ಕಾಟು ಪ್ರಾಣಿಗಳ ವಿಚಾರ: ಓಡುಸುವದು ಹೇಂಗೆ?!

February 12, 2010 ರ 10:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪಾಂಡವರು ವನವಾಸಲ್ಲಿಪ್ಪಗ, ಅರ್ಜುನಂಗೆ ಶಿವನ ಮೆಚ್ಚುಸಿ ಪಾಶುಪತ ಅಸ್ತ್ರ [ಪಶುಪತಿ (ಶಿವ) ಕೊಡುವ ಅಸ್ತ್ರ] ಕೇಳೆಕು ಹೇಳಿ ಆತಡ.
ಹಾಂಗೆ ಹಿಮಾಲಯದ ತಪ್ಪಲಿಲ್ಲಿ ತಪಸ್ಸು ಮಾಡಿಯೊಂಡಿಪ್ಪಗ ಒಂದು ಕಾಡು ಹಂದಿಯ ಅಟ್ಟಿಸಿಯೊಂಡು ಬಂದ ಕಿರಾತನ ಹತ್ರೆ ಅರ್ಜುನ ಯುದ್ಧ ಮಾಡ್ತ°.

ಕಿರಾತನ ವೇಷಲ್ಲಿ ಬಂದದು ಬೇರೆ ಆರೋ ಅಲ್ಲ ಸಾಕ್ಷಾತ್ ಶಿವ ದೇವರೇ ಅಡ. ಅರ್ಜುನನ ಶೌರ್ಯಕ್ಕೆ ಮೆಚ್ಚಿ ಶಿವ°, ಅವಂಗೆ ಅಸ್ತ್ರ ಕೊಡುವದು ಹೇಳಿ ಒಂದು ಕತೆ.
ಈ ಕತೆ ಗೊಂತಿಪ್ಪ ಒಬ್ಬ ಭಕ್ತಂಗೆ ಕಿರಾತನ ರೂಪಲ್ಲಿಪ್ಪ ಶಿವನತ್ರೆ ಪ್ರಾರ್ಥನೆ ಮಾಡುವ° ಹೇಳಿ ಕಂಡತ್ತು.
ಹೇಂಗೆ?

‘ಶಿವನೆ, ಓ ಬೇಟೆಗಾರನೇ, ನೀನು ಅತ್ಲಾಗಿ ಇತ್ಲಾಗಿ ತಿರುಗದ್ದೆ ಬಂದು ಎನ್ನಲ್ಲಿಯೇ ವಾಸ ಮಾಡು, ನಿನಗೆ ಕಾಡು, ಕಾಟು ಪ್ರಾಣಿಗೋ ಅಲ್ಲದೋ ಬೇಕಾದ್ದದು? ಎಲ್ಲ ಸಿಕ್ಕುತ್ತು ಇಲ್ಲಿ’

ಭೋ: ಗಿರಿಶ ! = ಏ! ಗುಡ್ಡಗಾಡಿಲ್ಲಿ ಇಪ್ಪವನೇ!
ತ್ವಂ ಇತಸ್ತತಃ ಮಾ ಗಚ್ಛ = ನೀನು ಅತ್ತೆ ಇತ್ತೆ ತಿರುಗೆಡ,
(ಹಾಂಗಾರೆ ಎಂತ ಮಾಡೆಕು?)
ಮಯಿ ಏವ ವಾಸಂ ಕುರು = ಎನ್ನಲ್ಲಿಯೇ ವಾಸ ಮಾಡು.

(ಕಾಡಿಲ್ಲಿ ತಿರುಗಾಡುವ ಬೇಟೆಗಾರಂಗೆ ಕಾಡಿಂಗೆ ಹೋಗದ್ದೆ ಮನಸ್ಸು ಕೇಳುಗೋ? ‘ಬಂದು ಕೂರು’ ಹೇಳಿರೆ ಕೂರುಗೋ? ಕೆಲಸ ಇಲ್ಲದ್ದರೆ ಆರೂ ಬಾರವು, ಬಪ್ಪಲೆ ಹೇಳಿರೆ ಸಾಕೋ?
ಎಂತ ಕೊಡ್ತೆ ಹೇಳಿ ಹೇಳೆಕಲ್ಲದ? ಹಾಂಗಾಗಿ –
‘ನಿನಗೆ ಕಾಡು ಬೇಕಾದ್ದಲ್ಲದೋ? ಎನ್ನ ಮನಸ್ಸೇ ಒಂದು ಕಾಡು, ಇಲ್ಲಿಗೆ ಬಂದರೆ ತುಂಬಾ ಲಾಭ ಇದ್ದು. ನಿನಗೆ ಬೇಕಾದಷ್ಟು ಬೇಟೆ ಸಿಕ್ಕುಗು’)

ಸ್ವಾಮಿನ್! ಆದಿ ಕಿರಾತ! = ಸ್ವಾಮಿಯೇ, ಆದಿ ಕಿರಾತನೇ,
ಮಾಮಕ-ಮನಃ-ಕಾಂತಾರ-ಸೀಮಾಂತರೇ = ಎನ್ನ ಮನಸ್ಸಿನ ಕಾಡಿನ ಒಳ
ಮದಜುಷಃ ಬಹುಶಃ ಮೃಗಾಃ ವರ್ತಂತೇ = ಸೊಕ್ಕಿದ ಕಾಟು ಪ್ರಾಣಿಗೋ ಸುಮಾರು ಇದ್ದವು.
(ತುಂಬಾ ಕತ್ತಲೆ ಇಪ್ಪಲ್ಲಿ ಹೀಂಗಿಪ್ಪದೆ ಹೆಚ್ಚಿಪ್ಪದು!!)

(ಯಾವ ಪ್ರಾಣಿಗೋ?)
ಮಾತ್ಸರ್ಯ-ಮೋಹಾದಯಃ = ಹೊಟ್ಟೆಕಿಚ್ಚು, ಮೋಹ ಇತ್ಯಾದಿ,
(ಹೀಂಗಿಪ್ಪದಕ್ಕೆ ಎಂತ ಕಡಮ್ಮೆ ಇಲ್ಲೆ!! )

(ನೀನು ಬಂದರೆ, )
ತಾನ್ ಹತ್ವಾ = ಅವುಗಳ ಕೊಂದು,
ಮೃಗಯಾ-ವಿನೋದ-ರುಚಿತಾ-ಲಾಭಂ ಚ = ಬೇಟೆಯಾಟದ ರುಚಿಯ ಲಾಭವ
ಸಂಪ್ರಾಪ್ಸ್ಯಸಿ = (ನೀನು) ಪಡಕ್ಕೊಂಬೆ !

ಹೇಂಗಿದ್ದು ಆಲೋಚನೆ?!

ಬೇಡಂಗೆ ಬೇಕಾದ್ದು ಸಿಕ್ಕುಗು, ನವಗೆ ಬೇಡದ್ದು ಹೋಕು!!

ಪೂರ್ತಿ ಶ್ಲೋಕ:
ಮಾ ಗಚ್ಛ ತ್ವಮಿತಸ್ತತೋ ಗಿರಿಶ ! ಭೋ: ! ಮಯ್ಯೇವ ವಾಸಂ ಕುರು
ಸ್ವಾಮಿನ್! ಆದಿ-ಕಿರಾತ! ಮಾಮಕ-ಮನಃ-ಕಾಂತಾರ-ಸೀಮಾಂತರೇ |
ವರ್ತಂತೇ ಬಹುಶೋ ಮೃಗಾ ಮದಜುಷೋ ಮಾತ್ಸರ್ಯ-ಮೋಹಾದಯಃ
ತಾನ್ ಹತ್ವಾ ಮೃಗಯಾ-ವಿನೋದ-ರುಚಿತಾ-ಲಾಭಂ ಚ ಸಂಪ್ರಾಪ್ಸ್ಯಸಿ ||

ಸೂ: ಶ್ಲೋಕಲ್ಲಿ ಇಪ್ಪದು ಗಿರಿಶ ಹೇಳಿಯೇ, ಗಿರೀಶ ಅಲ್ಲ ಆತ! ಎರಡುದೆ ಶಿವನ ಹೆಸರೇ ಆದರುದೆ, ಇಲ್ಲಿ ಗಿರೀಶ ಹೇಳಿರೆ ಛಂದಸ್ಸು ತಪ್ಪುಗು, ಹೇಳಲುದೇ ಸರಿಯಾಗ!
ಗಿರಿಶಃ = ಗಿರೌ ಶೇತೇ (ಪರ್ವತಲ್ಲಿ ಮನುಗುವವ°) ]

ಹೀಂಗೆ ಸ್ತುತಿ ಮಾಡಿದ ಭಕ್ತ° ಬೇರೆ ಆರೂ ಅಲ್ಲ, ನಮ್ಮ ಆದಿ ಶಂಕರಾಚಾರ್ಯರು !!
ನವಗೆ ಬೇಕಾಗಿಯೇ ಬರದ್ದದು !!
ನಮ್ಮ ತೋಟಲ್ಲೂ ಹಂದಿ ಉಪದ್ರ ಇದ್ದ ಕಾರಣ ನಾವೂ ಕಿರಾತನ ನೆಂಪು ಮಾಡ್ಲಕ್ಕು.

(ಮನಸ್ಸಿನ) ತೋಟಲ್ಲಿ ಕಾಟು (ವಿಚಾರದ) ಹಂದಿ ಬಂದರೆ ಮುಂಡಿ (ಮಂಡೆ) ಬೆಳಗೋ?

– –

ಹೀಂಗೆ ಸುಮ್ಮನೆ:
ಗಿರೀಶನ ಬದಲು ಹರೀಶ(ಣ್ಣ)ನ ದೆನಿಗೆಳಿರೆ ಬೇಗ ಬಕ್ಕು!
ಕಾಟು ಪ್ರಾಣಿಗಳ ಹಿಡುದು ಹಾಕುಗು – ಪಟದ ಪೆಟ್ಟಿಗೆಲ್ಲಿ !!

ಕಾಟು ಪ್ರಾಣಿಗಳ ವಿಚಾರ: ಓಡುಸುವದು ಹೇಂಗೆ?!, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಇಷ್ಟೆಲ್ಲಾ ಇದ್ದಾ? ಬಾರೀ ಶೋಕಾಯ್ದು. ಇನ್ನೂ ಹೀಂಗಿಪ್ಪ ಉಪಕಾರ ಅಪ್ಪದರ ಜಾಸ್ತಿ ಇದ್ದರೆ ಹೇಳಿ. ಎಂಗಳಲ್ಲಿಗೆ ಕಂಡಾಪಟ್ಟೆ ಕಾಟುಗೊ ಬತ್ತವು. ಓಡುಸುಲೆ ಒಳ್ಳೆದಾತು.:-)

  [Reply]

  VA:F [1.9.22_1171]
  Rating: 0 (from 0 votes)
 2. ವೇಣೂರಣ್ಣ
  subrahmanya bhat

  ತುಂಬಾ ಲಾಯಕ್ಕಿದ್ದು . ಇಂಥ ಅನೇಕ ಬೆಳಕಿಂಗೆ ಬಾರದ್ದೆ ಇಪ್ಪ ಶ್ಲೋಕಂಗೋ ಇಕ್ಕು. ಪುರ್ಸೋತ್ತಪ್ಪಗ ಒಂದೊಂದೇ ಬರದರೆ ಎಲ್ಲೋರಿಂಗೂ ಅನುಕೂಲ ಆವ್ತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೇಣೂರಣ್ಣಶಾ...ರೀರಾಜಣ್ಣಕೊಳಚ್ಚಿಪ್ಪು ಬಾವಶ್ರೀಅಕ್ಕ°ಬೊಳುಂಬು ಮಾವ°ವಿಜಯತ್ತೆvreddhiವೆಂಕಟ್ ಕೋಟೂರುಯೇನಂಕೂಡ್ಳು ಅಣ್ಣಅನುಶ್ರೀ ಬಂಡಾಡಿಶೀಲಾಲಕ್ಷ್ಮೀ ಕಾಸರಗೋಡುಗಣೇಶ ಮಾವ°ಅಜ್ಜಕಾನ ಭಾವಅಡ್ಕತ್ತಿಮಾರುಮಾವ°ಡಾಗುಟ್ರಕ್ಕ°ಶುದ್ದಿಕ್ಕಾರ°ಎರುಂಬು ಅಪ್ಪಚ್ಚಿಜಯಗೌರಿ ಅಕ್ಕ°ನೆಗೆಗಾರ°ಚೂರಿಬೈಲು ದೀಪಕ್ಕಚೆನ್ನೈ ಬಾವ°ಶರ್ಮಪ್ಪಚ್ಚಿಕಜೆವಸಂತ°ಕೇಜಿಮಾವ°ಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ