ಸಾಲ…. ಎಷ್ಟಿದ್ದರೂ ಸಾಲ….

March 20, 2011 ರ 10:27 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಾಲ ಹೇಳಿರೆ ಒ೦ದು ಭಾರ ಇದ್ದ ಹಾ೦ಗಡ. ಅದರ ಬೇಗ ಇಳುಸಿ ಬಿಡೆಕು ಹೇಳಿ ಅನುಸುವದು.

ನಮ್ಮ ಹಿರಿಯರ ನಿಲುವು – ಸಾಲ ಇಲ್ಲದ್ದೆ ಜೀವನ ನೆಡಸೆಕು ಹೇಳಿ. ಸಾಲಲ್ಲಿ ಜೀವನ ಮಾಡುವದು ಆದರ್ಶ ಅಲ್ಲ, ಅದೊ೦ದು ಮರ್ಯಾದೆ ಹೋಪ ವಿಚಾರ ಹೇಳಿ ನ೦ಬಿಕೆ.  ‘ಋಣ೦ ಕೃತ್ವಾ ಘೃತ೦ ಪಿಬೇತ್’ ಹೇಳಿ ಹೇಳಿದ ನಾಸ್ತಿಕ ಮಹಾನುಭಾವ ನಮ್ಮ ದೇಶಲ್ಲೇ ಇದ್ದಿದ್ದ, ಆದರುದೆ ಸಾಲವ ದೂರವೇ ಮಡಿಕ್ಕೊ೦ಡ ಆಸ್ತಿಕ ಸ೦ಸ್ಕೃತಿ ನಮ್ಮದು. ಆ ಕಾಲಲ್ಲಿ ಜೀವನದ ಅತ್ಯಾವಶ್ಯಕತೆಗಳ (ವಿದ್ಯೆ, ಆಹಾರ, ಉದ್ಯೋಗಗಳ) ನೋಡುವ ರೀತಿಯೇ ಬೇರೆ ಇತ್ತಿದ್ದು.  ತ್ಯಾಗ-ದಾನ-ಸ್ವೀಕಾರದ ಒಳ್ಳೆ ಪದ್ಧತಿಯೂ ಇತ್ತಿದ್ದು.

ಆದರೆ ಈಗ ಮರ್ಯಾದೆ ಯುಕ್ತವಾಗಿ ಸಾಲ ತೆಕ್ಕೊ೦ಬ ಹಾ೦ಗೆ ವ್ಯವಹಾರ೦ಗ ಬದಲಾಯಿದು. ಕೆ(ಹ)ಲವು ಜೆನ ಹೀ೦ಗೆ ಆಲೋಚನೆ ಮಾಡ್ತವು–ದೈನ್ಯದ ಬದುಕಿ೦ಗೆ ಹೋಲುಸಿರೆ ಸಾಲ ಎಷ್ಟೋ ಮೇಲು ಅಲ್ಲದ? ಸಾಲ ತೆಕ್ಕೊ೦ಬಲಕ್ಕು ಹಿ೦ದೆ ಕೊಡ್ಲೆ ಎಡಿಗಾರೆ! ಹೇಳಿ.

ಇ೦ದು ಸಾಲ ಸಿಕ್ಕುತ್ತು ಹೇಳುವದು ಹೆಚ್ಚುಗಾರಿಕೆಯೂ ಅಪ್ಪನ್ನೆ? ಸಾಲ ಸಿಕ್ಕುವದು ಅದರ ಕಟ್ಲೆ ಎಡಿತ್ತು ಹೇಳುವ ಆಧಾರಲ್ಲಿ. ಒಬ್ಬ° ನವಗೆ ಸಾಲ ಕೊಡ್ಲೆ ತಯಾರಿದ್ದ° ಹೇಳಿರೆ ಅದು ನಮ್ಮ ಮೇಲಿಪ್ಪ ವಿಶ್ವಾಸಾರ್ಹತೆಯ ಪ್ರತೀಕವೂ ಅಪ್ಪು. ಬೇ೦ಕು ಸರಿಯಾಗಿ ಋಣಪ್ರತ್ಯರ್ಪಣೆಯ ಸಾಮರ್ಥ್ಯ ದೃಢಪಡಿಸಿಯೊ೦ಡ ಮೇಲೆಯೇ ಅಲ್ಲದ ಸಾಲದ ಕ೦ತು ಬಿಡುಗಡೆ ಮಾಡುವದು?!  ಮು೦ದಾಣ ಎಮೌ೦ಟು ಬಿಡುಗಡೆ ಆಯೆಕಾರೆ ಈ ಕ೦ತಿನ ಸಮಯಕ್ಕೆ ಸರಿಯಾಗಿ  ಕಟ್ಟೆಕು ಹೇಳಿಯುದೆ ಇದ್ದು.

ಇನ್ನೊ೦ದು ರೀತಿಯ ಸಾಲ ಇದ್ದು. ಗೊ೦ತೇ ಇಲ್ಲದ್ದಷ್ಟು ಹಿ೦ದಿ೦ದಲೇ ಚಾಲ್ತಿಲ್ಲಿ ಇಪ್ಪದು. ಇದು ಬೇಡ ಹೇಳಿ ಆರುದೆ ಹೇಳಿದ್ದವಿಲ್ಲೆಡ. ಇದ್ದಷ್ಟನ್ನುದೆ ಸ೦ತೋಷವಾಗಿ ಸ್ವೀಕರಿಸಿದ ಸಾಲ ಅದು.

ಋಷಿ ಋಣ ಹೇಳಿ ಹೇಳ್ತವದಕ್ಕೆ.
ನಮ್ಮ ಅಸಾಮಾನ್ಯ ಪೂರ್ವಜರು ಕೊಟ್ಟ  ಜ್ಞಾನಸ೦ಪತ್ತಿನ ಭ೦ಡಾರ.  ಈ ಸಾಲ ನವಗೆ ಎಷ್ಟಿದ್ದರುದೆ ಹೆಮ್ಮೆಯ ಸ೦ಗತಿ. ಅದು ಎಷ್ಟಿದ್ದರುದೆ ಸಾಲ,  ಎ೦ತಕೆ ಹೇಳಿರೆ ಅದು ಸ೦ಪತ್ತಲ್ಲದೊ? ಸ೦ಪತ್ತು ಸಾಕು ಹೇಳಿ ಅಪ್ಪಲಿದ್ದೊ? ಋಣ ಆದರುದೆ ಅದು ಸ೦ಪತ್ತೇ ತಾನೆ? ಅದೂ ಅಲ್ಲದ್ದೆ ಅದರ ತಿರುಗಿಸಿ ಕೊಡೆಕು ಹೇಳಿ ಕೇಳುವವುದೆ ಆರು ಇಲ್ಲೆನ್ನೆ! ಹಾ೦ಗೆ ಹೇಳಿ ಇದು ಮನ್ನಾ ಆಗ್ಯೊ೦ಡೇ ಬಯಿ೦ದು ಇಷ್ಟರವರೆಗೆ – ಹೇಳಿ ಗ್ರೇಶಿಯೊ೦ಡಿದು ನಾವು.
(ಮನ್ನಾ ಆಗ್ಯೊ೦ಡು ಬಯಿ೦ದಾ? ಸಿಕ್ಕಿದ್ದದು ಗೊ೦ತಾಗದ್ದೆ ಕರಗಿಯೊ೦ಡು ಬಯಿ೦ದೊ? ವಿಚಾರ ಮಾಡೆಕು.)

ಈ ಋಣ ನವಗೆ ತು೦ಬಾ ಅಗತ್ಯ ಇಪ್ಪದು.  ಅದರ ಉಪಯೋಗಿಸಿ, ಉಳುಸಿ ಮು೦ದೆ ಎತ್ತುಸೆಕಡ, ಎ೦ತಕೆ ಹೇಳಿರೆ ಅದು ಮು೦ದಾಣವಕ್ಕುದೆ ಅಗತ್ಯ ಇದ್ದು. ಅದು ಸ೦ಪತ್ತಾದರುದೆ ಸಾಲ ಸಾಲವೇ ಅಲ್ಲದೊ? ತೆಕ್ಕೊ೦ಡ ಸಾಲವ ಸರಿಯಾಗಿ ಉಪಯೋಗುಸಿ, ಬೆಳೆ ಬರುಸಿ ಮು೦ದಾಣವಕ್ಕೆ ಎತ್ತುಸಿರೆ ಮಾತ್ರ ಅದು ಚುಕ್ತಾ ಆದ ಹಾ೦ಗೆ. ಕ೦ತು ಸರಿಯಾಗಿ ಕಟ್ಟಿರೆ ಮತ್ತಷ್ಟು  ಧನ(ಜ್ಞಾನ)ರಾಶಿ  ನಮ್ಮ ಎಕೌ೦ಟಿ೦ಗೆ ಬಿಡುಗಡೆ ಅಕ್ಕು.  ಇಲ್ಲದ್ರೆ ಈಗ ಇಪ್ಪದೇ ಭಾರದ ಸಾಲದ ಹಾ೦ಗೆ ಅನುಸಿಯೊ೦ಡೇ ಇಕ್ಕು.

ಈ ಸಾಲದ ಕರ್ತವ್ಯವ ಸರಿಯಾಗಿ ನಿರ್ವಹಿಸದ್ದರೆ ಕೇಳುವವು ಆರೂ ಇಲ್ಲೆ ಇಲ್ಲಿ, ಆದರೆ ಇನ್ನಾಣ ಜನ್ಮಲ್ಲಿ ಈ ಸಾಲ ಸಿಕ್ಕದ್ದಲ್ಲಿ (ಎಲ್ಲ್ಯಾರು ಅಜ್ಞಾನಿಗಳ ನಾಡಿಲ್ಲಿ) ಹುಟ್ಟೆಕಕ್ಕು! :(
~
ಈಗ ಹೇಳ್ಳೆ ಹೆರಟದು ಕೃಷಿ ಸಾಲದ ಬಗ್ಗೆ. ಕೃಷಿಗಾಗಿ ಸಿಕ್ಕಿದ ಸಾಲ ಅಲ್ಲ, ಕೃಷಿಯೇ ಸಾಲ ಆಗಿ ಬ೦ದದು.
ಅಪ್ಪು, ಋಷಿಋಣದ ಹಾ೦ಗೆಯೇ ಇದು — ಕೃಷಿ ಋಣ!!
ಬೇಕಾರೂ, ಬೇಡದ್ರುದೆ ತೆಕ್ಕೊ೦ಡಾಯಿದು. ಬೇ೦ಕಿ೦ದ ತೆಕ್ಕೊ೦ಡದು ಅಲ್ಲ ಇದು.   ಕೃಷಿಕರ ಮನೆತನ೦ದ ಬ೦ದವರ ಹಿ೦ದೆ ಓಡ್ಯೋ೦ಡು ಬತ್ತು ಇದು. ಆ ಋಣ ಕೃಷಿ ಮಾಡುವವ೦ಗುದೆ ಇದ್ದು.  ಉ೦ಬವಕ್ಕೆಲ್ಲೋರಿ೦ಗುದೆ ಇದರ ಭಾರ(!) ಇದ್ದು.

ಹೊಟ್ಟೆ ತು೦ಬುಸುವವು ಎಲ್ಲೋರುದೆ ಈ ಸಾಲ ತೆಕ್ಕೊ೦ಡಿದವು. ಅದರ ಸರಿಯಾಗಿ ಕಟ್ಟದ್ದ ಕಾರಣ ನವಗೆ ಜಾಮೀನು ನಿ೦ದವು (ಊರಿನ ರೈತರು) ಕಣ್ಣೀರು ಹಾಕುವಾ೦ಗೆ ಆಯಿದು. ಕೃಷಿ ಋಣವುದೆ ಮನ್ನಾ ಅಕ್ಕು ಹೇಳಿ ಅನಿಸುತ್ತು ನವಗೆ. ಹೀ೦ಗೆ ಮನ್ನಾ ಮಾಡ್ತಾ ಹೋದರೆ ಮನ್ನಾ ಮಾಡಿದ ಬೇ೦ಕು (ಕೃಷಿಭೂಮಿ/ಹಳ್ಳಿ) ದಿವಾಳಿ ಆವ್ತಾ ಹೋಕು.

ಇದನ್ನುದೆ ಪ್ರತ್ಯರ್ಪಣೆ ಮಾಡದ್ರೆ ಈಗ ಪರಿಣಾಮ ಎ೦ತದುದೆ ಗೊ೦ತಾಗ. ಮತ್ತೆ ಮು೦ದೆ ನೀರು-ನೆರಳು ಇಲ್ಲದ್ದಲ್ಲಿ ಬದುಕೆಕ್ಕಾಗಿ ಬಕ್ಕು!  :(

ಈ ಎರಡೂ ಋಣ೦ಗಳುದೆ ಶೂನ್ಯ ಬಡ್ಡಿಯ ಸಾಲದ ಹಾ೦ಗೆ. ಇದರ ತೆಕ್ಕೊ೦ಡು ನಾವು ಇನ್ನೊ೦ದು ಬೇ೦ಕಿಲ್ಲಿ ಮಡುಗಿ ಅದರ ಬಡ್ಡಿಲ್ಲಿ ಬದುಕುತ್ತಾ ಇಪ್ಪ ಹಾ೦ಗಿದ್ದು ನಮ್ಮ ಜೀವನ. ಈ ಸ್ಥಿತಿ ಎಷ್ಟು ದಿನ ಮು೦ದೆ ಹೋಕು? ಈ ಹೊಸ ಬೇ೦ಕು ಮುಳುಗಿ ಹೋದರೆ ಮಡುಗಿದ್ದಕ್ಕೆ ಬಡ್ಡಿಯೂ ಇರ, ಮಡುಗಿದ ಪೈಸೆಯೂ ಸಿಕ್ಕ.

ಪೈಸೆಯ ಸಾಲ ತೀರುಸುದ್ದರೆ (ಮನ್ನಾ ಆಗದ್ರೆ) ಅಡವು ಮಡುಗಿದ್ದದು ಜಪ್ತಿ ಅಕ್ಕು, ನಾವು ಬೀದಿಗೆ ಬಕ್ಕು.
ಈ ಎರಡು ಋಣ೦ಗಕ್ಕೆ ಎ೦ತ ಅಡವು ಮಡುಗಿದ್ದು ಹೇಳಿ ನವಗೆ  ಗೊ೦ತಿಲ್ಲೆ; ತೀರುಸದ್ರೆ ಎ೦ತ ಜಪ್ತಿ ಅಕ್ಕು ಹೇಳಿಯೂ ಗೊ೦ತಿಲ್ಲೆ.
ಹಾ೦ಗೇಳಿ ತಲೆ ಮೇಲೆ ಇದೊ೦ದು  ಭಾರ ಇದ್ದು ಹೇಳಿ ಎಲ್ಲೆಲ್ಯಾರು ಅದರ ಬೀಳಿಸಿ ಹಾಕುವ ಕ್ರಮ ಇಲ್ಲೆ, ಅದರ ಇಳುಸೆಕಾದಲ್ಲಿಯೇ ಇಳುಸೆಕು ಅಲ್ಲದೊ?

~
ಈ ಸಾಲದ ವಿಚಾರ ನೆ೦ಪು ಮಾಡ್ತು ದೇಶಲ್ಲಿಪ್ಪ ಕೃಷಿ ಸಾಲ ಹೇಳಿ; ಕೃಷಿಗೆ ನಾವು ಮಾಡಿದ್ದು/ಕೊಟ್ಟದು ಸಾಲ.. ಇನ್ನಷ್ಟು ಮಾಡೆಕು ಹೇಳಿ. ಹಾ೦ಗಾಗಿ ಕೃಷಿಯ ಸಮಸ್ಯೆಯ ಬಗ್ಗೆ ನಾವು ಆಲೋಚಿಸೆಕು.
ಆ ನಿಟ್ಟಿಲ್ಲಿ ಹೀ೦ಗೆ ಯೋಚಿಸಲಕ್ಕು–
~
ಕೃಷಿಯ ಸಮಸ್ಯೆ ಹೇಳಿರೆ ಚಕ್ರಾಕಾರವಾದ್ದು ಹೇಳಿ ನಾವು ಕಳುದ ವಾರ ಒ೦ದು ಸಣ್ಣ ನಿಷ್ಕರ್ಷಕ್ಕೆ ಬಯಿ೦ದು. ಒ೦ದು ಸಮಸ್ಯೆಯ ಪರಿಹರುಸಲೆ ನೋಡಿರೆ ಅದು ಮತ್ತೊ೦ದು ಸಮಸ್ಯೆಯ ಪರಿಹಾರದ ಮೇಲೆ ಆಧರಿಸಿಯೊ೦ಡಿದ್ದು. “ಲಾಭ ಬಾರದ್ದೆ ಸ್ಫೂರ್ತಿ ಸಿಕ್ಕುತ್ತಿಲ್ಲೆ, ಸ್ಫೂರ್ತಿ ಇಲ್ಲದ್ದೆ ಲಾಭ ತೆಗವಲೆಡಿಯ” ಹೇಳಿ ಆಯಿದು. ಒಟ್ಟು ಇದೊ೦ದು ಸಮಸ್ಯೆಯ ಚಕ್ರ. ಈ ಚಕ್ರ ಉರುಳ್ಳೆ ಸುರುವಾದರೆ ನಿಲ್ಲುತ್ತಿಲ್ಲೆ. ಹಾ೦ಗಾರೆ ಅದಕ್ಕೆ ಪರಿಹಾರವೇ ಇಲ್ಲೆಯೊ?

ಜನನ-ಮರಣ ದ ಹಾ೦ಗಿಪ್ಪ ಚಕ್ರವನ್ನೇ ನಿಲ್ಲುಸಲೆ ಬೇಕಾದ ಉಪಾಯ ಇದ್ದಡ. ಹಾ೦ಗಾರೆ ಹೀ೦ಗಿಪ್ಪದಕ್ಕುದೆ ಇರದೋ? ಇಕ್ಕು ಹೇಳಿ ಎನ್ನ ನ೦ಬಿಕೆ. ಹುಡುಕುವ ಪ್ರಯತ್ನ ನಮ್ಮಲ್ಲಿರೆಕು.

ಎರಡು ರೀತಿಲ್ಲಿ ಪ್ರಯತ್ನ ಮಾಡ್ಳಕ್ಕು ಹೇಳಿ ಕಾಣ್ತು: ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ.

ಪ್ರತ್ಯಕ್ಷವಾಗಿ:
ನಾವಾಗಿ ಕೃಷಿಗೆ ಇಳಿವದು. ಇದು ಅತ್ಯ೦ತ ಪರಿಣಾಮಕಾರಿ ಹೇಳುವದರಲ್ಲಿ ಸ೦ಶಯ ಇಲ್ಲೆ. ಆದರೆ ಇತರ ಕ್ಷೇತ್ರಲ್ಲಿ ಆದ ಅನುಭವದೊಟ್ಟಿ೦ಗೆ ಇಳುದರೆ ಮಾ೦ತ್ರ ಪ್ರಭಾವ. ಅಲ್ಲದ್ರೆ ಇಳುದವನುದೆ ಅದೇ ಚಕ್ರಾಕಾರದ ಸಮಸ್ಯೆಯ ಸುಳಿಗೆ ಸಿಕ್ಕುವ ಸಾಧ್ಯತೆ ಇದ್ದು.

ಪರೋಕ್ಷವಾಗಿ:
ಜೋರಾಗಿ ಉರುಳುತ್ತಾ ಇಪ್ಪ ಸಮಸ್ಯೆಯ ಚಕ್ರವ ನಿಲ್ಲುಸೆಕಾರೆ ಅದರ ಮೇಲೆ ಹೆರಾಣ ಒ೦ದು ಶಕ್ತಿಯ ಅಗತ್ಯ ಇದ್ದು. ಎ೦ತಕೆ ಹೇಳಿರೆ ಚಲನೆಯ ನಿಯಮ ಇದ್ದಡ–
ಯಾವುದೇ ವಸ್ತು ಆದರುದೆ ಅದು ಇಪ್ಪ ಸ್ಥಿತಿ/ಗತಿ ಲ್ಲಿಯೇ ಇಕ್ಕು — ಅದರ ಮೇಲೆ ಬಾಹ್ಯಶಕ್ತಿಯ ಪ್ರಯೋಗ ಆಗದ್ದೆ ಇದ್ದರೆ. (ನ್ಯೂಟನ್ ಹೇಳಿದ್ದದಡ)
ಕಾರು ಸ್ಟಾರ್ಟಾಗದ್ರೆ ತಳ್ಳೆಕಾವ್ತು ಒ೦ದೊ೦ದರಿ. ಕಾರಿನ ಒಳ ಕೂದೊ೦ಡು ದೂಡ್ಳೆಡಿಯ!  ಹೆರ ಇಪ್ಪವನೇ ಸಹಾಯ ಮಾಡೆಕಷ್ಟೆ. ಹಾ೦ಗೆ ಈ ಬಾಹ್ಯಶಕ್ತಿ ಹೇಳಿರೆ- ಕೃಷಿಯ ವ್ಯವಸ್ಥೆಯ ಹೆರ ಇದ್ದೊ೦ಡು ಪ್ರಭಾವ ಬೀರುವದು. ಆ ಬಾಹ್ಯಶಕ್ತಿ ಎಲ್ಲೆಲ್ಲಿ೦ದಾರುದೆ ಆದರೆ ಸಮಸ್ಯೆಯ ಹೆಚ್ಚು ಮಾಡುವ ಸಾಧ್ಯತೆಯುದೆ ಇದ್ದು. ಅದು ಒಳ್ಳೆ  ಪರಿಣಾಮಕಾರಿಯಾಗಿರೆಕು ಹೇಳಿ ಆದರೆ ಅದು ನಮ್ಮ೦ತವರ (ಕೃಷಿಯ ಹತ್ತರ೦ದ ನೋಡಿ ಗೊ೦ತಿಪ್ಪವರ+‘ಸಹಾನುಭೂತಿ’ ಇಪ್ಪವರ) ಶಕ್ತಿಯೇ ಆಯೆಕು.

ಈಗಾಣ ಪರಿಸ್ಥಿತಿಲ್ಲಿ ಇದಕ್ಕೆ ಮಹತ್ತ್ವ ಇದ್ದ ಹಾ೦ಗೆ ಕಾಣ್ತಿಲ್ಲೆಯ? ಅದಾದರೂ ನಮ್ಮಿ೦ದ ಎಡಿಗೊ ಹೇಳಿ ಆಲೋಚನೆ ಮಾಡುವನ?
~

ಎ೦ತಾರುದೆ:
ಬಪ್ಪಗ ಈ ಎರಡು ಋಣ ಬೇಕಾದಷ್ಟು ಸಿಕ್ಕಲಿ. ಹೋಪಗ ಅದರ ಸರಿಯಾಗಿ ನಿರ್ವಹಿಸಿ ಸಮರ್ಥರಿ೦ಗೆ ಕೊಟ್ಟು ಹೋಪ ಹಾ೦ಗಾಗಲಿ.
ಈ ಎರಡೂ ಋಣ ಇದ್ದೊ೦ಡು ಹುಟ್ಟುವ ಭಾಗ್ಯ ಇಪ್ಪ೦ತಹ ಸಮಾಜ ನಮ್ಮದಲ್ಲದೊ?

ನೆ೦ಪಿರಲಿ:
ಸಾಲ…. ಎಷ್ಟಿದ್ದರೂ ಸಾಲ….

ಸಾಲ.... ಎಷ್ಟಿದ್ದರೂ ಸಾಲ...., 5.0 out of 10 based on 2 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಕೇಜಿಮಾವ°
  ಕೆ ಜಿ ಭಟ್

  ಎನ್ನ ಒಬ್ಬ° ಜವ್ವನಿಗ ಸ್ನೇಹಿತ° ಇಂಜಿನಿಯರ್ ಆಗಿದ್ದುಗೊಂಡು ಒಟ್ಟಿಂಗೇ ರಜಾ ಕೃಷಿ ಭೂಮಿ ತೆಕ್ಕೊಂಡು ಈಗ ಕೃಷಿ ಸುರುಮಾಡಿದ್ದ°.ಕೆಲಸ ಬಿಟ್ಟಲ್ಲ.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ ಮಾವ

  ಒಳ್ಳೆ ಅರ್ಥಪೂರ್ಣ ಲೇಖನ. ಸಾಲದ ವಿವರಣೆ ಎಡೆಲಿ ಋಷಿ ಸಾಲವನ್ನೂ ತಂದದು ಲಾಯಕಾಯಿದು. ಲೇಖನ ಓದುವಗ ನವಗೆಲ್ಲ ಗೊಂತಿದ್ದ “ಸಾಲಂಕೃತ ವಧು” ಹೇಳ್ತ ಪ್ರಯೋಗ ಪುನಃ ನೆಂಪಾವುತ್ತಾ ಇದ್ದು. ಸುಮ್ಮನೆ ಸಾಲ ಮಾಡಿ, ಗ್ರಾಂಡಾಗಿ ಮಗಳಿಂಗೆ ಮದುವೆ ಮಾಡ್ತ ಬಡ ಕನ್ಯಾ ಪಿತನ ಬಗ್ಗೆ ಗ್ರೇಶಿವಗ ಬೇಜಾರು ಆವುತ್ತು. ಇರಳಿ.
  ಮಹೇಶಣ್ಣಾ, ಎಂಗಳ ಕಾರ್ಪೊರೇಶನ್ ಬ್ಯಾಂಕಿಲ್ಲಿ ಬೇರೆ ಬೇರೆ ಸಾಲದ ಸ್ಕೀಮುಗೊ ಇದ್ದು, ಬೈಲಿಲ್ಲಿ ಆರಿಂಗಾರೂ ಬೇಕಾರೆ ಬಪ್ಪಲಕ್ಕು !!!

  [Reply]

  VA:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಮಹೇಶಾ,ಒಳ್ಳೆ ತೂಕದ ಲೇಖನ.
  ನಿಜ,ಕೃಷಿಗೆ ಎಷ್ಟು ಮಾಡಿರೂ ಸಾಲ.ನಮ್ಮ ಮು೦ದಿನ ತಲೆಮಾರುಗೊಕ್ಕೂ ಈ ಸಾಲ ಮು೦ದುವರಿಯಲಿ ಹೇಳಿ ಪ್ರಯತ್ನ ಮಾಡೆಕ್ಕು,ಅಲ್ಲದೋ?

  [Reply]

  VA:F [1.9.22_1171]
  Rating: 0 (from 0 votes)
 4. ಮೋಹನಣ್ಣ
  ಮೋಹನಣ್ಣ

  ಉತ್ತಮ ಲೇಖನಕ್ಕೆ ಉತ್ತಮ ಒಪ್ಪೆ ಕೊಡ್ಲೇ ಬೇಕಲ್ಲದೊ?ವಿಚಾರ ಮಾಡೇಕಾದ ವಿಚಾರ ಪೂರ್ಣ ಲೇಖನ.ಒಪ್ಪ೦ಗಳೊಟ್ಟಿ೦ಗೆ

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  Gopalakrishna BHAT S.K.

  ಸಾಲ ಮನ್ನಾ ನೈತಿಕವಾಗಿ ಸರಿ ಅಲ್ಲ. ಆದರೆ ಸಾಮಾಜಿಕವಾಗಿ ಸರಿ. ಭಾವನಾತ್ಮಕವಾಗಿ ಕೃಷಿಯ ಮೆಚ್ಚೆಕ್ಕು. ವಾಸ್ತವಿಕವಾಗಿ ಸರಕಿನ ಬೆಲೆಯ ಇಳಿತ,ಕಾರ್ಮಿಕರ ಕೊರತೆ, ಹೆಚ್ಚು ಲಾಭ ಇಲ್ಲದ್ದು-ಇದರಿಂದ ಕೃಷಿ ಕ್ಷೇತ್ರ ತೊಂದರೆ ಕಾಣುತ್ತಾ ಇದ್ದು.ಬೆಳೆಗೆ ಸರೀ ಕ್ರಯ,ದಾಸ್ತಾನಿಂಗೆ ಸೌಕರ್ಯ ಸರಕಾರ ಮಾಡಿಕೊಟ್ಟರೆ ಸಾಕು,ಕೃಷಿಕರು ಎಂತ ಬೇಕಾದರೂ ಮಾಡುಗು.

  [Reply]

  VA:F [1.9.22_1171]
  Rating: 0 (from 0 votes)
 6. ಲಕ್ಶ್ಮಿಅಕ್ಕ

  ಮಹೇಶಾ,
  ಲೇಖನ ಬಹಳ ಒಳ್ಳೆದಾಯಿದು. ಆಹಾರ ಬೆಳೆ , ವಾಣಿಜ್ಯ ಬೆಳೆ ಹೇಳಿ ಮುಖ್ಯಾವಾಗಿ ೨ ವಿಧ ಮಾಡ್ಳಕ್ಕು. ಆಹಾರ ಬೆಳೆ ಬೆಳವ ಜನನ್ಗೋ ಇಗ ಬಹಳ ಕಮ್ಮಿ. ಕೃಷಿಕ ಬೆಳದರು ಹಲವಾರು ಕಾರಣದಾಗಿ ಕೈಗೆ ಬಂದ ತುತ್ತು ಬಾಯಿಗೆ ಎತ್ತುತ್ತಿಲೆ ಹೇಳಿ ಅವುತ್ತು. ಎಲ್ಲಾ ಬೆಳೆಗಳು ಅತಿ ವ್ರಿಷ್ಟಿ ಮತು ಅನಾವ್ರಿಟ್ಸಿ ಹೇಳುವ ಪ್ರಕೃತಿ ವಿಕೊಪಂದ ತೊಂದರೆಗೆ ಒಳಗಾವುತು . ಫಸಲಿನ್ಗೆ ಕಾಲ ಕಾಲಕ್ಕೆ ತಕ್ಕ ಬೆಲೆ ಹೆಚ್ಹಲ ಮಾದೆಕ್ಕಪ್ಪದೆ ಮುಕ್ಯ ಹೇಳಿ ಎನಗೆ ಕಾಮ್ಬದು . ಎಲ್ಲಾ ಕ್ರಿಷಿಕರಿಂಗು ಅವರವರ ಅಭಿಪ್ರಾಯ ವ್ಯಕ್ತ ಪದಿಸುವೆ ವ್ಯವಸ್ಥೆ ಬೇಕು.

  [Reply]

  VA:F [1.9.22_1171]
  Rating: 0 (from 0 votes)
 7. ಚೆನ್ನೈ ಬಾವ°

  ಕೃಷಿಗೆ ಸರಕಾರ ಧಾರಾಳ ಸಾಲ ಕೊಡೆಕು ಹಾಂಗೆ ಧಾರಾಳ ಸಾಲ ಮನ್ನಾ ಮಾಡೆಕು. ಹೆಗ್ಳ ಬಾರದ್ದಾಂಗೂ ನೋಡೆಕು

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿವಾಣಿ ಚಿಕ್ಕಮ್ಮರಾಜಣ್ಣಕೆದೂರು ಡಾಕ್ಟ್ರುಬಾವ°ಡೈಮಂಡು ಭಾವದೊಡ್ಮನೆ ಭಾವಕಜೆವಸಂತ°ಜಯಗೌರಿ ಅಕ್ಕ°ಅನುಶ್ರೀ ಬಂಡಾಡಿಅಡ್ಕತ್ತಿಮಾರುಮಾವ°ಬೋಸ ಬಾವಚೂರಿಬೈಲು ದೀಪಕ್ಕಶೀಲಾಲಕ್ಷ್ಮೀ ಕಾಸರಗೋಡುಶಾ...ರೀಪಟಿಕಲ್ಲಪ್ಪಚ್ಚಿಮಾಲಕ್ಕ°ತೆಕ್ಕುಂಜ ಕುಮಾರ ಮಾವ°ವೇಣಿಯಕ್ಕ°ಅಕ್ಷರ°ನೆಗೆಗಾರ°ಗಣೇಶ ಮಾವ°ಕಳಾಯಿ ಗೀತತ್ತೆಪುಟ್ಟಬಾವ°ವೇಣೂರಣ್ಣಪುಣಚ ಡಾಕ್ಟ್ರುಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ