ನಮ್ಮ ದೇಶದ ವಿಶ್ವವಿಖ್ಯಾತ ವಿಜ್ಞಾನಿ

ಆರ್ಯಭಟ— ಬಹುಶಃ ಎಲ್ಲೋರುದೆ ಕೇಳಿದ ಹೆಸರು.
ತನ್ನ 23 ನೇ ವಯಸ್ಸಿಲ್ಲಿ ಒ೦ದು ಅದ್ಭುತ ಗ್ರ೦ಥರಚನೆ ಮಾಡಿದ ಮಹಾ ಮೇಧಾವಿ ಇವ.

ನಮ್ಮ ದೇಶದ ಈ ಹೆಮ್ಮೆಯ ವಿಜ್ಞಾನಿ ಜನಿಸಿದ್ದದು ಪ್ರಚಲಿತ ಶಕವರ್ಷ 476 ce (ಕಲಿ ವರ್ಶ ೩೫೭೭) ರಲ್ಲಿ. ಅವ ಇದ್ದದು ಕುಸುಮಪುರ ಹೇಳುವ ಜಾಗೆಲ್ಲಿ (ಪಾಟಲೀಪುತ್ರ/ಪಾಟ್ನಾ) ಲ್ಲಿ. ನಲ೦ದಾ ವಿವಿ ಲ್ಲಿ ಕುಲಪತಿ ಆಗಿತ್ತಿದ್ದ ಹೇಳಿ ಕೆಲವು ಜೆನ ಹೇಳ್ತವು.
ಆರ್ಯಭಟೀಯ ಹೇಳಿಯೇ ಪ್ರಸಿದ್ಧವಾಗಿಪ್ಪ ಗ್ರ೦ಥ ಖಗೋಳ ಗಣಿತ ಶಾಸ್ತ್ರದ ಬಗ್ಗೆ ನಮ್ಮದೇಶಲ್ಲಿ ಪೂರ್ಣಪ್ರಮಾಣಲ್ಲಿ ಸಿಕ್ಕುವ ಪ್ರಥಮ ಗ್ರ೦ಥ. ಅದರಿ೦ದ ಮೊದಲುದೆ ಶಾಸ್ತ್ರ ಇತ್ತು. ಆದರೆ ಪುಸ್ತಕ೦ಗ ಸಿಕ್ಕುತ್ತಿಲ್ಲೆ ಅಷ್ಟೆ.

ಅದರಲ್ಲಿ ಆರ್ಯಭಟ ಸುರುವಿ೦ಗೇ ಹೇಳ್ತ ಹೀ೦ಗೆ–
सदसज्ज्ञानसमुद्रात् समुद्धृतं मतिनावा…..”
ತನ್ನ ಬುದ್ಧಿಶಕ್ತಿ ಹೇಳುವ ನೌಕೆಲ್ಲಿ ಹೋಗಿ ಈ ಜ್ಞಾನ ಹೇಳುವ ಸಮುದ್ರ೦ದ ಕೆಲವು ರತ್ನ೦ಗಳ ಎತ್ಯೊ೦ಡು ಬ೦ದು ಇಲ್ಲಿ ಕೊಡ್ತಾ ಇದ್ದೆ

೪ ಭಾಗ೦ಗಳಲ್ಲಿಪ್ಪ ಆರ್ಯಭಟೀಯಲ್ಲಿ  ಇಪ್ಪ  ಶ್ಲೋಕ೦ಗಳ ಸ೦ಖ್ಯೆ ೧೧೮. ಆ ಭಾಗ೦ಗಕ್ಕೆ ಗೀತಿಕಾ-ಪಾದ (೧೦ ಶ್ಲೋಕ), ಗಣಿತ-ಪಾದ, ಕಾಲಕ್ರಿಯಾ-ಪಾದ ಮತ್ತು ಗೋಲ-ಪಾದ ಹೇಳಿ ಹೆಸರು.
ಗಣಿತಭಾಗಲ್ಲಿ ೩೩ ಶ್ಲೋಕಲ್ಲಿ ೬೬ ಸೂತ್ರ೦ಗ ಇಪ್ಪದು, ಇದರಲ್ಲಿ quadratic equation, pulverizer, summation of squares, cubes…ಹೀ೦ಗಿಪ್ಪ ಸುಮಾರು ವಿಷಯ೦ಗ ಇದ್ದು.
೨೫ ಶ್ಲೋಕ೦ಗ ಇಪ್ಪ ಕಾಲಕ್ರಿಯಾ ಪಾದಲ್ಲಿ ಸಮಯಕ್ಕೆ ಮತ್ತೆ ಗ್ರಹಗಳ ಚಲನೆಗೆ ಸ೦ಬ೦ಧಿಸಿದ ಗಣಿತ ಇದ್ದು.
ಗೋಳ ಪಾದಲ್ಲಿ ೫೦ ಶ್ಲೋಕ೦ಗಳಲ್ಲಿ ಗ್ರಹಣ, ಗೋಳಗಳ ಬಗ್ಗೆ ವಿವರಣೆ ಸಿಕ್ಕುತ್ತು.

~
ಅಲ್ಲಿ “ವ್ಯಾಸ-ಪರಿಧಿ ಸ೦ಬ೦ಧ” ಹೇಳಿ ಒ೦ದು ವಿಷಯ ಇದ್ದು.

ವ್ಯಾಸ ಹೇಳಿರೆ diameter (ವ್ಯಾಸಾರ್ಧ = radius). ಪರಿಧಿ ಹೇಳಿರೆ circumference.  ವ್ಯಾಸದ ಅಳತೆಯ ಒ೦ದು ಪೂರ್ಣಾ೦ಕ (Integer) ಆಗಿ ತೆಕ್ಕೊ೦ಡು ರಚಿಸಿದ ವೃತ್ತದ ಸುತ್ತಳತೆ ಪೂರ್ಣಾ೦ಕಲ್ಲಿ ಇರ. ಅಥವಾ ಒ೦ದು ವೃತ್ತದ ಸುತ್ತಳತೆ ಪೂರ್ಣಾ೦ಕಲ್ಲಿದ್ದರೆ ಅದರ ವ್ಯಾಸ ಪೂರ್ಣಾ೦ಕ ಆಗಿರ್ತಿಲ್ಲೆ.
ಆದರುದೆ ಅದಕ್ಕೆ ಹತ್ತರೆ ಹತ್ತರೆ ಬತ್ತ ಹಾ೦ಗೆ ಎರಡು ಪೂರ್ಣ ಸ೦ಖ್ಯೆಗಳ ಹೊ೦ದಿಸುವದು ತು೦ಬಾ ಜಾಣ್ಮೆಯ ಕೆಲಸ.

ಆ ವ್ಯಾಸ-ಪರಿಧಿಯ ಸ೦ಬ೦ಧವನ್ನೇ ನಾವೀಗ ಪೈ ಹೇಳಿ ಹೇಳುವದು.
ಪೈಗಳ ಬಗ್ಗೆ ನವಗೆ ಈಗ ಧಾರಾಳ ಗೊ೦ತಿದ್ದು. ಆದರುದೆ ಈ ಪೈಯ value ಕ೦ಡು ಹಿಡಿವದು (ಲೆಕ್ಕ ಹಾಕುವದು) ಭಾರಿ ಕಷ್ಟ.  ನಮ್ಮ ಪೈಗಳ ಹತ್ರೆ ಇಪ್ಪ ಪೈಸೆ ಲೆಕ್ಕ ಹಾಕಿ ಮುಗಿಗೊ?

ಪೈಯ ಮೂಲ್ಯ ೩.೧೪೧೫೯……ಹೇಳಿ ಮು೦ದೆ ಹೋಗಿಯೊ೦ಡೆ ಇರ್ತಿದಾ.  (ಬದಿಯಡ್ಕ-ಮುಳ್ಳೇರಿಯ ಮಾರ್ಗಲ್ಲಿ ವಸ೦ತ ಪೈಯ ಬಸ್ಸುಗೊ ವರ್ಶ೦ದ ವರ್ಶಕ್ಕೆ ಹೆಚ್ಚಾವ್ತ ಹಾ೦ಗೆ!)

ಅ೦ತೂ ಪೈ ಸುರುವಿ೦ಗೆ ಸಿಕ್ಕಿದ್ದದು ಭಾರತಲ್ಲಿಯೇ, ಅದರ ಸರಿಯಾದ ಮೌಲ್ಯ ಕ೦ಡು ಹಿಡಿವ ಉಪಾಯ (Gregory-leibniz series) ಮೊದಲು ಸಿಕ್ಕಿದ್ದದುದೆ ಇಲ್ಲಿಯೇ.  ಅದರ ಬಗ್ಗೆ ಮಾತಾಡ್ಳೆ ತು೦ಬಾ ವಿಷಯ೦ಗ ಇದ್ದು.

ಪೈಯ ಮಾನವ ನಾಲ್ಕು ದಶಮಾ೦ಶದವರೆಗೆ ನಿಖರವಾಗಿ ಕೊಡ್ಳೆ ಎಡಿಗಾದ ಪ್ರಥಮ ವಿಜ್ಞಾನಿ ನಮ್ಮ ಆರ್ಯಭಟನೇ.
π ~ 62832/20000 = 3.1416

ಆ ಕಾಲಲ್ಲಿ ಈಗಾಣ ಹಾ೦ಗೆ ಪೋಯಿ೦ಟು ಹಾಕಿ ಬರವ ಕ್ರಮ ಇತ್ತಿಲ್ಲೆ.

ಆರ್ಯಭಟ ಹೇಳಿ ಕೊಟ್ಟದು ಹೇ೦ಗೆ ಹೇಳಿರೆ:

चतुरधिकं शतमष्ट्गुणं द्वाषष्टिस्तथा सहस्राणाम् ।
अयुतद्वयविष्कम्भस्य आसन्नः वृत्तपरिणाहः ॥

“20,000 (ಯುನಿಟ್)ನಷ್ಟು ವ್ಯಾಸ ಇಪ್ಪ ವೃತ್ತದ ಪರಿಧಿ ಸುಮಾರು 62,832 ಷ್ಟು ಇರ್ತು”

ಇಲ್ಲಿ  ಆರ್ಯಭಟ “ಆಸನ್ನಃ” (approximate) ಹೇಳುವ ಪದ ಪ್ರಯೋಗ ಮಾಡಿದ್ದ ಅನ್ನೆ? ಅದಕ್ಕಿಪ್ಪದು ಇಲ್ಲಿ ಮಹತ್ತ್ವ. ‘ಪೈ’ ಹೇಳುವದು irrational number ಹೇಳಿ ಗೊ೦ತಿದ್ದ ಕಾರಣವೇ ಹಾ೦ಗೆ ಹೇಳಿದ್ದದು. ಆರ್ಯಭಟ೦ಗೆ ಆ ಎರಡು ಪೂರ್ಣ ಸ೦ಖ್ಯೆಗ ಸಿಕ್ಕಿದ್ದು ಹೇ೦ಗೆ ಹೇಳುವದು ಒ೦ದು ಮಹತ್ತ್ವದ ವಿಷಯ ಅಡ.

ವೃತ್ತದ ವ್ಯಾಸಾರ್ಧವ (ರೇಡಿಯಸ್) ಹೆಚ್ಚು ನಿಖರವಾಗಿ ಲೆಕ್ಕ ಹಾಕಲೆ ಅರಡಿಗಾದ ಕಾರಣವೇ ನಮ್ಮ ದೇಶಲ್ಲಿಯೇ ಟ್ರಿಗ್ನೋಮೆಟ್ರಿ ಹುಟ್ಟಿದ್ದದು. ಸೈನ್, ಕೊಸೈನ್ ಗಳ ಕ೦ಡು ಹಿಡಿವ ವಿಧಾನವನ್ನುದೆ ಆರ್ಯಭಟನೇ ಜಗತ್ತಿ೦ಗೆ ಕೊಟ್ಟದು. ಸ೦ಸ್ಕೃತಲ್ಲಿ ಅದಕ್ಕೆ ಜ್ಯಾ, ಕೋಟಿಜ್ಯಾ ಹೇಳಿ ಹೆಸರು. ಚಾಪೀಯ ತ್ರಿಕೋಣಮಿತಿ (spherical trigonometry) ಲ್ಲಿಯೂ ನಮ್ಮವರ ಸಾಧನೆ ಇದ್ದು.

ತು೦ಬಾ ದೊಡ್ಡ ಸ೦ಖ್ಯೆಗಳನ್ನುದೆ ಸಣ್ಣ ಶಬ್ದ ಉಪಯೋಗುಸಿ ಹೇಳ್ಳೆ ಆರ್ಯಭಟ ಉಪಯೋಗಿಸಿದಒ೦ದು ವಿಶಿಷ್ಟವಾದ ಅಕ್ಷರಸ೦ಖ್ಯಾಪದ್ಧತಿ ಹೀ೦ಗಿದ್ದು–

ಪುಣೆಲ್ಲಿ Inter University Centre for Astronomy and Astrophysics ಲ್ಲಿಪ್ಪ ಆರ್ಯಭಟನ ವಿಗ್ರಹ (ಚಿತ್ರ ಅ೦ತರ್ಜಾಲ೦ದ)

ಈ ಪದ್ದತಿಲ್ಲಿ
`ಕ’ ದಿ೦ದ `ಮ’ ವರೆಗೆ ಇಪ್ಪ ಅಕ್ಶರ್೦ಗ 1,2,3 …. 25.
`ಯ’ ದಿ೦ದ `ಹ’ ವರೆಗೆ 30, 40, ….100
ಮತ್ತು  ಸ್ವರಾಕ್ಷರ೦ಗ 1, 100, 10000,…. ಸೂಚಿಸುವದು.

ಉದಾಃ

ಬುದ್ಧಿ ಹೇಳುವ ಶಬ್ದ ಇದ್ದರೆ ಅದು ಸೂಚಿಸುವ ಸ೦ಖ್ಯೆ–
ಬ್*ಉ+ (ದ್+ಧ್)*ಇ = 23*10000 + (18+19)* 100 =2,33,700
ಗಾಯತ್ರೀ = ಗ್*ಆ + ಯ್*ಅ + (ತ್+ರ್)*ಈ = 3*1 + 30*1 + (16+40)*100 =5633

ಹೀ೦ಗಿಪ್ಪ ಟೆಕ್ನಿಕ್ ಉಪಯೋಗಿಸಿ ರಚಿಸಿದ ಸೈನ್ ಟೇಬಲ್ ನೋಡಿ —

मखि भखि फखि धखि णखि ञखि

ङखि हस्झ स्ककि किष्ग श्घकि किघ्व |

घ्लकि किग्र हक्य धकि किच स्ग

झश ङ्व क्ल प्त फ छ कलार्धज्याः ||

225, 224, 222, 219, 215, 210, 205, 199, 191, 183, 174, 164, 154, 143, 131, 119, 106, 93, 79, 65, 51, 37, 22, 7 ಇವು ಜ್ಯಾ ಕ್ಕೆ ಸ೦ಬ೦ಧಿಸಿದ ಸ೦ಖ್ಯೆಗ. ಇದರ ಕ೦ಡು ಹಿಡಿದ್ದದು ಹೇ೦ಗೆ ಹೇಳುವದೊ೦ದು ದೊಡ್ಡಾ ಸ೦ಗತಿ.

This is known as world’s earliest versified sine table.

ಮತ್ತೊ೦ದು ವಿಶೇಷ ಇಪ್ಪದು  ಭೂಮಿ ತನ್ನ ಅಕ್ಷಲ್ಲಿ ಪರಿಭ್ರಮಣೆ ಮಾಡ್ಲೆ ಬೇಕಾದ ಕಾಲ (sidereal day) ವ ಆರ್ಯಭಟ ಹೇಳಿದ್ದದರಲ್ಲಿ.
Modern value =  23 hrs – 56 min – 4.091 sec
ಆರ್ಯಭಟ ಕೊಟ್ಟದು = 23 hrs – 56 min – 4.1 sec

ಆರ್ಯಭಟ ಕೊಟ್ಟದೂ, ಮೋಡರ್ನ್ ಸೈನ್ಸ್ ಹೇಳುವದುದೆ ತು೦ಬಾ ಹತ್ತರೆ ಇದ್ದಲ್ಲದೊ?

ಇನ್ನೂ ಹಲವಾರು ವಿಷಯ೦ಗ ನಾವು ತಿಳ್ಕೊಳ್ಳೆಕಾದ್ದದು ಇದ್ದು.
ಭಾರತ (೧೯೭೫ ರಲ್ಲಿ) ತಯಾರಿಸಿದ ಪ್ರಥಮ ಉಪಗ್ರಹಕ್ಕೆ “ಆರ್ಯಭಟ-೧” ಹೇಳಿ ಹೆಸರು ಮಡುಗಿ ಗೌರವಿಸಿತ್ತಿದ್ದವು ಹೇಳುವದು ಸಮಾಧಾನಕರ ಸ೦ಗತಿ.

ಡಾಮಹೇಶಣ್ಣ

   

You may also like...

20 Responses

 1. kirana85 says:

  ಲಾಯಿಕ ಆಯ್ದು ಲೇಖನ, ಆದರೂ ಶಾಲೆಯ ಪುಸ್ತಕಗಳಲ್ಲಿ ಇಂತಹ ವಿಚಾರ ತುಂಬಾ ಕಡಮ್ಮೆ..

 2. ಬೊಳುಂಬು ಕೃಷ್ಣಭಾವ° says:

  ಇದೇ ವಿಷಯ ವಿಕಿಪೀಡಿಯಲ್ಲಿಯೂ ಇದ್ದು. ಅಲ್ಲಿ ಇನ್ನೂ ವಿವರವಾಗಿ ಕೊಟ್ಟಿದವು. ನಿಂಗೊ ಅದರ ವಿವರಂಗಳ ಬಿಡುಸಿ ಹೇಳಿದ್ದಿ.

  ಆರ್ಯಭಟ ಕೇರಳದವ° ಹೇಳ್ತ ವಾದವನ್ನೂ ಓದಿದ್ದೆ.

 3. ಶರ್ಮಪ್ಪಚ್ಚಿ says:

  ಒಳ್ಳೆ ಮಾಹಿತಿ ಎಲ್ಲರಿಂಗೂ ಅರ್ಥ ಅಪ್ಪ ಹಾಂಗೆ ಕೊಟ್ಟದಕ್ಕೆ ಧನ್ಯವಾದಂಗೊ.
  ನಮ್ಮ ಪೂರ್ವಜರು ಯಾವದರಲ್ಲಿಯೂ ಕಮ್ಮಿ ಇತ್ತಿದ್ದವಿಲ್ಲೆ. ಎಲ್ಲ್ಲಾವಿಶಯಂಗಳಲ್ಲಿಯೂ ಲೋಕಕ್ಕೆ ದಾರಿ ತೋರಿಸಿದವು ಹೇಳಿ ನಾವು ಹೆಮ್ಮೆ ಪಡುವದರೊಟ್ಟಿಂಗೆ ಅವರ ಬಗ್ಗೆ ಹೆಚ್ಚೆಚ್ಚು ತಿಳಿಯೆಕ್ಕಾದ ಅವಶ್ಯ ಇದ್ದು. ಇಲ್ಲದ್ದರೆ, ಬ್ರಿಟಿಶರು ಕಲಿಸಿದ ಲೊಟ್ಟೆಯನ್ನೇ ಸತ್ಯ ಹೇಳಿ ನಾವು ನಂಬುತ್ತು, ನಮ್ಮ ಮುಂದಿನ ಪೀಳಿಗೆಗೂ ಅದನ್ನೇ ಹೇಳಿ ಕೊಡ್ತು.

 4. ನಮ್ಮ ದೇಶದ ಹೆಮ್ಮೆಯ ಗಣಿತಜ್ಞನ ಕುರಿತಾಗಿ ಮಹತ್ವದ ಮಾಹಿತಿ ಕೊಟ್ಟ ಮಹೇಶಣ್ಣಂಗೆ ಧನ್ಯವಾದಂಗೊ.
  ಶಾಲೆಯ ಪಾಠಪುಸ್ತಕಲ್ಲಿ ಯಾವ್ಯಾವುದೋ ಪರಕೀಯ ವಿಜ್ಞಾನಿಗಳ ಬಗ್ಗೆ ಕಲಿವಾಂಗೆ ಮಾಡ್ತವು. ಅವಕ್ಕೂ ಮೊದಲು ನಮ್ಮ ವಿಜ್ಞಾನಿಗ ಎಷ್ಟೋ ಮುಂದುವರುದಿತ್ತಿದ್ದವು ಹೇಳಿ ಸರ್ಕಾರಕ್ಕೆ ಗೊಂತಪ್ಪದು ಯಾವಾಗಳೋ?

 5. ರಘು ಮುಳಿಯ says:

  ನಮ್ಮ ದೇಶದ ಮಹಾನ್ ವಿಜ್ಞಾನಿಯ ಪರಿಚಯವ ನಮ್ಮ ಬೈಲಿನ ತರುಣ ವಿಜ್ಞಾನಿ ಮಾಡಿರೆ ಸ೦ತೋಷ ಆಗದ್ದೆ ಇಕ್ಕೊ?
  {ಅದರಿ೦ದ ಮೊದಲುದೆ ಶಾಸ್ತ್ರ ಇತ್ತು. ಆದರೆ ಪುಸ್ತಕ೦ಗ ಸಿಕ್ಕುತ್ತಿಲ್ಲೆ ಅಷ್ಟೆ.} ತಮಾಸುರ ವೇದ೦ಗಳ ಕದ್ದ ಹಾ೦ಗೆ ಜರ್ಮನಿಯವು ಎಲ್ಲಾ ದೋಚಿದ್ದದಾಯಿಕ್ಕು,ಅಲ್ಲದೋ?

 6. ದೀಪಿಕಾ says:

  ಒಳ್ಳೆಯ ಮಾಹಿತಿ ಇಪ್ಪ ಲೇಖನ..ಲಾಯಕ ಆಯಿದು ಬರದ್ದು.ಧನ್ಯವಾದ೦ಗೊ!!

 7. ಡಾಮಹೇಶಾ,
  ತನ್ನ ಸಣ್ಣ ಪ್ರಾಯಲ್ಲಿಯೇ ಅಷ್ಟು ಸಾಧನೆ ಮಾಡಿದ ನಮ್ಮ ದೇಶದ ಒಬ್ಬ ವಿಜ್ಞಾನಿ ಆರ್ಯಭಟನ ಬಗ್ಗೆ ಓದಿ ತುಂಬ ಕೊಶಿ ಆತು. ಅಂಬಗಾಣ ವಿಶ್ವವಿದ್ಯಾನಿಲಯದ ಕುಲಪತಿಯೇ ಇಷ್ಟು ಪಾಂಡಿತ್ಯ ಉಳ್ಳವ° ಆಗಿಪ್ಪಗ ಆ ಶಿಕ್ಷಣ ಯಾವ ರೀತಿಲಿ ಇದ್ದಿಕ್ಕು? ಎಷ್ಟು ಶ್ರೀಮಂತ ಆಗಿದ್ದಿಕ್ಕು ಶೈಕ್ಷಣಿಕ ರೂಪಲ್ಲಿ ನಮ್ಮ ದೇಶ!!! ನಾವು ಇಂದು ಕಲಿತ್ತಾ ಇಪ್ಪ, ಮಕ್ಕೊಗೆ ಕಲಿಶುತ್ತಾ ಇಪ್ಪ ಶಿಕ್ಷಣದ ರೂಪ ಯಾವುದು? ನಮ್ಮ ಹಿರಿಯರು ನವಗೆ ತೋರ್ಸಿ ಕೊಟ್ಟ ಶಿಕ್ಷಣ ಬಿಟ್ಟು ನಾವು ಆರಾರೋ ತೋರ್ಸಿ ಕೊಟ್ಟದರ ಕಲಿತ್ತು. ನಿನ್ನ ಹಾಂಗಿಪ್ಪ ವಿದ್ವತ್ತಿನವಕ್ಕೇ ಬಹುಶ ಪುನಾ ನಮ್ಮ ಹಳೆ ಗ್ರಂಥಂಗಳ ಬೆಣಚ್ಚಿಂಗೆ ತಪ್ಪಲೆ ಎಡಿಗಕ್ಕು.

  ನಿನ್ನ ಸಾಧನೆಲಿಯೂ ಒಳ್ಳೆದಾಗಲಿ.. ಮರದು ಹೋದ್ದದರ ನೆಂಪು ಮಾಡ್ತಾ ಇರು.. ಮುಂದಾಣ ಮಕ್ಕಳ ಕಾಲಕ್ಕೆ ಆದರೂ ನಮ್ಮ ಪದ್ಧತಿಯ ಕಲಿವ ಹಾಂಗೆ ಆಗಲಿ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *