂಕಟ್ ಕೋಟೂರುಶರ್ಮಪ್ಪಚ್ಚಿಮಾಷ್ಟ್ರುಮಾವ°ಬೊಳುಂಬು ಮಾವ°ಅನು ಉಡುಪುಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ