`ಒಪ್ಪ’ದ ಒಪ್ಪಂದ..!

January 19, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮೊನ್ನೆ ಹಾಂಗೆ ಒಪ್ಪಣ್ಣನ ಜಾಗೆ ನೋಡಿಕ್ಕಿ ಬಪ್ಪ ಹೇಳಿ ಹೋಗಿಯಪ್ಪಗ, ಒಪ್ಪಣ್ಣ ರಜ್ಜ ಗಡಿಬಿಡಿಲ್ಲಿತ್ತಿದ್ದ.! ನೆಟ್ಟಿ ಕಳ
ಎಂತಡ ಕೇಳಿರೆ, ಜೆನ ತುಂಬ ಬತ್ತವಡ ಈಗ – ಜಾಗೆ ಮಾಡಿದ್ದದರ ನೋಡ್ಲೆ!
ಒಪ್ಪಣ್ಣಂದು ಒಂದಿದ್ದು-  ‘ ಜಾಗೆ ತೋರುಸಿಕ್ಕಿ ಹಾಂಗೆ ಸುಮ್ಮನೆ ಕಳುಸಿರಾಗ’ ಹೇಳಿ.
ನಮ್ಮ ಕ್ರಮದ ಹಾಂಗೆ, ನಮ್ಮಲ್ಲಿಗೆ ಬಂದವರ ಹೊಟ್ಟೆ (ಮನಸ್ಸು) ತುಂಬುಸಿ ಕಳುಸೆಕು ಹೇಳಿ.
ಅದುದೆ ಬಗೆ ಬಗೆಯ ಬೆಂದಿ, ಮೇಲಾರ ಹೀಂಗಿಪ್ಪದೆಲ್ಲ ಇರೆಕು ಹೇಳಿ ಒಪ್ಪಣ್ಣನ ಆಶೆ. ಎಲ್ಲವುದೇ ಊರ ತರಕಾರಿದೇ ಇದ!
ತಾನು ಮಾತ್ರ ಒಳ್ಳೆ ತರಕಾರಿ ಬೆಳೆಶಿ ದೊಡ್ಡ ಜೆನ ಆದರೆ ಸಾಕು ಹೇಳಿ ಅಲ್ಲ, ಎಲ್ಲೋರು ಊರ ನೆಟ್ಟಿಕಾಯಿ ಬೆಳೆಸೆಕು, ಬೇರೆಯವಕ್ಕುದೆ ಹಂಚೆಕು, ಎಲ್ಲರಲ್ಲೂ ಅಮೃತ ಸತ್ತ್ವ ಇರೆಕು ಹೇಳಿ ಒಂದು ಭಾವನೆ ಅಣ್ಣಂಗೆ.
ಹಾಂಗೆ ಹಿತ್ಲಿಲ್ಲಿ ಬೆಳದ್ದದರ ನೆರೆಕರೆಯವೆಲ್ಲ ತಂದರೆ ಮತ್ತೂ ಒಳ್ಳೇದು ಹೇಳಿಯುದೆ ಹೇಳಿದ್ದನಡ.

ಆ ದಿನ ಆನು ನೆಟ್ಟಿ ತತ್ತೆ ಹೇಳಿ ಹೇಳಿದ ದೊಡ್ಡ ಬಾವ ಕಸ್ತಲಪ್ಪಗ ಫೋನು ಮಾಡಿದವಡ.
ಅದೆನ್ತಾತಡ ಹೇಳಿರೆ- ದೊಡ್ಡ ಬಾವಂಗೆ ಶಾಲೆಲ್ಲಿ ಸಮ್ಮೇಳನದ ಗಡಿಬಿಡಿ (ನೆಂಟ್ರು ಸುಮಾರು ಜೆನ!).
ಹಾಂಗೆ ಉದಿಯಪ್ಪಗ ಬೈಕಿನ ಪೆಟ್ಟಿಗೆಲ್ಲಿ (ಶಾಲೆ ಬಿಟ್ಟಿಕ್ಕಿ ಒಪ್ಪಣ್ಣಂಗೆ ಕೊಡ್ಲೆ ಹೇಳಿ) ಹಾಕೆಕಾದ ತರಕಾರಿ ಮನೆಲ್ಲೇ ಬಾಕಿ ಆತೋ, ಅಲ್ಲ ಹಿಂದೆ ಕಟ್ಟಿದ್ದದು ದಾರಿಲ್ಲಿ ಬಿದ್ದತ್ತೋ (ಚಡವು ಹತ್ತುವಗ), ಎಂತಾತೋ ಅರಡಿಯ.
ಅಲ್ಲ, ಶಾಲೆಲ್ಲಿ ‘ಸಾಹಿತ್ಯ ಸಮ್ಮೇಳನ’ಕ್ಕೆ ಬಂದವಕ್ಕೆಲ್ಲ ಊಟಕ್ಕೆ ದೊಡ್ದಬಾವಂಗೆ ಉಸ್ತುವಾರಿ ಇದ್ದೋ, ಅದು ಮುಗಿವಲ್ಲಿವರೆಗೆ ದೊಡ್ಡ ಬಾವಂಗೆ ದಾಕ್ಷಿಣ್ಯ ಮಾಡುಸುವದು ಬೇಡ ಹೇಳಿ ಆತು ಒಪ್ಪಣ್ಣಂಗೆ.

ಮನೆಂದ ಅಮ್ಮ ಒಪ್ಪಣ್ಣಂಗೆ ಹೇಳಿ ಕೊಟ್ಟದೊಂದು ಕಟ್ಟ ಎನ್ನ ಬೇಗಿಲ್ಲಿದ್ದತ್ತು.
ಅದು ಲಾಯಕ ಇದ್ದೋ ಇಲ್ಲೆಯೋ ಹೇಳಿ ಮೊದಾಲು ಕೊಟ್ಟಿದಿಲ್ಲೆ – ಕೃಷ್ಣ ದೇವರತ್ರೆ ಸುದಾಮಂಗೆ ಆದ ಹಾಂಗೆ ಆದ್ದದು!

ಒಪ್ಪಣ್ಣಂಗೆ ಗೊಂತಾಗದ್ದೆ ಇಪ್ಪದಿದ್ದೋ? ಬೇಗಿನ ಮುಚ್ಚಲು ತೆಗದು ‘ನಿಂಗಳಲ್ಲಿ ಪಚ್ಚಡಿ, ತಂಬುಳಿ, ಸಾರೋ ಎಂತದೋ ಮಾಡ್ತಡ. ಅದು ಈ ಸೊಪ್ಪಿಂದಾ? ಅದರ ಕಳಕ್ಕೆ ಹಾಕಲಾಗದೋ?’
‘ಇದೆಂತದಪ್ಪ! ಬಾವಿಂದ ಎತ್ತಿದ ನೀರು ಬಾವಿಗೇ ಎರದ ಹಾಂಗೆ? ಕಳ ಮಾಡ್ಲೆ ಗುಡ್ದೆಂದ ಸೊಪ್ಪು ಸಿಕ್ಕಿದ್ದಿಲ್ಲೆಯ? ಅತವಾ ಲಾಯಕ ಇಲ್ಲೆ ಹೇಳಿ ತಮಾಷೆಯೋ ಏನೋ?’ ಎಂತೆಲ್ಲ ಆಲೋಚನೆ ಬಂತು.

ಛೆ! ಆಗಪ್ಪ, ಒಪ್ಪಣ್ಣ ಹಾಂಗಿಪ್ಪದೆಲ್ಲ ನೆನಸುಗು ಹೇಳಿ ಮನಸ್ಸಿಲ್ಲಿ ಎಂತ, ಕನಸಿಲ್ಲಿಯೂ ಬಪ್ಪಲಾಗ.!

“ಮಹೇಶಣ್ಣ ಮಾಂತ್ರ ಪಚ್ಚಡಿ ಯ ರುಚಿ ನೋಡಿರೆ ಸಾಲ, ಬೈಲಿಲ್ಲಿ ಇಪ್ಪೊರಿಂಗೆಲ್ಲ ಗೊಂತಾವುತ್ತ ಹಾಂಗೆ ಕಳ ಮಾಡಿ ಬೆಳಸುವ” ಹೇಳಿ ಒಪ್ಪಣ್ಣನ ದೊಡ್ಡ ಮನಸ್ಸು.

ಅದಪ್ಪು, ಆದರೆ ಕಳ ಮಾಡ್ಲೆ ಜಾಗೆ ಎಲ್ಲಿದ್ದು?
ಎಂಗಳಲ್ಲಿ ಮೊನ್ನೆ ಅಡಕ್ಕೆ ಹಾಕಲೇಳಿ ಜಾಲೆಲ್ಲ ಕೆತ್ತಿ ಸಮ ಮಾಡಿಯಪ್ಪಗ ಒಂದು ತೊಂಡೆ ಚೆಪ್ಪರ, ಎರಡು ಬೆಂಡೆ ಸೆಸಿಯುದೆ ಬಿಟ್ಟು ಎಲ್ಲ ತೆಗದ್ದವು ಹೇಳಿ ಒಪ್ಪಣ್ಣಂಗೆ ಗೊಂತಾಯಿದೋ ಏನೋ!
(ಸಾದಾರಣ ಎಲ್ಲ ಕಡೆಲ್ಲಿಯುದೆ ಹಾಂಗೆ ಅಲ್ಲದೋ?)
ಹಾಂಗಾಗಿ “ನಮ್ಮ ಹೊಸ ಜಾಗೆಲ್ಲಿ ಮಾಡ್ಲಕ್ಕು ಮಹೇಶಣ್ಣೋ! ” ಹೇಳಿದ ಒಪ್ಪಣ್ಣ.
“ಆಗದ್ದೆ ಇಲ್ಲೆ, ಹೊಸ ಜಾಗೆಲ್ಲಿ ಹೊಸ ಮಣ್ಣಿಲ್ಲಿ ಸೊಕ್ಕಿ ಬೆಳಗು ತರಕಾರಿ” – ಹೇಳಿಕ್ಕಿ ಆನಿತ್ಲಾಗಿ ಬಂದೆ.

ದಿನ ಕಳುತ್ತು. ಒಂದು ದಿನ ಬಂತದಾ ಫೋನು. ಆರದ್ದು?.. ಒಪ್ಪಣ್ಣಂದು
”ಆ ಜಾಗೆಲ್ಲಿ ಒಂದು ಕರೆಲ್ಲಿ ಒಂದು ಕಳ (ಅಂಕಣ) ಮಾಡಿ ಮಡುಗಿದ್ದೆ. ತೆಕ್ಕೊಂಡು ಬಂದರೆ ಸೆಸಿ ನೆಡ್ಳಕ್ಕು”. ಒಪ್ಪಣ್ಣನ ಹೃದಯದ ಹಾಂಗೆ ಜಾಗೆಯೂ ವಿಶಾಲ ಇದ!
ಹಾಂಗೆ ಒಪ್ಪಣ್ಣನೆ ಇಸುಮುಳ್ಳು, ಕುಟ್ಟರೆ ಎಲ್ಲ ತೆಕ್ಕೊಂಡು ಕಳ ಹಸನು ಮಾಡಿ ಮಡುಗಿದ್ದದು.

ಅಂತೂ ‘ಕಳ’ (ಅಂಕಣ) ಕ್ಕೆ ಹಾಕಿದ ಕಾರಣವೇ ಅಲ್ಲದ ನಿಂಗೋಗೆ ಈಗ ಈ ಸುದ್ದಿ ಗೊಂತಾವ್ತಾ ಇಪ್ಪದು!!
ಈ ಮಹತ್ತ್ವದ ಹಿತ್ಲಿನ ಕಳಲ್ಲಿ ಕಳೆ ಬಾರದ್ದ, ಕಳೆ ಇಪ್ಪ ಬೆಳೆ ಬೆಳೆಕಾರೆ ನಿಂಗೊ ನೀರು ಎರೆಕು, ಅಕ್ಕಲ್ಲದ?.

ಹಿಂದೆ ನಮ್ಮ ಅಜ್ಜಂದ್ರೆಲ್ಲ ಜಾಗೆ ಗೇಣಿಗೆ ಕೊಟ್ಟು ಕೆಣುದ್ದವಡ. ಹಾಂಗಾಗಿ ಒಪ್ಪಣ್ಣನದ್ದು ಒಂದು ಮುಂಜಾಗ್ರತೆ ಅಡ–
“ನಮ್ಮದೊಂದು ಎಗ್ರಿಮೆಂಟಾಯೇಕು”
‘’ಅದಾ, ಅದೆಂತರ?’
“ಇಲ್ಲಿ ಬೆಳದ್ದದು ಆರು ಬೇಕಾರೂ ಬಂದು ಕೊಯಿವಲಕ್ಕು, ಕೊಯ್ತ ಹಾಂಗಿರೆಕ್ಕು (ಗುಣಮಟ್ಟ)!”
‘ಹಾಂಗೆ ಗ್ರೇಶಿದ ಹಂಗಾದರೆ ನಮ್ಮದೊಂದು ರಿಕಾರ್ಡು (ಪುಸ್ತಕಲ್ಲಿ) ದೆ ಬಕ್ಕು.’’

ಆನು ಹೇಳಿದೆ:
‘ಅಪ್ಪು, ಖಂಡಿತ ನಮ್ಮದೊಂದು ರೆಕೊರ್ಡು ಆಯೆಕು!’
ಹೀಂಗೂ ಒಂದಿದ್ದೋ…… ಸುಮ್ಮನೆ ಹೇಳಿದ್ದು!!.

ಇದೆಲ್ಲ ಅಪ್ಪದು ಒಪ್ಪಂದ.!

ಮಿಂಚಿನಡ್ಕ ಅಪ್ಪಚ್ಚಿ ಹೇಳುಗು:
ಒಪ್ಪಂದ ಅಪ್ಪದು ಒಪ್ಪಂದ,
ಒಪ್ಪದ್ದ ಅರ್ಗೆಂಟಿಂಗೆ ಎಗ್ರಿಮೆಂಟು.

ನೆಂಪು ಮಡುಗೆಕಾದ್ದೆಂತದು ಹೇಳಿರೆ:
ಒಪ್ಪದವೊಪ್ಪಕ್ಕೊಪ್ಪಿದ್ದಪ್ಪಾದರದೊಂದೊಪ್ಪಂದ.
ಒಪ್ಪದ್ದವೊಪ್ಪಿರೊಪ್ಪಿದ್ದರ ತಪ್ಪುಗು — ಎಲ್ಲ ಅಡಿಮೇಲೆ ಮಾಡಿ ಪರಂಚುಗು !

ಮತ್ತೆ, ದೊಡ್ಡ ಬಾವನ ಬಾಬ್ತಿಂದು ಸಮ್ಮೇಳನದ ‘ಸಾಹಿತ್ಯ’ಕ್ಕೆ ಹೋತೋ ಅಲ್ಲಾ, ಇತ್ಲಾಗಿ ಬತ್ತೋ ಹೇಳಿ ಒಪ್ಪಣ್ಣನತ್ರೇ ಕೇಳೆಕಷ್ಟೇ…!

`ಒಪ್ಪ’ದ ಒಪ್ಪಂದ..!, 5.0 out of 10 based on 1 rating
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಬೊಳುಂಬು ಮಾವ°
  ಗೋಪಾಲ್ ಬೊಳುಂಬು

  ಎಲ್ಲೂ ಕಂಡಿದೆ ಇಲ್ಲೆ “ನೆಟ್ಟು” ಹೀಂಗಿಪ್ಪ
  ಎಲ್ಲೋರು ಸೇರ್ಯೊಂಡು ನೆಟ್ಟಿ ಮಾಡ್ಳಿಪ್ಪ
  ನಾವೆಲ್ಲ ಹಾಕಿದರೆ ರಜ ನೀರು ಸೊಪ್ಪ
  ಒಪ್ಪಣ್ಣನ ನೆಟ್ಟು ಒಳ್ಳೆ ಬೆಳಗಪ್ಪ !

  ಒಪ್ಪದ ಒಪ್ಪಂದ ಒಪ್ಪ ಆಯಿದು. ಒಳ್ಳೆದಾಗಲಿ.

  [Reply]

  VA:F [1.9.22_1171]
  Rating: 0 (from 0 votes)
 2. kanditaa oppannana jaageli nette gedu olle pasalu kodugu,eeke heli dare belege yaaude baade baaradaa haange noodle,yaavagalu alladdaru aparoopakkadaru bandu neeru haakale adestoo jana nammooru kaayta iddau

  [Reply]

  VA:F [1.9.22_1171]
  Rating: 0 (from 0 votes)
 3. ಜಯಶ್ರೀ ನೀರಮೂಲೆ
  jayashree.neeramoole

  ಎಷ್ಟು ಒಳ್ಳೆದಿದ್ದು ಒಪ್ಪಣ್ಣನ ಜಾಗೆ… ಬೈಲಿನವೆಲ್ಲ ಸೇರಿ ತರಕಾರಿ ಬೆಳೆಶುದು… ಬೈಲಿನವೆಲ್ಲ ಸೇರಿ ಕೊಯ್ದು ಉಪಯೋಗಿಸುದು…
  “ಒಪ್ಪಂದ ಅಪ್ಪದು ಒಪ್ಪಂದ”…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಣಚ ಡಾಕ್ಟ್ರುಅಕ್ಷರ°ಪ್ರಕಾಶಪ್ಪಚ್ಚಿಶ್ರೀಅಕ್ಕ°ಮುಳಿಯ ಭಾವಬೊಳುಂಬು ಮಾವ°ಅನಿತಾ ನರೇಶ್, ಮಂಚಿಸರ್ಪಮಲೆ ಮಾವ°ಅನು ಉಡುಪುಮೂಲೆಶ್ಯಾಮಣ್ಣವೇಣಿಯಕ್ಕ°ಅನುಶ್ರೀ ಬಂಡಾಡಿಅಜ್ಜಕಾನ ಭಾವರಾಜಣ್ಣಶಾ...ರೀಪೆಂಗಣ್ಣ°ಮಾಲಕ್ಕ°ಕೊಳಚ್ಚಿಪ್ಪು ಬಾವಕಜೆವಸಂತ°ಶುದ್ದಿಕ್ಕಾರ°ಪುತ್ತೂರುಬಾವಚೆನ್ನೈ ಬಾವ°ವಿದ್ವಾನಣ್ಣಒಪ್ಪಕ್ಕಡಾಗುಟ್ರಕ್ಕ°ಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ