Oppanna.com

ಅಂತರ್ಜಾಲೀಯ ಸಂಸ್ಕೃತ ಅನುಶಿಕ್ಷಣಮ್ (Online Samskrit Tutorials)

ಬರದೋರು :   ಡಾಮಹೇಶಣ್ಣ    on   31/05/2013    3 ಒಪ್ಪಂಗೊ

ಅನುಶಿಕ್ಷಣ – ಸಂಸ್ಕೃತದ ಸ್ವಾರಸ್ಯಕ್ಕಾಗಿ

  • ಬಹಳಷ್ಟು ಮಕ್ಕೊಗೆ ಕ್ಲಾಸಿಲ್ಲಿ ಸಂಸ್ಕೃತ ಅರ್ಥ ಆವ್ತಿಲ್ಲೆ. ಈ ಅಕಾರಾಂತ ಹೇಳಿರೆ ಎಂತದು? ಲಕಾರ ಎಂತದು? ವಿಭಕ್ತಿ ಎಂತದೋ? ಉಮ್ಮಪ್ಪ.
  • ಬೇರೆ ಸಬ್ಜೆಕ್ಟಿಂಗೆಲ್ಲ ಸ್ಟಡಿ ಮೆಟೀರಿಯಲ್ ಗ ಬೇಕಾಷ್ಟು ಇದ್ದು.  ಹಾಂಗೆ ಸಂಸ್ಕೃತಕ್ಕೆ ಇರ್ತಿಲ್ಲೆ. ಇದ್ದರುದೆ ಅರ್ಥ ಆವ್ತ ಹಾಂಗಿರೆಕನ್ನೆ!
  • ಅಪ್ಪ-ಅಮ್ಮಂಗೆ ಮಕ್ಕೊ ಶಾಲೆಲ್ಲಿ ಸಂಸೃತ ಕಲಿಯೆಕು ಹೇಳಿ ಆಗ್ರಹ ಇರ್ತು. ಮಕ್ಕೊ ಸಂಸ್ಕೃತ ಕಲ್ತು ಸಂಸ್ಕೃತಿ ಗೊಂತಾಗಲಿ ಹೇಳಿ. ಆದರೆ ಬೇರೆ ಸಬ್ಜೆಕ್ಟುಗಳ (ಇಂಗ್ಲಿಶ್, ಗಣಿತ…) ಹೇಳಿ ಕೊಡ್ಳೆ ದೊಡ್ಡವಕ್ಕೆ (ಅಪ್ಪ, ಅಮ್ಮ, ಅಣ್ಣ, ಅಕ್ಕ) ಅರಡಿತ್ತು. ಸಂಸ್ಕೃತಕ್ಕೆ ಎಂತ ಮಾಡುವದಪ್ಪಾ! ಹೇಳಿ ಅವಕ್ಕೆ ತಲೆಬೆಶಿ. “ಎನಗೆ ಗೊಂತಿದ್ದರೆ ಹೇಳಿ ಕೊಡ್ಳಾವ್ತಿತ್ತು” ಹೇಳಿ ಅನ್ಸುತ್ತು ಅವಕ್ಕೆ.
  • ಶಿಕ್ಷಕರಿಂಗೆ – ಸಂಸ್ಕೃತ ಪಾಠವ ಆಕರ್ಷಕವಾಗಿ ಮಾಡ್ವದು ಹೇಂಗಪ್ಪಾ! ಆಧುನಿಕ ಪದ್ಧತಿಯ ಉಪಯೋಗುಸಿ ಸಂಸ್ಕೃತವ ಅರ್ಥ ಮಾಡುಸುವ ಉಪಾಯ ಇಲ್ಲೆ ಹೇಳಿ ಚಿಂತೆ! ಶಾಲೆ ಪಿರಿಡಿಲ್ಲಿ ಸಿಲಬಸ್ಸು ಮುಗುಸೆಕೋ, ಪಾಠ ಮಾಡೆಕೋ ಗೊಂತಾವ್ತಿಲ್ಲೆಡಾ.
  • ಆಸಕ್ತರಿಂಗೆ – ಕಲಿಯೆಕು ಹೇಳಿ ಇದ್ದು. ಸುಲಭವಾಗಿ ಅರ್ಥ ಆವ್ತ ಹಾಂಗಿಪ್ಪ ಪಾಠಂಗ ಎಲ್ಯಾರು ಇದ್ದೊ? ಎನ್ನ ಪುರುಸೊತ್ತಿಂಗೆ ಹೊಂದ್ಯೊಂಡು ಕಲಿವ ಹಾಂಗಿಪ್ಪದು ಎಂತಾರಿದ್ದೊ? ಹೇಳಿ ಸಮಸ್ಯೆ.

ಈ ಮೇಲೆ ಹೇಳಿದ ಎಲ್ಲಾ ವ್ಯಕ್ತಿಗಕ್ಕುದೆ ಸಮಾಧಾನ/ಉತ್ತರ ಕೊಡ್ಳೆ ಒಂದು ಪ್ರಯತ್ನ ಮಾಡಿದ್ದು. ಅದುವೇ “ಸಂಸ್ಕೃತ ಅನುಶಿಕ್ಷಣ”.  ಇದರ ತಯಾರು ಮಾಡಿದ್ದದು  “ಸಂಸ್ಕೃತ ಸಂವರ್ಧನ ಪ್ರತಿಷ್ಠಾನ”.

ಸಂಸ್ಕೃತ ಶಿಕ್ಷಣದ ಗುಣಮಟ್ಟವ ಹೆಚ್ಚುಸುವದು “ಸಂಸ್ಕೃತ ಸಂವರ್ಧನ ಪ್ರತಿಷ್ಠಾನ” ದ ಕಾರ್ಯಚಟುವಟಿಕೆಗಳಲ್ಲಿ ಒಂದು. ಸಂಸ್ಕೃತ ಶಿಕ್ಷಣ ರುಚಿಕರವಾಗಿರೆಕು, ಹೆಚ್ಚು ಹೆಚ್ಚು ವಿದ್ಯಾರ್ಥಿಗಳ ಆಕರ್ಷಿಸೆಕು ಹೇಳಿ ಎಲ್ಲೋರುದೆ ಬಯಸುತ್ತವು. ಆ ಆಸೆಯ ಪೂರೈಸಲೆ ಬೇಕಾಗಿ ಈಗ “ಸಂಸ್ಕೃತ ಅನುಶಿಕ್ಷಣಮ್” ಹೇಳಿ ಒಂದು ಯೋಜನೆ ಕಾರ್ಯಗತಗೊಂಡಿದು. ಅದರ ಪರಿಣಾಮಸ್ವರೂಪವಾಗಿ – ಸಂಸ್ಕೃತ ಪಾಠಪುಸ್ತಕಕ್ಕೆ ಆಡಿಯೋ-ವೀಡಿಯೋ ಟುಟೋರಿಯಲ್ (ಶ್ರವ್ಯ-ದೃಶ್ಯ-ಅನುಶಿಕ್ಷಣ) ತಯಾರಾವ್ತಾ ಇದ್ದು.

ಈ ಅನುಶಿಕ್ಷಣದ ಮಹತ್ತ್ವ ಎಂತ? ಹೇಳಿರೆ –

೧. ಇಲ್ಲಿ ಸಂಸ್ಕೃತದ ಸ್ಪಷ್ಟ ಉಚ್ಚಾರಣೆ ಕೇಳ್ಳಕ್ಕು. ಒಬ್ಬ ಶಿಕ್ಷಕನ ಧ್ವನಿ ಕೇಳ್ತಾ ಇರ್ತು. ನೈಜ ಸಂಸ್ಕೃತದ ಆಸ್ವಾದನೆ ಮಾಡ್ಳಕ್ಕು.

೨, ಸಂಸ್ಕೃತವ ಸುಲಭಕ್ಕೆ ಅರ್ಥ ಮಾಡ್ಯೊಂಬ ಕೆಲವು ಉಪಾಯಂಗ ಇಲ್ಲಿ ಸಿಕ್ಕುತ್ತು.

೩.  ಪಾಠವ ಮತ್ತೆ ಮತ್ತೆ ಕೇಳಿ ನೋಡಿ ಸಂಶಯ ದೂರ ಮಾಡ್ಳಕ್ಕು. ಇದು ಮಕ್ಕೊಗೆ ಸ್ವಾಧ್ಯಾಯ ಸಾಮಗ್ರಿ (ಸೆಲ್ಫ್ ಸ್ಟಡಿ ಮೆಟೀರಿಯಲ್). ಪೂರಕ ಅಧ್ಯಯನ ಸಾಮಗ್ರೀ.

೪. ಪಾಠವ ಅರ್ಥೈಸಲೆ ಬೇಕಾದ ಹಾಂಗೆ ಪೂರಕವಾಗಿ ಚಿತ್ರಂಗಳ ಕೊಟ್ಟಿದು.

೫. ಈ ಅನುಶಿಕ್ಷಣ ಕೇವಲ ಸಂಸ್ಕೃತ ಕಲಿವ ಮಕ್ಕೊಗೆ ಮಾಂತ್ರ ಅಲ್ಲ, ಪೋಷಕರಿಂಗೆ, ಅಧ್ಯಾಪಕರಿಂಗುದೆ ಉತ್ತಮ ಉಪಕರಣ.

೬. ಶಾಲಾ ವಿದ್ಯಾರ್ಥಿಗೆ ಮಾಂತ್ರ ಅಲ್ಲ, ಸಾರ್ವಜನಿಕರಿಂಗುದೆ ಅರ್ಥ ಅಪ್ಪ ನಮುನೆಯ ಪಾಠಂಗ ಇಲ್ಲಿದ್ದು.

೭. ಯಾವುದೇ ಭಾಷೆಯ ಕಲಿವಲೆ ಹೆಚ್ಚು ಹೆಚ್ಚು ವಾಕ್ಯಂಗಳ ಆ ಭಾಷೆಲ್ಲಿ ಕೇಳೆಕು. ಅದರ ಅವಕಾಶ ಈ ಅನುಶಿಕ್ಷಣಲ್ಲಿದ್ದು. ಬಹುಶಃ ಇದು ಪ್ರಮುಖ ವೈಶಿಷ್ಟ್ಯ.

ಈಗ ಪ್ರಥಮವಾಗಿ  ಎನ್ ಸಿ ಇ ಆರ್ ಟಿ / ಸಿ ಬಿ ಎಸ್ ಇ ಪಾಠ್ಯಕ್ರಮದ ಆರನೇ ಕ್ಲಾಸಿನ ಪಾಠಪುಸ್ತಕಕ್ಕೆ (ರುಚಿರಾ) ಟುಟೋರಿಯಲ್ ತಯಾರಾಯಿದು. ಇಲ್ಲಿ ಹದಿನೈದು ಪಾಠಂಗಕ್ಕೆ ಅನುಶಿಕ್ಷಣ ತಯಾರಾಯಿದು. ಈಗ ವೀಡಿಯೋ ಟುಟೋರಿಯಲ್ ಗಳ ಸಂಖ್ಯೆ ಐವತ್ತು ದಾಂಟಿದ್ದು. ಇನ್ನು ಮುಂದೆ ಎಲ್ಲಾ ಪಾಠಪುಸ್ತಕಂಗಳ ಅನುಶಿಕ್ಷಣ ನಿರ್ಮಾಣ ಆಗಿ  ವೆಬ್ಸೈಟಿಲ್ಲಿ ಸಿಕ್ಕುಗು.

ಅನುಶಿಕ್ಷಣದ ವಿಭಾಗಂಗ –

೧. ಪೂರ್ವಪೀಠಿಕೆ/ಭೂಮಿಕಾ (Introduction) –– ಪಾಠವ ಅರ್ಥಮಾಡಿಗೊಂಬಲೆ ಬೇಕಾದ ಪೂರ್ವಸಿದ್ಧತೆ. ಇಲ್ಲಿ ಒಂದು ಅಥವಾ ಎರಡು ಭಾಗಂಗ ಇರ್ತು. ಇದು ಪಾಠ ಅರ್ಥ ಅಪ್ಪಲೆ ಅತ್ಯವಶ್ಯ.

೨. ಪಾಠವಾಚನ ಮತ್ತು ವಿವರಣೆ (Reading and Explanation) – ಪಾಠವ ಓದುವದು/ಉಚ್ಚಾರಣೆ. ಮತ್ತೆ ಪಾಠಲ್ಲಿಪ್ಪ ಪ್ರತಿವಾಕ್ಯದ ವಿವರಣೆ.

೩. ಅಭ್ಯಾಸಭಾಗ (Excersice) – ಪಾಠಲ್ಲಿ ಕಡೇಂಗೆ ಕೊಟ್ಟ ಅಭ್ಯಾಸ ಭಾಗಕ್ಕೆ ಉತ್ತರ ಬರವದು ಹೇಂಗೆ ಹೇಳಿ ಅನುಶಿಕ್ಷಣದ ಮಾಷ್ಟ್ರು ಹೇಳಿ ಕೊಡ್ತವು.

ಹೀಂಗೆ ಪ್ರತಿ ಪಾಠಕ್ಕೆ ಎರಡರಿಂದ ನಾಲ್ಕು ಅನುಶಿಕ್ಷಣಂಗ ಮಾಡಿದ್ದು.

ಪಾಠದ ಸ್ತರ (ಲೆವೆಲ್) ಕ್ರಮಶಃ ಹೆಚ್ಚಾವ್ತಾ ಹೋವ್ತು. ಹಾಂಗಾಗಿ ಒಂದೊಂದೇ ಪಾಠವ ನೋಡಿಯೊಂಡು ಕ್ರಮಲ್ಲಿ ಮುಂದೆ ಹೋಯೆಕು, ಅಷ್ಟಪ್ಪಗ ಸರೀ ಅರ್ಥ ಅಕ್ಕು. ಯಾವುದಾದರೂ ಪಾಠ ಅರ್ಥ ಆವ್ತಿಲ್ಲೆ ಹೇಳಿ ಆದರೆ ಪುನಾ ಹಿಂದೆ ಹೋಗಿ ಕಲ್ತಿಕ್ಕೆ ಮುಂದೆ ಬನ್ನಿ.

ಬನ್ನಿ. ಅನುಶಿಕ್ಷಣ ಪ್ರವೇಶಿಸಿ, ವೀಣಾನಾದ ನಿಂಗಳ ಸ್ವಾಗತ ಮಾಡ್ತು.

ಈ ಎಡ್ರೆಸ್ಸಿಲ್ಲಿ –  http://samskrittutorial.in/ . ಅಲ್ಲಿ Tutorials ಹೇಳುವಲ್ಲಿ ೧೫ ಪಾಠಂಗಳ ಎಲ್ಲಾ ಭಾಗಂಗ ಸಿಕ್ಕುತ್ತು.anushikshanam

ಅಥವಾ ಇಲ್ಲಿಗೆ ಹೋಗಿ – http://samskrittutorial.in/ruchirapart1

ಇದರ ನೋಡಿ, ನಿಂಗ ಕಲಿಯಿರಿ, ಕಲಿವ ಮಕ್ಕೊಗೆ ಹೇಳಿ, ಮಿತ್ರರಿಂಗೆ ತಿಳುಶಿ, ನೆರೆಕರೆಲ್ಲಿ ಹೇಳಿ, ಎಲ್ಲೋರಿಂಗೆ ಹೇಳಿ ಪ್ರಚಾರ ಮಾಡಿ. ಸಂಸ್ಕೃತ ಎಲ್ಲೋರಿಂಗುದೆ ಸುಲಭವಾಗಿ ಸಿಕ್ಕಲಿ.

ಇದು ಹೇಂಗೆ ಪ್ರಯೋಜನ ಆವ್ತು ಹೇಳಿ ಅನುಭವ ತಿಳುಸಿ, ಹೇಂಗಾಯೆಕು ಹೇಳಿ. ನಿಂಗಳ ಅಭಿಪ್ರಾಯ/ಪ್ರತಿಪುಷ್ಟಿ (ಫೀಡ್ ಬೇಕ್) ಅತಿ ಮುಖ್ಯ.

ಇದಾ, ಇದರಿಂದ ಶುರುಮಾಡಿ:

http://www.youtube.com/watch?v=dALt1f1JMVg

ಇಲ್ಲಿ ಅಕಾರಾಂತ ಶಬ್ದ ಹೇಳಿರೆ ಎಂತದು? ಎಂತಕೆ ಹಾಂಗೆ ಹೇಳುವದು?

ಸಂಸ್ಕೃತಲ್ಲಿ ಪುಂಲಿಂಗ ಶಬ್ದಂಗ ಹೇಂಗಿರ್ತು? ಹೇಂಗೆ ಗೊಂತಪ್ಪದು?

ಕ್ರಿಯಾಪದಲ್ಲಿ ಏಕವಚನ, ದ್ವಿವಚನ, ಬಹುವಚನ ಹೇಂಗಿರ್ತು? ಅದರ ಹೇಂಗೆ ನೆಂಪು ಮಡುಗುವದು? ಹೇಂಗೆ ವಾಕ್ಯ ಮಾಡುವದು? ಹೇಳಿ ಉಪಾಯ ಹೇಳಿ ಕೊಡ್ತವು.

ಅನುಶಿಕ್ಷಣ ನೋಡಿ, ಸಂಸ್ಕೃತದ ಸ್ವಾರಸ್ಯವ ಅನುಭವಿಸಿ.

ಡಾಮಹೇಶಣ್ಣ
Latest posts by ಡಾಮಹೇಶಣ್ಣ (see all)

3 thoughts on “ಅಂತರ್ಜಾಲೀಯ ಸಂಸ್ಕೃತ ಅನುಶಿಕ್ಷಣಮ್ (Online Samskrit Tutorials)

  1. ಸ೦ಸ್ಕೃತ ಕಲಿವಲೆ ಸುಲಭ ದಾರಿ ಆತು. ವಿವರವಾಗಿ ನೋಡೆಕ್ಕಿದರ.ಧನ್ಯವಾದ ಮಹೇಶ.

    1. ಆತ್ಮೀಯ ಮಹೋದಯ ನಮಸ್ಕಾರಮಸ್ತು.ಧನ್ಯೋಸ್ಮಿ.

  2. ಉಪಯುಕ್ತ ಮಾಹಿತಿಯ ನೀಡಿದ್ದಕ್ಕೆ ವಿಶೇಷ ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×