Oppanna.com

ಸುಭಾಷಿತ – ೩ (ಸದುಪಯೋಗ)

ಬರದೋರು :   ಡಾಮಹೇಶಣ್ಣ    on   19/05/2013    4 ಒಪ್ಪಂಗೊ

ಪ್ರತಿಯೊಂದು ವಸ್ತು-ವಿಷಯಕ್ಕುದೆ ಒಂದೊಂದು ಉದ್ದೇಶ ಇರ್ತು. ಉಪಯೋಗ ಇರ್ತು. ಅದರ ಪ್ರಯೋಜನ ಒಬ್ಬೊಬ್ಬಂಗೆ ಒಂದೊಂದು ವಿಧವಾಗಿ ಇಕ್ಕು.

ಅದು ಹೇಂಗೆ ಹೇಳುವ ಒಂದು ಸುಭಾಷಿತ ಇಲ್ಲಿದ್ದು –

ವಿದ್ಯಾ ವಿವಾದಾಯ ಧನಂ ಮದಾಯ

ಶಕ್ತಿಃ ಪರೇಷಾಂ ಪರಿಪೀಡನಾಯ।

ಖಲಸ್ಯ ಸಾಧೋಃ ವಿಪರೀತಮೇತತ್

ಜ್ಞಾನಾಯ ದಾನಾಯ ಚ ರಕ್ಷಣಾಯ॥

ವಿದ್ಯೆ ಎಂತಕೆ? – ವಿವಾದಕ್ಕೆ,

ಪೈಸೆ ಎಂತಕೆ? – ಹಾಂಕಾರಕ್ಕೆ

ಶಕ್ತಿ ಎಂತಕೆ? – ಪೀಡುಸಲೆ….

ಅಯ್ಯಯ್ಯೋ! ಇದೆಂತರ ಸುಭಾಷಿತ ಹೀಂಗೆಲ್ಲ ಹೇಳುವದೋ ….!

(ನ್ಯೂಸ್ ಚಾನೆಲಿನವರಾಂಗೆ) ಅರ್ಧರ್ಧ ಕೇಳಿ ಅಂಬೆರ್ಪು ಮಾಡಿ ಅಪಾರ್ಥ ಮಾಡದ್ದೆ ಸರೀ ಅನ್ವಯ ಮಾಡಿ ಅರ್ಥ ತಿಳ್ಕೊಂಬ —

ಅನ್ವಯ –

ಖಲಸ್ಯ ವಿದ್ಯಾ ವಿವಾದಾಯ, ಧನಂ ಮದಾಯ, ಶಕ್ತಿಃ ಪರೇಷಾಂ ಪರಿಪೀಡನಾಯ [ಅಸ್ತಿ]. ಸಾಧೋಃ ಏತತ್ ವಿಪರೀತಮ್ –  ಜ್ಞಾನಾಯ ದಾನಾಯ ರಕ್ಷಣಾಯ ಚ [ಅಸ್ತಿ]।

ಶಬ್ದಾರ್ಥ –

ಖಲಸ್ಯ  = ದುಷ್ಟನ

ವಿದ್ಯಾ = ವಿದ್ಯೆ

ವಿವಾದಾಯ = ವಿವಾದಕ್ಕೆ,

ಧನಂ = ಪೈಸೆ

ಮದಾಯ = ಅಹಂಕಾರಕ್ಕೆ ಬೇಕಾಗಿ,

ಶಕ್ತಿಃ = ಶಕ್ತಿ

ಪರೇಷಾಂ = ಇನ್ನೊಬ್ಬರ

ಪರಿಪೀಡನಾಯ = ಉಪದ್ರ ಕೊಡ್ಳೆ/ಪೀಡಿಸಲೆ

ಏತತ್ = ಇದು

ಸಾಧೋಃ = ಒಳ್ಳೆ ಜನಕ್ಕೆ

ವಿಪರೀತಮ್ = ವಿರುದ್ಧವಾಗಿ ಇರ್ತು.

[ಹೇಂಗೆ ಹೇಳಿರೆ]

ಜ್ಞಾನಾಯ = ಜ್ಞಾನಕ್ಕಾಗಿ

ದಾನಾಯ = ದಾನ ಮಾಡ್ಳೆ ಬೇಕಾಗಿ

ರಕ್ಷಣಾಯ ಚ = ಮತ್ತು ರಕ್ಷಣೆಗೆ ಬೇಕಾಗಿ

[ಅಸ್ತಿ] = ಇಪ್ಪದು.

ಅರ್ಥ –

ದುಷ್ಟನ ವಿದ್ಯೆ ವಿವಾದಕ್ಕೆ ಬೇಕಾಗಿಪ್ಪದು, ಪೈಸೆ ದರ್ಪ ತೋರ್ಸಲೆ ಇಪ್ಪದು, ಶಕ್ತಿ ಇನ್ನೊಬ್ಬಂಗೆ ಉಪ್ಪದ್ರ ಕೊಡ್ಲೆ ಇಪ್ಪದು. ಆದರೆ ಒಳ್ಳೆ ಜನರ ಈ ಸಾಮರ್ಥ್ಯಂಗ ಇದರ ವಿರುದ್ಧವಾದ ಉದ್ದೇಶಕ್ಕಿಪ್ಪದು – ವಿದ್ಯೆ ಜ್ಞಾನಕ್ಕೆ ಬೇಕಾಗಿ, ಪೈಸೆ ಇಪ್ಪದು ಇನ್ನೊಬ್ಬಂಗೆ ಕೊಡ್ಳೆ/ಉಪಕಾರ ಮಾಡ್ಳೆ ಮತ್ತು ಶಕ್ತಿ ಇಪ್ಪದು ರಕ್ಷಣೆಗೆ ಬೇಕಾಗಿ.

 

ನಾವು ಕಾಣ್ತಲ್ಲದಾ?

ರಜ್ಜ ಕಲ್ತ ಕೂಡ್ಳೆ ಪೆದಂಬು ಮಾತಾಡುವವರ, ಗೊಂತಿದ್ದು ಹೇಳಿ ವಾದ ಮಾಡುವವರ

ತಾನು ದೊಡ್ಡವ ಹೇಳಿ ತೋರ್ಸಲೇ ಸಂಪತ್ತಿನ ಪ್ರದರ್ಶನ ಮಾಡುವವರ,

ತಾನು ಬಲವಂತ ಹೇಳಿ ಪೀಡುಸುವವರ.

ನಾವು ಹಾಂಗಪ್ಪಲಾಗ.

ಪ್ರತಿಯೊಬ್ಬನೂ ತನ್ನತ್ರೆ ಇಪ್ಪ ವಸ್ತುವಿನ ಅಥವಾ ಸೌಕರ್ಯವ ಉಪಯೋಗುಸುತ್ತ.

ಉಪಯೋಗುಸುವವನ ವ್ಯಕ್ತಿತ್ವ ಸರಿ ಇದ್ದರೆ ಉಪಕರಣದ ಸದುಪಯೋಗ ಆವ್ತು.

ಸರೀ ಉಪಯೋಗುಸಿದವರ ಉದಾಹರಣೆ ಗೊಂತಿದ್ದಾ? ನೆಂಪು ಮಾಡಿ ಹೇಳ್ತೀರಾ?

ಡಾಮಹೇಶಣ್ಣ
Latest posts by ಡಾಮಹೇಶಣ್ಣ (see all)

4 thoughts on “ಸುಭಾಷಿತ – ೩ (ಸದುಪಯೋಗ)

  1. ಉತ್ತಮ..ಅತ್ಯುತ್ತಮ…ಉಪಯೋಗುಸುವವನ ವ್ಯಕ್ತಿತ್ವ ಸರಿ ಇದ್ದರೆ ಉಪಕರಣದ ಸದುಪಯೋಗ ಆವ್ತು.

  2. ಸುರುವಾಣ ಎರಡು ಗೆರೆ ಓದಿ ಒ೦ದರಿ ತಟಪಟ ಆತು.ಭಾರೀ ಲಾಯ್ಕಿದ್ದು ಮಹೇಶಣ್ಣ.
    ವಿದ್ಯೆ ಮತ್ತೆ ಪೈಸೆಯ ಉಪಯೋಗ – ಡಿ.ವಿ.ಜಿ. ಒಳ್ಳೆ ಉದಾಹರಣೆ.

  3. ಕಿಚ್ಚಿನ ಉಪಯೋಗ- ಮನೆಯ ಬೆಚ್ಚಂಗೆ ಮಡುಗಲೂ ಉಪಯೋಗ ಅಕ್ಕು-ಮನೆಯ ಸುಡಲೂ ಉಪಯೋಗ ಮಾಡಲೆ ಎಡಿಗು! ಲಾಯ್ಕ ಸುಭಾಷಿತ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×