ಹೊಸ ಸಾಹಿತ್ಯ

ಸಂಸ್ಕೃತ ಸಾಹಿತ್ಯೋತ್ಸವ

ಯಾವುದೇ ಭಾಷೆ ಜೀವಂತ ಆಗಿದ್ದು ಹೇಳೆಕಾರೆ ಅದು ಹರಿವ ನೀರಿನ ಹಾಂಗಿರೆಕು. ಆ ಭಾಷೆಲ್ಲಿ ಸಾಹಿತ್ಯ  ಕೃಷಿ ಆವ್ತಾ ಇರೆಕು. ಹೊಸ ಹೊಸ ಕೃತಿಗಳ ರಚನೆ ಆಯೆಕು. ಅದು ಜನರ ಭಾವನೆಗಳ ವ್ಯಕ್ತಪಡಿಸೆಕು. ನಮ್ಮ ಮುಂದೆ ಇಪ್ಪ ಪ್ರಶ್ನೆ ಇದು – ಸಂಸ್ಕೃತಲ್ಲಿ ಇಂಥಾದ್ದು ಎಂತಾರು ಆವ್ತಾ ಇದ್ದೊ?

ಸಂಸ್ಕೃತದಲ್ಲಿ ಅತಿ ಪ್ರಾಚೀನ ಗ್ರಂಥಂಗ ಇದ್ದು. ಕಾವ್ಯ ಇದ್ದು, ನಾಟಕ ಇದ್ದು. ಜ್ಞಾನಭಂಡಾರ ಇದ್ದು ಹೇಳಿ ಸುಮಾರು ಕೇಳಿ ಗೊಂತಿದ್ದು ನವಗೆ.  ಹೊಸ ಸಾಹಿತ್ಯ ಇದ್ದೊ? ಇದ್ದರೆ ಎಂತ ಇದ್ದು?

ಅಪ್ಪು. ಇದ್ದು.

ಸಂಸ್ಕೃತಭಾಷೆಲ್ಲಿ ಎಲ್ಲಾ ಪ್ರಕಾರದ ಸಾಹಿತ್ಯ ಇದ್ದು. ಪ್ರಾಚೀನ ಸಾಹಿತ್ಯವನ್ನು ಉಳಿಸಿಯೊಂಡು ಹೋಪದರೊಟ್ಟಿಂಗೆ ಹೊಸ ಹೊಸ ಕೃತಿಗಳ ರಚನೆಯೂ ಆವ್ತಾ ಇದ್ದು. ಕಾವ್ಯ, ನಾಟಕಗ ಅಲ್ಲದ್ದೆ ಆಧುನಿಕ ಪ್ರಕಾರಂಗ, ಸಮಕಾಲೀನ ಸಾಹಿತ್ಯದ ಸೃಷ್ಟಿಯೂ ಆವ್ತಾ ಇದ್ದು. ಸಂಸ್ಕೃತಭಾಷೆಯಲ್ಲಿಪ್ಪ ಶಬ್ದಸಂಪತ್ತು ಹಾಗೂ ಹೊಸ ಶಬ್ದನಿರ್ಮಾಣದ ಸಾಮರ್ಥ್ಯ – ಇವೆರಡು ಎಂತಹ ವಿಚಾರವನ್ನುದೆ, ಯೇವ ರೀತಿಲ್ಲಿಯೂ ಪ್ರತಿಪಾದಿಸಲೆ ಉಪಕಾರಿಯಾಗಿದ್ದು. ಸಂಸ್ಕೃತದ ರಚನಾವಿನ್ಯಾಸ ಯಾವ ತರಹದ ಸಾಹಿತ್ಯಕ್ಕೂ ಸೈ!

ಸಂಸ್ಕೃತಲ್ಲಿ ಈಗ ಆಧುನಿಕ ಲೇಖಕರಿದ್ದವು, ಕವಿಗ ಇದ್ದವು. ಪ್ರಾದೇಶಿಕ ಭಾಷೆಲ್ಲಿಪ್ಪ ಸಾಹಿತ್ಯದ ಅನುವಾದವೂ ಆಯಿದು. ಸಂಸ್ಕೃತ ಸಾಹಿತ್ಯವ ಓದುವ ಒಂದು ದೊಡ್ಡಾ ಓದುಗವರ್ಗವೂ ಇದ್ದು. ಇಂತಹ ಸಾಹಿತ್ಯದ ಬಿಡುಗಡೆಗೆ ಬೇಕಾಗಿ ಒಂದು ಸಮ್ಮೇಳನ/ಉತ್ಸವ ಆತು ಉಜ್ಜಯಿನಿಲ್ಲಿ. ಅದುವೇ ಸಂಸ್ಕೃತಸಾಹಿತ್ಯೋತ್ಸವ.

ದೇಶದ ಪ್ರಥಮ ‘ಸಂಸ್ಕೃತ ಸಾಹಿತ್ಯೋತ್ಸವ’ ಫೆ.22, 23, 24ರಂದು ಮಧ್ಯಪ್ರದೇಶದ ಉಜ್ಜಯಿನಿಯ ಕಾಳಿದಾಸ ಅಕಾಡಮಿಯ ಪರಿಸರಲ್ಲಿ ಆತು, ಕಾಳಿದಾಸ ನಲಿದಾಡಿದ, ಭರ್ತೃಹರಿಯ ತಪಸ್ಸಿನ ನೆಲ ಉಜ್ಜಯಿನಿ. ಅಲ್ಲಿ ಸಂಸ್ಕೃತದ ಮಧುರಧ್ವನಿ ಮತ್ತೆ ಕೇಳಿತ್ತದ! ಅಷ್ಟೇ ಅಲ್ಲ ಸಂಪೂರ್ಣ ಭಾರತಕ್ಕೆ ನವಪ್ರೇರಣೆ ನೀಡಿತ್ತು. ಪಂಡಿತರಿಂದ ಹಿಡಿದು ಸಾಮಾನ್ಯ ಜನರ ವರೆಗೆ, ವಯಸ್ಸಾದವರಿಂದ ಹಿಡುದು ಸಣ್ಣ ಸಣ್ಣ ಮಕ್ಕಳವರೆಗೆ ಎಲ್ಲೋರುದೆ  ಪಾಲ್ಗೊಂಡ ಸಂಸ್ಕೃತ ಜಾತ್ರೆ ಇದು. ಪುಸ್ತಕ ಲೇಖಕರಲ್ಲಿ ಹೆಚ್ಚಿನವುದೆ ಯುವಕರು ಮತ್ತೆ ಹೆಮ್ಮಕ್ಕೊ ಹೇಳ್ವದು ಉಲ್ಲೇಖಾರ್ಹ!

ಮಧ್ಯಪ್ರದೇಶ ಸರ್ಕಾರ, ಸಂಸ್ಕೃತ ಸಂವರ್ಧನ ಪ್ರತಿಷ್ಠಾನ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ, ದೇಶದ ಎಲ್ಲ ಸಂಸ್ಕೃತ ವಿವಿಗಳು, ಸಂಸ್ಕೃತ ಅಕಾಡೆಮಿಗಳು, ಸಂಸ್ಕೃತ ಭಾರತಿ ಮತ್ತೆ ಮಹರ್ಷಿ ಪತಂಜಲಿ ಸಂಸ್ಕೃತ ಸಂಸ್ಥಾನ ಇವೆಲ್ಲದರ ಆಶ್ರಯದಲ್ಲಿ ಈ ಸಾಹಿತ್ಯೋತ್ಸವ ಯಶಸ್ವಿ ಆತು.

ಇದರ ವೈಶಿಷ್ಟ್ಯ ಎಂತ ಹೇಳಿ ಗೊಂತಿದ್ದ?

ಇಲ್ಲಿ 39 ಪ್ರಕಾಶನ ಸಂಸ್ಥೆಗಳ ಮೂಲಕ 153 ಸಂಸ್ಕೃತ ಪುಸ್ತಕಗಳ ಲೋಕಾರ್ಪಣೆ ಆತು.

ಸಾಹಿತ್ಯೋತ್ಸವ ಹೇಳಿರೆ ಪುಸ್ತಕ ಬರವವಕ್ಕೆ, ಓದುವವಕ್ಕೆ, ಮತ್ತೆ ಪುಸ್ತಕ ಪ್ರಕಟಿಸುವ ಪ್ರಕಾಶಕರಿಂಗೆ ಎಲ್ಲೋರಿಂಗುದೆ ಹಬ್ಬವೇ. ಸಂಸ್ಕೃತ ಪುಸ್ತಕದ ಲೇಖಕರು ಹೇಳಿರೆ ನಿಂಗೊ ಸಾಮಾನ್ಯವಾಗಿ ಭಾರೀ ದೊಡ್ಡ ಪಂಡಿತಕ್ಕೊ, ಪ್ರಾಯ ಆದವು ಹೇಳಿ ಯೋಚಿಸಿದಿರೊ ಏನೊ!. ಸಂಸ್ಕೃತ ಪುಸ್ತಕ ಹೇಳಿರೆ ಗೀತೆ, ಭಾಗವತ, ವೇದ, ಪುರಾಣ, ಕಾವ್ಯ, ನಾಟಕದ ವಿಷಯಂಗ ಇಪ್ಪ ದಪ್ಪ ದಪ್ಪದ ದೊಡ್ಡ ದೊಡ್ಡ ಗ್ರಂಥಂಗ ಹೇಳಿಯೂ ಮನಸ್ಸಿಲ್ಲೆ ಚಿತ್ರ ಮೂಡಿಕ್ಕು ನಿಂಗಗೆ! ಹಾಂಗೆಲ್ಲ ಅಲ್ಲ ಹೇಳಿ ರಜ್ಜ ಕಲ್ಪನೆಯ ಬದಲಾಯಿಸುವ ಸಾಹಿತ್ಯೋತ್ಸವ ಇದು.

ಇಲ್ಲಿದ್ದ ಸಂಸ್ಕೃತದ ಲೇಖಕರಲ್ಲಿ ಹೆಚ್ಚಿನವುದೆ ಯುವಕರು, ಹೆಮ್ಮಕ್ಕೊ ಮತ್ತು ಗೃಹಿಣಿಯರು. ಇಲ್ಲಿ ಪ್ರಕಟವಾದ ಪುಸ್ತಕಂಗ ವರ್ಣರಂಜಿತ ಹಾಗೂ ಆಕರ್ಷಕವಾಗಿ ಇದ್ದು. ಸಾಮಾನ್ಯ ಗಾತ್ರದ್ದೇ. ಅದು ಓದಿಸಿಯೊಂಡು ಹೋಪ ಸರಳ ಶೈಲಿಯ ನೂತನಸಾಹಿತ್ಯ!! ಇಲ್ಲಿ ವೈಚಾರಿಕ ಸಾಹಿತ್ಯ, ಕಾದಂಬರಿ, ಬಾಲಸಾಹಿತ್ಯ, ಕವಿತೆ, ಗದ್ಯ, ಸಣ್ಣಕಥೆಗ, ಚಿತ್ರಕಥೆಗ ಹೀಂಗೆ ಎಲ್ಲವೂ ಇದ್ದು. ಈ ಪುಸ್ತಕಂಗ ಸಂಸ್ಕೃತದ ಬಗ್ಗೆ ಬೇರೆ ಭಾಷೆಲ್ಲಿ ಬರದ ಪುಸ್ತಕ ಅಲ್ಲ. ಇವು ಸಂಪೂರ್ಣ ಸರಳ ಸಂಸ್ಕೃತಲ್ಲಿ ನೂತನವಾಗಿ ರಚಿತವಾದ ಪುಸ್ತಕಂಗ ಹೇಳಿ ವಿಶೇಷ.

‘ತಾಂಡವಂ’ ಮೊದಲಾದ ಕಾದಂಬರಿಗ, ‘ವಿಲಪತಿ ಗಂಗಾ’ ಇತ್ಯಾದಿ ಇನ್ನೂ ಸುಮಾರು ಕಥಾ-ಕೃತಿಗ, ವೈಚಾರಿಕ ಪುಸ್ತಕಗಳು ಸಂಸ್ಕೃತದಲ್ಲಿಯೇ ಬಂದ ನೂತನ ರಚನೆಗ.

ಇವಲ್ಲದ್ದೆ ಇತರ ಭಾಷೆಲ್ಲಿಪ್ಪ ಪ್ರಸಿದ್ಧ ಕಾದಂಬರಿಗ ಕೂಡಾ ಈಗ ಸಂಸ್ಕೃತಲ್ಲಿ ಬಿಡುಗಡೆ ಆಯಿದು! ಗುರುದತ್ತರ ‘ದೇಶಹತ್ಯಾ’, ‘ದೇವದಾಸ’ ಇತ್ಯಾದಿ ಕಾದಂಬರಿಗಳ ಅನುವಾದ,  ಶೆರ್ಲಾಕ್ ಹೋಮ್ಸ್ ನ ಪತ್ತೇದಾರಿ ಕಥೆಗ, ಫ್ರೆಂಚ್, ಜಪಾನೀ, ಕೊರಿಯಾ ಭಾಷೆಯ ಕಾದಂಬರಿ ಮತ್ತು ಕಥೆಗಳ ಅನುವಾದಂಗ ಈಗ ಪ್ರಕಟ ಆಯಿದು. ಭೈರಪ್ಪನವರ ಆವರಣ, ಧರ್ಮಶ್ರೀ, ಸಾರ್ಥ ಎಲ್ಲ ಮೊದ್ಲೇ ಅನುವಾದ ಆಯಿದು.

19 ಸಾಂದ್ರಮುದ್ರಿಕೆ (ಸಿಡಿ) ಮತ್ತು ಧ್ವನಿಪುಸ್ತಕ (ಆಡಿಯೋ ಬುಕ್) ಗಳ ಬಿಡುಗಡೆ.

ಕೆಲವು ಪುಸ್ತಕಗಳ ಧ್ವನಿಪುಸ್ತಕಗಳೂ (ಆಡಿಯೋ ಬುಕ್) ಕೂಡ ಈಗ ದೊರೆಯುತ್ತಿವೆ. ಹೋವ್ತಾ, ಬತ್ತಾ, ವಾಹನ ಚಲಾಯಿಸಿಯೊಂಡು ಅಥವಾ ಬೇರೆ ಕೆಲಸ ಮಾಡ್ಯೊಂಡೇ ಸಂಸ್ಕೃತ ಕೇಳ್ಳೆ ಒಳ್ಳೆ ಉಪಾಯ ಇದು.

ಸಂಸ್ಕೃತ ಪುಸ್ತಕ ಮೇಳ – 1 ಕೋಟಿ ರೂಪಾಯಿ ಮೌಲ್ಯದ ಸಂಸ್ಕೃತ ಪುಸ್ತಕಗಳ ಸಾಹಿತ್ಯಾಭಿಮಾನಿ ಜನ ಖರೀದಿಸಿದವಡ. ಒಟ್ಟು 90 ಬುಕ್ ಸ್ಟಾಲ್ ಗ ಇತ್ತಿದ್ದು. 53 ಪ್ರಕಾಶಕ ಸಂಸ್ಥೆಗ ಭಾಗವಹಿಸಿತ್ತಿದ್ದವು ಈ ಪುಸ್ತಕಮೇಳಲ್ಲಿ.

ಜನಪ್ರವಾಹ – 15  ವಿಶ್ವವಿದ್ಯಾಲಯಗಳ ಭಾಗವಹಿಸುವಿಕೆ, 26 ರಾಜ್ಯಂದ ಸುಮಾರು 3000 ಪ್ರತಿನಿಧಿಗಳ ಆಗಮನ. ಒಂದು ಲಕ್ಷ ಜನ ಬಂದು ನೋಡಿದ ಅಧ್ಬುತ ಕಾರ್ಯಕ್ರಮ ಇದು.

ಇಷ್ಟೇ ಅಲ್ಲ,

ಸಂಸ್ಕೃತ ವಿಜ್ಞಾನ ಪ್ರದರ್ಶಿನೀ – ಸಂಸ್ಕೃತಲ್ಲಿಪ್ಪ ವಿಜ್ಞಾನವ ತೋರಿಸಿ ಬಹಳಷ್ಟು ಜನರ ಕಣ್ಣು ತೆರೆಸಿತ್ತು. ಇಲ್ಲಿ ಉಜ್ಜಯಿನಿಯ MIT ಯ ವಿದ್ಯಾರ್ಥಿಗ ನಾಟ್ಯಶಾಸ್ತ್ರದ ಆಧಾರದಲ್ಲಿ ಹೇಳಿದ 22 ಶ್ರುತಿಯ ಉಪಕರಣಗಳ ತೋರುಸಿದವು. ಶ್ರುತಿಯ ನಿಯಮಸ್ಥಾನ, ಗಣಿತ ಹಾಗೂ ತಂತಿಗಳ ದೂರದ ಬಗ್ಗೆ ವಿಶಿಷ್ಟವಾದ ಅಧ್ಯಯನ ಮಾಡಿ ಶ್ರುತಿ ವಿಶ್ಲೇಷಣೆಯ (ಮ್ಯೂಸಿಕಲ್ ಎನಲೈಸರ್) ಪ್ರಾಯೋಗಿಕವಾಗಿ ತೋರಿಸಿದ್ದದು ವಿಶೇಷ.

ಸಂಸ್ಕೃತ ಗ್ರಾಮ, ಸಂಸ್ಕೃತ ಕ್ರೀಡಾಂಗಣ, ಸಂಸ್ಕೃತ ಮಾರ್ಕೆಟ್, ಸಂಸ್ಕೃತ ವಿಕಿಪೀಡಿಯಾ  ಹೀಗೆ ನೂರೆಂಟು ವಿವಿಧತೆ, ಆಕರ್ಷಣೆಗ. ಇಲ್ಲಿ ಎಲ್ಲವೂ ಸಂಸ್ಕೃತಮಯ!

ಇದು ಮಾಂತ್ರ ಅಲ್ಲ, ಅರ್ಥಶಾಸ್ತ್ರ ಮತ್ತು ಮ್ಯಾನೇಜ್ಮೆಂಟ್, ಸಂಸ್ಕೃತ ಮತ್ತು ಕಂಪ್ಯೂಟರ್, ಪ್ರಾಚೀನ ಭಾರತ ವಿಜ್ಞಾನ ಮುಂತಾದ ವಿಷಯಂಗಳಲ್ಲಿ ತಜ್ಞರ ಕಾರ್ಯಾಗಾರಂಗ ಇತ್ತು.

ನ್ಯಾಯಮೂರ್ತಿ ಮುಕುಂದಕಾಮ ಶರ್ಮಾ, ನ್ಯಾ| ರಾಮ ಜೋಯಿಸ್, ನ್ಯಾ| ಬಿ.ಎನ್.ಶ್ರೀಕೃಷ್ಣ ಅತಿಥಿಗಳಾಗಿದ್ದು ಸಂಸ್ಕೃತದಲ್ಲಿ ಭಾಷಣ ಮಾಡಿದವು. ರಾಮ ಜೋಯಿಸ್ ಹೇಳಿದ ಒಂದು ಮುಖ್ಯವಾದ ವಿಚಾರ ಇಲ್ಲಿದ್ದು – “ವಿದ್ಯಾವಿಹೀನಃ ಪಶುಃ” (ವಿದ್ಯೆಯಿಲ್ಲದ್ದವ ಪಶು, ಮಾನವ ಅಲ್ಲ) ಹೇಳಿ ಭರ್ತೃಹರಿಯ ಸುಭಾಷಿತವ ಉಲ್ಲೇಖಿಸಿಯೇ ‘ವಿದ್ಯಾಭ್ಯಾಸ ಮಾನವನ ಮೂಲಭೂತ ಹಕ್ಕು’ ಎಂಬುದಾಗಿ ಸುಪ್ರೀಂ ಕೋರ್ಟು ತೀರ್ಪು ಕೊಟ್ಟದಡ. “ಸರ್ವೇ ಭವಂತು ಸುಖಿನಃ” ಶ್ಲೋಕವ ಆಧರಿಸಿಯೇ ವಿಶ್ವಮಾನವಾಧಿಕಾರ ಆಯೋಗ ‘ಸುಖಿಯಾಗಿಪ್ಪದು ಮಾನವನ ಹಕ್ಕು’ (Right to happiness) ಹೇಳಿ ಅಂಗೀಕರಿಸಿದ್ದದಡ.

ಮಧ್ಯಪ್ರದ್ದೇಶದ ಝಿರಿ ಗ್ರಾಮಲ್ಲಿ ಎಲ್ಲೋರೂ  ಸಂಸ್ಕೃತ ಮಾತನಾಡ್ಳೆಡಿಗಾರೆ ಸಂಪೂರ್ಣಭಾರತಲ್ಲಿ ಏಕೆಡಿಯ? ಇದು ಮಧ್ಯಪ್ರದೇಶದ ಮುಖ್ಯಮಂತ್ರಿಯ ಪ್ರಶ್ನೆ! ಹಾಂಗಾಗಿ ಮಧ್ಯಪ್ರದೇಶ ಸರಕಾರ ತಯಾರಾಯಿದು. ಎಂತ ಮಾಡೆಕು ಹೇಳಿ ನಿಂಗ ಹೇಳಿ. ಮಾಡ್ತೆಯ ಎಂಗೊ ಹೇಳಿ. ಪ್ರತಿವರ್ಷವೂ ಸಂಸ್ಕೃತ ಸಾಹಿತ್ಯೋತ್ಸವ ಕ್ಕೆ ಆತಿಥ್ಯ ಕೊಡ್ಳೆ ಅವು ತಯಾರು. ಮುಖ್ಯಮಂತ್ರಿ ಇತ್ಯಾದಿ ಗಣ್ಯರು ಸಂಸ್ಕೃತ ಸಂಭಾಷಣೆಯ ಕ್ಲಾಸಿಲ್ಲಿ ಕೂದು ಕೆಲವು ವಾಕ್ಯ ಕಲ್ತವು. ಮತ್ತೊಂಬ ಮಂತ್ರಿ ಸಂಸ್ಕೃತ ವಾತಾವರಣದಿಂದ ಪ್ರೇರಿತರಾಗಿ ಸಂಸ್ಕೃತಲ್ಲಿಯೇ (ಬರಸಿಯೊಂಡು) ಭಾಷಣ ಮಾಡಿದ. ಕಾರ್ಯಕ್ರಮಂಗಳಲ್ಲಿ ಐಎಎಸ್, ಐಪಿಎಸ್, ಅಧಿಕಾರಿಗ, ಐಐಟಿ, ಐಐಎಂ ಪ್ರೊಫೆಸರುಗ ಭಾಗವಹಿಸಿ ಸಂಸ್ಕೃತದ ಆಧುನಿಕತೆಯ, ಪ್ರಾಸಂಗಿಕತೆಯ ಪ್ರತಿಪಾದಿಸಿದವು.

ಸಂಸ್ಕೃತ ಹೇಳಿರೆ “ನಿಂತ ನೀರಿನಾಂಗೆ, ಅಲ್ಲಿ ಹೊಸತ್ತಿಲ್ಲೆ, ಜೀವಂತಿಕೆ ಇಲ್ಲೆ, ಸತ್ತಿದು, ಜನರ ಭಾವನೆಗಳ ಪ್ರಕಟಿಸಲೆ ಶಕ್ತವಾಗಿಲ್ಲೆ” ಹೇಳಿ ಭಾವಿಸುವವು ಒಂದರಿ ಈ ಸಾಹಿತ್ಯೋತ್ಸವವ ನೋಡೆಕಿತ್ತು. ನೋಡಿದ್ದರೆ ಗೊತ್ತಾವ್ತಿತ್ತು – ಸಂಸ್ಕೃತ ಪುರಾತನ ಮಾಂತ್ರ ಅಲ್ಲ, ಅದು ನಿತ್ಯ ನೂತನ, ಅದು ಸನಾತನ, ಅಮರ ಹೇಳಿ.

ದೊಡ್ಡದಾಗಿ ಸುದ್ದಿಯಲ್ಲಿಲ್ಲದಿದ್ದರೂ ಉತ್ತಮ ಕಾರ್ಯಂಗ ಆವ್ತಾ ಇರ್ತು. ಅದರ ತಿಳ್ಕೊಂಬದು ಮತ್ತೆ ಇನ್ನೊಬ್ಬರಿಂಗೆ ಹೇಳ್ವದು ನಮ್ಮ ಕರ್ತವ್ಯ. ಎಂತ ಹೇಳ್ತಿ?

ಚಿತ್ರಂಗಳ ನೋಡಿ. ಸಾಹಿತ್ಯೋತ್ಸವದ ವೈಭವದ ತುಣುಕಿಂಗೆ  ಬೇಕಾಗಿ –

ಇನ್ನೂ ತುಂಬ ವಿಷಯಂಗ ಇದ್ದು.

ಡಾಮಹೇಶಣ್ಣ

   

You may also like...

9 Responses

 1. ಬೆಟ್ಟುಕಜೆ ಮಾಣಿ says:

  ಸಂಸ್ಕೃತ ಸಂಸ್ಕೃತಿಯ ಅನಾವರಣ ಇನ್ನೂ ಯಶಸ್ಸಿನತ್ತ ಮುನ್ನುಗ್ಗಲಿ..ಪ್ರಾಚ್ಯ ಭಾಷೆ ನಮ್ಮ ಎಲ್ಲರ ಮಾತೃ ಭಾಷೆ ಆಗಿತ್ತ ಸಂಸ್ಕೃತದ ಗಾಳಿ ಸಮಾಜಲ್ಲಿ ಪಸರಿಸಲಿ..

 2. ಚೆನ್ನೈ ಭಾವ° says:

  ಅದ್ಭುತಂ – ರಮ್ಯಂ. ಸಂಸ್ಕೃತೋತ್ಸವದ ಮನೋಹರ ಶುದ್ಧಿ. ಅಲ್ಲಿ ಹೋದವಕ್ಕೆ ವಿಶಿಷ್ಟ ಅನುಭವ. ಇಲ್ಲಿ ಓದಿದವಕ್ಕೆ ವಿಶೇಷ ಉತ್ಸಾಹ ನಿಶ್ಚಿತ.

  ಹರೇ ರಾಮ.

 3. ತೆಕ್ಕುಂಜ ಕುಮಾರ ಮಾವ° says:

  ಮಹೇಶಣ್ಣನ ವರದಿ ಮತ್ತೆ ಫಟಂಗ, ಸಂಸ್ಕೃತ ಸಾಹಿತ್ಯೋತ್ಸವದ ವೈಭವವ ಕಣ್ಣೆದುರು ತೋರ್ಸಿದ ಅನುಭವ ಕೊಟ್ಟತ್ತು.

 4. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

  ಬಹಳ ಲಾಯ್ಕ ಆಯಿದು. ನಮ್ಮಲ್ಲಿ ಒಂದು ಪುಸ್ತಕ ಪ್ರದರ್ಶನ ಕೆಲವರಾದರೂ ಆಗಮಿಸಿ,ಮಾಡುಗೊ? ಕನ್ನDa ಸಾಹಿತ್ಯ ಸಮ್ಮೇಳನದ ನಡುವೆ ಮಾಡಲಾವುತ್ತಿತ್ತು. ಕುಳಾಯಿಲಿ ತಾಲೂಕು ಸಾಹಿತ್ಯ ಸಮ್ಮೇಳನ ಎಪ್ರಿಲ್ ೭ ಕ್ಕೆ ಇದ್ದು.

 5. ಒಪ್ಪ ಶುದ್ದಿ. ಫಟಂಗೊ ನೋಡಿಯಪ್ಪಗ ಸಂಸ್ಕೃತ ಭಾಶೆಯ ಮನಸ್ಸು ಮಾಡಿದರೆ ಇನ್ನುದೇ ಜೀವಂತ ಆಗಿ ಉಳಿಸಿ ಬೆಳೆಸುಲೆ ಅಕ್ಕು ಹೇಳಿ ಗೊಂತಾತು.

 6. ಡಾಮಹೇಶಣ್ಣ,
  ವರದಿಯೂ, ಪಟಂಗಳೂ ಲಾಯ್ಕಾಯಿದು. ಸಂಸ್ಕೃತ ಭಾಷೆ ಎಲ್ಲೋರಿಂಗೂ ಮನಸ್ಸಿಂಗೆ ಹತ್ತರೆ ಅಪ್ಪಂಥಾ ಭಾಷೆ. ರಜ್ಜ ನಮ್ಮ ಮನಸ್ಸಿನ ಭಾಶೆ ಕಲಿವ ಕಡೆಂಗೆ ತಿರುಗುಸುಲೆ ಇಪ್ಪದು ಮಾಂತ್ರ. ಸಂಸ್ಕೃತ ಪುಸ್ತಕಂಗೊ ವರುಷವೂ ಸಮ್ಮೇಳನಂಗಳಲ್ಲಿ ಲೋಕಾರ್ಪಣಗೊಳ್ಳುತ್ತಾ ಇದ್ದು. ಅದು ಎಲ್ಲಾ ಮನೆಂಗೊಕ್ಕೆ ಮುಟ್ಟಲಿ ಹೇಳ್ತ ಹಾರೈಕೆ.

  [ದೊಡ್ಡದಾಗಿ ಸುದ್ದಿಯಲ್ಲಿಲ್ಲದಿದ್ದರೂ ಉತ್ತಮ ಕಾರ್ಯಂಗ ಆವ್ತಾ ಇರ್ತು. ಅದರ ತಿಳ್ಕೊಂಬದು ಮತ್ತೆ ಇನ್ನೊಬ್ಬರಿಂಗೆ ಹೇಳ್ವದು ನಮ್ಮ ಕರ್ತವ್ಯ. ]
  ಇದು ಎಲ್ಲೋರೂ ಮಾಡೆಕ್ಕಾದ ಕೆಲಸ. ನೀನು ಈಗಾಗಲೇ ಮಾಡ್ತಾ ಇದ್ದೆ. ಅದು ತುಂಬಾ ಕೊಶಿ ಅಪ್ಪ ವಿಚಾರ.
  ಧನ್ಯವಾದಂಗೊ.

 7. ಗೋಪಾಲ್ ಬೊಳುಂಬು says:

  ಮಹೇಶಣ್ನ ಉತ್ತಮ ವರದಿ. ಸಂಸ್ಕೃತಲ್ಲಿ ನವ ಸಾಹಿತ್ಯಂಗೊ ಬಂದಪ್ಪಗ ಯುವ ಜನರ ಮನಸ್ಸಿನ ಖಂಡಿತಾ ಗೆಲ್ಲುಗು. ಚಿತ್ರಂಗಳೂ ಲಾಯಕು ಬಯಿಂದು.

  • ಉಡುಪುಮೂಲೆ ಅಪ್ಪಚ್ಚಿ says:

   ಮಹೇಶಣ್ಣ, ವರದಿ ಪಸ್ಟ್ ಕ್ಲಾಸ್ ಆಯಿದು; ನಯನ೦ ರಮ್ಯ೦; ಶ್ರವಣ೦ ಮಧುರ೦. ಸರ್ವ೦ ಶ್ಲಾಘನೀಯ೦! ಸಮ್ಮೇಳನದ ವರದಿ ಹಾ೦ಗೂ ಪಟ೦ಗಳ ನೋಡಿದಲ್ಲೇ ಬಾಕಿ!ಎ೦ಥ ಅದೃಷ್ಟ ಹೀನ ಆನು ಹೇದು ಅರೆಕ್ಷಣ ಅನಿಸಿರೂ,ಮತ್ತೆ ನಿ೦ಗಳ ಸುದ್ದಿ ಓದಿದ ಮತ್ತೆ ಮನಸ್ಸಿ೦ಗೆ ರಜ್ಜ ಸಮಾಧಾನ ಆತಿದಾ. ಈ ಸೌಭಾಗ್ಯವ ನೋಡಿ, ಹೀ೦ಗೆ ಎ೦ಗೊಗೆ ಅದರ ರಸಾನುಭೂತಿಯ ಹ೦ಚಿದ ನಿ೦ಗೊ೦ಗೆ ಎ೦ಗೊ ಎಲ್ಲರುದೆ ಚಿರಋಣಿಗೊ. ಧನ್ಯವಾದ೦ಗ ಹರೇ ರಾಮ. ನಮಸ್ತೇ + ಒ೦ದು ಒಪ್ಪ.

 8. ಡಾ. ಮಹೇಶಣ್ಣ. ವರದಿ ಪಟಂಗೊ ನೋಡಿ ಸಂತೋಷಾತು

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *