ಸಂಸ್ಕೃತ ರಸ ಧಾರಾವಾಹಿನೀ – 01

August 26, 2011 ರ 6:00 amಗೆ ನಮ್ಮ ಬರದ್ದು, ಇದುವರೆಗೆ 26 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

‘ ಪಠತ ಸಂಸ್ಕೃತಮ್ – ವದತ ಸಂಸ್ಕೃತಮ್ ’

ಸಂಸ್ಕೃತ ದೇವ ಭಾಷೆ. ಪುರಾತನ ಭಾಷೆ, ಮಧುರ ಭಾಷೆ ಹೀಂಗೆಲ್ಲಾ ನಾವು ವರ್ಣನೆ ಮಾಡುತ್ತು. ಅಪ್ಪು ಹೇಳಿ ಒಪ್ಪುತ್ತು. ಇತಿಹಾಸ ತೋಡಿ ಅಗದು ನೋಡಿರೆ ಮದಲಿಂಗೆ  ಸಂಸ್ಕೃತವೇ ಸಂಪೂರ್ಣ ಪ್ರಚಲಿತಲ್ಲಿ ಇತ್ತು ಹೇಳ್ವ ಸತ್ಯಾಂಶ ಕಂಡುಕೊಂಡಿದವು. ಪಾಶ್ಚಾತ್ಯ ಧಾಳಿಯಿಂದ ಮತ್ತು ನಮ್ಮ ಪಾಶ್ಚಾತ್ಯ ವ್ಯಾಮೋಹಂದ ಸಂಸ್ಕೃತ ಭಾಷೆ ಪ್ರಚಲಿತಂದ ನಾಶ ಹೊಂದಲೆ ಸುರುವಾತು. ವಿಮಾನ,  ಓಪರೇಶನ್ಗಳೂ ಸಂಸ್ಕೃತ ಕಾಲಲ್ಲಿ ಇತ್ತು. ಆದರೆ ಬೇರೇ ರೂಪಲ್ಲಿ ಅಂದ್ರಾಣ ಕಾಲಕ್ಕನುಗುಣವಾಗಿ, ಅಷ್ಟೇ. ನಮ್ಮ ಯಾವುದೇ ಸಂಶಯಂಗಗೊಕ್ಕೆ ಉತ್ತರ ಆಧಾರ ಸಹಿತ ಸಂಸ್ಕೃತ ಭಂಡಾರಲ್ಲಿ ಇದ್ದು ಹೇಳುವದು ವಿದೇಶಿಯರೂ ಒಪ್ಪಿಗೊಂಡ ಸತ್ಯ. ಆದ್ದರಿಂದಲೇ ಜರ್ಮನಿ ಮೊದಲಾದ ದೇಶಂಗಳಲ್ಲಿ ಇತ್ತೀಚೆ ಸಂಸ್ಕೃತಕ್ಕೆ ವಿಶೇಷ ಕಾಳಜಿ ವಹಿಸಿ ಬಲ್ಲವರಿಂದ ಆಳ ಅಧ್ಯಯನ ಸಂಶೋಧನೆ ಮಾಡ್ಳೆ ಸುರುಮಾಡಿದ್ದವು ಹೇಳ್ವದು ವಾಸ್ತವಿಕ ಸತ್ಯ.

ಸಂಸ್ಕೃತ – ಮಧುರ, ಸುಶ್ರಾವ್ಯ ಹೇಳ್ವದರಲ್ಲಿ ಎರಡು ಮಾತಿಲ್ಲೆ. ಹಾಡುಗಳ ಸಂಗೀತಲ್ಲಿ ಕೇಳ್ಳೆ ಎಷ್ಟು ಸುಶ್ರಾವ್ಯವೋ ಹಾಂಗೇ ಸ್ತೋತ್ರ, ಶ್ಲೋಕ, ವೇದ ಮಂತ್ರಂಗಳ ಸಂಸ್ಕೃತಲ್ಲಿ ಕೇಳ್ಳೆ ಲಾಯಕ್ಕ. ಅದರಲ್ಲಿ ಇಪ್ಪ  ಕಂಪನ ಲಹರಿ (ವೈಬ್ರೇಶನ್ ಹೇಳಿ ನಂಬುತ್ತರೆ) ಅನುವಾದ ಶ್ಲೋಕಲ್ಲಿ ಅನುಭವಿಸಲೆ ಅಸಾಧ್ಯ. ಅರ್ಥ ಗೊಂತಿಲ್ಲೆ ಹೇಳ್ವ ಮಾತ್ರಕ್ಕೆ ಅದೆಂತಕೆ ಸಂಸ್ಕೃತಲ್ಲಿ ಹೇಳೆಕ್ಕು ಹೇಳಿ ಕೇಳುವದು ಅರ್ಥಹೀನ ಅಜ್ಞಾನವೇ. ಬಾಕಿ ನವಗೆ ಅಗತ್ಯ ಬೇಕಪ್ಪ  ಆರಡಿಯದ್ದ ವಿಷಯಂಗಳ, ಎಂತಕೆ, ಗೇ ಸುದ್ದಿಯನ್ನೂ ಕೂಡ ಅರಡಿತ್ತವರತ್ರೆ ಒಕ್ಕಿ ಒಕ್ಕಿ ಕೇಳಿ ತಿಳಿತ್ತಿಲ್ಲ್ಯೋ!, ಹಾಂಗೇ, ಇದನ್ನೂ ಏಕೆ ತಿಳಿವಲಾಗ. ಅಂಬಗ, ಬೇಕು – ಬೇಡಾ ಹೇಳಿ ಇಪ್ಪದು ನಮ್ಮ ಕೈಲೇ ಹೊರತು ನವಗರಡಿಯದ್ದರ ಇನ್ನೊಂದರ ಇನ್ನೊಬ್ಬನ ದೂರಿ ಎಂತ ಗುಣ. ಕಾಗೆ ಕೂಗಿರೆ ಗೋಪುರ ಬೀಳುಗೋ ಹೇಳಿ ಹೇಳ್ವ ಕತೆ ಅಪ್ಪೋ. ಬೇಡಾ ಹೇಳಿ ಹೇಳ್ಳೆ ಹತ್ತು ಕಾರಣಂಗೊ ಇಕ್ಕು ಆದರೆ ಬೇಕು ಹೇಳಿ ಹೇಳ್ಳೆ ಒಂದೇ ಒಂದು ಕಾರಣ ಸಾಕು.

ಇಂತಿಪ್ಪ ಅವನತಿ ಕಾಂಬಲೆ ಹೋದ ಅಮೂಲ್ಯ ಸಂಸ್ಕೃತವ ಪುನರುತ್ಥಾನ ಅತೀ ಆವಶ್ಯಕ ಹೇಳಿ ಅನೇಕ ಕಾಳಜಿಯುಕ್ತ ಗಣ್ಯರು ಸತತ ಶ್ರಮ ವಹಿಸಿ ಸಂಸ್ಕೃತ ಪ್ರಚಾರ ಕಾರ್ಯಲ್ಲಿ ಸ್ವಯಂಸೇವಾ ರೂಪಲ್ಲಿಯೂ ತೊಡಗಿಸಿಗೊಂಡಿದವು. ಸಂಸ್ಕೃತ ಭಾರತೀ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಇತ್ಯಾದಿ ಹಲವು ಸಂಸ್ಥಗೊ ಸಂಸ್ಕೃತ ಶಿಕ್ಷಣ ಹಾಗೂ ಶಿಬಿರಂಗಳ ಮೂಲಕ ಪ್ರಚಾರ ಕಾರ್ಯವ ಮಾಡುತ್ತಾ ಜನ ಜಾಗೃತಿ ಮಾಡುತ್ತಾ ಇದ್ದು. ಕರ್ನಾಟಕಲ್ಲಿ ಮತ್ತೂರು ಹೇಳ್ವ ಒಂದು ಗ್ರಾಮ ಇದರ ಸಂಪೂರ್ಣ ಸದುಪಯೋಗ ಪಡಿಸಿ ಆ ಮತ್ತೂರು ಗ್ರಾಮ ಸಂಸ್ಕೃತ ಗ್ರಾಮ ಹೇಳಿ ಹೆಸರು ಗಳಿಸಿದ್ದು ಎಂಬುದು ಹೆಮ್ಮೆಯ ವಿಚಾರ

ನಮ್ಮ ಬೈಲಿನ ಆಸಕ್ತರಿಂಗೆ ಸಂಸ್ಕೃತ ಮೂಲ ಅಭ್ಯಾಸಕ್ಕೆ  ಸಂಸ್ಕೃತ ಸಂಭಾಷಣೆ ಕಲಿವ  ಒಂದು ಸಣ್ಣ ಸರಳ ಕೋರ್ಸ್ ಇಲ್ಲಿ ವಾರಕ್ಕೆ ಎರಡು ದಿನದ ಹಾಂಗೆ ವೀಡಿಯೋ ಮೂಲಕ ಕೊಡ್ಳೆ ಹೆಮ್ಮೆ ಆವುತ್ತು. ಸರಿಯಾಗಿ ಇದರ ಅರ್ಥ ಮಾಡಿ, ನೋಡಿ ಅಭ್ಯಾಸ ಮಾಡಿ ಸದುಪಯೋಗ ಪಡಿಸಿ ಕೊಂಬಲಕ್ಕು ಹೇಳಿ ವಿನಂತಿ. ಯಾವುದೇ ಭಾಷೆ , ವಿಚಾರ ಸತತ ಅಭ್ಯಾಸ ಇಲ್ಲದ್ದೆ ಬಾರ. ಈ ಇಲ್ಲಿಪ್ಪದ್ದರ ನೋಡಿ ನಿತ್ಯ ಅಭ್ಯಾಸ ಮಾಡೆಕ್ಕು, ದಿನಾ ಪ್ರತಿ ಮನೆಗಳಲ್ಲೂ ಸ್ವಲ್ಪ ಹೊತ್ತು ಸಂಸ್ಕೃತಕ್ಕೇ ಮೀಸಲೆಡೆಕ್ಕು, ಮನೆ ಮನೆಗಳಲ್ಲೂ ಪ್ರತಿಯೊಬ್ಬನೂ ಸಂಸ್ಕೃತಲ್ಲಿ ಮಾತಾಡೆಕ್ಕು, ನಮ್ಮ ಸಂಸ್ಕೃತಿಯ ಪ್ರತೀಕ ‘ಸಂಸ್ಕೃತ’ವ ಉಳಿಸಿ ಬೆಳೆಸಿ ಬಲಪಡಿಸಿ ಪುನರುಜ್ಜೀವನ ಮಾಡೆಕ್ಕು ಹೇಳಿ ಕಳಕಳಿಯ ವಿನಂತಿ.
-ಚೆನ್ನೈ ಭಾವ°


ಸಂಸ್ಕೃತರಸಧಾರಾವಾಹಿನೀ

!! ॐ !!
॥ श्री गणॆशाय नमः ॥
|| श्री गुरुभ्यॊ नमः ||
|| वन्दॆ संस्कृतमातरम् ||

ನಮ್ಮ ಶ್ರೇಷ್ಠ ನಿಧಿ ಸ೦ಸ್ಕೃತವಾಙ್ಮಯ. ಆ ವಾಙ್ಮಯಲ್ಲಿ ತು೦ಬಾ ಆಕರ್ಷಕ ವಿಚಾರ೦ಗ ಇದ್ದು ಹೇಳಿ ಹೇಳ್ತವು. ಆಧ್ಯಾತ್ಮಿಕ, ವೈಜ್ಞಾನಿಕ, ವೈದ್ಯಕೀಯ, ಸುಭಾಷಿತ, ಕಾವ್ಯ, ಇತಿಹಾಸ, ದರ್ಶನ….. ಇತ್ಯಾದಿ ವಿಚಾರ೦ಗಳ ಆಗರ ಅದು.
ಜಗತ್ತಿನಾದ್ಯ೦ತ ಪ್ರಶ೦ಸೆಗೊಳಗಾದ ಆ ಭಾಷೆಯ ಅಮೃತರಸಧಾರೆಯ ಸವಿ ಅಲ್ಲಲ್ಲಿ ನವಗೆ ಸಿಕ್ಕಿದ್ದು ಕೆಲವು ಕಡೆ.

ಶರ್ಮಪ್ಪಚ್ಚಿ ವಾರ ವಾರ ವೈದಿಕ ಮ೦ತ್ರ೦ಗಳ ಅರ್ಥ ಒದಗುಸುವಗ ಕೊಶಿ ಆವುತ್ತು. ಚೆನ್ನೈಭಾವ° ಕಾಳಿದಾಸನ ಶ್ಲೋಕ ಹೇಳುವಗ ಅರೆರೆ! ಹೀ೦ಗುದೆ ಇದ್ದೊ ಹೇಳಿ ಅನಿಸುತ್ತು.
ಇನ್ನೂ ರಜ ಹೆಚ್ಚು ಸ೦ಸ್ಕೃತ ಗೊ೦ತಿದ್ದರೆ ಎಷ್ಟು ಲಾಯಕ ಹೇಳಿ ಅನಿಸುತ್ತು….
ಒ೦ದು ಸಿನೆಮವ ನೋಡಿ ಸ೦ಪೂರ್ಣ ಆನ೦ದ ಹೊ೦ದೆಕಾರೆ ಅದರಲ್ಲಿಪ್ಪ ಭಾವನೆಗ ಅರ್ಥ ಆಯೆಕು. ಭಾವನೆ ತಿಳಿಯೆಕಾರೆ ಭಾಷೆ ಗೊ೦ತಿರೆಕು.  ಇಲ್ಲದ್ರೆ  ಸಬ್ ಟೈಟಲ್ ನೋಡಿ ಅರ್ಥ ಆದಷ್ಟೇ ಸಿಕ್ಕುವದು.
ಸಿನೆಮಲ್ಲಿಪ್ಪ ಭಾಷೆಯೊಟ್ಟಿ೦ಗೆ, ಭಾವನೆಯೊಟ್ಟಿ೦ಗೆ  ನವಗೆ  ಹೋಪಲೆಡಿತ್ತರೆ ಅದರಲ್ಲಿಪ್ಪ ಆನ೦ದ ಅತುಲ್ಯ ಅಲ್ಲದೊ?

ಶರ್ಮಪ್ಪಚ್ಚಿ ನಮ್ಮ ಈ ಅಮೂಲ್ಯ ಭಾಷೆಯ ಹೆಚ್ಚು ಕಲಿಯೆಕು ಹೇಳುವ ಆಗ್ರಹಕ್ಕೆ ಬಯಿ೦ದವು. ಎಲ್ಲೋರು ಸೇರಿ ಕಲಿಯುವ ಹೇಳಿ ಅವರ ಬಯಕೆ.
ಚೆನ್ನೈ ಭಾವ° ಮಾತಾಡ್ಲೆ ಶುರುಮಾಡಿದ್ದವು. ಅವು ನೋಡಿ ಕಲಿವ ವೀಡಿಯ ಕಳುಸಿಕೊಟ್ಟಿದವು.  ಶ್ರೀ ಅಕ್ಕ° ಪರೀಕ್ಷೆ ಬರವಲೆ ಪೆನ್ನು ಪೇಪರು ತಯಾರು ಮಾಡಿದ್ದವಡ.
ಮುಳಿಯ ಭಾವ° ಸ೦ಸ್ಕೃತಲ್ಲಿ ಭಾಮಿನೀ ಬರವದು ಯಾವಾಗ ಹೇಳಿ ಯೋಚನೆ ಮಾಡಿಯೊ೦ಡಿದ್ದವು.  ಮ೦ಗ್ಳೂರ ಮಾಣಿ ತನ್ನ ಮಿತ್ರನೊಟ್ಟಿ೦ಗೆ ಬಯಿ೦ದ°…..
ನವಗೆ ಎಲ್ಲೋರಿ೦ಗುದೆ ಸ೦ಸ್ಕೃತ ಗೊ೦ತಿದ್ದು, ರಜ ರಜ.  ನಾವು ಮಾತಾಡುವ ಭಾಷೆಲ್ಲಿಯೇ ಬಹಳಷ್ಟು ಸ೦ಸ್ಕೃತ ಪದ೦ಗ ಸಿಕ್ಕುತ್ತು, ಅದರ ಪಾಲಿಶ್ ಮಾಡಿಯೊ೦ಡು ಮಾತಾಡಿರೆ ಭಾಷೆ ಬ೦ತು ಹೇಳಿಯೇ ಅರ್ಥ.

ಈ ಅಧ್ಯಯನಲ್ಲಿ  ಪ್ರತಿಸರ್ತಿಒ೦ದು  ಚಿತ್ರೀಕರಿಸಿದ ಪಾಠವ ನೋಡುವ. ಅದರ ನ೦ತರ ಅದರಲ್ಲಿ ಗೊ೦ತಾದ ವಿಷಯದ ಆಧಾರದ ಮೇಲೆ ನಮ್ಮ ಜೀವನದ ನಿತ್ಯೋಪಯೋಗಲ್ಲಿ ಬಪ್ಪ ಕೆಲವು ವಾಕ್ಯ೦ಗಳ ಸ೦ಸ್ಕೃತಲ್ಲಿ ರಚನೆ ಮಾಡುವ.
ಪರಸ್ಪರ ಪ್ರಶ್ನೆ ಉತ್ತರ ಬರಲಿ.  ಕಲ್ತದರ ಉಪಯೋಗಿಸಿಕ್ಕಿಯೇ ನಾವು ಮು೦ದೆ ಹೋಪದು, ಅಕ್ಕೊ?

“संस्कृतधारावाहिनी”

प्रथम-धारा

~~स्वागतम्~~
संस्कृताध्ययनस्य सरलसमारम्भॆ स्वागतम् !!
(ಸ೦ಸ್ಕೃತಾಧ್ಯಯನದ ಸರಳ ಆರ೦ಭಕ್ಕೆ ಚೆ೦ದಕೆ ಬ೦ದಿರೋ?!)

स्वस्ति !

ಮಮಕಾರ ಹೇಳಿರೆ ನವಗೆ ತು೦ಬಾ ಹತ್ತರೆ.  ಆ ‘ಮಮ’ತೆ ಸ೦ಸ್ಕೃತದ ಮೇಲಿರಲಿ. ಆ ಮಮತೆ೦ದಲೇ ಶುರುಮಾಡುವ !

ಸಂಸ್ಕೃತ ಭಾಷಾ ಶಿಕ್ಷಣ – ಚಲಚ್ಚಿತ್ರ ಭಾಗ – ೦೧

(ಸ೦ಸ್ಕೃತಭಾರತೀ ಮತ್ತು ರಾಷ್ಟ್ರಿಯ ಸ೦ಸ್ಕೃತ ಸ೦ಸ್ಥಾನದ ಕೃಪೆ.)

अभ्यासः

मम

मम राष्ट्रम्
मम राज्यम्
मम गृहम्, मम परिवारः …

मम कृषिक्षेत्रम्, मम भूप्रदॆशः (ಎನ್ನ ಜಾಗೆ) ….
मम सम्पत्तिः, मम अधिकारः, मम यॊजना …
मम विद्यालयः, मम शिक्षकः,  मम कार्यालयः,  मम कार्यम्,  मम वॆतनम्…..
मम मित्रम्, सहायकः, अधिकारी……..

मम स्यूतः (ಚೀಲ), मम पुस्तकम्, मम स्थालिका (ಬಟ್ಳು) …
मम पर्यायः (ಎನ್ನ ಸರದಿ) ….

मम चिन्ता, मम भावना, मम सन्तॊषः, मम जीवनम्, मम उत्साहः, मम स्वास्थ्यम् …
मम दॊषः (ಎನ್ನ ತಪ್ಪು),  मम बुद्धिः, मम वचनम्, मम श्रॆष्ठता, अहॊ ! मम मूर्खता ….

मम परिचयः–

मम नाम …
मम दॆशः भारतम् ।
संस्कृतं मम भाषा ।
मम पिता कृषकः । मम माता गृहिणी ।

भवतः परिचयः ?
भवत्याः परिचयः ?

अधिकं शब्दसंग्रहं कुर्वन्तु ।
पुनर्मिलाम !

!! अल्पारम्भः क्षॆमकरः !!

“ಸ೦ಸ್ಕೃತಾಧ್ಯಯನ೦ ಮಮ ಕಾರ್ಯಮ್”  ಹೇಳಿ ಮಮತೆ ಬ೦ತಾ?

~*~*~

ಸೂ: ಸಂಸ್ಕೃತರಸಧಾರಾವಾಹಿನೀ – ಭಾಗ 02, ಬಪ್ಪ ವಾರ ನಿರೀಕ್ಷಿಸಿ.

ಸಂಸ್ಕೃತ ರಸ ಧಾರಾವಾಹಿನೀ - 01, 4.7 out of 10 based on 3 ratings
ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 26 ಒಪ್ಪಂಗೊ

 1. ಡಾಮಹೇಶಣ್ಣ

  बोळुंबु मातुल !
  संस्कृतपठनार्थं भवतः आगमनं सन्तोषं ददाति !!

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  “ಮಮ ಕಾರ್ಯಮ್” ಹೇಳ್ತಕ್ಕೂ “ಮಮ ಕರಣೀಯಂ” ಹೇಳ್ತಕ್ಕೂ ಎಂತ ವ್ಯತ್ಯಾಸ ಮಹೇಶಣ್ಣಾ?

  [Reply]

  ಡಾಮಹೇಶಣ್ಣ

  ಡಾಮಹೇಶಣ್ಣ Reply:

  कृष्णभाव !
  स्वागतम्,
  {ಮಮ ಕಾರ್ಯಮ್” ಹೇಳ್ತಕ್ಕೂ “ಮಮ ಕರಣೀಯಂ” ಹೇಳ್ತಕ್ಕೂ ಎಂತ ವ್ಯತ್ಯಾಸ}
  उभयोः अर्थः समानः ।

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಬಹು ಸಮೀಚೀನಂ ಬಂಧೋ, ಭವತಃ ಉದ್ಯಮಂ.

  [Reply]

  VN:F [1.9.22_1171]
  Rating: 0 (from 0 votes)
 4. ಗಣೇಶ ಮಾವ°
  ಗಣೇಶ ಮಾವ°

  ಅಹಂ ಅದ್ಯ ದಿನೇ ಸಂಸ್ಕೃತೇನ ಪಠಾಮಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪಟಿಕಲ್ಲಪ್ಪಚ್ಚಿಚೂರಿಬೈಲು ದೀಪಕ್ಕಅನುಶ್ರೀ ಬಂಡಾಡಿಗೋಪಾಲಣ್ಣಒಪ್ಪಕ್ಕಹಳೆಮನೆ ಅಣ್ಣವಾಣಿ ಚಿಕ್ಕಮ್ಮಗಣೇಶ ಮಾವ°ಮಾಲಕ್ಕ°ನೀರ್ಕಜೆ ಮಹೇಶಅಕ್ಷರದಣ್ಣಕಜೆವಸಂತ°ತೆಕ್ಕುಂಜ ಕುಮಾರ ಮಾವ°ಶೇಡಿಗುಮ್ಮೆ ಪುಳ್ಳಿಅಡ್ಕತ್ತಿಮಾರುಮಾವ°ಚೆನ್ನೈ ಬಾವ°ಶುದ್ದಿಕ್ಕಾರ°ಪುತ್ತೂರುಬಾವಸುವರ್ಣಿನೀ ಕೊಣಲೆಡಾಗುಟ್ರಕ್ಕ°ಸಂಪಾದಕ°ಜಯಗೌರಿ ಅಕ್ಕ°ಮುಳಿಯ ಭಾವಚುಬ್ಬಣ್ಣಯೇನಂಕೂಡ್ಳು ಅಣ್ಣವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ