ಮಕ್ಕ ಮಹಾತ್ಮರಪ್ಪದು ಹೇಂಗೆ!

April 21, 2011 ರ 10:54 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಮಗು ಮತ್ತೆ ಮಹಾತ್ಮ ಇವರ ನಡುಗೆ ವ್ಯತ್ಯಾಸ ಎಂತ ಇಲ್ಲೇಳಿ ಎನಗೆ ಕಾಂಬದು.. ಮಹಾತ್ಮ ಹೇಳಿರೆ, ನಿಶ್ಕಲ್ಮಶವಾದ ಮನಸ್ಸು ಇಪ್ಪವ ಅಲ್ಲದಾ?? ಹಾಂಗೆ ಮಕ್ಕಳುದೆ! ಈ ವಿಷಯ ಎನಗೆ ಎಂತಕೆ ತಲೆಲಿ ಯೋಚನೆಯಾಗಿ ಕಾಡುಲೆ ಶುರು ಆತು ಗೊಂತ್ತಿದ್ದಾ? ಅದಕ್ಕೆ ಕಾರಣ ಎನ್ನ ಮಗಳು ಧಾರಿಣಿ.. ಅದ್ರ ನೇರವಾದ ಮಾತುಗ, ಮುಗ್ಧ ಮನಸ್ಸು ನೋಡಿಯಪ್ಪಗ ಅನ್ಸುದು, ಎಂತಕೆ ಮನುಷ್ಯ ದೊಡ್ಡ ಆವ್ತಾ ಹೋದ ಹಾಂಗೆ ಮಹಾತ್ಮರಲ್ಲಿ ಇಲ್ಲದ ಗುಣಂಗ ಎಲ್ಲಾ ಬತ್ತು ಹೇಳುದೇ ದೊಡ್ದ ಆಶ್ಚರ್ಯ! ನಾವು ಕೊಡ್ತಾ ಇಪ್ಪ ಶಿಕ್ಷಣ ಹೇಂಗಿದ್ದು ಹೇಳುದು ಇಲ್ಲಿ ಬಾರಿ ಮುಖ್ಯ ಆವ್ತು ಅಲ್ಲದಾ??

ಹೀಂಗೆ ಯೋಚನೆ ಮಾಡ್ತಾ ಇರೆಕ್ಕಾರೆ ಎನಗೆ ಒಂದು ಕತೆ ನೆನಪ್ಪಾವ್ತ ಇದ್ದು. ಒಬ್ಬ ರಾಜಂಗೆ ಅವನ ಅರಮನೆಗೆ ಪುನಹ ಬಣ್ಣ ಕೊಡ್ಸೆಕ್ಕು ಹೇಳಿ ಆತಡ. ಅವ ೨ ಚಿತ್ರಕಾರರ ಆಯ್ಕೆ ಮಾಡಿ ಒಂದೇ ಕೋಣೆಯ ಎದುರು-ಬದುರು ಗೋಡೆಲಿ ಚಿತ್ರ ಮಾಡ್ಲೆ ಹೇಳಿದ. ರಜ ದಿನ ಕಳ್ದಿಕ್ಕಿ ರಾಜ ಬಂದು, ಸುರುವಾಣವ ಮಾಡಿದ ಚಿತ್ರ ನೋಡಿದ. ಬಾರಿ ಖುಷಿ ಆತು ರಾಜಂಗೆ. ಇವನೇ ಅಕ್ಕು ಹೇಳಿ ನಿಘಂಟು ಮಾಡಿದ. ಆದರೂ ಇನ್ನೊಬ್ಬ ಮಾಡಿದ ಚಿತ್ರವನ್ನೂ ನೋಡ್ವ ಹೇಳಿ ನೋಡೆಕ್ಕಾರೆ ಅದುದೆ ಮೊದಲಾಣದ್ದರ ಹಾಂಗೆ ಇರೆಕ್ಕಾ!! ರಾಜಂಗೆ ಆದ ಸಂತೋಷ ಅಷ್ಟಿಷ್ಟಲ್ಲ. ಆದರೆ ಎರಡ್ನೆಯವ ಹೇಳಿದ, ಮಹಾರಾಜರೆ ಆನು ಇನ್ನುದೆ ಚಿತ್ರ ಮಾಡಿದಿಲ್ಲೆ, ಇಲ್ಲಿ ಕಾಣ್ತ ಇಪ್ಪದು ಬರೀ ಆಚೆಯವ ಮಾಡಿದ ಚಿತ್ರದ ಪ್ರತಿಬಿಂಬ ಅಷ್ಟೆ. ಆನು ಚಿತ್ರ ಮಾಡ್ಲೆ ಗೋಡೆಯ ಒಪ್ಪ ಮಾಡಿ ಆತಷ್ಟೆ ಇಂದು ಹೇಳಿ. ಇದ್ರಲ್ಲಿ ನವಗೆ ಗೊಂತಪ್ಪದು ಎಂತ ಹೇಳಿರೆ, ನಾವು ಯಾವ ಬಣ್ಣಂಗಳ ತುಂಬ್ಸುತ್ತೋ ಅದೇ ಇನ್ನೊಂದು ಕಡೆಲಿ ಕಾಂಬದು.

ಸರಿ, ಕತೆ ಸಾಕು… ವಿಷಯಕ್ಕೆ ಬಪ್ಪ ಆಗದಾ?? ಮಕ್ಕಳ ಮನಸ್ಸುದೆ ಹೀಂಗೆ ಇದಾ.. ಮಕ್ಕಳ ಮನಸ್ಸು ೨ನೇ ಚಿತ್ರಕಾರ ತಯಾರು ಮಾಡಿ ಮಡಗಿದ ಗೋಡೆಯ ಹಾಂಗೆ. ಮನೆಲಿಯೇ ವಾತಾವರಣ ಸರಿ ಇಲ್ಲದ್ರೆ ಮಗು ದೊಡ್ದ ಅಪ್ಪಗ ಮಹಾತ್ಮ ಅಪ್ಪದು ಹೇಂಗೆ ನಿಂಗಳೆ ಹೇಳಿ? ಮಕ್ಕೊಗೆ ಆರ ನಾವು ಮಾದರಿಯಾಗಿ ತೋರ್ಸೆಕ್ಕಾದ್ದು ಹೇಳಿಯೇ ಮರತ್ತು ಹೋದ ಹಾಂಗೆ ಕಾಣ್ತಾ ಇದ್ದು. ಮನೆಲಿಯೇ ಜಗಳ, ಆ ದೂರದರ್ಶನಲ್ಲಿ ಮಕ್ಕೊಗೆ ಅಗತ್ಯ ಇಲ್ಲದ್ದ ವಿಷಯವನ್ನೂ ಮಕ್ಕಳ ಎದುರೇ ನಾವು ನೋಡುದು. ….

ಬಿಡಿ, ಈಗಾಣ ಸ್ಪರ್ಧಾತ್ಮಕ ಯುಗದ ಗೌಜಿಲಿ, ಮಕ್ಕಳಲ್ಲಿ ಸದ್ಗುಣಂಗಳ ಬೆಳೆಸುದು ಕಷ್ಟ ಹೇಳಿ ಕಾಣ್ತ ಇದ್ದಪ್ಪ!! ಸಾಕ್ರೆಟಿಸ್ ಒಂದು ಕಡೆ ಹೇಳಿತ್ತಿದ, `ಎನ್ನ Education ದಾರಿಲಿ School ಅಡ್ಡಿ ಬಾರದ್ದೆ ಇರಲಿ’ ಹೇಳಿ. ಆದರೆ ಇಂದು ನಮ್ಮ ಶಾಲೆಗೊ ಈ ಮಾತಿನನ್ನೇ ನಿಜ ಮಾಡ್ವ ಶಪಥ ಮಾಡಿದ ಹಾಂಗೆ ಕಾಣ್ತಿಲ್ಲೆಯಾ?? ನಮ್ಮ ಮಕ್ಕ ಶಿಕ್ಷಣ ಪಡಕ್ಕೊಂಡು ಧ್ಯೇಯವಾದಿಗ ಆಯೆಕ್ಕಾದ್ದು ಅಲ್ಲದ? ಆದರೆ ಆವ್ತ ಇಪ್ಪದು ವ್ಯವಹಾರವಾದಿಗ ಹೇಳಿ ನಿಂಗೊಗೆ ಅನ್ಸುತ್ತಿಲ್ಲೆಯ? ಎಲ್ಲಾ ಪ್ರಶ್ನೆಗಳ ನಿಂಗೊಗೆ ಕೇಳ್ತಾ ಇದ್ದೆ ಹೇಳಿ ಗ್ರೇಶಿಕ್ಕಡಿ. ಎನ್ನ ಮನಸ್ಸಿಲಿ ಬಂದ ಹಲವು ಪ್ರಶ್ನೆಗಳ ನಿಂಗಳ ಎದುರು ಮಡುಗುತ್ತಾ ಇಪ್ಪದು. `ಭೋಗ’ ಹೇಳ್ವ ಭೂತದ ದಾಸರು ನಾವು ಆವ್ತಾ ಇದ್ದು. `ಎನ್ನ ಮಕ್ಕ ಎನ್ನ ಹಾಂಗೆ ಆಗದ್ದೆ ಇರಲಿ ದೇವರೆ ಮಹಾಲಿಂಗೇಶ್ವರ’ ಹೇಳಿ ಎಷ್ಟೋ ಜನ ಬೇಡಿಕೊಳ್ತವು, ಇದಕ್ಕೆ ಕಾರಣವೆ ಒತ್ತಡದ ಜೀವನ.

ಮಕ್ಕಳ ಅತ್ಯುನ್ನತ ಸ್ಥಾನಕ್ಕೆ ತಲ್ಪ್ಸೆಕ್ಕು ಹೇಳಿ ಬೆಳೆಸುವ ಭರಾಟೆಲಿ, ಮಕ್ಕ ಯಾವ ದಾರಿಲಿ ಹೋವ್ತಾ ಇದ್ದವು ಹೇಳುದ್ರ ಗಮನ್ಸುದನ್ನೇ ಮರತ್ತಿದು ನಾವು. ಈಗ ನವಗೆ ಅದ್ರ ಪ್ರಭಾವ ಗೊಂತಾಗದ್ರೂ ಮುಂದೆ ಖಂಡಿತ ಗೊಂತಾವ್ತು. ಹಾಂಗಾಗಿ ಮಕ್ಕೊಗೆ ಸರಿಯಾದ ವಾತಾವರಣ ನಾವೇ ಒದಗಿಸಿಕೊಡೆಕ್ಕು ಹೇಳಿ ಎನ್ನ ಅಭಿಪ್ರಾಯ… ಒಪ್ಪುತ್ತೀರಾ?

ಅನುವಾದ: ಸುಮನ ಮುಳ್ಳುಂಜ

ಮಕ್ಕ ಮಹಾತ್ಮರಪ್ಪದು ಹೇಂಗೆ!, 5.0 out of 10 based on 3 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಮಕ್ಕಳ ಅತ್ಯುನ್ನತ ಸ್ಥಾನಕ್ಕೆ ತಲ್ಪ್ಸೆಕ್ಕು ಹೇಳಿ ಆದರೆ ಮಕ್ಕೊಗೆ ಸರಿಯಾದ ವಾತಾವರಣ ನಾವೇ ಒದಗಿಸಿಕೊಡೆಕ್ಕು ಹೇಳಿ ನಿಂಗಳ ಶುದ್ದಿಯ ಹೈ ಲೈಟ್ ಲಾಯಕ್ಕ ಆಯ್ದು ಹೇಳಿ ನಮ್ಮಲಿಂದ ಒಪ್ಪ.

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅಕ್ಷ್ರರದಣ್ಣ ಯೋಚನೆಗಳ ನಮ್ಮ ಮುಂದೆ ಮಡುಗಿದ್ದು ಸರಿಯಾಗಿಯೇ ಇದ್ದು.
  ಕುಂಬಾರ ಹಸಿ ಮಣ್ಣಿನ ಆಕಾರಕ್ಕೆ ತಂದು ಹೇಂಗೆ ಸರಿಯಾದ ಉಪಯೋಗಕ್ಕೆ ಸಿಕ್ಕುತ್ತ ಹಾಂಗೆ ಮಾಡ್ತನೋ, ಅದೇ ರೀತಿ ಮಕ್ಕಳ ತಿದ್ದಿ ಸರಿ ದಾರಿಗೆ ತಂದು ಒಳ್ಳೆ ಪ್ರಜೆ ಮಾಡುವ ಜವಾಬ್ದಾರಿ, ಮಕ್ಕಳ ಹೆತ್ತವಕ್ಕೂ, ವಿದ್ಯಭ್ಯಾಸ ಕೊಡುವ ಗುರುಗೊಕ್ಕೂ ಇದ್ದು.
  ಮಕ್ಕಳ ಮೊದಲಾಣ ಶಾಲೆ, ಮನೆಯೇ. ಅಲ್ಲಿಯ ಸುಸಂಸ್ಕೃತ ವಾತಾವರಣಲ್ಲಿ ಬೆಳದು, ಒಳ್ಳೆಯ ಗುರುಗಳ ಮಾರ್ಗದರ್ಶನ ಸಿಕ್ಕರೆ, ಅವೂದೇ ಸಮಾಜಲ್ಲಿ ಒಳ್ಳೆ ಸ್ಥಾನಲ್ಲಿ ಎದ್ದು ನಿಂಬ ಹಾಂಗೆ ಅಕ್ಕು.
  ವಿದ್ಯೆ ಹೇಳಿರೆ, ಬರೇ ಪುಸ್ತಕ ಓದಿ ಪರೀಕ್ಷೆ ಪಾಸ್ ಮಾಡುವದು ಅಲ್ಲ. ಇದರೊಟ್ಟಿಂಗೆ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಾಯ ಆವ್ತಾ ಹಾಂಗಿಪ್ಪ ವಿದ್ಯೆ ಸಿಕ್ಕೆಕ್ಕು. ಎಲ್ಲರಿಂಗೂ ಅದು ಸಿಕ್ಕಲಿ ಹೇಳುವ ಹಾರೈಕೆಗೊ

  [Reply]

  VA:F [1.9.22_1171]
  Rating: +1 (from 1 vote)
 3. ಹಳೆಮನೆ ಅಣ್ಣ

  ಸುನಿಲಣ್ಣನ ಬರಹ ಈಗಾಣ ಪರಿಸ್ಥಿತಿಲಿ ಸಕಾಲಿಕ ಹೇಳಿ ತೋರ್ತು. ಮೊನ್ನೆ ಅನುಶ್ರೀ ಕನ್ನಡಪ್ರಭಲ್ಲಿ ಬರದ ಲೇಖನಕ್ಕೆ ಇದು ಹೆಚ್ಚಿನ ಬೆಂಬಲ ಕೊಡ್ತು. ಸುಮನ ಅನುವಾದ ಮಾಡಿದ್ದು ಕೂಡ ಲಾಯ್ಕಾಯಿದು.

  [Reply]

  VN:F [1.9.22_1171]
  Rating: +1 (from 1 vote)
 4. ಚುಬ್ಬಣ್ಣ

  ಅಕ್ಷರದಣ್ಣ ನಿ೦ಗಳ ಚಿ೦ತನೆ ಸರೀ ಇದ್ದು..!! ಇ೦ದ್ರಾಣ “So Called- “ಸ್ಪರ್ಧಾತ್ಮಕ ಯುಗದ “ , ಇದರಿ೦ದ ಅಪ್ಪದು ಒ೦ದೇ “ಒತ್ತಡ..” ಬರೀ ಮಕ್ಕಳ ಮೇಲೆ ಅಲ್ಲ, ಅಬ್ಬೆ- ಅಪ್ಪ೦ದ್ರ ಮೇಲೆ ಕೂಡ.. ಉನ್ನತ ಶಿಕ್ಷಣ ಹೇಳಿ ಶಾಲಾ- ಕಾಲೇಜುಗೊ ಸುಲಿಗೆ ಮಾಡ್ತದು ಕಮ್ಮಿ ಇಲ್ಲೆ.. ಹಾ೦ಗೆ ಹೇಳಿ ಸೇರ್ತವ್ವು ಹಿ೦ದೆ ಇಲ್ಲೆ.. 😉

  ನಿ೦ಗೊ ಹೇಳಿದಾ೦ಗೆ ಮಕ್ಕಳ ಬೇಳೆಶುತ್ತ ರೀತಿಲಿ ಇಪ್ಪದು, Software terms ಲಿ ಹೇಳೆಕಾರಿ – “ programming/ installing a Child Brain with Good programs “
  ಈ ಪ್ರೋಗ್ರಾಮಿ೦ಗ್ ಹೇಳ್ತ ಕೆಲಸ – ಅಬ್ಬ ಅಪ್ಪ, ಗುರುಗೊ ಬಹಳ ಮುಖ್ಯ ಪಾತ್ರವಹಿಸುತ್ತವು…
  ಬೆಳೆವ ಸಿರೀ ಮೊಳಕೆಯಲ್ಲೇ ಹೇಳಿ ಕೇಳಿದ್ಯೊ ಅಲ್ಲಾ…
  ಹಾ೦ಗೆ “ಬೆಳೆದ ಸಿರೀ ಆರೈಕೆಯಲ್ಲಿ” ಹೇಳಿ ಕಾಣ್ತು..
  ಒಳ್ಳೆ ಚಿ೦ತನೆ.. ಧನ್ಯವಾದ

  [Reply]

  VN:F [1.9.22_1171]
  Rating: +1 (from 1 vote)
 5. ಕೇಜಿಮಾವ°
  ಕೆ ಜಿ ಭಟ್

  ನಿಜ ಹೇಳ್ತರೆ ಇಂದು ಕಲಿಶೆಕ್ಕು ಹೇಳುವ ಉದ್ದೇಶಲ್ಲಿ ಅಧ್ಯಾಪಕರಾದವು ತುಂಬಾ ಕಮ್ಮಿ.ಯೋಗ್ಯತೆ ಇಪ್ಪವಕ್ಕೆ ಅವಕಾಶ ಸಿಕ್ಕದ್ದೆ ಕಲಿಶುದರ ಬಗ್ಗೆ ಯಾವದೇ ಕಲ್ಪನೆ ಇಲ್ಲದ್ದವು ಶಾಲಗಳಲ್ಲಿ ಸೇರಿಯೊಂಡಿದವಿದಾ,ಕಲಿಶುದಾದರೂ ಎಂತರ?
  ಅಪ್ಪ° ಅಮ್ಮಂದ್ರ ನಿರೀಕ್ಷೆ ಮಿತಿ ಮೀರಿದ್ದು.
  ಏನಾದರೂ ಆಗು ಮೊದಲು ಮನವನಾಗು ಹೇಳ್ತದರ ನಾವಿಂದು ಮರವ ಹಂಗೆ ಕಾಣ್ತು.
  ಕಾಲಾಯ ತಸ್ಮೈ ನಮಃ

  [Reply]

  VA:F [1.9.22_1171]
  Rating: 0 (from 0 votes)
 6. ಮುಳಿಯ ಭಾವ
  ರಘುಮುಳಿಯ

  ಅಕ್ಷರದಣ್ಣನ ಅಭಿಪ್ರಾಯವ ಒಪ್ಪುತ್ತೆ.
  ಜೀವನದ ಮೌಲ್ಯ೦ಗಳ ಮರದು ಬರೇ ಕಿಸೆಯ ತು೦ಬುಸುವ ಮೌಲ್ಯದ ಯೋಚನೆಗಳನ್ನೇ ಲೋಕವಿಡೀ ಹಬ್ಬುಸಿ ವಿದ್ಯೆ೦ದ ಹಿಡುದು ಲಲಿತಕಲೆಗಳ ವರೆಗೆ ಎಲ್ಲಾ ವಿಷಯ೦ಗಳಲ್ಲಿಯೂ ಸ್ಪರ್ಧಾತ್ಮಕ ಪರಿಸರವ ನಿರ್ಮಾಣ ಮಾಡಿ ದ್ವೇಷ,ಅಸೂಯೆ,ಮತ್ಸರ೦ಗಳ ವಾತಾವರಣಲ್ಲಿ, ‘ಹೊಡಿಮಗ’ದ ಹಿನ್ನೆಲೆ ಸ೦ಗೀತಲ್ಲಿ ಮಕ್ಕಳ ಬೆಳೆಶಿರೆ ಅವು ಅತ್ಯವನತ ಹೊ೦ಡಕ್ಕೇ ಹೋಗಿ ತಲುಪುಗು ಹೇಳೊದು ಸತ್ಯ.
  ಈ ‘ಉನ್ನತ’ ಹೇಳುವ ಶಬ್ದಕ್ಕೆ ಸರಿಯಾದ ಅರ್ಥ ಗೊ೦ತಿಲ್ಲದ್ದೆ ಸೋತತ್ತು ನಾವು.

  [Reply]

  VA:F [1.9.22_1171]
  Rating: 0 (from 0 votes)
 7. ಜಯಶ್ರೀ ನೀರಮೂಲೆ
  jayashree.neeramoole

  ಅಕ್ಷರದಣ್ಣ ಹೇಳಿದ್ದದು ಅಕ್ಷರಶ: ಸತ್ಯ… ಇದರ ನಾವು ಕಾರ್ಯ ರೂಪಕ್ಕೆ ತರೆಕ್ಕಾರೆ ಎಲ್ಲರೂ ಒಂದಾಗಿ ಮನಸ್ಸು ಮಾಡೆಕ್ಕು… ಒಂದು ಹಂತದವರೆಗೆ ಮಾಂತ್ರ ವೈಯುಕ್ತಿಕವಾಗಿ ಪ್ರಯತ್ನ ಮಾಡುಲೆ ಎಡಿತ್ತಷ್ಟೇ… ಒಂದೇ ಮನೋಭಾವ ಇಪ್ಪ ನಾವೆಲ್ಲಾ ಒಪ್ಪಣ್ಣ ತಾಣಲ್ಲಿ ಸೇರುತ್ತ ಹಾಂಗೆ ನಿಜ ಜೀವನಲ್ಲಿಯೂ ಒಂದೇ ಆಸಕ್ತಿ ಇಪ್ಪವು ಒಟ್ಟು ಸೇರಿ ಜೀವನ ನಡೆಸುವ ಹಾಂಗೆ ಆಯೆಕ್ಕು… ಹಾಂಗಾರೆ ನಮ್ಮ ಮಕ್ಕಳ ಮಹಾತ್ಮರಾಗಿ ಒಳಿಶಲೆಡಿಗು…

  [Reply]

  ಜಯಶ್ರೀ ನೀರಮೂಲೆ

  jayashree.neeramoole Reply:

  ಉದಾಹರಣೆಗೆ ಮಂಗಳೂರಿಲ್ಲಿ ಒಂದು ನಮ್ಮವರ ಫ್ಲಾಟ್ ಕಟ್ಟುವ ಅಂದಾಜು ಇದ್ದು… ಹತ್ತರೆಯೇ ಭಾರತೀ ಕಾಲೇಜ್ ಲಿ ಕೆ.ಜಿ. ೦ದ ಪಿ.ಜಿ. ವರೆಗೆ ಅಧ್ಯಯನವೂ ಇದ್ದು… ನಾವೆಲ್ಲ ಒಂದಾಗಿ ಹೀಂಗಿದ್ದ ಕಾರ್ಯಂಗಳ ಕೈಲಾದ ಮಟ್ಟಿ೦ಗೆ ಪ್ರಯತ್ನಿಸಿ ಯಶಸ್ವಿಗೊಳಿಸೆಕ್ಕು… ಒಬ್ಬನ ಹತ್ತರೆ ಆರ್ಥಿಕ ಸಂಪತ್ತು ಇಕ್ಕು… ಇನ್ನೊಬ್ಬನ ಹತ್ತರೆ ಜ್ಹಾನ ಸಂಪತ್ತು ಇಕ್ಕು… ಮತ್ತೊಬ್ಬನ ಹತ್ತರೆ ಶಾರೀರಿಕವಾದ ಅರೋಗ್ಯ ಸಂಪತ್ತು ಇಕ್ಕು… ಇನ್ನೂ ಹಲವರ ಹತ್ತರೆ ಹಲವು ತರದ ಸಂಪತ್ತು ಇಕ್ಕು… ಆರುದೆ ಹೆಚ್ಚು ಅಲ್ಲ… ಆರುದೆ ಕಮ್ಮಿ ಅಲ್ಲ… ಎಲ್ಲರೂ ಸಮಾನ… ನಮ್ಮ ಮಕ್ಕೊಗೆ ಬೇಕಾಗಿ ಎಲ್ಲ ಬೇದ ಭಾವವ ಮರೆತು ನಾವೆಲ್ಲಾ ಒಂದಾಯೇಕ್ಕು…

  [Reply]

  ಅಜ್ಜಿಮನೆ ಪುಳ್ಳಿ Reply:

  ಯೇ ಜಯತ್ತೇ
  ನಾವು ಫ್ಲಾಟ್ ಮನೆ ಮಾಡಿರೆ ಸ್ವಂತ ಮನೆ ಇದ್ದಾಂಗೆ ಅಕ್ಕೋ..
  ಮನೆ ಮನೆಯೇ ಆಗಿರೆಕ್ಕಪ್ಪಾ… ಈ ಇಪ್ಪತ್ತು ಮೂವತ್ತುಉಪ್ಪರಿಗೆ ಮೇಗೆ ಮಕ್ಕೋ ಆಡುದು ಹೇಂಗಪ್ಪಾ..

  [Reply]

  VA:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಜ್ಜಕಾನ ಭಾವಸುಭಗಅಕ್ಷರದಣ್ಣದೇವಸ್ಯ ಮಾಣಿವೇಣೂರಣ್ಣಸಂಪಾದಕ°ಸುವರ್ಣಿನೀ ಕೊಣಲೆಪಟಿಕಲ್ಲಪ್ಪಚ್ಚಿಶ್ಯಾಮಣ್ಣದೀಪಿಕಾಎರುಂಬು ಅಪ್ಪಚ್ಚಿಶುದ್ದಿಕ್ಕಾರ°ಜಯಗೌರಿ ಅಕ್ಕ°ಬಟ್ಟಮಾವ°ಚೆನ್ನೈ ಬಾವ°ಉಡುಪುಮೂಲೆ ಅಪ್ಪಚ್ಚಿಬಂಡಾಡಿ ಅಜ್ಜಿಪುಣಚ ಡಾಕ್ಟ್ರುಮಾಷ್ಟ್ರುಮಾವ°ಒಪ್ಪಕ್ಕಹಳೆಮನೆ ಅಣ್ಣvreddhiಚೆನ್ನಬೆಟ್ಟಣ್ಣಅನು ಉಡುಪುಮೂಲೆಶಾ...ರೀರಾಜಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ