Oppanna.com

“ಮಹತ್ವ”ದ ಮಾತುಗೊ…!

ಬರದೋರು :   ಡಾಮಹೇಶಣ್ಣ    on   12/01/2010    4 ಒಪ್ಪಂಗೊ

ಕೂಳಕ್ಕೋಡ್ಳು ಅಣ್ಣ ಹೇಳಿರೆ ಮದಲಿಂದಲೇ ಹಾಂಗೆ. ಓದುಗು, ಬರಗು. ಸಂಸ್ಕೃತಿ, ಸಂಸ್ಕೃತ – ಎರಡರಲ್ಲಿದೇ ವಿಶೇಷ ಆಸಕ್ತಿ.
ಮಹೇಶಣ್ಣ ಹೇಳಿ ಇವರ ಹೆಸರು, ಎಂಗೊ ಎಲ್ಲ ಕೂಳಕ್ಕೂಡ್ಳಣ್ಣ ಹೇಳಿಯೇ ದಿನಿಗೆಳುದು.
ಊರಿಲಿ, ನೀರ್ಚಾಲು ಶಾಲೆಲಿ ಕಲಿವಗಳೇ ಹಾಂಗೆ – ಎಡಪ್ಪಾಡಿ ಬಾವ ಹೇಳುಗು – ಬಾಕಿ ಒಳುದವೆಲ್ಲ ಬಿಂಗಿ ಮಾಡಿಗೊಂಡು, ಮಾಷ್ಟ್ರನ ಅಂಗಿಗೆ ಶಾಯಿ ಹಾಕಿಯೊಂಡು ಆಡುವಗ, ಇವು ಕರೆಲಿ ಕೂದಂಡು ಓದುಗಡ.
ಮುಂದೆ ಉಜಿರೆಲಿ ಕಲ್ತುಗೊಂಡು ಇಪ್ಪಗಳೂ ಹಾಂಗೆಯೇ.
ಅಲ್ಲಿಂದಲೂ ಮುಂದೆ ತಿರುಪತಿಲಿ ಕಲ್ತವು – ಅಷ್ಟಪ್ಪಗ ಪ್ರತಿಸರ್ತಿ ಊರಿಂಗೆ ಬಪ್ಪಗಳೂ ಒಪ್ಪಣ್ಣಂಗೆ ಲಾಡು ಸಿಕ್ಕಿಯೋಂಡು ಇತ್ತು. 😉

ಈಗ, ಪ್ರಸ್ತುತ ಬೊಂಬಾಯಿಯ ಹತ್ರೆ ಐ.ಐ.ಟಿ ಹೇಳ್ತ ದೊಡ್ಡ ಕೋಲೇಜಿಲಿ -ಭಾರತಲ್ಲಿ ಆದ ವಿಜ್ಞಾನದ ಬೆಳವಣಿಗೆಯ ಬಗ್ಗೆ – ಪಚ್ಚಡಿ (Ph.D) ಮಾಡಿಗೊಂಡು ಇದ್ದವು.
ನಾಳೆ ಇವುದೇ ಡಾಗುಟ್ರು ಆವುತ್ತವು. ಕಿದೂರು ಬಾವನ ಹಾಂಗೆ ಮದ್ದಿನ ಇಂಜೆಕ್ಷನು ಕುತ್ತತ್ತ ಡಾಗ್‌ಟ್ರು ಅಲ್ಲ, ತತ್ವದ ಇಂಜೆಕ್ಷನು ಕುತ್ತುತ್ತ ಡಾಗ್‌ಟ್ರು.
ಕುಶಿ ಆವುತ್ತು, ನಮ್ಮೋರು ಮೇಗೆ ಮೇಗೆ ಹೋಪಗ. ಅಲ್ಲದಾ?

ಅವಕ್ಕೆ ರಜ ಕುಶಾಲುದೇ ಇದ್ದು. ಚಿಂತನೆಯುದೇ ಇದ್ದು. ಭಾರತೀಯರ ಸಂಶೋಧನೆಗಳ ಬಗೆಗೆ ಕಾಳಜಿಯುದೇ ಇದ್ದು.
ನಮ್ಮೋರ ಹಿಂದಾಣೋರ “ಮಹತ್ವ“ದ ಬಗೆಗೆ ಹೆಮ್ಮೆಯುದೇ ಇದ್ದು.
ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತಿರಾ ಹೇಳಿ ಕೇಳುವಗ ಸಂತೋಷಲ್ಲಿ ’ಅಕ್ಕಪ್ಪಾ, ಧಾರಾಳ!’ ಹೇಳಿದವು.
ಹಾಂಗಾಗಿ, ನಮ್ಮೋರ ಮಹತ್ವಂಗಳ ಹೇಳುಲೆ “ಮಹತ್ವ” ಹೇಳ್ತ ಅಂಕಣ,

ಇವು ಬರದ್ದರ ಓದಿಕ್ಕಿ, ನಮ್ಮೋರ ಬಗೆಗೆ ನವಗೆಲ್ಲರಿಂಗುದೇ ಹೆಮ್ಮೆ ಬಂದು, ಹಿಂದಾಣೋರ ಮಹತ್ವ ಬಂದರೆ ಕೂಳೆಕ್ಕೋಡ್ಳಣ್ಣನ ಶ್ರಮ ಸಾರ್ಥಕ ಆದ ಹಾಂಗೆ.

ಓದಿ, ಒಪ್ಪ ಕೊಡಿ. ಮಹತ್ವದ ಮಾಹಿತಿಯ ಅರ್ಥ ಮಾಡಿಗೊಳ್ಳಿ..!

ಆಗದೋ?
~
ಒಪ್ಪಣ್ಣ

ಶ್ರೀ ಗುರುಭ್ಯೋ ನಮಃ ,

ಆನು ಮಹೇಶ. ಭಾರತಲ್ಲಿ ಆದ ವಿಜ್ಞಾನದ ಬೆಳವಣಿಗೆ ಯ ಬಗ್ಗೆ ತಿಳಿವಲೆ ಪ್ರಯತ್ನ ಮಾಡ್ತಾ ಇದ್ದೆ.
ಕೆಲವು ಸರ್ತಿ ಸುಮ್ಮನೆ ಕೂದೊಂಡು ಯೋಚನೆ ಮಾಡಿರೆ ವಿಷಯ ತಿಳಿತ್ತು.
ಒಂದೊಂದರಿ ಯೋಜನೆ ಮಾಡೆಕಾವುತ್ತು,  ಪ್ರವಾಸವೂ ಮಾಡೆಕಾವುತ್ತು ಅಲ್ಲದ? ಅಷ್ಟೇ ಅಲ್ಲ, ಮಾತಾಡೆಕಾವುತ್ತುದೆ.
ಎನಗೆ ಗೊಂತಾದ್ದರಲ್ಲಿ  ‘ಮಹತ್ವ‘ದ್ದೆಂತಾರು ಇದ್ದರೆ ನಿಂಗೊಗೆ ಗೊಂತಿರಲಿ ಅಲ್ಲದ?
ಅಷ್ಟಪ್ಪಗ ನಿಂಗಳುದೆ ಎಂತಾರು ಗೊಂತಾದರೆ ಹೇಳಿಕ್ಕಿ.


ನಿಂಗೊ ಎಲ್ಲ  ಶುದ್ದಿ ಹೇಳುವದು ಕೇಳುವಗ ಆನುದೆ ಹೇಳಿರೆ ಅಕ್ಕೋ ಹೇಳಿ ಆವುತ್ತು.
ಒಟ್ಟಿಂಗೆ  ಒಂದು ಹೆದರಿಕೆ — ಆನು ಹೇಳುವದು ಒಪ್ಪಣ್ಣನ ’ಗೆಣಮೆಣಸಿನ ಚೀಲಲ್ಲಿ ಹತ್ತಿ ಬಿತ್ತು ಸೇರಿಸಿದ’ ಹಾಂಗಕ್ಕೋ ಹೇಳಿ.
ಲಾಯಕ ಆಗದ್ದರೆ ಕಸವು ಹೇಳಿಗೊಂಡು ತೆಂಗಿನ ಮರದ ಬುಡಕ್ಕೆ ಹಾಕಿ ಆತ?

ಕಳುದ ವರಿಷ ಫೆಬ್ರವರಿಲ್ಲಿ ಆನು ಸಾರನಾಥ ಹೇಳುವ ಜಾಗೆಗೆ ಹೋಗಿತ್ತಿದ್ದೆ.
ಸಾರನಾಥ‘ ಎಲ್ಲಿಯೋ ಕೇಳಿದ ಹಾಂಗೆ ಆವುತ್ತಲ್ಲದ? ನಮ್ಮ ಬಾವುಟದ ಮಧ್ಯಲ್ಲಿಪ್ಪ ನೀಲಿ ಚಕ್ರ ಅಲ್ಲಿಂದ ತಂದದು ಹೇಳಿ ಶಾಲೆಲ್ಲಿ ಮಾಶ್ರು ಹೇಳಿದ್ದು ನೆಮ್ಪಾತಲ್ಲದ?
ಅದು ವಾರಣಾಶಿ ಯ ಹತ್ರೆ ಇಪ್ಪದು. ವಾರಣಾಶಿ ಹೇಳಿಯಪ್ಪಾಗ ಕೆಂಪ್ಕೋ ಶುಬ್ರಾಯ ಭಟ್ರ ಮನೆ ಹತ್ರೆ ಹೇಳಿ ಆಲೋಚನೆ ಮಾಡಿರೆ, ಅಲ್ಲ!

ಇದು ವಾರಾಣಸೀ, ಅದೇ ನಾವು ಕಾಶಿ ಹೇಳ್ತಲ್ಲದ, ಅದಕ್ಕೆ ತಾಗಿಗೊಂಡಿಪ್ಪ ಜಾಗ.
ಅದ! ಅಲ್ಲಿ ಆರೋ ನೆಗೆ ಮಾಡುವದು – ಜವ್ವನಿಗ ಕಾಶಿಗೆ ಹೋಪಗ ಆರುದೆ ತಡದ್ದವಿಲ್ಯೋ ಹೇಳಿಯಾ?
ಆನು ಹಾಳೆ ಮೆಟ್ಟು ಹಾಕಿತ್ತಿದ್ದಿಲ್ಲೆ ಭಾವ! ಹಾಳೆ ಮೆಟ್ಟು ಹಾಕಿಯೊಂಡು ಕಾಶಿಗೆ ಹೊವುತ್ತೆ ಹೇಳಿ ಹೆರಟ್ರೆ ಮಾಂತ್ರ ಅಡ ಸೋದರ-ಮಾಂವ ತಡವದು!!

ಅದಿರ್ಲಿ, ಮಹೇಶ ಅಲ್ಲಿಗೆ ಹೋದ್ದದು ಎಂತಕೆ ಹೇಳಿ ಕೇಳಿತ್ತು ಕಂಡ್ರೆ,
ಸಾರನಾಥಲ್ಲಿ ಒಂದು ದೊಡ್ಡ ಕೋಲೇಜು (ಯುನಿವರ್ಸಿಟಿ) ಇದ್ದು.  ಅಲ್ಲಿಪ್ಪ ಮಕ್ಕ, ಮಾಶ್ರಕ್ಕೋ ಹೆಚ್ಚಿನವೆಲ್ಲ  ತಿಬೇಟಿನವು. ನಾವೆಲ್ಲ ನಮ್ಮ ಗುರುಗಳ ಶಿಷ್ಯರ ಹಾಂಗೆ ಅವೆಲ್ಲ ದಲಾಯಿಲಾಮರ ಶಿಷ್ಯರು.
ಅದರಲ್ಲಿ ಈ ಟಿಬೆಟಿನ ಕ್ರಮ, ಸಂಸ್ಕೃತಿ ಯ ಬಗ್ಗೆ ಹೇಳಿ ಕೊಡುವದು. ಅವಕ್ಕೆ ಅವರ ವಿದ್ಯೆಯೋಟ್ಟಿಂಗೆ ಭಾರತದ ವಿದ್ಯೆಯ ತಿಳಿಯೆಕು ಹೇಳಿ ಒಂದು ಆಶೆ.
ಹಾಂಗಾಗಿ ಒಂದು ದೊಡ್ಡ ಸಭೆ ಏರ್ಪಾಟು ಮಾಡಿ, ಎನ್ನಂದ ಹೆಚ್ಚು ಗೊಂತಿಪ್ಪವರೊಟ್ಟಿಂಗೆ ಎನ್ನತ್ರುದೆ ಭಾಷಣ ಮಾಡ್ಸಿದವು.

ಅಲ್ಲಿಪ್ಪ ಕೆಲವು ಜೆನಕ್ಕೆ ಅವರ ಟಿಬೆಟಿನ ಭಾಷೆ ಮಾಂತ್ರ ಬಪ್ಪದು,  ಹಾಂಗಾಗಿ ಅವು ಮಾಡಿದ   ವ್ಯವಸ್ತೆ ಎಂತದು ಗೊಂತಿದ್ದ? ಅಲ್ಯೊಬ್ಬ ಸುಮಾರು ಭಾಷೆ ಗೊಂತಿಪ್ಪವನ ಕೂರ್ಸಿದವು, ಎಂಗೊ ಐದೈದು ವಾಕ್ಯ
ಇಂಗ್ಲಿಶಿಲ್ಲಿ ಹೇಳುವದು, ಅದರ ಅವಂ  ಅವರ ಭಾಷೆಗೆ ಬದಲುಸಿ ಹೇಳುದು..
ಹೀಂಗೆ  ಎಂಗಳ ಭಾಷಣ ಮುಗುದಪ್ಪಗ ಸಭೆಲ್ಲಿಪ್ಪವಕ್ಕೆ ಡೌಟು, ಪ್ರಶ್ನೆ ಇರ್ತದ,  ಅದರ ಅವು ಅವರ ಭಾಷೆಲ್ಲಿ ಕೇಳ್ತವು,
ಅದರ ಈ  ಜೆನ ನವಗೆ ಇಂಗ್ಲಿಶಿಂಗೆ ಮಾಡಿ ಹೇಳುದು, ನಮ್ಮ ಉತ್ತರವ ಪುನಾ ಅವರ ಬಾಷೆ ಗೆ ಮಾಡಿ ಅವಕ್ಕೆ ಹೇಳುದು,….
ಯಬೋ ! ಆ ಜೆನದ ತಾಳ್ಮೆಯೇ !

ಅಲ್ಲಿ ಬಂದ ದೊಡ್ಡ ಜೆನಂಗಳಲ್ಲಿ  ಸಿ ಕೆ ರಾಜು ಹೇಳಿ ಒಬ್ಬ ಆಜಾನುಬಾಹು ವೆಕ್ತಿ ಇತ್ತಿದ್ದ.
ಅವಂ ಹೇಳುವ ವಿಷಯ ಕೇಳೆಕದ! ಅದು ಹೀಂಗಿದ್ದು–
ಈಗ ನವಗೆ ಕಲುಶುತ್ತವಲ್ಲದ, ವಿಜ್ಞಾನ ಗೊಂತಿಪ್ಪದೆಲ್ಲ ಹೆರಾಣ ದೇಶದವಕ್ಕೆ  ಮಾಂತ್ರ  ಹೇಳಿ. ಹೀಂಗೆ ನವಗೆ ಕಲುಶುವದರ ಹಿಂದೆ ಎಂತದೋ ಸೀಂತ್ರಿ ಇದ್ದಡ.
ನಾವುದೆ ಸುಮಾರು ಕಲ್ತಿದು, ಕಲುಶಿದ್ದು ಹೇಳಿ ಎಲ್ಯಾರು  ಸರಿಯಾಗಿ ನಮ್ಮ ಪಾಟಲ್ಲಿ ಹೇಳಿದ್ದವೋ? ಉದಾಹರಣೆಗೆ ಕೇರಳಲ್ಲಿ ಮೆತಮೆಟಿಕ್ಸು ತುಂಬಾ (ನಾವು ಟ್ರಿಗ್ನೋಮೆಟ್ರಿ , ಕೇಲ್ಕುಲಸ್ಸು ಹೇಳ್ತದೆಲ್ಲ ) ಗೊಂತಿತ್ತಡ.
(ಕೇರಳ ಹೇಳಿಯಪ್ಪಗ ಇದೊಂದು ಕುಂಬಳೆ ಸೀಮೆಯವಕ್ಕೆ ರಜ್ಜ  ಜಂಬದ ಸಂಗತಿ ಅಲ್ಲದೋ !! ಬೇರೆ ವಿಷಯಲ್ಲೆಲ್ಲ ಕೇರಳ ಆಗದ್ದರುದೆ!!).
ಅದುದೆ ಹದ್ನಾಲ್ಕನೆ ಶತಮಾನಲ್ಲಿಯೇ. ಅಷ್ಟಪ್ಪಗ ಅಲ್ಲಿಗೆ ಕಚ್ಚೋಡಕ್ಕೆ  ಹೇಳಿ ಬಂದ ಬೆಳಿ ಚರ್ಮದವು, ನಮ್ಮ ಶುದ್ಧ ಮಾಡ್ಲೆ (!) ಬಂದ ಪಾದ್ರಿಗೊಕ್ಕೆ ಅದು ಗೊಂತಾಗಿ ಅದರ ಮೆಲ್ಲಂಗೆ ಕಲ್ತವಡ.
ಅವಕ್ಕೆ ಈ ಹಡಗಿಲ್ಲಿ ಹೊವ್ತು ಬತ್ತು ಮಾಡುವಗ ದಾರಿ, ಹೊತ್ತು ಎಲ್ಲ  ತಪ್ಪಿಗೊಂಡಿಪ್ಪಾಗ ಸರೀ ಲೆಕ್ಕ ಮಾಡ್ಲೆ ಇಂಥಾದ್ದೆಲ್ಲ ಸಿಕ್ಕಿದ್ದದು ಕೊಶೀ ಆತದ! ಅದರ ಹಾಂಗೇ ಪಡುವಂತಾಗಿ (ಯುರೊಪಿಂಗೆ) ಸಾಗುಸಿ ಈಗ “ಇದೆಲ್ಲ ಎಂಗಳೇ ಕಂಡು ಹುಡ್ಕಿದ್ದು” ಹೇಳಿ ಹೇಳ್ತವು..!
ಕಂಡುಗೋ, ಹಪ್ಪ…!!

ಇಷ್ಟು ಧೈರ್ಯಲ್ಲಿ ಒಬ್ಬ ದೊಡ್ಡ ವಿಜ್ಞಾನಿ ಹೆಳಿಗೋಮ್ಬಗ ನಾವುದೇ ರಜ್ಜ ಗೊಂತು ಮಾಡೆಕು ಅದ್ರ ಬಗ್ಗೆ ಹೇಳಿ ಆನು ಆಲೋಚನೆ ಮಾಡಿದ್ದೆ, ಎಂತ ಆಗದ?

ಮತ್ತೊಂದು ಸಂಗತಿ ಎನಗೆ ಗೊಂತಾದ್ದದು ಎಂತ ಹೇಳಿರೆ, ಈ ಟಿಬೆಟಿನ ಭಾಷೆಲ್ಲಿ ಸುಮಾರು ಗ್ರಂಥಂಗೊ ಇದ್ದಡ.  ನಮ್ಮ ಸಂಸ್ಕೃತಂದ ಅವು ಕಲ್ತು ಬರದ್ದದಡ.
ನೋಡಿ ಇದ, ಬೇಜಾರದ ಸಂಗತಿ ಹೇಳಿದರೆ ಈಗ ಸಂಸ್ಕೃತದ ಆ ಪುಸ್ತಕಂಗೋ ಎಲ್ಲಿಯೂ ಇಪ್ಪಲೇ ಇಲ್ಲೆ!
ನವಗಾರಿಂಗೂ ಹಾಂಗಿಪ್ಪದು ಇತ್ತು ಹೇಳಿಯೇ ಗೊಂತಿರ.  ಈ ಟಿಬೆಟಿನವರ ಹೂಗಿನ ಹಾಂಗಿಪ್ಪ ಮನಸ್ಸು ನೋಡಿ,
“ಇದು ನಿಂಗೊ ಕೊಟ್ಟ  ಜ್ಞಾನ, ಅದು ಅದರ ಮದಲಾಣ ರೂಪಲ್ಲಿ ನಿಂಗಳತ್ರೆ ಇರೆಕು” ಹೇಳಿ   ಅವ್ವೀಗ ಆ ಪುಸ್ತಕಂಗಳ ಸಂಸ್ಕೃತಲ್ಲಿ ಪುನರ್ನಿರ್ಮಾಣ ಮಾಡಿ ಕೊಡ್ತವಡ.
ಮೇಲೆ ಹೇಳಿದ ಜೆನಂಗೊಕ್ಕೂ ಈ ನಮ್ಮ ನೆರೆಕರೆಯವಕ್ಕುದೆ ಎಷ್ಟು ವೆತ್ಯಾಸ ಅಲ್ಲದ?

ಹೀಂಗಿಪ್ಪ ನಮ್ಮ ಹಿತೈಶಿಗೋ `ಎಂಗೋ ಭಾರತಕ್ಕೆ ಸೇರ್ತೆಯೋ’ ಹೇಳಿ ಹೇಳಿಯಪ್ಪಗ ಒಪ್ಪಿದ್ದಿಲ್ಲೆ ಅಡ ನಾವು.
“ನಿಂಗೊ ನಿಂಗಳಷ್ಟಕೆ ಇರಿ” ಹೇಳಿ ನೆಹರು ಅಜ್ಜನ ಅರ್ಗೆಂಟಿನ, ಅಂಬೆರ್ಪಿನ ತೀರ್ಮಾನಂದ, ಪಾಪ ಅವು ಕಡೆಂಗೆ  ಚೈನಾದವರ ಕೈ ಕೆಳ ಆದವದ,
ಛೆ!.  ಈಗ  ಅಲ್ಲಿಯುದೆ ಇದ್ದಡ ’ಲವ್ ಜೆಹಾದ್’ ನ ಹಾಂಗೆ ಎಂತದೋ ಒಂದು.
ಟಿಬೆಟಿನ ಸಂಸ್ಕೃತಿಯ ಇಲ್ಲದ್ದ ಹಾಂಗೆ ಮಾಡೆಕು ಹೇಳಿ ಚೀನಾದ ದೇವರ ನಂಬದ್ದ ಕಮುನಿಷ್ಟು ಜೆವ್ವನಿಗರು  ಮಾಡುದಡ.

ಅವರ ಜಾಗೆ ನುಂಗಿಕ್ಕಿ ನಮ್ಮ ಮೇಲೆಯುದೆ ಪೆಟ್ಟು ಹಾಕಲೆ ಬಂದಪ್ಪಗ ನವಗುದೆ ಎಂತ ಮಾಡ್ಲೇಡಿಗಾಯಿದಿಲ್ಲೆ lusso repliche orologi೬೨ ನೆ ಇಸವಿಲ್ಲಿ.
ಟಿಬೆಟಿನ ಜಾಗೆ ನಾವು ಮಾಡಿದ್ದಿದ್ದರೆ ಚೀನವ ಸುಲಭಲ್ಲಿ ಓಡುಸಲಾವುತ್ತಿತ್ತು ಹೇಳಿ ಕೆಲವು ಜೆನರ ಅಭಿಪ್ರಾಯ.
ನೆಹರು ಅಜ್ಜ ಲೆಕ್ಕಂದ ಹೆಚ್ಚು ಒಪ್ಪಕುಂಞಿ ಆದ್ದದಕ್ಕೆ ನಾವು ಕೂಗೆಕಾಯಿದು ಮತ್ತೆ.
ಅಂಬಗ ಚೀನ ಸೊಲುಸಿಯಪ್ಪಗ ಎಲ್ಲೋರಿಂಗುದೆ ಚಳಿ ಹಿಡುದು, ಇನ್ನು ಎಲ್ಲ ಮುಗಾತು ಹೇಳಿ ಹೆದರಿಕೆ ಆಯಿದಡ.
ಆ ಕಾಲಕ್ಕೆ ಸೋತ ಮನ ಸ್ಥಿತಿಂದ ಹೆರ ಬಪ್ಪಲೆ ಕೆಲವು ಧೈರ್ಯದ ಜೆನ ಮುಂದೆ ಬಂದು ವಿವೇಕಾನಂದರ ಸಿಂಹವಾಣಿಯ ನೆಂಪು ಮಾಡಿಸಿದವು.
ಅವರ ೧೦೦ ನೆ ಹುಟ್ಟುಹಬ್ಬದ ವರ್ಷ ಹೇಳಿ ಕನ್ಯಾಕುಮಾರಿಲ್ಲಿ ಶಿಲಾ ಸ್ಮಾರಕವನ್ನುದೆ ಮಾಡಿದವು. ಇಡೀ ದೇಶ ಒಂದಾಯಿದಡ ಆ ಕೆಲಸಲ್ಲಿ- ಗೊಂತಿಪ್ಪವು ಹೇಳ್ತವು.

ಸ್ವಾಮಿ ವಿವೇಕಾನಂದರು ಹೇಳಿದ್ದವಡ -“ಯಾವ ದೇಶದ ಜನಂಗೊಕ್ಕೆ ಅವರ ಹಳಬರ ನೆಂಪಾವುತ್ತಿಲ್ಲೆಯೋ, ಹಿಂದಾಣವರ  ಬಗ್ಗೆ  ನಾಚಿಕೆ ಆವುತ್ತೋ ಅವಕ್ಕೆ ಮುಂದಾಣದ್ದು
(ಭವಿಷ್ಯ) ಇಲ್ಲೆ ” ಹೇಳಿ. ಇಂದು, ಜನವರಿ ೧೨ಕ್ಕೆ ಅವರ ಹುಟ್ಟಿದಬ್ಬ ಅಡ. ಜವ್ವನಿಗರ ದಿನ ಹೇಳಿ ಸರಕಾರ ಘೋಷಣೆ ಮಾಡಿದ್ದಡ. (1984 ರಿಂದಲೇ ಪ್ರತಿವರ್ಷ ಆವುತ್ತಾ
ಇದ್ದು ಹೇಳಿ ಗೊಂತಿದ್ದತ್ತ ನವಗೆ?!) ಈ ಸರ್ತಿ ನಮ್ಮ ದೇಶದ ಸಾಂಸ್ಕೃತಿಕ ಕುರುಹುಗಳ ರಕ್ಷಣೆಯ ಬಗ್ಗೆ ಜಾಗೃತಿ ಮಾಡುಸೆಕು ಹೇಳಿ ಸರಕಾರದವು ಯೋಚನೆ ಮಾಡ್ತಾ ಇದ್ದವಡ.
ಅವು ಯೋಚನೆ ಮಾಡ್ಯೊಂಡು ಇರ್ಲಿ, ನಾವು ಎಂತಾರು ಮಾಡೆಡದ?

(ಹಾಂಗೆ ಸಾರನಾಥಲ್ಲಿ ತುಂಬಾ ವಿಷಯ ಇದ್ದು. ಬನಾರಸ್ಸಿನ ಸೀರೆ ತಯಾರಪ್ಪದೆಲ್ಲ ಇಲ್ಲಿಯೇ ಅಡ. ಬೆಂಕಿಪೆಟ್ಟಿಗೆಲ್ಲಿ ಮಡಚ್ಚಿ ಮಡುಗುವ ಹಾಂಗೆ ಮೆಸ್ತಂಗೆ ಇಪ್ಪದು, ಉಂಗಿಲಿನ ಎಡೆಲ್ಲಿ ಹಾಕಿ ಎಳವಷ್ಟು ನೊಂಪು ಹೇಳಿಯೆಲ್ಲ ಹೊಗಳ್ತದು – ನಿಂಗೊ ಕೇಳಿದ್ದಿರೋ ಇಲ್ಲೆಯೋ ಗೊಂತಿಲ್ಲೆ !
ನವಗೆಲ್ಲಿ  ಅರಡಿತ್ತು ಸೀರೆ ಸೆಲೆಕ್ಟು ಮಾಡ್ಲೆ! ಆದರೂ ಪ್ರಾಕ್ಟೀಸಾಗಲಿ ಹೇಳಿ ಎರಡು ತೆಕ್ಕೊಂಡು ಬಂದೆ.
ಇಲ್ಲಿ ಜಪಾನು, ಕಾಂಬೋಡಿಯಾ, ಬರ್ಮಾ, ಶ್ರೀಲಂಕಾ ಹೇಳಿ ಬೇರೆ ಬೇರೆ ದೇಶದ ಬೌದ್ಧರ ಶೈಲಿಯ ದೇವಸ್ತಾನಂಗೋ ಇದ್ದು. ಹೀಂಗೆ ಸುಮಾರು ಶುದ್ದಿ, ಹೇಳಿ ಮುಗಿಯ…
ಮತ್ತೊಂದರಿ ಕಾಂಬ ಅಕ್ಕೋ?)

~
K Mahesh
Research Scholar,
Cell for Indian Science and Technology in Sanskrit,
Indian Institute of Technology,
Powai

ಡಾಮಹೇಶಣ್ಣ
Latest posts by ಡಾಮಹೇಶಣ್ಣ (see all)

4 thoughts on ““ಮಹತ್ವ”ದ ಮಾತುಗೊ…!

  1. ಈ ಲೇಖನವ ಆನು ಇಂದು ಓದಿದ್ದಷ್ಟೆ. ಅದೂ ಯಾವುದೋ ತಾಂತ್ರಿಕ ತೊಂದರೆಂದ ಹೊಸ ಲೇಖನಕ್ಕೆ ಇದರ ಲಿಂಕ್ ಇದ್ದತ್ತು. ಹಾಂಗಾಗಿ ಈಗ ಒಪ್ಪ ಕೊಟ್ಟದ್ದು..

    1. ಹಾ೦ಗಾದರುದೆ ಓದ್ಲೆ ಸಿಕ್ಕಿತ್ತನ್ನೆ! ಕಿಟ್ಟಣ್ಣಾ! ಓದಿ ಸ೦ತೋಷ೦ದ ಪ್ರತಿಕ್ರಿಯಿಸಿದ್ದದು ನವಗುದೆ ಸ೦ತೋಷ ತ೦ತು. ಧನ್ಯವಾದ.

  2. ಲೇಖನ ಭಾರೀ ಚಂದ ಆಯಿದು. ಇದು ಹೀಂಗೇ ಮುಂದುವರಿಯಲಿ. ಇದರಲ್ಲಿಪ್ಪ ಕೆಲವು ವಿಷಯಂಗ ಕೇಳಿ ಗೊಂತಿದ್ದು. ಆದರೆ ಕೇಳದ್ದು ಸುಮಾರು ಇದ್ದು.

    [ಮೇಲೆ ಹೇಳಿದ ಜೆನಂಗೊಕ್ಕೂ ಈ ನಮ್ಮ ನೆರೆಕರೆಯವಕ್ಕುದೆ ಎಷ್ಟು ವೆತ್ಯಾಸ ಅಲ್ಲದ?] ಖಂಡಿತಾ ಅಪ್ಪು. ಇವರ ಹಾಂಗೆ, ಆದರೆ ಇವರಂದ ಮೊದಲು ಬಂದ ಪಾರ್ಸಿಗಳೂ ನಮ್ಮ ದೇಶಕ್ಕೆ ತುಂಬಾ ಕೊಡುಗೆ ಕೊಟ್ಟಿದವು ಮತ್ತು ಈಗ ಭಾರತೀಯರೇ ಆಗಿ ಹೋಯಿದವು. ಅವು ಹಾಲಿಲಿ ಸಕ್ಕರೆ ಬೆರೆತ ಹಾಂಗೆ ಬೆರೆತಿದವು ಹೇಳ್ತವು. ಆದರೆ ಅವರ ಜನಸಂಖ್ಯೆ ಮಾತ್ರ ಭಾರತಲ್ಲಿ ಈಗ ಕಮ್ಮಿ ಆವ್ತಾ ಇದ್ದು.

    [ನೆಹರು ಅಜ್ಜನ ಅರ್ಗೆಂಟಿನ, ಅಂಬೆರ್ಪಿನ ತೀರ್ಮಾನಂದ, ಪಾಪ ಅವು ಕಡೆಂಗೆ ಚೈನಾದವರ ಕೈ ಕೆಳ ಆದವದ] – ನೆಹರು ಅಜ್ಜಂದಾಗಿಯೇ ಇಂದು ಕಾಶ್ಮೀರ ಸಮಸ್ಯೆ, ಭಯೋತ್ಪಾದನೆ ಇತ್ಯಾದಿ ಸುರು ಆದ್ದು, ವಿಟೊ ಪವರ್ ಸಿಕ್ಕದ್ದು. ಅವಕಾಶ ಸಿಕ್ಕಿಪ್ಪಾಗ ಉಪಯೋಗಿಸದ್ದೆ ಈಗ ನಾವು ಅನುಭವಿಸುತ್ತಾ ಇದ್ದು.

    [ಆನು ಹೇಳುವದು ಒಪ್ಪಣ್ಣನ ’ಗೆಣಮೆಣಸಿನ ಚೀಲಲ್ಲಿ ಹತ್ತಿ ಬಿತ್ತು ಸೇರಿಸಿದ’ ಹಾಂಗಕ್ಕೋ ಹೇಳಿ.] ಖಂಡಿತಾ ಅಲ್ಲ. ಮುಂದುವರಿಸಿ..

  3. Eee Reseach helidare navagu rajja interest iddu………… engalu Kasaragod li Bharathiya Vaidya vignanada Research inge raja gamana kodutha iddeya… Eee sarthi June 2010 appaga, Toronto Univerisity (Canada) inda namma Kasaragod inge kalivale Makka bathavada!!!!!!!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×