ಸುಭಾಷಿತ

ಸುಭಾಷಿತಮ್

ಸಂಸ್ಕೃತಂ ವಿಸ್ಮೃತಂ ವಾ?
(ಸಂಸ್ಕೃತ ಮರತ್ತು ಹೋತೊ?)

ನ ವಿಸ್ಮೃತಂ ಖಲು?
(ಮರದ್ದಿಲ್ಲೆನ್ನೆ?!)

~~

ಅದ್ಯ ವಯಂ ಸುಭಾಷಿತಸ್ಯ ವಿಷಯೇ ಕಿಂಚಿತ್ ಜಾನೀಮ ।
ಇಂದು ನಾವು ಸುಭಾಷಿತದ ಬಗ್ಗೆ  ರಜ್ಜ ತಿಳ್ಕೊಂಬ.

ಸುಭಾಷಿತಮ್ ಇತ್ಯುಕ್ತೇ ಕಿಮ್?
ಸುಭಾಷಿತ ಹೇಳಿರೆ ಎಂತರ?

ಸುಭಾಷಿತಮ್  ಇತ್ಯುಕ್ತೇ  “ಒಳ್ಳೆ ಮಾತು” ಇತಿ ಅರ್ಥಃ ।
ಸುಭಾಷಿತ ಹೇಳಿರೆ “ಒಳ್ಳೆ ಮಾತು” ಹೇಳಿ ಅರ್ಥ .

ಸು+ಭಾಷಿತಮ್ = ಲಾಯ್ಕಕೆ/ಚೆಂದಕೆ ಹೇಳಲ್ಪಟ್ಟದು.
ಉತ್ತಮ ವಿಚಾರವ ಚೆಂದದ ಮಾತಿಲ್ಲಿ  ಹೇಳಿರೆ ಅದೊಂದು ಚೆಂದ. ಅದು ಹಾಸ್ಯಮಯವಾಗಿಯೂ ಇದ್ದರೆ ಮತ್ತುದೆ ಚೆಂದ.

ತಾದೃಶ-ಸುಭಾಷಿತಸ್ಯ ವಿಷಯೇ ಅಪಿ ಕಾನಿಚನ ಸುಭಾಷಿತಾನಿ ಸಂತಿ।
ಅಂತಹ ಸುಭಾಷಿತದ ಬಗ್ಗೆಯೂ ಕೆಲವು ಸುಭಾಷಿತಂಗ ಇದ್ದು,

ಸುಭಾಷಿತದ ಸವಿ ಎಷ್ಟಿದ್ದು ಹೇಳಿರೆ ಹೀಂಗಿದ್ದಡ — ಅದರ ರುಚಿಯ ಮುಂದೆ ಯಾವ ರುಚಿಯೂ ಸರಿಸಮ ಅಲ್ಲಡ.
ಸುಭಾಷಿತಸ್ಯ ಮಾಧುರ್ಯಂ ಕಿಯತ್ ಅಸ್ತಿ ಇತ್ಯುಕ್ತೇ  —

~ ~ ~

ದ್ರಾಕ್ಷಾ ಮ್ಲಾನಮುಖೀ ಜಾತಾ
ಶರ್ಕರಾ ಚಾಶ್ಮತಾಂ ಗತಾ ।

ಸುಭಾಷಿತರಸಸ್ಯಾಗ್ರೇ
ಸುಧಾ ಭೀತಾ ದಿವಂಗತಾ ॥

ಮ್ಲಾನಮುಖೀ = ಬಾಡಿದ ಮುಖದೋಳು
ಚ+ಅಶ್ಮತಾಂ = ಚಾಶ್ಮತಾಂ
(ಅಶ್ಮ=ಕಲ್ಲು )
ಸುಭಾಷಿತರಸಸ್ಯ+ಅಗ್ರೇ =
ಸುಭಾಷಿತರಸಸ್ಯಾಗ್ರೇ
ಸುಭಾಷಿತರಸಸ್ಯ = ಸುಭಾಷಿತದ ರುಚಿಯ
ಅಗ್ರೇ = ಎದುರು

ಭೀತಾ = ಹೆದರಿದ

ಸುಧಾ = ಅಮೃತ

ದಿವಂಗತಾ = ಸ್ವರ್ಗವಾಸಿ ಆತು.


ದ್ರಾಕ್ಷೆಯ ಮೋರೆ ಬಾಡಿ ಹೋತು. ಸಕ್ಕರೆ ಕಲ್ಲಾಗಿ ಹೋತು. ಸುಭಾಷಿತದ ಸವಿಯ ಎದುರು (ನಿಲ್ಲಲೆಡಿಯದ್ದೆ) ಹೆದರಿದ ಸುಧೆ  (ಅಮೃತ)  ಸ್ವರ್ಗಕ್ಕೆ ಹೋತು (ದಿವಂಗತೆ  ಆತು).

ಎಂತಕೆ ಅಮೃತ ಸ್ವರ್ಗಲ್ಲಿ ಮಾಂತ್ರ ಸಿಕ್ಕುವದು ಹೇಳಿ ಗೊಂತಾತಾ?  🙂

ಕಿಮರ್ಥಮ್  ಅಮೃತಂ  ಕೇವಲಂ  ಸ್ವರ್ಗೇ ಏವ ಲಭ್ಯತೇ ಇತಿ ಜ್ಞಾತಂ ವಾ?

~ ~ ~ ~

ಸುಭಾಷಿತಸ್ಯ ಮೌಲ್ಯಂ ಅಲ್ಪಂ ನ! ಸುಭಾಷಿತಂ ಇತ್ಯುಕ್ತೇ ರತ್ನಮ್ !!

ಪೃಥಿವ್ಯಾಂ ತ್ರೀಣಿ ರತ್ನಾನಿ
ಜಲಮನ್ನಂ ಸುಭಾಷಿತಮ್ ।
ಮೂಢೈಃ ಪಾಷಾಣಖಂಡೇಷು
ರತ್ನಸಂಜ್ಞಾ ವಿಧೀಯತೇ ॥

ಪೃಥಿವ್ಯಾಂ = ಭೂಮಿಲ್ಲಿ
ತ್ರೀಣಿ  ರತ್ನಾನಿ = ಮೂರು ರತ್ನಂಗ (ಇದ್ದು)
ಜಲಮ್+ಅನ್ನಂ = ಜಲಮನ್ನಂ
ಪಾಷಾಣಖಂಡೇಷು = ಕಲ್ಲಿನ ತುಂಡುಗಳಲ್ಲಿ

ಅರ್ಥಃ ಅವಗತಃ ವಾ?

~ ~ ~

ಭಾಷಾಸು ಮುಖ್ಯಾ ಮಧುರಾ
ರಮ್ಯಾ ಗೀರ್ವಾಣಭಾರತೀ ।
ತಸ್ಮಾದ್ಧಿ ಕಾವ್ಯಂ ಮಧುರಂ
ತಸ್ಮಾದಪಿ ಸುಭಾಷಿತಮ್ ।।

ಭಾಷಾಸು = ಭಾಷೆಗಳಲ್ಲಿ
ಗೀರ್ವಾಣಭಾರತೀ = ದೇವಭಾಷೆ ಸಂಸ್ಕೃತ
ಮುಖ್ಯಾ = ಪ್ರಮುಖವಾದ್ದು
ರಮ್ಯಾ = ಖುಷಿ ಕೊಡುವಂಥಾದ್ದು
ಮಧುರಾ = ರುಚಿರುಚಿಯಾಗಿಪ್ಪದು
ತಸ್ಮಾತ್ ಹಿ = ಅದರಿಂದಲೂ
ಕಾವ್ಯಂ ಮಧುರಂ = ಕಾವ್ಯ ಮಧುರ
ತಸ್ಮಾತ್ ಅಪಿ = ಅದರಿಂದಲುದೆ
ಸುಭಾಷಿತಮ್ = ಸುಭಾಷಿತ (ಮಧುರ)

~ ~ ~ ~

ಅಧೋಲಿಖಿತಂ ಸುಭಾಷಿತಂ ವಿದ್ಯಾಯಾಃ ಮಹತ್ತ್ವಂ ವದತಿ — (ಕೆಳ ಬರದ ಸುಭಾಷಿತ ವಿದ್ಯೆಯ ಮಹತ್ತ್ವವ ಹೇಳ್ತು.)

ನಾಸ್ತಿ ವಿದ್ಯಾಸಮೋ ಬಂಧುಃ
ನಾಸ್ತಿ ವಿದ್ಯಾಸಮಃ ಸುಹೃತ್ ।
ನಾಸ್ತಿ ವಿದ್ಯಾಸಮಂ ವಿತ್ತಂ
ನಾಸ್ತಿ ವಿದ್ಯಾಸಮಂ ಸುಖಮ್ ॥

ವಿದ್ಯಾಸಮಃ ಬಂಧುಃ ನಾಸ್ತಿ = ವಿದ್ಯೆಗೆ ಸಮವಾದ ಬಂಧು ಇಲ್ಲೆ
ವಿದ್ಯಾಸಮಃ ಸುಹೃತ್ ನಾಸ್ತಿ = ವಿದ್ಯೆಗೆ ಸಮನಾದ ಗೆಳೆಯ ಇಲ್ಲೆ
ನಾಸ್ತಿ ವಿದ್ಯಾಸಮಂ ವಿತ್ತಂ = ವಿದ್ಯೆಗೆ ಸರಿಸಮವಾದ ಪೈಸೆ/ಸಂಪತ್ತು ಇಲ್ಲೆ
ನಾಸ್ತಿ ವಿದ್ಯಾಸಮಂ ಸುಖಮ್ = ವಿದ್ಯೆಗೆ ಸಮವಾದ ಸುಖ ಇಲ್ಲೆ.

ಏತತ್ ಸತ್ಯಂ ವಾ?

~ ~ ~ ~

ಆರಿಂಗೆ ಆರು ಭೂಷಣ?

ತಾರಾಣಾಂ  ಭೂಷಣಂ ಚಂದ್ರಃ
ನಾರೀಣಾಂ  ಭೂಷಣಂ ಪತಿಃ ।
ಪೃಥಿವ್ಯಾಃ  ಭೂಷಣಂ  ರಾಜಾ
ವಿದ್ಯಾ  ಸರ್ವಸ್ಯ ಭೂಷಣಮ್ ॥

ಶಬ್ದಾರ್ಥ –

ಭೂಷಣಂ = ಅಲಂಕಾರ
ತಾರಾಣಾಂ = ತಾರೆಗಳ
ನಾರೀಣಾಂ = ಹೆಮ್ಮಕ್ಕಳ
ಪೃಥಿವ್ಯಾಃ = ಭೂಮಿಯ
ಸರ್ವಸ್ಯ = ಪ್ರತಿಯೊಬ್ಬನ/ಎಲ್ಲೋರ

ಅರ್ಥಃ  ಜ್ಞಾತಃ ಕಿಲ?
ಸರ್ವಸ್ಯ  ಭೂಷಣಂ  ಕಿಮ್?

– – – –

ಡಾಮಹೇಶಣ್ಣ

   

You may also like...

19 Responses

  1. ಮಹೇಶಣ್ಣ, ನಿಂಗೋ ಸುಭಾಷಿತದ ಶಬ್ದಶಃ ಅರ್ಥ ಬರದ್ದಿ. ತುಂಬಾ ಲಾಯಕ್ಕಾಯ್ದು. ಆನು ಆದಕ್ಕೇ ರಜಾ ವಿವರಣೆ ಕೊಟ್ಟು ಈ ಸುಭಾಷಿತಂಗಳ ಬರೆಯೆಕ್ಕಾ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *