Oppanna.com

ಸಂಸ್ಕೃತ ಕಲಿವದು ಹೇಳಿರೆಂತರ?

ಬರದೋರು :   ಡಾಮಹೇಶಣ್ಣ    on   07/05/2013    13 ಒಪ್ಪಂಗೊ

      ಸಂಸ್ಕೃತ ಕಲಿವದು ಹೇಳಿರೆಂತರ?

ಬಹುಶಃ ಈ ವಿಷಯವ ನಮ್ಮ ಸಮಾಜ ತಿಳಿಯೆಕಾದ್ದು ಅತ್ಯಗತ್ಯ.

ಸಂಸ್ಕೃತ ಕಲಿವದು ಹೇಳ್ಯಪ್ಪದ್ದೇ ‘ವೇದಪಾಠ’ ಅಥವಾ ‘ಮಂತ್ರ ಕಲಿವದು’ ಹೇಳಿಯೇ ಹೆಚ್ಚಿನವಕ್ಕುದೆ ತಲೆಗೆ ಹೋಪದು!

ಒಂದರಿ ಹೀಂಗಾಗಿತ್ತು – ಆರೋ ಎನ್ನತ್ರೆ ಮಾತಾಡ್ವಗ ಆನು ಫ್ರಾನ್ಸಿಲ್ಲಿಪ್ಪದು (ಅಂಬಗ) ಹೇಳಿ ಗೊಂತಾತು. ಆನು ಸಂಸ್ಕೃತ ಫೀಲ್ಡಿಲ್ಲಿಪ್ಪದು ಹೇಳಿ ಅವಕ್ಕೆ ಗೊಂತಿತ್ತು. ಅವು ಕೇಳಿದವು – `ಅಲ್ಲಿ ಯಾವುದಾರು ದೇವಸ್ಥಾನಲ್ಲಿಯಾ?’ ಹೇಳಿ. ಮತ್ತೆ ಆನು ವಿವರುಸಿ ಹೇಳೆಕಾತು – ಎನ್ನ ಕೆಲಸ ಎಂತದು ಹೇಳಿ.

ಕೆಲವು ಸರ್ತಿ ಸಂಸ್ಕೃತ ಕಲಿವ ವಿದ್ಯಾರ್ಥಿಯ ಹತ್ರೆ- ನಿನಗೆ ಉದ್ಯೋಗ ಸಿಕ್ಕುಗೋ? ಜೀವನಕ್ಕೆಂತ ಮಾಡ್ತೆ? ಈಗಾಣ ಹೊಸ ಹೊಸ (ಪೋಪ್ಯುಲರ್, ಟ್ರೆಂಡ್ ಇಪ್ಪ) ವಿಷಯಂಗಳ ಕಲ್ತರೆ ಮಾಂತ್ರ ಪ್ರಯೋಜನ ಹೇಳಿ ತನ್ನಲ್ಲಿಪ್ಪ ಭ್ರಮೆಯ ಅವನ ತಲೆಗೆ ತುಂಬುಸುವದೋ ನಿರುತ್ಸಾಹಗೊಳುಸುವದೋ ಮಾಡುವವುದೆ ಇದ್ದವು. (ಇದೆಲ್ಲ ಕೇರಿಯರ್ ನ ಬಗ್ಗೆ ಉಪದೇಶ ಮಾಡುವಗ ತಿಳಿಯದ್ದೇ ಅಪ್ಪ ಅವಾಂತರ ಆಗಿಕ್ಕು.)

ಸಂಸ್ಕೃತ ಕ್ಷೇತ್ರ ಹೇಳಿರೆಂತದು, ಎಷ್ಟು ವಿಸ್ತಾರದ್ದು ಹೇಳಿ ದೊಡ್ಡವಕ್ಕೆ ಗೊಂತಿಲ್ಲದ್ರೆ ಸಣ್ಣವರ ಪ್ರೋತ್ಸಾಹಿಸುವದು ಹೇಂಗೆ?

ಹಾಂಗಾಗಿ ನಾವೀಗ ಪ್ರಸ್ತುತ ಸಂಸ್ಕೃತ ಶಿಕ್ಷಣ ಹೇಳಿರೆಂತ? ಅದರ ಅಧ್ಯಯನಕ್ರಮ ಯಾವ ರೀತಿಲ್ಲಿದ್ದು ಹೇಳಿ ಒಂದು ರಜ್ಜ ಪರಿಶೀಲಿಸುವ.

ಸಾಮಾನ್ಯವಾಗಿ ಹಿಂದೀ, ಕನ್ನಡ, ಇಂಗ್ಲಿಷ್ ಹಾಗೂ ಇತರ ಭಾಷೆಗಳ ಕಲಿಯುವಿಕೆಲ್ಲಿ ಆಯಾಯ ಭಾಷೆಯ ವ್ಯಾಕರಣ, ಮತ್ತು ಕೆಲವು ಗದ್ಯ ಪದ್ಯಂಗಳ ಕಲಿಯುವಿಕೆ ಇಪ್ಪದು. ಆದರೆ ಸಂಸ್ಕೃತ ಶಿಕ್ಷಣ ಅಷ್ಟಕ್ಕೇ ಸೀಮಿತ ಅಲ್ಲ. ಸಂಸ್ಕೃತ ಬರಿಯ ಭಾಷೆ ಮಾತ್ರ ಆಗಿಲ್ಲದ್ದೆ ಅಗಾಧ ಜ್ಞಾನಸಂಪತ್ತಿನ ಆಕರ ಅಲ್ಲದಾ? ಹಾಂಗಾಗಿ ಸಂಸ್ಕೃತಶಿಕ್ಷಣಲ್ಲಿಪ್ಪ ಮೂರು ಮುಖ್ಯವಾದ ಅಂಶಂಗಳ ಹೀಂಗೆ ಹೇಳ್ಳಕ್ಕು –

. ಭಾಷಾಧ್ಯಯನ

. ಸಂಸ್ಕೃತದಲ್ಲಿಪ್ಪ ವಾಙ್ಮಯದ ಅಧ್ಯಯನ

. ಅಂತರ್ವಿಷಯೀಯ (inter-disciplinary) ಅಧ್ಯಯನ

ವಿವರವಾಗಿ ಹೇಳೆಕಾರೆ –

ಭಾಷಾಧ್ಯಯನ ಹೇಳ್ವದು ಭಾಷೆಯ ಸ್ವರೂಪ, ವಾಕ್ಯ ರಚನೆ, ಅದರ ಉಪಯೋಗ, ಸಂಭಾಷಣೆ, ಸರಳ ವ್ಯಾಕರಣ ನಿಯಮಂಗಳ ಅಭ್ಯಾಸ. ಮತ್ತೆ ಕೆಲವು ಕಾವ್ಯ, ನಾಟಕದ ಬಗ್ಗೆ ತಿಳ್ಕೊಂಬ ಸುರುವಾಣ ಸ್ತರ. ಇದು ಸಾಮಾನ್ಯವಾದ್ದು.

ಆದರೆ ಸಂಸ್ಕೃತದಲ್ಲಿ ಹುಗ್ಗಿಯೊಂಡಿಪ್ಪ ವಿಶಿಷ್ಟ ವಿಷಯಂಗಳ ತಿಳಿಯೆಕು ಹೇಳಿ ಆದರೆ ವಾಙ್ಮಯದ ಅಧ್ಯಯನ ಮಾಡೆಕು. ಭಾರತೀಯ ತತ್ತ್ವಶಾಸ್ತ್ರ, ಭಾಷಾಶಾಸ್ತ್ರ, ಸಾಹಿತ್ಯಶಾಸ್ತ್ರ, ನ್ಯಾಯಶಾಸ್ತ್ರ, ಜ್ಯೋತಿಷಶಾಸ್ತ್ರ,ವೇದಾಂತ ಹೀಂಗಿಪ್ಪದೆಲ್ಲ ಇಲ್ಲಿದ್ದು. ಶಾಸ್ತ್ರಂಗ ಹೇಳಿದ ಕೂಡ್ಳೆ ಅದು ಎಂತದೋ ಹಳತ್ತು ಹೇಳಿ ತಿಳಿವಲಾಗ. ಇಂದಿಂಗೂ ಬೇಕಾದ ನಿತ್ಯಸತ್ಯಂಗ ಇಪ್ಪದದರಲ್ಲಿ.

ಇದೆಲ್ಲ ಪೂಜೆ-ಪುರಸ್ಕಾರಂಗಕ್ಕೆ ಸಂಬಂಧ ಪಟ್ಟದು ಹೇಳಿಯೂ ತಿಳಿವಲಾಗ. ಶಾಸ್ತ್ರ ಹೇಳಿರೆ ನಮ್ಮ ಮನಸ್ಸು, ವ್ಯವಹಾರ ಮತ್ತೆ ಬುದ್ಧಿಯ ತೀಕ್ಷ್ಣ ಮಾಡ್ಳೆ ಇಪ್ಪ ಜ್ಞಾನಶಾಖೆಗ.

ಅಂತರ್ವಿಷಯಕ ಅಧ್ಯಯನ ಹೇಳಿರೆಂತದು? ಗಣಿತ, ವೈದ್ಯಕೀಯ, ಖಗೋಲ, ರಸಾಯನಶಾಸ್ತ್ರ ಇತ್ಯಾದಿ ಸುಮಾರು ವೈಜ್ಞಾನಿಕ ವಿಚಾರಂಗ, ಮ್ಯಾನೇಜ್ಮೆಂಟ್, ರಾಜನೀತಿ, ಕಾನೂನು, ಪರಿಸರ ಸಂರಕ್ಷಣೆ ಹೀಂಗಿಪ್ಪ  ಈಗ ಎಲ್ಲೋರುದೆ ಬೇಕು ಬೇಕು ಹೇಳುವ ಸರ್ವಜನೋಪಯೋಗಿ ವಿಷಯಂಗ ಸಂಸ್ಕೃತಲ್ಲಿ ಸಾಕಷ್ಟು ಇದ್ದು. ಹೀಂಗಿಪ್ಪ ವಿಷಯಂಗ ಬೇರೆ ಭಾಷೆಲ್ಲಿ (ಇಂಗ್ಲಿಷಿಲ್ಲಿ), ಬೇರೆ ಬೇರೆ ದೇಶಂಗಳಲ್ಲಿಯೂ ಇದ್ದು, ಪ್ರಸಿದ್ಧವಾಗಿಪ್ಪದು. ಇಂತಹ ಆಧುನಿಕ ವಿಷಯಂಗಳೊಟ್ಟಿಂಗೆ ಇದರ ಕಲಿವದು ಅಂತರ್ವಿಷಯೀಯ ಅಧ್ಯಯನ ಆವ್ತು. ಉದಾಃ – ಸೈಕಾಲಜಿ ಮತ್ತು ಭಗವದ್ಗೀತೆ, ರಾಮಾಯಣ ಮತ್ತು ಮೇನೇಜ್ಮೆಂಟ್, ಅರ್ಥಶಾಸ್ತ್ರ ಮತ್ತು ಲೀಡರ್-ಶಿಪ್ ಇತ್ಯಾದಿಗ….

ಅದಪ್ಪು, ಇದರ ಎಲ್ಲ ಎಲ್ಲಿ ಕಲಿವಲಕ್ಕು? ಆರು ಕಲಿವಲೆಡಿಗು? ಕಲಿಯೆಕಾರೆ ಎಂತ ಅರ್ಹತೆ ಬೇಕು? ಹೇಳಿಯೆಲ್ಲ ನವಗೆ ಗೊಂತಿರೆಕು. ಹತ್ತನೇ ಕ್ಲಾಸಾದ ಮತ್ತೆ ಸಂಸ್ಕೃತ ಕಲಿಯೆಕಾರೆ ಎಂತೆಂತ ಅವಕಾಶಂಗ ಇದ್ದು? ಹೇಳ್ವದೆಲ್ಲ ನವಗೆ ಗೊಂತಿರೆಕು.

ಹೇಗೆ ಬೇರೆ ವಿಷಯಲ್ಲೆಲ್ಲ ಪದವಿಪೂರ್ವ, ಸ್ನಾತಕ, ಸ್ನಾತಕೋತ್ತರ, ಬಿಎಡ್, ಎಂಎಡ್, ಎಂಫಿಲ್, ಪಿಎಚ್ ಡಿ ಹೇಳಿ ಕೋರ್ಸುಗ ಇರ್ತೊ ಅದೇ ರೀತಿ ಸಂಸ್ಕೃತ ಕಲಿಯುವಿಕೆಲ್ಯೂ ಇದ್ದು. ಇಲ್ಲಿ ಕೆಳ ಕೊಟ್ಟ ಪಟ್ಟಿಯ ನೋಡಿ –

  • ಪಿಯುಸಿ                        – ಪ್ರಾಕ್ಶಾಸ್ತ್ರೀ       (2 ವರ್ಷ) —  ಅರ್ಹತೆ – 10 ನೇ ಕ್ಲಾಸು
  • ಡಿಗ್ರಿ (ಬಿಎ)                   – ಶಾಸ್ತ್ರೀ                  (3 ವರ್ಷ) —  ಅರ್ಹತೆ – +2
  • ಸ್ನಾತಕೋತ್ತರ (ಎಂಎ)  – ಆಚಾರ್ಯ             (2 ವರ್ಷ) —  ಅರ್ಹತೆ – ಯಾವುದೇ ಡಿಗ್ರಿ
  • ಬಿಎಡ್                           – ಶಿಕ್ಷಾಶಾಸ್ತ್ರೀ          (1 ವರ್ಷ) – – ಅರ್ಹತೆ – ಡಿಗ್ರಿ
  • ಎಂಎಡ್                        – ಶಿಕ್ಷಾ ಆಚಾರ್ಯ     (೧ ವರ್ಷ) – – ಅರ್ಹತೆ – ಶಿಕ್ಷಾಶಾಸ್ತ್ರೀ
  • ಎಂಫಿಲ್                        – ವಿಶಿಷ್ಟಾಚಾರ್ಯ     (೧ ವರ್ಷ) – – ಅರ್ಹತೆ – ಆಚಾರ್ಯ/ಎಂಎ.
  • ಪಿಎಚ್ ಡಿ                      – ವಿದ್ಯಾವಾರಿಧಿ        (ಕನಿಷ್ಠ 2 ವರೆ ವರ್ಷ) – ಅರ್ಹತೆ – ಆಚಾರ್ಯ/ಎಂಎ.

ಹೇಂಗೆ ಕಾಲೇಜಿಲ್ಲಿ ಸೈನ್ಸ್, ಆರ್ಟ್ಸ್, ಕೋಮರ್ಸ್ ಹೇಳಿ ಡಿಪಾರ್ಟ್ಮೆಂಟುಗ ಇರ್ತವೋ ಹಾಂಗೆಯೇ ಸಂಸ್ಕೃತ ವಿಶ್ವವಿದ್ಯಾಲಯಲ್ಲಿ  ವಿಷಯಾನುಗುಣವಾಗಿ ಹಲವು ವಿಭಾಗಂಗ ಇರ್ತು.  ಈ ರೀತಿ –

  • ವ್ಯಾಕರಣ (ಗ್ರಾಮರ್) – ಈ ವಿಷಯ ತೆಕ್ಕೊಂಡರೆ ಉಚ್ಚಾರಣೆ, ಭಾಷೆಯ ಸರಿ-ತಪ್ಪುಗಳ ವಿವೇಚನೆ, ಸಂಸ್ಕೃತಭಾಷೆಯ ವೈಜ್ಞಾನಿಕತೆ, ಹೊಸ ಶಬ್ದಗಳ ರಚನೆ, ಶಬ್ದ-ಅರ್ಥ ಇತ್ಯಾದಿಯಾಗಿ ಭಾಷಾಶಾಸ್ತ್ರದ ಜ್ಞಾನ ಸಿಕ್ಕುಗು.
  • ಸಾಹಿತ್ಯ (ಲಿಟರೇಚರ್) – ಇಲ್ಲಿ ಕಾವ್ಯ-ನಾಟಕ ಕಲಿವಲಕ್ಕು. ಅಷ್ಟೇ ಅಲ್ಲ ರಸಸಿದ್ಧಾಂತ, ಛಂದಸ್ಸು, ಅಲಂಕಾರ, ಗದ್ಯ ಪದ್ಯಗಳ ಸೌಂದರ್ಯ ಹೀಂಗಿಪ್ಪದೆಲ್ಲ ಗೊಂತಕ್ಕು.
  • ಸಿದ್ಧಾಂತ ಜ್ಯೌತಿಷ – ಗಣಿತ, ಖಗೋಲಶಾಸ್ತ್ರಲ್ಲಿ ಭಾರತೀಯರ ಸಾಧನೆ, ಕೊಡುಗೆಗಳ ಬಗ್ಗೆ ಕಲಿಯೆಕಾರೆ ಇದು.
  • ಫಲಿತ ಜ್ಯೋತಿಷ – ಗ್ರಹಗಳ ಪ್ರಭಾವ, ಜಾತಕ, ಪ್ರಶ್ನೆ ಇತ್ಯಾದಿಗಳ ಅಧ್ಯಯನಕ್ಕೆ ಈ ಶಾಸ್ತ್ರ.
  • ವೇದಾಂತ (ಅದ್ವೈತ/ದ್ವೈತ/ವಿಶಿಷ್ಟಾದ್ವೈತ) – ಭಾರತೀಯ ತತ್ತ್ವಶಾಸ್ತ್ರ (ಫಿಲಾಸಫಿ),  ಸಂಸ್ಕೃತಿಯ ಮೂಲ, ಭಗವದ್ಗೀತೆ, ಉಪನಿಷತ್, ಆತ್ಮ, ಪರಮಾತ್ಮ, ಸ್ಪಿರಿಚುವಾಲಿಟಿ (ಅಧ್ಯಾತ್ಮ) ಹೀಂಗಿಪ್ಪ ರೋಚಕ ವಿಚಾರ ತಿಳಿವಲೆ ಈ ವಿಷಯ.
  • ನ್ಯಾಯ  – ರೀಸನಿಂಗ್ ಮತ್ತು ಲಾಜಿಕ್, ಸರಿಯಾದ ತರ್ಕ ಯಾವುದು, ಪೆದಂಬು ಯಾವುದು, ವಿತಂಡವಾದ ಎಂತದು ಹೇಳಿ ತಿಳಿವಲೆ, ವಾದ-ಪ್ರತಿವಾದ ಚಾತುರ್ಯ ಗಳಿಸೆಕಾರೆ ಇದರ ಕಲಿಯೆಕು. ಪ್ರತ್ಯಕ್ಷ, ಅನುಮಾನ, ಸರಿಯಾದ ಕಾರಣ, ತಪ್ಪು ಕಾರಣ ಹೀಂಗಿಪ್ಪದರ ಪಾಠ ಇದ್ದಿಲ್ಲಿ.
  • ಯೋಗ – ಯೋಗಾಸನ ಮಾತ್ರವಲ್ಲದ್ದೆ, ಯೋಗಶಾಸ್ತ್ರ, ಮನಸ್ಸಿನ ನಿಗ್ರಹ, ಯೋಗದರ್ಶನದ ಬಗ್ಗೆ ಸರಿಯಾದ ಅಧ್ಯಯನಕ್ಕೆ ಈ ವಿಷಯ.
  • ಮೀಮಾಂಸಾ, ಪುರಾಣಇತಿಹಾಸ, ವೇದಭಾಷ್ಯ, ಧರ್ಮಶಾಸ್ತ್ರ ಮುಂತಾದ ವಿಷಯಕ್ಕೆಲ್ಲ ಪ್ರತ್ಯೇಕ ವಿಭಾಗಂಗ ಇರ್ತು.

ಇವಲ್ಲದೇ ಪಾಠ್ಯಕ್ರಮದಲ್ಲಿ ಇದರೊಟ್ಟಿಂಗೆ ಸಂಸ್ಕೃತೇತರ ವಿಷಯಂಗಳ ಅಧ್ಯಯನವೂ ಮಾಡ್ಳಕ್ಕು. ಉದಾ – ಇಂಗ್ಲೀಷ್, ಹಿಂದೀ, ಕನ್ನಡ, ಇಂಗ್ಲಿಷ್ ಲಿಟರೇಚರ್, ಹಿಸ್ಟರಿ, ಇಕೊನೊಮಿಕ್ಸ್, ಕಂಪ್ಯೂಟರ್ ಸೈನ್ಸ್, ಗಣಿತ -ಇತ್ಯಾದಿ ವಿಷಯಂಗ. ಡಿಗ್ರಿಲ್ಲಿ ಒಂದು ಶಾಸ್ತ್ರ, ಎರಡು ಆಧುನಿಕ ವಿಷಯಂಗ ಹೇಳಿ ತೆಕ್ಕೊಂಬಲಕ್ಕು.

ಸಂಸ್ಕೃತ ವಿಶ್ವವಿದ್ಯಾಲಯಂಗಳಲ್ಲಿ ಮೇಲೆ ಹೇಳಿದ ರೀತಿಯ ಡಿಗ್ರಿಗಳ ಅಧ್ಯಯನ ಸಾಧ್ಯ. ಶೃಂಗೇರಿಯ ರಾಷ್ಟ್ರಿಯ ಸಂಸ್ಕೃತ ಸಂಸ್ಥಾನಲ್ಲಿ ಮೇಲೆ ಹೇಳಿದ ಶಾಸ್ತ್ರಂಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಡಿಗ್ರಿಯ ಪಡೆವಲಕ್ಕು. ಕೆಲವು ಕಾಲೇಜಿಲ್ಲಿ ಶಿರೋಮಣಿ, ವಿದ್ವತ್ ಹೇಳಿ ಡಿಗ್ರಿಯ ಹೆಸರು ಇರ್ತು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯಲ್ಲಿ ಕೋರ್ಸುಗಳ ಹೆಸರು – ಸಾಹಿತ್ಯ (ಪಿಯುಸಿ), ವಿದ್ವನ್ಮಧ್ಯಮಾ (ಬಿ.ಎ.), ವಿದ್ವದುತ್ತಮಾ (ಎಂ.ಎ.) ಹೇಳಿ. ಹೆಚ್ಚಿನ ವಿವರಕ್ಕೆ www.ksu.ac.in ,  www.ksu.ac.in/directorate ನ ನೋಡಿ ತಿಳ್ಕೊಳ್ಳಿ.

ತಿರುಪತಿಯ ರಾಷ್ಟ್ರಿಯ ಸಂಸ್ಕೃತವಿದ್ಯಾಪೀಠಲ್ಲಿ ಕೆಲವು ಆಧುನಿಕ ವಿಷಯವನ್ನುದೆ ಕಲಿಯುವ ಅವಕಾಶ ಇದ್ದು. ಸಂಸ್ಕೃತ ಶಾಸ್ತ್ರವ ಪ್ರಮುಖ ವಿಷಯ (ಮೇಜರ್) ಆಗಿ ತಗೊಂಡು ಮೇಥಮೆಟಿಕ್ಸ್ ಮತ್ತು ಕಂಪ್ಯೂಟರ್ ಸೈನ್ಸ್ ಕಲಿಯುವ ಅವಕಾಶ ಇದ್ದು. ಪಿಯುಸಿಲ್ಲಿ ವಿಜ್ಞಾನ ಕಲ್ತವಕ್ಕೆ ಇದೊಂದು ಉತ್ತಮ ಅವಕಾಶ.

ಇಲ್ಲಿ ಅಂತರ್ವಿಷಯೀಯ ಅಧ್ಯಯನಕ್ಕೆ ಅವಕಾಶ ಇದ್ದು. ಕಂಪ್ಯೂಟರ್ ಮತ್ತು ನ್ಯಾಯ-ವ್ಯಾಕರಣ ವಿಷಯದ ಸಂಯುಕ್ತ ಕೋರ್ಸ್ – ಶಾಬ್ದಬೋಧ (ಎಂ.ಎ.) ಹೇಳಿ ಒಂದಿದ್ದು. Post Graduate Diploma in Yoga Vijnana, Post Graduate Diploma in Natural Language Processing, P.G.Diploma in Yoga Therapy and Stress Management ಹೀಂಗಿಪ್ಪ ಕೋರ್ಸುಗ ಇದ್ದಡ. ಹೆಚ್ಚಿನ ವಿವರಕ್ಕೆ http://rsvidyapeetha.ac.in/regular-courses.html ನೋಡಿ.

ಮುಂಬಯಿಯ ಐಐಟಿಲ್ಲಿ “ಇಂಡಿಯನ್ ಸೈನ್ಸ್ ಏಂಡ್ ಟೆಕ್ನೋಲಜಿ ಇನ್ ಸಂಸ್ಕೃತ” ಹೇಳಿ ವಿಭಾಗ ಇದ್ದು.

ಇವಲ್ಲದ್ದೇ ಮೇಲೆ ಹೇಳಿದ ವಿಚಾರಲ್ಲಿ ದೂರಸ್ಥ ಶಿಕ್ಷಣ (distance education) ವನ್ನುದೆ ಈ ವಿಶ್ವವಿದ್ಯಾಲಯಂಗ ಕೊಡ್ತು.

ಇವೆಲ್ಲವುದೆ ಯುಜಿಸಿ ಯ ಮಾನ್ಯತೆಗೆ ಒಳಪಟ್ಟ ಕೋರ್ಸುಗ.

ಈ ಸಂಸ್ಕೃತ ಕಲಿವವಕ್ಕೆ ರಾಷ್ಟ್ರೀಯ ಮಟ್ಟಲ್ಲಿ, ಅಂತಾರಾಷ್ಟ್ರೀಯ ಮಟ್ಟಲ್ಲಿ ಸಂಪರ್ಕ ಸುಲಭ. ಎಂತಕೆ ಹೇಳಿರೆ ಸಂಸ್ಕೃತದ ಕಾರ್ಯಕ್ರಮಂಗಳ ವೈಭವ ಅಂಥದ್ದು. ವಿದ್ಯಾರ್ಥಿಗಕ್ಕೆ ಪ್ರತಿವರ್ಷ ರಾಷ್ಟ್ರಮಟ್ಟಲ್ಲಿ ಸ್ಪರ್ಧೆಗಳ ಅವಕಾಶ ಇರ್ತು. ಪ್ರತಿವರ್ಷ ಸಂಸ್ಕೃತ ವಿದ್ಯಾರ್ಥಿಗಳ ಅಖಿಲಭಾರತ ಸ್ಪರ್ಧೆಗ, ಯುವಮಹೋತ್ಸವ, ನಾಟಕೋತ್ಸವ, ಕ್ರೀಡೋತ್ಸವ ಆವ್ತು. ಅದು ದೇಶದ ಒಂದೊಂದು ರಾಜ್ಯಲ್ಲಿ ಅಪ್ಪದು. ದೇಶ ಸುತ್ತು, ಕೋಶ ಓದು ಹೇಳ್ವದಕ್ಕೆ ಅರ್ಥಪೂರ್ಣವಾಗಿ ಇರ್ತು ಸಂಸ್ಕೃತ-ವಿದ್ಯಾರ್ಥಿಜೀವನ. ಅದೊಂದು ಸಾಂಸ್ಕೃತಿಕ ವೈಭವ!

ಹೀಂಗೆ ಅಧ್ಯಯನ ಮಾಡಿರೆ ಉದ್ಯೋಗಾವಕಾಶಂಗ ಇದ್ದು. ಸಂಸ್ಕೃತ ಶಿಕ್ಷಕ, ಪ್ರಾಧ್ಯಾಪಕ ಅಪ್ಪಲಕ್ಕು. ವಿದೇಶಲ್ಲಿ ಉದ್ಯೋಗ ಅವಕಾಶ ಬೇಕಾರೆ ಅದುದೆ ಇದ್ದು ಇಲ್ಲಿ. ಅದಲ್ಲದ್ದೇ ಸಂಸ್ಕೃತವ ಆಧರಿಸಿ ಪಡೆದ ಡಿಗ್ರಿಯ ಆಧಾರದಲ್ಲಿ IAS ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನುದೆ ಬರವಲಕ್ಕು. ಇತರ ಯಾವುದೇ ಡಿಗ್ರಿಯ ಆಧಾರಲ್ಲಿ ಏನೆಲ್ಲಾ ಸ್ಪರ್ಧಾತ್ಮಕ ಪರೀಕ್ಷೆಲ್ಲಿ ಭಾಗವಹಿಸಲೆಡಿಗೋ, ಯಾವ್ಯಾವ ಉದ್ಯೋಗಕ್ಕೆ, ಉನ್ನತಶಿಕ್ಷಣಕ್ಕೆ ಸವಲತ್ತುಗಕ್ಕೆ ಅರ್ಹತೆ ಸಿಕ್ಕುತ್ತೋ ಅದೆಲ್ಲವೂ ಸಂಸ್ಕೃತ ಅಧ್ಯಯನಂದಲೂ ಸಾಧ್ಯ. ಸಂಸ್ಕೃತ ಕಲ್ತರೆ ತಾನು “ಹಳಬ” ಆವ್ತೆ ಹೇಳ್ವ ಭಯ ಒಂದು ಭ್ರಮೆ ಮಾಂತ್ರ. ಸಂಸ್ಕೃತ ಕಲ್ತವು ಭಾರತೀಯ ಜ್ಞಾನವ ಪಡೆದ ಅತ್ಯಾಧುನಿಕರು ಹೇಳಿಗೊಂಬಲೆ ವಿಪುಲ ಅವಕಾಶಂಗ ಇದ್ದು. ಇದು ವಾಸ್ತವ!

ಸಂ-ಅಧ್ಯಯನ ಕ್ರಮ

ಡಾಮಹೇಶಣ್ಣ
Latest posts by ಡಾಮಹೇಶಣ್ಣ (see all)

13 thoughts on “ಸಂಸ್ಕೃತ ಕಲಿವದು ಹೇಳಿರೆಂತರ?

  1. ನಮಸ್ತೇ

    ಅದ್ಯತ್ವೇ ಸಂಸ್ಕೃತಭಾರತ್ಯಾ: ” ಪತ್ರಾಲಯದ್ವಾರಾ ಸಂಸ್ಕೃತಂ ” ಅಸ್ಯ ಪಾಠಾ: ಅಂತರ್ಜಾಲೇ ದೃಶ್ಯ ಮಾಧ್ಯಮೇ (youtube ) ಅಪಿ ಉಪಲಭ್ಯ೦ತೇ . ಬೈಲಿನ ಸಂಸ್ಕೃತಾಸಕ್ತರು ಅನುಕೂಲ ಮಾಡಿಯೊ೦ಡು ಇದರ ಪ್ರಯೋಜನ ಪಡಕ್ಕೊ೦ಬಲಕ್ಕು . . http://www.samskritashikshanam.in/pattrachar.php# ಇದರಲ್ಲಿ courses ಹೇಳಿ ಇದ್ದು . ಅಲ್ಲಿ ”ಪತ್ರಾಚಾರ: ೦4 ” ಹೇಳಿ ಇದ್ದು . ಅದರ ಒತ್ತಿದರೆ 4 ಬೇರೆ ಬೇರೆ ಸೋಪಾನದ ಪಾಠ೦ಗೊ ಸಿಕ್ಕುತ್ತು .

  2. ಒಳ್ಳೆ ಮಾರ್ಗದರ್ಶನ ಕೊಡುವ ಶುದ್ದಿ.
    ಸ೦ಸ್ಕೃತ ಭಾಷೆ,ಸಾಹಿತ್ಯ೦ಗೊ ಮಹಾಸಾಗರದ ಹಾ೦ಗೆ.ಅಸ೦ಖ್ಯ ಅವಕಾಶ೦ಗೊ ತು೦ಬಿಗೊ೦ಡಿಪ್ಪ ಈ ಕ್ಷೇತ್ರಲ್ಲಿ ಆಸಕ್ತ ವಿದ್ಯಾರ್ಥಿಗಳ ಪ್ರವೇಶ ಹೆಚ್ಚಾಗಲಿ.

  3. ಸಂಸ್ಕೃತಾಧ್ಯಯನದ ಕುರಿತಾದ ಸವಿವರ ಮಾಹಿತಿಗೆ ಧನ್ಯವಾದಂಗ ಮಹೇಶಣ್ಣ. ಪತ್ರಾಚಾರ-ಸಂಸ್ಕೃತಮ್ ಬಗ್ಗೆ ಹೇಳಿದ್ದೂ ಒಳ್ಳೆದಾತು.

  4. ಸಂಸ್ಕೃತ ಕಲಿವ ಅಭಿಲಾಷೆ ಇಪ್ಪವಕ್ಕೆ ಒಳ್ಳೆ ಮಾಹಿತಿ.
    ಧನ್ಯವಾದಂಗೊ

    1. ನಮಸ್ತೇ ಮಹೇಶಣ್ಣ,
      [ಸಂಸ್ಕೃತ ಕಲ್ತರೆ ತಾನು “ಹಳಬ” ಆವ್ತೆ ಹೇಳ್ವ ಭಯ ಒಂದು ಭ್ರಮೆ ಮಾಂತ್ರ. ಸಂಸ್ಕೃತ ಕಲ್ತವು ಭಾರತೀಯ ಜ್ಞಾನವ ಪಡೆದ ಅತ್ಯಾಧುನಿಕರು ಹೇಳಿಗೊಂಬಲೆ ವಿಪುಲ ಅವಕಾಶಂಗ ಇದ್ದು. ಇದು ವಾಸ್ತವ! ] ಸರಿಯಾಗಿಯೇ ಹೇಳಿದ್ದಿ. ವಾಸ್ತವ ಜಗತ್ತಿನ ಪರಿಚಯಾತ್ಮಕ ವಿವರಣೆಯ ಓದಿ ತು೦ಬಾ ಕೊಶಿಯಾತು.
      ಮಾಹಿತಿಗೆ ಧನ್ಯವಾದ೦ಗೊ. ಹರೇ ರಾಮ.

  5. ಸಂಸ್ಕೃತ ಲ್ಲಿ ಎಮ್. ಎ ಮಾಡಿ ಐ.ಎ.ಯೆಸ್ ಮಾಡಿ ಈಗ ನಿವ್ರ ತ್ತ ರಾಗಿಪ್ಪವು ನಮ್ಮ ಊರವೇ – ಈಳಂತೋಡಿ ರಾಮಕೃಷ್ಣ ಭಟ್ಟ ….. (Indian Cantonment services – ಭಾರತ ದಂಡು ಪ್ರಾಕಾರ ಸೇವೆ)

  6. ತುಂಬಾ ಮಾಹಿತಿ ಇಪ್ಪ ಲೇಖನ. ಪತ್ರವ್ಯವಹಾರ ತರಗತಿ ಮೂಲಕ ಸಂಸ್ಕೃತದ ಉನ್ನತ ಅಧ್ಯಯನ ಮಾಡಲೆ ಎಂತ ಮಾಡೆಕ್ಕು? ಎಲ್ಲೆಲ್ಲಾ ಅವಕಾಶ ಇದ್ದು ,ತಿಳಿಸುವಿರೊ?

    1. ನಿಂಗಳ ಆಸಕ್ತಿ ನೋಡಿ ಖುಷಿಯಾತು.
      ಪತ್ರವ್ಯವಹಾರಲ್ಲಿ ಸಂಸ್ಕೃತ ಕಲಿವ ಅವಕಾಶ ಇದ್ದು. ಈ ವ್ಯವಸ್ಥಲ್ಲಿ ಅಧ್ಯಯನ ಸಾಮಗ್ರಿಯ ಮನೆಗೆ ಕಳುಸುತ್ತವು.

      ಮೇಲೆ ಹೇಳಿದ ಪ್ರಾಕ್-ಶಾಸ್ತ್ರೀ, ಶಾಸ್ತ್ರೀ ಇತ್ಯಾದಿ ಕೋರ್ಸುಗಳ ಪತ್ರವ್ಯವಹಾರದ ಮೂಲಕ ಶಿಕ್ಷಣಕ್ಕೆ – ರಾಷ್ಟ್ರಿಯ ಸಂಸ್ಕೃತ ಸಂಸ್ಥಾನದ “ಮುಕ್ತ ಸ್ವಾಧ್ಯಾಯ ಪೀಠ” ದ ಸಂಪರ್ಕ ಮಾಡ್ಳಕ್ಕು –
      http://sanskrit.nic.in/msp.htm

      ಸಂಸ್ಕೃತಭಾರತಿಲ್ಲಿ “ಪತ್ರಾಚಾರ-ಸಂಸ್ಕೃತಮ್” ಹೇಳಿ ಒಂದು ವ್ಯವಸ್ಥೆ ಇದ್ದು.
      ಪ್ರವೇಶ, ಪರಿಚಯ, ಶಿಕ್ಷಾ, ಕೋವಿದ ಹೇಳಿ ನಾಲ್ಕು ಹಂತದ ಅಧ್ಯಯನ ಇದು. ಪ್ರತಿ ಹಂತಕ್ಕೆ 6 ತಿಂಗಳಿನ ಅವಧಿ. ಶುಲ್ಕ – 200 /-
      ಈ ಬಗ್ಗೆ ಬೆಂಗಳೂರಿನ ಗಿರಿನಗರಲ್ಲಿಪ್ಪ “ಅಕ್ಷರಮ್” ನ ಸಂಪರ್ಕಿಸಲಕ್ಕು.
      Samskrita Bharati
      “Aksharam”
      8th cross, 2nd Main,
      Giri Nagar, Bangalore – 560085
      Phone: 080-26721052, 26722576, 26421152
      Email :samskritam@gmail.com

      ಇಲ್ಲಿ ಕನ್ನಡ, ಮಲಯಾಳ, ಇಂಗ್ಲಿಷ್ ಇತ್ಯಾದಿ ಮಾಧ್ಯಮಲ್ಲಿ ಪಾಠಂಗ ಇರ್ತು.

      1. ಧನ್ಯವಾದ ಮಹೇಶಣ್ಣ

  7. ಸರಿಯಾದ ಸಮಯಕ್ಕೆ ಉಪಯುಕ್ತ ಮಾಹಿತಿ, ಧನ್ಯವಾದ

  8. ಅತ್ಯುತ್ತಮ ಉಪಯುಕ್ತ ಮಾಹಿತಿ. ಹರೇ ರಾಮ.

  9. ಒಳ್ಲೆಯ ಮಾಹಿತಿಯುಕ್ತ ಕ್ರಮಬದ್ಧ ಲೇಖನ ಮಹೇಶಣ್ಣ. ಖುಶಿ ಆತು. ಹರೇ ರಾಮ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×